By admin on March 8, 2018
ಪರಿಸರ

ದಿನೇದಿನೇ ಹೆಚ್ಚಾಗುತ್ತಿರುವ ಜಲಕ್ಷಾಮ ಮತ್ತು ಬಿಕ್ಕಟ್ಟನ್ನು ಹೇಗೋ ಮೀರಬಲ್ಲವೆಂಬ ಭ್ರಾಂತಿಯಲ್ಲಿ ನಾವು ಬದುಕುತ್ತಿದ್ದೇವೆ. ನೀರು ಇಲ್ಲದ ದಿನ (ಡೇ ಜೀರೋ- ಶೂನ್ಯ ದಿನ) ಸನ್ನಿಹಿತವಾಗುತ್ತಿದೆ. ಇದು ಭವಿಷ್ಯದಲ್ಲಿ ಯಾವಾಗಲೋ ಸಂಭವಿಸಬಹುದಾದ ವಿನಾಶಕಾರಿ ಆಪತ್ತಲ್ಲ. ಇತ್ತೀಚಿಗೆ ನಡೆದ ಕೆಲವು ಸರ್ವೇಗಳ ಪ್ರಕಾರ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಮತ್ತು ಭಾರತದ ಬೆಂಗಳೂರಿನಂಥ ಕೆಲವು ನಗರಗಳಲ್ಲಿ ಈ ಸನ್ನಿವೇಶ ಅತ್ಯಂತ ತ್ವರಿತವಾಗಿ ಎದುರಾಗಲಿದೆ. ಹೀಗಾಗಿ ಕೇಪ್ಟೌನ್ ನಗರವು ಕಠಿಣವಾದ ಕ್ರಮಗಳನ್ನು ತೆಗೆದುಕೊಂಡು ಪ್ರತಿ ಮನುಷ್ಯರಿಗೆ ಪ್ರತಿ ದಿನಕ್ಕೆ ಕೇವಲ ೫೦ […]
By admin on November 24, 2017
ಪರಿಸರ

ಸಮಸ್ಯೆ ಇರುವುದು ಪರಿಸರದಲ್ಲಿ ಮಾತ್ರವಲ್ಲ. ನೀತಿಗಳನ್ನು ಮಾಡುವವರ ತಲೆಗಳಲ್ಲೂ ಸಮಸ್ಯೆಯಿದೆ. ನವದೆಹಲಿಯನ್ನು ಹೊಗೆಮಂಜು ಆವರಿಸಿಕೊಳ್ಳುವುದು ವಾರ್ಷಿಕ ವಿದ್ಯಮಾನವೇ ಆಗಿಬಿಟ್ಟಿದೆ; ಹಾಗೆಯೇ ತಾರಕಕ್ಕೇರುವ ಕಳವಳಗಳೂ ಸಹ. ಪ್ರತಿಬಾರಿಯೂ ಇದೊಂದು ಆಪತ್ಕಾಲೀನ ಪರಿಸ್ಥಿತಿಯೆಂದು ನಮಗೆ ಹೇಳಲಾಗುತ್ತದೆ. ಒಂದು ಕಡೆ ದೆಹಲಿಯು ತನ್ನ ಪಕ್ಕದ ರಾಜ್ಯಗಳಾದ ಹರ್ಯಾಣ ಮತ್ತು ಪಂಜಾಬುಗಳನ್ನು ದೂರಿದರೆ, ಅವೆರಡೂ ರಾಜ್ಯಗಳೂ ದೆಹಲಿಯನ್ನು ದೂರುತ್ತವೆ. ಮತ್ತು ಎಲ್ಲರೂ ಒಟ್ಟು ಸೇರಿ ಕೇಂದ್ರವನ್ನೂ ದೂರುತ್ತಾರೆ. ಈ ಮಧ್ಯೆ ದೇಶದ ಆ ಅತ್ಯಂತ ಸುರಕ್ಷಿತ ನಗರದ ಪ್ರತಿಯೊಬ್ಬ ನಾಗರೀಕರೂ ಉಸಿರಿಗಾಗಿ ತೇಕುತ್ತಾ […]
By admin on November 9, 2017
ಪರಿಸರ

