ಪುಸ್ತಕ ಪರಿಚಯ

ಪುಸ್ತಕ ಪರಿಚಯ

ಅಮೆರಿಕದತ್ತ ಮುಖಮಾಡಿ ಅರೆಬೆತ್ತಲಾಗಿ ನಿಲ್ಲಲಾಗಿದೆ!

ಅಮೆರಿಕದತ್ತ ಮುಖಮಾಡಿ ಅರೆಬೆತ್ತಲಾಗಿ ನಿಲ್ಲಲಾಗಿದೆ!

ಆಫ್ರಿಕನ್ ಸಾಹಿತ್ಯ ವಾಚಿಕೆ ಭಾರತೀಯರು ಆಧುನಿಕ ಸಂದರ್ಭದಲ್ಲಿ ಅತಿ ಹೆಚ್ಚು ಮುಖಮಾಡಿ ನೋಡಿರುವುದು ಅಮೆರಿಕ ಮತ್ತು ಯುರೋಪಿನ ಕಡೆಗೆ. ಅದು ವಿಜ್ಞಾನ-ತಂತ್ರಜ್ಞಾನದ ವಿಚಾರಗಳಿರಬಹುದು. ರಾಜತಾಂತ್ರಿಕ ವಿಚಾರಗಳಿರಬಹದು. ಸಾಹಿತ್ಯ ಚಿಂತನೆ, ವಿವಿಧ ಸಿದ್ದಾಂತಗಳು, ಭಾಷೆ, ಸಂಸ್ಕøತಿ, ಅಭಿವೃದ್ಧಿ ಹೀಗೆ ಯಾವುದೇ ವಿಚಾರಗಳನ್ನು ಕಲಿಯಬೇಕಾದಗಲೂ ನಾವು ಎದುರು ನೋಡಿರುವುದು ಯೂರೋಪಿನ ಕಡೆಗೆ. ಅಂದರೆ ನಮ್ಮ ದೇಶವನ್ನು ನಿಯಂತ್ರಿಸುವ, ಉದಾರವಾದಿ ಆರ್ಥಿಕ ನೀತಿಗಳನ್ನು ವಿಶ್ವವ್ಯಾಪಾರ ಸಂಘಟನೆಯ ನೇತೃತ್ವದಲ್ಲಿ ಜಾರಿಗೊಳಿಸುತ್ತ ದೇಶವನ್ನು ದೋಚುವ ರಾಷ್ಟ್ರಗಳ ಕಡೆಗೆ ಮುಖಮಾಡಲಾಗಿದೆ. ಅದು ಇಂದು ಮತ್ತಷ್ಟು ಹೆಚ್ಚಾಗಿದೆ. […]

ಸುದ್ದಿಯ ಮೈಗಂಟಿದ ಅಲಕ್ಷಿತ ಸಂಗತಿಗಳ ಬಹುರೂಪಿ ಕಥನ

ಸುದ್ದಿಯ ಮೈಗಂಟಿದ ಅಲಕ್ಷಿತ ಸಂಗತಿಗಳ ಬಹುರೂಪಿ ಕಥನ

ಕಳೆದ ಹದಿಮೂರು ವರ್ಷದಿಂದ ರಾಜ್ಯದ ವಿವಿಧ ಭಾಗಗಳ ಸಮಾನಾಸಕ್ತ ಸಂಗಾತಿಗಳು ಜೊತೆಗೂಡಿ `ನಾವುನಮ್ಮಲ್ಲಿ’ ಎನ್ನುವ ಮಾತುಕತೆಯ ವೇದಿಕೆಯೊಂದನ್ನು ರೂಪಿಸಿಕೊಂಡಿದ್ದೇವೆ. ಹೊಸ ತಲೆಮಾರಿನ ಬರಹಗಾರರ ಕನಸು ಕಾಣ್ಕೆಗಳನ್ನು ಚರ್ಚಿಸುತ್ತಲೇ, ಆಯಾ ಕಾಲದ ಬಿಕ್ಕಟ್ಟುಗಳ ಜತೆ ವೈಚಾರಿಕ ಆಕೃತಿಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಈತನಕ ಕನ್ನಡದ ಬಹುಮುಖ್ಯ ಲೇಖಕರಾದ ದೇವನೂರು ಮಹಾದೇವ, ಯು.ಆರ್.ಅನಂತಮೂರ್ತಿ ಅವರನ್ನೊಳಗೊಂಡಂತೆ ಬಹುತೇಕ ಸಾಮಾಜಿಕ ಬದ್ಧತೆಯ ಬರಹಗಾರ/ಗಾರ್ತಿಯರು ನಾವುನಮ್ಮಲ್ಲಿ ವೇದಿಕೆಯಲ್ಲಿ ತಮ್ಮ ತಿಳಿವನ್ನು ಹಂಚಿಕೊಂಡಿದ್ದಾರೆ. ಹೊಸತಲೆಮಾರಿನ ಜತೆ ಸಂವಾದ ನಡೆಸಿದ್ದಾರೆ. ನಾವುನಮ್ಮಲ್ಲಿ ಎನ್ನುವುದೇ `ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ […]

