ಪರಿಸರ

ಪರಿಸರ

ದುರ್ಯೋಧನ ಸಾಮ್ರಾಜ್ಯಶಾಹಿ ದೊರೆಗಳ ಪಿತಾಮಹ

ದುರ್ಯೋಧನ ಸಾಮ್ರಾಜ್ಯಶಾಹಿ ದೊರೆಗಳ ಪಿತಾಮಹ

ಅಮ್ಮ ಭೂಮಿತಾಯಿ ನಿನ್ನನ್ನು ತುಳಿಯುತ್ತಿರುವುದಕ್ಕಾಗಿ ಕ್ಷಮೆ ಇರಲಿ ಎಂದು ಹೆಜ್ಜೆ ಇಡುವ ಮುನ್ನ ಶರಣು ಮಾಡಿದವರು ನಮ್ಮ ಪೂರ್ವಿಕರು. ಕುರಿತೋದದ ಈ ಜನ ಭೂಮಿಯನ್ನು ತಾಯಿ ಎಂದು ಭಾವಿಸಿ ಪೂಜೆಮಾಡಿದರು. ಹಾಸಿಗೆ ಇದ್ದಷ್ಟು ಕಾಲುಚಾಚಿ ತಾವೂ ಬದುಕಿದರು. ತಮ್ಮ ನೆರೆ ಹೊರೆಯವರನ್ನು ಬದುಕಲು ಬಿಟ್ಟರು. ಸರಳ ಜೀವನ, ಉನ್ನತ ಚಿಂತನ ಎಂಬ ಗಾಂಧಿ ತಾತ್ವಿಕತೆಗೆ ಮೈಯಾಂತವರು. ಆದರೆ ಇಂದಿನ ಪಿಹಿಕಾಭ್ಯುದಯಾಕಾಂಕ್ಷಿ ಮನುಷ್ಯ ಸಂಪನ್ಮೂಲಗಳಿಗಾಗಿ ‘ಇದು ವಡವ್ಯಲ್ಲೋ ಮಗನೆ ಉಸಿರಿದ್ದೊಡಲಂತ’ (ದ.ರಾ. ಬೇಂದ್ರೆ) ಭೂಮ್ತಾಯಿ ಚೀರಿದರೂ ಬಿಡದೆ ಕಡಿತಾನೆ, […]

ವಿಶ್ವ ವನ್ಯಜೀವಿ ನಿಧಿಯ ಎಚ್ಚರಿಕೆ ಘಂಟೆ

ವಿಶ್ವ ವನ್ಯಜೀವಿ ನಿಧಿಯ ಎಚ್ಚರಿಕೆ ಘಂಟೆ

ಇಂದು ಕೊಡ ನೀರಿಗಾಗಿ ರಾಜ್ಯ ತಲ್ಲಣಿಸುತ್ತಿದೆ; ದೇಶ ಕೂಡ ತಲ್ಲಣಿಸುತ್ತಿದೆ. ‘ಭೂಮು ತೂಕದ ಬಿಲ್ಲು ಆಕಾಸು ತೂಕದ ಬಾಣ’ ಹೊತ್ತು ಜಗತ್ತು ಗೆಲ್ಲಲು ಹೊರಟ ನರಮನುಷ್ಯನಿಗೆ ಅತಿವೃಷ್ಟಿ ಅನಾವೃಷ್ಟಿ ಎಂಬಿವು ಆಗಾಗ ಚಾಟಿ ಏಟು ನೀಡಿರುವುದುಂಟು. 1931ರಲ್ಲಿ ಇಂದಿನ ಉಷ್ಣಾಂಶವಿತ್ತಂತೆ. ಬೆಂಗಳೂರು 2016ರಲ್ಲಿ ಅದನ್ನು ಮೀರಿಸುತ್ತಿದೆ. ಆದರೆ ಇದು ಆಗಿನಂತೆ ಬಂದು ಹೋಗುವ ಅನಾವೃಷ್ಟಿ ಬೆದರಿಕೆಯಲ್ಲ. ಇಲ್ಲೆ ಬಿಸಿಲು ಮಾರಿಯಾಗಿ ನಗರ ಹಳ್ಳಿಗಳಲ್ಲಿ ನಿಂತು ಹಟಮಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಇದು ಮಣ್ಣೆಂಬ ಭೂಮಿಯನ್ನು ಸಿಮೆಂಟು ಕಬ್ಬಿಣವಾಗಿ ಪರಿವರ್ತಿಸಿದ […]

