ಹಳತು-ಹೊನ್ನು

ಹಳತು-ಹೊನ್ನು

ಕಾಕುಪೋಕು ವಿದ್ಯೆಗಳನೇಕ ಇದ್ದರೇನು

ಕಾಕುಪೋಕು ವಿದ್ಯೆಗಳನೇಕ ಇದ್ದರೇನು

ರಾಗ : ಆನಂದ ಭೈರವಿ ಕಾಕುಪೋಕು ವಿದ್ಯೆಗಳು ಅನೇಕ ಇದ್ದರೇನು ಜನ್ಮ ಶೋಕವನ್ನು ನೀಗಿ ಮೋಕ್ಷದೇಕಾನಂದವೀಯವಿಂತೀ || ಪಲ್ಲ || ವೇದಾಗಮ ಪೌರಾಣಾದಿ ಗಾಥೆ ಶಬ್ದ ಶಾಸ್ತ್ರ ಮಂತ್ರ ಭೇದ ಕಾವ್ಯ ತರ್ಕ ಮೀಮಾಂಸಾದಿ ಡಂಭ ವಿದ್ಯವಾ ಹಾದಿಹೋಕರಲ್ಲಿಯಿಲ್ಲಿ ಓದಿ ದೈನ್ಯದೋರಿ ತಮ್ಮ ಕಾದ ಹೊಟ್ಟೆಗನ್ನವಂ ಸಂಪಾದಿಸವರಲ್ಲದಿಂತೀ || 1 || ಜ್ಯೋತಿಷ್ಯ ಛಂದಸ್ಸು ಶಿಲ್ಪ ವಾಸ್ತು ವೈದ್ಯ ಗಾರುಡಂ ಸಂ- ಗೀತ ನಾಟ್ಯ ಸಾಮುದ್ರಿಕ ಭೂತಾದ್ಯಲ್ಪ ವಿದ್ಯವ- ನೋತು ಕಲ್ತರೆಲ್ಲ ತೂತು ಮಾತ ಮುಂದು ಮಾಡಿ […]

ಸಂತ ಸಿದ್ಧರಾಮ: ಬೆಡಗಿನ ಕೂಗು

ಸಂತ ಸಿದ್ಧರಾಮ: ಬೆಡಗಿನ ಕೂಗು

 ಎಲ್. ಬಸವರಾಜು ಅವರು ಸಂಪಾದಿಸಿರುವ ‘ಸೊನ್ನಲಾಪುರದ ಸಂತ ಸಿದ್ಧರಾಮನ ನಿಜ ವಚನಗಳು’ (ಕ್ರಿ.ಶ.2007) ಎಂಬ ಗ್ರಂಥದಲ್ಲಿ ಸಿದ್ಧರಾಮನು ವಚನಕಾರರಿಗಿಂತ ಕನಿಷ್ಟ ಒಂದು ಶತಮಾನದ ನಂತರ ಬಂದ ಒಬ್ಬ ಸಂತ ಎಂಬುದನ್ನು ಬುಡರಸಿಂಗಿ (ಕ್ರಿ.ಶ.1257) ಪಡೇಕನೂರು (ಕ್ರಿ.ಶ.1256-57) ಹಾಗೂ ಸಂಗೂರು ಗ್ರಾಮ (ಕ್ರಿ.ಶ.1265) ದ ಈ ಮೂರೂ ಶಾಸನಗಳು ಸ್ಥಿರಪಡಿಸುತ್ತವೆ ಎಂದು ಸಾದರಪಡಿಸುತ್ತಾರೆ. ಸೊನ್ನಲಾಪುರದಲ್ಲಿ ಸಿದ್ಧರಾಮನು ಕಟ್ಟಿಸಿದ ಕೆರೆ, ಕಟ್ಟೆ, ಬಾವಿಗಳು ಹಾಗೂ ಚಾಮಲಾ ದೇವಿಯು ಕೊಟ್ಟ ದತ್ತಿ ಜಮೀನಿನಲ್ಲಿ ಆತ ರೂಢಿಸಿದ ಹೊಲಗದ್ದೆ ತೋಪುಗಳು ಈಗಲೂ ಇವೆ […]

