ಕವಿತೆ

ಕವಿತೆ

ಯವ್ವನದ ಸಾವು

ಯವ್ವನದ ಸಾವು

ಬೆಳೆದ ಕಾಲಕೆಲ್ಲಕೂ ನೆರಳಾಗಿದ್ದ ಕಾಲ ಇಂದು ಮರೆಯಾಗುವ ಸಂದರ್ಭ ಅದು ಬಾಲ್ಯ ಕಾಲವೋ ಬೆಳೆದ ದೇಹವೂ ಮುದಿಯಾದ ಸುಕ್ಕು ದೇಹದ ನೆರೆಯ ಸೌಂದರ್ಯವೋ “ಅಂತೂ ಈ ಗಳಿಗೆಯಲ್ಲಿ ಅಲ್ಲಿಗೇ ನಿಂತ ನನ್ನ ರೂಪ” ನಂತರ ಜೀರ್ಣದ ವಸ್ತು ಇಷ್ಟು ತಿಳಿದಾಗ ಅದು ಭ್ರಮೆಯೆಂದು ಗೊತ್ತಾಯಿತು. ಉಸಿರಾಡುವ ದೇಹ, ನಡೆದಾಡುವ ಭೂಮಿ ಎಲ್ಲವೂ ಭ್ರಮೆ ಈ ಹೊತ್ತಲಿ ಹೇಗೆ ಬದುಕಿದ್ದು ಮುಂದಿನ ಗಳಿಗೆಗಳನ್ನು ಎಣಿಸುತ್ತಾ ಪ್ರತಿ ಹುಟ್ಟು ಹಬ್ಬ ದಿನದಂದು ‘ತುಂಬಾ ಹುಟ್ಟು ಹಬ್ಬ ಆಚರಿಸಿಕೋ ನೂರ್ಕಾಲ ಸುಖವಾಗಿ […]

‘ ಸೂರ್ಯಾಸ್ತವಾಗುತ್ತಿದೆ ಬೆಂಕಿ ಇಡಪ್ಪಾ ‘

‘ ಸೂರ್ಯಾಸ್ತವಾಗುತ್ತಿದೆ ಬೆಂಕಿ ಇಡಪ್ಪಾ ‘

ಸುರುಟಿದ ತರಗೆಲೆಗಳ ನಡುವೆ ದೇಹ ತಣ್ಣಗೆ ಮಲಗಿತ್ತೋ ಜೀವದ ಹಂಗು ತೊರೆದು ನೊಂದ ಮನಸು ನಿದ್ರಾವಸ್ಥೆಯಲ್ಲಿತ್ತೋ ; ‘ ಸೂರ್ಯಾಸ್ತವಾಗುತ್ತಿದೆ ಬೆಂಕಿ ಇಡಪ್ಪಾ ‘ ಎಂದ ದನಿ ನನ್ನ ಕೈಗಳನ್ನು ನಡುಗಿಸಲಿಲ್ಲ ಮನಸು ವಿಚಲಿತವಾಗಲಿಲ್ಲ ಕಂಗಳು ಹನಿಗೂಡಲಿಲ್ಲ ; ಯಂತ್ರ ಅಂದ್ರೆ ಹಾಗೆಯೇ ಅಲ್ಲವೇನಪ್ಪಾ ; ಯಾಂತ್ರಿಕವಾಗಿ ಇಟ್ಟ ಕೊಳ್ಳಿ ನಿನ್ನ ಪಯಣ ಮುಗಿಸಿತ್ತು ನನ್ನ ಬದುಕು ಕವಲು ಹಾದಿಯಲ್ಲಿತ್ತು ! ಬದುಕಲೆಣಿಸಿದ ನಿನಗೆ ಸಾವು ಸನಿಹವಾದುದೇಕೆ ಮಧುವೋ ಮೇಹವೋ ನಿನ್ನಂತರಾಳಕ್ಕೆ ದಕ್ಕಿದ್ದು ಮಾತ್ರ ಮಾಧುರ್ಯ ಕಾಣದ […]