ಬಿಬಿಎಂಪಿ ಕಸ ನಿಂತರು ಸಮಸ್ಯೆ ಬಗೆಹರಿದಿಲ್ಲ

ಬಿಬಿಎಂಪಿ ಕಸ ನಿಂತರು ಸಮಸ್ಯೆ ಬಗೆಹರಿದಿಲ್ಲ

ಒಂದು ದಶಕದಿಂದ ಜನರ ನಿದ್ದೆಗೆಡಿಸಿದ್ದ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ, ಕಾಮನಅಗ್ರಹಾರ, ದೊಡ್ಡಮಂಕಲಾಳ, ಖಾಲಿಪಾಳ್ಯ,ಕಾಡತಿಪ್ಪೂರು, ತಣ್ಣೀರನಹಳ್ಳಿ, ಸೇರಿದಂತೆ ಈ ಭಾಗದ ಜನರ ನಿದ್ದೆಗೆಡೆಸಿದ್ದ ಬಿಬಿಎಂಪಿ ಕಸ ವಿಲೇವಾರಿ ಘಟಕ ಟೆರ್ರಾಫರ್ಮ್‌ ಮಾ.31ಕ್ಕೆ ಬಂದ್‌ ಆಗಿದೆ. ಪ್ರತಿನಿತ್ಯ 250ಕ್ಕೂ ಹೆಚ್ಚು ಲಾರಿಗಳಲ್ಲಿ ಸಾವಿರಾರು ಟನ್‌ ಬಿಬಿಎಂಪಿ ಕಸ ವಿಲೇವಾರಿ  ಮಾಡುತ್ತಿದ್ದ ಟೆರ್ರಾಫರ್ಮ್‌ ಹಣದ ಆಸೆಗೆ ಒಳಗಾಗಿ ತಮ್ಮ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿಬಿಎಂಪಿಯಿಂದ ಕಸ ತರಿಸಿಕೊಂಡು ಅವೈಜ್ಞಾನಿಕ ವಿಧಾನದಲ್ಲಿ ಸಂಗ್ರಹಣೆಗೆ ಮುಂದಾಗಿದ್ದೇ ಟೆರ್ರಾಫರ್ಮ್‌ ಘಟಕ ಬಾಗಿಲು ಮುಚ್ಚುವ […]

ಗುಬ್ಬಚ್ಚಿಗಳೊಂದಿಗೆ…

ಗುಬ್ಬಚ್ಚಿಗಳೊಂದಿಗೆ…

ನಮ್ಮ ಮನೆಯ ಕಂಪೌಂಡ್‍ನಲ್ಲಿ ಪುಟ್ಟ ಕೈತೋಟ ಮಾಡಿಕೊಂಡಿದ್ದೇವೆ. ನನ್ನ ಮನೆಯಾಕೆಗೆ ತೋಟದಲ್ಲಿ ವಿವಿಧ ಗಿಡಗಳನ್ನು ಬೆಳೆಸುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಅಷ್ಟೇ ಪುಟ್ಟ ತೋಟದಲ್ಲಿ ದಾಳಿಂಬೆ ಗಿಡ, ದಾಸವಾಳ ಗಿಡಗಳು ಎತ್ತರಕ್ಕೆ ಬೆಳೆದು ಮರದಂಟಾಗಿಬಿಟ್ಟಿವೆ. ಗಿಡಗಳು ಎತ್ತರವಾಗಿರುವುದರಿಂದಲೂ ಸ್ವಲ್ಪ ನೆರಳು ತಂಪು ಇರುವುದರಿಂದಲೋ ಏನೋ ನಮ್ಮ ತೋಟಕ್ಕೆ ಪುಟ್ಟ ಚಿಟ್ಟೆಗಳಿಂದ ಹಿಡಿದು ವಿವಿಧ ಪಕ್ಷಿಗಳೂ ಬಂದು ಕೂಡುತ್ತವೆ. ವಿಪರೀತ ಗಲಾಟೆಯನ್ನೂ ಮಾಡುತ್ತವೆ. ಅವುಗಳ ಗಲಾಟೆ, ಕೂಗು ಕೇಳೋದೇ ಚಂದ. ಗಿಡಗಳು ಬೆಳೆದಾಗಿನಿಂದ ಅದೆಲ್ಲಿಂದಲೋ ಗುಬ್ಬಿಗಳ ಸಂಸಾರವೂ ಪ್ರತ್ಯಕ್ಷವಾಗಿವೆ. ಮೊದ […]

