ಅಂಕಣಗಳು

ಅಂಕಣಗಳು

ಬಯಲ ಪರಿಮಳ- 6 ಐಸ್‍ಕ್ಯಾಂಡಿ ಶೇಖರಯ್ಯ

ಬಯಲ ಪರಿಮಳ- 6 ಐಸ್‍ಕ್ಯಾಂಡಿ ಶೇಖರಯ್ಯ

`ಅವತ್ತ ತುಂಬಾ ಹೊಟ್ಟ ಹಸ್ದಿತ್ತು,ತಡ್ಕಣಾಕೆ ಆಗ್ದೆ ಪಕ್ಕದ ತೋಟದವ್ರ ಮರಕ್ಕೆ ಹತ್ತಿ ಒಂದು ಕಾಯಿ ಕಿತ್ಕಂಡು ತಿಂದು ಬಿಟ್ಟೆ,ಅದನ್ನ ನೋಡಿದವರೊಬ್ರು ನನ್ನನ್ನ ಹಿಡ್ಕಂಡು ಹೋಗಿ ಪಂಚಾಯಿತಿ ಮುಂದೆ ನಿಲ್ಸಿ ಕಳ್ಳ ಅಂತ ಛೀಮಾರಿ ಹಾಕ್ಸಿದ್ರು,ನಂಗೆ ಅವಮಾನ ತಡ್ಕಳಾಕೆ ಆಗ್ದೆ ಒಂದಷ್ಟು ದಿನ ಊರ್ನೇ ಬಿಟ್ಟು ಹೋಗಿ ಯಾವುದೋ ಹೊಟ್ಲಿನಾಗೆ ಪಾತ್ರೆ ತೊಳ್ಕಂಡಿದ್ದೆ,ಅದು ನಂಗೆ ಒಗ್ಗಲಿಲ್ಲ.ಮತ್ತೆ ಊರಿಗೆ ಬಂದೆ.ಆಗಲೂ ನನ್ನನ್ನ ಕೆಲವರು ಕಳ್ಳನ ಥರವೇ ನೋಡ್ತಿದ್ರು…ಅಂತದ್ದನ್ನೆಲ್ಲಾ ಸಹಿಸ್ಕಂಡು ಒಂದಷ್ಟು ದಿನ ಕೂಲಿ ಕೆಲ್ಸ ಮಾಡ್ದೆ.ಅದು ಒಂದ್ಕೆ ಸಾಕಾದ್ರೆ ಇನ್ನೊಂದ್ಕೆ […]

ಬಯಲ ಪರಿಮಳ- 5 : ರಗ್ಗು ಕೊಟ್ಟು ಹೋದ ಕಿ.ರಂ

ಬಯಲ ಪರಿಮಳ- 5 : ರಗ್ಗು ಕೊಟ್ಟು ಹೋದ ಕಿ.ರಂ

ಹದಿಮೂರು ವರ್ಷಗಳ ಹಿಂದಿನ ಮಾತು. ಅಪಘಾತಕ್ಕಿಡಾಗಿದ್ದ ಅಪ್ಪನನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಸೇರಿಸಿ ಎರಡು ದಿನವಾಗಿತ್ತು. ಗೆಳೆಯ ನಟರಾಜ್ ಹುಳಿಯಾರ್ ಜೊತೆ ಇದ್ದಕ್ಕಿದ್ದಂತೆ ತುರ್ತು ನಿಗಾಘಟಕದ ಎದುರು ಕೂತಿದ್ದ ನನ್ನೆದುರು ಪ್ರತ್ಯಕ್ಷವಾದ ಕಿ.ರಂ.`ಏನ್ರಿ ಎರಡು ದಿನ ಆದ್ರೂ ನಂಗೊಂದು ಮಾತು ಯಾಕೆ ತಿಳಿಸಲಿಲ್ಲ,’ಅಂತ ಅರೆ ಮುನಿಸಿನಿಂದ ಹತ್ತಿರ ಬಂದವರು ತಮ್ಮು ಜೋಳಿಗೆ ಬ್ಯಾಗಿನಿಂದ ಬ್ರೆಡ್ ಪ್ಯಾಕೆಟೊಂದನ್ನು ತೆಗೆದು ನನ್ನ ಕೈಗಿತ್ತು ಎದುರಿಗಿದ್ದ ಕುರ್ಚಿಯೊಂದರಲ್ಲಿ ಸುಮ್ಮನೆ ಕೂತು ಬಿಟ್ಟರು. ಅದರ ಹಿಂದಿನ ವರ್ಷವಷ್ಟೇ ಅವರ ಹೆಂಡತಿ ಹೀಗೆಯೇ ಇಂಥದೇ ತುರ್ತು […]