ಬಲ್ಲಿದಳು

ಬಲ್ಲಿದಳು

ಬಲ್ಲಿದಳು ಬಲ್ಲಿದಳು ನೀನೆಂದು ನಾ ಬಲ್ಲೆ ಗೆಳತಿ, ಭಾನ ಬಾಗಿಲಲಿ ಬೆಳ್ಳಕ್ಕಿ ಸಾಲು ಕಂಡಿರಲು, ಬೆಳಕ ಉಂಬ ಮೋಡಕೀಗಾ ಮೋಹಸ್ಪರ್ಶವದು ನೋಡು! ತೇಲುತ್ತಿದೆ, ಹಾಡುತ್ತಿದೆ, ಕನಸ ಹೆತ್ತ ಮನವು, ಬರಿದೇ ಒರಲಾಡುತ್ತಿರೆ ಪ್ರೇಮಜ್ವರದಿ ಈ ಒಡಲು, ನಲಿವುದೀ ನದಿಯ ಜಲ, ಕುಣಿವುದೈ ಹಸುರ ನೆಲ ಅದಕೆ. ಬಲ್ಲಿದಳು ಬರುವ ಮಾಟ, ಮರುಳಾಗಿ, ಬೆರಗ ಹರಿಸೇ, ಕವಿಯ ಕಣ್ಣೋಟ ಸೋತು, ಸಂದ ಬಯಕೆಯ (ಕಂಡ ಸವಿಯ), ಹಾಡಾಗಿ ಬರೆಯೆ; ಇಗೋ ಗುನುಗುವುದೇಕೋ ತುಟಿ ತಂತಾನೇ ಮೆಲ್ಲಗೆ. ಬಲ್ಲಿದಳು ನೀನೆಂದು ನಾ ಬಲ್ಲೆ ಗೆಳತಿ, ಹೊಳಪು ನಗುವಿನಲಿ, ಚೆಲುವ ದನಿಬೆರಸಿ, ಚಿತ್ತಾರಸೆರಗಿನಲಿ, […]

ದೇವರ ಸಂಕಟ

ದೇವರ ಸಂಕಟ

ಇಲ್ಲಿ ಈ ಪವಿತ್ರ ಭೂಮಿಯಲ್ಲಿ ಹುಲುಸಾದ ಫಸಲು ಪಡೆಯಲು ಬೇಕಿರುವುದು ನೀರಲ್ಲ ಗೊಬ್ಬರವಲ್ಲ ಹೊನ್ನಾರು ಕಟ್ಟುವುದಲ್ಲ ‘ಕೈಕೆಸರಾದರೆ ಬಾಯಿ ಮೊಸರಾಗುವುದಂತು ಅಲ್ಲವೇ ಅಲ್ಲ;’ ಇಲ್ಲಿ ಹುಲುಸಾದ ಬೆಳೆ ಬೆಳೆಯಲು ಕಾಲುಕೆರೆಯಬೇಕು ಕುರುಡು ನೆಪ ತೆಗೆಯಬೇಕು ಹೆಣ ಉರುಳಬೇಕು ನೆತ್ತರು ಹರಿಯಬೇಕು; ಹರಿದು ಕೆಸರಾಗಿ ಮಡುಗಟ್ಟಬೇಕು. ಹರಿತವಾದ ಚೂರಿಗಳು ಹಸುಳೆಗಳ ಹೃದಯ ಸೀಳಬೇಕು; ದ್ವೇಷದ ಕಿಡಿ ಹೊತ್ತಿ ಉರಿದು ಹಬ್ಬಿದ ಹೊಗೆಯಲ್ಲಿ ಮನಸುಗಳ ಇಬ್ಬಾಗಿಸಿ ಒಡೆದ ಮನಗಳ ಬಯಲಲಿ ದ್ವೇಷದ ವಾಮನ ಪಾದ ದೃಢವಾಗಿ ಊರಬೇಕು ನೆತ್ತರಲ್ಲಿ; ಸೇರಿಗೆ […]