ತಲೆಚಿಟ್ಟು ಹಿಡಿಸುವ ಕ್ರಿಕೆಟ್ ಹುಳು

ತಲೆಚಿಟ್ಟು ಹಿಡಿಸುವ ಕ್ರಿಕೆಟ್ ಹುಳು

ಸಂಜೆ ಟಿವಿ ನೋಡುತ್ತ ಕುಳಿತಾಗ ಯಾವುದೋ ಹುಳು ಚಿರ್ರ್, ಚಿರ್ರ್ ಎಂದು ಕಿವಿ ಗುಂಯ್‍ಗುಡುವಂತೆ ಚೀರುವುದು ಕೇಳಿಸಿತು. ಸ್ವಲ್ಪ ಹೊತ್ತು ಸುಮ್ಮನಾಗುವುದು ನಂತರ ಮತ್ತೆ ಅದೆ ಕೀರಲು ಶಬ್ದ. ಕಿವಿ ಗುಂಯ್‍ಗುಡತೊಡಗಿದಾಗ, ಇದಾವ ಕೀಟ ನೋಡಿಯೇಬಿಡೋಣ ಎಂದು ಹುಡುಕತೊಡಗಿದೆ. ಕೆಲವೊಮ್ಮೆ ರಾತ್ರಿ ಇದು ಕೀರಲತೊಡಗಿದರೆ ನಿದ್ರಾಭಂಗವಾಗಿ ತಲೆಚಿಟ್ಟು ಹಿಡಿಯುತ್ತಿತ್ತು. ಈ ಬಾರಿ ಇದರ ಮೂಲ ಪತ್ತೆಮಾಡಿಯೇಬಿಡೋಣ ಎಂದು ಹುಡುಕಾಡಿದೆ. ಶಬ್ದ ಬಾಗಿಲ ಬಳಿ ಕೇಳಿಬರುವುದೆಂದು ಅನಿಸಿತು. ಅಲ್ಲೆಲ್ಲ ಹುಡುಕಾಡಿದರೂ ಉಹುಂ ಪತ್ತೆಯೇ ಇಲ್ಲ. ಮತ್ತೆ ಚಿರ್ರ್ ಚಿರ್ರ್ […]

ಹುಚ್ಚು ಮಗ ಉಂಡ್ರೂ ಕೇಡೇ, ಹುಚ್ಚು ಮಳೆ ಹೊಡೆದ್ರೂ ಕೇಡೇ..

ಹುಚ್ಚು ಮಗ ಉಂಡ್ರೂ ಕೇಡೇ, ಹುಚ್ಚು ಮಳೆ ಹೊಡೆದ್ರೂ ಕೇಡೇ..

ಯಾಕೋ ಬೆಳಗ್ಗಿಂದ ನಮ್ಮ ಶಿವಮೊಗ್ಗದ ಲಲಿತ ದೊಡ್ಡಮ್ಮ ಸಿಡಿ ಸಿಡಿ ಅಂತ ಅವರ ಮಗ ವಿಭುವಿನ ಮೇಲೆ ಎಗರಿ ಬೀಳ್ತಿದ್ರು. ನೋಡೋವರ್ಗೂ ನೋಡಿದ ನಾನು ಮತ್ತೆ ಇನ್ನೊಬ್ಬ ದಾಯಾದಿ ದೇವಿಪ್ರಸಾದ್… “ಬಿಡಿ ದೊಡ್ಡಮ್ಮ. ಅದೇನಾಗ್ಹೋಯ್ತು ಅಂತ ಅಷ್ಟೊಂದು ಕೂಗಾಡ್ತೀರ. ಮಗ ಉಂಡ್ರೆ ಕೇಡಿಲ್ವಂತೆ, ಮಳೆ ಬಂದ್ರೆ ಕೇಡಿಲ್ವಂತೆ,’’ ಅಂತ ವಹಿಸ್ಕೊಂಡು ಅಂದ್ವಿ. ಹುಟ್ಟಿದಾಗಿನಿಂದ ಹಿಂದೂ ಮುಂದೂ ನೋಡದೆ ಮನಸ್ಸಿಗೆ ಬಂದಿದ್ದನ್ನು ರಪ್ಪಂತ ಹೇಳೋ ದೊಡ್ಡಮ್ಮ, “ಮುಚ್ರೊ ಬಾಯಿ. ನಂಗೇ ಹೇಳ್ಕೊಡ್ತೀರಾ? ಹುಚ್ಚು ಮಗ ಉಂಡ್ರೂ ಕೇಡೇ, ಹುಚ್ಚು […]

