ಕವಿತೆ

ಕವಿತೆ

ಸಾಕಾಗುವುದಿಲ್ಲ ಮೂರು ಗುಂಡುಗಳು!

ಸಾಕಾಗುವುದಿಲ್ಲ ಮೂರು ಗುಂಡುಗಳು!

ಮೊದಲ ಗುಂಡು ಬಿದ್ದಾಗ ಅದರ ಶಬ್ದಕ್ಕೆ ಎದೆ ನಡುಗಿತು! ಎರಡನೆ ಗುಂಡು ಬಿದ್ದಾಗ ಹೃದಯದಿಂದ ರಕ್ತ ಹೊರಚಿಮ್ಮಿತು! ಮೂರನೇ ಗುಂಡು ಬಿದ್ದಾಗ ಉಸಿರು ನಿಂತಿತು! ನಾಲ್ಕನೆಯದಕೆ ಕಾಯುವ ಮೊದಲೇ ಮಾತು ಸ್ಥಬ್ದವಾಯಿತು……….! ಹಾಗೆ ನಡುಗಿದ ಎದೆಗೀಗ ಸಾವಿರ ಉಸಿರ ನಾಳಗಳು ಜೋಡಿಸಲ್ಪಟ್ಟವು- ರಕ್ತ ಚಿಮ್ಮಿದ ಹೃದಯಕೆ ಅದೆಲ್ಲಿಂದಲೋ ಹರಿದುಬಂದ ಜನಸಾಗರ ರಕ್ತವ ತುಂಬಿತು. ಸ್ಥಬ್ದವಾದ ಮಾತು ಮತ್ತೆ ಹುಟ್ಟಿತು ನಿಂತು ಹೋದ ಒಂದು ಕೊರಳ ಬದಲಿಗೀಗ ಲಕ್ಷೋಪಲಕ್ಷ ಕೊರಳುಗಳು ದನಿಯೆತ್ತಿ ಹಾಡಿದವು! ನಾನು: ನಾನು ಗೌರಿ, ನಾವು […]

ಹದ್ದಿನ ಸಾಮ್ರಾಜ್ಯದಲಿ..

ಹದ್ದಿನ ಸಾಮ್ರಾಜ್ಯದಲಿ..

ಅನುಭವ ಮಂಟಪದಲಿ ವಚನ ಸುಧೆ ಹರಿಸಿದ ಕೋಗಿಲೆ ಹತ್ಯೆಯಾಯಿತು. ಶಾಂತಿ ಅಹಿಂಸೆಯ ಪರಿಮಳ ಪಸರಿಸುವ ಪಾರಿವಾಳ ಹತ್ಯೆಯಾಯಿತು. ಜಾತಿ ಧರ್ಮಗಳ ಧಿಕ್ಕರಿಸಿ ಪ್ರೀತಿಯ ಹುಡಿ ಹರಡಿಸಿದ ಪತಂಗದ ಹತ್ಯೆಯಾಯಿತು. ಮೌಢ್ಯ ವಿರೋಧಿಗಾಗಿ ನಿತ್ಯ ಕೂಗಿ ಎಬ್ಬಿಸುತ್ತಿದ್ದ ಕೋಳಿಯ ಹತ್ಯೆಯಾಯಿತು. ಹಾಲು-ಹಾಲಾಹಲವ ಶೋಧಿಸಿ ಸತ್ಯ ಉಲಿದ ಹಾಲಕ್ಕಿಯ ಹತ್ಯೆಯಾಯಿತು. ಗರಿಕೆಯ ಎಳೆತಂದು ವೈಚಾರಿಕ ಗೂಡು ಕಟ್ಟಿದ ಗುಬ್ಬಿಯ ಹತ್ಯೆಯಾಯಿತು. ಹದ್ದುಮೀರಿ ಅರಿವು ಬಿತ್ತಿದ ಗುರುವಿನಂತವರ ಹತ್ಯೆಯಾಯಿತು ಹದ್ದಿನ ಸಾಮ್ರಾಜ್ಯದಲಿ. ಹತ್ಯೆಯ ವಾರಸುದಾರರೀಗ ಬುದ್ಧರೂಪ ತಳೆದಿದ್ದಾರೆ ಹದ್ದು ಅಂಗುಲಿಮಾಲಾಗಲೆಂದು. -ಕೆ.ಬಿ.ವೀರಲಿಂಗನಗೌಡ್ರ […]

ಗೌರಿಮಯ ಲೋಕದೊಳು..

ಗೌರಿಮಯ ಲೋಕದೊಳು..

