ಲಲಿತ ಪ್ರಬಂಧ

ಲಲಿತ ಪ್ರಬಂಧ

ನಮ್ಮೂರು ಮತ್ತು ಹೋಟೆಲ್‍ಗಳು

ನಮ್ಮೂರು ಮತ್ತು ಹೋಟೆಲ್‍ಗಳು

ಈ ಲೇಖನ ಬರಿಬೇಕಾದ್ರ ಬೇಂದ್ರೆಯವರ ಅವರ ಮಾತಗಳನ್ನು ನೆನೆಸಿಕೊಳ್ಳಬೇಕನಸ್ತಾದ. ಸಮಾರಂಭವೊಂದರಲ್ಲಿ ಮಾತಾಡಿದ ಅವರ ಮಾತಿನಾಂಗ ಹೇಳೋದಾದ್ರೆ ‘ನಮ್ಮ ಕನ್ನಡಿಗರು ಏನೇ ಮಾಡಿದ್ರೂ ದೊಡ್ಡ ಪ್ರಮಾಣದಾಗ ಮಾಡ್ತಾರ. ಹಳೇಬೀಡು-ಬೇಲೂರಿನ ಶಿಲ್ಪ ಕೆತ್ತನೆ ನೋಡ್ರಿ, ಅಧ್ಭುತ! ಗೊಲಗುಮ್ಮಟ ವಿಶ್ವವಿಸ್ಮಯಗಳಲ್ಲಿ ಒಂದು. ಶ್ರವಣಬೆಳಗೋಳದ ಗೋಮ್ಮಟೇಶ್ವರ, ಬಾದಾಮಿಯ ಗುಹೆಗಳು, ಪಟ್ಟದಕಲ್ಲಿನ ಗುಡಿಗಳು, ಹಂಪಿಯ ವಿಜಯ ವಿಠ್ಠಲ ಗುಡಿಯ ಕಂಬಗಳಲ್ಲಿ ಹರಿಯುವ ನಾದ! ಒಂದೆ ಎರಡೆ ಹೀಗೆ ಕರ್ನಾಟಕದವರು ಏನೇ ಮಾಡಿದರೂ ದೊಡ್ಡ ಪ್ರಮಾಣದಾಗ ಮಾಡತಾರ..!’ ಎಲ್ಲರೂ ಮಾತಿನ ಮಧ್ಯದಲ್ಲೆ ಚಪ್ಪಾಳೆ ತಟ್ಟಿದರು. ಬೇಂದ್ರೆ […]

ಚೌಕಿನ ಪ್ರತಿಮೆಗಳೊಂದಿಗೆ

ಚೌಕಿನ ಪ್ರತಿಮೆಗಳೊಂದಿಗೆ

ತಡರಾತ್ರಿಯಲ್ಲಿ ಊರಿಗೆ ಕಾಲಿಟ್ಟಾಗ ನಿಶಬ್ದ ಮೌನ ಎಲ್ಲೆಲ್ಲೂ ಆವರಿಸಿತ್ತು. ಅಂದು ವಿಚಿತ್ರ ಭಾವ ನನ್ನನ್ನು ಕೆರಳಿಸಿತ್ತು, ಅಪಶಕುನದ ಲಕ್ಷಣಗಳು ಕಾಡತೊಡಗಿತು. ಏನೋ ಘಟಿಸಬಹುದಾದ ವಿದ್ಯಮಾನಗಳು ಜರುಗತ್ತಿರಬಹುದೆಂಬ ಆತಂಕ ಕಾಡತೊಡಗಿತು. ನಾನು ಅವಸರದಲ್ಲಿ ಬೇಗ ಮನೆ ಸೇರಿದರಾಯಿತು ಎಂದು ಮುನ್ನಡೆದಾಗ ನಾಯಿ ಬೊಗಳಿದತ್ತ ದೃಷ್ಠಿ ಹರಿಸಲಾಗಿ ಅಲ್ಲಿಯ ಪ್ರತಿಮೆಯೊಂದು ಮಾಯವಾಗಿತ್ತು, ಇತ್ತಿಚಿಗೆ ಎಲ್ಲೆಡೆ ಸಿ ಸಿ ಕ್ಯಾಮರಗಳನ್ನು ಅಳವಡಿಸಿರುವುದರಿಂದ ಯಾವುದೋ ದುಷ್ಕರ್ಮಿಗಳು ಮಾಡಿದ ಕೃತ್ಯಕ್ಕೆ ನಾನು ಬಲಿಯಾಗಬಹುದೆಂದು ಮುಖ ಮುಚ್ಚಿಕೊಂಡು ಕಾಲ್ಕಿತ್ತೆ. ಮುಂದಿನ ಚೌಕಿನಲ್ಲೂ ಇದೆ ಸ್ಥಿತಿ! ಅಲ್ಲಿಯ […]

