ಸಾಹಿತ್ಯ ಸಂಸ್ಕೃತಿ

ಸಾಹಿತ್ಯ ಸಂಸ್ಕೃತಿ

ದೇವರ ಸಂಕಟ

ದೇವರ ಸಂಕಟ

ಇಲ್ಲಿ ಈ ಪವಿತ್ರ ಭೂಮಿಯಲ್ಲಿ ಹುಲುಸಾದ ಫಸಲು ಪಡೆಯಲು ಬೇಕಿರುವುದು ನೀರಲ್ಲ ಗೊಬ್ಬರವಲ್ಲ ಹೊನ್ನಾರು ಕಟ್ಟುವುದಲ್ಲ ‘ಕೈಕೆಸರಾದರೆ ಬಾಯಿ ಮೊಸರಾಗುವುದಂತು ಅಲ್ಲವೇ ಅಲ್ಲ;’ ಇಲ್ಲಿ ಹುಲುಸಾದ ಬೆಳೆ ಬೆಳೆಯಲು ಕಾಲುಕೆರೆಯಬೇಕು ಕುರುಡು ನೆಪ ತೆಗೆಯಬೇಕು ಹೆಣ ಉರುಳಬೇಕು ನೆತ್ತರು ಹರಿಯಬೇಕು; ಹರಿದು ಕೆಸರಾಗಿ ಮಡುಗಟ್ಟಬೇಕು. ಹರಿತವಾದ ಚೂರಿಗಳು ಹಸುಳೆಗಳ ಹೃದಯ ಸೀಳಬೇಕು; ದ್ವೇಷದ ಕಿಡಿ ಹೊತ್ತಿ ಉರಿದು ಹಬ್ಬಿದ ಹೊಗೆಯಲ್ಲಿ ಮನಸುಗಳ ಇಬ್ಬಾಗಿಸಿ ಒಡೆದ ಮನಗಳ ಬಯಲಲಿ ದ್ವೇಷದ ವಾಮನ ಪಾದ ದೃಢವಾಗಿ ಊರಬೇಕು ನೆತ್ತರಲ್ಲಿ; ಸೇರಿಗೆ […]

ಸಾಕ್ಷಿ ಪ್ರಜ್ಞೆ ಇಲ್ಲದ ಸಾಹಿತ್ಯ ಸಂವೇದನೆ !

ಸಾಕ್ಷಿ ಪ್ರಜ್ಞೆ ಇಲ್ಲದ ಸಾಹಿತ್ಯ ಸಂವೇದನೆ !

ಸಾಹಿತ್ಯದ ಮೂಲ ಉದ್ದೇಶ ಏನು ? ಸಾಹಿತ್ಯದ ವ್ಯಾಖ್ಯಾನ, ಪರಿಧಿ, ವ್ಯಾಪ್ತಿ ಮತ್ತು ಹರವು ಹಲವು ರೂಪಗಳಲ್ಲಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅನಿವಾರ್ಯತೆಯನ್ನು ಮೈಸೂರು ಸಾಹಿತ್ಯ ಸಮ್ಮೇಳನ ಸೃಷ್ಟಿಸಿದೆ. 20ಕ್ಕೂ ಹೆಚ್ಚು ವಿಚಾರ ಗೋಷ್ಠಿಗಳು, ಮೂರು ಕವಿ ಗೋಷ್ಠಿಗಳು, ಮೂರು ವೇದಿಕೆ, ಸಾವಿರಾರು ಸಾಹಿತ್ಯಾಭಿಮಾನಿಗಳು, ಬೃಹತ್ ಸಂಖ್ಯೆಯ ಪುಸ್ತಕಗಳ ನಡುವೆ ಸಾಹಿತ್ಯಾಭಿಮಾನಿಗಳ ಸೆಲ್ಫಿ ಪ್ರೀತಿಗೆ ಬಲಿಯಾದ 83ನೆಯ ಸಾಹಿತ್ಯ ಸಮ್ಮೇಳನ ವೈವಿಧ್ಯಗಳ ನಡುವೆಯೇ ಹಲವು ವಿವಾದಗಳನ್ನೂ ಹುಟ್ಟುಹಾಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿಗತ ನಿಲುವು […]

