By admin on December 22, 2015
ಭಾಷೆ-ಶಿಕ್ಷಣ

ಉನ್ನತ ಶಿಕ್ಷಣವು ಪರಿವರ್ತನೆಯ ಹಾದಿಯಲ್ಲಿದ್ದು, ಅದರ ಸದ್ಯದ ಸ್ಥಿತಿ-ಸ್ವರೂಪ ಕುರಿತು ಅನೇಕ ಆಕ್ಷೇಪಗಳು ವ್ಯಕ್ತವಾಗಿವೆ. ಹಾಗೂ ಅದು ವರ್ತಮಾನದ ಅಗತ್ಯಗಳನ್ನು ಪೂರೈಸಲು ವಿಫಲವಾಗಿರುವುದಷ್ಟೇ ಅಲ್ಲ, ಸವಕಲು ನಾಣ್ಯವಾಗಿದ್ದು ಪ್ರಸ್ತುತತೆಯನ್ನು ಕಳೆದುಕೊಂಡಿದೆ ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ . ಈ ಹಿನ್ನಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಹೊಸ ನೀತಿಯೊಂದನ್ನು ರೂಪಿಸಲು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಶಿಕ್ಷಣ ತಜ್ಞರಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಉನ್ನತ ಶಿಕ್ಷಣವನ್ನು ವರ್ತಮಾನಕ್ಕೆ ಸಲ್ಲುವಂತೆ ಪರಿಷ್ಕರಿಸಿ […]
By admin on December 18, 2015
kannada
ಭಾಷೆ-ಶಿಕ್ಷಣ

ಕರ್ನಾಟಕದಲ್ಲಿ ಹಿಂದಿ ಹೇರಿಕೆಯಾಗುತ್ತಿದೆ ಎಂದು ನನ್ನ ಫೇಸುಬುಕ್ಕು ಗೆಳೆಯರು ಚಿಂತಿತರಾಗಿದ್ದಾರೆ. ಅದರಲ್ಲಿ ವಸಂತ ಶೆಟ್ಟರು, ವಲ್ಲೀಷ ಕುಮಾರ್ ಅವರು, ಅಮಿತ ಕುಮಾರ್ ಅವರು, ಸುರೇಶ ಅವರು, ಹಾಗೂ ಇತರರು ಬರೆದ ಪೋಸ್ಟುಗಳನ್ನು ನೋಡಿದ್ದೇನೆ. ಅವರ ಕಾಳಜಿ ನನಗೆ ಅರ್ಥವಾಗುತ್ತದೆ. ಆದರೆ ಈ ವಿಷಯದ ಬಗ್ಗೆ ನನಗೆ ಬೇರೆ ಅಭಿಪ್ರಾಯವಿದೆ. ಇದರ ಬಗ್ಗೆ ಹಿಂದೆಯೇ ಬರೆಯಬೇಕಾಗಿತ್ತು. ಪ್ರಸಂಗ ಬಂದಿರಲಿಲ್ಲ. ಅಥವಾ ಇದು ಇಷ್ಟು ದೀರ್ಘಕ್ಕೆ ಹೋಗಿರಿಲಿಲ್ಲ. ಇವನು ತಮ್ಮೂರಿನ ಪ್ರೀತಿಯಿಂದ, ಉತ್ತರ ಕರ್ನಾಟಕದ ಅಭಿಮಾನದಿಂದ ಮಾತಾಡುತ್ತಾನೆ, ಅಥವಾ ದಕ್ಷಿಣ ಕರ್ನಾಟಕದ […]
By admin on November 21, 2015
multilingualism
ಭಾಷೆ-ಶಿಕ್ಷಣ

