ಪುಸ್ತಕ ಪರಿಚಯ

ಪುಸ್ತಕ ಪರಿಚಯ

ಸಿದ್ದಗಂಗಯ್ಯ ಕಂಬಾಳರ ಕಾದಂಬರಿ `ರಾಣಿ ಚನ್ನಮ್ಮ’: ಒಂದು ಅವಲೋಕನ

ಸಿದ್ದಗಂಗಯ್ಯ ಕಂಬಾಳರ ಕಾದಂಬರಿ `ರಾಣಿ ಚನ್ನಮ್ಮ’: ಒಂದು ಅವಲೋಕನ

ಶಿಸ್ತಿನ ಶಿವಪ್ಪನಾಯಕನೆಂದೇ ಹೆಸರಾದ ರಾಜನ ಸೊಸೆಯೇ ಸಿದ್ದಗಂಗಯ್ಯ ಕಂಬಾಳು ಅವರು ರಚಿಸಿರುವ ‘ಕೆಳದಿ ರಾಣಿಚನ್ನಮ್ಮ’ ಕಾದಂಬರಿ ನಾಯಕಿ. ಕಾದಂಬರಿಕಾರರೇ ಹೇಳುವಂತೆ ‘ಪೂರ್ಣಕಾಲ್ಪನಿಕವಲ್ಲ, ಐತಿಹಾಸಿಕ ಕಾದಂಬರಿ ಹೇಗಿರಬೇಕೋ ಹಾಗಿದೆ’. ‘ವೀರಶೈವ ಧರ್ಮದ ತಾತ್ವಿಕ ವಿಚಾರಗಳನ್ನು ಚನ್ನಮ್ಮರಾಣಿಯ ಜೀವನ ಗಾಥೆಗೆ ಹೊಂದಿಸುವ ಅಲ್ಪಪ್ರಯತ್ನ ಮಾಡಲಾಗಿದೆ’. ‘ಧರ್ಮ ನೀತಿ ಆಚರಣೆ ಸಂಪ್ರದಾಯಗಳೆಂಬ ನಾಲ್ಕು ಕಲ್ಲಿನಿಂದ ಸಂಯೋಜಿಸಿರುವ ಈ ಕಲ್ಲು ಕುಂಡ ಮನುಧರ್ಮ ಶಾಸ್ತ್ರಕ್ಕೆ ವ್ಯಾಖ್ಯಾನ ಬರೆದಂತೆ ಬಾಳುವ ಸ್ತ್ರೀ ಸಂಕೇತದ ತುಳಸೀಗಿಡ. ಧರ್ಮನಿರಪೇಕ್ಷೆಯ ಗುಣವುಳ್ಳ ಹೆಬ್ಬಾಲದ ಮರ ವಟವೃಕ್ಷವಾಗಲು ಹಂಬಲಿಸುತ್ತಿದೆ’. (ಪ್ರಾಸ್ತಾವಿಕ) […]