ಆನಂದ@ಆಸೆಗಳಲೋಕ

ಆನಂದ@ಆಸೆಗಳಲೋಕ

ಪ್ರಿಯ, ಬುದ್ಧ ಗುರುವೆ. ಕ್ಷಮೆಯಿರಲಿ. “ಆಸೆಯೇ ದುಃಖಕ್ಕೆ ಮೂಲ” ಎಂಬ ನಿನ್ನ ಲೋಕೋತ್ತರ `ಮಾತಿಗೆ’, “ಆಸೆಗಳೇ ಯಶಸ್ಸಿನ ಮೆಟ್ಟಿಲು!” ಅಂಥ ಕೊಂಚ ಹೊಸ ಶೇಪುಕೊಡುತ್ತಿದ್ದೇನೆ. `ಸಂತೆ’ಯ ಹೊತ್ತಿಗೆ ತಕ್ಕ ಹಾಗೆ….. ನಿನ್ನ ಶಿಷ್ಯನಾಗಿರುವುದಕ್ಕೆ ನನಗೆ ಅಷ್ಟು ಸ್ವಾತಂತ್ರ್ಯ ಬೇಡವೇ? ನಿನ್ನ ಹಳೆಯ ಮಾತಿಗೆ ಅಂಟಿಕೊಂಡಿದ್ದರೆ ನನ್ನನ್ನು ಮೊಂಡುಮೂಲನಿಷ್ಟವಾದ ಕಾಡಿಸಬಹುದು. ಲೋಕವೂ ಕುಟುಕಬಹುದು. ಈ ಲೋಕದ ಹೊಟ್ಟೆಯಲ್ಲಿ ನಿತ್ಯ ಹುಟ್ಟುವ ಅಸಂಖ್ಯ ಆಸೆಗಳ ಹಸಿವು ತಣಿಸಲಾಗದೆ ಸೋತ್ತಿದ್ದೇನೆ. ನನ್ನ ಬಳುಕುವ ಬಾಗುವ ಸಲಾಮು ಹೊಡೆವ ಭಾವನೆಗಳ ಮೇಲೆ ಆಸೆಗಳು […]

ಊರುಗಳೂ ಚೀಟಿಗಳೂ…

ಊರುಗಳೂ ಚೀಟಿಗಳೂ…

ಒಂದಾನೊಂದು ಊರು. ಈ ಊರು ಸ್ವಲ್ಪ ದೊಡ್ಡದೇ. ಹೆಚ್ಚೂ ಕಮ್ಮಿ ಐನೂರು ಮನೆಗಳು. ಇರುವ ಮನೆಗಳಲಿ ಬಹುಪಾಲು ಮಂಗಳೂರು ಹೆಂಚಿನವು. ಅನೇಕ ತಾರಸಿ ಮನೆಗಳಿವೆ. ಇತ್ತೀಚೆಗೆ ಕಟ್ಟಿರುವ ಮನೆಗಳು ಮೊಜಾಯಿಹಾಸು ಕಂಡಿವೆ. ತೀರಾ ಗುಡಿಸಲುಗಳು ಇಲ್ಲದಿದ್ದರೂ ಅದಕ್ಕಿಂತ ಹೆಚ್ಚೇನು ಶೋಭಿಸದ ಮನೆಗಳೂ ಇವೆ. ಸರ್ಕಾರಿ ಆಸ್ಪತ್ರೆ, ಬ್ಯಾಂಕು, ಹೈಸ್ಕೂಲು, ಗ್ರಾಮಪಂಚಾಯಿತಿ, ವೈನುಶಾಪು, ಹಾಲಿನ ಡೈರಿ, ಕೆಇಬಿ ಆಫೀಸು ಇದೆ. ಅಂದಮೇಲೆ ನಿಮಗಾದರೂ ಈ ಊರಿನ ಒಂದು ಅಂದಾಜು ಸಿಕ್ಕಿರಬಹುದು. ಈ ಊರಿನ ಐವತ್ತು ಭಾಗ ಮನೆಗಳಲ್ಲಿ ಕನಿಷ್ಠ […]

ಓ ನಾಗರಾಜ ಅಪ್ಪಣೆಯೇ

ಓ ನಾಗರಾಜ ಅಪ್ಪಣೆಯೇ

ನಮ್ಮ ಆಫೀಸಿನ ಎದುರು ಬೈಕುಗಳು ಸಾಲಾಗಿ ನಿಲ್ಲುವ ಜಾಗದಲ್ಲಿ ಮೊನ್ನೆ ನಾಗರಹಾವೊಂದು ಬಂದು ಮಲಗಿತ್ತು. ಅದೇನು ಬೈಕಿನಂತೆ ಸರದಿ ಸಾಲಿನಲ್ಲಿ ಇರಲಿಲ್ಲ. ಯಾರದೋ ಬೈಕಿನ ಟ್ಯಾಂಕ್ ಕವರ್‍ನಲ್ಲಿ ಬೆಚ್ಚಗೆ ಪವಡಿಸಿತ್ತು. ಸದ್ಯ ಬೈಕಿನ ಸವಾರನಿಗೆ ಅದೇನೂ ಮಾಡಲಿಲ್ಲ. ಗಾಬರಿಯಿಂದ ಇಳಿದು ಯಾವುದೋ ಚರಂಡಿ ಹುಡುಕಿಕೊಂಡು ಹೋಯಿತು. ಆವತ್ತೆಲ್ಲ ಆ ಹಾವಿನ ಬಗ್ಗೆ ಗುಲ್ಲೋ ಗುಲ್ಲು. ಅಲ್ಲಿದ್ದವರೆಲ್ಲ ಹಾವು ಅಲ್ಲಿಗೆ ಏಕೆ ಬಂತು ಎಂಬುದರ ಬಗ್ಗೆ ಒಂದು ವಿಚಾರಸಂಕಿರಣಕ್ಕೆ ಆಗುವಷ್ಟು ಮಾತಾಡಿದರು ಎನ್ನಿ. ಹಾವುಗಳು ಯಾರಿಗೆ ತಾನೆ ಗೊತ್ತಿಲ್ಲ! […]

