ಸಾಹಿತ್ಯ ಸಂಸ್ಕೃತಿ

ಸಾಹಿತ್ಯ ಸಂಸ್ಕೃತಿ

ದೇವರ ಬಂಡಾಯ: ಗುಳೆಹೊರಟ ಲಿಂಗಗಳು

ದೇವರ ಬಂಡಾಯ: ಗುಳೆಹೊರಟ ಲಿಂಗಗಳು

ನಮಗೆಲ್ಲ ತಿಳಿದಿರುವಂತೆ ಹರಿಹರನಿಗೆ ಭಕ್ತಕವಿ, ಕ್ರಾಂತಿಕವಿ ಇತ್ಯಾದಿ ಗುರುತುಗಳಿವೆ. ಆದರೆ ಇವೆಲ್ಲವನ್ನೂ ಮೀರಿ ಆತನಲ್ಲಿರುವ ಸ್ಥಳೀಯತೆ, ದಕ್ಷಿಣಪ್ರಜ್ಞೆಯಿಂದ ಕೂಡಿದ ಉತ್ತರ ಹಾಗೂ ವೈದಿಕ ವಿರೋಧದ ಖಚಿತ ಛಾಯೆಗಳು ನಮಗೆ ಹೆಚ್ಚು ಮುಖ್ಯವಾಗುತ್ತವೆ. ಇಷ್ಟೇ ಅಲ್ಲದೆ, ಸ್ಥಾವರ ವ್ಯವಸ್ಥೆಯ ಉದ್ದೀಪಕನೆಂಬಂತೆ ಗುರುತಿಸಲಾಗುವ ಈ ಕವಿಯಲ್ಲಿ ಸ್ಥಾವರ ಪಲ್ಲಟದ ದಟ್ಟ ಛಾಯೆಯೂ ಆತನಲ್ಲಿ ಮತ್ತೆ ಮತ್ತೆ ಪ್ರಕಟಗೊಂಡಿದೆ. ಸಂಕೇತಗಳ ವೈಭವೀಕರಣದ ನಡುವೆಯೇ ಕುರುಹುಗಳ ಭಗ್ನತೆಯೂ ಸಾಧಿತವಾಗಿದೆ. ದುಂಬಿ ಎಂಜಲಿಸದ ಮಡಿ ಹೂವನ್ನು ಹೂಬನದಲ್ಲಿ ಅರಸುವ ಕವಿಯೇ, ಸುಟ್ಟ ಮಾಂಸವನ್ನೇ ಶಿವನಿಗೆ […]

ಸ್ವಾತಂತ್ರ್ಯ

ಸ್ವಾತಂತ್ರ್ಯ

                ಸ್ವಾತಂತ್ರ್ಯ ಗೆಳೆಯರೆ, ಯಾರು ತಾನೇ ಜಂಬಕೊಚ್ಚಿಕೊಳ್ಳಬಲ್ಲರು ಪಿತ್ರಾರ್ಜಿತವಾಗಿ ತಾನು ಧೈರ್ಯ ಸ್ವಾತಂತ್ರ್ಯಗಳ ಪಡೆದೆನೆಂದು? ಒಬ್ಬನೇ ಒಬ್ಬ ಗುಲಾಮ ನೆಲದ ಮೇಲುಸಿರಾಡಿದರೂನು ಹೇಳಬಹುದೇ ನೀನು ದಿಟ್ಟ, ಸ್ವತಂತ್ರನೆಂದು? ಸೋದರರ ಬಂಧಿಸಿ, ಗಾಯಗೊಳಿಸುವ ಕೋಳ ನೀ ಊಹಿಸಿಕೊಳಲಾರದೇ ಇರುವಾಗ ಗುಲಾಮರ ಹೀನಗೊಳಿಸಿದವ ಬಿಡುಗಡೆಗೆ ಅನರ್ಹಗೊಳಿಸಿದವ ನೀನೇ ಆದಂತಲ್ಲವೆ? ನಿಜವಾದ ಸ್ವಾತಂತ್ರ್ಯ ಯಾವುದು? ನಮ್ಮವರ ಬೇಡಿಯ ಕಡಿದೊಗೆಯುವುದು. ಕೋಮಲ, ಮಿಡಿವ ಹೃದಯವಿರುವ ನೀನು ಮನುಕುಲದ ಋಣವ ಮರೆಯಬಾರದು. ಕೇಳು, ಸ್ವಾತಂತ್ರ್ಯವೆಂದರೆ […]