ಮುಸ್ಲಿಂ ಸಮುದಾಯದ ಆಂತರಿಕ ಮತ್ತು ಬಾಹ್ಯ ಅಂಶಗಳ ಚರ್ಚಿಸುವ ಬಗೆ ಗಮನಾರ್ಹ

ಮುಸ್ಲಿಂ ಸಮುದಾಯದ ಆಂತರಿಕ ಮತ್ತು ಬಾಹ್ಯ ಅಂಶಗಳ ಚರ್ಚಿಸುವ ಬಗೆ ಗಮನಾರ್ಹ

‘ಜಿನ್ನಿ’ ಕಥಾಸಂಕಲನ ಮೀರ್ಜಾ ಬಷೀರ್ ರವರ ಎರಡನೆಯ ಕಥಾಸಂಕಲನ ‘ಜಿನ್ನಿ’, ಬಟ್ಟೆ ಇಲ್ಲದ ಊರಿನಲ್ಲಿ ಕಥಾ ಸಂಕಲನದ ಮೂಲಕ ಕಥಾ ಸಾಹಿತ್ಯದಲ್ಲಿ ಪ್ರಮುಖ ಹೆಸರಾಗಿ ಕಾಣಿಸಿಕೊಂಡಿರುವ ಇವರು; ವೃತ್ತಿಯಲ್ಲಿ ಪಶುವೈದ್ಯರೂ ಹಾಗೂ ಕತೆ ಬರೆಯುತ್ತಿರುವ ವಯಸ್ಸು 50 ವರುಷಗಳ ನಂತರ. .! ಇದು ಕುತೂಹಲವೂ ಆಶ್ಚರ್ಯಕರವೂ ಆಗಿದೆ. ಕತೆಯ ಜಾಣ್ಮಯ ನಿರೂಪಣೆ, ಸರಳತೆ, ಗಂಭೀರತೆ, ವಿಡಂಬನೆಯ ಮೂಲಕ ಓದುಗರನ್ನು ಸೆಳೆಯುವಂತೆ ಕತೆ ರಚಿಸುವ ಶೈಲಿ ಇವರಲ್ಲಿ ಕಾಣಬಹುದು. ಜಿನ್ನಿ ಲೇಖಕರ ಎರಡನೆಯ ಹಾಗು ಹನ್ನೊಂದು ಕತೆಗಳ ಸಂಗ್ರಹ. […]

ರಕ್ಷಣೆಯ ಮಂತ್ರ, ನಿಯಂತ್ರಣದ ತಂತ್ರ

ರಕ್ಷಣೆಯ ಮಂತ್ರ, ನಿಯಂತ್ರಣದ ತಂತ್ರ

(ಸಾಮಾಜಿಕ ಸಂರಚನೆಯ ಕಣ್ಕಟ್ಟುಗಳನ್ನು ಒಡೆದು ನೋಡಲು ಒತ್ತಾಯಿಸುವ ಆತ್ಮಕಥನಗಳ ಓದು) ಇತ್ತೀಚೆಗೆ ಓದಿದ ಎರಡು ಆತ್ಮಕಥನಗಳು ಹಲವು ಪ್ರಶ್ನೆಗಳನ್ನು, ಚಿಂತನೆಗಳನ್ನು ಹುಟ್ಟುಹಾಕಿದುವು. ಒಂದು ತೊಂಬತ್ತು ವಯಸ್ಸು ದಾಟಿದ ನಂತರ ಬರೆದ ಕೊಂಡಪಲ್ಲಿ ಕೋಟೇಶ್ವರಮ್ಮನವರ ‘ಒಂಟಿದಾರಿ’. ಇನ್ನೊಂದು ಎಪ್ಪತ್ತೈದು ಪೂರೈಸಿದ ಡಾ.ವಿಜಯಾ ಅವರ ‘ಕುದಿ ಎಸರು’. ಇಬ್ಬರೂ ನಾವು ಯಾಕೆ ಇದನ್ನು ಬರೆಯಬೇಕು ಎಂಬ ಪ್ರಶ್ನೆ ಎತ್ತುತ್ತಾರೆ. ಹಲವರ ಒತ್ತಾಯವೂ ತಾವು ಬರೆಯಲು ಕಾರಣ ಎನ್ನುತ್ತಾರೆ. ಈಗಾದರೂ ಇವರು ಬರೆದರಲ್ಲ ಅದೇ ಅಚ್ಚರಿ. ಯಾಕೆಂದರೆ ಇವೆರಡು ಪುಸ್ತಕಗಳನ್ನು, ಮಾತ್ರವಲ್ಲ, […]