ಮುಂಗಾರುಮಳೆಯೇ…

ಮುಂಗಾರುಮಳೆಯೇ…

ಮುಂಗಾರು ಮಳೆ. ಆ ಹೆಸರೇ ಒಂದು ರೋಮಾಂಚನ. ಕಾಲೇಜು ಹುಡುಗ-ಹುಡುಗಿಯರಿಗೆಲ್ಲ ಎಷ್ಟೊಂದು ನೆನಪು, ಖುಷಿ ಏನೆಲ್ಲ ತರಬಹುದಾದ ಪದವೇ ಮುಂಗಾರು ಮಳೆ. ಆದರೆ ನಾನು ಬರೆಯುತ್ತಿರುವುದು ಮುಂಗಾರು ಮಳೆ ಸಿನಿಮಾ ಕುರಿತು ಅಲ್ಲ. ಬರೇ ಮುಂಗಾರುಮಳೆ ಕುರಿತು ಮಾತ್ರ. ಆದರೆ ಮುಂಗಾರುಮಳೆ ಎಂಬುದು ಮಳೆ ಮಾತ್ರ ಅಲ್ಲವೇ ಅಲ್ಲ. ಮುಂಗಾರು ಎಂದೊಡನೆ ರೈತನಿಗೆ ಆ ಸಾಲಿನಲ್ಲಿ ಬೀಳುವ ಮೊದಲ ಮಳೆಯ ಸದ್ದು ಕೇಳಿಸುತ್ತದೆ. ಅದರ ಜೊತೆಗೆ ಆತನಿಗೆ ಜಮೀನು ಉಳುವ, ಪೈರು ನಾಟಿ ಮಾಡುವ ತನ್ಮೂಲಕ ತನ್ನ […]

ಅವ್ವ ಮತ್ತು ರಾಗಿರೊಟ್ಟಿ

ಅವ್ವ ಮತ್ತು ರಾಗಿರೊಟ್ಟಿ

ನಮ್ಮೂರಿನ ಪ್ರಾತಃಸ್ಮರಣೀಯರು ವತ್ತಿನಂಟೆ ಎದ್ದಕೂಡಲೆ ಕೆರೆಕಡೆಯೋ ಅಥವಾ ತಲಾರಿ ಎಲ್ಲಯ್ಯನವರ ಕಟ್ಟೆಯ ಬಳಿ ಆಳೆತ್ತರಕ್ಕೆ ಬೆಳದಿದ್ದ ಕಳ್ಳಿಮರೆಗೋ ಹೋಗುವಾಗ; ಎದುರಿಗೆ ಸಿಕ್ಕವರನ್ನು ಕಂಡಕೂಡಲೆ, ‘ಎದ್ದೇನ್ರಯ್ಯಾ!’, ‘ಎದ್ರಾ!’ ‘ಚಿಕ್ಕಿ ಎದ್ದಾ!’ ಎಂದು ಎದುರಿಗೆ ಸಿಕ್ಕವರ ವಯೋಮಾನಕ್ಕೆ ಅನುಗುಣವಾಗಿ ಕೇಳುತ್ತಾ ತಮ್ಮ ಪ್ರಾತಃವಿಧಿಗಳನ್ನು ಮುಗಿಸಲು ತೆರಳುತ್ತಿದ್ದರು. ಈಗಿನಂತೆ ಯಾರ ಬಾಯಲ್ಲೂ ಕೂಡ ಅಪ್ಪಿತಪ್ಪಿಯೂ, ‘ಕಾಫಿ ಆಯ್ತೇನಣ್ಣ, ನಾಸ್ಟಾ ಆಯ್ತೇನಪ್ಪ’ ಎಂದು ಕೇಳುತ್ತಿರಲಿಲ್ಲ!. ಹಾಗೆ ಹೇಳುವುದಾದರೆ ನಮ್ಮೂರಿನ ಶಬ್ಧಕೋಶದಲ್ಲೇ ಈ ಪದಗುಚ್ಚಗಳಿರಲಿಲ್ಲ. ನನ್ನ ಬಾಲ್ಯದ ದಿನಗಳಲ್ಲಿ ಅರಿವಿಗೆ ತಾಕಿದ ಲೌಕಿಕದ ಎಲ್ಲ […]