ಅಂಕಣಗಳು

ಅಂಕಣಗಳು

ಮಸಿಯ ದಾಳಿ ಮತ್ತು ಬಂಡವಾಳದ ರಾಜಕಾರಣ

ಮಸಿಯ ದಾಳಿ ಮತ್ತು ಬಂಡವಾಳದ ರಾಜಕಾರಣ

  ಮೊನ್ನೆ ಫೇಸ್‍ಬುಕ್‍ನಲ್ಲಿ ಕಾಣಿಸಿಕೊಂಡ ಪೋಸ್ಟ್ ಒಂದು ಗಮನ ಸೆಳೆಯಿತು. “ಮುಂಬೈನಲ್ಲಿ ಸುಧೀಂದ್ರ ಕುಲಕರ್ಣಿಗೆ ಕರಿಶಾಯಿ ಬಳಿದ ಆರು ಮಂದಿಯನ್ನು ಶಿವಸೇನಾ ಪ್ರಮುಖ ಉದ್ಭವ ಠಾಕ್ರೆ ಸಮ್ಮಾನಿಸಿ ‘ಒಳ್ಳೆಯ ಕೆಲಸ ಮಾಡಿದಿರಿ’ ಎಂದು ಬೆನ್ನು ತಟ್ಟಿದರಂತೆ. ಮಂಗಳೂರಿನಲ್ಲಿ ಮೋರಲ್ ಪೊಲೀಸಿಂಗ್ ಮಾಡಿ ಜೈಲಿಗೆ ಹೋಗಿ ಬಂದವರನ್ನು ರಾಮಸೇನೆ, ಭಜರಂಗದಳ ಹೀಗೆಯೇ ಹೂಹಾರ ಹಾಕಿ ಸನ್ಮಾನಿಸುತ್ತದೆ. ಭಾರತಕ್ಕೆ ಹೋಗಿ ಕೊಂದು ಬಂದವರನ್ನು ಹಫೀಸ್ ಸಯೀದ್ ಭರ್ಜರಿ ಸನ್ಮಾನದೊಂದಿಗೆ ಪಾಕಿಸ್ತಾನಕ್ಕೆ ಬರಮಾಡಿಕೊಳ್ಳುತ್ತಾನಂತೆ. ತಾಲಿಬಾನ್ ತನ್ನ ವೀರರಿಗೆ ಸ್ವರ್ಗದಲ್ಲಿಯೂ ಸೀಟು ಕಾದಿರಿಸುತ್ತದಂತೆ. […]

ಅಲೆಮಾರಿಗಳ ಅಸ್ಥಿತ್ವದ ಸ್ಥಿತ್ಯಂತರಗಳು

ಅಲೆಮಾರಿಗಳ ಅಸ್ಥಿತ್ವದ ಸ್ಥಿತ್ಯಂತರಗಳು

ನಾಡಿನ ನಾನಾ ಮೂಲೆಗಳಿಂದ ಸಾಗಿಬರುವ ಸಾಲು ಸಾಲು ಜನರು ಹಾಳು ಹೊಲಗಳ ತುಂಬಾ ತಮ್ಮ ತಾಪತ್ರಯಗಳ ತಾಡುಪತ್ರೆಯನ್ನು ಬಿಗಿದು ‘ಗೂಡು ಕಟ್ಟುವ ಗುಬ್ಬಿಯ ಹಾಗೇ’ ಪುಟ್ಟ ಪುಟ್ಟ ಟೆಂಟ್ ಹಾಕಿಕೊಳ್ಳುತ್ತಾರೆ ಅಲೆದಾಟ ಅವಮಾನ ಅತಂತ್ರತೆಯ ಮೂರು ಕಲ್ಲುಗಳೇ ಒಲೆಗಳಾಗಿ ಮಾರ್ಪಡುತ್ತವೆ ಇಲ್ಲಿ. ಕಲ್ಲಿನೊಲೆಯ ಮೇಲೆ ಕುತು ಕುತು ಕುದಿ ಯುವ ಸಾರಿನಂತೆ ಅವರ ಬದುಕು ಕೂಡ! ವರ್ಷದುದ್ದಕ್ಕೂ ದಿಕ್ಕು ದಿಕ್ಕು ತಿರುಗುವ ದಿಕ್ಕೇಡಿಗಳು ದು:ಖ ಮುಕ್ತರಾಗಲು ಮುಖದ ಮೇಲೆ ಮೊಹರಂ ಹಬ್ಬದ ಮಂದಹಾಸದ ಮುದ್ರೆ ಒತ್ತಿಕೊಂಡು ಎರಡು […]

ಉದ್ಯೋಗ ಖಾತ್ರಿ ಕಥನ- 3: `ಉದ್ಯೋಗ ಖಾತ್ರಿ ಹಂಗಂದ್ರೆ ಏನ್ ರೀ’ -ಟಕರಮ್ಮ.

