ಪರಿಸರ

ಪರಿಸರ

ಅರಣ್ಯ ಹರಣಗಳು ದೇಶದ ಹಣೆ ಬರಹಗಳು

ಅರಣ್ಯ ಹರಣಗಳು ದೇಶದ ಹಣೆ ಬರಹಗಳು

ಅಮೆರಿಕೆಯು ಉದ್ಯಮಿ ಪ್ರಭುವನ್ನು ಆರಿಸಿಕೊಂಡ ಮೇಲೆ 196 ದೇಶಗಳ ಪ್ಯಾರಿಸ್ ಕೂಟ ವಿಘಟನೆಯಲ್ಲಿದೆ. ಇದು ಅವರವರ ಮನೆಯನ್ನು ಅವರೇ ಸರಿಪಡಿಸಿಕೊಳ್ಳುವುದನ್ನು ಹೇಳುತ್ತಿದೆ. ಅಂದು ಇಲ್ಲಿ ವ್ಯಾಪಾರದ ಆಂಗ್ಲರು 1865ರಲ್ಲಿ ಅರಣ್ಯ ಇಲಾಖೆಯನ್ನು ಸ್ಥಾಪಿಸಿದಾಗ ಕಡಿಯುವುದು ನೆಡುವುದು ಒಂದು ಅರಣ್ಯ ಕೃಷಿಯಾಗಿತ್ತು. ಗಣಿಗಾರಿಕೆ ಇದರೊಡನೆ ಸೇರಿ ಭಾರತವಿಂದು ತಳವಿಲ್ಲದ ನೀರಗಿಂಡಿಯಾಗಿದೆ. ಮೂರು ದಿನದಿಂದಲೂ ನಾಗರಹೊಳೆ ಅಡವಿ ಹೊತ್ತಿ ಉರಿಯುತ್ತಿದೆ. ಗಾರ್ಡ್ ಒಬ್ಬನು ದಹನಕ್ಕೆ ಸಿಕ್ಕಿ ಪ್ರಾಣ ಬಿಡುವ ಸ್ಥಿತಿ ಅಂದು ಖಾಂಡವ ದಹನವನ್ನು ಆಳುವ ಪ್ರತಿನಿಧಿ ಅರ್ಜುನ ನಿಂತು […]

ಕೂಡ್ಲಿಗಿ ಜನರ ಕಲ್ಪವೃಕ್ಷ ‘ಹುಣಸೆ ಮರ’

ಕೂಡ್ಲಿಗಿ ಜನರ ಕಲ್ಪವೃಕ್ಷ ‘ಹುಣಸೆ ಮರ’

ಸ್ನೇಹಿತರೆ, ಕೂಡ್ಲಿಗಿ ತಾಲೂಕು ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದ್ದರೂ ತೆರೆಯ ಮರೆಯಲ್ಲಿ ಹೇಗೆ ಹುದುಗಿಹೋಗಿದೆಯೋ, ಹುಣಸೆಹಣ್ಣಿನ ಬೆಳೆಯಲ್ಲಿಯೂ ಸಾಕಷ್ಟು ಶ್ರಮವಿದ್ದರೂ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಮೂಲ ಹೆಸರು ಮರೆಯಾಗಿದೆ. ತಾಲೂಕಿನಲ್ಲಿ ಅಂದಾಜು ೧ ಲಕ್ಷ ಹುಣಸೆ ಮರಳಿವೆ. ಪ್ರತಿ ಗ್ರಾಮಗಳ ಹಾಗೂ ಗ್ರಾಮಗಳ ಮಾರ್ಗದಲ್ಲಿ ಹುಣಸೆ ಮರಗಳಿವೆ. ಇವಕ್ಕೆ ಯಾವುದೇ ಆರೈಕೆ ಬೇಡದೆ ರೈತರಿಗೆ ಒಂದು ರೀತಿಯಲ್ಲಿ ವರದಾನವಾಗಿವೆ ಎಂದೇ ಹೇಳಬಹುದಾಗಿದೆ. ತೋಟಗಳಲ್ಲಿ ಬೆಳೆದ ಹುಣಸೆ ಮರಗಳನ್ನು ರೈತರು ಹುಣಸೆ ಹಣ್ಣಿನ ಗುತ್ತಿಗೆದಾರರಿಗೆ ಗುತ್ತಿಗೆ ಕೊಡುತ್ತಾರೆ. ಗುತ್ತಿಗೆದಾರರು […]