ನಮ್ಮ ಆಡಳಿತ ವ್ಯವಸ್ಥೆಯ ಕೆಲವು ಗ್ರಹಿಕೆಗಳು ವಿಚಿತ್ರ ಎನಿಸುತ್ತದೆ. ಸಹಿ ಮಾಡಲು ಕಲಿತರೆ ಜನ ಸಾಕ್ಷರರು ಎನಿಸಿಕೊಳ್ಳುತ್ತಾರೆ, ಬಡವರಿಗೆ ಉಚಿತ ಭಾಗ್ಯಗಳನ್ನು ನೀಡುವುದು ಸಮಾಜವಾದ ಎನಿಸಿಕೊಳ್ಳುತ್ತದೆ, ಶೌಚಾಲಯ ನಿರ್ಮಿಸಿದರೆ ಸ್ವಚ್ಚತೆಯ ಗರಿ ಮೂಡುತ್ತದೆ, ಗ್ರಾಮಗಳಲ್ಲಿ ಡೆಬಿಟ್ ಕಾರ್ಡ್ ವಿತರಿಸಿದರೆ ಅದು ಡಿಜಿಟಲ್-ನಗದುರಹಿತ ಗ್ರಾಮ ಎನಿಸಿಕೊಳ್ಳುತ್ತದೆ. ಈ ಸಾಂಕೇತಿಕ ಸಾಧನೆಗಳ ನೆಲೆಯಲ್ಲೇ ಅಭಿವೃದ್ಧಿ ಪಥದಲ್ಲಿ ನಾಗಾಲೋಟದಲ್ಲಿ ಮುನ್ನಡೆಯುತ್ತಿರುವ ದೇಶದಲ್ಲಿ ಅಭಿವೃದ್ಧಿಗೂ ಸಾಮಾಜಿಕ ನ್ಯಾಯಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಪರಿಸರ ರಕ್ಷಣೆಗೂ ಪ್ರಗತಿಯ ಪಥಕ್ಕೂ ನಡುವೆ ಬೃಹತ್ ಕಂದರ ಇರುತ್ತದೆ. ಇದರ […]
By admin on October 31, 2017
ಪರಿಸರ

ನ್ಯಾಯಾಲಯಗಳು ಫಿರ್ಯಾದುದಾರರ ಅನುಕೂಲತೆಗಳನ್ನು ಗಮನಿಸಬೇಕೇ ವಿನಃ ಸರ್ಕಾರಗಳದ್ದಲ್ಲ ಗೋವಾದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಸುಸ್ಥಿರ ಪರಿಸರದ ಬಗೆಗೆ ಯಾವ ಪರಿಕಲ್ಪನೆಯೂ ಇಲ್ಲದೆ ಜಾರಿಗೆ ತರಲೆತ್ನಿಸಿದ ಎಲ್ಲಾ ತಥಾಕಥಿತ ಅಭಿವೃದ್ಧಿ ಯೋಜನೆಗಳಿಗೂ ಅಲ್ಲಿನ ಕ್ರಿಯಾಶೀಲ ಪರಿಸರವಾದಿ ಸಂಘಟನೆಗಳು ನಿರಂತರ ತಡೆಯೊಡ್ಡುತ್ತಿವೆ. ಮತ್ತು ಸರ್ಕಾರಗಳ ಬಗಲಮುಳ್ಳುಗಳಾಗಿ ಬಿಟ್ಟಿವೆ. ಹೀಗಾಗಿಯೇ ಗೋವಾದ ಹಾಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಮ್ಮ ಸರ್ಕಾರದ ವಿರುದ್ಧ ಇದ್ದ ಎಲ್ಲಾ ಪರಿಸರ ಸಂಬಂಧೀ ದಾವೆಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪಶ್ಚಿಮ […]
By admin on July 31, 2017
ಪರಿಸರ