ಕೂಡ್ಲಿಗಿ ಕೆರೆಯಲ್ಲೀಗ ಪಕ್ಷಿಗಳ ಕಲರವ

ಕೂಡ್ಲಿಗಿ ಕೆರೆಯಲ್ಲೀಗ ಪಕ್ಷಿಗಳ ಕಲರವ

ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆಯಲ್ಲೀಗ ಸಾವಿರಾರು ದೇಶಿ ಪಕ್ಷಿಗಳು ಬಂದು ನೆಲೆಸಿವೆ. ಚಳಿಗಾಲದ ಅತಿಥಿಗಳಾಗಿ ಆಗಮಿಸಿರುವ ಇವು ಇದೇ ಮೊದಲ ಬಾರಿ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಬೀಡು ಬಿಟ್ಟಿರುವುದು ಪಕ್ಷಿಪ್ರೇಮಿಗಳಿಗೆ ಸಂತಸ ತಂದಿದೆ. ಪಟ್ಟಣದ ಹೊರವಲಯದಲ್ಲಿರುವ ದೊಡ್ಡಕೆರೆ ಅಂಚಿನಲ್ಲಿ ಬರುವ ಕೆರೆಕಾವಲರಹಟ್ಟಿ ಗ್ರಾಮಕ್ಕೆ ಹೊಂದಿಕೊಂಡಂತೆಯೇ ಇರುವ ಕೆರೆ ಪುರಾತನ ಕಾಲದ್ದು. ಪಾಳೆಯಗಾರರು ಕೆರೆಯನ್ನು ಕಾವಲು ಕಾಯಲೆಂದೇ ಕಾವಲುಗಾರರನ್ನು ನೇಮಿಸಿದ್ದರು. ಅವರು ವಸತಿ ಮಾಡಿದ ಪ್ರದೇಶವೇ ಕೆರೆ ಕಾವಲರಹಟ್ಟಿ. ಇದೀಗ ಈ ಗ್ರಾಮ ದೊಡ್ಡಗ್ರಾಮವಾಗಿ ಬೆಳೆದಿದೆ. ಈ ಗ್ರಾಮಕ್ಕೆ […]

ಜೀವ ಜಗತ್ತು-4: ಸಿಂಹದ ಗುಹೆಯೊಳಗೆ…

ಜೀವ ಜಗತ್ತು-4: ಸಿಂಹದ ಗುಹೆಯೊಳಗೆ…

ಮನುಷ್ಯನ ಸಾಮ್ರಾಜ್ಯಶಾಹೀ ತನದ ಪರಮಾವಧಿಗಳು ಯಾರಿಗೆ ತಾನೆ ಗೊತ್ತಿಲ್ಲ. ಅದು ಅವನ ವರ್ಣತಂತುಗಳಲ್ಲಿ ಆಳವಾಗಿ ಬೇರು ಬಿಟ್ಟುರುವಂತದ್ದು. ಆ ಬೇರುಗಳ ಆಳ ಬಹುಶಃ ಸಮಾಜವಾದದ ಬಗ್ಗೆ ಮಾತನಾಡುವವರ ಅರಿವಿಗೂ ಸಿಗದಷ್ಟು ಅಥವಾ ಹಿಡಿತಕ್ಕೂ ಸಿಗದಷ್ಟು ಒಳಗೆ ಇಳಿದುಬಿಟ್ಟಿದೆÉ. ಅಂತಹ ಬೇರುಗಳ ಅತಿ ಸೂಕ್ಷ್ಮ ರೋಮಗಳು ಸಮಾಜವಾದದ ಒಡಲೊಳಗೂ ಇಳಿದು ಬಲಿಯುತ್ತಿರುವ ಕುರುಹುಗಳೂ ನಮ್ಮ ನಡುವೆ ಹೇರಳವಾಗಿ ಕಾಣಸಿಗುತ್ತವೆ. ಇನ್ನಿಲ್ಲದಂತೆ ದಂಡೆತ್ತಿ ಸಾಮ್ರಾಜ್ಯ ವಿಸ್ತರಿಸುವ, ತನ್ನ ಬೇರುಗಳ ಹಿತಾಸಕ್ತಿಗಾಗಿ ಮಿಕ್ಕೆಲ್ಲವನ್ನು ನಿಷ್ಕಾರುಣ್ಯವಾಗಿ ದಮನಿಸುವ ಹಪಾಹಪಿ ಅನಾದಿ ಕಾಲದಿಂದಲೂ ನಡೆದುಕೊಂಡು […]