ಅಂಬೇಡ್ಕರ್ ಚಿಂತನೆ – 3 : ಜಾತಿ ವಿನಾಶ ಮತ್ತು ಹಿಂದೂ ಸುಧಾರಣಾವಾದಿಗಳು

ಅಂಬೇಡ್ಕರ್ ಚಿಂತನೆ – 3 : ಜಾತಿ ವಿನಾಶ ಮತ್ತು ಹಿಂದೂ ಸುಧಾರಣಾವಾದಿಗಳು

( ಜಾತಿ ವಿನಾಶ : ಡಾ.ಬಿ.ಆರ್.ಅಂಬೇಡ್ಕರ್. ಪುಸ್ತದಿಂದ ಆಯ್ದ ಭಾಗ) ಆರ್ಯ ಸಮಾಜಕ್ಕೆ ಸೇರಿದ ಹಿಂದೂ ಸಮಾಜದ ಸುಧಾರಣಾವಾದಿಗಳ ಗುಂಪು ‘ಜಾತ್- ಪಾತ್-ತೋಡಕ್-ಮಂಡಲ್’ ಹೆಸರಿನಲ್ಲಿ ಸಂಸ್ಥೆಯೊಂದನ್ನು ಕಟ್ಟಿಕೊಂಡಿತ್ತು. ಹಿಂದೂ ಧರ್ಮದಿಂದ ಜಾತಿ ಪದ್ಧತಿಯನ್ನು ನಿರ್ಮೂಲನ ಮಾಡಬೇಕೆಂಬುದು ಇದರ ಮೂಲ ಉದ್ದೇಶವಾಗಿತ್ತು. ಇದರ ಸೆಕ್ರೆಟರಿ ಸಂತರಾಮ್ ಎನ್ನುವವರು 12,ಡಿಸೆಂಬರ್ 1935ರಂದು ಅಂಬೇಡ್ಕರ್ ಅವರಿಗೆ ಒಂದು ಪತ್ರವನ್ನು ಬರೆಯುತ್ತಾರೆ. ಅದರಲ್ಲಿ ಜಾತಿ ಪದ್ಧತಿಯನ್ನು ಕುರಿತು ಅಂಬೇಡ್ಕರ್ ಅವರು ಮಾಡಿದ ಆಳವಾದ ಅಧ್ಯಯನವನ್ನು ಶ್ಲಾಘಿಸುತ್ತಾ 1935ರ ಡಿಸೆಂಬರ್‍ನಲ್ಲಿ ಲಾಹೋರ್‍ನಲ್ಲಿ ನಡೆಯಲಿರುವ ತಮ್ಮ […]

ಅಂಬಿಗರ ಚೌಡಯ್ಯನ ವೈಚಾರಿಕ ನಿಲುವು

ಅಂಬಿಗರ ಚೌಡಯ್ಯನ ವೈಚಾರಿಕ ನಿಲುವು

ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ, ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದ ಎಲ್ಲ ವರ್ಗ, ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ವ್ಯಕ್ತಿ ಕಲ್ಯಾಣ ಮತ್ತು ಸಮಾಜದ ಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದ ಈ ವಚನಗಳು ಜಾಗತಿಕ ಸಾಹಿತ್ಯದ ಮಹತ್ವ ಪೂರ್ಣ ಭಾಗವೆನಿಸಿವೆ. ಆದ್ದರಿಂದಲೇ 12ನೆಯ ಶತಮಾನವನ್ನು ವಚನಯುಗ ಎನ್ನಲಾಗಿದೆ. ‘ವಚನ’ ಎಂದರೆ ಪ್ರತಿಜ್ಞೆ (ಪ್ರಾಮಿಸ್) ಆತ್ಮಸಾಕ್ಷಿ ಎಂದಾಗುತ್ತದೆ. ಅವರು ನಡೆದಂತೆ ನುಡಿದರು; ನುಡಿದಂತೆ ನಡೆದರು. ನಡೆನುಡಿಯ ಆತ್ಮಸಂಗ ವಚನ ಸಾಹಿತ್ಯ. […]