ಚೋಟಾನಾಗಪುರ: ಆದಿವಾಸಿಗಳ  ಸರ್ವನಾಶದ ಹುನ್ನಾರ

ಚೋಟಾನಾಗಪುರ: ಆದಿವಾಸಿಗಳ  ಸರ್ವನಾಶದ ಹುನ್ನಾರ

    ಬಹುಶ: ಅಭಿವೃದ್ದಿ ಎಂದರೆ ಆದಿವಾಸಿಗಳ ಸರ್ವನಾಶ ಎಂಬ ಅರ್ಥವಿರಬೇಕೆಂಬ ಅನುಮಾನ ಹುಟ್ಟುವಂತೆ ಈ ನೆಲದಲ್ಲಿ ಅವರ ಹಕ್ಕುಗಳ ದಮನ ಮಾಡಲಾಗುತ್ತಿದೆ.  ಅವರ ಶ್ರೇಯೋಭಿವೃದ್ದಿಗಾಗಿ ಹೊಸ ಕಾನೂನುಗಳನ್ನು ಜಾರಿಗೆ ತರುವುದಿರಲಿ, ಈಗಿರುವ ಕಾನೂನುಗಳನ್ನೆ ತಿದ್ದುಪಡಿ ಮಾಡುವುದರ  ಮತ್ತು ರದ್ದು ಮಾಡುವುದರ ಮೂಲಕ ಅವರ ಸ್ವತಂತ್ರ ಬದುಕಿನ ಜೊತೆ ನಮ್ಮ ಸರಕಾರಗಳು ಚೆಲ್ಲಾಟವಾಡುತ್ತಿವೆ. ಆಧುನಿಕತೆಯ ಅವತಾರದಲ್ಲಿ ಬಂದೆರಗಿರುವ ಪಶ್ಚಿಮ ಮಾದರಿಯ ಅಭಿವೃದ್ದಿ ಪಥವನ್ನು ಅಂಧರಂತೆ ಅನುಸರಿಸುತ್ತಿರುವ ನಮ್ಮ ಆಡಳಿತ ವರ್ಗ ಆದಿವಾಸಿಗಳನ್ನು ಶಾಶ್ವತವಾಗಿ ಇಲ್ಲವಾಗಿಸಿಬಿಡುವ ಯೋಜನೆಗಳನ್ನು ಪ್ರತಿಕ್ಷಣ ಪ್ರತಿದಿನ […]

ಪರಿಸರದ ಮೇಲೆ ಟ್ರಂಪ್ ಧಾಳಿ

ಪರಿಸರದ ಮೇಲೆ ಟ್ರಂಪ್ ಧಾಳಿ

ಪರಿಸರ ಕಾಲುಷ್ಯದಿಂದ ಉಂಟಾಗುತ್ತಿರುವ ಹವಾಮಾನ ಬದಲಾವಣೆಯನ್ನು ವೈಟ್ ಹೌಸ್ ನಿರಾಕರಿಸುತ್ತಿರುವುದು ವಿಶ್ವಕ್ಕೊಂದು ಕೆಟ್ಟ ಸುದ್ದಿ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾಕ್, ಇರಾನ್, ಲಿಬ್ಯ, ಸೋಮಾಲಿಯ, ಸೂಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ನಾಗರಿಕರು 90/120 ದಿನಗಳ ಕಾಲ ಅಮೆರಿಕವನ್ನು ಪ್ರವೇಶಿಸದಂತೆ ಹೊರಡಿಸಿದ ಜನವರಿ 27 ರ “ಮುಸ್ಲಿಂ ಪ್ರತಿಬಂಧ” ಆಡಳಿತಾತ್ಮಕ ಆದೇಶದ ಮೇಲೆಯೇ ಜಗತ್ತಿನ ಗಮನ ಕೇಂದ್ರೀಕರಣವಾಗಿದ್ದರಿಂದ, ಪರಿಸರ ನಿಯಂತ್ರಣ ಸಂಬಂಧೀ ವಿಷಯಗಳ ಮೇಲೆ ಗಾಢವಾದ ಪ್ರಭಾವ ಮಾಡುವ ಅವರ ಇತರ ಆಡಳಿತಾತ್ಮಕ ಆದೇಶಗಳು […]

ಗಿಡ-ಮರಗಳನ್ನು ಮುಟ್ಟಿ ಮಾತನಾಡಿಸಿದ್ದೀರಾ?