ಕಾರ್ಗಿಲ್ ಚಲೋ! ಆಪರೇಷನ್ ವಿಜಯದ ಮೊದಲ ದಿನವೇ ಗುಂಡಿನ ಚಕಮಕಿಗೆ ಸಾಕ್ಷಿ

ಕಾರ್ಗಿಲ್ ಚಲೋ! ಆಪರೇಷನ್ ವಿಜಯದ ಮೊದಲ ದಿನವೇ ಗುಂಡಿನ ಚಕಮಕಿಗೆ ಸಾಕ್ಷಿ

ಕಾರ್ಗಿಲ್ ಯುದ್ಧ ಪತ್ರಕರ್ತರಿಗೆ ಧುತ್ತೆಂದು ಎದುರಾಯಿತು. ನಾವು ಬಹುತೇಕ ಮಂದಿ ಭಾರತ ಮತ್ತು ಪಾಕಿಸ್ತಾನಗಳೆರಡು 1998ರಲ್ಲಿ ಅಣ್ವಸ್ತ್ರ ರಾಷ್ಟ್ರಗಳಾದ ನಂತರ, ಎರಡು ದೇಶಗಳ ನಡುವಿನ ವಾತಾವರಣ ಯುದ್ಧದ ಹಂತಕ್ಕೆ ಹೋಗುವುದಿಲ್ಲ ಎಂಬ ಪಂಡಿತರ ಅನಿಸಿಕೆಗಳನ್ನು ನಂಬಿಕೊಂಡು ಕೂತಿದ್ದೆವು. ಮೊದಲು ನಾವು ಚಕಿತಗೊಂಡಿದ್ದು ಭಾರತ 1998ರ ಮೇ 11 ಮತ್ತು 13ರಂದು ಒಂದರ ಹಿಂದೆ ಒಂದೆಂಬಂತೆ ಅಣ್ವಸ್ತ್ರ ಪರೀಕ್ಷೆ ಮಾಡಿದಾಗ. ಪಾಕಿಸ್ತಾನ ಕೂಡ ಅಷ್ಟೇ ಬೇಗ ಅದೇ ತಿಂಗಳ 28 ಮತ್ತು 30ರಂದು ಪರೀಕ್ಷೆ ನಡೆಸಿ ಪ್ರತಿಕ್ರಿಯೆ ನೀಡಿತು. […]

ಬಾಂಬೆ ಎಂಬ ದೆವ್ವಗಳ ಊರಲ್ಲಿ…

ಬಾಂಬೆ ಎಂಬ ದೆವ್ವಗಳ ಊರಲ್ಲಿ…

  ಬಾಂಬೆಯ ನಾರಿಮನ್ ಪಾಯಿಂಟ್‍ನಲ್ಲಿರುವ ಇಡೀ 500 ಚದರ ಅಡಿಗಳಷ್ಟು ಕಚೇರಿ ಜಾಗಕ್ಕೆ ಅಧಿಪತಿಯಾಗಿರುವುದೆಂದರೆ ಸಾಮಾನ್ಯವಾಗಿ ಕನಸೊಂದು ನನಸಾದಂತೆ. ಆದರೆ ನನ್ನ ಪಾಲಿಗದು ಭಿನ್ನ ಅನುಭವ. ಅತೀವ ಒಂಟಿತನಕ್ಕೆ ತಳ್ಳಿದ, ಸದಾ ಆತಂಕಕ್ಕೀಡು ಮಾಡುವ ಕಾಫ್ಕಾನ ಅನುಭವಗಳನ್ನು ಮೈಮೇಲೆ ಎಳೆದುಕೊಂಡಂತೆ ನನಗೆ ಭಾಸವಾಗಿದ್ದು 1993ರ ಬಾಂಬೆ ಗಲಭೆಗಳು ಉತ್ತುಂಗದಲ್ಲಿದ್ದಾಗ. ಆಗ ನಾನು ಬಾಂಬೆ ‘ಪಯೋನೀರ್’ ಕಚೇರಿಯ ಏಕೈಕ ವಾರಸುದಾರ. ಆಗ ಕಚೇರಿ ದಕ್ಷಿಣ ಮುಂಬೈನ ಬಹುಬೇಡಿಕೆಯ ವ್ಯಾಪಾರಿ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿತ್ತು. ನಿಜಾರ್ಥದಲ್ಲಿ ಬೇರೆ ಅವಕಾಶಗಳು ಇಲ್ಲದೆ, […]

