ಭಾಷೆ-ಶಿಕ್ಷಣ

ಭಾಷೆ-ಶಿಕ್ಷಣ

ಸಂಸತ್ ಭವನದಲ್ಲಿ ಮಾಡಿದ ಕನ್ನಡ ಭಾಷಣಕ್ಕೆ ಅರ್ಧ ಶತಮಾನ

ಸಂಸತ್ ಭವನದಲ್ಲಿ ಮಾಡಿದ ಕನ್ನಡ ಭಾಷಣಕ್ಕೆ ಅರ್ಧ ಶತಮಾನ

(ಮುಂದಿನ ಮಾರ್ಚ್ ತಿಂಗಳ 30ಕ್ಕೆ ಈ ಭಾಷಣಮಾಡಿ 51 ವರ್ಷ ಪೂರೈಸಲಿದೆ. ಜೆ. ಹೆಚ್. ಪಟೇಲರ ಈ ಕನ್ನಡ ಭಾಷಣವನ್ನು ಹಿಂದಿಗೆ ಅನುವಾದಿಸಿ ಕೊಡುವುದಾಗಿ ಜಾರ್ಜ್ ಫರ್ನಾಂಡಿಸ್ ಹೇಳಿದ್ದರು. ಜೊತೆಗೆ ಪಟೇಲರ ಸೈದ್ಧಾಂತಿಕ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದರು. ಫರ್ನಾಂಡಿಸ್ ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ಅವರ ನೆನಪಿಗಾಗಿಯೂ ಸಹ ಈ ಬರಹ ಸಕಾಲಿಕ ಎನಿಸುತ್ತದೆ.) 1 ಸಂಸತ್ ಭವನದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ.ಹೆಚ್. ಪಟೇಲರು ಕನ್ನಡದಲ್ಲಿ ಮಾತನಾಡಿ ಕಳೆದ ಮಾರ್ಚ್ 30ಕ್ಕೆ (ಮಾರ್ಚ್ 30 1967 […]

ಹರ್ಯಾಣದ ಹುಡುಗಿಯರು ಓದು ಮುಂದುವರೆಸಲು ಬಯಸುತ್ತಾರೆ

ಹರ್ಯಾಣದ ಹುಡುಗಿಯರು ಓದು ಮುಂದುವರೆಸಲು ಬಯಸುತ್ತಾರೆ

ಶಿಕ್ಷಣವು ಮೂಲಭೂತ ಸೌಕರ್ಯಗಳಿಗಿಂತ ಪ್ರಮುಖವಾದದ್ದೆಂಬುದನ್ನು ಹರ್ಯಾಣದ ಶಾಲಾ ಬಾಲಕಿಯರು ಮನವರಿಕೆ ಮಾಡಿಕೊಡುತ್ತಿದ್ದಾರೆ. ಹರ್ಯಾಣದ ರೆವಾರಿ ಜಿಲ್ಲೆಯ ಗೋತ್ರತಪ್ಪ ದಹೀನಾ ಗ್ರಾಮದ ಸ್ವಾಭಿಮಾನಿ ಶಾಲಾ ಬಾಲಕಿಯರು ಪ್ರಾಂಭಿಸಿದ ಹೋರಾಟ ಇಂದು ಒಂದು ಸಾಂಕ್ರಾಮಿಕದಂತೆ ಇಡೀ ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹಬ್ಬುತ್ತಿದೆ. ಕಳೆದ ಮೇ ೧೦ರಂದು ಆ ಗ್ರಾಮದ ಸರ್ಕಾರಿ ಶಾಲೆಯ ೮೦ ಹುಡುಗಿಯರು ಅನಿರ್ದಿಷ್ಟ ಮುಷ್ಕರವನ್ನು ಪ್ರಾರಂಭಿಸಿದರು. ತಮ್ಮ ಶಾಲೆಯನ್ನು ಉನ್ನತ ಪ್ರೌಢಶಾಲೆಯನ್ನಾಗಿಸಬೇಕೆಂಬುದೇ ಅವರ ಏಕಮಾತ್ರ ಬೇಡಿಕೆಯಾಗಿತ್ತು. ಏಕೆಂದರೆ ಆ ಗ್ರಾಮದಿಂದ ಮೂರು ಕಿಲೋಮೀಟರ್‌ಗಿಂತ ಹತ್ತಿರದಲ್ಲಿ ಯಾವ್ […]

ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು -3

ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು -3

ಹೆಗೆಲಿಯನ್ – ಮಾಕ್ರ್ಸಿಸಂನ ವಿಮರ್ಶಾತ್ಮಕ ಸಿದ್ಧಾಂತಗಳ ಕೆಲವು ತಾತ್ಪರ್ಯಗಳು ವಿಪರೀತ ಏಕಾಧಿಪತ್ಯದ, ಸರಳೀಕೃತಗೊಂಡ, ಅಂತಿಮಕಾರಣ ಸಿದ್ದಾಂತಗಳು ಮತ್ತು ಐಡಿಯಾಲಜಿಗಳ ಸ್ವರೂಪದಲ್ಲಿರುವುದು ನಿಜ. ಆದರೆ ಹೆಗೆಲಿಯನ್/ ಮಾಕ್ರ್ಸಿಸಂ/ ರಾಚನಿಕೋತ್ತರವಾದದ ಆಧುನಿಕ ತತ್ವಗಳ ನಡುವೆ ನಿಖರವಾದ ಅನುಸಂಧಾನ ನಡೆಸುವುದರ ಮೂಲಕವೂ ಮತ್ತು ಗತಕಾಲದ ಕಲಿಕೆಯರಿಮೆ ಮತ್ತು ಶಿಕ್ಷಣದ ಫಿಲಾಸಫಿಗಳನ್ನು ಪ್ರಶ್ನಿಸುವ ಆಧುನಿಕೋತ್ತರವಾದವನ್ನು ವಿಶ್ಲೇಷಿಸುವುದರ ಮೂಲಕವೂ ಈ ಕೊರತೆಗಳನ್ನು ನಿವಾರಿಸಿಕೊಳ್ಳಬಹುದು. ಅದೂ ಅಲ್ಲದೆ ಶಿಕ್ಷಣವನ್ನು ಪುನರಚಿಸಿ ಸಮಾನತೆ ಸಾಧಿಸಲು ಆಧುನಿಕ ಮತ್ತು ಆಧುನಿಕೋತ್ರರದ ದೃಷ್ಟಿಕೋನವನ್ನು, ಸಿದ್ಧಾಂತ ಮತ್ತು ಆಚರಣೆಯನ್ನು ಪರಸ್ಪರ ಬೆರೆಸಬೇಕಿದೆ. […]

ಅಂಕೆ ಇಲ್ಲದ ಸಮಾಜ: ಅಂಕ ಸಾಮ್ರಾಟರ ನಡುವೆ ಕುಸಿಯುತಿರುವ ಮೌಲ್ಯ

ಅಂಕೆ ಇಲ್ಲದ ಸಮಾಜ: ಅಂಕ ಸಾಮ್ರಾಟರ ನಡುವೆ ಕುಸಿಯುತಿರುವ ಮೌಲ್ಯ

ಭಾರತದ ಶಿಕ್ಷಣ ವ್ಯವಸ್ಥೆ ಕ್ರಮೇಣ ಅಂಕಗಳಿಕೆಯ ಸಂತೆಯಾಗುತ್ತಿದ್ದು ಭವಿಷ್ಯ ನಿರ್ಮಾಣದ ಮಾರುಕಟ್ಟೆ ವೇದಿಕೆಯಾಗುತ್ತಿರುವುದು ದುರಂತವಾದರೂ ಸತ್ಯ. ಒಂದು ಸುಭದ್ರ ಸಂವೇದನಾಶೀಲ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಪ್ರಥಮ ಸೋಪಾನವಾಗಬೇಕು ಎನ್ನುವ ವಾಸ್ತವವನ್ನೇ ನಮ್ಮ ಆಳುವ ವರ್ಗಗಳು ಮರೆತಂತಿದೆ. ಹಾಗಾಗಿಯೇ ಶಿಕ್ಷಣ ವ್ಯಕ್ತಿ , ವ್ಯಷ್ಟಿ, ಸಮಷ್ಟಿಯ ಮೌಲ್ಯಯುತ ಅಭ್ಯುದಯದ ಸಾರಥ್ಯ ವಹಿಸುವ ಬದಲು ಮಾರುಕಟ್ಟೆಯ ಜಗನ್ನಾಥ ರಥದ ಚಕ್ರಗಳಾಗಿ ಮುನ್ನಡೆಯುತ್ತಿದೆ. ಪ್ರತಿವರ್ಷ ಹತ್ತನೆಯ ತರಗತಿ ಮತ್ತು ಪಿಯುಸಿ ಫಲಿತಾಂಶಗಳು ಪ್ರಕಟವಾಗುವ ವೇಳೆಗೆ ಇಡೀ ರಾಜ್ಯದಲ್ಲಿ ಸಂಚಲನ ಮೂಡುತ್ತದೆ. ಮಾಧ್ಯಮಗಳು […]