ಗಿಡ-ಮರಗಳನ್ನು ಮುಟ್ಟಿ ಮಾತನಾಡಿಸಿದ್ದೀರಾ?

ಮನುಷ್ಯರು, ಪ್ರಾಣಿಗಳು, ಕೀಟಗಳು ಹಾಗೂ ಚಲನೆಯಿರುವ ಎಷ್ಟೋ ಜೀವಿಗಳು ಮತ್ತು ಹಸಿರು ಸಸ್ಯವರ್ಗ ಎಲ್ಲವೂ ತಮ್ತಮ್ಮ ಬದುಕಿಗೆ ಪರಸ್ಪರ ಅವಲಂಬಿಸಿವೆ. ಈ ಜಗತ್ತಿನ ಅತ್ಯಮೂಲ್ಯ ಸಂಪತ್ತಾದ ಹಾಗು ನಮ್ಮೆಲ್ಲರಿಗೂ ಹೆಮ್ಮೆಯ ಪಶ್ಚಿಮಘಟ್ಟದ ಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ಕೊನೆಮೊದಲಿಲ್ಲದಂತೆ ಅತ್ಯಾಚಾರವೆಸಗಲಾಗುತ್ತಿದೆ. ಮೂಡಿಗೆರೆಯ ಹ್ಯಾಂಡ್‍ಪೋಸ್ಟ್‍ನಿಂದ ಭೈರಾಪುರದ ನಾಣ್ಯದ ಭೈರವೇಶ್ವರ ದೇವಾಲಯದವರೆಗೆ ಅಗತ್ಯ, ಸಾಧ್ಯ ಮತ್ತು ಸಂಪನ್ಮೂಲ ಒದಗಿ ಬಂದರೆ 2 ಲೇನ್ ರಸ್ತೆಯನ್ನೇ ಮಾಡೋಣ. ಈ ಭಾಗದ ನಮ್ಮ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಬರಲಿ. ದೇವಾಲಯದ ಬಳಿ ಸುಸಜ್ಜಿತವಾದ […]

ನೆನಪಿಡಿ, ನಮಗಿರುವುದೋಂದೇ ಭೂಮಿ

ನೆನಪಿಡಿ, ನಮಗಿರುವುದೋಂದೇ ಭೂಮಿ

ಮೂಡಿಗೆರೆ ಇವರಿಂದ ಭೈರಾಪುರ-ಶಿಶಿಲ ರಸ್ತೆ ಕಾಮಗಾರಿ ವಿರೋಧಿಸಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ. ಮೂಡಿಗೆರೆ ಮತ್ತು ಧರ್ಮಸ್ಥಳದ ನಡುವೆ ಈಗಾಗಲೇ ಸಂಪರ್ಕಕ್ಕೆ ಚಾರ್ಮಾಡಿ ಘಾಟಿಯ ರಸ್ತೆ ರಾಜ್ಯ ಹೆದ್ದಾರಿಯಿದೆ. ಸಕಲೇಶಪುರ ಮಾರ್ಗವಾಗಿ ಸುಬ್ರಹ್ಮಣ್ಯ ಕ್ಷೇತ್ರವನ್ನು ಸಂದರ್ಶಿಸಿ ಹೋಗುವವರಿಗೆ ಶಿರಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿಯಿದೆ. ಕಳಸ-ಹೊರನಾಡು, ಮೂಡಬಿದ್ರೆ ಮಾರ್ಗವಾಗಿ ಹೋಗುವವರಿಗೆ ಸಹಾ ಉತ್ತಮ ಗುಣಮಟ್ಟದ ರಸ್ತೆಗಳಿವೆ. ಹಾಗೂ ಈ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲು, ಅಗಲೀಕರಣಗೊಳಿಸಲು ಈಗಾಗಲೇ ಕಾಮಗಾರಿಗಳು ಆರಂಭವಾಗಿವೆ. ಹಾಗಾದರೆ ಈ ಮೂಡಿಗೆರೆ-ಭೈರಾಪುರ-ಶಿಶಿಲ-ಕೊಕ್ಕಡ ರಸ್ತೆಯ ಪ್ರಸ್ತಾಪ ಯಾರಿಗಾಗಿ? ಕಂಟ್ರಾಕ್ಟರ್‍ಗಳಿಗೋ? ಅರಣ್ಯ ಲೂಟಿ […]

