ಸಾಹಿತ್ಯ ಸಂಸ್ಕೃತಿ

ಸಾಹಿತ್ಯ ಸಂಸ್ಕೃತಿ

ಅಮೆರಿಕದತ್ತ ಮುಖಮಾಡಿ ಅರೆಬೆತ್ತಲಾಗಿ ನಿಲ್ಲಲಾಗಿದೆ!

ಅಮೆರಿಕದತ್ತ ಮುಖಮಾಡಿ ಅರೆಬೆತ್ತಲಾಗಿ ನಿಲ್ಲಲಾಗಿದೆ!

ಆಫ್ರಿಕನ್ ಸಾಹಿತ್ಯ ವಾಚಿಕೆ ಭಾರತೀಯರು ಆಧುನಿಕ ಸಂದರ್ಭದಲ್ಲಿ ಅತಿ ಹೆಚ್ಚು ಮುಖಮಾಡಿ ನೋಡಿರುವುದು ಅಮೆರಿಕ ಮತ್ತು ಯುರೋಪಿನ ಕಡೆಗೆ. ಅದು ವಿಜ್ಞಾನ-ತಂತ್ರಜ್ಞಾನದ ವಿಚಾರಗಳಿರಬಹುದು. ರಾಜತಾಂತ್ರಿಕ ವಿಚಾರಗಳಿರಬಹದು. ಸಾಹಿತ್ಯ ಚಿಂತನೆ, ವಿವಿಧ ಸಿದ್ದಾಂತಗಳು, ಭಾಷೆ, ಸಂಸ್ಕøತಿ, ಅಭಿವೃದ್ಧಿ ಹೀಗೆ ಯಾವುದೇ ವಿಚಾರಗಳನ್ನು ಕಲಿಯಬೇಕಾದಗಲೂ ನಾವು ಎದುರು ನೋಡಿರುವುದು ಯೂರೋಪಿನ ಕಡೆಗೆ. ಅಂದರೆ ನಮ್ಮ ದೇಶವನ್ನು ನಿಯಂತ್ರಿಸುವ, ಉದಾರವಾದಿ ಆರ್ಥಿಕ ನೀತಿಗಳನ್ನು ವಿಶ್ವವ್ಯಾಪಾರ ಸಂಘಟನೆಯ ನೇತೃತ್ವದಲ್ಲಿ ಜಾರಿಗೊಳಿಸುತ್ತ ದೇಶವನ್ನು ದೋಚುವ ರಾಷ್ಟ್ರಗಳ ಕಡೆಗೆ ಮುಖಮಾಡಲಾಗಿದೆ. ಅದು ಇಂದು ಮತ್ತಷ್ಟು ಹೆಚ್ಚಾಗಿದೆ. […]

ನಮ್ಮ ಕಾಲದ ಕೆಲವು ಗಪದ್ಯಗಳು

ನಮ್ಮ ಕಾಲದ ಕೆಲವು ಗಪದ್ಯಗಳು

ಮಿಂಚುಳ್ಳಿ  ಮಿಂಚುಳ್ಳಿ ಬಗ್ಗೆ ಹಿಂದೊಮ್ಮೆ ಪದ್ಯ ಬರೆದು ಭೇಶ್ ಎನ್ನಿಸಿಕೊಂಡಿದ್ದೆ  ಹತ್ತು ಬೆರಳಿದ್ದರೂ ನಮಗೆ ಮೀನು ಹಿಡಿಯಲಾಗದು ಮಿಂಚುಳ್ಳಿ ತರ ಎಂಬುದು ಅದರ ಸಾರಾಂಶ ಮೊನ್ನೆ ನೊರೆ ತುಂಬಿದ ಕೆರೆಯೊಂದರ ಅಂಚಿನ ಮೋಟು ಗಿಡದಲ್ಲಿ ಪೆಚ್ಚಾಗಿ ಕೂತ ಮಿಂಚುಳ್ಳಿ ಕಂಡು ಪಿಚ್ಚೆನಿಸಿತು ಹೆಂಡದ ಬಾಟಲಿ ಬಿಡಿ, ವಿಮಾನದ ಮೇಲೂ ಇದರ ಚಿತ್ರ ಕಂಡು ಯಲಯಲಾ ಎನ್ನಿಸಿತ್ತು. ಬಳುಕಿ ಮೀನಿನಂತಾಡುವ ಮಿಂಚುಳ್ಳಿ ಲಲನೆಯರ ಕಂಡಾಗಲೂ.  ಕಾಲ ಕೆಟ್ಟಿದೆ, ಮಿಂಚುಳ್ಳಿಗೂ ಮೀನಿಲ್ಲ ಎನ್ನಬಹುದು.  ಆದರೆ ತುಂಬಾ ಬೇಜಾರು ಮಾಡಬೇಕಿಲ್ಲ.  ಸ್ವಚ್ಛಂದ […]