ವಿಶ್ವವಿದ್ಯಾಲಯಗಳನ್ನು ಪಳಗಿಸುವ ಪ್ರಯತ್ನಗಳು

ವಿಶ್ವವಿದ್ಯಾಲಯಗಳನ್ನು ಪಳಗಿಸುವ ಪ್ರಯತ್ನಗಳು

ಸಮಾಜ ವಿಜ್ನಾನ ಸಂಶೋಧನೆಗೆ ನಿಧಿ ಕಡಿತ ಮಾಡಿರುವುದು ದೂರದೃಷ್ಟಿ ಇಲ್ಲದ ಕ್ರಮ. ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೇಲೆ ಅದರಲ್ಲೂ ಅದರ ಸಮಾಜ ವಿಜ್ನಾನದ ಶಿಕ್ಷಣದ ಮೇಲೆ ಇದೀಗ ಮತ್ತೊಂದು ಪ್ರಹಾರ ನಡೆದಿದೆ. ವಿಶ್ವವಿದ್ಯಾಲಯ ಅನುದಾನ ಅಯೋಗ (ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್- ಯು.ಜಿ.ಸಿ)ವು ಸಮಾಜ ವಿಜ್ನಾನ ಶಿಕ್ಷಣಕ್ಕೆ ಕೊಡುತ್ತಿದ್ದ ಅನುದಾನವನ್ನು ಕಡಿತ ಮಾಡಿದೆ. ಪಂಚವಾರ್ಷಿಕ ಯೋಜನೆಗಳು ಸ್ಥಗಿತಗೊಂಡ ಮೇಲೆ  ೧೧ನೇ ಪಂಚವಾರ್ಷಿಕ ಯೋಜನೆಯಡಿ ಯುಜಿಸಿಯು ಸ್ಥಾಪಿಸಿದ್ದ ಹಲವಾರು ಸಮಾಜ ವಿಜ್ನಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಹಣಕಾಸಿನ ಕೊರತೆಯಿಂದ ಕೊನೆಯುಸಿರೆಳೆಯುತ್ತಿವೆ. […]

‘ಸ್ವಚ್ಚ ಭಾರತ’ದ ಮಲಿನ ಮನಸುಗಳು ಕುಸಿದ ಮೌಲ್ಯಗಳು

‘ಸ್ವಚ್ಚ ಭಾರತ’ದ  ಮಲಿನ ಮನಸುಗಳು ಕುಸಿದ ಮೌಲ್ಯಗಳು

ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆಯೋ ಇಲ್ಲವೋ ಎನ್ನುವ ಪ್ರಶ್ನೆ ಕಾಡದಿದ್ದರೂ ಒಂದು ಪ್ರಬುದ್ಧ ಹಾಗೂ ಪ್ರಜ್ಞಾವಂತ ಸಮಾಜವನ್ನು ನಾವು ಎತ್ತ ಸಾಗುತ್ತಿದ್ದೇವೆ ? ಎಂಬ ಪ್ರಶ್ನೆ ಕಾಡಲೇಬೇಕು. ಇಲ್ಲವಾದಲ್ಲಿ ನಾವು ನಡೆವ ಹಾದಿಯೇ ಅಂತಿಮ ಸತ್ಯ ಎನ್ನುವ ಅಹಮಿಕೆ ಬೆಳೆಯುತ್ತದೆ. ಈ ಅಹಮಿಕೆಯೇ ಮುಂದಿನ ಎಲ್ಲ ಅನಾಹುತಗಳಿಗೂ ಕಾರಣವಾಗುತ್ತದೆ. ಕಳೆದ 25 ವರ್ಷಗಳ ಭಾರತದ ರಾಜಕೀಯ ಬೆಳವಣಿಗೆಗಳು ಇದನ್ನು ಸ್ಪಷ್ಟಪಡಿಸುತ್ತವೆ. ಹೌದು ನಾವು ಎತ್ತ ಸಾಗುತ್ತಿದ್ದೇವೆ ? ಮಾನವನ ಬದುಕಿಗೆ ಬೇಕಿರುವುದು ಪ್ರಜ್ಞೆ. ಸುಪ್ತ ಪ್ರಜ್ಞೆಯಾದರೂ ಅಡ್ಡಿಯಿಲ್ಲ […]

ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು (ಭಾಗ 2)

ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು (ಭಾಗ 2)

ಜರ್ಮನಿಯ ‘ಬಿಲ್ಡಂಗ್’ ಸಂಪ್ರದಾಯದಲ್ಲಿ ಅಡಕವಾಗಿರುವ ಆದರ್ಶ ಒಲವಿನ ಶಿಕ್ಷಣದ ಕುರಿತಾಗಿ ಪರ್ಯಾಲೋಚನೆ ಮಾಡಲು ಇದೇ ಮಾದರಿಯ ಡಯಲೆಕ್ಟ್ ಪ್ರಸ್ತಾಪವು ಪ್ರಸಕ್ತ ಸಂದರ್ಭದಲ್ಲಿ ಸೂಕ್ತವಾಗಿದೆ. ಹೆಗೆಲ್ ಮತ್ತು ಮಾರ್ಕ್ಸ್ ರಂತಹ ಚಿಂತಕರು ಈ ಸಂಪ್ರದಾಯವನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ ಹೆಗೆಲ್ ಚೈತನ್ಯದ ರೂಪಿಸುವಿಕೆ ಮತ್ತು ಅಭಿವೃದ್ಧಿಯ ಪ್ರಕ್ರಿಯೆಯನ್ನು ಐತಿಹಾಸಿಕವೆಂದು ಒತ್ತಿ ಹೇಳುತ್ತಾನೆ. ಯುಕ್ತ ರೀತಿಯಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳು ಇದರ ಕುರಿತಾಗಿ ಮತ್ತಷ್ಟು ಆಳವಾಗಿ ಸಂಶೋದನೆ ನಡೆಸಬೇಕೆಂದು ಮತ್ತು ಸೂಕ್ತವಾದ ಸಂಪ್ರದಾಯವನ್ನು ತಮ್ಮದಾಗಿಸಿಕೊಳ್ಳಲು ಅಧ್ಯಯನ ನಡೆಸಬೇಕೆಂದು ಜೊತೆಗೆ ವಿಮರ್ಶಿಸುತ್ತಾ ಅದನ್ನು ಮೀರಿ ಮುಂದುವರೆಯಬೇಕೆಂದು […]

ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು : ಭಾಗ -1

ವಿಮರ್ಶಾತ್ಮಕ ಸಿದ್ಧಾಂತಗಳ ಶಿಕ್ಷಣದೆಡೆಗಿನ ಹೆಜ್ಜೆಗಳು : ಭಾಗ -1

ನಮ್ಮ ಕಾಲಘಟ್ಟವು ಹೊಸ ಯುಗದ ಹುಟ್ಟು ಮತ್ತು ಹೊಸ ಕಾಲಮಾನಕ್ಕೆ ಪರಿವರ್ತನೆಗೊಳ್ಳುವ ಸಂಕ್ರಮಣದ ಕ್ಷಣಗಳು ಎಂದು ಅರಿಯಲು ಕಷ್ಟಪಡಬೇಕಿಲ್ಲ. ಹೊಸ ಚೈತನ್ಯದ ಹುಟ್ಟಿನ ಮೂಲಕ ಈ ಜಗತ್ತು ಇದುವರೆಗೆ ಚಾಲ್ತಿಯಲ್ಲಿದ್ದ ತನ್ನ ಅಸ್ತಿತ್ವ ಮತ್ತು ಭ್ರಮೆಗಳನ್ನು ಗತಕಾಲದಲ್ಲಿ ಹುದುಗಿಸುವುದರಲ್ಲಿ ಯಶಸ್ವಿಯಾಗಿದೆ. ತನಗೆ ತಾನು ಹೊಸ ಸ್ವರೂಪವನ್ನು ಕಟ್ಟಿಕೊಳ್ಳಲು ನಿರತವಾಗಿದೆ. ಖಚಿತವಾಗಿ ಹೇಳಬೇಕೆಂದರೆ ಎಂದಿಗೂ ನಿಷ್ಕಿಯವಾಗದ ಈ ಚೈತನ್ಯವು ಪ್ರಗತಿಯ ಪಥದೊಂದಿಗೆ ಸದಾ ತೊಡಗಿಸಿಕೊಂಡಿರುತ್ತದೆ. ತನಗೆ ತಾನು ಸ್ವತಃ ತರಬೇತಿಗೊಳ್ಳುವ ಈ ಚೈತನ್ಯವು ಹೊಸ ಸ್ವರೂಪದೆಡೆಗೆ ನಿಧಾನವಾಗಿ, ನಿಶ್ಚಲವಾಗಿ […]