ಉದ್ಯೋಗ ಖಾತ್ರಿ ಕಥನ- 3: `ಉದ್ಯೋಗ ಖಾತ್ರಿ ಹಂಗಂದ್ರೆ ಏನ್ ರೀ’ -ಟಕರಮ್ಮ.

  ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ನವಲಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವಂತ ಮುರ್ಕಿಗುಡ್ಡ ತಾಂಡಕ್ಕೆ ಹೋಗಿದ್ದೆ. ಇಡೀ ತಾಂಡದಲ್ಲಿ ಯಾವ ಮನೆಯಲ್ಲಿಯೂ ಒಬ್ಬ ಮಹಿಳೆಯಾಗಲಿ ಅಥವಾ ಒಬ್ಬ ಪುರುಷನಾಗ ಲಿ ಕಂಡುಬರಲಿಲ್ಲ. ಬದಲಾಗಿ ಪ್ರತಿಯೊಂದು ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಮತ್ತು ವಯಸ್ಸಾದ ಮುದುಕರು ಮಾತ್ರ ಇದ್ದರು. ಆಗ ಒಬ್ಬ ವಯಸ್ಸಾದ ಮುದುಕನನ್ನು ಕೇಳಿದೆ. ಯಾಕೆ? ತಾಂಡದಲ್ಲಿ ಒಬ್ರುಕೂಡ ಕಾಣುತ್ತಿಲ್ಲ. ಎಲ್ಲಾರು ಎಲ್ಲಿಗೆ ಹೋಗಿದ್ದಾರೆ ಎಂದು. ಆಗ ಆ ಮುದುಕ `ಈ ಬ್ಯಾಸಿಗಿ […]

ತೃಣಾವಾಂತರ-4: ಶುಂಠಿ ಮತ್ತು ಜಲಲೋಕ/ginger and waterworld

ತೃಣಾವಾಂತರ-4: ಶುಂಠಿ ಮತ್ತು ಜಲಲೋಕ/ginger and waterworld

ಮಲೆನಾಡ ಗದ್ದೆಗಳು ನಿಜಕ್ಕೂ ಜೀವ ವೈವಿಧ್ಯದ ಸಂಗಮ ಅನ್ನೋದು ನನಗೆ ತುಂಬಾ ತಡವಾಗಿ ಅರ್ಥವಾದ ವಿಷಯ. ಕಾಡುಪ್ರಾಣಿಗಳ ಬೆನ್ನು ಹತ್ತಿ, ನಾಗರಹೊಳೆಯಲ್ಲಿ ಚಿನ್ನಪ್ಪನವರ ಜೊತೆ ಒಂದು ದಿನ ನಡೆದುಕೊಂಡು ಹೋಗುವಾಗ, `ಅಲ್ಲಿ ನೋಡಿ… ಹಡ್ಲಿನ ತುಂಬಾ ಕಾಟಿಗಳು ಮೇಯ್ತಿವೆ. ಎಷ್ಟು ದಿನ ಆಯ್ತು ಗೊತ್ತಾ, ಇಷ್ಟೊಂದು ಕಾಟಿಗಳನ್ನ ಒಟ್ಟಿಗೆ ನೋಡಿ?’ ಅಂತ ಅಂದ್ರು. `ಸರ್… ಈ ಹಡ್ಲುಗಳಲ್ಲಿ ಮರಗಳು ಜಾಸ್ತಿ ಬೆಳೆಯೋದೇ ಇಲ್ಲಲ್ಲ ಸರ್…. ಬರೀ ಹುಲ್ಲು,’ ಅಂದೆ. `ನಿಮ್ಮ ಗದ್ದೇಲಿ ಮರ ಬೆಳೀತಿರೇನ್ರೀ ನೀವು?’ ಅಂತ […]