ಕೈಗಾರಿಕಾ ಲೋಕದ ಮಹಾಸುಳಿಯ ಅನಾವರಣ

ಕೈಗಾರಿಕಾ ಲೋಕದ ಮಹಾಸುಳಿಯ ಅನಾವರಣ

(ದ್ವಾರನಕುಂಟೆ ಪಾತಣ್ಣ ಅವರ ‘ಮಹಾಸುಳಿ’ ಕಾದಂಬರಿಯ ಕಿರುಪರಿಚಯ) ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಇಂದಿಗೂ ಹೆಚ್ಚು ಜಾಗವನ್ನು ಪಡೆದುಕೊಳ್ಳುತ್ತಿರುವ ಅನುಭವಲೋಕವೆಂದರೆ ಹಳ್ಳಿಯ ಮತ್ತು ಬೇಸಾಯ ಸಮಾಜದ ಅನುಭವಲೋಕವೇ ಆಗಿದೆ. ಇದುವರೆಗೂ ಕನ್ನಡದಲ್ಲಿ ಬಂದಿರುವ ಮೇಜರ್ ಎನ್ನುವ ಕಾದಂಬರಿ ಮತ್ತು ಕತೆಗಳೆಲ್ಲವೂ ಈ ಅನುಭವಲೋಕವನ್ನೇ ಕೇಂದ್ರೀಕರಿಸಿವೆ. ಮತ್ತು ಹಾಗೆ ಬರೆಯುವಾಗ ಬರೆಹಗಾರರು ತಮ್ಮ ಬಾಲ್ಯದ ಅನುಭವಗಳಿಗೆ ಮತ್ತೆ ಎಡತಾಕುವ ಅವುಗಳನ್ನು ಮರುಶೋಧಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಹೀಗೆ ಮರುಶೋಧಿಸಿಕೊಳ್ಳುವ ಪ್ರಯತ್ನವೇ ಕನ್ನಡದಲ್ಲಿ ಶಕ್ತವಾದ ಕಥನ ಸಾಹಿತ್ಯವಾಗಿ ಬೆಳೆದು ಬಂದಿದೆ. ಇದು […]

ಪೆರುಮಾಳ್ ಮುರುಗನ್ : ಅರ್ಧನಾರೀಶ್ವರ-ಭಾರತೀಯ ಸಂಸ್ಕøತಿಯ ಪಳಿಯುಳಿಕೆ

ಪೆರುಮಾಳ್ ಮುರುಗನ್ : ಅರ್ಧನಾರೀಶ್ವರ-ಭಾರತೀಯ ಸಂಸ್ಕøತಿಯ ಪಳಿಯುಳಿಕೆ

ಅರ್ಧನಾರೀಶ್ವರ : ಇದು ಪೆರುಮಾಳ್ ಮುರುಗನ್ ಎಂಬ ತಮಿಳ್ ಲೇಖಕರ ಕಾದಂಬರಿ. ತಮಿಳು ಜಗತ್ತು ಇದನ್ನು ತನ್ನ ಸಂಸ್ಕøತಿಯ ಭಾಗವಾಗಿ ಸ್ವೀಕರಿಸಿತ್ತು. ಅದು ಪೆಂಗ್ವಿನ್ ಪ್ರಕಾಶನ ಮೂಲಕ ಇಂಗ್ಲೀಷಿಗೆ ಬಂದ ತಕ್ಷಣ ಹಳ್ಳಿಯ ಮಾನ ದಿಲ್ಲಿಯಲ್ಲಿ ಬಯಲಾದಂತೆ ದಿಲ್ಲಿಯ ಮಾನ ಪಶ್ಚಿಮ ಜಗತ್ತಿನಲ್ಲೆಲ್ಲಾ ಇಂಗ್ಲೀಷಿನ ಮೂಲಕ ಬೆತ್ತಲಾಯಿತೆಂದು ಹಿಂದೂ ಜಗತ್ತು ಬೆಚ್ಚಿ ಬೀಳುತ್ತದೆ. ಮೊಬೈಲ್ ತಂತ್ರಜ್ಞಾನ ಇಂಟರ್‍ನೆಟ್ ಅಂಧಾಭಿಮಾನ ಲೇಖಕನ ಮೇಲೆ ಧರ್ಮವನ್ನು ಮುಂದೊಡ್ಡಿ ಮುಗಿಬೀಳುತ್ತದೆ. ‘ಲೇಖಕ ಸತ್ತನೆಂದು’ ಬದುಕಿರುವ ಲೇಖನಿ ಹಿಡಿz ಮನುಷ್ಯ ಘೋಷಿಸಿಕೊಳ್ಳುತ್ತಾನೆ. ಇದು […]