ಬಹುಭಾಷಿಕತೆ ಯನ್ನು ‘ಹಲವು ಬಣ್ಣದ ಹಗ್ಗ’ಕ್ಕೆ ಹೋಲಿಸಬಹುದು. ನಮ್ಮ ಬಯಲುಸೀಮೆಯಲ್ಲಿ ಈ ಹಗ್ಗವನ್ನು ರೈತರು ಇಂದಿಗೂ ಬಳಸುತ್ತಾರೆ. ಆದರೆ ಕಡಿಮೆ ಆಗುತ್ತಿದೆ. ಕಾರಣ ಹಗ್ಗವನ್ನು ತಯಾರು ಮಾಡುವುದಕ್ಕೆ ಕತ್ತಾಳೆ ಗಿಡಗಳು ಬೇಕು. ಊರು ಗಳು ಬದಲಾದಂತೆ ದಾರಿಗಳು ಬದಲಾಗಿ ಪಕ್ಕದಲ್ಲಿದ್ದ ಕತ್ತಾಳೆಯು ಇಲ್ಲವಾಗುತ್ತಿದೆ. ನಾವು ಹುಡಗರಾಗಿದ್ದಾಗ ತಮಿಳುನಾಡಿನಿಂದ ಬಂದ ಕೆಲವು ಸಮುದಾಯದವರು ಒಂದು ಯಂತ್ರ ದಿಂದ ನಾರನ್ನು ತಯಾರು ಮಾಡುತ್ತಿದ್ದರು. ಹಾಗೆ ಬಂದವರು ನಾವು ಮಾತನಾಡುತಿದ್ದ ತೆಲುಗು ಭಾಷೆಯನ್ನು ಕಲಿತು ತಮ್ಮ ಮಕ್ಕಳನ್ನು ಕೆಲವು ವರ್ಷಗಳ ಕಾಲ […]
By admin on November 1, 2015
ಭಾಷೆ-ಶಿಕ್ಷಣ

ಪ್ರಸ್ತುತ ಬರೆಹದಲ್ಲಿ ನಮ್ಮ ಸಮಾಜವು ಇಂದು `ತಲೆಕೆಡಿಸಿ’ಕೊಳ್ಳಬೇಕಾದ ಎರಡು ಸಂಗತಿಗಳನ್ನು ಕುರಿತು ಗಮನ ಸೆಳೆಯಲಾಗುವುದು. ಒಂದು. ಶಿಕ್ಷಣದ ಖಾಸಗೀಕರಣ. ಮತ್ತೊಂದು ಅಮೆರಿಕದ ವಿದೇಶಿ ಭಾಷೆಗಳ ಕಲಿಕೆಯ ಯೋಚನೆ. ಮೊದಲಿಗೆ ಶಿಕ್ಷಣದ ಖಾಸಗೀಕರಣವನ್ನು ಗಮನಿಸಬಹುದು. ನಮ್ಮ ದೇಶದಲ್ಲಿ ಶಿಕ್ಷಣದ ಖಾಸಗೀಕರಣ ಅಡೆತಡೆಯಿಲ್ಲದೆ ನಡೆದಿದೆ. ಪ್ರಾಥಮಿಕ ಹಂತದಿಂದ ಉನ್ನತ ಹಂತದವರೆಗೆ ಎಲ್ಲ ಬಗೆಯ ಶಿಕ್ಷಣವನ್ನೂ ಖಾಸಗೀಕರಿಸಲಾಗುತ್ತಿದೆ. ಆದರೆ ಅಮೆರಿಕದ ಸಾಮಾಜಿಕ ಅಭಿವೃದ್ಧಿ ನೀತಿ, ಅಲ್ಲಿನ ಶಿಕ್ಷಣ ವ್ಯವಸ್ಥೆ ನಮ್ಮ ದೇಶದ ನೀತಿ ಆಚರಣೆಗಳಿಗೆ ತದ್ವಿರುದ್ದವಾಗಿವೆ. ಅಮೆರಿಕದಲ್ಲಿ ಪ್ರಾಥಮಿಕದಿಂದ ಪದವಿಪೂರ್ವ ಹಂತದವರೆಗಿನ […]
By admin on October 31, 2015
ಭಾಷೆ-ಶಿಕ್ಷಣ

ನೀವು ಎಂತಹ ಮನುಷ್ಯರು? ಕೋಪಿಷ್ಟರೇ? ತುಂಬಾ ನಿಧಾನಸ್ಥರೇ? ಅಥವಾ ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಳ್ಳುವ ಸಹನಾಶೀಲರೇ? ಪ್ರತಿ ಮನುಷ್ಯನಿಗೂ ಅವನದ್ದೇ ಆದ ಒಂದು ಸ್ವಭಾವ, ಗುಣದೋಷ ಇರುತ್ತದೆ. ಆದರೆ ನಾನಿಲ್ಲಿ ಮಾತನಾಡ ಹೊರಟಿರುವುದು ಸಹನೆಯ ಬಗ್ಗೆ. ಸಹನೆ ನಮ್ಮ ತಾಕತ್ತು ಆಗುವುದರ ಜೊತೆ ಜೊತೆಗೇ ನಮ್ಮ ದೌರ್ಬಲ್ಯ ಕೂಡ ಆಗುವುದರ ಬಗ್ಗೆ. ಮನುಷ್ಯನ ಸಹನೆ ಆತನ ಅತಿ ದೊಡ್ಡ ಆಸ್ತಿ. ನಮ್ಮ ಜೀವನದ ಬಹಳಷ್ಟು ಆಗು ಹೋಗುಗಳು ನಮ್ಮ ಸಹನೆಯ ಮೇಲೆ ನಿಂತಿರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. […]
By admin on October 2, 2015
ಭಾಷೆ-ಶಿಕ್ಷಣ