ಬಯಲ ಪರಿಮಳ-4 : ಅಪ್ಪ ಮತ್ತು ಕಲ್ಲು ಬಾವಿ

ಬಯಲ ಪರಿಮಳ-4 : ಅಪ್ಪ ಮತ್ತು ಕಲ್ಲು ಬಾವಿ

ನಮ್ಮ ತೋಟದ ಮೂಲೆಯೊಂದು ಕಲ್ಲಿನಿಂದ ಕಟ್ಟಿದ ಬಾವಿಯಿದೆ. ಸುಮಾರು ಇನ್ನೂರು ಮುನ್ನೂರು ವರ್ಷಗಳಷ್ಟು ಹಳೆಯದು ಅಂತ ನನ್ನ ಅಜ್ಜ ನನಗೆ ಹೇಳುತ್ತಿದ್ದರು.ನಾನು ಚಿಕ್ಕವನಿದ್ದಾಗ ನಮ್ಮ ಮನೆಗೆ ಬಳಸುತ್ತಿದ್ದ ಬಾವಿ.ಆಗೆಲ್ಲಾ ಮಳೆಗಾಲ ಚೆನ್ನಾಗಿ ಆಗುತ್ತಿದ್ದುದರಿಂದ ಹಾಗೂ ಈಗಿನಂತೆ ಬೋರ್‍ವೆಲ್‍ಗಳು ಇಲ್ಲದಿದ್ದುದರಿಂದ ಅದರಲ್ಲಿ ಹೆಚ್ಚೂ ಕಡಿಮೆ ವರ್ಷವಿಡೀ ನೀರು ಇರುತ್ತಿತ್ತು.ಬೇಸಿಗೆಯಲ್ಲಿ ಈ ನೀರಿನ ಮಟ್ಟ ಅರ್ಧಕ್ಕಿಂತ ಕೊಂಚ ಕೆಳೆಗಿಳಿಯುತ್ತಿದ್ದರೂ,ಎಂದೂ ಇದರ ತಳ ಕಾಣುವಂತೆ ಪೂರಾ ಬತ್ತಿದ್ದನ್ನು ನಾನು ಕಂಡಿರಲಿಲ್ಲ. ನಮ್ಮದು ತೋಟದ ಮನೆ. ಬಹುಮಟ್ಟಿಗೆ ನನ್ನ ಬಾಲ್ಯದ ನೆನಪುಗಳಿಗೆಲ್ಲಾ ಈ […]

ಬಯಲ ಪರಿಮಳ-3; ದೇವರ ಹೊತ್ತವನು

ಬಯಲ ಪರಿಮಳ-3; ದೇವರ ಹೊತ್ತವನು

ಸುಮಾರು ವರ್ಷಗಳ ನಂತರ ನಮ್ಮೂರಿನ ಹೋರಿಗಳ ಹಬ್ಬ ಕಾರಬ್ಬಕ್ಕೆ ಹೋಗಿದ್ದೆ. ಹಿಂದಿನಂತೆ ಊರಿನ ಹೋರಿಗಳನ್ನೆಲ್ಲಾ ನಾ ಮೇಲು ತಾ ಮೇಲು ಅಂತ ಸಿಂಗಾರ ಮಾಡಿ ಹೊರಡಿಸಿಕೊಂಡು ಊರ ತುಂಬಾ ಮೆರವಣಿಗೆ ಮಾಡಿ ಸಂಭ್ರಮಿಸುತ್ತಿದ್ದಂಥ ವಾತಾವರಣ ಇರದಿದ್ದರೂ ಹಬ್ಬದ ಸಂಪ್ರದಾಯದಂತೆ ದೇವರ ಉತ್ಸವ ಹೊರಟಿತ್ತು. ಐದಾರು ಜೋಡಿ ಹೋರಿಗಳು ತಮ್ಮ ತಮ್ಮ ಯಜಮಾನರುಗಳ ಬಂದೋಬಸ್ತಿನಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಾ ಹಿಂಬಾಲಿಸುತ್ತಿದ್ದವು. ಅವುಗಳ ಹಿಂದೆ ಮತ್ತು ಪಕ್ಕದಲ್ಲಿ ಪಡ್ಡೆ ಹೈಕಳು ಆ ಹೋರಿಗಳ ಕೊಂಬುಗಳಿಗೆ ಬಳಿದಿದ್ದ ಬಣ್ಣ, ಕಟ್ಟಿದ್ದ ಬಲೂನುಗಳು,ಅವುಗಳ […]