ನಮ್ಮ ಕಾಲದ ಕೆಲವು ಗಪದ್ಯಗಳು

ನಮ್ಮ ಕಾಲದ ಕೆಲವು ಗಪದ್ಯಗಳು

ಮಿಂಚುಳ್ಳಿ  ಮಿಂಚುಳ್ಳಿ ಬಗ್ಗೆ ಹಿಂದೊಮ್ಮೆ ಪದ್ಯ ಬರೆದು ಭೇಶ್ ಎನ್ನಿಸಿಕೊಂಡಿದ್ದೆ  ಹತ್ತು ಬೆರಳಿದ್ದರೂ ನಮಗೆ ಮೀನು ಹಿಡಿಯಲಾಗದು ಮಿಂಚುಳ್ಳಿ ತರ ಎಂಬುದು ಅದರ ಸಾರಾಂಶ ಮೊನ್ನೆ ನೊರೆ ತುಂಬಿದ ಕೆರೆಯೊಂದರ ಅಂಚಿನ ಮೋಟು ಗಿಡದಲ್ಲಿ ಪೆಚ್ಚಾಗಿ ಕೂತ ಮಿಂಚುಳ್ಳಿ ಕಂಡು ಪಿಚ್ಚೆನಿಸಿತು ಹೆಂಡದ ಬಾಟಲಿ ಬಿಡಿ, ವಿಮಾನದ ಮೇಲೂ ಇದರ ಚಿತ್ರ ಕಂಡು ಯಲಯಲಾ ಎನ್ನಿಸಿತ್ತು. ಬಳುಕಿ ಮೀನಿನಂತಾಡುವ ಮಿಂಚುಳ್ಳಿ ಲಲನೆಯರ ಕಂಡಾಗಲೂ.  ಕಾಲ ಕೆಟ್ಟಿದೆ, ಮಿಂಚುಳ್ಳಿಗೂ ಮೀನಿಲ್ಲ ಎನ್ನಬಹುದು.  ಆದರೆ ತುಂಬಾ ಬೇಜಾರು ಮಾಡಬೇಕಿಲ್ಲ.  ಸ್ವಚ್ಛಂದ […]

ನಿನ್ನ ಕೊನೆ  ಹತ್ತು ಸೆಕೆಂಡುಗಳು

ನಿನ್ನ ಕೊನೆ  ಹತ್ತು ಸೆಕೆಂಡುಗಳು

ಕೆಲವೊಮ್ಮೆ ಅನಿಸುತ್ತೆ ನೀನು ಇಲ್ಲೇ ಇದ್ದೀ ಎಂದಿನಂತೆ ನಿನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿಹೋಗಿದ್ದೀ.. ಅದಕೆಂದೇ ಈ ವಾರ ಮನೆಗೆ ಬರದೇ ಹೋದೀ.. ಆದರೆ ಮಿಕ್ಕ ಸಮಯದಲ್ಲೆ ನಿಜ ಮುಖಕ್ಕೆ ರಾಚುತ್ತೆ ನೀನಿನು ಬರಲ್ಲ ಎಂದೆಂದೆಂದಿಗೂ ಬರಲ್ಲ ಅನ್ನೋ ಕಹಿಸತ್ಯ ಅರಿವಾಗುತ್ತೆ ಹೃದಯ ಕಂಪಿಸುತ್ತೆ ಕಾಲುಗಳು ನಡುಗುತ್ತೆ ಹೊಟ್ಟೆಯೊಳಗೆ ಸಂಕಟವಾಗಿ ಒಳಗಿರೋದೆಲ್ಲಾ ಕಕ್ಕುವಂತಾಗುತ್ತೆ.. ಆದರೆ ನನ್ನಂತೆ ಅದೂ ಖಾಲಿಖಾಲಿಯಾಗಿದೆ.. ಎಚ್ಚರವಾದಾಗ ಕೊರಗುತ್ತಾ ಮಲಗಿದ್ದಾಗ ಬೆಚ್ಚಿಬೀಳುತ್ತಾ.. ಪ್ರತಿಗಳಿಗೆಯೂ ಕಳೆದುಕೊಂಡಿದ್ದರ ಲೆಕ್ಕ ನೀಡುತ್ತಿದೆ.. ನಿನ್ನ ಆ ಕೊನೆ ಹತ್ತು ಸೆಕೆಂಡುಗಳನ್ನು ಊಹಿಸಿಕೊಳ್ಳುತ್ತೀನಿ […]