-1- ಅಂದು ಗಾಂಧಿ ಪ್ರತಿಮೆಗಳಿಗೆ ಕಣ್ಣೀರು ಬಂದದ್ದು ಪವಾಡವೆಂದು ಮಾಧ್ಯಮಗಳು ಕತೆ ಕಟ್ಟಿದವು.. ಅಹಿಂಸೆಯ ತಿಳಿನೀರ ಹಂಚುತ್ತಿದ್ದ ಮರಿಮಗಳನ್ನು ತನ್ನ ಕೊಂದವರೇ ಇಲ್ಲವಾಗಿಸಿದರೆಂದು ತಡೆದ ದುಃಖದ ಕಟ್ಟೆಯೊಡೆದು ಗಾಂಧಿ ಬಿಕ್ಕಳಿಸಿದ್ದು ಮಾತ್ರ ಯಾರಿಗೂ ಕೇಳಿಸಲಿಲ್ಲ.. -2- ನೀನು ಅಸಂಖ್ಯ ಚುಕ್ಕಿಗಳನ್ನಿಟ್ಟೆ ನಾವು ಚುಕ್ಕಿಯಿಂದ ಚುಕ್ಕಿಗೆ ಚಲಿಸಿ ಕೂಡುಗೆರೆ ಎಳೆದೆವು ಅದೀಗ ದೇಶ ಧರ್ಮ ಲಿಂಗದ ಗಡಿಗಳ ಅಳಿಸಿಕೊಂಡು ಜಗದಗಲ ಗೌರಿರಂಗೋಲಿಯಾಗಿದೆ ಅವ್ವ ಹೇಳುತ್ತಿದ್ದಳು ಮನೆಮುಂದೆ ರಂಗೋಲಿಯಿದ್ದರೆ ವಿಷಜಂತುಗಳು ಒಳಬರುವುದಿಲ್ಲವೆಂದು ಇದೀಗ ಲೋಕದ ಮನೆಯಂಗಳದಿ ನಿನ್ನದೇ ರಂಗೋಲಿ.. -3- […]

ಮೃಗಗಳು ಮತ್ತು ಮನುಷ್ಯರ ಕವಿತೆಗಳು!

ಮೃಗಗಳು ಮತ್ತು ಮನುಷ್ಯರ ಕವಿತೆಗಳು!

ಕವಿತೆ-ಒಂದು. ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರು ಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರು ಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ!   ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರು ಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರು ಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ!   ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರು ಇದೀಗ ಧರ್ಮಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ […]

ಗೌರಿಯಾದಳು ಗೌರಿ

ಗೌರಿಯಾದಳು ಗೌರಿ

ಗೌರಿ ಸ್ವೈರ ವಿಹಾರಿ ಪುಕ್ಕದಲ್ಲಿ ಸಿಲುಕಲೊಪ್ಪದ ಅಪ್ಪನ ಮೆಚ್ಚಿನ ನವಿಲುಗರಿ ಹಾರದ ಗರುಡಗಳು, ಓಡದ ಕುದುರೆಗಳ ನಡುವೆ ತೆವಳುತ್ತಲೇ ಗಮ್ಯ ಸೇರಿದ ಇರುವೆ ದೈತ್ಯ ಆಲದೊಳಗಿಂದ ಟಿಸಿಲೊಡೆದ ಕೆಂಪುತಂಪಿನ ಹೊಂಗೆಯ ಹೂವೆ ಕರ್ತೃ ಕರ್ಮಗಳು ಅರ್ಧದಲ್ಲೇ ನಿವೃತ್ತಿ ಘೋಷಿಸಿದರೂ ಕ್ರಿಯೆಯಿಂದಲೇ ವಾಕ್ಯ ಪೂರೈಸಿದ ವಚನಕಾರ್ತಿ ಸಂಭ್ರಮದ ವ್ಯಸನವಿಲ್ಲದೆ ಸಾರ್ಥಕತೆಯ ಗೀಳಿಲ್ಲದೆ ಸತ್ತ ನಂತರವೂ ಸಾರ್ಥಕವಾಗಿ ಬದುಕುತ್ತಿರುವ ಸಂಗಾತಿ ಹೊರಗೆ ಧಾವಂತವಿದ್ದರೂ ಒಳಗೆ ನಿಧಾನವಾದೆ ಬಹಿರಂಗದಲ್ಲಿ ಬೆಂದು ಅಂತರಂಗದಲ್ಲಿ ಶುದ್ಧವಾದೆ ಒಳಗು ಹೊರಗೆಂಬ ಭಿನ್ನವಳಿಯುತ್ತಾ ಬಯಲು ಆಲಯವಾದೆ ಜಗವನೆಲ್ಲಾ […]