ಕಲಾಪ್ರಜ್ಞೆ ಮತ್ತು ಆಧುನಿಕತೆ

ಕಲಾಪ್ರಜ್ಞೆ ಮತ್ತು ಆಧುನಿಕತೆ

ಶಾಂತಿನಿಕೇತನದ ಪ್ರಾಧ್ಯಾಪಕರಾದ ಆರ್.  ಶಿವಕುಮಾರ್ ಅವರ, ಬಿ. ಆರ್ ವಿಶ್ವನಾಥ ಅನುವಾದಿಸಿರುವ “ರವೀಂದ್ರನಾಥ ಟಾಕೂರ್ ಅವರ ಕಲಾಪ್ರಜ್ಞೆ ಮತ್ತು ಆಧುನಿಕತೆ” ಕೃತಿಯ ಕನ್ನಡ ಅನುವಾದಕ್ಕೆ ಶ್ರೀ ಕೆ. ಎಸ್ ಶ್ರೀನಿವಾಸಮೂರ್ತಿ ಅವರು ಬರೆದಿರುವ ಮುನ್ನುಡಿರೂಪದ ಕೃತಿ ಪರಿಚಯ. ಈ ಕೃತಿಯನ್ನು ಕೆ. ವಿ. ಸುಬ್ಬಣ್ಣ ಆಪ್ತ ರಂಗಮಂದಿರ ಪ್ರಕಟಿಸಿದೆ.  ಸಾಹಿತ್ಯ ಮತ್ತು ದೃಶ್ಯಕಲೆಗಳ ಸಂಬಂಧ ಎಷ್ಟು ಆತ್ಮೀಯವೋ ಅಷ್ಟೇ ಗಹನವಾದದ್ದು. ಈ ಆತ್ಮೀಯ ಒಡನಾಟಕ್ಕೆ ನಾವು ಪದೇ ಪದೇ ಎದುರಾಗುತ್ತಲೇ ಇರುತ್ತೇವೆ. ಕವನವೊಂದಕ್ಕೆ ಹೊಂದುವ ಹಾಗೆ ಚಿತ್ರಬಿಡಿಸುವ ರೀತಿಯಾಗಲೀ, ಚಿತ್ರವೊಂದರ […]

ಕ್ರಾಂತಿ ಎಂದರೆ ರಕ್ತಪಾತದ ಕದನವಲ್ಲ : ಭಗತ್ ಸಿಂಗ್‍

ಕ್ರಾಂತಿ ಎಂದರೆ ರಕ್ತಪಾತದ ಕದನವಲ್ಲ : ಭಗತ್ ಸಿಂಗ್‍

ಲಡಾಯಿ ಪ್ರಕಾಶನ ಪ್ರಕಟಿಸಿರುವ ಡಾ. ಎಚ್. ಎಸ್. ಅನುಪಮಾ ಅವರು ಅನುವಾದ ಮಾಡಿರುವ ‘ಭಗತ್ ಸಿಂಗ್ ಜೈಲು ಡೈರಿ’ ಕೃತಿಯ ಆಯ್ದ ಭಾಗ.  ಅವನ ಗೆಳೆಯರ ಪ್ರಕಾರ ಭಗತನ ಓದಿನ ಹಸಿವು ಅಪಾರ. ಅವನು ಜೈಲಿನಲ್ಲಿದ್ದಾಗ ನಾಲ್ಕು ಪುಸ್ತಕಗಳನ್ನು ಬರೆಯುವ ತಯಾರಿ ನಡೆಸಿದ್ದ. ಅದಕ್ಕಾಗಿ ಸುದೀರ್ಘ ಟಿಪ್ಪಣಿ ಮಾಡಿಕೊಂಡಿದ್ದ. ಅಲ್ಲದೇ ಜಯಗೋಪಾಲ್‍ಗೆ ಬರೆದ ಪತ್ರದಲ್ಲಿ ತನಗೆ ಬೇಕಿರುವ ಕೆಲವು ಪುಸ್ತಕಗಳನ್ನು ಲಾಹೋರಿನ ದ್ವಾರಕಾ ಲೈಬ್ರರಿಯಿಂದ ತಂದುಕೊಡುವಂತೆ ಕೇಳಿದ್ದ. ಅವನು ಒಳ್ಳೆಯ ಓದುಗನಷ್ಟೇ ಅಲ್ಲ, ಮಾತುಗಾರ ಹಾಗೂ ಬರಹಗಾರನೂ ಆಗಿದ್ದ. […]