ಉದ್ಯೋಗ ಖಾತ್ರಿ ಕಥನ-2: ಸೀಜನ್ ಟೈಮ್‍ದಾಗ ಕೂಲಿಗೆ ಕರೀತಾರ…

ಉದ್ಯೋಗ ಖಾತ್ರಿ ಕಥನ-2: ಸೀಜನ್ ಟೈಮ್‍ದಾಗ ಕೂಲಿಗೆ ಕರೀತಾರ…

ಸೀಜನ್ ಟೈಮ್‍ದಾಗ ಕೂಲಿಗೆ ಕರೀತಾರ… -ಇಂಜಮ್ಮ, ರಾಯಚೂರು ತಾಲೂಕಿನ ಪುಚ್ಚಲದಿನ್ನಿ. `ಹೊಲ ಕೆಲಸದ ಸೀಜನ್ ಇರೋವಾಗ ಊರಾಗ ಕೂಲಿ ಸಿಗ್ತಿತ್ತು, ಹೆಂಗೋ ಜೀವ್ನ ಮಾಡಿದ್ವಿ. ಈಗ ಬ್ಯಾಸಿಗಿ ಈ ಟೈಂದಾಗ ನಮ್ಗ ಊರಾಗ ದುಡಿಯಾಕ ಕೂಲಿ ಇರಾಂಗಿಲ್ಲ. ಆದ್ರೆ ಮೆಂಬರ್‍ಗಳು ಏನು ಮಾಡ್ತಾರಂದ್ರೆ ಸೀಜನ್ ಇದ್ದಂತ ಟೈಮ್‍ದಾಗ ಕೂಲಿಗೆ ಕರೀತಾರ. ಅಂತ ಟೈಂದಾಗ ಜನ ಯಾರು ಪಂಚಾಯ್ತಿ ಕೂಲಿ ಕೆಲ್ಸಕ್ಕ ಹೋಗಾದಿಲ್ಲ. ಯಾಕಂದ್ರೆ ಜನ್ರಿಗೆ ತಮ್ಮ ತಮ್ಮ ಹೊಲದಾಗಿನ ಕೆಲ್ಸ ಇರ್ತಾವ. ಮತ್ತ್ಯಾ ಸೀಜನ್‍ದಾಗ ದೊಡ್ಡ ದೊಡ್ಡ […]

ತೃಣಾವಾಂತರ -3 : ಶುಂಠಿ ಅನ್ನೋ ಮಾಯೆ

ತೃಣಾವಾಂತರ -3 : ಶುಂಠಿ ಅನ್ನೋ ಮಾಯೆ

`ಎಲ್ ಹೋದ್ಯೋ…. ಹಿಂದ್ಗಡೆ ಬೇಲಿ ಹತ್ರ ಹೋಗಿ ಒಂದಿಷ್ಟು ಶುಂಠಿ ಕಿತ್ಕೊಂಡ್ ಬಾ ಅಂತ ಹೇಳಿ ಎಷ್ಟೋತ್ತಾಯ್ತು? ನಾನ್ ಅಡ್ಗೆ ಮಾಡಿ ಮುಗ್ಸೋದ್ ಎಷ್ಟೋತ್ತಿಗೆ,’ ಅಂತ ಅಮ್ಮ ಕೂಗಿದಾಗ, ಇನ್ನೇನು ಬೆನ್ನ ಮೇಲೆ ಎರಡು ಬೀಳ್ತದೆ ಅನ್ನೋದು ಗ್ಯಾರಂಟಿಯಾಗಿ, ಕಾಫೀ ಗಿಡಗಳ ಪಕ್ಕ ಬೇಲಿಯ ಕೆಳಗೆ ಬೆಳೆದ ಶುಂಠಿ ಗಿಡದ ಕಡೆಗೆ ಹೋಗ್ತಿದ್ದೆ. ಶುಂಠಿಯೇನು ಆಕಾಶದಿಂದ  ದುತ್ತನೆ ನನ್ನೆದುರು ಬಂದು ನಿಂತ ಮಾಯೆಯೇನಲ್ಲ. ಅಣ್ಣ (ಅಪ್ಪ) ಡಾಕ್ಟರ್ ಆಗಿ, ಊರಿಂದೂರಿಗೆ ವರ್ಗವಾಗೋ ಕೆಲಸವಾದರೂ, ಹೋದಲ್ಲೆಲ್ಲ ಮನೆಗೆ ಬೇಕಾಗೋ […]