ನಿಸರ್ಗ ಗೋವು – ನಗರ ಹುಲಿ

ನಿಸರ್ಗ ಗೋವು – ನಗರ ಹುಲಿ

ನಿಸರ್ಗ ಗೋವು. ನಗರ ಹುಲಿ. ಹುಲಿಯೀಗ ಹಸಿವಿಗಾಗಿ ಹುಲ್ಲು ತಿನ್ನುವ ಪ್ರಾಣಿಯೊಂದನ್ನು ತಿನ್ನುತ್ತಿಲ್ಲ. ನೆಲದಾಳದ ಕಬ್ಬಿಣ ಕಲ್ಲಿದ್ದಲು ತೈಲ ಸಕಲಾದಿ ನಿಸರ್ಗ ಸಂಪತ್ತನ್ನೆಲ್ಲಾ ಅಗಿದುಗಿದು ಅಜೀರ್ಣದಿಂದ ನರಳುತ್ತಿದೆ. ಅದಕ್ಕೀಗ ಹೊಟ್ಟೆ ಭಾದೆ. ಯಾವ ಪ್ರಾಣಿ ವೈದ್ಯನಾಗಲೀ ದಯಾಮರಣ ನೀಡುವ ನ್ಯಾಯದ ತಕ್ಕಡಿಯಾಗಲೀ ಸಿಂಹಾಸನಾಧೀಶರ ಆಜ್ಞೆಗಳಾಗಲೀ ಅದರ ವೃಣದ ತೂತುಗಳನ್ನು ಮುಚ್ಚಲಾಗುತ್ತಿಲ್ಲ. ಅದೀಗ ಅತ್ತ ಸಾಯುತ್ತಲೂ ಇಲ್ಲ. ಇತ್ತ ಬದುಕುತ್ತಲೂ ಇಲ್ಲ! ಆದರೂ ಮಲಗಿದ್ದಲ್ಲೆ ಗುಟುರಿಕೆ ಹಾಕುತ್ತಿದೆ. ಅದೀಗ ಬೆಂಗಳೂರು ನಗರದ ಹತ್ತಿರದ ಮಂಚನಬೆಲೆ ಮಡುವಿನ ಬಳಿ ಕಾಲು […]

ಕಾವೇರಿ ನೀರಿನ ನೆಪದಲ್ಲಿ ಪರಿಸರ ಕುರಿತ ಒಂದು ಆಲೋಚನೆ

ಕಾವೇರಿ ನೀರಿನ ನೆಪದಲ್ಲಿ ಪರಿಸರ ಕುರಿತ ಒಂದು ಆಲೋಚನೆ

ಮಂತ್ರಕ್ಕೆ ಮಾವಿನ ಕಾಯಿ ಉದುರುವುದುಂಟೆ? ಕಾವೇರಿ ನದಿ ನೀರಿನ ವಿಷಯದಲ್ಲಿ ಇಡೀ ದಕ್ಷಿಣ ಕರ್ನಾಟಕ ಪ್ರಕ್ಷುಬ್ಧಗೊಂಡಿದೆ. ದೂರದೃಷ್ಟಿಯಿಲ್ಲದ ಸ್ವಯಂಘೋಷಿತ ಕುರುಡರ ಕಾರಣಕ್ಕಾಗಿ ಮತ್ತು ಸ್ವಾರ್ಥ ಪಕ್ಷ ರಾಜಕಾರಣಕ್ಕಾಗಿ ಇದು ಸಮಸ್ಯಾತ್ಮಕವಾಗುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆದ ವಿದ್ಯಮಾನವೊಂದು ಜನರ ಗಮನ ಸೆಳೆದಂತೆ ಕಾಣುತ್ತಿಲ್ಲ. ರಾಜ್ಯದ ಪತ್ರಿಕೆಗಳಲ್ಲಿ ಸಣ್ಣ ಸುದ್ಧಿಯಾದ ಈ ಸಂಗತಿ ಮೊದಲಿಗೆ ತಮಾಷೆಯಾಗಿ ಕಂಡಿತು. ಕಾವೇರಿ ನದಿ ನೀರಿನ ಸಮಸ್ಯೆ ಇಷ್ಟೊಂದು ತೀವ್ರವಾಗಲು ಮುಂಗಾರು ಮಾರುತಗಳು ಕೈಕೊಟ್ಟಿದ್ದೆ […]

