ಪುಸ್ತಕ ಪರಿಚಯ

ಪುಸ್ತಕ ಪರಿಚಯ

ಆಜೀವಿಕರೆಂಬ ಮುಳ್ಳಿನ ತೋಟಗಾರರು

ಆಜೀವಿಕರೆಂಬ ಮುಳ್ಳಿನ ತೋಟಗಾರರು

ಭಾರತೀಯ ತತ್ವಶಾಸ್ತ್ರ ಏಕಮುಖವಾದುದಲ್ಲ ಎಂಬುದು ದರ್ಶನಗಳನ್ನು ಅಧ್ಯಯನ ಮಾಡಿದ ಯಾರಿಗಾದರೂ ಅನಿಸುತ್ತದೆ. ನಮ್ಮ ತತ್ವಶಾಸ್ತ್ರವನ್ನು ಕುರಿತು ಬರೆದಿರುವ ಮತ್ತು ಬರೆಯುತ್ತಿರುವ ಬಹುತೇಕ ವಿದ್ವಾಂಸರು ವೈದಿಕ, ಅವೈದಿಕ ಎಂದು ವಿಂಗಡಣೆಮಾಡಿರುವುದು ತಿಳಿದೇ ಇದೆ. ಆದರೆ ವಾಸ್ತವವಾಗಿ ಅವೈದಿಕ ಎನ್ನುವುದು ಕೂಡ ಒಂದೇ ಬಗೆಯಲ್ಲಿ ಇತ್ತೆ? ಎಂಬ ಪ್ರಶ್ನೆಯೂ ಕಾಡುತ್ತದೆ. ವೇದಗಳನ್ನು ಒಪ್ಪುವ ದರ್ಶನಗಳನ್ನು ವೈದಿಕವೆಂದು ಅವುಗಳ ಪ್ರಾಮಾಣ್ಯವನ್ನು ನಿರಾಕರಿಸುವ ಪಂಥಗಳನ್ನು ಅವೈದಿಕವೆಂದು ಕರೆಯುವುದು ರೂಢಿಯಾಗಿದೆ. ಕ್ರಿ.ಪೂ. 6,7ನೇ ಶತಮಾನಗಳ ದಾರ್ಶನಿಕ ಪಂಥಗಳ ಸಂಘರ್ಷ ವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಜೈನ, […]

ಅರ್ಧನಾರೀಶ್ವರ : ಇಂಡಿಯಾದ ಮರುಹುಟ್ಟಿನ ಧ್ವನಿ

ಅರ್ಧನಾರೀಶ್ವರ : ಇಂಡಿಯಾದ ಮರುಹುಟ್ಟಿನ ಧ್ವನಿ

ಅರ್ಧನಾರೀಶ್ವರ ಮೂಲ : ಪೆರುಮಾಳ್ ಮುರುಗನ್ ಕನ್ನಡಕ್ಕೆ : ಕೆ. ನಲ್ಲತಂಬಿ ಪ್ರಕಾಶನ : ಲಂಕೇಶ್ ಪ್ರಕಾಶನ ‘ಮಾದೋರುಬಾಗನ್’ ಇದು ಪೆರುಮಾಳ್ ಮುರುಗನ್ ಅವರ ತಮಿಳು ಕಾದಂಬರಿ. ಇದನ್ನು ‘ಅರ್ಧನಾರೀಶ್ವರ’ ಹೆಸರಿನಲ್ಲಿ ನಲ್ಲತಂಬಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಾದಂಬರಿಯಲ್ಲಿ ಬರುವ ‘ಕಲೆ ಕರಗತವಾದವನಿಗೆ ಬದುಕಲು ಊರು ಸಿಗದೇನು?’ ಎನ್ನುವ ಮಾತು ಅಕ್ಷರಶಃ ಮುರುಗನ್ ಅವರಿಗೆ ಸಲ್ಲುತ್ತದೆ. ಏಕೆಂದರೆ ಪೆರುಮಾಳ್ ಮುರುಗನ್ ಈ ಕಾದಂಬರಿಯಿಂದಾಗಿ ಬರಹಕ್ಕೆ ತಿಲಾಂಜಲಿ ಇಡಲೊರಟ ನೊಂದ ಲೇಖಕ. ತನ್ನ ಬರಹಕ್ಕಾಗಿ ಸವರ್ಣೀಯರಿಂದ ಜೀವ ಬೆದರಿಕೆಯನ್ನು […]

