ಸಾಹಿತ್ಯ ಸಂಸ್ಕೃತಿ

ಸಾಹಿತ್ಯ ಸಂಸ್ಕೃತಿ

ಗೌರಿಮಯ ಲೋಕದೊಳು..

ಗೌರಿಮಯ ಲೋಕದೊಳು..

-1- ಅಂದು ಗಾಂಧಿ ಪ್ರತಿಮೆಗಳಿಗೆ ಕಣ್ಣೀರು ಬಂದದ್ದು ಪವಾಡವೆಂದು ಮಾಧ್ಯಮಗಳು ಕತೆ ಕಟ್ಟಿದವು.. ಅಹಿಂಸೆಯ ತಿಳಿನೀರ ಹಂಚುತ್ತಿದ್ದ ಮರಿಮಗಳನ್ನು ತನ್ನ ಕೊಂದವರೇ ಇಲ್ಲವಾಗಿಸಿದರೆಂದು ತಡೆದ ದುಃಖದ ಕಟ್ಟೆಯೊಡೆದು ಗಾಂಧಿ ಬಿಕ್ಕಳಿಸಿದ್ದು ಮಾತ್ರ ಯಾರಿಗೂ ಕೇಳಿಸಲಿಲ್ಲ.. -2- ನೀನು ಅಸಂಖ್ಯ ಚುಕ್ಕಿಗಳನ್ನಿಟ್ಟೆ ನಾವು ಚುಕ್ಕಿಯಿಂದ ಚುಕ್ಕಿಗೆ ಚಲಿಸಿ ಕೂಡುಗೆರೆ ಎಳೆದೆವು ಅದೀಗ ದೇಶ ಧರ್ಮ ಲಿಂಗದ ಗಡಿಗಳ ಅಳಿಸಿಕೊಂಡು ಜಗದಗಲ ಗೌರಿರಂಗೋಲಿಯಾಗಿದೆ ಅವ್ವ ಹೇಳುತ್ತಿದ್ದಳು ಮನೆಮುಂದೆ ರಂಗೋಲಿಯಿದ್ದರೆ ವಿಷಜಂತುಗಳು ಒಳಬರುವುದಿಲ್ಲವೆಂದು ಇದೀಗ ಲೋಕದ ಮನೆಯಂಗಳದಿ ನಿನ್ನದೇ ರಂಗೋಲಿ.. -3- […]

ಟಿಪ್ಪು ನಿನ್ನದೇನಿದೆ ತಪ್ಪು ? ನಮ್ಮ ಕಣ್ಣೋಟವೇ ಕಪ್ಪು !

ಟಿಪ್ಪು ನಿನ್ನದೇನಿದೆ ತಪ್ಪು ? ನಮ್ಮ ಕಣ್ಣೋಟವೇ ಕಪ್ಪು !

ಟಿಪ್ಪು ಮತ್ತೊಮ್ಮೆ ರಾಜಕೀಯ ಚದುರಂಗದಾಟದಲ್ಲಿ ದಾಳವಾಗಿದ್ದಾನೆ. ಎಡ ಬಲಗಳ ತಿಕ್ಕಾಟದಲ್ಲಿ, ಮತೀಯತೆ-ಸೆಕ್ಯುಲರ್ ತತ್ವಗಳ ಘರ್ಷಣೆಯ ನಡುವೆ, ಇತಿಹಾಸ-ವಾಸ್ತವಗಳ ದ್ವಂದ್ವದಲ್ಲಿ ಟಿಪ್ಪು ವಿರಾಜಮಾನನಾಗಿದ್ದಾನೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ನಡೆದಿರಬಹುದಾದ ಪ್ರಮಾದಗಳನ್ನು ಸಮಕಾಲೀನ ಸಾಮಾಜಿಕ ಸಂದರ್ಭದೊಡನೆ ಸಮೀಕರಿಸುವ ಅಪಾಯವನ್ನು ಅರಿಯಬೇಕಾದರೆ ಬಹುಶಃ ಟಿಪ್ಪು ವಿವಾದ ಒಂದು ಸ್ಪಷ್ಟ ಭೂಮಿಕೆಯಾಗುತ್ತದೆ. ವಿಶ್ವದ ಇತಿಹಾಸದಲ್ಲಿ ಎಲ್ಲ ಜನಸಮುದಾಯಗಳಿಗೂ ಸಂತೃಪ್ತಿಯಾಗುವಂತೆ ರಾಜ್ಯಭಾರ ನಡೆಸಿದ ರಾಜ ಮಹಾರಾಜರ ಆಡಳಿತವನ್ನು ಕಾಣಲಾಗುವುದಿಲ್ಲ. ಏಕೆಂದರೆ ರಾಜ, ಮಹಾರಾಜ, ಸಾಮಂತ, ಸಾಮ್ರಾಟ ಮತ್ತು ಪಾಳೇಗಾರರ ಮೂಲ ಅಸ್ತಿತ್ವ ಇದ್ದುದು ತಾವು […]