ಗುಡಿ ಮುಳುಗಿದರೆ ಸುಭಿಕ್ಷ

ಗುಡಿ ಮುಳುಗಿದರೆ ಸುಭಿಕ್ಷ

ಕೆರೆಯಲ್ಲಿ ನೀರು ಬಂದಾಗ ಮುಳುಗಿರುವ, ಬತ್ತಿದಾಗ ಮಾತ್ರ ಹೊರಕಾಣುವ ವಿಶೇಷವಾದ ಗುಡಿಯೊಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿದೆ. ಕೆರೆ ತುಂಬಿರುವಾಗ ಈ ಗುಡಿಯ ಮೇಲ್ಭಾಗ ಮಾತ್ರ ಸ್ವಲ್ಪ ಕಾಣುತ್ತದೆ. ಈ ಗುಡಿಯ ಒಳಗಿನ ಭಾಗ ನೋಡಬೇಕೆಂದರೆ ಕೆರೆ ಬತ್ತಲೇಬೇಕು. ಆಗ ಮಾತ್ರ ಇದನ್ನು ನೋಡಬಹುದು. ಎಷ್ಟು ವಿಚಿತ್ರ ನೋಡಿ ಗುಡಿಯನ್ನು ನೋಡಬೇಕೆಂದರೆ ನೀರಿಗೆ ಬರ ಇರಬೇಕು. ಕೆರೆ ಬತ್ತಿರಬೇಕು. ಕೆರೆ ಯಾವಾಗಲೂ ತುಂಬಿದ್ದರೆ ಈ ಗುಡಿ ಕಾಣುವುದು ಅಸಾಧ್ಯ. ಗುಡಿ ಮುಳುಗಿದೆಯೆಂದರೆ ಎಲ್ಲವೂ ಸುಭಿಕ್ಷವಾಗಿದೆ ಎಂದರ್ಥ. […]

ಜೀವ ಜಗತ್ತು-5: ಸೊಳ್ಳೆ ಪುರಾಣ

ಜೀವ ಜಗತ್ತು-5: ಸೊಳ್ಳೆ ಪುರಾಣ

ಬಹುಶ ಸೊಳ್ಳೆಯೆಂಬ ಸಣ್ಣ ಕೀಟ ಮನುಷ್ಯನನ್ನು ಕಾಡುವಷ್ಟು ಬೇರಾವುದೇ ದೈತಪ್ರಾಣಿ ಕಾಡುವಿದಿಲ್ಲವೆಂದು ಕಾಣುತ್ತದೆ. ಗಾತ್ರದಲ್ಲಿ ಅಷ್ಟು ಸಣ್ಣಕಿದ್ದರು ಅದು ಮನುಷ್ಯನನ್ನು ಕಾಡುವ ರೀತಿ ಮಾತ್ರ ನಮ್ಮ ಊಹೆಗೂ ಮೀರುವಂತದ್ದು. ಮಲೇರಿಯ ಡೆಂಗ್ಯು… ಹೀಗೆ ಅವುಗಳು ಹರಡುವ ಮಾರಣಾಂತಿಕ ರೋಗಗಳ ಪಟ್ಟಿ ಉದ್ದಕ್ಕೆ ಬೆಳೆಯುತ್ತದೆ. ಬಹುಶ ಸೊಳ್ಳೆಗಳು ರೋಗಗಳನ್ನು ಹರಡದೆ ಬರೀ ನಮ್ಮ ರಕ್ತವನ್ನು ಮಾತ್ರ ಹೀರುವಂತಿದ್ದರೆ ಇಂದು ನಾವು ಅವುಗಳ ಕಡೆಗೆ ಅಷ್ಟು ಭಯವನ್ನು ವ್ಯಕ್ತಪಡಿಸುತ್ತಿರಲಿಲ್ಲವೆಂದು ಕಾಣುತ್ತದೆ. ಮತ್ತೆ ಅವು ತಂಪಾದ ಹೊತ್ತಿನಲ್ಲಿ ನಮ್ಮ ನಿದ್ದೆಗೆ ತರುವ […]