ಯಶೋಧರೆ ಮಲಗಿರಲಿಲ್ಲ

ಯಶೋಧರೆ ಮಲಗಿರಲಿಲ್ಲ

ಪುಸ್ತಕ ವಿಮರ್ಶೆ (ನಾಟಕ) ಕಲಾವಿದರಾದ ಎಂ.ಎಸ್. ಮೂರ್ತಿ ಅವರ ‘ಯಶೋಧರೆ ಮಲಗಿರಲಿಲ್ಲ’(2007) ಕೃತಿಯು ನಾಲ್ಕು ದೃಶ್ಯಗಳ ಕಿರು ನಾಟಕ. ಇದು ಬೆಂಗಳೂರು ಆಕಾಶವಾಣಿಯ ಪ್ರಾದೇಶಿಕ ಉತ್ತಮ ನಾಟಕ ಪ್ರಶಸ್ತಿಗೆ ಪಾತ್ರವಾಗಿದೆ. ಇದು ಗಾತ್ರದಲ್ಲಿ ತುಂಬ ಕಿರಿದಾಗಿದ್ದರು ಕೂಡ ಈ ನಾಟಕದ ಮೂಲಕ ಹೊರಡಿಸಿರುವ ಅರ್ಥ ಸಾಧ್ಯತೆಗಳ ವ್ಯಾಪ್ತಿಯಂತು ತುಂಬ ಹಿರಿದಾಗಿದೆ. ‘ಯಶೋಧರೆ ಮಲಗಿರಲಿಲ್ಲ’ ಎಂಬ ಶೀರ್ಷಿಕೆಯೇ ಧ್ವನಿಪೂರ್ಣವಾಗಿದೆ. ನಾಟಕದಲ್ಲಿ ಯಶೋಧರೆಯು ಎಚ್ಚರಿಕೆಯ ಸ್ಥಿತಿಯಿಂದ ತನ್ನನ್ನು ತಾನು ಮರು ಶೋಧಿಸಿಕೊಳ್ಳುವುದನ್ನು ಕಾಣುತ್ತೇವೆ. ಸಿದ್ಧಾರ್ಥ ಆಕೆಯನ್ನು ತೊರೆದು ಹೋದಾಗ ಸಹಜವಾಗಿಯೇ […]

ಇರುವಂತೆಯೇ ಇದಿರಾಗಲು ಹೇಳಿದ ಮಹಾದಂಗೆಕೋರ ‘ಸರಹಪಾದ’

ಇರುವಂತೆಯೇ ಇದಿರಾಗಲು ಹೇಳಿದ ಮಹಾದಂಗೆಕೋರ   ‘ಸರಹಪಾದ’

ಕೃತಿ:  ‘ಸರಹಪಾದ’- ನಟರಾಜ ಬೂದಾಳು; ಗೋಧೂಳಿ ಪ್ರಕಾಶನ ಬೆಕ್ಕೊಂದು ಹೊಟ್ಟೆ ಕೆಟ್ಟರೆ ವೈದ್ಯರನ್ನೋ, ಜ್ಯೋತಿಷಿಯನ್ನೋ ಹುಡುಕಿಹೊರಡದು. ತನ್ನ ಸದ್ಯದ ಸ್ಥಿತಿಗೆ ಔಷಧವಾಗಬಲ್ಲ ಹುಲ್ಲನ್ನು ಹುಡುಕತೊಡಗುತ್ತದೆ. ಯಾರ ನಿರ್ದೇಶನಕ್ಕೂ ಕಾಯದೆ ಆ ಹುಲ್ಲನ್ನು ತಾನೇ ಹುಡುಕಿ ತಿಂದು ಹಗುರಾಗುತ್ತದೆ. ಹುಲ್ಲಿನ ಅಗತ್ಯ ತೀರಿದ ಮೇಲೆ ಅದನ್ನೇ ಧ್ಯಾನಿಸುತ್ತಾ ಕೂರದೆ, ಮತ್ತೆಲ್ಲಿಗೆ ಹೋಗಬೇಕೋ ಅಲ್ಲಿಗೆ ದಾಟುತ್ತದೆ. ಅಗತ್ಯಕ್ಕೆ ಆಹ್ವಾನಿಸಿಕೊಂಡುದನ್ನು ಅಷ್ಟೇ ಸಹಜವಾಗಿ ವಿಸರ್ಜಿಸಿ ಮುನ್ನಡೆಯುತ್ತದೆ. ಏನನ್ನು ಯಾವಾಗ ಆಹ್ವಾನಿಸಿಕೊಳ್ಳಬೇಕೋ ಆಗ ಆಹ್ವಾನಿಸಿ, ಬಿಟ್ಟುಬಿಡಬೇಕಾದಾಗ ಅದನ್ನು ವಿಸರ್ಜಿಸಿ ಮುಕ್ತವಾಗುವ ಈ ನಡೆ ಕೇವಲ ಬೆಕ್ಕಿಗಷ್ಟೇ […]