ತೃಣಾವಾಂತರ -2 : ಮಲೆನಾಡ ಭತ್ತ ಮತ್ತು ಅಗ್ರಿ ಎಕಾನಮಿ

ತೃಣಾವಾಂತರ -2 : ಮಲೆನಾಡ ಭತ್ತ ಮತ್ತು ಅಗ್ರಿ ಎಕಾನಮಿ

“ಅಲ್ಲಾ ಕಣ್ರಾ… ಒಂದ್ವರ್ಷನಾದ್ರೂ ಅಲ್ಲಿರೀ ಅಂದ್ರೆ…. ಮುಂದಿನ್ ವರ್ಷ ನೋಡಾನ… ನಮ್ ಲೈನ್ ಗೇ ಬರೀವ್ರಂತೆ.’’ “ಇದೊಳ್ಳೇ ಕಥಿಯಾಯ್ತಲ್ಲಾ ಗೌಡ್ರೇ… ಮನೀ ಮಟ್ಟಿಗೂ ಗದ್ದೇ ಮಾಡಕ್ಕಿಲ್ಲ ಅಂದ್ರೆ, ನಾವೇನ್ ಮಾಡಾದು? ನೀವೇನೇ ಹೇಳಿದ್ರೂ, ನಾವ್ ಹೋಗಾಕ್ಕಿಲ್ಲ ಬಿಡಿ. ನಿಮ್ ಲೈನಾಗೆ ಇರಾದಿದ್ರೆ ನೋಡಿ, ಇಲ್ಲಾ ನಾವ್ ಲೆಕ್ಕ ಮಾಡಿಸ್ಕೊಂಡು ಬೇರೆ ಕಡೆ ನೋಡ್ಕಾತ್ತೀವಿ.’’ ನಾವೆಲ್ಲ ಚಿಕ್ಕವರಿದ್ದಾಗ ಇಂಥಾ ಸಂಭಾಷಣೆಗಳಿಗೇನೂ ಕಡಿಮೆ ಇರಲಿಲ್ಲ. ಕಾಫೀ ಬೆಳೆಯೇ ಪ್ರಧಾನವಾದರೂ, ಗದ್ದೆಯಲ್ಲಿ ಭತ್ತ ಬೆಳೆಯೋದಿಲ್ಲ ಅನ್ನೋರ ಮನೆಗೆ ಕೆಲಸದವರು ಹೋಗೋಕ್ಕೆ ಒಪ್ಪುತ್ತಿರಲಿಲ್ಲ. […]

ತೃಣಾವಾಂತರ -1 : ಭತ್ತದ ಗದ್ದೆ ಎಂಬ ಒಂದು ಹುಲ್ಲುಗಾವಲಿನ ಕಥೆ

ತೃಣಾವಾಂತರ -1 : ಭತ್ತದ ಗದ್ದೆ ಎಂಬ ಒಂದು ಹುಲ್ಲುಗಾವಲಿನ ಕಥೆ

ಯಾವುದೋ ಮಾತಿನ ನಡುವೆ, `ಗದ್ದೆ ಮಾಡೋದು ನಿಲ್ಸಿದ್ದೀವಿ’ ಅಂತ ಅಮ್ಮ ಹೇಳ್ದಾಗ, ಅಪ್ರಯತ್ನಕವಾಗಿ ಪ್ರಶ್ನೆ ಹೊರಬಂತು `ಯಾಕೆ?’ `ಹುಲ್ಲಿನ ದುಡ್ಡಾದ್ರೂ ಉಳಿದಿದ್ರೆ ಮಾಡ್ಬೋದಿತ್ತು. ಮಾಡಿದ್ರೆ ಬರೀ ಲಾಸ್. ಅದ್ರ ಬದ್ಲು, ಅಕ್ಕಿ ತಗೊಂಡು ಊಟ ಮಾಡೋದೇ ಒಳ್ಳೇದು. ಹ್ಯಾಗೂ ಇರೋದೇ ನಾವಿಬ್ರು,’ ಅಂತ ಅಣ್ಣ (ಅಪ್ಪ) ಹೇಳ್ದಾಗ, ಅದಕ್ಕೇನು ಹೇಳ್ಬೇಕೂಂತ ಗೊತ್ತಾಗಲಿಲ್ಲ. ವರ್ಷಗಳು ಕಳೆದಹಾಗೆ, ಊರಿಗೆ ಹೋದಾಗಲೆಲ್ಲ ಒಬ್ಬೊಬ್ಬರದೇ ಗದ್ದೆಗಳು ಖಾಲಿ ಕಾಣಲು ಆರಂಭಿಸಿದವು. ಈಗೊಂದೆರೆಡು ಮೂರು ವರ್ಷಗಳ ಈಚೆಗೆ, ನಮ್ಮ ಮೂಡುಸಸಿಯ ಗದ್ದೆಬೈಲಿನಲ್ಲಿ ಒಬ್ಬರೂ ಭತ್ತ […]

ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಾಮಾನಾ

ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಾಮಾನಾ

ಈಚೆಗೆ ರೈತ ಆತ್ಮಹತ್ಯೆಗಳು ದಿನದಿನದ ಸಂಕಟಗಳಾಗಿ ಸುದ್ದಿಯಾಗುತ್ತಿವೆ. ಈ ಸಾವುಗಳ ಕಾರಣಗಳು ಚರ್ಚೆಯಾಗುತ್ತಿವೆ. ಹೊರಗಿನ ವಿದ್ವಾಂಸರಾಗಿಯೋ, ಚಳವಳಿಯ ಕಾರ್ಯಕರ್ತರಾಗಿಯೋ, ಸರಕಾರಿ ಅಧಿಕಾರಿಗಳಾಗಿಯೋ ಕೆಲವು ಕಾರಣಗಳನ್ನು ಹುಡುಕಿದಾಗಲೂ, ಕೆಲವು ಸ್ಥಳೀಯ ಕಾರಣಗಳು ನಮಗೆ ತಿಳಿಯುವುದೆ ಇಲ್ಲ. ಅವು ಕಪ್ಪೆಚಿಪ್ಪಿನಲ್ಲಿ ಅವಿತಿಟ್ಟಂತೆ ಕೂತಿರುತ್ತವೆ. ಇಂತಹ ಕೆಲವು ಸಮಸ್ಯೆಗಳು ಆಯಾ ಭಾಗದ ಮೌಖಿಕ ರಚನೆಗಳಲ್ಲಿ, ಮಾತುಕತೆಗಳಲ್ಲಿ ವ್ಯಕ್ತವಾಗುವ ಸಾಧ್ಯತೆ ಇರುತ್ತವೆ. ಇವುಗಳನ್ನು ಸಂಗ್ರಹಿಸಿಯೋ ಅಥವಾ ಆಯಾ ಹಾಡುಗಾರಿಕೆ ಮಾತುಕತೆಯ ಸಂದರ್ಭದಲ್ಲಿ ಹಾಜರಿದ್ದು ಕೇಳಿಸಿಕೊಂಡಾಗ ಇಂತವುಗಳು ಅರಿವಿಗೆ ಬರುತ್ತವೆ. ಮೊಹರಂ ಅಧ್ಯಯನದ ಸಂದರ್ಭದಲ್ಲಿ […]

ಉದ್ಯೋಗ ಖಾತ್ರಿ ಕತೆ-1: ಹಾಳಾದ ಉದ್ಯೋಗ ಖಾತ್ರಿ ಕೆಲ್ಸಕ್ಕೆ ಹೋಗಿ ಕೋರ್ಟಿಗೆ ತಿರುಗ್ಯಾಡದು ಬಂದಾದ

ಗ್ರಾಮೀಣ ಪ್ರದೇಶದಲ್ಲಿ ಕೆಲಸವಿಲ್ಲದವರಿಗೆ ಕೆಲಸ ನೀಡಲು ಕೇಂದ್ರ ಸರಕಾರ ಆರಂಭಿಸಿದ ಉದ್ಯೋಗ ಖಾತ್ರಿ ಯೋಜನೆ ರಾಜಕಾರಣಿಗಳ, ಅಧಿಕಾರಶಾಹಿಗಳ ಅಸೂಕ್ಷ್ಮ ಧೋರಣೆಯಿಂದಾಗಿ ಹಳ್ಳ ಹಿಡಿದಿರುವುದು ಎಲ್ಲರಿಗೂ ತಿಳಿದಿದೆ. ಈ ಬಗೆಗೆ ಅಧ್ಯಯನ ಕೈಗೊಂಡ ಭೀಮೇಶ್ ಮಾಚಕನಹಳ್ಳಿಯವರು ಈ ಬಗೆಗೆ ಜನರನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇವು ನಮ್ಮ ವ್ಯವಸ್ಥೆಯ ಕೆಟ್ಟ ಮನಸ್ಥಿಯನ್ನು ತೆರೆದಿಡುತ್ತವೆ. ಇವು ಜನರ ಕಣ್ಣೋಟಗಳಂತಿದ್ದು ಸರಣಿಯಾಗಿ ಕೆಲವು ಕಾಲ ಇಲ್ಲಿ ಬಿತ್ತರಗೊಳ್ಳಲಿವೆ. ಹಾಳಾದ ಉದ್ಯೋಗ ಖಾತ್ರಿ ಕೆಲ್ಸಕ್ಕೆ ಹೋಗಿ ಕೋರ್ಟಿಗೆ ತಿರುಗ್ಯಾಡದು ಬಂದಾದ ತಾಹಿರಾ ಬೇಗಂ, […]

1 6 7 8