ಮೃಗಗಳು ಮತ್ತು ಮನುಷ್ಯರ ಕವಿತೆಗಳು!

ಮೃಗಗಳು ಮತ್ತು ಮನುಷ್ಯರ ಕವಿತೆಗಳು!

ಕವಿತೆ-ಒಂದು. ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರು ಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರು ಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ!   ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರು ಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರು ಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ!   ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರು ಇದೀಗ ಧರ್ಮಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ […]

ಗೌರಿಯಾದಳು ಗೌರಿ

ಗೌರಿಯಾದಳು ಗೌರಿ

ಗೌರಿ ಸ್ವೈರ ವಿಹಾರಿ ಪುಕ್ಕದಲ್ಲಿ ಸಿಲುಕಲೊಪ್ಪದ ಅಪ್ಪನ ಮೆಚ್ಚಿನ ನವಿಲುಗರಿ ಹಾರದ ಗರುಡಗಳು, ಓಡದ ಕುದುರೆಗಳ ನಡುವೆ ತೆವಳುತ್ತಲೇ ಗಮ್ಯ ಸೇರಿದ ಇರುವೆ ದೈತ್ಯ ಆಲದೊಳಗಿಂದ ಟಿಸಿಲೊಡೆದ ಕೆಂಪುತಂಪಿನ ಹೊಂಗೆಯ ಹೂವೆ ಕರ್ತೃ ಕರ್ಮಗಳು ಅರ್ಧದಲ್ಲೇ ನಿವೃತ್ತಿ ಘೋಷಿಸಿದರೂ ಕ್ರಿಯೆಯಿಂದಲೇ ವಾಕ್ಯ ಪೂರೈಸಿದ ವಚನಕಾರ್ತಿ ಸಂಭ್ರಮದ ವ್ಯಸನವಿಲ್ಲದೆ ಸಾರ್ಥಕತೆಯ ಗೀಳಿಲ್ಲದೆ ಸತ್ತ ನಂತರವೂ ಸಾರ್ಥಕವಾಗಿ ಬದುಕುತ್ತಿರುವ ಸಂಗಾತಿ ಹೊರಗೆ ಧಾವಂತವಿದ್ದರೂ ಒಳಗೆ ನಿಧಾನವಾದೆ ಬಹಿರಂಗದಲ್ಲಿ ಬೆಂದು ಅಂತರಂಗದಲ್ಲಿ ಶುದ್ಧವಾದೆ ಒಳಗು ಹೊರಗೆಂಬ ಭಿನ್ನವಳಿಯುತ್ತಾ ಬಯಲು ಆಲಯವಾದೆ ಜಗವನೆಲ್ಲಾ […]