ಕಿರಂ ಮತ್ತು ಹಕ್ಕಿಮರಿಗಳು

ಕಿರಂ ಮತ್ತು ಹಕ್ಕಿಮರಿಗಳು

ಕಿರಂ ಮತ್ತು ಹಕ್ಕಿಮರಿಗಳು ಒಳದನಿ ನುಡಿದಿದೆ ಇದಲ್ಲ ಇದಲ್ಲ ಎಂದು; ಅವರು ಬಿಡಿಸಿದ ಚಿತ್ತ ಇವರು ಬಿಡಿಸಿದ ಚಿತ್ತ ವಿಚಿತ್ರ; ಯಾವುದೂ ಪೂರ್ಣವಲ್ಲ; ಯಾವುದೂ ತ್ಯಾಜ್ಯವಲ್ಲ ಎಲ್ಲವೂ ಅವರವರ ಭಾವಕ್ಕೆ ಅವರವರ ಬಕುತಿಗೆ ಕುರುಡರು ಆನೆ ಮುಟ್ಟಿದಂತೆ ಬಿಡಿಸುವರು ಬಿಡಿ ಬಿಡಿ ಚಿತ್ರ ಈ ಕವಿತೆಯೂ ಒಂದು ಅಪೂರ್ಣ ಚಿತ್ರ ಎಂದು ಹೇಳುತಿದೆ; ಇದಲ್ಲ ಇದಲ್ಲ ಕಿರಂ ಇದಲ್ಲ ಎಂದು ಹೇಳುತಿದೆ; ಒಂದೇ ಕ್ಯಾನ್ವಾಸಿನಲಿ ಅವರಿವರು ತುರಕುವುದು ಕಂಡು ನಕ್ಕರು. ಮತ್ತೆ ಮತ್ತೆ ಕ್ಯಾನ್ವಾಸಿನ ಹೊರ ಹೊರಗೆ […]

ನಾನು ಮಾಡಿದುದೆಲ್ಲ ತಲೆಕೆಳಗಾಯಿತು 

ನಾನು ಮಾಡಿದುದೆಲ್ಲ ತಲೆಕೆಳಗಾಯಿತು 

ಗಜಲ್:  ನಾನು ಮಾಡಿದುದೆಲ್ಲ ತಲೆಕೆಳಗಾಯಿತು ಯಾವ ಮದ್ದು ಗುಣವ ತರದಾಯಿತು. ನೋಡಿದೆಯಾ ನನ್ನೆಡೆಗೆ ಹಬ್ಬಿದಿ ಖಾಯಿಲೆಯ ಅದು ಕಡೆಗೆ ನನ್ನನ್ನೇ ಕಬಳಿಸಿದ ಪರಿಯ. ಹರೆಯದಾ ದಿನಗಳು ಅಳುವಿನಲಿ ಕಳೆದವು ಮುಪ್ಪಿನಲಿ  ಕಣ್ಣುಗಳ ರೆಪ್ಪೆಗಳು ಬಿಗಿದವು. ಮುಚ್ಚಲಾರದೆ ಕಣ್ಣು ಇರುಳಿಡೀ ತೆರೆದಿದ್ದವು ಬೆಳಕು ಹರಿಯುವ ಗಳಿಗೆ ಎವೆ ಮುಚ್ಚಿಕೊಂಡವು ಸೂತ್ರದಾರಿಯ ನೀನು ನಮ್ಮಂಥ ದುರ್ಬಲರ ಸುಮ್ಮನೆ  ದೂರುತ್ತೀಯ ನಿನ್ನಿಷ್ಟ ಬಂದಂತೆ ನೀನು ಮಾಡುತ್ತೀಯಾ ಅಪ ಕೀರ್ತಿ ಹೊರೆ ಮಾತ್ರ ನಮಗೆ ಹೇರುತ್ತೀಯ. ದಟ್ಟ ಹುಚ್ಚಿನೊಳಗೂ ಕೂಡ ಸಭ್ಯತೆಯ ಗೆರೆ […]

ದೇಹವು ಆತ್ಮ ರಹಿತವಾಗಿದೆ

ದೇಹವು ಆತ್ಮ ರಹಿತವಾಗಿದೆ

ಕೆನ್ನೆಗೆ ಮುತ್ತಿಕ್ಕುವ ಹನಿಯೇ ಇಳಿದು ಬಾ ಹನಿಯ ರೂಪವನ್ನು ಪಡೆ ಜಿನುಗು, ತುಂಬು ಆಲಿ ತೊಟ್ಟಿಕ್ಕುವ ಮೊದಲು ಕೂಡು ಹನಿಯಾಗಿ ಉದುರು ನಿನ್ನ ರೂಪದ ಹಿಂದೆ ನಡೆದಿರುವ ಯುದ್ದ ಭೀಕರ ಅರೆಬೆಂದ ದೇಹ ಅರೆಬೆಂದ ಚಿತ್ತ ನೋವ ಮೂರ್ತಿಗೆ ರೂಪಕೊಟ್ಟಂತೆ ಶುಭ್ರವಾಗಿ ಜಿನುಗು ಯಾವುದನ್ನು ಉಜ್ಜಿ ತೊಳೆಯುತ್ತೀ ಮನವನ್ನೋ…. ತೊಳೆಯಲು ಆಗುತ್ತದೆಯೇ ಬಾ… ಹನಿಯೇ ಬಾ ಎಲ್ಲಿ ಅಡಗಿದ್ದರೂ ಗುಡಿಗಿ ಬಾ ನೀ ಬಾರದಿದ್ದರೆ ಕಣ್ಣೀರ ಜೌಗು ಮೆದುಳನ್ನು ಕೊಲುವುದು ಕಣ್ಣು ಕೊಳೆಯುವುದು ಕನಸು ಕಾಣಬೇಕಲ್ಲಾ ಬಾ […]