ಸುಳ್ಳುಗಳ ವಿಜೃಂಬಣೆ ಮತ್ತು ‘ಬಹುತ್ವ’ ದ ನಾಶ : ಸಮಕಾಲೀನ ಸವಾಲುಗಳು

ಸುಳ್ಳುಗಳ ವಿಜೃಂಬಣೆ ಮತ್ತು ‘ಬಹುತ್ವ’ ದ ನಾಶ : ಸಮಕಾಲೀನ ಸವಾಲುಗಳು

There is little difference in people, but that little difference makes a big difference. The little difference is attitude and big difference is whether it is positive or negative –  W.Clement stone ಅಸಮಾನತೆಯು ಹಿಂದೂಯಿಸಂನ ಆತ್ಮವಾಗಿದೆ. ಸಾಮಾಜಿಕ ಉಪಯುಕ್ತತೆಯ ಫಲಾಫಲವನ್ನು ಪರಾಮರ್ಶಿಸಲು ಸೋಲುವ ಹಿಂದೂಯಿಸಂ ಫಿಲಾಸಫಿಯು ವೈಯುಕ್ತಿಕ ನ್ಯಾಯಪರತೆಯ ಫಲಾಫಲವನ್ನು ಪರಾಮರ್ಶಿಸಲು ಸಹ ಸೋತಿದೆ — ಬಿ.ಆರ್. ಆಂಬೇಡ್ಕರ್ ಮತ್ತೆ ಇಂದು ರಾಷ್ಟ್ರೀಯತೆ ಸುದ್ದಿಯಲ್ಲಿದೆ. […]

ಜ್ಞಾನಶಾಸ್ತ್ರೀಯ ಅಸಹಕಾರ ಮತ್ತು ನಿರ್ವಸಾಹತೀಯ ಸ್ವಾತಂತ್ರ್ಯ-4

ಜ್ಞಾನಶಾಸ್ತ್ರೀಯ ಅಸಹಕಾರ ಮತ್ತು ನಿರ್ವಸಾಹತೀಯ ಸ್ವಾತಂತ್ರ್ಯ-4

ಎಲ್ಲಾ ಮೂರು ದೃಷ್ಟಾಂತ (ಮತ್ತು ನಾಲ್ಕನೆಯದಾಗಿ ನನ್ನದೇ ವಾದದಲ್ಲಿ ಕೂಡ) ಜ್ಞಾನದ ಭೌಗೋಳಿ-ರಾಜಕಾರಣವನ್ನು ಒತ್ತುಕೊಟ್ಟು ಗುರುತಿಸಿದ್ದೇನೆ. ತುಂಬಾ ತೀವ್ರವಾಗಿ ಅದು ನನ್ನನ್ನು ಕಾಡಿದೆ. ಇದರ ಜೊತೆಗೆ ಜ್ಞಾನದ ದೇಹ-ರಾಜಕಾರಣ ಕೂಡ ಪ್ರಸ್ತಾಪವಾಗಿದೆ. ಜ್ಞಾನದ ದೇಹ-ರಾಜಕಾರಣ ಎಂದರೆ ಏನು? ಇದನ್ನು ಖಚಿತವಾಗಿ ವಿವರಿಸಲು ಫ್ರಾನ್ಜ್ ಫ್ಯನಾನ್ ಸಹಾಯ ಪಡೆಯುವುದೇ ಒಳ್ಳೆಯದು. ಹೋಮಿ ಬಾಬಾ ಅವರ ಫ್ಯನಾನ್ ಓದನ್ನು ಎತ್ತಿಕೊಳ್ಳದೆ ಲೀವಿಸ್ ಗೋರ್ಡಾನ್ ಮತ್ತು ಸಿಲ್ವಿಯ ವಿಂಟರ್ ಇವರ ಫ್ಯನಾನ್ ಓದುಗಳನ್ನು ಎತ್ತಿಕೊಂಡು ಅದನ್ನು ವಿವರಿಸುತ್ತೇನೆ. ಮೊದಲಿಗೆ ಇದು ನನ್ನದಲ್ಲ […]

1 2 3 4