ಸುದ್ದಿಯ ಮೈಗಂಟಿದ ಅಲಕ್ಷಿತ ಸಂಗತಿಗಳ ಬಹುರೂಪಿ ಕಥನ

ಸುದ್ದಿಯ ಮೈಗಂಟಿದ ಅಲಕ್ಷಿತ ಸಂಗತಿಗಳ ಬಹುರೂಪಿ ಕಥನ

ಕಳೆದ ಹದಿಮೂರು ವರ್ಷದಿಂದ ರಾಜ್ಯದ ವಿವಿಧ ಭಾಗಗಳ ಸಮಾನಾಸಕ್ತ ಸಂಗಾತಿಗಳು ಜೊತೆಗೂಡಿ `ನಾವುನಮ್ಮಲ್ಲಿ’ ಎನ್ನುವ ಮಾತುಕತೆಯ ವೇದಿಕೆಯೊಂದನ್ನು ರೂಪಿಸಿಕೊಂಡಿದ್ದೇವೆ. ಹೊಸ ತಲೆಮಾರಿನ ಬರಹಗಾರರ ಕನಸು ಕಾಣ್ಕೆಗಳನ್ನು ಚರ್ಚಿಸುತ್ತಲೇ, ಆಯಾ ಕಾಲದ ಬಿಕ್ಕಟ್ಟುಗಳ ಜತೆ ವೈಚಾರಿಕ ಆಕೃತಿಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಈತನಕ ಕನ್ನಡದ ಬಹುಮುಖ್ಯ ಲೇಖಕರಾದ ದೇವನೂರು ಮಹಾದೇವ, ಯು.ಆರ್.ಅನಂತಮೂರ್ತಿ ಅವರನ್ನೊಳಗೊಂಡಂತೆ ಬಹುತೇಕ ಸಾಮಾಜಿಕ ಬದ್ಧತೆಯ ಬರಹಗಾರ/ಗಾರ್ತಿಯರು ನಾವುನಮ್ಮಲ್ಲಿ ವೇದಿಕೆಯಲ್ಲಿ ತಮ್ಮ ತಿಳಿವನ್ನು ಹಂಚಿಕೊಂಡಿದ್ದಾರೆ. ಹೊಸತಲೆಮಾರಿನ ಜತೆ ಸಂವಾದ ನಡೆಸಿದ್ದಾರೆ. ನಾವುನಮ್ಮಲ್ಲಿ ಎನ್ನುವುದೇ `ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ […]

ಮುಸ್ಲಿಂ ಸಮುದಾಯದ ಆಂತರಿಕ ಮತ್ತು ಬಾಹ್ಯ ಅಂಶಗಳ ಚರ್ಚಿಸುವ ಬಗೆ ಗಮನಾರ್ಹ

ಮುಸ್ಲಿಂ ಸಮುದಾಯದ ಆಂತರಿಕ ಮತ್ತು ಬಾಹ್ಯ ಅಂಶಗಳ ಚರ್ಚಿಸುವ ಬಗೆ ಗಮನಾರ್ಹ

‘ಜಿನ್ನಿ’ ಕಥಾಸಂಕಲನ ಮೀರ್ಜಾ ಬಷೀರ್ ರವರ ಎರಡನೆಯ ಕಥಾಸಂಕಲನ ‘ಜಿನ್ನಿ’, ಬಟ್ಟೆ ಇಲ್ಲದ ಊರಿನಲ್ಲಿ ಕಥಾ ಸಂಕಲನದ ಮೂಲಕ ಕಥಾ ಸಾಹಿತ್ಯದಲ್ಲಿ ಪ್ರಮುಖ ಹೆಸರಾಗಿ ಕಾಣಿಸಿಕೊಂಡಿರುವ ಇವರು; ವೃತ್ತಿಯಲ್ಲಿ ಪಶುವೈದ್ಯರೂ ಹಾಗೂ ಕತೆ ಬರೆಯುತ್ತಿರುವ ವಯಸ್ಸು 50 ವರುಷಗಳ ನಂತರ. .! ಇದು ಕುತೂಹಲವೂ ಆಶ್ಚರ್ಯಕರವೂ ಆಗಿದೆ. ಕತೆಯ ಜಾಣ್ಮಯ ನಿರೂಪಣೆ, ಸರಳತೆ, ಗಂಭೀರತೆ, ವಿಡಂಬನೆಯ ಮೂಲಕ ಓದುಗರನ್ನು ಸೆಳೆಯುವಂತೆ ಕತೆ ರಚಿಸುವ ಶೈಲಿ ಇವರಲ್ಲಿ ಕಾಣಬಹುದು. ಜಿನ್ನಿ ಲೇಖಕರ ಎರಡನೆಯ ಹಾಗು ಹನ್ನೊಂದು ಕತೆಗಳ ಸಂಗ್ರಹ. […]