ವಿನಯಾ ಅವರ ಕತೆಗಳಲ್ಲಿ ಮಹಿಳೆ, ಧರ್ಮ ಮತ್ತು ರಾಜಕಾರಣ

ವಿನಯಾ ಅವರ ಕತೆಗಳಲ್ಲಿ ಮಹಿಳೆ, ಧರ್ಮ ಮತ್ತು ರಾಜಕಾರಣ

‘ಕಾಂತಗುಣದ ಸಂಪ್ರದಾಯ ಬಂಧನದಿಂದ ಮುಕ್ತವಾದೆವೂ’ ಎಂದು ನಿಟ್ಟುಸಿರು ಬಿಡುವ ಮೊದಲೆ, ಆಧುನಿಕತೆ ಸೃಷ್ಟಿಸುತ್ತಿರುವ ಹೊಸ ಮಯಾ ದ್ರುವಗಳೊಳಗೆ ಬಂಧಿಯಾಗುವ ವರ್ತಮಾನದ ಬದುಕು ಹಲವು ಸ್ಥಿತ್ಯಂತರಗಳಿಗೆ ಒಳಗಾಗಿದೆ. ಇಲ್ಲಿ ‘ರಾಜಕಾರಣ’ ಎಂಬುದು ಸಂವಿಧಾನ ಪರಿಭಾಷೆಯ ವಾಚ್ಯಾರ್ಥವನ್ನು ಮೀರಿದ್ದು. ಸಂವಿಧಾನಾತ್ಮಕ ರಾಜಕಾರಣಕಿಂತ ಈ ತರಹದ ‘ರಾಜಕಾರಣ’ದ ಸ್ವರೂಪ ತುಂಬಾ ಸಂಕೀರ್ಣವೆನ್ನಿಸುತ್ತದೆ. ಅದರೊಂದಿಗೆ ಪ್ರಭುತ್ವ, ಧರ್ಮ, ವರ್ಗ, ಜಾತಿ, ಲಿಂಗ ವ್ಯವಸ್ಥೆಗಳು ಶಾಮೀಲಾಗಿರುತ್ತವೆ. ಇಂತಹ ಭೂಮಿಕೆಯಲ್ಲಿ ಆವಿರ್ಭವಿಸಿದ ರಾಜಕಾರಣದ ಲೋಕವು ಮಹಿಳೆಯರ ಜಗತ್ತನ್ನು ತನ್ನ ಹಿಡಿತದಲ್ಲಿಡಲು ಹಂಬಲಿಸುತ್ತದೆ. ಹಾಗೆ ನೋಡಿದರೆ ಈ […]

‘ಭೂಮಿಯ ಮೇಲಣ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ’

‘ಭೂಮಿಯ ಮೇಲಣ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ’