ಮಹಿಷಪುರದ ರಾಜ ದಿವಾನರಿಗೆ

ಮಹಿಷಪುರದ ರಾಜ ದಿವಾನರಿಗೆ

ಮಹಾರಾಜರೆ ನಿಧಾನಕ್ಕೆ ಊಟಮಾಡಿ ಹಾಕಿಕೊಳ್ಳಿ ಇನ್ನೊಂದಿಷ್ಟು ತುಪ್ಪ ಪಾಯಸ ಚೆನ್ನಾಗಿದೆಯೇ ತಗೊಳ್ಳಿ ಕೋಸಂಬರಿ ಇನ್ನೇನು ನಿರುಮ್ಮಳ ನಿಶ್ಚಿಂತೆಯಿಂದಿರಿ ಆಡಳಿತದ ತಾಪತ್ರಯ ಶತೃಭಯ ಎಲ್ಲಾ ದೂರ ಇದ್ದಾನಲ್ಲ ವೈಸರಾಯ ನೋಡಿಕೊಳ್ಳುತ್ತಾನೆ ಪುಟ್ಟ ಪೂರ ಕೊಟ್ಟರಾಯಿತು ಒಂದಿಷ್ಟು ಕೋಟಿ ಕಪ್ಪ ದೂರದ ದೊರೆಗೆ ತಾನು ದಾಸಿಯಾದರೇನು ಇದ್ದಾಳಲ್ಲ ಪ್ರಜೆಗಳ ರಾಣಿ ಅಮ್ಮಣ್ಣಿ ವಿಕ್ಟೋರಿಯಾಳ ಕೃಪೆ ಇನ್ನುಮೇಲೆ ಮಹಿಷಪುರ ಸುಖೀರಾಜ್ಯ ನಿಧಾನ ನಿಧಾನಕ್ಕೆ ಊಟ ಮಾಡಿ ಮಹಾರಾಜರೇ! ಸತ್ತವನು ಸತ್ತ ದಾಸನಾಗಿದ್ದು ಸುಖವ ಸವಿಯಲಾರದ ದಡ್ಡಶಿಖಾಮಣಿ ಸುಲ್ತಾನ ಏನು ಬಂತು ನಿಷ್ಠುರ […]

ನಾಮು ಮಾತಾಡ್ತಿಮಿ

ನಾಮು ಮಾತಾಡ್ತಿಮಿ

ಹೌದು! ನಾಮು ಮಾತಾಡ್ತಿಮಿ ಆದ್ರೆ ಕಿಮಿ ಮುಚ್ಚಿ ನೋಡಿ ಅಷ್ಟೇ! ನಮ್ಮಲ್ಲೂ ಕಪ್ಪು, ಬಿಳಿ ಕೆಂಪು, ನೀಲಿ, ಹಸ್ರುಗಳೆಂಬೂ ಬಣ್ಗಳ್ ಬಡ್ದಾಟ ಇದ್ದುದ್ದೆ ನಿಚ್ಚ ನೆಡೆಯುತ್ತಲೆ ಇದೆ ಜಗ್ಳ, ಕೋಪ, ತಾಪ, ಸಿಟ್ಟು ಮುನ್ಸು, ಸೇಡು ಎಲ್ಲಾ ಮಾಮೂಲೆ ಆದ್ರು ಆಪೀಸ್ಗಳ್ಲಿ ನಮ್ಮದೇ ದರ್ಬಾರು ಹಳ್ಳಿಯಿಂದ ದಿಲ್ಲಿವರ್ಗೂ ಅಲ್ಲ ಈ ಜವಾನನ್ ದೌಲತ್ ನೋಡು ಯಂಗತಂದ್ ಬಿಸಾಕ್ತನೆ, ನಾನೇನ್ ಕಸ್ವೆ ನನ್ನ ರಾಜ್ರಿಂದಿಡ್ದು ಆಳ್ಗೊಳ್ ತಂಕ ಮುಟ್ಟೋದೆನು ಬಚ್ಚಿಡದೇನು ಬಿರಲ್ಲಿ ಮೌರಾಗಿ ಮಡ್ಗದೇನು ನನ್ನೊ ಒಂದ್ಸಾರಿ ನೆಟ್ಗೆ, […]