ಕಾವ್ಯಯಾನ-7 : ಮೈ ಮನಸು ಬೇರೆಯಾಗದ ಬೆರಗು: ತೇಜಶ್ರೀ ಕಾವ್ಯ

ಕಾವ್ಯಯಾನ-7 : ಮೈ ಮನಸು ಬೇರೆಯಾಗದ ಬೆರಗು:  ತೇಜಶ್ರೀ ಕಾವ್ಯ

ಬದುಕಿನೊಂದಿಗೆ ಗುದ್ದಾಟವೆಂದರೆ ಅದು ಏಕಕಾಲಕ್ಕೆ ಲೋಕದ ಜತೆ ನಡೆಸುವ ಸಂವಾದವೂ ಆಗಬಲ್ಲದು. ಆದರೆ ಬದುಕಿನಲ್ಲಿ ಗೂಢವಾಗಿ ತನ್ನನ್ನು ತಾನು ಲೋಕಕ್ಕೆ ಪರಿಚಯಿಸಿಕೊಳ್ಳುವ ಇರಾದೆ ದೇಹದ್ದು. ತಾನು ಇದ್ದೇನೆ? ಹೇಗೆ ಇರಲಾಗಿದೆ? ಅಥವ ಯಾವ ಬಗೆಯಲಿ ಇರಿಸಲಾಗಿದೆ ಎಂಬುದಕ್ಕೆ ಕಾರಣಗಳು ಕೆಲವೊಮ್ಮೆ ವೆಕ್ತೀಕರಣದ ಆಯಾಮದಲ್ಲಿ ಹಲವು ಬಾರಿ ಲೋಕದ ಜತೆ ಇರಲೂಬಲ್ಲದು. ಕನ್ನಡ ಕಾವ್ಯ ದೇಹದ ಜತೆ ನಡೆಸಿದ ಸಂವಾದ ಲೋಕದ ಬಗ್ಗೆಯೂ ಆಗಿದೆ. ತೇಜಶ್ರೀ ಯವರ ಕಾವ್ಯದಲ್ಲಿ ಕೆಲವೊಮ್ಮ ಲೋಕದ ಹಂಗು ಬೇಕಿಲ್ಲವೇನೊ? ಎಂಬಂತೆ ಅವರ ಒಟ್ಟು […]

ರಕ್ಷಣೆಯ ಮಂತ್ರ, ನಿಯಂತ್ರಣದ ತಂತ್ರ

ರಕ್ಷಣೆಯ ಮಂತ್ರ, ನಿಯಂತ್ರಣದ ತಂತ್ರ

(ಸಾಮಾಜಿಕ ಸಂರಚನೆಯ ಕಣ್ಕಟ್ಟುಗಳನ್ನು ಒಡೆದು ನೋಡಲು ಒತ್ತಾಯಿಸುವ ಆತ್ಮಕಥನಗಳ ಓದು) ಇತ್ತೀಚೆಗೆ ಓದಿದ ಎರಡು ಆತ್ಮಕಥನಗಳು ಹಲವು ಪ್ರಶ್ನೆಗಳನ್ನು, ಚಿಂತನೆಗಳನ್ನು ಹುಟ್ಟುಹಾಕಿದುವು. ಒಂದು ತೊಂಬತ್ತು ವಯಸ್ಸು ದಾಟಿದ ನಂತರ ಬರೆದ ಕೊಂಡಪಲ್ಲಿ ಕೋಟೇಶ್ವರಮ್ಮನವರ ‘ಒಂಟಿದಾರಿ’. ಇನ್ನೊಂದು ಎಪ್ಪತ್ತೈದು ಪೂರೈಸಿದ ಡಾ.ವಿಜಯಾ ಅವರ ‘ಕುದಿ ಎಸರು’. ಇಬ್ಬರೂ ನಾವು ಯಾಕೆ ಇದನ್ನು ಬರೆಯಬೇಕು ಎಂಬ ಪ್ರಶ್ನೆ ಎತ್ತುತ್ತಾರೆ. ಹಲವರ ಒತ್ತಾಯವೂ ತಾವು ಬರೆಯಲು ಕಾರಣ ಎನ್ನುತ್ತಾರೆ. ಈಗಾದರೂ ಇವರು ಬರೆದರಲ್ಲ ಅದೇ ಅಚ್ಚರಿ. ಯಾಕೆಂದರೆ ಇವೆರಡು ಪುಸ್ತಕಗಳನ್ನು, ಮಾತ್ರವಲ್ಲ, […]