ನೀರತೇಜಿಯನೇರಿದ ಪಯಣ: ಕವಿತಾ ರೈ ಅವರ ಕಾವ್ಯ

ನೀರತೇಜಿಯನೇರಿದ ಪಯಣ: ಕವಿತಾ ರೈ ಅವರ ಕಾವ್ಯ

ಕವಿತೆಯಲ್ಲಿ ಬದುಕಿನಷ್ಟೇ ಜೀವಚೈತನ್ಯ ಹರಿದಾಡುವುದು ಎಂಥ ಸಮಯಗಳಲ್ಲಿ ಎಂದು ಯೋಚಿಸಿದಾಗ ಹಲ ಬಗೆಯ ಸಂಕೀರ್ಣ ಉತ್ತರಗಳು ಮುಂದೆ ಬರಬಲ್ಲವು. ವ್ಯಕ್ತಿ ಬದುಕಿನುದ್ದಕ್ಕೂ ಅನುಭವಿಸುವ ಕಷ್ಟಪರಂಪರೆಗಳಿಗೆ ಎಡತಾಕುವ ಹಾಗು ಅವುಗಳನ್ನು ಮೀರುವ ಹಂತದಲ್ಲಿ ಅನುಭವಕ್ಕೆ ಬರುವ ಮನಸ್ಥಿತಿಗಳು ಯಾವಗಲೂ ಬಿಕ್ಕಟ್ಟಿನ ಆವರಣದಲ್ಲೆ ಉಸಿರಾಡುತ್ತವೆ. ಮನುಷ್ಯನ ಢೋಂಗೀತನಗಳು, ಅಪ್ರಮಾಣಿಕತೆ, ಸಣ್ಣತನಗಳು ಇಂಥ ಸಂದರ್ಭದಲ್ಲಿ ಮೇಲುಗೈ ಪಡೆಯಲು ಹವಣಿಸುತ್ತವೆ. ಕವಿತೆಗೆ ಇರುವ ಶಕ್ತಿ ಇವುಗಳನ್ನೂ ಕೂಡ ಒಳಕ್ಕೆ ಸ್ವೀಕರಿಸುವುದು. ಯಾವುದೇ ಕವಿತೆ ಬದುಕನ್ನು ಮತ್ತು ಅದರ ಅಭಿವ್ಯಕ್ತಿಗಳನ್ನು ಕೇವಲ ವಿವರಿಸುವ ಹಂತಕ್ಕೆ […]

ಇದ್ದದ್ದು ಇದ್ಹಾಂಗ ಹೇಳಿ ಯಾರ್ಗೂ ಹೇಳ್ದಂಗೆ ಹೊರಟೋದ್ರಾ ಕೋಟಿ

ಇದ್ದದ್ದು ಇದ್ಹಾಂಗ ಹೇಳಿ ಯಾರ್ಗೂ ಹೇಳ್ದಂಗೆ ಹೊರಟೋದ್ರಾ ಕೋಟಿ

ಸುತ್ತಲೂ ಶೂನ್ಯ ಆವರಿಸಿದಾಗ ಜಗತ್ತು ಮರೆಯಾಗುತ್ತದೆ. ಪ್ರಜ್ಞೆ ಮಸುಕಾಗುತ್ತದೆ. ಮನಸು ವಿಚಲಿತವಾಗುತ್ತದೆ. ಅಬ್ಬಾ, ಅದೆಂತಹ ಶೂನ್ಯ ಆವರಿಸಿಬಿಟ್ಟಿದೆ. ನಿಮ್ಮ ಅಗಲಿಕೆಯನ್ನು ಹೇಗೆ ಅರ್ಥೈಸಲಿ ಕೋಟಿ ಸರ್. ನಾವು ಕಳೆದುಕೊಂಡಿರುವುದು ಒಬ್ಬ ವ್ಯಕ್ತಿಯನ್ನಲ್ಲ, ಒಂದು ಸಂಸ್ಥೆಯ ಸ್ಥಾಪಕನನ್ನಲ್ಲ, ಅಥವಾ ಒಬ್ಬ ಚಿಂತಕನನ್ನಲ್ಲ. ಒಂದು ದಿಟ್ಟ ದನಿಯನ್ನು ಕಳೆದುಕೊಂಡಿದ್ದೇವೆ. ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬ ಹತಾಶೆ ಎದುರಾದಾಗಲೆಲ್ಲಾ, ಇದೋ ನಾನಿದ್ದೇನೆ ಎಂದು ನಿಲ್ಲುತ್ತಿತ್ತು ನಿಮ್ಮ ಸಂಪಾದಕತ್ವದ ಆಂದೋಲನ. ಅದೊಂದು ಪತ್ರಿಕೆ ಮಾತ್ರವಲ್ಲ ಕೋಟಿ ಸರ್. ಹೋರಾಟಗಾರರಿಗೆ ಕರಪತ್ರ, ಪ್ರತಿರೋಧದ ದನಿಗಳಿಗೆ ಸ್ಪೂರ್ತಿಯ […]

