ಸಾಹಿತ್ಯ ವಿಮರ್ಷೆ

ಸಾಹಿತ್ಯ ವಿಮರ್ಷೆ

ಕಾವ್ಯಯಾನ-3:ಹುಲ್ಲುಹಾಸಿನ ಮೇಲೆ ಹಿಮಮಣಿಯ ಸಾಲು: ಡಿ.ಎಸ್. ರಾಮಸ್ವಾಮಿ ಕಾವ್ಯ

ಕಾವ್ಯಯಾನ-3:ಹುಲ್ಲುಹಾಸಿನ ಮೇಲೆ ಹಿಮಮಣಿಯ ಸಾಲು: ಡಿ.ಎಸ್. ರಾಮಸ್ವಾಮಿ ಕಾವ್ಯ

ಹೊಸ ತಲೆಮಾರಿನ ಕವಿತೆಗಳನ್ನು ಓದುವುದಕ್ಕೆ ಬೇಕಾದ ಪರಿಕರಗಳು ಯಾವುವು? ಎಂಬ ಪ್ರಶ್ನೆ ಆರಂಭದಲ್ಲೇ ಮೂಡುತ್ತದೆ. ಇವರಿಗೆ ಮುನ್ನುಡಿ ರೂಪದಲ್ಲಿ ಬರೆದಿರುವ ಬಹುಪಾಲು ಹಿರಿಯ ವಿಮರ್ಶಕರು ಹೇಳಬೇಕಾದ ತಾತ್ವಿಕ ಅಂಶಗಳನ್ನು ಹೇಳದೇ ಇರುವುದು ಕೂಡ ಅಪಾಯವೇ. ಅಥವಾ ಇನ್ನೂ ಕೆಲವರು ಅತಿಯಾದ ಹೊಗಳಿಕೆಯಿಂದ ಅವರ ಕವಿತೆಯ ಬೆಳವಣಿಗೆಯನ್ನು ಕತ್ತರಿಸಿರುವುದು ಉಂಟು. ಕನ್ನಡ ಕಾವ್ಯದ ಈಚಿನ ಕೆಲವು ಮುನ್ನುಡಿಗಳು ಕಾವ್ಯ ತತ್ವದ ಸತ್ವಗಳನ್ನು ಹಿಡಿಯುವದಕ್ಕೆ ಯತ್ನ ಮಾಡಿದರೂ ಅನುಮಾನಗಳು ಅವರನ್ನು ಕಾಡುತ್ತಲೇ ಇರುತ್ತವೆ. ಕೆ.ವಿ.ಎನ್. ಎಚ್.ಎಸ್.ಆರ್. ನಟರಾಜ್ ಹುಳಿಯಾರ್ ರಂಥಹ […]

