ಸಂಗೀತ

ಸಂಗೀತ

ಧ್ವನಿವರ್ಧಕದ ಹಾವಳಿ ತಪ್ಪಲಿ ಮೌಢ್ಯದ ಹಾವಳಿಯೂ

ಧ್ವನಿವರ್ಧಕದ ಹಾವಳಿ ತಪ್ಪಲಿ ಮೌಢ್ಯದ ಹಾವಳಿಯೂ

ಖ್ಯಾತ ಬಾಲಿವುಡ್ ಗಾಯಕ ಸೋನು ನಿಗಮ್ ಧಾರ್ಮಿಕ ಕೇಂದ್ರಗಳಲ್ಲಿ ಬಳಸುವ ಧ್ವನಿವರ್ಧಕಗಳ ಬಗ್ಗೆ ಆಕ್ಷೇಪದ ದನಿ ಎತ್ತಿದ್ದಾರೆ. ಪರಿಣಾಮ ಅವರ ತಲೆ ಬೋಳಾಗಿದೆ. ತಲೆಯ ಮೇಲೆ ಹತ್ತು ಲಕ್ಷದ ಬಹುಮಾನ ಇಡಲಾಗಿದೆ. ಖ್ಯಾತನಾಮರ ಹೇಳಿಕೆಗಳು ಅನಗತ್ಯ ವಿವಾದ ಸೃಷ್ಟಿಸುವುದು ಆಧುನಿಕ ಸಂವಹನ ಮಾಧ್ಯಮ ಲೋಕದ ಒಂದು ವೈಶಿಷ್ಟ್ಯ. ಸಾಮಾಜಿಕ ತಾಣಗಳು ವಿಚಾರ ವಿನಿಮಯ ಮಾಡಲೆಂದೇ ಇದ್ದರೂ ನಮ್ಮ ದೇಶದಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ಕೋಳಿ ಕಾಳಗಗಳಿಗಾಗಿ, ಕ್ಷುಲ್ಲಕ ಕಲಹಗಳಿಗಾಗಿ, ಪರಸ್ಪರ ದೋಷಾರೋಪಗಳಿಗಾಗಿ. ಕೆಲವೊಮ್ಮೆ ಆತ್ಮರತಿಗಾಗಿಯೂ ಹೌದು. ಸೋನು ನಿಗಮ್ […]

ಕಿಶೋರಿ ಅಮೋನ್ಕರ್ – ಮರೆಯಾದ ನಮ್ಮೆಲ್ಲರ ಚೇತನ

ಕಿಶೋರಿ ಅಮೋನ್ಕರ್ – ಮರೆಯಾದ ನಮ್ಮೆಲ್ಲರ ಚೇತನ

ಖ್ಯಾತ ಹಿಂದುಸ್ತಾನಿ ಹಾಡುಗಾರ್ತಿ ‘ಕಿಶೋರಿ ಅಮೋನ್ಕರ್’ ಅವರು ತೀರಿಕೊಂಡಿದ್ದಾರೆ. ನನ್ನಂತಹವರ ಪಾಲಿಗೆ ‘ಕಿಶೋರಿ ಅಮೋನ್ಕರ್’ರವರು ನಿಜದ ನೈಟಿಂಗೇಲ್. ಇವರ ಧ್ವನಿಯಲ್ಲಿ ಭೂಪ್, ಸಂಪೂರ್ಣ ಮಾಲಕೌಂಸ್, ಜಾನ್ಪುರಿ, ಗುರ್ಜರಿ ತೋಡಿ, ಲಲಿತ್, ದೇಷ್ಕರ್, ಭೀಮ್‌ಪಲಾಸ್‌ಗಳಂತಹ ಅಪೂರ್ವ ರಾಗಗಳನ್ನು ಕೇಳಿದಾಗ ಅದು ಕೇವಲ ಕಲಾಪ್ರಜ್ಞೆಯುಳ್ಳ ಅನುಭೂತಿ ಮಾತ್ರವಲ್ಲ, ಜೊತೆಗೆ ಮಹಾನ್ ಸಂತೋಷ, ಆಳವಾದ ನೋವು ಮತ್ತು ಹತಾಶೆಗಳಂತಹ ಸಣ್ಣ ಸಣ್ಣ ವಿವರಗಳು ನಮ್ಮೊಳಗೆ ಆಳವಾಗಿ ಇಳಿದಂತಹ ಅನುಭವ. ಕಿಶೋರಿತಾಯಿಯವರ ಸಂಗೀತದಲ್ಲಿ ಅಧ್ಯಾತ್ಮವು ಅದ್ಭುತ ರೀತಿಯಲ್ಲಿ ಮಿಳಿತಗೊಂಡು ಭಾವೋದ್ರೇಕದ ಆತ್ಯಾನಂದವನ್ನೂ ಮೀರಿ […]

ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ     

ಇಂದಿಗೂ ಶಿಥಿಲಗೊಳ್ಳದ ಸಂಗೀತದ ಸೆಕ್ಯುಲರ್ ಸಾಮ್ರಾಜ್ಯ     

    ಅಕ್ಷರದ ಸಾಲುಗಳ ಬೆನ್ನಟ್ಟಿದ ನಮಗೆ ಭೌತಿಕ ಸುಖದ ಅನುಭವಗಳೇ ಪ್ರಧಾನವೆನಿಸುತ್ತವೆ. ಲೋಕದ ಸಂಗತಿಯೊಂದನ್ನ ಪ್ರಶ್ನಿಸದೇ ಒಪ್ಪಲಾಗದ ಮನಸ್ಥಿತಿ ಹೊಂದಿದವರು ಆಧುನಿಕ  ಓದುಗರು. ವಿಜ್ಞಾನ ಮತ್ತು ವೈಚಾರಿಕ ಚರಿತ್ರೆಗಳು ಇಂತಹ ಸಾಕ್ಷಿ ತೋರುವ ಅಕ್ಷರಗಳ ಆಧಾರದಿಂದಲೇ ಮೊಳಕೆಯೊಡೆದು, ಚಿಗುರಿ  ಸಾಕ್ಷಾತ್ಕಾರಗೊಂಡಿವೆ. ಆಧುನಿಕ ಸಾಹಿತ್ಯವೂ ಕೂಡ ಅಲ್ಪ ಕಲ್ಪನೆಯನ್ನೂ ಬಹುಪಾಲು ವರ್ತಮಾನದ ಪ್ರಾಯೋಗಿಕ ಅನುಭವಗಳನ್ನ ತನ್ನ ಪ್ರಧಾನ ಆಕರವನ್ನಾಗಿಸಿಕೊಂಡಿದೆ.     ಕಲ್ಪನೆ ಮತ್ತು ಭಾವನೆಗಳ ಬೆನ್ನು ಸವರುವ ಸಂಗೀತವು ಆಂತರಿಕ ಸುಖವನ್ನ ಪ್ರಧಾನವಾಗಿಸಿಕೊಂಡಿದೆ. ಸಂಗೀತದ ಸಂತೋಷ, ರೋಮಾಂಚನಗಳು […]

