ಸಮತೆಯ ಹೂವುಗಳನ್ನು ಅರಳಿಸುವ ಕನಸು

ಜಿ.ವಿ. ಆನಂದಮೂರ್ತಿ ಅವರು ನಾನು ಗೌರವಿಸುವ ಸ್ನೇಹಜೀವಿಗಳಲ್ಲೊಬ್ಬರು. ಈ ಕಾಲಕ್ಕೆ ಅಪರೂಪವಾದ ‘ನೈತಿಕ ಸ್ವಚ್ಛತೆ’ಯನ್ನು ತಮ್ಮ ಜೀವಮಾನದ ಬಹುದೊಡ್ಡ ಮೌಲ್ಯವನ್ನಾಗಿಸಿಕೊಂಡು ಉಸಿರಾಡುತ್ತಿರುವವರು. ಅವರ ಪ್ರಬಂಧಗಳನ್ನು ಕರಡು ಸ್ಥಿತಿಯಿಂದಲೇ ಓದಿಕೊಂಡಿರುವ ನನಗೆ ಅವುಗಳನ್ನು ಒಗ್ಗೂಡಿಸಿ ಪುಸ್ತಕ ರೂಪದಲ್ಲಿ ನೋಡಬೇಕೆಂಬ ಬಯಕೆ. ಅದನ್ನು ಆಗಾಗ ಅವರಲ್ಲಿ ಹೇಳುತ್ತಿದ್ದೆ. ಕೆಲವೊಮ್ಮೆ ಪ್ರೀತಿಯ ಸಲುಗೆಯಲ್ಲಿ ಒತ್ತಡವನ್ನೂ ಹೇರುತ್ತಿದ್ದೆ. ಮೂಲತಃ ಸಂಕೋಚ ಪ್ರವೃತ್ತಿಯವರಾದ ಅವರು ಹತ್ತಾರು ಸಲ ಚರ್ಚಿಸಿ, ನೂರಾರು ಸಲ ಯೋಚಿಸಿ ಇದೀಗ `ಜಾಲಾರ ಹೂವು ಮತ್ತು ಇತರ ಪ್ರಬಂಧಗಳು’ ಎಂಬ ಹೆಸರಿನಲ್ಲಿ […]