ಹಾಯಿ ದೋಣಿ ನೆನಪಿನ ಕವಿತೆಗಳು

ಹಾಯಿ ದೋಣಿ ನೆನಪಿನ ಕವಿತೆಗಳು

 ನೆನಪು-1 ಹಿಂದೆ ಈಗಿನಂತಿರಲಿಲ್ಲ ಮೇ ತಿಂಗಳಿಗೆ ಶುರುವಾದ ಮುಂಗಾರಿಗೆ ಸರಿಯಾಗಿ ಮಳೆ ಬರುತ್ತಿತ್ತು ಶುರುವಾದ ಸೋನೆ ಮಳೆಯಲಿ ಗೋಣಿಕುಪ್ಪೆ ಹಾಕಿಕೊಂಡ ಅಮ್ಮ ಕೂಲಿಗೆಹೋದರೆ ಮನೆಯೊಳಗೆ ನಾನು ಮತ್ತು  ಕಣ್ಣು ಮಂಜಾಗಿದ್ದ ಅಜ್ಜಿ.   ಐನೋರ ತೋಟದಲ್ಲಿ ಕದ್ದು ತಂದು ಕೊಯ್ದು ತಿಂದ ಹಲಸಿನ ಹಣ್ಣಿನ  ಬೀಜಗಳನ್ನು ಒಣಗಿಸಿಟ್ಟಿದ್ದ  ಅಜ್ಜಿ ಕೆಂಡದಲ್ಲಿ ಸುಟ್ಟು ಕೊಡುತ್ತಿದ್ದಳು ತಿಂದು  ದೋಣಿ ಮಾಡಿಕೊಡೆಂದು ದುಂಬಾಲು ಬಿದ್ದರೆ ಕಾಕನಂಗಡಿಯಲಿ ತಂದ ಸಾಮಾನು ಕಟ್ಟಿಕೊಟ್ಟ ಹಳೆಯ ಪೇಪರ್   ಹರಿದು ಅವಳು ಮಾಡುತ್ತಿದ್ದ ದೋಣಿಗಳ ಹೆಸರುಗಳು ಗೊತ್ತಾಗಿದ್ದು […]

ನಗುವಿನೊಡಲ ಸಾವು

ನಗುವಿನೊಡಲ ಸಾವು

ಅರಗಿನ ಮನೆಯ ಸುತ್ತ ಒಣಹುಲ್ಲ ಬೇಲಿ; ಆ ಬೇಲಿಗೆ ಬೆಂಕಿಕೊಡುವವರಿಗೆ ಗೀರಿಡಲು ಕಡ್ಡಿಕೊಟ್ಟು ಮನೆಯೊಳಗೆ ಕೂತ ಸಜ್ಜನ ಮಂದಿ! ಉರಿವ ಅರಗಿನ ಮನೆ ಉರಿಯಲ್ಲಿ ಉರಿವ ಹಸುಳೆಗಳ ಕಂಡೆ ಉರಿಕೊಟ್ಟವರು ಗಹಗಹಿಸಿ ಹೊರನಿಂತು ನಗುವುದ ಕಂಡೆ; ನಗುವಿನೊಡಲ ಸಾವು ಕಂಡೆ ಆ ಉರಿಕನ್ನಡಿಯಲ್ಲಿ ಬೇಯುವ ನನ್ನ ಮುಖ ಕಂಡೆ ನಾನು ಬೇಯ್ವುದು ಕಂಡು ಅವರು ಮತ್ತೂ ಗಹಗಹಿಸಿ ನಗುವುದ ಕಂಡೆ. ನೆಲದ ನ್ಯಾಯ- ದ ಚಿತೆ ಕಂಡೆ ಚಿತೆಯಲಿ ಬೇಯುವ ಜೀವನ್ಯಾಯ ಕಂಡೆ; ಬೆಂಕಿಕೊಟ್ಟು ಹುಚ್ಚೇರಿ ನಗುವ […]