ಹುಲಿರಾಯನ ಇಲಿಯ ಬೇಟೆ

ಹುಲಿರಾಯನ ಇಲಿಯ ಬೇಟೆ

‘ಏ ಇಲ್ಲೈತೆ ನೋಡು, ಇಲ್ಲಿ ಓಡಿಹೋಯ್ತು’ ಅಂತ ನಾನು ಚೀರಾಡುತ್ತಿದ್ದರೆ, ‘ಇಲ್ರಿ ಇದ ಈಗ ನನ್ ಕಾಲ ಹತ್ರನಾ  ಬಂದಿತ್ತು, ಈಗ ಒಮ್ಮೆಲೆ ಮಾಯಾಗೈತಿ, ತಡ್ರಿ ಇಲ್ಲೇನರ ಹೋಗೈತೇನಂತ ನೋಡ್ತೀನಿ’ ಅಂತ ನನ್ನ ಪತ್ನಿ  ಪರದಾಡುತ್ತಿದ್ದಳು. ನಾವಿಬ್ಬರು ಸೇರಿ ಮನೆಯಲ್ಲಿ ಬಹಳ ದಿನಗಳಿಂದ ಸೇರಿಕೊಂಡು ಚಳ್ಳೆಹಣ್ಣು ತಿನ್ನಿಸುತ್ತಿದ್ದ  ಇಲಿರಾಯನನ್ನು ಹುಡುಕುತ್ತಿದ್ದೆವು. ಅದಾವ ಮಾಯದಿಂದ ಇಲಿ ನಮ್ಮ ಮನೆ ಸೇರಿಕೊಂಡಿತೋ ಗೊತ್ತಿಲ್ಲ. ಮೊದಲಿಗೆ ಅಲ್ಲಲ್ಲಿ ಚಿಪ್ಸ್ ಪೆಟ್ಟಣಗಳು  ಹರಿದದ್ದು, ರಾತ್ರಿ ಚೆನ್ನಾಗಿದ್ದ ಬ್ರೆಡ್ ಬೆಳಿಗ್ಗೆ ಅರ್ಧ ಆಗಿರೋದು ನೋಡಿ […]

ಬ್ಯಾಗ್ ವರ್ಮ್ ಎಂಬ ಸಂಚಿ ಹುಳು

ಬ್ಯಾಗ್ ವರ್ಮ್ ಎಂಬ ಸಂಚಿ ಹುಳು

       ಈ ಕೀಟ ಲೋಕವೇ ಅದ್ಭುತ. ಕಣ್ಣಿಗೆ ಮ್ಯಾಕ್ರೊ ಲೆನ್ಸ್ ರೀತಿಯಲ್ಲಿ ಚಿಕ್ಕವೆಲ್ಲ ದೊಡ್ಡವಾಗಿ ಕಾಣುವ ಶಕ್ತಿಯಿದ್ದರೆ, ಇನ್ನೂ ಎಂತೆಂತಹ ಅದ್ಭುತಗಳು ಕಣ್ಣಿಗೆ ಕಾಣಿಸುತ್ತಿದ್ದವೋ ಏನೋ ? ಆದರೆ ಕೆಮರಾ ತಂತ್ರಜ್ಞಾನ ಅಂತಹ ಅವಕಾಶವನ್ನೂ ಒದಗಿಸಿದೆ ಆ ಮಾತು ಬೇರೆ. ನಾನು ಹೇಳುತ್ತಿರುವುದು ಪುಟ್ಟ ಕೀಟಗಳ ಲೋಕದಲ್ಲಿ ಏನೆಲ್ಲ ನಡೆಯಬಹುದು ಎಂಬ ಬಗ್ಗೆ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ನಮ್ಮ ಮನೆಯ ಸುತ್ತಲೂ ಅಲ್ಪ ಜಾಗದಲ್ಲಿಯೇ ನಮ್ಮ ಮನೆಯಾಕೆ ಕೈತೋಟವನ್ನು ಮಾಡಿದ್ದಾಳೆ. ಕೈತೋಟ ಪುಟ್ಟದಾದರೂ ನನ್ನ […]