ಲಕ್ಷ್ಮೀಪತಿ ಕೋಲಾರರ ಸಾಹಿತ್ಯ: ಟಿಪ್ಪಣಿಗಳು

ಲಕ್ಷ್ಮೀಪತಿ ಕೋಲಾರರ ಸಾಹಿತ್ಯ: ಟಿಪ್ಪಣಿಗಳು

ಸೃಜನಶೀಲವಾದ ಆಯಾಮಗಳಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಳ್ಳುವ ಲಕ್ಷ್ಮೀಪತಿ ಕೋಲಾರ ಅವರು ಬರವಣಿಗೆಯನ್ನೂ ತಮ್ಮ ಸೃಜನಶೀಲತೆಯ ಉತ್ಕಟ ಅಭಿವ್ಯಕ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಅದರ ಫಲವಾಗಿಯೇಅವರುಕವಿತೆ, ನಾಟಕ ಹಾಗು ಸಂಶೋಧನೆಗಳಲ್ಲಿ ತೊಡಗಿಕೊಂಡಿರುವುದು. ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿ ಯಶಸ್ಸು ಗಳಿಸಿದ ನವೋದಯಕಾಲದ ಮೇರು ವ್ಯಕ್ತಿತ್ವಗಳಂತೆಯೇ ತಮ್ಮ ಸೃಜನಶೀಲತೆಯನ್ನು ಪಣವಾಗಿಟ್ಟುಕೊಂಡು ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಈ ಬರಹಗಾರ ಮಿದುಳು ಮತ್ತು ಹೃದಯಗಳೆರಡೂ ಒಟ್ಟಿಗೇ ಕೆಲಸ ಮಾಡುವ ವಾಗರ್ಥದ ಪ್ರತಿಯನ್ನು ಪ್ರಸ್ತುತ ಪಡಿಸುತ್ತಾ ಬಂದಿದ್ದಾರೆ. ಸದ್ಯ ಅವರ ಕಾವ್ಯ, ಸಂಶೋಧನೆಗಳು ಅನೇಕ ದಶಕಗಳ ಹೊರಳುಗಳನ್ನು […]

ವಾರ್ಸಾದಲ್ಲೊಬ್ಬ ಭಗವಂತ: ಸಮಕಾಲೀನ ತಲ್ಲಣಗಳ ಕಾದಂಬರಿ.

ವಾರ್ಸಾದಲ್ಲೊಬ್ಬ ಭಗವಂತ: ಸಮಕಾಲೀನ ತಲ್ಲಣಗಳ ಕಾದಂಬರಿ.

ಕಾರ್ಲೋಸ್‍ರವರ ‘ವಾರ್ಸಾದಲ್ಲೊಬ್ಬ ಭಗವಂತ ಕಾದಂಬರಿ [2008]ಯು ತಮಿಳಿನಲ್ಲಿ ಪ್ರಕಟವಾದ ಏಳು ವರ್ಷಗಳ ನಂತರ ಕನ್ನಡಕ್ಕೆ[2015] ಅನುವಾದವಾಗಿದೆ. ಮೂಲ ತಮಿಳಿನ ಈ ಕಾದಂಬರಿಯನ್ನು ಜಯಲಲಿತಾರವರು ಅನುವಾದ ಮಾಡಿದ್ದಾರೆ. ಡಾ. ಕಾರ್ಲೋಸ್ ಅವರ ’ಇವರು ಕಥೆಯಾದವರು ‘ಕಾದಂಬರಿಯನ್ನು ಕನ್ನಡದಲ್ಲಿ ಓದಿದ್ದ ನನಗೆ ಈ ಕಾದಂಬರಿಯ ತಂತ್ರ,ವಿಧಾನ, ವಸ್ತು, ಆಶಯ,ನಿರೂಪಣಾ ಶೈಲಿ ಇವೆಲ್ಲವೂ ಸಂಪೂರ್ಣ ಜಿಗಿತಗೊಂಡ ಜೀವ ಅನ್ನಿಸತೊಡಗಿದೆ. ಜನಪದ ಶೈಲಿಯಲ್ಲಿ ಕಥೆ ಹೇಳುವ ವಿಧಾನವನ್ನು ಮಾಕ್ರ್ವೆಜ್ ನ ಖ್ಯಾತ ಶೈಲಿಯಾದ ಮಾಂತ್ರಿಕ ವಾಸ್ತವವಾದದ ಹರವಿನಲ್ಲಿ ಡಾ.ಕಾರ್ಲೋಸ್ ರವರು‘ಇವರು ಕಥೆಯಾದವರು’ ಕಾದಂಬರಿಯನ್ನು […]

‘ಅಂಚೆ ಪೇದೆ’ಯ ಕಾವ್ಯಯಾನ

‘ಅಂಚೆ ಪೇದೆ’ಯ ಕಾವ್ಯಯಾನ

ವಿಡಂಬಾರಿಯವರ ಬದುಕು ಪ್ರಾರಂಭವಾಗಿದ್ದೇ ದುರಂತದ ಮೂಲಕ. ಮನುಷ್ಯ ಲೋಕಕ್ಕೆ ಶಾಪವಾಗಿರುವ, ಸೂಳೆ ಬಿಡುವ ಪದ್ದತಿ ಇನ್ನೂ ಜೀವಂತವಾಗಿರುವ ಕಾಲ ಅದು. ದೇವರ ಹೆಸರಿನಲ್ಲಿ ಊರ ಪ್ರತಿಷ್ಟಿತರೋ,ಪೂಜಾರಿಯೋ ತಮ್ಮ ತೆವಲಿಗೆ ಕೆಳಜಾತಿಯ ಹೆಣ್ಣುಗಳನ್ನು ದೇವದಾಸಿಯಾಗಿಸುವುದನ್ನು ಸ್ವತಃ ದೇವರಿಗೂ(!?) ನಿಲ್ಲಿಸಲಾಗಿರಲಿಲ್ಲ. “ದೇವಸ್ಥಾನದ ದೇವರೆಂಬ ಮೂರ್ತಿಯ ಎದುರು ತನ್ನ ತಾಯಿಯ ತಂದೆಯವರನ್ನು ಕರೆತಂದು ನಿಲ್ಲಿಸಿ, ನೋಡು, ನಿನ್ನ ಹಿರಿಯ ಮಗಳ ಮೇಲೆ ನಮ್ಮ ದೇವರಿಗೆ ಮನಸ್ಸಾಗಿದೆ. ಕಾರಣ ನಿನ್ ಮಗಳನ್ನು ನಾಳೇಯೇ ದೇವರ ಹೆಸರಿನಲ್ಲಿ ಬಿಡದಿದ್ದರೆ ನಿನ್ನ ಕುಲವೇ ನಾಶವಾದೀತೆಂದು ಹೇಳಿದರಂತೆ. […]

ಕಾವ್ಯಯಾನ-2: ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?

ಕಾವ್ಯಯಾನ-2: ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?

ಅಲ್ಲಮನ ವಚನವೊಂದರ ಸಾಲು ಇದಾಗಿದೆ. ಸಂಗಂ ಕವಿತೆಯನ್ನು ಓದುತ್ತಿರುವಾಗ ‘ಒಲುಮೆ’ ಎಂಬ ಪದ ರೂಪಕವಾಗಿ ಹೇಗೆ ಅಲ್ಲಿನ ಲೋಕವನ್ನು ಪ್ರತಿನಿಧಿಸುತ್ತದೆ ಎಂಬುದು ಮತ್ತೆ ಮತ್ತೆ ಕಾಡುತ್ತದೆ. ಸಂಗಂ ಲೋಕದಲ್ಲಿ ಬರುವ ಹೆಣ್ಣು ಗಂಡುಗಳ ಕೂಟಕ್ಕೆ ಮನಸ್ಸಿನ ಹಾಸಿಗೆ ಮುಖ್ಯವಾಗುವ ನೆಲೆ ಇಲ್ಲಿ ಕಾಣಬಹುದು. ‘ಸಂಗಂ’ ಎಂಬ ಸಾಹಿತ್ಯವನ್ನು ‘ಲೋಕ’ವೆಂದು ಕರೆಯುವುದಕ್ಕೆ ಹಲವು ಕಾರಣಗಳು ಇವೆ. ಇದು ಅಪ್ಪಟ ಮನುಷ್ಯ ಕಾವ್ಯವಾದರೂ ಮೂಲತಃ ನಿಸರ್ಗವನ್ನು ಹಾಗು ಅದರ ಕೂಸುಗಳಾದ ಜೀವಸಂಕುಲವನ್ನು ಕೇಂದ್ರೀಕರಿಸಿಕೊಂಡಿದೆ.ಸಂಗಂ ಕವಿತೆಯನ್ನು ‘ಅಗಂ’ ಮತ್ತು ‘ಪುರಂ’ಎಂದು ಈ […]

ಕಾವ್ಯಯಾನ-೧: ನೇಯುವ ಶಬ್ದದ ನಾದ ಕುಂಚನೂರ ಕಾವ್ಯ

ಕಾವ್ಯಯಾನ-೧: ನೇಯುವ ಶಬ್ದದ ನಾದ ಕುಂಚನೂರ ಕಾವ್ಯ

ಆನಂದ ಕುಂಚನೂರರು ಇದುವರೆಗೆ ‘ಕರಿನೆಲ’ ‘ವ್ಯೋಮ ತಂಬೂರಿ ನಾದ’ ಎಂಬ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಮೂಲತಹ ವಿಜ್ಞಾನದ ವಿದ್ಯಾರ್ಥಿಯಾದ ಇವರು ಕವಿತೆಯನ್ನು ನೇಯುವ ಕುಶಲತೆಯಲ್ಲಿ ಪಳಗಿರುವುದನ್ನು ಮೊದಲ ಸಂಕಲನದಲ್ಲೇ ಕಾಣಬಹುದು. ಆನಂದ ತಮ್ಮ ಕವಿತೆಗೆ ಮೂಲ ಬೇರುಗಳನ್ನು ಉತ್ತರ ಕರ್ನಾಟಕದ ನೆಲದಿಂದ ಪಡೆದುಕೊಂಡರೂ, ಆ ಭಾಗದ ಇತರ ಸಮಕಾಲೀನ ಕವಿಗಳನ್ನು ನೆನಪಿಸುವುದಿಲ್ಲ. ಕಾರಣ ಇವರು ಕನ್ನಡದ ನವೋದಯದ ತತ್ವ ಮತ್ತು ಲಯಗಳನ್ನು ನೆನಪಿಸುತ್ತಾರೆ. ಹೀಗೆ ಹೇಳಿದರೆ ತಮ್ಮ ಕವಿತೆಯಲ್ಲಿ ಸ್ವಂತಿಕೆಯನ್ನು ಹುಡುಕುತ್ತಿಲ್ಲ ಎಂದು ತಿಳಿಯಬಾರದು. ಪ್ರಕೃತಿಯ ಲಯಗಳನ್ನು, […]

ಉಸಿರೆಂಬ ಅಳಿಲು; ಮೂಡ್ನಾಕೂಡು ಕಾವ್ಯ.

ಉಸಿರೆಂಬ ಅಳಿಲು; ಮೂಡ್ನಾಕೂಡು ಕಾವ್ಯ.

ಇದುವರೆಗೆ ಐದು ಸಂಕಲನಗಳನ್ನು ಪ್ರಕಟಿಸಿರುವ ಚಿನ್ನಸ್ವಾಮಿಯವರು ಆಧುನಿಕ ಕನ್ನಡ ಕಾವ್ಯದಲ್ಲಿ ಗಟ್ಟಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರ ‘ಬುದ್ದಬೆಳದಿಂಗಳು’ ಸಂಕಲನ ದ ಹೊತ್ತಿಗೆ ಕನ್ನಡ ಕಾವ್ಯ ಪರಂಪರೆಯ ಲಯಗಳು ಅವರನ್ನು ಹೆಚ್ಚು ಒಳಗುಮಾಡಿಕೊಂಡಿದ್ದವು. ಮೊದಲ ನಾಲ್ಕು ಕವಿತಾ ಸಂಕಲನಗಳಲ್ಲಿ ಆವರಿಸಿಕೊಂಡಿರುವ ಸರಳವಾದ ಗದ್ಯಲಯಗಳು ಮತ್ತು ಆ ಮೂಲಕ ನಿರ್ಮಿತಿಗೊಳ್ಳವ ಪ್ರತಿಮಾಲೋಕ ಆ ಕಾಲದ ದಲಿತಕಾವ್ಯದ ಸಿದ್ದ ಮಾದರಿಗಳಿಂದ ಬಿಡಿಸಿಕೊಳ್ಳುವ ಇರಾದೆಯು ಇದೆ. ಹಾಗೆ ನೋಡಿದರೆ ಚಿನ್ನಸ್ವಾಮಿ ಯವರು ತಮ್ಮ ಸಮಕಾಲೀನ ಕವಿಗಳಾದ ಕೆ.ಬಿ. ಸಿದ್ದಯ್ಯರಂತೆ ದಲಿತ ಪುರಾಣಗಳನ್ನು ಶೋಧಿಸಿ […]

ಹೊಸತನವೆ ಮನುಜತೆಯ ಮೈಸಿರಿಯ ಲಾಸ್ಯ!

ಹೊಸತನವೆ ಮನುಜತೆಯ ಮೈಸಿರಿಯ ಲಾಸ್ಯ!

ಮೋಗೇರಿ ಗೋಪಾಲಕೃಷ್ಣ ಅಡಿಗರು ‘ಭಾವತರಂಗ’ದಿಂದ(1946) ‘ಬಾ ಇತ್ತ ಇತ್ತ’(1993) ಸಂಕಲನದವರೆಗೆ ಒಟ್ಟು 12 ಕವನ ಸಂಕಲನಗಳನ್ನು ಪ್ರಕಟಿದ್ದಾರೆ. ಇವುಗಳಲ್ಲಿ ಚಂಡಮದ್ದಳೆ, ಭೂಮಿಗೀತ, ವರ್ಧಮಾನ, ಮೂಲಕ ಮಹಾಶಯರು, ಬತ್ತಲಾರದ ಗಂಗೆ ಸಂಕಲನಗಳು ಹೆಚ್ಚು ಪ್ರಸಿದ್ದವಾದವು ಮತ್ತು ಬಹುಚರ್ಚಿತವಾದವು. ಇವುಗಳ ಹೊರತಾಗಿ ಇತರ ಸಂಕಲನಗಳ ಕೆಲವು ಬಿಡಿಕವಿತೆಗಳು ಓದುಗರ ಗಮನ ಸೆಳೆದಿವೆ. ಅಡಿಗರು ತಮ್ಮ ಕವಿತೆಗಳಿಂದ ಕನ್ನಡ ಕಾವ್ಯಾಸಕ್ತರನ್ನು ಯಾವತ್ತೂ ತಮ್ಮತ್ತ ಸೆಳೆದುಕೊಳ್ಳುತ್ತಲೇ ಇದ್ದಾರೆ. ತಮ್ಮ ‘ಕಾವ್ಯ ಸೃಷ್ಟಿಯ ಅಸಲಿ ಕಸುಬುದಾರಿಕೆ’ಯಿಂದ ಇಪ್ಪತ್ತನೆಯ ಶತಮಾನದ ದ್ವಿತೀಯಾರ್ದದ ಕನ್ನಡ ಕಾವ್ಯದ ದಿಕ್ಕನ್ನು […]

ತೇಜಸ್ವಿಯವರ ಕಾಬಂಬರಿಗಳ ಮರುಓದು

ತೇಜಸ್ವಿಯವರ ಕಾಬಂಬರಿಗಳ ಮರುಓದು

ಕನ್ನಡದ ಮಟ್ಟಿಗೆ ತೇಜಸ್ವಿಯವರನ್ನು ಅದೃಷ್ಟದ ಲೇಖಕ ಎನ್ನಬಹುದು. ಪಥ ಪಂಥಗಳೆನ್ನದೆ , ತೇಜಸ್ವಿಯವರನ್ನು ಹೊಸ ಓದುಗರು ಹೊಸ ಹೊಸ ಪುಳಕಗಳಿಗಾಗಿ, ಮೋಹಕ ಕಚಗುಳಿಗಾಗಿ ಓದುತ್ತಾರೆ. ಕನ್ನಡದ ಅತ್ಯಂತ ಜೀವಂತವಾದ ನುಡಿಗಟ್ಟುಗಳು, ಭಾಷಾ ಪ್ರಯೋಗದಲ್ಲಿನ ನಾವೀನ್ಯತೆ,ಆರಿಸಿಕೊಳ್ಳುವ ವಸ್ತುವಿನ ಪ್ರಸ್ತುತತೆ ಮತ್ತದರ ಗಾಂಭೀರ್ಯಗಳು ಹದಬೆರೆತು ಓದುಗರನ್ನು ಸೂಜಿಕಲ್ಲಿನಂತೆ ಸೆಳೆಯುತ್ತವೆ.ಅದರಲ್ಲೂ ಅವರ ಕಾದಂಬರಿಗಳ ಕ್ಯಾನ್ವಾಸಿನ ತಂತ್ರಗಾರಿಕೆ ಕೂಡ ಕಾರಣವಿರಬಹುದು. ನಿಗೂಢ ವಿಸ್ಮಯಗಳು, ಮತ್ತೆ ಮತ್ತೆ ಕೆದಕುವ ಕಾಡು ಬೆಟ್ಟಗಳು, ಜೀವ ಉಕ್ಕಿಸುವಂತೆ ಪುಟಿಯುವ ಯುವಕರು, ಕರಾರುವಕ್ಕಾಗಿ ಹುಸಿಗೊಳಿಸದೆ ಸಾಕಾರವಾಗುವ ವಿಜ್ಞಾನ ಇವುಗಳು […]

ಪುರಾಣ ಇತಿಹಾಸದ ಸಂದಿನಲ್ಲಿ ಬದುಕು ಬೆಸೆಯುವ ಮೂಕಜ್ಜಿ

ಪುರಾಣ ಇತಿಹಾಸದ ಸಂದಿನಲ್ಲಿ ಬದುಕು ಬೆಸೆಯುವ ಮೂಕಜ್ಜಿ

ಕಾರಂತರ ಕಾದಂಬರಿಗಳನ್ನು ಕುರಿತು ಮಾತನಾಡುವ ಬಹುತೇಕ ವಿಮರ್ಶಕರು ಚೋಮನದುಡಿ, ಬೆಟ್ಟದಜೀವ, ಮೂಕಜ್ಜಿಯ ಕನಸು, ಅಳಿದಮೇಲೆ, ಮರಳಿಮಣ್ಣಿಗೆ, ಮೈಮನಗಳ ಸುಳಿಯಲ್ಲಿ ಕಾದಂಬರಿಗಳ ಕುರಿತಾಗಿ ಮಾತಾಡಿದಷ್ಟು ಉತ್ಸಾಹದಲ್ಲಿ ಅವರಿಗೆ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟ ಮೂಕಜ್ಜಿಯ ಕನಸು ಕಾದಂಬರಿಯ ಬಗೆಗೆ ಮಾತನಾಡುವುದಿಲ್ಲ. ಅದು ಅನೇಕರ ಪಾಲಿಗೆ ಅವರದೇ ಆದ ಬೇರೆ ಬೇರೆ ಕಾರಣಿಗಳಿಗಾಗಿ ಮಹತ್ವದ ಕಾದಂಬರಿಯೂ ಅನ್ನಿಸಿಲ್ಲ. ಅದು ತಪ್ಪಾದ ವಿಮರ್ಶೆ ಎಂದೇನೂ ಅಲ್ಲ. ಯಾಕೆಂದರೆ ಕಾದಂಬರಿಯಲ್ಲಿನ ಅತೀಂದ್ರಿಯತೆಯ ಅಂಶವು ಅದನ್ನೊಂದು ಕಲ್ಪಿತ ಕಗ್ಗವೆನ್ನಬಹುದಾದ ಅಪಾಯವಿರುವಂತೆಯೇ, ಅಲ್ಲಿರುವ ಮಾನವಶಾಸ್ತ್ರೀಯ ನೆಲೆಯ ಚರಿತ್ರೆಯ ನಿರೂಪಣೆಯು […]