ನಿಜದ ನೆರಳು: ಬುದ್ಧನ ನಡಿಗೆಯ ಧ್ಯಾನ

ನಿಜದ ನೆರಳು: ಬುದ್ಧನ ನಡಿಗೆಯ ಧ್ಯಾನ

“ಹಿರಿಯ ಜೆನ್ ಮಾಸ್ಟರ್‍ನ ಬಳಿ ಒಬ್ಬ ಯುವಕ ಬಂದು ‘ನಾನು ಬುದ್ಧನಾಗಬೇಕು ಹೇಗೆ ಹೇಳಿ?’ ಎಂದು ಕೇಳುತ್ತಾನೆ. ಜೆನ್ ಮಾಸ್ಟರ್ ಅವನ ಕೆನ್ನೆಗೊಂದು ಸರಿಯಾಗಿ ಬಾರಿಸಿ ಹೊರದೂಡುತ್ತಾನೆ. ಆ ಯುವಕನಿಗೆ ಅವಮಾನ, ಗೊಂದಲಗಳಿಂದ ತುಂಬಾ ನೋವಾಗಿ ಅಲ್ಲಿಯೇ ಇದ್ದ ಇನ್ನೊಬ್ಬ ಗುರುವಿನ ಬಳಿ ಬಂದು ‘ನಾನು ಮಾಸ್ಟರ್‍ನಲ್ಲಿ ಕೇಳಿದ್ದರಲ್ಲಿ ಏನು ತಪ್ಪಿದೆ. ಅವರು ನನ್ನೊಂದಿಗೆ ಅಷ್ಟೊಂದು ಕಠೋರವಾಗಿ ನಡೆದುಕೊಂಡದ್ದೇಕೆ’ ಎಂದು ತನ್ನ ಉರಿವ ಕೆನ್ನೆಯನ್ನು ತೋರುತ್ತಾನೆ. ಅದಕ್ಕೆ ಈ ಗುರು ‘ಈ ನಿನ್ನ ಕೆನ್ನೆಗಿಂತಲೂ ನಿನಗೆ ಹೊಡೆದ […]

ಕತೆಗಾರ ಟಿ ಎಸ್ ಗೊರವರ ’ರೊಟ್ಟಿಮುಟಗಿ’ ಕಾದಂಬರಿ

ಕತೆಗಾರ ಟಿ ಎಸ್ ಗೊರವರ ’ರೊಟ್ಟಿಮುಟಗಿ’ ಕಾದಂಬರಿ

’ಭ್ರಮೆ’ ಮತ್ತು ’ಕುದರಿ ಮಾಸ್ತರ’ ಎಂಬೆರಡು ಕಥಾಸಂಕಲನಗಳನ್ನು, ’ಆಡು ಕಾಯೋ ಹುಡುಗನ ದಿನಚರಿ’ ಎಂಬೊಂದು ವಿಶಿಷ್ಠ ಬಗೆಯ ಅನುಭವ ಕಥನವನ್ನೂ ತನ್ನ ದಾರಿಯಲ್ಲಿ ಕ್ರೆಡಿಟ್ ಆಗಿಟ್ಟುಕೊಂಡು ಇದೀಗ ಯುವ ಕವಿ ಕತೆಗಾರ ಟಿ ಎಸ್ ಗೊರವರ ’ರೊಟ್ಟಿ ಮುಟಗಿ’ ಎಂಬ ಅಪರೂಪದ ಪುಟ್ಟ ಕಾದಂಬರಿಯೊಂದನ್ನು ಕನ್ನಡದ ಓದುಗರಿಗೆ ನೀಡಿದ್ದಾನೆ. ಈ ಕಾದಂಬರಿಯಲ್ಲಿ ’ರೊಟ್ಟಿಮುಟಗಿ’ ಕೇವಲ ಒಂದು ದೇಸಿ ಆಹಾರ ಮಾತ್ರವಾಗಿರದೇ ತನ್ನ ಸ್ವಾಧ, ಘಮ ಹಾಗೂ ಪೌಷ್ಟಿಕಾಂಶವುಳ್ಳ ಆರೋಗ್ಯಕರ ಗುಣಗಳಿಂದ, ಇಡೀ ಕಥನದ ಸತ್ವವನ್ನು ಪ್ರತಿನಿಧಿಸುವ ಒಂದು […]