ಕಿರಂ ಮತ್ತು ಹಕ್ಕಿಮರಿಗಳು

ಕಿರಂ ಮತ್ತು ಹಕ್ಕಿಮರಿಗಳು

ಕಿರಂ ಮತ್ತು ಹಕ್ಕಿಮರಿಗಳು ಒಳದನಿ ನುಡಿದಿದೆ ಇದಲ್ಲ ಇದಲ್ಲ ಎಂದು; ಅವರು ಬಿಡಿಸಿದ ಚಿತ್ತ ಇವರು ಬಿಡಿಸಿದ ಚಿತ್ತ ವಿಚಿತ್ರ; ಯಾವುದೂ ಪೂರ್ಣವಲ್ಲ; ಯಾವುದೂ ತ್ಯಾಜ್ಯವಲ್ಲ ಎಲ್ಲವೂ ಅವರವರ ಭಾವಕ್ಕೆ ಅವರವರ ಬಕುತಿಗೆ ಕುರುಡರು ಆನೆ ಮುಟ್ಟಿದಂತೆ ಬಿಡಿಸುವರು ಬಿಡಿ ಬಿಡಿ ಚಿತ್ರ ಈ ಕವಿತೆಯೂ ಒಂದು ಅಪೂರ್ಣ ಚಿತ್ರ ಎಂದು ಹೇಳುತಿದೆ; ಇದಲ್ಲ ಇದಲ್ಲ ಕಿರಂ ಇದಲ್ಲ ಎಂದು ಹೇಳುತಿದೆ; ಒಂದೇ ಕ್ಯಾನ್ವಾಸಿನಲಿ ಅವರಿವರು ತುರಕುವುದು ಕಂಡು ನಕ್ಕರು. ಮತ್ತೆ ಮತ್ತೆ ಕ್ಯಾನ್ವಾಸಿನ ಹೊರ ಹೊರಗೆ […]

ಸಂಘರ್ಷದಲ್ಲಿ ಚಿಗುರೊಡೆದ ಪ್ರೇಮವಂಶವೆಂಬ ‘ಶುದ್ಧವಂಶ’

ಸಂಘರ್ಷದಲ್ಲಿ ಚಿಗುರೊಡೆದ ಪ್ರೇಮವಂಶವೆಂಬ ‘ಶುದ್ಧವಂಶ’

ಭಾರತೀಯ ನಾಟಕಗಳಲ್ಲಿ ಪುರಾಣದ ಕಥೆಗಳನ್ನು ಇಟ್ಟುಕೊಂಡು ಸಮಕಾಲೀನಗೊಳಿಸುವುದೇ ಹೆಚ್ಚಾಗಿರುವ ಪ್ರಸ್ತುತ ಸಂದರ್ಭದಲ್ಲಿ ಮರಾಠಿಯ ‘ಪ್ರೇಮಾನಂದ ಗಜ್ವಿ’ಯವರು ರಚಿಸಿದ ‘ಶುದ್ಧ ಬೀಜಾಪೋಟಿ’ ನಾಟಕ ಭಿನ್ನವಾಗಿ ನಿಲ್ಲುತ್ತದೆ. ಇದನ್ನು ಕನ್ನಡದಲ್ಲಿ ‘ಡಿ.ಎಸ್.ಚೌಗಲೆ’ಯವರು ‘ಶುದ್ಧವಂಶ’ ಎಂದು ಅನುವಾದಿಸಿದ್ದಾರೆ. ಇದೊಂದು ಸಂಪೂರ್ಣವಾಗಿ ಸಾಮಾಜಿಕ ನಾಟಕವಾಗಿದೆ. ಅಲ್ಲದೆ ಪ್ರತಿಯೊಂದು ಪಾತ್ರಗಳು ಕಥೆಗೆ ಇಂಬುಕೊಡುತ್ತಾ ನಾಟಕದ ವಸ್ತುವನ್ನು ಪ್ರತಿನಿಧಿಸುತ್ತವೆ. ಪ್ರಸ್ತುತ ಭಾರತದ ಸಮಸ್ಯೆಗಳಾದ ಧಾರ್ಮಿಕ ಸಂಘರ್ಷದ ಕೋಮುವಾದವು ನಾಟಕದ ಮುಖ್ಯ ವಸ್ತುವಾದರೂ ಇದರೊಂದಿಗೆ ಅಂಟಿಕೊಂಡೆ ಸಾಗುವ ಜನಾಂಗಿಯ ದ್ವೇಷದ ಸುತ್ತ ಯುವ ಪೀಳಿಗೆಯ ಪ್ರೇಮದ ಮೇಲೆ […]