ಬಯಲ ಪರಿಮಳ-2: ಚುರುಕುಗಣ್ಣಿನ ಹುಡುಗಿ

ಬಯಲ ಪರಿಮಳ-2: ಚುರುಕುಗಣ್ಣಿನ ಹುಡುಗಿ

ಸುಮಾರು ಎಂಟತ್ತು ವರ್ಷಗಳ ಹಿಂದಿನ ಘಟನೆ. ಅವತ್ತು ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋದಾಗ ಪರಿಚಿತ ಪೊಲೀಸಿನವನೊಬ್ಬ ನಮ್ಮ ಸ್ಟ್ಯಾಫ್ ರೂಮಿನಲ್ಲಿ ಬಂದು ಕುಳಿತಿದ್ದ. ಬೆಳಿಗ್ಗೆ ಬೆಳಿಗ್ಗೇನೇ ಅದೂ ಕಾಲೇಜಿನಲ್ಲಿ ಪೊಲೀಸಿನವನಿಗೆ ಏನು ಕೆಲಸವಿದೆ ಅಂತ ನಾನು ಅಚ್ಚರಿಗೊಳ್ಳುತ್ತಿರುವಾಗಲೇ ಅವನು ತಾನು ಬಂದ ಉದ್ಧೇಶವನ್ನು ತಿಳಿಸಿದ. ಮೊದಲ ವರ್ಷದ ಪಿ.ಯೂ.ಸಿ.ಯಲ್ಲಿ ಓದುತ್ತಿರುವ ಹುಡುಗಿಯೊಬ್ಬಳ ಹೆಸರನ್ನು ಹೇಳಿ,ಅವಳನ್ನು ಠಾಣೆಗೆ ಕರೆದು ತರುವಂತೆ ತನ್ನ ಮೇಲಧಿಕಾರಿಯ ಆಜ್ಞೆಯಾಗಿರುವುದಾಗಿ ಹೇಳಿದ ಅವನು ಆ ಹುಡುಗಿಯನ್ನು ತಕ್ಷಣವೇ ಕಳಿಸಿಕೊಡುವಂತೆ ಕೇಳಿಕೊಂಡ. ಹಾಗೆಲ್ಲಾ ಕಳಿಸೋಕೆ ಆಗಲ್ಲ […]

ಬಯಲ ಪರಿಮಳ-1: ಕಾಲದ ಮಡಿಲು ಸೇರಿದ ತಪಲನ ನೆನಪು

ಬಯಲ ಪರಿಮಳ-1: ಕಾಲದ ಮಡಿಲು  ಸೇರಿದ ತಪಲನ ನೆನಪು

ಚಿಕ್ಕಂದಿನಲ್ಲಿ ನನಗೆ ತಪಲ ಅನ್ನುವ ಜೀವದ ಗೆಳೆಯನಿ ಬಾಲ್ಯದ ಹುಡುಗಾಟಿಕೆ, ಕುತೂಹಲ ಇಂಥ ಗೆಳೆಯನೊಬ್ಬನ ಜೀವವನ್ನೇ ಬಲಿ ತೆಗೆದುಕೊಂಡಿತ್ತು, ಅನ್ನುವ ಸಂಗತಿ ಇವತ್ತಿಗೂ ನನ್ನೊಳಗೆ ನೋವಿನ ಸೆಲೆಯಾಡಿಸುತ್ತದೆ. ಈ ಘಟನೆ ನಡೆದಾಗ ನಾವಿನ್ನೂ ಮಿಡ್ಲ್ ಸ್ಕೂಲಿನಲ್ಲಿದ್ದೆವು. ಚಿಕ್ಕವರಿದ್ದಾಗ ನನ್ನಂತೆಯೇ ನನ್ನ ವಾರಿಗೆಯ ಗೆಳೆಯರಿಗೆ ಕುದುರೆ ಸವಾರಿ ಮಾಡುವುದೆಂದರೆ ಇನ್ನಿಲ್ಲದ ಹುಚ್ಚಿನ ಸಂಗತಿಯಾಗಿತ್ತು. ಇಂಥ ಕುತೂಹಲಕ್ಕೆ ನಮ್ಮ ಹಳ್ಳಿಗೆ ವರ್ಷಕ್ಕೆ, ಆರು ತಿಂಗಳಿಗೊಮ್ಮೆ ಕುದುರೆಯ ಮೇಲೆ ಬರುತ್ತಿದ್ದ ಸ್ವಾಮೀಜಿ ಕಾರಣರಾಗಿದ್ದರು. ಸಾಲದ್ದಕ್ಕೆ ವರ್ಷದ ಯಾವುದಾದರೊಂದು ಕಾಲದಲ್ಲಿ ನಮ್ಮ ಹಳ್ಳಿಯಲ್ಲಿ […]

ಉದ್ಯೋಗ ಖಾತ್ರಿ ಕಥನ-5 :ಲಕ್ಷಕ್ಕ ಐದು ಸಾವುರ ಕಮೀಷನ್ ಕೊಟ್ರೆ ಆಯಿತಲ್ಲ..