ಹೆಣ್ಣಿನ ಮೌನಕ್ಕೆ ಕೊರಳಾದ ಬರೆಹಗಳು

ಹೆಣ್ಣಿನ ಮೌನಕ್ಕೆ ಕೊರಳಾದ ಬರೆಹಗಳು

ಶಿವಮೊಗ್ಗೆಯ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಇರ್ಷಾದ್ ಉಪ್ಪಿನಂಗಡಿ ಅವರ ಲೇಖನಗಳ ಸಂಕಲನ `ಸ್ವರ್ಗದ ಹಾದಿಯಲ್ಲಿ’ ಕೃತಿ ಧರ್ಮದೊಳಗೆ ಹೆಚ್ಚು ಶೋಷಣೆಗೊಳಗಾಗಿರುವ ಮುಸ್ಲಿಂ ಮಹಿಳೆಯರ ಸಂಕಷ್ಟಗಳಿಗೆ ದನಿಯಾಗುತ್ತದೆ. ಆ ಕೃತಿಗೆ ಪ್ರಕಾಶಕರ ಮಾತುಗಳನ್ನು ಬರೆದಿರುವ ಅಕ್ಷತಾ ಹುಂಚದಕಟ್ಟೆ ಮಹಿಳೆಯರ ಅಸ್ಮಿತೆ ಮತ್ತು ದನಿಯನ್ನು ದಮನ ಮಾಡುವಲ್ಲಿ ಯಾವ ಧರ್ಮವು ಹಿಂದೆಬಿದ್ದಿಲ್ಲ ಎಂಬುದನ್ನು ಸೋದಾಹರಣವಾಗಿ ನಿರೂಪಿಸಿದ್ದಾರೆ. ಒಂದು ಬೆಳಗ್ಗಿನ ಜಾವ. ಎಂದಿನಂತೆ ವಾಕ್ ಹೋಗಲು ಸಹ್ಯಾದ್ರಿ ಕಾಲೇಜಿನ ಗೇಟ್ ತೆರೆಯುತ್ತಿದ್ದೆ. ಅಷ್ಟರಲ್ಲೇ ಹಿಂದಿನಿಂದ ಒಬ್ಬರು ಓಡಿಬಂದು ಏನೋ ಅವಘಡ ಆಗಿದೆಯೇನೋ […]

‘ಕಾಮದ ಸಹಜ ಕ್ರಿಯೆಯ ಪರಿಣಾಮವನ್ನು ನಿಮ್ಮ ಪತ್ನಿಗೆ ತಿಳಿಸಿ’

‘ಕಾಮದ ಸಹಜ ಕ್ರಿಯೆಯ ಪರಿಣಾಮವನ್ನು ನಿಮ್ಮ ಪತ್ನಿಗೆ ತಿಳಿಸಿ’

ಬಚ್ಚೀಸು(ಕತಾ ಸಂಕಲನ) ಲೇ: ದು. ಸರಸ್ವತಿ ಮೊದಲ ಮುದ್ರಣ: 2016: ಬೆಲೆ-80/- ರೂಪಾಯಿಗಳು ಪ್ರಕಾಶಕರು: ಕವಿ ಪ್ರಕಾಶನ, ಕವಲಕ್ಕಿ, ಹೊನ್ನಾವರ ದು. ಸರಸ್ವತಿಯವರು ‘ಜೀವಸಂಪಿಗೆ’ ಎಂಬ ಕವನಸಂಕಲನ ಹಾಗೂ ‘ಈಗೇನ್ ಮಾಡೀರಿ?’ ಎಂಬ ಅನುಭವ ಕಥನ ಹಾಗೂ ಇನ್ನೂ ಹಲವು ಕೃತಿಗಳ ಮೂಲಕ ಲೇಖಕಿಯಾಗಿ ಪ್ರಸಿದ್ದರು. ಹಾಗೆಯೇ ಮಹಿಳಾ ಚಳವಳಿಯಲ್ಲಿ ಮತ್ತು ಪೌರಕಾರ್ಮಿಕರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅವರ ಹಕ್ಕುಗಳಿಗಾಗಿ ಘನತೆಯ ಬದುಕಿಗಾಗಿ ನಿರಂತರವಾಗಿ ಹೋರಾಡುತ್ತ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಚಿರಪರಿಚಿತರು. ತಮ್ಮ ಬದುಕಿನಲ್ಲಿ ‘ನುಡಿಯೊಳಗಾಗಿ ನಡೆ’ಯುವ ಪ್ರಯತ್ನ […]

1 2 3 4