ರಷ್ಯಾದ ದೇಹ-ಭಾರತೀಯ ಆತ್ಮ

ರಷ್ಯಾದ ದೇಹ-ಭಾರತೀಯ ಆತ್ಮ

“ಬಾಬಾ ಸಾಹೇಬನಿಗೆ, ಮೋಹನ ದಾಸನಿಗೆ ಶಿರಭಾಗಿ ನಮಿಸಿ ಕಲಿಯಬೇಕಿದೆ ನನಗೆ” ಇದು ಚಳುವಳಿಯಲ್ಲಿ ತನ್ನ ಮಗನನ್ನು ಕಳೆದುಕೊಂಡ ಚಲಕೊಪ್ಪದ ದುರ್ಗವ್ವಳ ಮನದಾಳದ ಬಯಕೆ. ಚಮ್ಮಾರಿಕೆಯನ್ನು ಮಾಡಿ ದುರ್ಗವ್ವ ಮತ್ತು ಅವನ ಮಗ ಬದುಕನ್ನು ದೂಡುತ್ತಿದ್ದಾರೆ. ಅವರು ತಯಾರಿಸುವ ವಸ್ತುಗಳಿಗೂ ತೆರೆಗಿ ವಿಧಿಸಿದ ಸರ್ಕಾರದ ನಿರ್ಧಾರ ಅವರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಸರ್ಕಾರ ನಿರ್ಧಾರವನ್ನು ವಿರೋಧಿಸಿ ದುರ್ಗವ್ವಳ ಮಗ ಚೆಲುವ ಚಳುವಳಿಯನ್ನು ರೂಪಿಸುತ್ತಿದ್ದಾನೆ. ಚಳುವಳಿಯಿಂದ ಮಗನನ್ನು ದೂರಮಾಡಲು ಹೋದ ದುರ್ಗವ್ವ ತಾನೇ ಚಳುವಳಿಯ ಒಂದು ಭಾಗವಾಗುತ್ತಾಳೆ. ಅನೇಕ ಕಾರಣಗಳಿಂದಾಗಿ […]

ಅಮೆರಿಕದತ್ತ ಮುಖಮಾಡಿ ಅರೆಬೆತ್ತಲಾಗಿ ನಿಲ್ಲಲಾಗಿದೆ!

ಅಮೆರಿಕದತ್ತ ಮುಖಮಾಡಿ ಅರೆಬೆತ್ತಲಾಗಿ ನಿಲ್ಲಲಾಗಿದೆ!

ಆಫ್ರಿಕನ್ ಸಾಹಿತ್ಯ ವಾಚಿಕೆ ಭಾರತೀಯರು ಆಧುನಿಕ ಸಂದರ್ಭದಲ್ಲಿ ಅತಿ ಹೆಚ್ಚು ಮುಖಮಾಡಿ ನೋಡಿರುವುದು ಅಮೆರಿಕ ಮತ್ತು ಯುರೋಪಿನ ಕಡೆಗೆ. ಅದು ವಿಜ್ಞಾನ-ತಂತ್ರಜ್ಞಾನದ ವಿಚಾರಗಳಿರಬಹುದು. ರಾಜತಾಂತ್ರಿಕ ವಿಚಾರಗಳಿರಬಹದು. ಸಾಹಿತ್ಯ ಚಿಂತನೆ, ವಿವಿಧ ಸಿದ್ದಾಂತಗಳು, ಭಾಷೆ, ಸಂಸ್ಕøತಿ, ಅಭಿವೃದ್ಧಿ ಹೀಗೆ ಯಾವುದೇ ವಿಚಾರಗಳನ್ನು ಕಲಿಯಬೇಕಾದಗಲೂ ನಾವು ಎದುರು ನೋಡಿರುವುದು ಯೂರೋಪಿನ ಕಡೆಗೆ. ಅಂದರೆ ನಮ್ಮ ದೇಶವನ್ನು ನಿಯಂತ್ರಿಸುವ, ಉದಾರವಾದಿ ಆರ್ಥಿಕ ನೀತಿಗಳನ್ನು ವಿಶ್ವವ್ಯಾಪಾರ ಸಂಘಟನೆಯ ನೇತೃತ್ವದಲ್ಲಿ ಜಾರಿಗೊಳಿಸುತ್ತ ದೇಶವನ್ನು ದೋಚುವ ರಾಷ್ಟ್ರಗಳ ಕಡೆಗೆ ಮುಖಮಾಡಲಾಗಿದೆ. ಅದು ಇಂದು ಮತ್ತಷ್ಟು ಹೆಚ್ಚಾಗಿದೆ. […]