ಇಬ್ರಾಹಿಂ ಆದಿಲಶಾನ `ಗಣೇಶ’

ಇಬ್ರಾಹಿಂ ಆದಿಲಶಾನ `ಗಣೇಶ’

ಭಾರತದ ಚರಿತ್ರೆಯಲ್ಲಿ ಮಧ್ಯಯುಗ ಹಲವು ಕಾರಣಕ್ಕೆ ವರ್ಣರಂಜಿತವಾಗಿದೆ. 14 ನೇ ಶತಮಾನದಲ್ಲಿ ಮುಹಮದ್-ಬಿನ್-ತುಘಲಕನ ಅರಾಜಕ ಆಡಳಿತದದಿಂದ ದಕ್ಷಿಣ ಭಾರತದಲ್ಲಿ ಹಲವರು ಸ್ವತಂತ್ರರಾದರು. ಇದರಲ್ಲಿ ವಿಜಯನಗರ ಸಾಮ್ರಾಜ್ಯದ ಜತೆ ಕ್ರಿ.ಶ 1489 ರಲ್ಲಿ ವಿಜಾಪುರದಲ್ಲಿ ಆದಿಲಶಾಹಿಗಳ ರಾಜ್ಯವೂ ಸ್ಥಾಪನೆಯಾಯಿತು. ಇವರು ದಕ್ಷಿಣ ಭಾರತದ ಬಹುಭಾಗವನ್ನು ವಿಜಾಪುರ ಕೇಂದ್ರದಿಂದ ಆಳಿದರು. ಈ ಸಂದರ್ಭದಲ್ಲಿ ಹಿಂದೂ ಮಸ್ಲೀಂ ಸಂಸ್ಕøತಿಗಳ ಕೊಡುಕೊಳೆಯ ಸಾಮರಸ್ಯದ ಸಂಸ್ಕøತಿಯೊಂದು ಮೈಪಡೆಯಿತು. ಇದು ಆಳುವ ರಾಜರ ನೆಲೆಯಿಂದ ಜನಸಾಮಾನ್ಯರ ನೆಲೆಗೆ ವ್ಯಾಪಿಸಿ ಸಮಾಜದಲ್ಲಿ ಬೇರುಬಿಟ್ಟಿತು. ಇದರ ಫಲವೇ ಉತ್ತರ […]

ಸ್ಪರೂಪ ಮತ್ತು ಬರಹದ ಮಿತಿ ಕಾಣಿಸುವ ಪರಿ

ಸ್ಪರೂಪ ಮತ್ತು ಬರಹದ ಮಿತಿ ಕಾಣಿಸುವ ಪರಿ

ಕೆ. ಸತ್ಯನಾರಯಣರ ‘ವಿಕಲ್ಪ’- ಎರಡು ಕಿರು ಕಾದಂಬರಿಗಳು (2016) ಅಂಕಿತ ಪ್ರಕಾಶನ, ಬೆಲೆ 95/-, ಪುಟ 101. ಈ ಸಂಕಲದಲ್ಲಿ ಎರಡು ಕಿರು ಕಾದಂಬರಿಗಳಿವೆ. ಒಂದು, ಅಚರಿತ್ರೆ ಒಂದು ಪತ್ರ,  ಇನ್ನೊಂದು ವಿಕಲ್ಪ. ಅಚರಿತ್ರೆಗೊಂದು ಪತ್ರವೆನ್ನುವ ಕತೆಯು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿಯೂ ಉಳಿದಿರುವ ರಾಜ ಸಂಸ್ಥಾನಗಳ ಪರಿಸ್ಥಿತಿಗಳನ್ನು ಪ್ರತಿನಿಧಿಸುವಂತಹದ್ದಾಗಿದೆ. ಈ ಕತೆಯು ಹಿಂದಿನಿಂದಲೂ ರಾಜ ಸಂಸ್ಥಾನಗಳಿಗೆ ಬಂದಿರುವ ಪ್ರತಿಷ್ಠೆ, ಅನಿವಾರ್ಯವಾಗಿ ಅವರು ತೋರಿಸಲೇಬೇಕಾದ ದೊಡ್ಡಸ್ಥಿಕೆ ಹಾಗೂ ಬದಲಾದ ಕಾಲದೇಶಗಳ ಸಂದರ್ಭದಲ್ಲಿ ಬಿಗಾಡಿಯುಸುತ್ತಿರುವ ಸಂಸ್ಥಾನದ ಸಾಂಸ್ಥಿಕ ಮತ್ತು ಸಂಬಂಧಗಳ ವ್ಯವಸ್ಥೆಯಗಳ […]