ನಾದಲೀಲೆ-10: ಸಂಗೀತದ ಧ್ರುವತಾರೆ ಡಿ.ವಿ.ಪಲುಸ್ಕರ್

ನಾದಲೀಲೆ-10: ಸಂಗೀತದ ಧ್ರುವತಾರೆ ಡಿ.ವಿ.ಪಲುಸ್ಕರ್

ಹಿಂದೂಸ್ಥಾನಿ ಸಂಗೀತದ ‘ಪಂಡಿತ’ (ಬುಜುರ್ಗ್) ವರ್ಗಕ್ಕೆ ಸೇರಿದವರು ದತ್ತಾತ್ರೇಯ ವಿಷ್ಣು ಪಲುಸ್ಕರ್. ಕೇವಲ 34 ವರ್ಷಗಳ ಕಾಲ ಮಾತ್ರ ಬದುಕಿದ್ದರೂ ತಮ್ಮ ಶಾಂತ-ಶಿಸ್ತುಬದ್ಧ ಸ್ವಭಾವ ಹಾಗೂ ಪರಂಪರಾಬದ್ಧ ಗಾಯನದಿಂದ ಅಮರರಾದವರು. ‘ಆಗ್ರಾ ಘರಾಣೆಯ ಹುಲಿ’ ಎಂದೇ ಹೆಸರಾಗಿದ್ದ ಉಸ್ತಾದ್ ಫ಼ಯಾಜ್ ಖಾನ್‍ರ ಕಾಲಘಟ್ಟದ ಕೊನೆಯಲ್ಲಿ ಡಿ.ವಿ ಅವರು ಬೆಳಕಿಗೆ ಬಂದರು. ಹಿಂದೂಸ್ಥಾನಿ ಸಂಗೀತದ ಪುನರುದ್ಧಾರಕರೆಂದೇ ಹೆಸರು ಪಡೆದ ತಮ್ಮ ತಂದೆ ಪಂ.ವಿಷ್ಣು ದಿಗಂಬರ ಪಲುಸ್ಕರ್ ಅವರಿಂದ ಧಾರ್ಮಿಕ, ಅಧ್ಯಾತ್ಮಿಕ, ನೈತಿಕ ಮೌಲ್ಯಗಳನ್ನು ಸಹಜವಾಗಿ ಅವರು ಪಡೆದಿದ್ದರು. ಅವುಗಳ […]

ನಾದಲೀಲೆ-9: ಮರೆಯಬಾರದ ಮಹನೀಯರು

ನಾದಲೀಲೆ-9: ಮರೆಯಬಾರದ ಮಹನೀಯರು

ಮೌಖಿಕ ಪರಂಪರೆಯಲ್ಲಿ ನೆಲೆಯಾಗಿದ್ದ ಹಿಂದೂಸ್ಥಾನಿ ಸಂಗೀತಕ್ಕೆ ಶಾಸ್ತ್ರೀಯವಾದ ಸ್ಥಾನಮಾನ ತಂದುಕೊಟ್ಟ ಕೀರ್ತಿ ಭಾತ್ಕಾಂಡೆ ಹಾಗೂ ಪಲುಸ್ಕರ್ ಅವರಿಗೆ ಸಲ್ಲುತ್ತದೆ. ಬಾಯಲ್ಲೇ ಇದ್ದ ಸಂಗೀತವನ್ನು ಬರಹ ರೂಪಕ್ಕಿಳಿಸಲು ಬೇಕಾದ ಸ್ವರಲಿಪಿ(notation) ಪದ್ಧತಿಯನ್ನು ನೀಡುವುದರ ಜೊತೆಗೆ ಸಂಗೀತಕ್ಕೆ ಒಂದು ಕ್ರಮಬದ್ಧವಾದ ಅಭ್ಯಾಸ ಕ್ರಮವನ್ನು, ವ್ಯವಸ್ಥಿತವಾದ ಚೌಕಟ್ಟನ್ನು ಹಾಕಿಕೊಟ್ಟರು. ಈ ಇಬ್ಬರಲ್ಲೂ ಅನೇಕ ಭಿನ್ನಭಿಪ್ರಾಯಗಳು ಇದ್ದರೂ ಇಬ್ಬರ ಉದ್ದೇಶವೂ ಸಂಗೀತವನ್ನು, ಉಸಿರುಗಟ್ಟಿಸುವ ರಾಜಾಶ್ರಯದಿಂದ ಸಮಾಜದ ಮಧ್ಯಕ್ಕೆ ತರುವುದು ಹಾಗೂ ಸಂಗೀತದ ರಾಷ್ಟ್ರೀಕರಣ ಹಾಗೂ ಸಾಂಸ್ಥೀಕರಣವೇ ಆಗಿತ್ತು. ಭಾತ್ಕಾಂಡೆಯವರು ಸಂಗೀತವನ್ನು ಹೆಚ್ಚು ತರ್ಕಾಧಾರಿತವಾಗಿ ಹಾಗೂ […]