ಪ್ರವಾಹ ನಿರ್ವಹಣೆ ಪದೇಪದೇ ಪ್ರವಾಹಕ್ಕೀಡಾಗುವ ಪ್ರದೇಶಗಳಲ್ಲಿನ ಪ್ರವಾಹ ನಿರ್ವಹಣಾ ವ್ಯವಸ್ಥೆಯು ಕೇವಲ ವಿಕೋಪದ ಸಂದರ್ಭದ ನಿರ್ವಹಣೆಗೆ ಮಾತ್ರ ಸೀಮಿತವಾಗಬಾರದು. ಪ್ರವಾಹವೆಂಬುದು ಪ್ರತಿವರ್ಷ ಸಹಜವಾಗಿ ಸಂಭವಿಸುವ ನೈಸರ್ಗಿಕ ವಿದ್ಯಮಾನವೆಂಬುದು ನಿಜ. ಆದರೆ ಅಸ್ಸಾಮಿನ ಬ್ರಹ್ಮಪುತ್ರಾ ನದಿಯಲ್ಲಿ ಪ್ರತಿವರ್ಷ ಸಂಭವಿಸುವ ಪ್ರವಾಹದ ಬಗ್ಗೆ ಸರ್ಕಾರ ತೋರಿಸುವ ಪ್ರತಿಸ್ಪಂದನೆ ಮಾತ್ರ ಖಂಡಿತಾ ಸಹಜವಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರವೇ ಹೇಳುವಂತೆ ಈ ವರ್ಷ ಪ್ರವಾಹಕ್ಕೆ ಸಿಲುಕಿ ೭೨ ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ೧೨ ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಅಸ್ಸಾಂ ರಾಜ್ಯದ ನೈಸರ್ಗಿಕ […]
By admin on July 30, 2017
ಪರಿಸರ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆಯೇ? ತನ್ನ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಜೆಂಡಾಗಳಿಗೆ ಅಡ್ಡಿಯಾಗುವ ಸಂಸ್ಥೆಗಳನ್ನು ನರೇಂದ್ರ ಮೋದಿ ಸರ್ಕಾರವು ವಶಪಡಿಸಿಕೊಳ್ಳುತ್ತಿರುವ ಅಥವಾ ನಿರ್ವೀರ್ಯಗೊಳಿಸುತ್ತಿರುವ ವೇಗವನ್ನು ಗಮನಿಸುತ್ತಿರುವವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯೂ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್- ಎನ್ಜಿಟಿ) ಸಹ ಅದರ ದಾಳಿಗೆ ತುತ್ತಾಗಿರುವುದು ಆಶ್ಚರ್ಯವನ್ನೇನೂ ಉಂಟುಮಾಡುತ್ತಿಲ್ಲ. ೨೦೧೦ರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆಯನ್ವಯ ಈ ಹಸಿರು ನ್ಯಾಯಮಂಡಳಿಯು ಏರ್ಪಟ್ಟಿದೆ. ಇದು ಪರಿಸರವನ್ನು ರಕ್ಷಣೆಗೆ ಸಂಬಂಧಪಟ್ಟ, ಅರಣ್ಯ ಮತ್ತು ಪ್ರ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಪಟ್ಟ, ಪರಿಸರದ […]
By admin on June 12, 2017
ಪರಿಸರ