ಮಾನವಿಕ ಅಧ್ಯಯನಗಳ ಪರಿಭಾಷಾ ಕೋಶ

ಮಾನವಿಕ ಅಧ್ಯಯನಗಳ ಪರಿಭಾಷಾ ಕೋಶ

ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳ ಬಗೆಗೆ ಜನಸಾಮಾನ್ಯರು ಮತ್ತು ಶೈಕ್ಷಣಿಕ ವಲಯದಲ್ಲಿ ನಿರ್ಲಕ್ಷ್ಯ ಮನೋಭಾವವನ್ನು ಕಾಣಲಾಗುತ್ತಿದೆ. ಈ ಸಂದರ್ಭದಲ್ಲಿ ಮಾನವಿಕ ಅಧ್ಯಯನಗಳ ಬಗೆಗೆ ಇರುವ ನಿರ್ಲಕ್ಷ್ಯ ದೋರಣೆಯನ್ನು ನಿವಾರಿಸುವ ಅನಿವಾರ್ಯತೆ ಇಂದಿನ ಮುಖ್ಯವಾದ ಜವ್ದಾರಿಗಳಲ್ಲಿ ಒಂದು. ಮನುಷ್ಯನಿಗೆ ಬೇಕಿರುವುದು ಮಾನವೀಯ ಮೌಲ್ಯಗಳನ್ನು ಮೈಗೊಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುವ ಮಾರ್ಗವನ್ನು ತಿಳಿಸುವ ವಿಚಾರಧಾರೆಗಳು ಹೆಚ್ಚೆಚ್ಚು  ಚರ್ಚೆಗೊಳ್ಳಬೇಕಿದೆ. ಆದರೆ ಅದಾಗುತ್ತಿಲ್ಲ ಎನ್ನುವುದೆ ನೋವಿನ ಸಂಗತಿ. ಆ ಕಾರಣದಿಂದಾಗಿ ಇವತ್ತು ಹೆಚ್ಚೆಚ್ಚು ಸಮಾಜಘಾತುಕ ಕ್ರುತ್ಯಗಳನ್ನು ಪ್ರತಿನಿತ್ಯವು ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿರುವುದು […]

ಮೂಕ ಹಕ್ಕಿಯ ಹಾಡು : ಆತ್ಮಕತೆಯ ಪಾಡು

ಮೂಕ ಹಕ್ಕಿಯ ಹಾಡು : ಆತ್ಮಕತೆಯ ಪಾಡು

ಜಗದೀಶ ಕೊಪ್ಪ ಅವರು ‘ಮೂಕ ಹಕ್ಕಿಯ ಹಾಡು’ ಕೃತಿಯನ್ನು ಮುಖ್ತರ್‍ಮಾಯಿ ಕನ್ನಡದಲ್ಲೆ ಬರೆದಿರುವಂತೆ ಸೊಗಸಾದ ಅನುವಾದ ಮಾಡಿದ್ದಾರೆ. ‘ಮರುಭೂಮಿಯ ಹೂವು’ ಜಗದೀಶ ಕೊಪ್ಪ ಅವರ ಮತ್ತೊಂದು ಅನುವಾದ ಕೃತಿ. “ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವ ಮುಸ್ಲಿಂ ಕುಟುಂಬಗಳಲ್ಲಿ ಹೆಣ್ಣು ಮಗಳು ಮಾತನಾಡಬಾರದೆಂಬ ಅಲಿಖಿತ ನಿಯಮವೊಂದು ಜಾರಿಯಲ್ಲಿದೆ. ಆಕೆ ಬಾಲ್ಯದಲ್ಲಿ ಪೋಷಕರು, ವಿವಾಹವಾದ ನಂತರ ಪತಿ, ಅನಂತರ ಮಕ್ಕಳು ಬೆಳೆದು ವಯಸ್ಕರಾದ ಮೇಲೆ ಅವರ ಆಶ್ರಯದಲ್ಲಿ ಬದುಕುತ್ತ, ಅವರ ಆಜ್ಞೆ ಅಥವಾ ಆದೇಶಗಳನ್ನು ಪಾಲಿಸುತ್ತಾ ಮೌನಿಯಾಗಿ ಬದುಕಬೇಕು’ (ಪು. […]