ನಿನ್ನ ಕೊನೆ  ಹತ್ತು ಸೆಕೆಂಡುಗಳು

ನಿನ್ನ ಕೊನೆ  ಹತ್ತು ಸೆಕೆಂಡುಗಳು

ಕೆಲವೊಮ್ಮೆ ಅನಿಸುತ್ತೆ ನೀನು ಇಲ್ಲೇ ಇದ್ದೀ ಎಂದಿನಂತೆ ನಿನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿಹೋಗಿದ್ದೀ.. ಅದಕೆಂದೇ ಈ ವಾರ ಮನೆಗೆ ಬರದೇ ಹೋದೀ.. ಆದರೆ ಮಿಕ್ಕ ಸಮಯದಲ್ಲೆ ನಿಜ ಮುಖಕ್ಕೆ ರಾಚುತ್ತೆ ನೀನಿನು ಬರಲ್ಲ ಎಂದೆಂದೆಂದಿಗೂ ಬರಲ್ಲ ಅನ್ನೋ ಕಹಿಸತ್ಯ ಅರಿವಾಗುತ್ತೆ ಹೃದಯ ಕಂಪಿಸುತ್ತೆ ಕಾಲುಗಳು ನಡುಗುತ್ತೆ ಹೊಟ್ಟೆಯೊಳಗೆ ಸಂಕಟವಾಗಿ ಒಳಗಿರೋದೆಲ್ಲಾ ಕಕ್ಕುವಂತಾಗುತ್ತೆ.. ಆದರೆ ನನ್ನಂತೆ ಅದೂ ಖಾಲಿಖಾಲಿಯಾಗಿದೆ.. ಎಚ್ಚರವಾದಾಗ ಕೊರಗುತ್ತಾ ಮಲಗಿದ್ದಾಗ ಬೆಚ್ಚಿಬೀಳುತ್ತಾ.. ಪ್ರತಿಗಳಿಗೆಯೂ ಕಳೆದುಕೊಂಡಿದ್ದರ ಲೆಕ್ಕ ನೀಡುತ್ತಿದೆ.. ನಿನ್ನ ಆ ಕೊನೆ ಹತ್ತು ಸೆಕೆಂಡುಗಳನ್ನು ಊಹಿಸಿಕೊಳ್ಳುತ್ತೀನಿ […]

ಮಹಿಷಪುರದ ರಾಜ ದಿವಾನರಿಗೆ

ಮಹಿಷಪುರದ ರಾಜ ದಿವಾನರಿಗೆ

ಮಹಾರಾಜರೆ ನಿಧಾನಕ್ಕೆ ಊಟಮಾಡಿ ಹಾಕಿಕೊಳ್ಳಿ ಇನ್ನೊಂದಿಷ್ಟು ತುಪ್ಪ ಪಾಯಸ ಚೆನ್ನಾಗಿದೆಯೇ ತಗೊಳ್ಳಿ ಕೋಸಂಬರಿ ಇನ್ನೇನು ನಿರುಮ್ಮಳ ನಿಶ್ಚಿಂತೆಯಿಂದಿರಿ ಆಡಳಿತದ ತಾಪತ್ರಯ ಶತೃಭಯ ಎಲ್ಲಾ ದೂರ ಇದ್ದಾನಲ್ಲ ವೈಸರಾಯ ನೋಡಿಕೊಳ್ಳುತ್ತಾನೆ ಪುಟ್ಟ ಪೂರ ಕೊಟ್ಟರಾಯಿತು ಒಂದಿಷ್ಟು ಕೋಟಿ ಕಪ್ಪ ದೂರದ ದೊರೆಗೆ ತಾನು ದಾಸಿಯಾದರೇನು ಇದ್ದಾಳಲ್ಲ ಪ್ರಜೆಗಳ ರಾಣಿ ಅಮ್ಮಣ್ಣಿ ವಿಕ್ಟೋರಿಯಾಳ ಕೃಪೆ ಇನ್ನುಮೇಲೆ ಮಹಿಷಪುರ ಸುಖೀರಾಜ್ಯ ನಿಧಾನ ನಿಧಾನಕ್ಕೆ ಊಟ ಮಾಡಿ ಮಹಾರಾಜರೇ! ಸತ್ತವನು ಸತ್ತ ದಾಸನಾಗಿದ್ದು ಸುಖವ ಸವಿಯಲಾರದ ದಡ್ಡಶಿಖಾಮಣಿ ಸುಲ್ತಾನ ಏನು ಬಂತು ನಿಷ್ಠುರ […]