ಜನತೆಯ ಮಧುರಮೈತ್ರಿ ಹಿಂದು ಮತ್ತು ಇಸ್ಲಾಂ ಸಂಸ್ಕೃತಿ-ಕುವೆಂಪು

ಜನತೆಯ ಮಧುರಮೈತ್ರಿ ಹಿಂದು ಮತ್ತು ಇಸ್ಲಾಂ ಸಂಸ್ಕೃತಿ-ಕುವೆಂಪು

ಇಸ್ಲಾಂ ಸಂಸ್ಕೃತಿ -ಮೂಲ ಲೇಖಕ: ಪ್ರೊ. ಮಹಮ್ಮದ್ ಅಬ್ಬಾಸ್ ಷೂಸ್ತ್ರಿ : ಅನುವಾದಕ: ಬಿ.ಎಂ. ಶ್ರೀಕಂಠಯ್ಯ, ಈ ಕೃತಿಗೆ ಕುವೆಂಪು ಬರೆದ ಮುನ್ನುಡಿಯು ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ. ಹಾಗಾಗಿ ಇದನ್ನು ಹೊಸ ಓದುಗರಿಗಾಗಿ ಮರುಪ್ರಕಟಿಸಲಾಗಿದೆ. ಭರತವರ್ಷದ ಇತಿಹಾಸವನ್ನು ‘ನಿರಂತರವಾದ ಸುಲಿಗೆಯ ಕಥೆ’ ಎಂಬೊಂದು ಮಾತಿನಲ್ಲಿ ಬಣ್ಣಿಸಬಹುದು. ಈ ವರ್ಣನೆ ಮುಸ್ಲಿಂ ಪ್ರಾಬಲ್ಯದ ಮಧ್ಯಕಾಲದ ಇತಿಹಾಸಕ್ಕೂ ಅನ್ವಯಿಸುತ್ತದೆ. ಮುಸ್ಲಿಮರಿಗೂ  ಆತ್ಮವೃತ್ತವೂ ಈ ಮಾತಿನ ಸತ್ಯತೆಯನ್ನೇ ಸಮರ್ಥಿಸುತ್ತದೆ. ಸಾರಾಂಶ: ಮುಸ್ಲಿಮರು ಯಾವುದೋ ಒಂದು ಒತ್ತಡದ ಫಲವಾಗಿಯೊ, ಹಣದಾಸೆಯಿಂದಲೊ, ನೆಲದಾಸೆಯಿಂದಲೊ ಇಲ್ಲಿ ಕಾಲೂರಿ, ನೆಲಸಿ […]

ದೇವರ ಬಂಡಾಯ: ಗುಳೆಹೊರಟ ಲಿಂಗಗಳು

ದೇವರ ಬಂಡಾಯ: ಗುಳೆಹೊರಟ ಲಿಂಗಗಳು

ನಮಗೆಲ್ಲ ತಿಳಿದಿರುವಂತೆ ಹರಿಹರನಿಗೆ ಭಕ್ತಕವಿ, ಕ್ರಾಂತಿಕವಿ ಇತ್ಯಾದಿ ಗುರುತುಗಳಿವೆ. ಆದರೆ ಇವೆಲ್ಲವನ್ನೂ ಮೀರಿ ಆತನಲ್ಲಿರುವ ಸ್ಥಳೀಯತೆ, ದಕ್ಷಿಣಪ್ರಜ್ಞೆಯಿಂದ ಕೂಡಿದ ಉತ್ತರ ಹಾಗೂ ವೈದಿಕ ವಿರೋಧದ ಖಚಿತ ಛಾಯೆಗಳು ನಮಗೆ ಹೆಚ್ಚು ಮುಖ್ಯವಾಗುತ್ತವೆ. ಇಷ್ಟೇ ಅಲ್ಲದೆ, ಸ್ಥಾವರ ವ್ಯವಸ್ಥೆಯ ಉದ್ದೀಪಕನೆಂಬಂತೆ ಗುರುತಿಸಲಾಗುವ ಈ ಕವಿಯಲ್ಲಿ ಸ್ಥಾವರ ಪಲ್ಲಟದ ದಟ್ಟ ಛಾಯೆಯೂ ಆತನಲ್ಲಿ ಮತ್ತೆ ಮತ್ತೆ ಪ್ರಕಟಗೊಂಡಿದೆ. ಸಂಕೇತಗಳ ವೈಭವೀಕರಣದ ನಡುವೆಯೇ ಕುರುಹುಗಳ ಭಗ್ನತೆಯೂ ಸಾಧಿತವಾಗಿದೆ. ದುಂಬಿ ಎಂಜಲಿಸದ ಮಡಿ ಹೂವನ್ನು ಹೂಬನದಲ್ಲಿ ಅರಸುವ ಕವಿಯೇ, ಸುಟ್ಟ ಮಾಂಸವನ್ನೇ ಶಿವನಿಗೆ […]