ಭೂ ತಾಯಿಗೆ ಗಲ್ಲುಶಿಕ್ಷೆ ವಿಧಿಸುತ್ತಿರುವವರು ಡೊನಾಲ್ಡ್ ಟ್ರಂಪ್. ಆತನಿಗೆ ಕುಮ್ಮಕ್ಕು ಕೊಡುತ್ತಿರುವವರು ತೈಲಕಂಪನಿಯ ದೊರೆಗಳು ಮತ್ತು ಕುತಂತ್ರೀ ಪರಿಸರವಿರೋಧಿಗಳು. ಹವಾಮಾನ ಬದಲಾವಣೆ ಎಂಬ ವಿದ್ಯಮಾನವೇ ಒಂದು ದೊಡ್ಡ ಮೋಸವೆಂದು ಡೊನಾಲ್ಡ್ ಟ್ರಂಪ್ ಅವರು ಹೇಳುತ್ತಲೇ ಬಂದಿದ್ದಾರೆ. ಉದಾಹರಣೆಗೆ ೨೦೧೪ರ ಜನವರಿ ೨ ರಂದು ಜಗತ್ತಿನ ಪ್ರಖ್ಯಾತ ಹವಾಮಾನ ವಿಜ್ನಾನಿಗಳ ಕುರಿತು ಮಾಡಿದ ಟ್ವೀಟ್ ಒಂದರಲ್ಲಿ ಈ ಜಾಗತಿಕ ತಾಪಮಾನ ಏರಿಕೆ ಎಂಬ ದುಬಾರಿ ಹುಚ್ಚಾಟಗಳು ಕೂಡಲೇ ನಿಲ್ಲಬೇಕು ಎಂದು ಬೆದರಿಸಿದ್ದರು. ಈಗ ಅವರು ಜಗತ್ತಿನ ಶೇ.೧೫ರಷ್ಟು ಹಸಿರು […]
By admin on June 9, 2017
ಪರಿಸರ

‘ಪಾತಾಳಗಂಗೆ ಯೋಜನೆಯನ್ನು ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸುತ್ತಿರುವ ಎಸ್.ಆರ್. ಹಿರೇಮಠ ಅವರಷರತ್ತಿನಮಾತು (ಪ್ರ.ವಾ.23 ಮೇ) ನಾಗೇಶಹೆಗಡೆಯವರು ಹಲವರ ಅಭಿಪ್ರಾಯಗಳಲ್ಲಿ ಸರಣಿಯಾಗಿ ಒತ್ತಾಯಿಸುತ್ತಿರುವ ವೈಜ್ಞಾನಿಕ ನಿರೂಪಣೆಗಳೇ ಆಗಿವೆ. ಸರ್ಕಾರಕ್ಕೆ ಇನ್ನೂ ಹಠ ಸಲ್ಲದು. ಸಮಾಲೋಚನೆಗೆ ಕರೆದ ಸಭೆಯಲ್ಲಿ ಒಪ್ಪಂದ ನಿರತ ವಾಟರ್ಕ್ವೆಸ್ಟ್ ಕಂಪೆನಿಯ ಪ್ರತಿನಿಧಿಗಳಿಲ್ಲದೆ ಸರ್ಕಾರಿ ಅಧಿಕಾರಿಗಳು ಕಂಪೆನಿ ಪರ ವಹಿಸುವುದು, ಸಚಿವರು ಬಹುಶ್ರುತ ಭಾರತ ವಿಜ್ಞಾನಿ ಡಾ. ರಘುನಾಥ್ ಮಶೇಲ್ಕರ್ ಶಿಫಾರಸು ಇರುವುದನ್ನು ಸೂಚಿಸುವುದು ಅನುಮಾನಕ್ಕೆಡೆ ಮಾಡುತ್ತದೆ. ಯಾಕೆಂದರೆ ಆ ವಿಜ್ಞಾನಿ ಎರಡು ಕೃತಿ ಚೌರ್ಯ ಆಪಾದನೆಗೆ […]
By admin on May 13, 2017
ಪರಿಸರ