ಬೊಳುವಾರು ಮಹಮದ್ ಕುಞ ಅವರ ‘ಓದಿರಿ’ ಕಾದಂಬರಿಯ ಪರಿಚಯ  ಬೊಳುವಾರು ಮಹಮದ್ ಕುಞ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ ‘ಓದಿರಿ’ ಎಂಬ ಅವರ ಕಾದಂಬರಿ ಹೋಲಿಸಿದರೆ ಇದು 1/3 ಭಾಗಕ್ಕಿಂತ ಕಡಿಮೆ ಗಾತ್ರದ್ದು. ಸುಮಾರು 300 ಪುಟಗಳ ಆಕಾರದ್ದು. ಪ್ರವಾದಿ ಮಹಮ್ಮದರ ಜೀವನಾಧಾರಿತ ಮೊತ್ತ ಮೊದಲ ಐತಿಹಾಸಿಕ ಕಾದಂಬರಿ ಇದೆಂದು ಅವರೇ ಹೇಳಿದ್ದಾರೆ. ಸ್ವಾತಂತ್ರದ ಓಟ ಕಾದಂಬರಿಕಾರರಿಗೆ ಸೃಜನಾತ್ಮಕ ಓಟ ಒದಗಿಸಿದರೆ ‘ಓದಿರಿ’ ಇಸ್ಲಾಂ ಮತದ ಚರಿತ್ರೆಯ ಸತ್ಯ ಘಟನೆಗಳನ್ನು ಸೃಜಿಸುವುದರಲ್ಲಿ ತಲ್ಲೀನವಾಗುತ್ತದೆ. ‘ಯಾವುದೇ ಒಂದು ಧರ್ಮವನ್ನು […]

ಗುಜರಾತ್‍ನಲ್ಲಿ ಕೋಮುಗಲಭೆಗಳು ನಡೆದಿಲ್ಲ!!!

ಗುಜರಾತ್‍ನಲ್ಲಿ ಕೋಮುಗಲಭೆಗಳು ನಡೆದಿಲ್ಲ!!!

( ‘ಚಿಂತನ ಪ್ರಕಾಶನ’ದಿಂದ ಪ್ರಕಟಣೆಗೆ ಸಿದ್ಧವಾಗಿರುವ ‘ಹಿಂದುತ್ವದ ರಾಜಕಾರಣ’ ಪುಸ್ತಕದ ಆಯ್ದ ಭಾಗ) ಹಿಂಸೆಯ ಮೂಲಕ ಸಾಧಿಸಿದ ಪ್ರತಿಯೊಂದು ಸುಧಾರಣೆಯು ಖಂಡನೆಗೆ, ತಿರಸ್ಕಾರಕ್ಕೆ ಅರ್ಹವಾಗಿರುತ್ತದೆ. ಏಕೆಂದರೆ ಈ ಸುಧಾರಣೆಯು ದುಷ್ಟಶಕ್ತಿಗಳನ್ನು ನಿಗ್ರಹಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಒಳಗೊಂಡಿರುವುದಿಲ್ಲ ಮತ್ತು ಮನುಷ್ಯರು ಯಥಾಸ್ಥಿತಿಯ ಜೀವನ ಕ್ರಮಕ್ಕೆ ಶರಣಾಗಿರುತ್ತಾರೆ. – ಟಾಲ್‍ಸ್ಟಾಯ್ ಅಬ್ದುಲ್ ಅಹಮದ್ ಅವರು “ಕೋಮುವಾದವು ಎರಡು ವಿಭಿನ್ನ ಧರ್ಮಗಳಿಂದ ಗುಣಾರೋಪಣೆಗೊಳಗೊಂಡ ಸಾಮಾಜಿಕ ಘಟನೆ ಮತ್ತು ಈ ಘಟನೆಗಳು ಗಲಭೆಗಳಿಗೆ, ತಲ್ಲಣಗಳಿಗೆ, ಆತಂಕಗಳಿಗೆ, ಉಗ್ರತೆಗೆ ಕಾರಣವಾಗುತ್ತವೆ” ಎಂದು ಹೇಳಿದರೆ, ಫರಾ […]