ನಾದಲೀಲೆ-8: ರಾಗದಾಚೆಗಿನ ಭಾವಯಾನಿ ಕಿಶೋರಿ ಅಮೋನಕರ್

ನಾದಲೀಲೆ-8: ರಾಗದಾಚೆಗಿನ ಭಾವಯಾನಿ ಕಿಶೋರಿ ಅಮೋನಕರ್

ಹಿಂದೂಸ್ಥಾನಿ ಸಂಗೀತದ ಭಾವಸೌಂದರ್ಯ ದರ್ಶನಕ್ಕಿರುವ ಇನ್ನೊಂದು ಹೆಸರೇ ಗಾನ ಸರಸ್ವತಿ ಕಿಶೋರಿ ಅಮೋನಕರ್. ಇವರು ಭಾರತೀಯ ಅಭಿಜಾತ ಸಂಗೀತಕ್ಕೆ ಒಂದು ಹೊಸ ವಿಶ್ವದ ದರ್ಶನ ಮಾಡಿಸಿದವರು, ಸಂಗೀತವನ್ನು ಆನಂದದ ಯಾತ್ರೆಯನ್ನಾಗಿಸಿದವರು. ಕಿಶೋರಿ ಅಮೋನಕರ್ ಅವರ ಬಗ್ಗೆ ಮಾತಾಡದೆ, ಯಾವ ಸಂಗೀತದ ಚರ್ಚೆಯೂ ಪೂರ್ಣವಾಗಲು ಸಾಧ್ಯವಿಲ್ಲ. ಅವರು ಸ್ವಾತಂತ್ರ್ಯೋತ್ತರ ಆಧುನಿಕ ಕಾಲದ ಚಿಂತನ ಶೀಲ, ಸಂಶೋಧನಾ ಶೀಲರಾದ ಅಪ್ರತಿಮ ಗಾಯಕಿ. ಇವರು ನವ ಯುಗದ ಭಾವ ಸೌಂದರ್ಯವಾದವನ್ನು (romanticism)ಸಂಗೀತದಲ್ಲಿ ಬೆಳೆಸಿದವರು. ಪಂ.ಓಂಕಾರನಾಥ ಠಾಕೂರರು ಈ ವಿಚಾರವನ್ನು ಹೊಂದಿದ್ದರೂ ಅದನ್ನು […]

ನಾದಲೀಲೆ-7: ಸಂಗೀತಕ್ಕೊಬ್ಬನೇ ಅಮೀರ್ ಖಾನ್

ನಾದಲೀಲೆ-7: ಸಂಗೀತಕ್ಕೊಬ್ಬನೇ ಅಮೀರ್ ಖಾನ್

ಉಸ್ತಾದ್ ಅಮೀರ್ ಖಾನ್‍ರು ಮಧುರ ಕಂಠದ ಗಾಯಕ ಮಾತ್ರವಲ್ಲ, ಸಂಶೋಧಕ, ವಾಗ್ಗೇಯಕಾರ ಹಾಗೂ ರಾಗಧಾರಿ ಸಂಗೀತವನ್ನು ಜನಪ್ರಿಯಗೊಳಿಸಿದ ‘ಟ್ರೆಂಡ್ ಸೆಟ್ಟರ್’. ಅಮೀರ್ ಖಾನ್‍ರು 1912 ಆಗಸ್ಟ್ 15ರಂದು ಇಂದೋರ್ ನ ಸಂಗೀತ ಪರಿವಾರದಲ್ಲಿ ಜನಿಸಿದರು. ಅವರ ತಂದೆ ಶಾಹ್ಮೀರ್ ಖಾನ್, ಬೆಂಡಿಬಜಾರ್ ಘರಾಣೆಯ ನುರಿತ ಸಾರಂಗಿ ಹಾಗೂ ಬೀನ್ ವಾದಕರಾಗಿದ್ದರು. ಹಾಗೂ ಇಂದೋರ್ ನ ಹೋಳ್ಕರರ ಆಸ್ಥಾನದ ಕಲಾವಿದರಾಗಿದ್ದರು. ದುರ್ದೈವವಶಾತ್ 9 ವರ್ಷದವರಿದ್ದಾಗಲೇ ತಮ್ಮ ತಾಯಿಯನ್ನು ಕಳೆದುಕೊಂಡ ಅಮೀರ್ ಖಾನರ ಸಂಗೀತಾಭ್ಯಾಸ ಸಾರಂಗಿ ಜೊತೆಗೆ ಆರಂಭವಾಯಿತು. ಆದರೆ ಗಾಯನದಲ್ಲಿನ […]