ಬಸವಣ್ಣನ ಹಾದಿಯಲ್ಲಿ ಜನನಾಯಕರು: ಯಾರವರು!!

ಬಸವಣ್ಣನ ಹಾದಿಯಲ್ಲಿ ಜನನಾಯಕರು: ಯಾರವರು!!

‘ಬಸವನ ಹಾದಿಯಲ್ಲಿ ಜನನಾಯಕರು’ ಎಂಬ ವಿಷಯ ಕುರಿತಂತೆ ಒಂದು ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಶೀರ್ಷಿಕೆಯೇನೋ ಆಕರ್ಷಣೀಯವಾಗಿದೆ. ಇಲ್ಲಿ ನಮಗೆ ಎದುರಾಗುವ ಪ್ರಶ್ನೆಯೆಂದರೆ ಬಸವಣ್ಣನ ಹಾದಿಯಲ್ಲಿ ನಡೆಯುತ್ತಿರುವ ಜನನಾಯಕರು ಯಾರು? ಯಾರವರು? ಇದಕ್ಕೆ ಉತ್ತರ ಸುಲಭವಾಗಿ ದೊರೆಯುವುದಿಲ್ಲ. ಬಸವಣ್ಣನನ್ನು ಅನುಸರಿಸುವುದು ಸುಲಭದ ಸಂಗತಿಯಲ್ಲ. ಬಸವಣ್ಣನೇ ಹೇಳಿರುವಂತೆ ಅವನದು ಲೋಕ ವಿರೋಧವನ್ನು ಕಟ್ಟಿಕೊಂಡು ನಡೆದ ನಡೆ. ಅದು ದಾಕ್ಷಿಣ್ಯಕ್ಕೆ ಒಳಗಾಗದ ನಡೆ. ಅದು ಕಾಯಕನಿಷ್ಠೆಯ ನಡೆ. ಅವನದು ಮೌಢ್ಯ ವಿರೋಧಿ ನಡೆ. ಅದಕ್ಕೆ ಅವನು ಹೇಳುತ್ತಾನೆ—‘ನೀರ […]

ನಾಮು ಮಾತಾಡ್ತಿಮಿ

ನಾಮು ಮಾತಾಡ್ತಿಮಿ

ಹೌದು! ನಾಮು ಮಾತಾಡ್ತಿಮಿ ಆದ್ರೆ ಕಿಮಿ ಮುಚ್ಚಿ ನೋಡಿ ಅಷ್ಟೇ! ನಮ್ಮಲ್ಲೂ ಕಪ್ಪು, ಬಿಳಿ ಕೆಂಪು, ನೀಲಿ, ಹಸ್ರುಗಳೆಂಬೂ ಬಣ್ಗಳ್ ಬಡ್ದಾಟ ಇದ್ದುದ್ದೆ ನಿಚ್ಚ ನೆಡೆಯುತ್ತಲೆ ಇದೆ ಜಗ್ಳ, ಕೋಪ, ತಾಪ, ಸಿಟ್ಟು ಮುನ್ಸು, ಸೇಡು ಎಲ್ಲಾ ಮಾಮೂಲೆ ಆದ್ರು ಆಪೀಸ್ಗಳ್ಲಿ ನಮ್ಮದೇ ದರ್ಬಾರು ಹಳ್ಳಿಯಿಂದ ದಿಲ್ಲಿವರ್ಗೂ ಅಲ್ಲ ಈ ಜವಾನನ್ ದೌಲತ್ ನೋಡು ಯಂಗತಂದ್ ಬಿಸಾಕ್ತನೆ, ನಾನೇನ್ ಕಸ್ವೆ ನನ್ನ ರಾಜ್ರಿಂದಿಡ್ದು ಆಳ್ಗೊಳ್ ತಂಕ ಮುಟ್ಟೋದೆನು ಬಚ್ಚಿಡದೇನು ಬಿರಲ್ಲಿ ಮೌರಾಗಿ ಮಡ್ಗದೇನು ನನ್ನೊ ಒಂದ್ಸಾರಿ ನೆಟ್ಗೆ, […]