ಕೋವನ ಕಲೆ

ಕೋವನ ಕಲೆ

ಕೋವನ ಕಲೆಯ ಕೋರಿಕೆಗೆ ಅಂಗ ತೊಟ್ಟು ಮಣ್ಣು ಮಡಿಕೆ ಯಾಯಿತು ಕೋರಿಕೆಯ ಜೀವ ನೀ ನಿನ್ನ ತಾಯ್ಗೆ ಕೋರಿ ಕೋರಿ ಜವ್ವನದ ಬಣ್ಣ ತೊಟ್ಟಿರುವೆ ನೀ ನಿನ್ನ ಮೈಗೆ! ಈಗ ಕೋವಿದನೂ ನೀನೆ ! ಕೋಲಿಡಿದವನೂ ನೀನೆ !   ತಬಲತಲೆಯೊಳಗೆ ಬಡಿದಷ್ಟೂ ಗುಂಯ್ ಗುಡುವ ಸದ್ದು ಮಿತಿ ಮೀರಿರುವ ಆಸೆಯ ಹದ್ದು ನೆಲೆನಿಲ್ಲದೆ ಹಾರಾಡುತ್ತಿದೆ ಅತ್ತ ಆ ಮನದಾಗಸದಿಂದ ಇತ್ತಲ ಈ ಮನದ ಗಡಿಯವರೆಗೆ ಸುತ್ತಲ ದಿಕ್ಕಿಗೂ ಸುಳಿದಾಡುತ್ತಿದೆ ರೆಕ್ಕೆ ಬಡಿವ ಸದ್ದು ಸುತ್ತಲು ಕೇಳುತ್ತಿದೆ   ಬೆಸಲಲಿ […]

ಎರಡಳಿದು

ಎರಡಳಿದು

ಎರಡಳಿದು ಈ ಕೊಡದಿಂದ ಆ ಕೊಡಕೆ ಜಿಗಿ ಅಂತಿ. ಅದನ ಕ್ರಾಂತಿ ಅಂತ ಹ್ಯಾಂಗ್ ನಂಬಲಿ? ಕೊಡಪಾನ ಒಲ್ಯಾಂದರ ಹೊಂಡಕ ಸುರಕೊ ಅಂತಿ ಗುಂಡಿ ನೀರಿಲೆ ಈಸೋದ್ರಾಗ ಹೊಸಾದೇನೈತಿ? ಈ ಮಗ್ಗಲ ನೂಸ್ತದಂದ್ರ ಆಚಿ ಮಗ್ಗಲಾ ತಿರುಗಂತಿ ಆಕಾಶಲೋಕದ ಕನಸ ಕಂಡು ಹಂಗ ಹ್ಯಾಂಗ್ ಸುಮ್ಮಿರಲಿ? ಖರೆ, ಇಟ್ಟಲ್ಲಿಂದ ಹಂದಬೇಕು ಒಂದರೆ ಹೆಜ್ಜಿ ಆಗಷ್ಟ ಮುಂದ್ ಹೋಗಾಕ್ ಹುಕಿ ಹುಟ್ಟತೇತಿ ಗೂಟದಂತ ಕಾಲಿನ್ಯಾಗ ಕಂಪನ ಮೂಡಬೇಕಂದ್ರ ನೀ ಮೀಟಬೇಕು ಫರಕ ಅಳಿಸೊ ತಂಬೂರಿ ತಂತಿ ಆವಾಗ್ ನೋಡು […]

1 2 3 7