ಇಂಗ್ಲಿಶ್ ಕಲಿಕೆ : ನಿಜದ ಪ್ರಜಾತಾಂತ್ರಿಕ ಹಕ್ಕಿನ ಆಯ್ಕೆಯೇ? ಮೇಲಿನ ಚರ್ಚೆಯ ನಂತರ ಮತ್ತೂ ಕೆಲವು ವಿಚಾರವನ್ನು ಇಲ್ಲಿ ಗಮನಿಸಬೇಕಿದೆ. ಒಂದು. ಇಂಗ್ಲಿಶ್ ಕಲಿಕೆಯ ಸ್ವಾತಂತ್ರ್ಯ ಮಕ್ಕಳ ಪ್ರಜಾತಾಂತ್ರಿಕ ಹಕ್ಕು ಎಂಬ ವಾದವಿದೆ. ನಿಜವೆಂದರೆ ತಾಯಿನುಡಿಯನ್ನು ಕಲಿಕೆಯಲ್ಲಿ ಬಳಸುವುದುದು ಕೂಡ ನೈಜ ಪ್ರಜಾಪ್ರಭುತ್ವದ ಮಕ್ಕಳ, ಪೋಶಕರ ಸಮುದಾಯಗಳ ಹಕ್ಕಾಗಿದೆ. ಅಂದರೆ ಮಕ್ಕಳು ಅವರ ತಾಯಿನುಡಿಯಲ್ಲಿ ಕಲಿಯುವುದು ಅವರ ಯಾವತ್ತಿನ ನೈಜ ಹಕ್ಕು. ಆದರೆ ಅದನ್ನು ಕಸಿದುಕೊಂಡಿರುವುದರಿಂದ, ಅದನ್ನು ಕಲಿಯುವ ಪರಿಸರವನ್ನು ಶತಮಾನಗಳಿಂದಲೂ ನಾಶಮಾಡಿರುವುದರಿಂದ ಮತ್ತು ಇಂಗ್ಲಿಶ್ […]
By admin on October 1, 2015
ಭಾಷೆ-ಶಿಕ್ಷಣ

ಸ್ವಾತಂತ್ರ್ಯದ ಚರ್ಚೆ ಬಿರುಸಿನಿಂದ ಸಾಗುತ್ತಿರುವ ನಮ್ಮ ಪ್ರಸಕ್ತ ಸನ್ನಿವೇಶದಲ್ಲಿಒಂದು ವ್ಯಂಗ್ಯವಿದೆ: ಪ್ರತಿಯೊಂದು ನಿಲುವಿನ ಸಮರ್ಥಕರೂ ಅವರ ವಿರೋಧಿ ಬಣಕ್ಕೆ ಸಂಯಮ ಮತ್ತು ಸಹನೆಯ ಬಗ್ಗೆ ಕಿವಿಮಾತು ಹೇಳುವುದು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕುರಿತು ತಿಳುವಳಿಕೆ ನೀಡುವುದು ಆ ವ್ಯಂಗ್ಯ. ಇತರರಿಗೆ ಅನ್ವಯಯೋಗ್ಯವಾದ ಮಾದರಿಗಳು ನಮಗೂ ಅನ್ವಯವಾಗುತ್ತದೆಂದು ಹೇಳಿದರಷ್ಟೇ ಸಾಲದು, ಅದು ಪ್ರಾಯೋಗಿಕವಾಗಿ ಅನುಷ್ಠಾನದಲ್ಲಿರಬೇಕಾದ್ದು ಅಗತ್ಯ. ನಿರ್ಬಂಧಗಳೇ ಇಲ್ಲದ ಸ್ವಾತಂತ್ರ್ಯ ಎಂದೂ ಇರಲಿಲ್ಲ ಮತ್ತು ಮುಂದೆಯೂ ಇರಲಾರದು. ನಿಸರ್ಗವು ಮೊಟ್ಟಮೊದಲ ನಿರ್ಬಂಧವನ್ನು ಹೇರುತ್ತದೆ. ಅದು ವಿವಿಧ ರೂಪಗಳಲ್ಲಿರುತ್ತದೆ. ನಾನೆಷ್ಟೇ […]
By admin on October 1, 2015
ಭಾಷೆ-ಶಿಕ್ಷಣ