ನಾದಲೀಲೆ-6 ಉತ್ತರ- ದಕ್ಷಿಣದ ನಡುವೆ ಸೇತುವೆ ಕಟ್ಟಿದ ಅಬ್ದುಲ್ ಕರೀಂ ಖಾನರು

ನಾದಲೀಲೆ-6 ಉತ್ತರ- ದಕ್ಷಿಣದ ನಡುವೆ ಸೇತುವೆ ಕಟ್ಟಿದ ಅಬ್ದುಲ್ ಕರೀಂ ಖಾನರು

‘ಪಿಯಾ ಕೆ ಮಿಲನ ಕಿ ಆಸ…’ ಜೋಗಿಯಾ ರಾಗದ ಈ ಠುಮ್ರಿಯನ್ನು ಕೇಳದ ಸಂಗೀತ ಪ್ರೇಮಿಗಳಿರಲಿಕ್ಕಿಲ್ಲ. ಅದರ ಮಧುರತೆ, ಉತ್ಕಟತೆ ಒಂದೇ ಬಾರಿಗೆ ಎಂಥವರನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಕಿರಾಣಾ ಘರಾಣೆಯ ಪ್ರವರ್ತಕರಾದ ಉಸ್ತಾದ್.ಅಬ್ದುಲ್ ಕರೀಂ ಖಾನ್‍ರ ಅಪೂರ್ವ ಕಲಾಕೃತಿ ಇದು. ಅವರು ತಮ್ಮ ನವೀನ ಶೈಲಿಯ ಮೂಲಕ ಘರಾಣೆಯೊಂದನ್ನು ರೂಪಿಸಿ, ಈ ಘರಾಣೆಯನ್ನು ಹೆಸರುವಾಸಿ ಮಾಡಿದರು. ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಜನಪ್ರಿಯಗೊಳಿಸಲು ಹಾಗೂ ಈ ಸಂಗೀತ ಕರ್ನಾಟಕದಲ್ಲಿ ನೆಲೆಯೂರಲು ಕಾರಣರಾದವರಲ್ಲಿ ಕರೀಂ ಖಾನರು ಪ್ರಮುಖರು. ಅದರಲ್ಲೂ ಪ್ರಮುಖವಾಗಿ ಕಿರಾಣಾ […]