ಜಗತ್ತು ಇದ್ದಲ್ಲೇ ಇದೆ ಎಂಬುದನ್ನು ರುಜುವಾತು ಪಡಿಸುವ ಬರಹ

ಜಗತ್ತು ಇದ್ದಲ್ಲೇ ಇದೆ ಎಂಬುದನ್ನು ರುಜುವಾತು ಪಡಿಸುವ ಬರಹ

 ವಿಜಯಕುಮಾರ್ ಸಿಗರನಹಳ್ಳಿ ಅವರ ಅನುಭವ ಕಥನ ‘ಬೂದಿಯಾಗದ ಕೆಂಡ‘  ಕ್ಕೆ ಟಿ. ಕೆ. ದಯಾನಂದ ಬರೆದಿರುವ ಮುನ್ನುಡಿ. ಈ ಕೃತಿಯನ್ನು ಅಹರ್ನಿಶಿ ಪ್ರಕಾಶನ  ಹೊರತಂದಿದೆ. ಈ ಬರಹಗಳೆಲ್ಲವನ್ನು ಹಾದು ಬಂದ ಮೇಲೆ; “ಬದಲಾವಣೆ ಜಗದ ನಿಯಮ” ಎಂಬ ಜನಪ್ರಿಯ ಸೂಕ್ತಿಯನ್ನು ಸತ್ಯವೆಂದು ಬಗೆಯಲು ಮನಸ್ಸೊಪ್ಪುತ್ತಿಲ್ಲ. ಯಾವುದೂ ಇದ್ದಂತೆ ಇರುವುದಿಲ್ಲ, ಎಲ್ಲವೂ, ಎಲ್ಲದೂ ಕಾಲಚಕ್ರ ತಿರುಗುವ ವೇಗದೊಳಗೆ ರೂಪಾಂತರಗೊಳಿಸಿಕೊಳ್ಳುತ್ತವೆ ಎಂಬ ಮಾತು ಅಕ್ಷರಶಃ ಸುಳ್ಳೆಂದು ಇಲ್ಲಿನ ಬರಹಗಳು ಸಮಕಾಲೀನ ಸಮಾಜವೊಂದನ್ನು ಗೇಲಿ ಮಾಡುತ್ತ್ತಿವೆ. 80ರ ದಶಕದ ಆಜುಬಾಜಿನಲ್ಲಿ ಶುರುವಾದ […]

ಬೂದಿಯಾಗುವ ಗುಟ್ಟು ಗಾಳಿಮಾತಿಗೆ ಬಿಟ್ಟು

ಬೂದಿಯಾಗುವ ಗುಟ್ಟು ಗಾಳಿಮಾತಿಗೆ ಬಿಟ್ಟು

ಪುಸ್ತಕದ ವಿವರಗಳು: ‘ಜುಲುಮೆ’ (ಗೇಯ ಕವಿತೆಗಳು): ರಮೇಶ್ ಅರೋಲಿ, ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬಳ್ಳಾರಿ ಜಿಲ್ಲೆ ಇತ್ತೀಚೆಗೆ ಯುವ ತಲೆಮಾರಿನ ಕಾವ್ಯವನ್ನು ಚರ್ಚೆಮಾಡುವಾಗ ಪರಂಪರೆಯನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಿಲ್ಲ, ಪರಂಪರೆ ಇವರಿಗೆ ಬೇಡವಾಗಿದೆ ಎಂಬ ಮಾತುಗಳು ಹೆಚ್ಚು ಕೇಳಿಬರುತ್ತಿವೆ. ಪರಂಪರೆ ಎಂದರೆ ನಮ್ಮಲ್ಲಿ ಪಂಪ, ರನ್ನ, ಕುಮಾರವ್ಯಾಸ, ವಚನಕಾರರಿಗಷ್ಟೇ ಮೀಸಲಿಟ್ಟಿದ್ದೇವೆ. ಇದು ಒಂದು ಚೌಕಟ್ಟು ಅಷ್ಟೇ. ಉಳಿದಂತೆ ವಚನಕಾರಷ್ಟೇ ಸಮಾಜದೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ ಕೆಲವು ದಾಸರು ಮತ್ತು ಮುಖ್ಯವಾಗಿ ತತ್ವಪದಕಾರರನ್ನು. ಅವಧೂತರನ್ನು ನಾವು ಯಾಕೆ ಪರಂಪರೆಯ ಪಟ್ಟಿಗೆ ಸೇರಿಸಿಕೊಳ್ಳುತ್ತಿಲ್ಲ. […]