ಸಾಮಾನ್ಯವಾಗಿ ಯಾರನ್ನಾದರೂ ಯಾಮಾರಿಸಿದಾಗ ಚಳ್ಳೆಹಣ್ಣು ತಿನ್ನಿಸಿದ ಎಂಬುದು ಆಡುನುಡಿ. ಆದರೆ ಚಳ್ಳೆಹಣ್ಣನ್ನೇ ಯಾಕೆ ಬಳಸಿದರೋ ಗೊತ್ತಿಲ್ಲ. ಯಾಕೆಂದರೆ ಅತ್ಯಂತ ಸಿಹಿಯಾದ ಆರೋಗ್ಯಕ್ಕೂ ಪೂರಕವಾದ ಗ್ರಾಮೀಣ ಭಾಗದಲ್ಲಿ ಚಿರಪರಿಚಿತವಾದ ಹಣ್ಣೆಂದರೆ ಚಳ್ಳೆಹಣ್ಣು. ಮೇಲಿನ ಸಿಪ್ಪೆಯನ್ನು ತೆಗೆದರೆ ಒಳಗೆಲ್ಲ ಅಂಟುಅಂಟಾಗಿದ್ದರೂ ಬಾಯಲ್ಲಿ ಸವಿ ನೀಡುವ ಈ ಹಣ್ಣು ಗ್ರಾಮದ ಮಕ್ಕಳಿಗೆಲ್ಲ ಚಿರಪರಿಚಿತವಾದುದು. ಅತ್ಯಂತ ಸುಲಭವಾಗಿ, ಉಚಿತವಾಗಿ, ಆರೋಗ್ಯಕ್ಕೆ ಪೂರಕವಾಗಿ ಸಿಗುವ ಹಣ್ಣೆಂದರೆ ಚಳ್ಳೆಹಣ್ಣು. ದ್ರಾಕ್ಷಿಯ ಗೊಂಚಲಿನಂತೆಯೇ ಗಿಡಗಳಲ್ಲಿ ಹಳದಿಮಿಶ್ರಿತ ಹಣ್ಣುಗಳನ್ನು ಕಂಡರೆ ಯಾರಿಗೇ ಆಗಲಿ ಬಾಯಲ್ಲಿ ನೀರೂರದೆ ಇರದು. ಬಾಯಲ್ಲಿಟ್ಟೊಡನೆ […]
By admin on May 12, 2017
ಪರಿಸರ

ಭೂಗೋಳವೇ ಒಂದು ಚೆಂಡು. ಅದು ದೇವರಾಡುವ ಚೆಂಡು. ಪ್ರಕೃತಿಯೆಂಬ ಚಕ್ರದ ಅರೆಕೋಲುಗಳ ಏರಿಳಿತದ ಅರಿವು ಮಿದುಳು ಬಲವಿರುವ ಅಂಗೈಯೊಳಗಿರುವ ಹೆಬ್ಬೆರಳಿನ ಅಹಂಕಾರವಿರುವ ಮನುಷ್ಯನಿಗಿರಬೇಕಾಗಿತ್ತು. ರಣಬಿಸಿಲು ಬಿಸಿಗಾಳಿ ಬೆಂಗಳೂರು ಚೆನ್ನೈ ದಿಲ್ಲಿಗಳೆಲ್ಲವನ್ನು ಸಮಾನ ಸ್ಥಾನದಲ್ಲಿ ನಿಲ್ಲಿಸುತ್ತಿದೆ. ರಾಜಸ್ಥಾನ ಮಾದರಿಯ ಮರು ಭೂಮೀಕರಣಕ್ಕೆ ಸಜ್ಜು ಮಾಡುತ್ತಿದೆ. ಇದು ಪ್ರಕೃತಿಯ ಪ್ರತಿಭಟನೆ. ಪ್ರಕೃತಿ ಮತ್ತು ಹೆಣ್ಣು ಅವಳಿಜವಳಿ. ಈ ಜೀವಿಗಳಿಗೆ ಪ್ರತಿಭಟನೆ ಇಲ್ಲವೆನ್ನುವುದು ನಾಗರೀಕತೆಯ ಮೂರ್ಖತನ. ಇತ್ತೀಚೆಗೆ ಯುಗೋಸ್ಲೋವಿಯಾದಲ್ಲಿ ಮರಿನಾ ಅಬ್ರಾಮೋವಿಕ್ ಎಂಬಾಕೆ ಆಧುನಿಕ ನಾಗರೀಕರ ಮಾಲ್ ಸ್ಥಳದಲ್ಲಿ 6 ಗಂಟೆ […]