ನಾದಲೀಲೆ-5 : ಸುರೇಲಿ ಸ್ವರದ ಸರದಾರ ಬಡೆ ಗುಲಾಂ ಆಲಿ ಖಾನ್

ನಾದಲೀಲೆ-5 : ಸುರೇಲಿ ಸ್ವರದ ಸರದಾರ ಬಡೆ ಗುಲಾಂ ಆಲಿ ಖಾನ್

ಸರಿಸಮವಿಲ್ಲದ ತಮ್ಮ ಸುಮಧುರ ಧ್ವನಿಯಿಂದ ಇಡೀ ಸಂಗೀತ ಕ್ಷೇತ್ರವನ್ನು ಕೊಳ್ಳೆಹೊಡೆದವರು ಉ.ಬಡೆ ಗುಲಾಂ ಅಲಿ ಖಾನ್. ಲೀಲಾಜಾಲವಾಗಿ, ಅನಾಯಾಸವಾಗಿ ಮೂರೂ ಸಪ್ತಕಗಳಲ್ಲಿ ಸಂಚರಿಸಿ, ವಿಹರಿಸಬಲ್ಲ ಧ್ವನಿ ಅವರದ್ದು. ಈ ಅತಿ ಮಧುರ ದನಿಯಿಂದ ಅತಿ ಅಪೂರ್ವವಾದ ಸಂಗೀತವನ್ನು ನಿರ್ಮಿಸಿ, ಸಂಗೀತ ಪ್ರೇಮಿಗಳೆಲ್ಲರ ಕಿವಿಯನ್ನು ಅವರು ತುಂಬಿಸಿ ಬಿಟ್ಟರು. ‘ಸಂಗೀತವೆಂಬುದು ಉಸಿರಾಡಿದಂತೆ’ ಎಂಬ ಮಾತನ್ನು ಬೇರೆ ಯಾವ್ಯಾವುದೋ ಸಂದರ್ಭಗಳಲ್ಲಿ ಕೇಳಿದ್ದರೂ ಅದರ ನಿಜವಾದ ಅರ್ಥ ನನಗಾದದ್ದು, ಖಾನ್ ಸಾಹೇಬರ ಬಗ್ಗೆ ತಿಳಿದುಕೊಳ್ಳಲು ಹೊರಟ ನಂತರ. ಖಾನ್ ಸಾಹೇಬರಲ್ಲಿ ಸಂಗೀತವೆಂಬುದು ಅಪ್ರಜ್ನಾಪೂರ್ವಕವಾಗಿ, […]

ನಾದಲೀಲೆ-4 : ಠುಮ್ರಿ ಸಂಗೀತದ ಒಡತಿ ಸಿದ್ಧೇಶ್ವರಿ

ನಾದಲೀಲೆ-4 : ಠುಮ್ರಿ ಸಂಗೀತದ ಒಡತಿ ಸಿದ್ಧೇಶ್ವರಿ

ಠುಮ್ರಿ ಗಾಯನವನ್ನು ಶಾಸ್ರೀಯ ಸಂಗೀತಕ್ಕೆ ಸರಿ ಸಮಾನವಾಗಿ ನೆಲೆಯಾಗಿಸಿದ ಕೀರ್ತಿ ಸಿದ್ಧೇಶ್ವರಿ ದೇವಿಗೆ ಸಲ್ಲುತ್ತದೆ. ಠುಮ್ರಿ-ದಾದ್ರಾ ಗಾಯನ ಪ್ರಕಾರಗಳಿಗೆ ಹೊಸ ಆಯಾಮ ತಂದುಕೊಡುವುದರೊಂದಿಗೆ, ಈ ಗಾಯಕರಿಗೆ ಸಾಮಾಜಿಕವಾದ ಮನ್ನಣೆಯನ್ನೂ ದೊರಕಿಸಿಕೊಟ್ಟರು. ಉ.ಫಯ್ಯಾ ಜಖಾನರಿಂದ ‘ಠುಮ್ರಿಯ ರಾಣಿ’ ಎಂದೇ ಕರೆಯಲ್ಪಟ್ಟ ಸಿದ್ಧೇಶ್ವರಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾದ ವಾರಣಾಸಿಯಲ್ಲಿ ಜನಿಸಿದರು. ಅವರು ಜನಿಸಿದ್ದು ಸಂಗೀತದ ಕುಟುಂಬದಲ್ಲೇ ಆದರೂ, ಅವರ ಬಾಲ್ಯ ಮಾತ್ರ ತುಂಬಾ ಕಹಿಯಿಂದ ಕೂಡಿದ್ದಾಗಿತ್ತು. 1907, ಆಗಸ್ಟ್ 8ರಂದು ಜನಿಸಿದ ಸಿದ್ಧೇಶ್ವರಿಯ ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ […]