ಸಾಹಿತ್ಯ ವಿಮರ್ಷೆ

ಸಾಹಿತ್ಯ ವಿಮರ್ಷೆ

ನೀರತೇಜಿಯನೇರಿದ ಪಯಣ: ಕವಿತಾ ರೈ ಅವರ ಕಾವ್ಯ

ನೀರತೇಜಿಯನೇರಿದ ಪಯಣ: ಕವಿತಾ ರೈ ಅವರ ಕಾವ್ಯ

ಕವಿತೆಯಲ್ಲಿ ಬದುಕಿನಷ್ಟೇ ಜೀವಚೈತನ್ಯ ಹರಿದಾಡುವುದು ಎಂಥ ಸಮಯಗಳಲ್ಲಿ ಎಂದು ಯೋಚಿಸಿದಾಗ ಹಲ ಬಗೆಯ ಸಂಕೀರ್ಣ ಉತ್ತರಗಳು ಮುಂದೆ ಬರಬಲ್ಲವು. ವ್ಯಕ್ತಿ ಬದುಕಿನುದ್ದಕ್ಕೂ ಅನುಭವಿಸುವ ಕಷ್ಟಪರಂಪರೆಗಳಿಗೆ ಎಡತಾಕುವ ಹಾಗು ಅವುಗಳನ್ನು ಮೀರುವ ಹಂತದಲ್ಲಿ ಅನುಭವಕ್ಕೆ ಬರುವ ಮನಸ್ಥಿತಿಗಳು ಯಾವಗಲೂ ಬಿಕ್ಕಟ್ಟಿನ ಆವರಣದಲ್ಲೆ ಉಸಿರಾಡುತ್ತವೆ. ಮನುಷ್ಯನ ಢೋಂಗೀತನಗಳು, ಅಪ್ರಮಾಣಿಕತೆ, ಸಣ್ಣತನಗಳು ಇಂಥ ಸಂದರ್ಭದಲ್ಲಿ ಮೇಲುಗೈ ಪಡೆಯಲು ಹವಣಿಸುತ್ತವೆ. ಕವಿತೆಗೆ ಇರುವ ಶಕ್ತಿ ಇವುಗಳನ್ನೂ ಕೂಡ ಒಳಕ್ಕೆ ಸ್ವೀಕರಿಸುವುದು. ಯಾವುದೇ ಕವಿತೆ ಬದುಕನ್ನು ಮತ್ತು ಅದರ ಅಭಿವ್ಯಕ್ತಿಗಳನ್ನು ಕೇವಲ ವಿವರಿಸುವ ಹಂತಕ್ಕೆ […]

ಕಾವ್ಯಯಾನ-7 : ಮೈ ಮನಸು ಬೇರೆಯಾಗದ ಬೆರಗು: ತೇಜಶ್ರೀ ಕಾವ್ಯ

ಕಾವ್ಯಯಾನ-7 : ಮೈ ಮನಸು ಬೇರೆಯಾಗದ ಬೆರಗು:  ತೇಜಶ್ರೀ ಕಾವ್ಯ

ಬದುಕಿನೊಂದಿಗೆ ಗುದ್ದಾಟವೆಂದರೆ ಅದು ಏಕಕಾಲಕ್ಕೆ ಲೋಕದ ಜತೆ ನಡೆಸುವ ಸಂವಾದವೂ ಆಗಬಲ್ಲದು. ಆದರೆ ಬದುಕಿನಲ್ಲಿ ಗೂಢವಾಗಿ ತನ್ನನ್ನು ತಾನು ಲೋಕಕ್ಕೆ ಪರಿಚಯಿಸಿಕೊಳ್ಳುವ ಇರಾದೆ ದೇಹದ್ದು. ತಾನು ಇದ್ದೇನೆ? ಹೇಗೆ ಇರಲಾಗಿದೆ? ಅಥವ ಯಾವ ಬಗೆಯಲಿ ಇರಿಸಲಾಗಿದೆ ಎಂಬುದಕ್ಕೆ ಕಾರಣಗಳು ಕೆಲವೊಮ್ಮೆ ವೆಕ್ತೀಕರಣದ ಆಯಾಮದಲ್ಲಿ ಹಲವು ಬಾರಿ ಲೋಕದ ಜತೆ ಇರಲೂಬಲ್ಲದು. ಕನ್ನಡ ಕಾವ್ಯ ದೇಹದ ಜತೆ ನಡೆಸಿದ ಸಂವಾದ ಲೋಕದ ಬಗ್ಗೆಯೂ ಆಗಿದೆ. ತೇಜಶ್ರೀ ಯವರ ಕಾವ್ಯದಲ್ಲಿ ಕೆಲವೊಮ್ಮ ಲೋಕದ ಹಂಗು ಬೇಕಿಲ್ಲವೇನೊ? ಎಂಬಂತೆ ಅವರ ಒಟ್ಟು […]

‘ಕಗ್ಗತ್ತಲೆಯ ಕಾಲ’ದಲ್ಲಿ ಬೆಳಕಿಗಾಗಿ ಹಂಬಲಿಸಿದ ತತ್ವಪದ ಸಾಹಿತ್ಯ :

‘ಕಗ್ಗತ್ತಲೆಯ ಕಾಲ’ದಲ್ಲಿ ಬೆಳಕಿಗಾಗಿ ಹಂಬಲಿಸಿದ ತತ್ವಪದ ಸಾಹಿತ್ಯ :

ನಾಳೆ ಬಿಡುಗಡೆಯಾಗಲಿರುವ ತತ್ವಪದ ಸಂಪುಟಗಳಲ್ಲಿ ಒಂದಾದ ಸಪ್ಪಣ್ಣನವರ ‘ಕೈವಲ್ಯಕಲ್ಪವಲ್ಲರಿ ‘ ಸಂಪುಟಕ್ಕೆ ಬರೆದ ಪ್ರಸ್ತಾವನೆಯ ಬರೆಹವಿದು.  ಅನುಭಾವ ಸಾಹಿತ್ಯದ ಮೂಲೆಗುಂಪು “ನಮ್ಮ ಸಾಹಿತ್ಯ ಚರಿತ್ರೆ ಮತ್ತು ಸಂಸ್ಕøತಿಯ ವಿಶ್ಲೇಷಣೆಯಲ್ಲಿ ಅನುಭಾವಿ ಕವಿಗಳ ಅಭಿವ್ಯಕ್ತಿಗೆ ತಕ್ಕ ನ್ಯಾಯ ದೊರೆತಿದೆ ಎನ್ನಿಸುವುದಿಲ್ಲ. ಈ ಕಾಲಮಾನದಲ್ಲಿ ಅಂದರೆ ಹದಿನೇಳು ಹದಿನೆಂಟನೆಯ ಶತಮಾನದಲ್ಲಿ ರಚನೆಯಾಗಿರುವ ತತ್ವಪದಗಳು ತುಂಬಾ ದೊಡ್ಡ ಕೆಲಸ. ನಾಡಿನ ತುಂಬ ಚದುರಿಹೋಗಿರುವ ಪದಗಳ ಸಂಖ್ಯೆ ಕೆಲವು ಸಾವಿರ ಸಂಖ್ಯೆಯನ್ನು ಮುಟ್ಟುತ್ತದೆ. ಕನ್ನಡ ದೇಸಿ ಛಂದೋವಿಧಾನದ ವೈವಿಧÀ್ಯಮಯ ಬಳಕೆಯನ್ನು ಈ ವಲಯ ಪ್ರಕಟಪಡಿಸುತ್ತದೆ. ಅಲ್ಲದೆ […]

ಕಾವ್ಯಯಾನ-6 : ಒದ್ದೆ ಎವೆಗಳ ಸುತ್ತ ವಿನಯಾ ಅವರ ಕಾವ್ಯ

ಕಾವ್ಯಯಾನ-6 : ಒದ್ದೆ ಎವೆಗಳ ಸುತ್ತ ವಿನಯಾ ಅವರ ಕಾವ್ಯ

ಅನುಭವಗಳನ್ನು ಅಭಿವ್ಯಕ್ತಿಸುವ ವಿಧಾನಗಳು ಯಾವಗಲೂ ನಮಗೆ ಸವಾಲಾಗಿಯೇ ಇರುತ್ತವೆ. ಅದರಲ್ಲೂ ಕವಿತೆಯಲ್ಲಿ ಭಾಷಿಕ ವಿನ್ಯಾಸಗಳನ್ನು ದುಡಿಸಿಕೊಳ್ಳುವ ಬಗೆ: ಆ ಮೂಲಕ ತಕ್ಕುದಾದ ಪ್ರತಿಮೆ, ರೂಪಕಗಳನ್ನು ಜೋಡಿಸುವ ಕಲೆಗಾರಿಕೆ ಸಿದ್ಧಿಸಿಕೊಳ್ಳಬೇಕಾಗುತ್ತದೆ. ಈ ಜಾಡಿಗೆ ಪ್ರವೇಶವಾಗ ಬೇಕಾದರೇ ಅನುಭವಗಳ ಪ್ರಾಮಾಣಿಕತೆ: ಬದುಕಿನ ವಿಚಾರದಲ್ಲಿ ಬದ್ಧತೆ: ಸ್ವ ಚರಿತೆಯನ್ನು ಮಾಗಿಸಿಕೊಳ್ಳುವಿಕೆ, ಮುಂತಾದ ಅಂಶಗಳಲ್ಲಿ ಮುಕ್ತವಾಗಬೇಕು. ವಿನಯಾ ಅವರ ಕವಿತೆಗಳನ್ನು ಓದುವಾಗ ಇಷ್ಟೆಲ್ಲಾ ಅನಿಸಿದ್ದು ಅವರು ಮೇಲಿನ ವಿಚಾರಗಳಿಗೆ ತಮ್ಮನ್ನು ತೆತ್ತುಕೊಳ್ಳುವ ಹಾದಿಯಲ್ಲಿ ಸರಾಗವಾಗಿದ್ದಾರೆ. ಸಾಮಾಜಿಕ ಕವಿತೆ ಹಲವೊಮ್ಮೆ ರಾಜಕೀಯ ಕವಿತೆಯಾಗಿಯೂ ಪರಿಣಮಿಸುತ್ತದೆ. […]

ಸಾಹಿತ್ಯ ಸಂಗಾತಿತನದ ‘ಅಪ್ರಮೇಯ’ ಬರೆಹಗಳು

ಸಾಹಿತ್ಯ ಸಂಗಾತಿತನದ ‘ಅಪ್ರಮೇಯ’ ಬರೆಹಗಳು

ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಎಸ್.ಆರ್. ವಿಜಯಶಂಕರ ಅವರು ಹೆಚ್ಚು ಪರಿಚಿತರು. ಕಳೆದ ಮೂವತ್ತೈದು ವರುಶಗಳಿಂದಲೂ ವಿಮರ್ಶೆಯ ಬರೆಹಗಳನ್ನು ಮಾಡುತ್ತಿದ್ದಾರೆ. ಮನೋಗತ(1985), ಒಳದನಿ(2004), ಒಡನಾಟ(2007), ನಿಜಗುಣ(2012), ನಿಧಾನಶ್ರುತಿ ಮತ್ತು ಇತರ ಲೇಖನಗಳು(2012), ನುಡಿಸಸಿ(2013) ಮತ್ತು ಅಪ್ರಮೇಯ(2016) ಅವರ ಇದುವರೆಗಿನ ವಿಮರ್ಶಾ ಕೃತಿಗಳು. ಕೆ. ಸದಾಶಿವ, ಯು.ಆರ್.ಅನಂತಮೂರ್ತಿ ಅವರ ಕೃತಿಗಳನ್ನು, ಮತ್ತು ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಕುರಿತ ‘ಪ್ರತಿಮಾಲೋಕ’ ಎಂಬ ವಿಮರ್ಶೆಯ ಕೃತಿಯನ್ನು ಸಂಪಾದಿಸಿದ್ದಾರೆ. ಇಲ್ಲಿಯೇ ಗಮನಿಸಬೇಕಾದುದೆಂದರೆ ಇದುವರೆಗಿನ ಕನ್ನಡ ವಿಮರ್ಶೆಯ ಕ್ಷೇತ್ರವನ್ನು ಗಮನಿಸಿದರೆ ಬಹುತೇಕ ವಿಮರ್ಶಕರು ಅಧ್ಯಾಪನದಲ್ಲಿ […]

ವಚನಕಾರ್ತಿಯರ ಲೋಕ ದೃಷ್ಟಿ : ಲಿಂಗ

ವಚನಕಾರ್ತಿಯರ ಲೋಕ ದೃಷ್ಟಿ : ಲಿಂಗ

ಭಾರತದ ಇತಿಹಾಸವೆಂದರೆ ಪ್ರಭುತ್ವದ ಯುದ್ಧ ಸಂಸ್ಕøತಿಯ ವೈಭವೀಕರಣ ಎಂಬಂತೆ ನಿರೂಪಣೆಗೊಂಡಿದೆ. ಮಹಿಳೆ ಗೆದ್ದವರ ಸೊತ್ತು ಮತ್ತು ಸೋತ ರಾಜರ ಕಪ್ಪುಕಾಣಿಕೆಯ ಜೊತೆಗಿನ ವಸ್ತುವೆಂಬಂತೆ ಕಂಡಿದೆ. ಹೆಣ್ಣೂ ಕೂಡ ವಶಪಡಿಸಿಕೊಂಡ ಆಳುವ ಭೂಮಿಯಂತೆ ಗಂಡಿನ ಸೊತ್ತಾಗಿ ಹೋಗಿದ್ದಾಳೆ. ಮುಂದೆ ಮನುವಿನ ವಿಸಡಮ್‍ನಲ್ಲೂ ಮಹಿಳೆಗೆ ಸ್ಥಾನವಿಲ್ಲ. ಆದರೆ ಜಾತಿ ಮತ್ತು ಸಂಸ್ಕøತಿಯ ನಿಯಂತ್ರಕಳಾಗಿ ಸಾಮಾಜಿಕ ಸಂರಚನೆಯಲ್ಲಿ ಸ್ಥಾಪನೆಗೊಂಡಳು. ಚರಿತ್ರೆಯಲ್ಲಿ ಕಳೆದು ಹೋದ ಅಂಚಿನ ಜನರ ಇತಿಹಾಸವನ್ನು ಬುದ್ಧಗುರು ಪ್ರಾಚೀನ ಭಾರತದ ಇತಿಹಾಸವನ್ನು ಶೋಧಿಸಿದ. ಆರ್ಯರು ತಮ್ಮ ಸುಖ ಭೋಗಕ್ಕಾಗಿ ಮಾಡಿದ […]

‘ಸತ್ಯ ಹೊರಗೆಲ್ಲೋ ಹುಡುಕುವ ಪರವಸ್ತುವಲ್ಲ’

‘ಸತ್ಯ ಹೊರಗೆಲ್ಲೋ ಹುಡುಕುವ ಪರವಸ್ತುವಲ್ಲ’

1. ಕುರಿಕಾವಲು ಬಿಟ್ಟು ಕವಿತೆ ಬರೆವುದು ಕಲಿತೆ ಕೈಕುದುರಿದ್ದ ಆದಿಕಸುಬು ಬಿಟ್ಟು ಓದು ಕಲಿತೆ ಕಲಿತು ಬರೆವ ಹೊತ್ತಿಗೆ ಏರಿದೆ ಬಾಡಿನ ಬೆಲೆ ಈಗ ಕವಿತೆ ಮಾರಿ ತಿನ್ನುವುದು ಅನ್ನ ಸುಮ್ಮನೆ ಮಾತೆ! ಕುರಿಕಾವಲು ಗಮಾರರ ಕೆಲಸ ಎಂದು ಮೆಸ್ಟರಿಂದ ಇಕ್ಕಿಸಿಕೊಂಡು ಬುದ್ದಿಗೇಡಿಗಳೆಂದು ಕುಕ್ಕಿಸಿಕೊಂಡು ಆಡುಕಾವಲು ಅವಮಾನ ಅಂದುಕೊಂಡು ಆಡುಬಿಟ್ಟೆ ಆಕಳುಬಿಟ್ಟೆ ಆಟವಾಡಿದ್ದ ಊರಕಾವಲು ಬಿಟ್ಟೆ -(ಬಾಡು ಮತ್ತು ಕವಿತೆ) ಈ ಮೇಲಿನ ಪದ್ಯದ ಸಾಲುಗಳು ರಂಗನಾಥ ಕಂಟನಕುಂಟೆಯವರ ಆತ್ಮಕಥನದ ಭಾಗದಂತಿದ್ದು ಇಂದಿನ ಸಾಂಸ್ಕøತಿಕ ರಾಜಕಾರಣಕ್ಕೆ ಹಿಡಿದ […]

ಕಾವ್ಯಯಾನ-5 : ಜಿಜ್ಞಾಸು ಕೋಣೆಯಿಂದ ಹೊರಡುವ ಎಸ್.ಮಂಜುನಾಥ್ ಅವರ ಕಾವ್ಯ

ಕಾವ್ಯಯಾನ-5 : ಜಿಜ್ಞಾಸು ಕೋಣೆಯಿಂದ ಹೊರಡುವ  ಎಸ್.ಮಂಜುನಾಥ್ ಅವರ ಕಾವ್ಯ

ಕನ್ನಡದ ಪ್ರಸಿದ್ಧ ಕವಿ ಎಸ್ ಮಂಜುನಾಥ ಅವರು ೧೯೬೦ರಲ್ಲಿ ಜೋಗದಲ್ಲಿ ಹುಟ್ಟಿದವರು. ಇಂಗ್ಲಿಷ್ ಎಂ. ಎ ಪದವಿ ಪಡೆದವರು. ಹಕ್ಕಿಪಲ್ಟಿ, ಬಾಹುಬಲಿ, ನಂಬಟ್ಟಲು, ಮೌನದ ಮಣಿ, ಮಗಳು ಸೃಜಿಸಿದ ಸಮುದ್ರ, ಕಲ್ಲ ಪಾರಿವಾಳಗಳ ಬೇಟ ಮತ್ತು ‘ನೆಲದ ಬೇರು ನಭದ ಬಿಳಲು’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಇವರ ಕವಿತೆಗಳು ಕನ್ನಡ ಓದುಗರ ಮನಸ್ಸನ್ನು ಗೆದ್ದಿದ್ದವು. ಇಂತಹ ಮಹತ್ವದ ಕವಿಯೊಬ್ಬರು ಇನ್ನಿಲ್ಲವಾಗಿದ್ದರೆ. ಅವರ ನೆನಪಿನಲ್ಲಿ ಅವರ ಕಾವ್ಯದ ಕಾಳಜಿಗಳನ್ನು ವಿಮರ್ಶಕ ಸುರೇಶ ನಾಗಲಮಡಿಕೆ ಇಲ್ಲಿ ಪರಿಚಯಿಸಿದ್ದಾರೆ. ಅವರ ಕಾವ್ಯವನ್ನು […]

ಕಾವ್ಯಯಾನ-4: ಗೋರೋಜನ ಮತ್ತು ಕಹಳೆ: ಎನ್ಕೆ ಕಾವ್ಯ

ಕಾವ್ಯಯಾನ-4: ಗೋರೋಜನ ಮತ್ತು ಕಹಳೆ: ಎನ್ಕೆ ಕಾವ್ಯ

ಎನ್ಕೆ ಹನುಮಂತಯ್ಯ ನವರ ಕಾವ್ಯ ಒಂದು ತಲೆಮಾರನ್ನು ಎಚ್ಚರಿಸುವ ಪ್ರಜ್ಞೆಯಾಗಿ ಕಾಣುತ್ತದಯೇ? ಎಂಬ ಪ್ರಶ್ನೆ ಆರಂಭದಲ್ಲೇ ಹುಟ್ಟುತ್ತದೆ. ಇವರು ಬರೆಯುವ ಕಾಲಕ್ಕೆ ಕಾವ್ಯ ತನ್ನದೇ ದಾರಿಗಳನ್ನು ಕಂಡುಕೊಳ್ಳಬಯಸಿತ್ತು. ದಲಿತತ್ವವು ಕೂಡ ಮರುನಿರೂಪಣೆಗಳನ್ನು ಹುಡುಕುವ ಹಾದಿಯಲ್ಲಿದೆ. ಇಂದು ಹನುಮಂತಯ್ಯ ನಮ್ಮೊಂದಿಗೆ ಇಲ್ಲವಾದ್ದರಿಂದ ಅವರ ಕವಿತೆಗಳನ್ನು ಯಾವ ಮಾನದಂಡಗಳಿಂದ ಗ್ರಹಿಸಬಹುದು? ಅವರು ನಿಜವಾಗಲೂ ದಲಿತಕಾವ್ಯಕ್ಕೆ ಆ ಮೂಲಕ ಹೊಸತಲೆಮಾರಿನ ಕನ್ನಡಕಾವ್ಯಕ್ಕೆ ಸೇರಿಸಿಹೋಗಿದ್ದು ಏನು? ಅವರು ಇಲ್ಲವೆನ್ನುವ ಭಾವುಕತೆಯಿಂದ ಮತ್ತೆ ಮತ್ತೆ ಅವರ ಕವಿತೆ ಬಗೆಗೆ ಚರ್ಚೆ ನಡೆಯುತ್ತಾ ಇದೆಯಾ? ಅಥವಾ […]

ಕವಿ ಭೂಮಿ ಮೇಲಿನ ಅಸುಖಿ

ಕವಿ ಭೂಮಿ ಮೇಲಿನ ಅಸುಖಿ

ಭೂಮಿ ಮೇಲಿನ ಅತ್ಯಂತ ಅಸುಖಿ ಜೀವಿ ಕವಿಯೇ ಇರಬೇಕು. ನಿರಂತರ ಅತೃಪ್ತಿ ಅವನನ್ನು ಕಾಡುತ್ತಲೇ ಇರುತ್ತವೆ. ಆಸ್ಥಾನದೊಳಗಿದ್ದೂ ಅರಸನನ್ನು ಹುಳಕ್ಕಿಂತ ಕಡೆ ಎಂದು ಧಿಕ್ಕರಿಸಿ ಹೊರ ಬರುವ ದಿಟ್ಟತನ ಕವಿಯದು. ಕಾಲದ ಅತಿರೇಕಗಳ ವಿರುದ್ಧ ಬಂಡೇಳಲು ಆತ ಹಿಂದು ಮುಂದು ನೋಡುವುದಿಲ್ಲ. ಸಮಾಜ ತಣ್ಣಗೆ ಹೆಪ್ಪುಗಟ್ಟಿದಂತಾದಾಗ ಹಿಮಕ್ಕೆ ಬೆಂಕಿ ಹಚ್ಚುವೆನೆಂದು ಹೊರಡಲು ಮನಸ್ಸು ಮಾಡುತ್ತಾನೆ. ಸಮಾಜದ ಮನಸ್ಸನ್ನು ಓದುವ ಶಕ್ತಿಯುಳ್ಳ ವಿಜ್ಞಾನಿ, ಪತ್ರಕರ್ತ. ಹಾಗಾಗಿಯೇ ಆತ ವೈರುದ್ಯಗಳಲ್ಲಿರುತ್ತಾನೆ. ಹುಂಬನಂತೆಯೂ, ಅತಿಸೂಕ್ಷ್ಮ ಸ್ವಭಾವದವನಂತೆಯೂ ಕಾಣಿಸುತ್ತಾನೆ. ಸ್ಥಾಪಿತ ಮೌಲ್ಯಗಳನ್ನು ಮುರಿಯುವುದರಲ್ಲಿ […]

1 2 3