ನಮ್ಮ ಕಾಲದ ಕೆಲವು ಗಪದ್ಯಗಳು

ನಮ್ಮ ಕಾಲದ ಕೆಲವು ಗಪದ್ಯಗಳು

ಮಿಂಚುಳ್ಳಿ  ಮಿಂಚುಳ್ಳಿ ಬಗ್ಗೆ ಹಿಂದೊಮ್ಮೆ ಪದ್ಯ ಬರೆದು ಭೇಶ್ ಎನ್ನಿಸಿಕೊಂಡಿದ್ದೆ  ಹತ್ತು ಬೆರಳಿದ್ದರೂ ನಮಗೆ ಮೀನು ಹಿಡಿಯಲಾಗದು ಮಿಂಚುಳ್ಳಿ ತರ ಎಂಬುದು ಅದರ ಸಾರಾಂಶ ಮೊನ್ನೆ ನೊರೆ ತುಂಬಿದ ಕೆರೆಯೊಂದರ ಅಂಚಿನ ಮೋಟು ಗಿಡದಲ್ಲಿ ಪೆಚ್ಚಾಗಿ ಕೂತ ಮಿಂಚುಳ್ಳಿ ಕಂಡು ಪಿಚ್ಚೆನಿಸಿತು ಹೆಂಡದ ಬಾಟಲಿ ಬಿಡಿ, ವಿಮಾನದ ಮೇಲೂ ಇದರ ಚಿತ್ರ ಕಂಡು ಯಲಯಲಾ ಎನ್ನಿಸಿತ್ತು. ಬಳುಕಿ ಮೀನಿನಂತಾಡುವ ಮಿಂಚುಳ್ಳಿ ಲಲನೆಯರ ಕಂಡಾಗಲೂ.  ಕಾಲ ಕೆಟ್ಟಿದೆ, ಮಿಂಚುಳ್ಳಿಗೂ ಮೀನಿಲ್ಲ ಎನ್ನಬಹುದು.  ಆದರೆ ತುಂಬಾ ಬೇಜಾರು ಮಾಡಬೇಕಿಲ್ಲ.  ಸ್ವಚ್ಛಂದ […]

ನಿನ್ನ ಕೊನೆ  ಹತ್ತು ಸೆಕೆಂಡುಗಳು

ನಿನ್ನ ಕೊನೆ  ಹತ್ತು ಸೆಕೆಂಡುಗಳು

ಕೆಲವೊಮ್ಮೆ ಅನಿಸುತ್ತೆ ನೀನು ಇಲ್ಲೇ ಇದ್ದೀ ಎಂದಿನಂತೆ ನಿನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿಹೋಗಿದ್ದೀ.. ಅದಕೆಂದೇ ಈ ವಾರ ಮನೆಗೆ ಬರದೇ ಹೋದೀ.. ಆದರೆ ಮಿಕ್ಕ ಸಮಯದಲ್ಲೆ ನಿಜ ಮುಖಕ್ಕೆ ರಾಚುತ್ತೆ ನೀನಿನು ಬರಲ್ಲ ಎಂದೆಂದೆಂದಿಗೂ ಬರಲ್ಲ ಅನ್ನೋ ಕಹಿಸತ್ಯ ಅರಿವಾಗುತ್ತೆ ಹೃದಯ ಕಂಪಿಸುತ್ತೆ ಕಾಲುಗಳು ನಡುಗುತ್ತೆ ಹೊಟ್ಟೆಯೊಳಗೆ ಸಂಕಟವಾಗಿ ಒಳಗಿರೋದೆಲ್ಲಾ ಕಕ್ಕುವಂತಾಗುತ್ತೆ.. ಆದರೆ ನನ್ನಂತೆ ಅದೂ ಖಾಲಿಖಾಲಿಯಾಗಿದೆ.. ಎಚ್ಚರವಾದಾಗ ಕೊರಗುತ್ತಾ ಮಲಗಿದ್ದಾಗ ಬೆಚ್ಚಿಬೀಳುತ್ತಾ.. ಪ್ರತಿಗಳಿಗೆಯೂ ಕಳೆದುಕೊಂಡಿದ್ದರ ಲೆಕ್ಕ ನೀಡುತ್ತಿದೆ.. ನಿನ್ನ ಆ ಕೊನೆ ಹತ್ತು ಸೆಕೆಂಡುಗಳನ್ನು ಊಹಿಸಿಕೊಳ್ಳುತ್ತೀನಿ […]