ಭಗತ್ ಸಿಂಗ್ ಜೈಲು ಡೈರಿ

ಭಗತ್ ಸಿಂಗ್ ಜೈಲು ಡೈರಿ

ಭಗತ್ ಸಿಂಗ್ ಜೈಲು ಡೈರಿ – ಜಿ. ರಾಮಕೃಷ್ಣ ಡಾ. ಎಚ್. ಎಸ್. ಅನುಪಮಾ ಅವರು ಭಗತ್ ಸಿಂಗ್‍ನ ದಿನಚರಿಯನ್ನು ಅನುವಾದ ಮಾಡಿ ಉಪಕರಿಸಿದ್ದಾರೆ. ಕನ್ನಡದ ಓದುಗರು ಅವರಿಗೆ ಸಂತೋಷದಿಂದ ಋಣಿಗಳಾಗಿರುತ್ತಾರೆ. ಹತಾಶೆಯ ವಾತಾವರಣವು ಉಸಿರು ಕಟ್ಟುವಷ್ಟು ಸಾಂದ್ರವಾಗಿ ಪಸರಿಸುತ್ತಿರುವಾಗ ಭಗತ್ ಸಿಂಗ್‍ನ ಸ್ಮರಣೆಯೇ ಒಂದು ತಂಗಾಳಿ. ತೀರಾ ಮೇಲ್ಪದರದಲ್ಲೇ ವಿಹರಿಸುವ ಛಾನಸ ಮನಸ್ಸುಗಳಿಗೆ ಸಹ ಭಗತ್, ಜೀವ ಮತ್ತು ಸ್ಫೂರ್ತಿ ತುಂಬಬಲ್ಲ. ಇಪ್ಪತ್ತನೆಯ ಶತಮಾನದ ಭಾರತದಲ್ಲಿ ಅತ್ಯಂತ ವಿಸ್ಮಯವನ್ನುಂಟುಮಾಡುವ ಧೀರೋದಾತ್ತ ವ್ಯಕ್ತಿ ಭಗತ್ ಸಿಂಗ್. ಅವನ […]

‘ಮಣ್ಣಿಂದ ಮಣ್ಣಿಗೆ’

ಪುಟ್ಟ ತಲೆಯೊಂದೇ ಕಾಣುತ್ತಿದ್ದ ಅವಳನ್ನು ಅವರು ಕೆಸರಿನ ಗುಡ್ಡೆಯ ಮಧ್ಯದಲ್ಲಿ ದೂರದಿಂದ ಗಮನಿಸಿದರು. ಹನ್ನೆರಡು ವರುಷದ ಆ ಹಸುಳೆ, ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ, ಇಡೀ ನಾಡಿಗೆ ಎರಗಿದ ನಿಸರ್ಗದ ವಿಕೋಪಕ್ಕೆ ತುತ್ತಾಗಿದ್ದಳು. ತೆರೆದೇ ಇದ್ದ ಅವಳ ಬಟ್ಟಲ ಕಣ್ಣುಗಳೆರಡೂ ತುಂಬ ದೂರ ಕಾಣುತ್ತಿದ್ದವರನ್ನು ಸಹಾಯಕ್ಕಾಗಿ ಕರೆಯುತ್ತಿದ್ದಂತೆ ಭಾಸವಾಗುತ್ತಿದ್ದವು. ಆ ಪುಟ್ಟ ಹಸುಳೆಯನ್ನು ಆಕೆಯ ತಾಯ್ತಂದೆಗಳು ಅಂiÀhುಕೆನಾ ಎಂದು ಹೆಸರಿಸಿದ್ದರು. ಅವಳ ಸುತ್ತಲೂ ಇಂದು ನೋಡಿದಲ್ಲೆಲ್ಲಾ ನಾಡು ಸ್ಮಶಾನ ಸದೃಶವಾಗಿ ಗೋಚರಿಸುತ್ತಿತ್ತು. ಹೆಣಗಳ ರಾಶಿಯಿಂದ ಉದ್ಭವಿಸುತ್ತಿದ್ದ ವಾಸನೆ […]

1 24 25 26