ಸಾಹಿತ್ಯ ವಿಮರ್ಷೆ

ಸಾಹಿತ್ಯ ವಿಮರ್ಷೆ

ಕೆ. ಎಸ್. ನರಸಿಂಹಸ್ವಾಮಿಯವರ ಕವಿತೆ ‘ಪ್ರಥಮ ರಾಜನಿಗೆ’-ಮರುಓದು

ಕೆ. ಎಸ್. ನರಸಿಂಹಸ್ವಾಮಿಯವರ ಕವಿತೆ ‘ಪ್ರಥಮ ರಾಜನಿಗೆ’-ಮರುಓದು

ಕೆ. ಎಸ್. ನರಸಿಂಹಸ್ವಾಮಿಯವರ ಸಮಗ್ರ ಕಾವ್ಯವನ್ನು ಮತ್ತೊಮ್ಮೆ ಓದಿದಾಗ, ಅವರ ಕಾವ್ಯ ಮತ್ತು ಬದುಕು ಅದ್ವೈತವಾಗಿ ಕಾಣುತ್ತದೆ. ಇಲ್ಲಿನ ಕವಿ ಬದುಕನ್ನು ಹೇಗೆ ಮಾಗಿಸಿಕೊಂಡರೊ ಕಾವ್ಯವನ್ನು ಅದೇ ರೀತಿಯಲ್ಲಿ ಪಕ್ವಗೊಳಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯನ್ನು ಇಂದಿನ ಯುವ ಕವಿಗಳು ಮನಗಾಣಬೇಕಿದೆ. ಒಬ್ಬ ಕವಿ ತನ್ನ ಸುತ್ತಲ ‘ಬದುಕು’ ಎಂದರೆ ಕೇವಲ ಮನುಷ್ಯನ ಲೌಕಿಕ ಆಯಾಮಗಳೆಂದೇ ಭಾವಿಸುವುದು ಮಾತ್ರವಲ್ಲ; ತನಗೆ ಅಂಟಿಕೊಂಡ ಸಕಲ ಜೀವ ಕೋಟಿರಾಶಿಯೂ ಬೆನ್ನಿಗಿದೆ ಎಂದು ಭಾವಿಸಬೇಕು. ಇಲ್ಲವಾದರೆ ಕವಿ ಏಕಮುಖಿಯಾಗುವ ಅಪಾಯವಿರುತ್ತದೆ. ಕವಿತೆಯಲ್ಲಿ ‘ಪೃಕೃತಿ’ಯ ಪ್ರತಿಮೆಗಳು, […]

ಕನಕನ ಲೋಕದೃಷ್ಟಿ ಮತ್ತು ಬದಲಿ ರಾಜಕಾರಣದ ಸಾಧ್ಯತೆಗಳು

ಕನಕನ ಲೋಕದೃಷ್ಟಿ ಮತ್ತು ಬದಲಿ ರಾಜಕಾರಣದ ಸಾಧ್ಯತೆಗಳು

ಕನಕನನ್ನೇ ಬದಲಿಯಾದ ಪರಿಪೂರ್ಣ ಸಾಂಸ್ಕøತಿಕ ನಾಯಕನನ್ನಾಗಿ, ಅಖಂಡವಾಗಿ ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲಾಗದು. ಸಾರಾಸಗಟಾಗಿ ಆತನ ವಿಚಾರಗಳನ್ನು ಸ್ವೀಕರಿಸಲೂಬಾರದು. ಎಲ್ಲ ಬರೆಹಗಾರರಿಗೂ ದಾರ್ಶನಿಕರಿಗೂ ಅವರದೇ ಆದಂತಹ ವ್ಯಕ್ತಿಗತ ಮಿತಿಗಳಿದ್ದಂತೆ ಕನಕನಿಗೂ ಇವೆ ಎಂಬುದನ್ನು ಮೊದಲು ನಾವು ಒಪ್ಪಿಕೊಳ್ಳಬೇಕು. ಅದನ್ನು ಒಪ್ಪಿಕೊಳ್ಳದೇ ಹೋದರೆ ಏಕಪಕ್ಷೀಯವಾದ ಮೊಂಡುವಾದಕ್ಕೆ ಇಳಿಯಬೇಕಾದ ಅನಿವಾರ್ಯತೆ ಹುಟ್ಟಿಕೊಳ್ಳುತ್ತದೆ. ಗುಣ ಪಕ್ಷಪಾತ ಸರಿ. ದೋಷ ಪಕ್ಷಪಾತ ಮಾತ್ರ ಎಂದಿಗೂ ಸರಿಯಲ್ಲ. ಕನಕನ ವಿಚಾರದಲ್ಲಿಯೂ ಇದು ನಿಜವೇ. ಕರ್ನಾಟಕದ ಇಂದಿನ ಸಾಂಸ್ಕøತಿಕ ಸನ್ನಿವೇಶದಲ್ಲಿ ವಿಸ್ತಾರವಾದ ನೆಲೆಯಲ್ಲಿ ಕಟ್ಟಿಕೊಳ್ಳಬಹುದಾದ ಸಾಂಸ್ಕøತಿಕ ರಾಜಕಾರಣದ ತಾತ್ವಿಕತೆಗೆ […]

‘ದೂರತೀರ’ದ ಒಂದು ಇಣುಕುನೋಟ

‘ದೂರತೀರ’ದ ಒಂದು ಇಣುಕುನೋಟ

    70ರ ದಶಕದ ನಂತರ ಕನ್ನಡದಲ್ಲಿ ಹಲವು ಸಂವೇದನೆಗಳು ಪ್ರಕಟಗೊಳ್ಳತೊಡಗಿದವು. ಅವುಗಳಲ್ಲಿ ಸಾಹಿತ್ಯಕವಾಗಿಯೂ ಮುಖ್ಯವಾದ ಸಂವೇದನೆಗಳೆಂದರೆ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಮತ್ತು ವಿಮರ್ಶನ ಪ್ರಜ್ಞೆಗಳು. ದಲಿತ ಸಂವೇದನೆ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಸ್ತ್ರೀ ಸಂವೇದನೆ ಪ್ರತಿಪಾದಿಸಿದ ಲಿಂಗನ್ಯಾಯ ಮತ್ತು ನಮ್ಮ ವಿಮರ್ಶೆ ಪ್ರಕಟಿಸಿದ ಸಾಹಿತ್ಯ ರೂಪ ಮತ್ತು ವಸ್ತುಗಳ (ಸಾಹಿತ್ಯದ ಕಟ್ಟಾಣಿಕೆ ಮತ್ತು ಕಾಣ್ಕೆಗಳ) ನಡುವಣ ಸಮತೋಲನ ಪ್ರಜ್ಞೆ ಈ ಮೂರೂ ಕೂಡ ನಮ್ಮ ಇಂದಿನ ತಲೆಮಾರಿನ ಬರಹಗಾರರ ಮೇಲೆ ಬಲವಾದ ಸವಾಲುಗಳನ್ನು ಒಡ್ಡಿವೆ. […]