ಸಂಗೀತ

ಸಂಗೀತ

ನಾದಲೀಲೆ-3 :ಒಳಗಣ್ಣಿನ ಬೆಳಕು ತೋರಿದ ಪುಟ್ಟರಾಜರು

ನಾದಲೀಲೆ-3 :ಒಳಗಣ್ಣಿನ ಬೆಳಕು ತೋರಿದ ಪುಟ್ಟರಾಜರು

ಸಂಗೀತದ ಸಾಧನೆ, ದಕ್ಕಿಸಿಕೊಂಡ ಸಂಗೀತದ ಪ್ರದರ್ಶನ, ಕಲಿತ ವಿದ್ಯೆಯಿಂದ ಜೀವನೋಪಾಯ ಇವುಗಳಲ್ಲಿ ಒಂದಲ್ಲಾ ಒಂದು ಎಲ್ಲಾ ಸಂಗೀತಗಾರರ ಬದುಕಿನ ಉದ್ದೇಶವಾಗಿರುತ್ತದೆ. ಸಂಗೀತವನ್ನು ತಮ್ಮ ಆಧ್ಯಾತ್ಮಿಕ ಸಾಧನೆಗಾಗಿರುವ ಮೆಟ್ಟಿಲು ಎಂದು ತಿಳಿದೂ ಅದರಲ್ಲಿ ಮುಳುಗಿದವರಿದ್ದಾರೆ. ಆದರೆ ಸಂಗೀತದ ಮೂಲಕ ಸಾಮಾಜಿಕ ಕ್ಷೇತ್ರವನ್ನು ತಮ್ಮ ಸಾಕ್ಷಾತ್ಕಾರದ ದಾರಿಯನ್ನಾಗಿ ಮಾಡಿಕೊಂಡವರೆಂದರೆ ಪುಟ್ಟರಾಜ ಗವಾಯಿಗಳೊಬ್ಬರೇ. ಯಾವುದೇ ಪೂರ್ವಾಧಾರಿತ ಸಿದ್ಧಾಂತಗಳ ಗೋಜಲುಗಳಿಗೆ ಸಿಲುಕದೆ, ತಾವು ಅರಿತದ್ದನ್ನು ‘ಗುರು ಪ್ರೇರಣೆ’ ಎಂದೇ ತಿಳಿದು ಕಾಯಕದಲ್ಲಿ ತೊಡಗಿದವರು ಅವರು. ಸಂಗೀತದಲ್ಲಿನ ನೀತಿ ನಿಯಮಗಳ ಬಿಗಿಯನ್ನು ತುಸು ಸಡಿಲಗೊಳಿಸಿ, […]

ನಿರ್ಗುಣದ ಬೆಳಗನ್ನು ಹೊಳೆಯಿಸಿದ ಕುಮಾರಜೀ

ನಿರ್ಗುಣದ ಬೆಳಗನ್ನು ಹೊಳೆಯಿಸಿದ ಕುಮಾರಜೀ

ಹಿಂದೂಸ್ತಾನೀ ಸಂಗೀತ ಕ್ಷೇತ್ರದಲ್ಲಿ ‘ಸಾಂಗೀತಿಕ ಕ್ರಾಂತಿ’ಯೊಂದಿಗೆ ಸೇರಿಕೊಂಡ ಹೆಸರು ಕುಮಾರಜೀ ಅವರದು. ಪಾರಂಪಾರಿಕ ಮೌಲ್ಯಗಳ ಪುನರಾವಲೋಕನ ನಡೆಸಿ, ಹೊಸದಾದೊಂದು ಸೌಂದರ್ಯಶಾಸ್ತ್ರವನ್ನೇ ಅವರು ಸೃಷ್ಟಿಮಾಡಿದರು. ಅವರನ್ನು, ಅವರ ಸಂಗೀತವನ್ನು ತಿಳಿಯಲು ಹೊರಡುವುದೆಂದರೆ ಅವರು ನಿರ್ಮಿಸಿದ ಸೌಂದರ್ಯಶಾಸ್ತ್ರವನ್ನು ಅಭ್ಯಾಸಮಾಡಿದಂತೆಯೇ ಎಂದೆನಿಸುತ್ತದೆ. ಕುಮಾರಜೀ ಅವರ  ಹೆಸರು ಶಿವಪುತ್ರಯ್ಯ ಕೋಂಕಾಳಿಮಠ. ಅವರು 1924 ಎಪ್ರಿಲ್ 8ರಂದು ಬೆಳಗಾವಿಯ ಸೂಳೆಭಾವಿಯಲ್ಲಿ ಸಂಗೀತದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ಅಣ್ಣ ಎಲ್ಲರೂ ಹಾಡಬಲ್ಲವರಾಗಿದ್ದರು. ಇದರಿಂದಾಗಿ ದೊಡ್ಡದೊಡ್ಡ ಸಂಗೀತಗಾರರು ಹಾಡಿದ ಗ್ರಾಮಾಫೋನ್ ರೆಕಾರ್ಡ್‍ಗಳು ಅನಾಯಾಸವಾಗಿ ಕುಮಾರಜೀಯ ಕಿವಿಯ […]