ಕಾಣ್ಕೆ ಮತ್ತು ಕಣ್ಕಟ್ಟು

ಕಾಣ್ಕೆ ಮತ್ತು ಕಣ್ಕಟ್ಟು

ಇತ್ತೀಚಿನ ಬರಹಗಾರರಲ್ಲಿ ಸುರೇಶ್ ರವರ ಹೆಸರು ಮುಖ್ಯವಾದುದು. ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಜನಪದ ಲೋಕದೃಷ್ಟಿಯ ಮುಖೇನ ಕನ್ನಡ ಸಾಹಿತ್ಯ, ಇವು ಅವರ ಪ್ರಕಟಿತ ಕೃತಿಗಳು ಕಾಣ್ಕೆ ಮತ್ತು ಕಣ್ಕಟ್ಟು ಅವರ ಹೊಸ ವಿಮರ್ಶಾ ಸಂಕಲನ. ತಾತ್ವಿಕತೆ, ಕಾವ್ಯ, ಕೃತಿ ಪರಿಚಯ ಇವುಗಳ ಶೀರ್ಷಿಕೆಯಲ್ಲಿ ಕನ್ನಡದ ವಿವಿಧ ಕಾಲಘಟ್ಟಗಳ ವಿಮರ್ಶೆ ಯನ್ನು ಕಾಣಬಹುದು. ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಕಾಣಿಕೆಗಳು ಮತ್ತು ಕಣ್ಕಟ್ಟುಗಳು ಗುರಿತಿಸುವ ಪ್ರಯತ್ನದ ಜೊತೆಗಿನ ವಿಮರ್ಶೆ. “ಪಂಪನ ನುಡಿಗಣಿ” ಪಿ ವಿ ಎನ್ […]

ಕಾವ್ಯ ತನ್ನಷ್ಟಕ್ಕೆ ತಾನೇ ಬೆಳೆವ ಬೀಜದೊಳಗಿನ ಮರ

ಕಾವ್ಯ ತನ್ನಷ್ಟಕ್ಕೆ ತಾನೇ ಬೆಳೆವ ಬೀಜದೊಳಗಿನ ಮರ

ಕಾವ್ಯ ‘ತನ್ನಷ್ಟಕ್ಕೆ’ ಮನಸ್ಸಿನಾಳದಿಂದ ಮೊಳಕೆಯೊಡೆಯುವ ಬಿಂಬ, ಅದು ಬೀಜದೊಳಗಿನ ಮರದಂತೆ. ಒಮ್ಮೊಮ್ಮೆ ಅದಕ್ಕೆ ಅಗ್ನಿ ಪರೀಕ್ಷೆಯೂ ಅದಕ್ಕೆ ಚಾರಣಿಗನ ಸಿದ್ಧತೆಯೂ ಬೇಕಾಗುವುದುಂಟು. ಅದು ಲೋಕ ದೃಷ್ಟಿಯ ಅನುರಕ್ತ ವಿರಕ್ತಿಯ ಸ್ವೀಕರಣೆ ಹಾಗೂ ನಿರಾಕರಣೆಯೂ ಆಗಬಲ್ಲದು. ಆಗ ವಿಮರ್ಶಾವಲಯ ಅದನ್ನು ಜ್ಞಾನ ಮೀಮಾಂಸೆಗೆ ಒಡ್ಡಿಕೊಳ್ಳುತ್ತದೆ. ಇದರತ್ತ ಚಲನೆಯೇ ಕವಿತೆ. ಇಲ್ಲಿ ಕವಿತೆಗೂ ಕಾವ್ಯಕ್ಕೂ ತುಸು ಅಂತರ ಗುರುತಿಸಿಕೊಳ್ಳಬಹುದು. ಬಿಡಿ ಭಾವನೆಗಳು ಕವನಗಳಾಗಿ ನಿಂತರೆ ಅಂತಾ ಬಿಡಿಭಾವನೆಗಳು ಇಡಿಯಾಗಿ ಚಲಿಸುವ ಕ್ರಿಯೆ ಕಾವ್ಯ. ರೂಪ ಹಾಸನ ಅವರ ‘ತನ್ನಷ್ಟಕ್ಕೆ’ ಕವನ […]