ಮಹಿಷಪುರದ ರಾಜ ದಿವಾನರಿಗೆ

ಮಹಿಷಪುರದ ರಾಜ ದಿವಾನರಿಗೆ

ಮಹಾರಾಜರೆ ನಿಧಾನಕ್ಕೆ ಊಟಮಾಡಿ ಹಾಕಿಕೊಳ್ಳಿ ಇನ್ನೊಂದಿಷ್ಟು ತುಪ್ಪ ಪಾಯಸ ಚೆನ್ನಾಗಿದೆಯೇ ತಗೊಳ್ಳಿ ಕೋಸಂಬರಿ ಇನ್ನೇನು ನಿರುಮ್ಮಳ ನಿಶ್ಚಿಂತೆಯಿಂದಿರಿ ಆಡಳಿತದ ತಾಪತ್ರಯ ಶತೃಭಯ ಎಲ್ಲಾ ದೂರ ಇದ್ದಾನಲ್ಲ ವೈಸರಾಯ ನೋಡಿಕೊಳ್ಳುತ್ತಾನೆ ಪುಟ್ಟ ಪೂರ ಕೊಟ್ಟರಾಯಿತು ಒಂದಿಷ್ಟು ಕೋಟಿ ಕಪ್ಪ ದೂರದ ದೊರೆಗೆ ತಾನು ದಾಸಿಯಾದರೇನು ಇದ್ದಾಳಲ್ಲ ಪ್ರಜೆಗಳ ರಾಣಿ ಅಮ್ಮಣ್ಣಿ ವಿಕ್ಟೋರಿಯಾಳ ಕೃಪೆ ಇನ್ನುಮೇಲೆ ಮಹಿಷಪುರ ಸುಖೀರಾಜ್ಯ ನಿಧಾನ ನಿಧಾನಕ್ಕೆ ಊಟ ಮಾಡಿ ಮಹಾರಾಜರೇ! ಸತ್ತವನು ಸತ್ತ ದಾಸನಾಗಿದ್ದು ಸುಖವ ಸವಿಯಲಾರದ ದಡ್ಡಶಿಖಾಮಣಿ ಸುಲ್ತಾನ ಏನು ಬಂತು ನಿಷ್ಠುರ […]

ಬಸವಣ್ಣನ ಹಾದಿಯಲ್ಲಿ ಜನನಾಯಕರು: ಯಾರವರು!!

ಬಸವಣ್ಣನ ಹಾದಿಯಲ್ಲಿ ಜನನಾಯಕರು: ಯಾರವರು!!

‘ಬಸವನ ಹಾದಿಯಲ್ಲಿ ಜನನಾಯಕರು’ ಎಂಬ ವಿಷಯ ಕುರಿತಂತೆ ಒಂದು ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಶೀರ್ಷಿಕೆಯೇನೋ ಆಕರ್ಷಣೀಯವಾಗಿದೆ. ಇಲ್ಲಿ ನಮಗೆ ಎದುರಾಗುವ ಪ್ರಶ್ನೆಯೆಂದರೆ ಬಸವಣ್ಣನ ಹಾದಿಯಲ್ಲಿ ನಡೆಯುತ್ತಿರುವ ಜನನಾಯಕರು ಯಾರು? ಯಾರವರು? ಇದಕ್ಕೆ ಉತ್ತರ ಸುಲಭವಾಗಿ ದೊರೆಯುವುದಿಲ್ಲ. ಬಸವಣ್ಣನನ್ನು ಅನುಸರಿಸುವುದು ಸುಲಭದ ಸಂಗತಿಯಲ್ಲ. ಬಸವಣ್ಣನೇ ಹೇಳಿರುವಂತೆ ಅವನದು ಲೋಕ ವಿರೋಧವನ್ನು ಕಟ್ಟಿಕೊಂಡು ನಡೆದ ನಡೆ. ಅದು ದಾಕ್ಷಿಣ್ಯಕ್ಕೆ ಒಳಗಾಗದ ನಡೆ. ಅದು ಕಾಯಕನಿಷ್ಠೆಯ ನಡೆ. ಅವನದು ಮೌಢ್ಯ ವಿರೋಧಿ ನಡೆ. ಅದಕ್ಕೆ ಅವನು ಹೇಳುತ್ತಾನೆ—‘ನೀರ […]

1 2 3 25