ಕಳೆದ ವರುಶದ ಫೆಬ್ರವರಿಯಲ್ಲಿ(2014) ಕೆನ್ಯಾದಲ್ಲಿ ಒಂದು ಘಟನೆ ನಡೆದಿದೆ. ಅದೇನೆಂದರೆ, ಶಾಲೆಗೆ ಸೇರಿದ ಮೊದಲ ನಾಲ್ಕು ವರುಶಗಳ ಕಾಲ ಮಕ್ಕಳಿಗೆ ಅವರ ತಾಯಿನುಡಿಯಲ್ಲಿ ಕಲಿಸಬೇಕೆಂದು ಅಲ್ಲಿನ ಸರ್ಕಾರ ಒಂದು ಆದೇಶ ಹೊರಡಿಸಿದೆ. ಮಕ್ಕಳು ಯಾವುದೇ ನುಡಿಸಮುದಾಯಕ್ಕೆ ಸೇರಿದ್ದರೂ ಅವರ ತಾಯಿನುಡಿಯಲ್ಲಿ ಕಲಿಸಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆಯಂತೆ. ಆದರೆ ತಾಯಿನುಡಿಯಲ್ಲಿ ಕಲಿಸಬೇಕಾದ ಅಧ್ಯಾಪಕರು ಬಂದೂಕು ಹಿಡಿದು ಆ ಆದೇಶವನ್ನು ವಿರೋಧಿಸಿದ್ದಾರೆ. ಈ ವಿರೋಧಕ್ಕೆ ಕೆಲವು ನಗರವಾಸಿ ಪೋಶಕರು ಬೆಂಬಲಿಸಿದ್ದಾರೆ. ಈ ವಿರೋಧಕ್ಕೆ ನೀಡಿರುವ ಕಾರಣಗಳೆಂದರೆ, ಒಂದು, ಸರ್ಕಾರ ಆದೇಶ ಹೊರಡಿಸುವ […]
By admin on August 21, 2015
ಭಾಷೆ-ಶಿಕ್ಷಣ

“ಹಾಗೆ ಅಡ್ಮೀಶನ್ ಕೊಡೊಕಾಗಲ್ಲಾರಿ. ಮಕ್ಕಳ ತಂದೆ ತಾಯಿ ಇಬ್ಬರೂ ಬರಬೇಕು. ಇಬ್ಬರೂ ಜೊತೆಗೆ ಬಂದರೆ ಮಾತ್ರ ಅಡ್ಮೀಷನ್ ಕೊಡೋಕೆ ಆಗೋದು.” ಕಡ್ಡಿ ತುಂಡು ಮಾಡಿದಂತೆ ಆ ಕಿಂಡರ್ ಗಾರ್ಡನ್ನ ಪ್ರಿನ್ಸಿಪಾಲ್ (!!) ಹೇಳುತ್ತಿದ್ದರೆ ಆತನಿಗೆ ಅಚ್ಚರಿ. ಅವಳ ಅಮ್ಮ ಸೆಕೆಂಡ್ ಡೆಲೆವರಿಗೆ ಹೋಗಿದ್ದಾರೆ. ಬಂದ ತಕ್ಷಣ ಕರ್ಕೊಂಡು ಬರ್ತೇನೆ. ಈಗ ಅಡ್ಮೀಶನ್ ಮಾಡಿ ಬಿಡ್ತೇನೆ” ಈತನ ಮಾತು ಅವರ ಕಿವಿಗೆ ಬಿದ್ದರೂ ಮೆದುಳಿಗಿಳಿಯುತ್ತಿರಲಿಲ್ಲ. “ಸಾಧ್ಯವಿಲ್ಲ. ಯು ಮಸ್ಟ ಬ್ರಿಂಗ್ ಹರ ವಿತ್ ಇನ ಫಿಪ್ಟೀನ್ ಡೇಸ್. ಅದರ್ […]