ಕೋವನ ಕಲೆ

ಕೋವನ ಕಲೆ

ಕೋವನ ಕಲೆಯ ಕೋರಿಕೆಗೆ ಅಂಗ ತೊಟ್ಟು ಮಣ್ಣು ಮಡಿಕೆ ಯಾಯಿತು ಕೋರಿಕೆಯ ಜೀವ ನೀ ನಿನ್ನ ತಾಯ್ಗೆ ಕೋರಿ ಕೋರಿ ಜವ್ವನದ ಬಣ್ಣ ತೊಟ್ಟಿರುವೆ ನೀ ನಿನ್ನ ಮೈಗೆ! ಈಗ ಕೋವಿದನೂ ನೀನೆ ! ಕೋಲಿಡಿದವನೂ ನೀನೆ !   ತಬಲತಲೆಯೊಳಗೆ ಬಡಿದಷ್ಟೂ ಗುಂಯ್ ಗುಡುವ ಸದ್ದು ಮಿತಿ ಮೀರಿರುವ ಆಸೆಯ ಹದ್ದು ನೆಲೆನಿಲ್ಲದೆ ಹಾರಾಡುತ್ತಿದೆ ಅತ್ತ ಆ ಮನದಾಗಸದಿಂದ ಇತ್ತಲ ಈ ಮನದ ಗಡಿಯವರೆಗೆ ಸುತ್ತಲ ದಿಕ್ಕಿಗೂ ಸುಳಿದಾಡುತ್ತಿದೆ ರೆಕ್ಕೆ ಬಡಿವ ಸದ್ದು ಸುತ್ತಲು ಕೇಳುತ್ತಿದೆ   ಬೆಸಲಲಿ […]

ಎರಡಳಿದು

ಎರಡಳಿದು

ಎರಡಳಿದು ಈ ಕೊಡದಿಂದ ಆ ಕೊಡಕೆ ಜಿಗಿ ಅಂತಿ. ಅದನ ಕ್ರಾಂತಿ ಅಂತ ಹ್ಯಾಂಗ್ ನಂಬಲಿ? ಕೊಡಪಾನ ಒಲ್ಯಾಂದರ ಹೊಂಡಕ ಸುರಕೊ ಅಂತಿ ಗುಂಡಿ ನೀರಿಲೆ ಈಸೋದ್ರಾಗ ಹೊಸಾದೇನೈತಿ? ಈ ಮಗ್ಗಲ ನೂಸ್ತದಂದ್ರ ಆಚಿ ಮಗ್ಗಲಾ ತಿರುಗಂತಿ ಆಕಾಶಲೋಕದ ಕನಸ ಕಂಡು ಹಂಗ ಹ್ಯಾಂಗ್ ಸುಮ್ಮಿರಲಿ? ಖರೆ, ಇಟ್ಟಲ್ಲಿಂದ ಹಂದಬೇಕು ಒಂದರೆ ಹೆಜ್ಜಿ ಆಗಷ್ಟ ಮುಂದ್ ಹೋಗಾಕ್ ಹುಕಿ ಹುಟ್ಟತೇತಿ ಗೂಟದಂತ ಕಾಲಿನ್ಯಾಗ ಕಂಪನ ಮೂಡಬೇಕಂದ್ರ ನೀ ಮೀಟಬೇಕು ಫರಕ ಅಳಿಸೊ ತಂಬೂರಿ ತಂತಿ ಆವಾಗ್ ನೋಡು […]

ಸಾಕಾಗುವುದಿಲ್ಲ ಮೂರು ಗುಂಡುಗಳು!

ಸಾಕಾಗುವುದಿಲ್ಲ ಮೂರು ಗುಂಡುಗಳು!

ಮೊದಲ ಗುಂಡು ಬಿದ್ದಾಗ ಅದರ ಶಬ್ದಕ್ಕೆ ಎದೆ ನಡುಗಿತು! ಎರಡನೆ ಗುಂಡು ಬಿದ್ದಾಗ ಹೃದಯದಿಂದ ರಕ್ತ ಹೊರಚಿಮ್ಮಿತು! ಮೂರನೇ ಗುಂಡು ಬಿದ್ದಾಗ ಉಸಿರು ನಿಂತಿತು! ನಾಲ್ಕನೆಯದಕೆ ಕಾಯುವ ಮೊದಲೇ ಮಾತು ಸ್ಥಬ್ದವಾಯಿತು……….! ಹಾಗೆ ನಡುಗಿದ ಎದೆಗೀಗ ಸಾವಿರ ಉಸಿರ ನಾಳಗಳು ಜೋಡಿಸಲ್ಪಟ್ಟವು- ರಕ್ತ ಚಿಮ್ಮಿದ ಹೃದಯಕೆ ಅದೆಲ್ಲಿಂದಲೋ ಹರಿದುಬಂದ ಜನಸಾಗರ ರಕ್ತವ ತುಂಬಿತು. ಸ್ಥಬ್ದವಾದ ಮಾತು ಮತ್ತೆ ಹುಟ್ಟಿತು ನಿಂತು ಹೋದ ಒಂದು ಕೊರಳ ಬದಲಿಗೀಗ ಲಕ್ಷೋಪಲಕ್ಷ ಕೊರಳುಗಳು ದನಿಯೆತ್ತಿ ಹಾಡಿದವು! ನಾನು: ನಾನು ಗೌರಿ, ನಾವು […]

ಹದ್ದಿನ ಸಾಮ್ರಾಜ್ಯದಲಿ..

ಹದ್ದಿನ ಸಾಮ್ರಾಜ್ಯದಲಿ..

ಅನುಭವ ಮಂಟಪದಲಿ ವಚನ ಸುಧೆ ಹರಿಸಿದ ಕೋಗಿಲೆ ಹತ್ಯೆಯಾಯಿತು. ಶಾಂತಿ ಅಹಿಂಸೆಯ ಪರಿಮಳ ಪಸರಿಸುವ ಪಾರಿವಾಳ ಹತ್ಯೆಯಾಯಿತು. ಜಾತಿ ಧರ್ಮಗಳ ಧಿಕ್ಕರಿಸಿ ಪ್ರೀತಿಯ ಹುಡಿ ಹರಡಿಸಿದ ಪತಂಗದ ಹತ್ಯೆಯಾಯಿತು. ಮೌಢ್ಯ ವಿರೋಧಿಗಾಗಿ ನಿತ್ಯ ಕೂಗಿ ಎಬ್ಬಿಸುತ್ತಿದ್ದ ಕೋಳಿಯ ಹತ್ಯೆಯಾಯಿತು. ಹಾಲು-ಹಾಲಾಹಲವ ಶೋಧಿಸಿ ಸತ್ಯ ಉಲಿದ ಹಾಲಕ್ಕಿಯ ಹತ್ಯೆಯಾಯಿತು. ಗರಿಕೆಯ ಎಳೆತಂದು ವೈಚಾರಿಕ ಗೂಡು ಕಟ್ಟಿದ ಗುಬ್ಬಿಯ ಹತ್ಯೆಯಾಯಿತು. ಹದ್ದುಮೀರಿ ಅರಿವು ಬಿತ್ತಿದ ಗುರುವಿನಂತವರ ಹತ್ಯೆಯಾಯಿತು ಹದ್ದಿನ ಸಾಮ್ರಾಜ್ಯದಲಿ. ಹತ್ಯೆಯ ವಾರಸುದಾರರೀಗ ಬುದ್ಧರೂಪ ತಳೆದಿದ್ದಾರೆ ಹದ್ದು ಅಂಗುಲಿಮಾಲಾಗಲೆಂದು. -ಕೆ.ಬಿ.ವೀರಲಿಂಗನಗೌಡ್ರ […]