ಉದ್ಯೋಗ ಖಾತ್ರಿ ಕಥನ-5 :ಲಕ್ಷಕ್ಕ ಐದು ಸಾವುರ ಕಮೀಷನ್ ಕೊಟ್ರೆ ಆಯಿತಲ್ಲ..

ಉದ್ಯೋಗ ಖಾತ್ರಿ ಯೋಜನೆಯ ಬಗೆಗೆ ಗ್ರಾಮಪಂಚಾಯಿತಿ ಅಧ್ಯಕ್ಷರನ್ನು ಮಾತನಾಡಿಸಿದಾಗ ಅವರಾಡಿದ ಮಾತುಗಳಿವು. (ಹೆಸರು-ಎಂ.ನಿರ್ಮಲ (ಗ್ರಾ.ಪಂ.ಅಧ್ಯಕ್ಷರು) ಗಂಡ-ಆರ್.ಮಂಜುನಾಥ, ವಯಸ್ಸು-30ವರ್ಷ ಜಾತಿ-ನಾಯಕ ವಿದ್ಯಾರ್ಹತೆ-ಎಸ್.ಎಸ್.ಎಲ್.ಸಿ. ಗ್ರಾಮ-ನರಸಿಂಗಪುರ, ತಾಲೂಕು-ಸಂಡೂರು, ಗ್ರಾಮಪಂಚಾಯತಿ-ನರಸಿಂಗಪುರ ಜಿಲ್ಲೆ-ಬಳ್ಳಾರಿ) ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಹೇಳಿ.. ಸಾರ್ ಈ ಯೋಜನೆ ಏನು ಐತಲ್ಲ ಬಾಳ ಒಳ್ಳೆಯ ಯೋಜನೆ. ಆದ್ರೆ ಇದು ನಮ್ಮಲ್ಲಿ ಯಶಸ್ವಿಯಾಗ್ತಿಲ್ಲ. ಯಾಕಂದ್ರೆ ನಮ್ ಊರಾಗ ಎನ್.ಎಂ.ಡಿ.ಸಿ. ಅಂತೇಳಿ ಗೌರಮೆಂಟ್ ಕಂಪನಿ ಐತಿ. ಈ ಕಂಪನಿಯಾಗ ಪ್ರತಿಯೊಬ್ಬರಿಗೆ ಕೆಲ್ಸ ಕೊಡ್ತಾರ. ಈ ಕಂಪನಿಯಾಗ ಕೆಲ್ಸ ಮಾಡಂತ ಮಹಿಳೆಯರಿಗೆ ಆಗಲಿ, ಪುರುಷರಿಗೆ ಆಗಲಿ, ಬಾಳಾ […]

ತೃಣಾವಾಂತರ – 6 : ಹೈಬ್ರಿಡ್ ಗೆ ಹೆದರದ ಕಿರ್ವಾಣ ಮತ್ತು ಘಮ ಕಳೆದುಕೊಂಡ ಗಮಸಾಲೆ

ತೃಣಾವಾಂತರ – 6 : ಹೈಬ್ರಿಡ್ ಗೆ ಹೆದರದ ಕಿರ್ವಾಣ ಮತ್ತು ಘಮ ಕಳೆದುಕೊಂಡ ಗಮಸಾಲೆ

`ಏಯ್… ಯಾಕೋ ಅದ್ನ ಹಾಕ್ದೆ? ಎಷ್ಟ್ ಸಲ ಹೇಳಿಲ್ಲ ನಿಂಗೆ ಈ ಭತ್ತ ಹಾಕ್ಬೇಡಾ ಅಂತ. ಸುಮ್ಗೆ ನಮ್ ತಲೆ ಮ್ಯಾಗೆ ತಂದ್ ಇಡ್ತೀಯಾ… ಅದಷ್ಟ್ ಮಾಡಿ ಕೊಡ್ತೀನಿ, ಇನ್ನುಳ್ದಿದ್ನ ಹಾಕ್ಬೇಡಿ,’ ಅಂತ ಶೌಕತ್ ಕೂಗಿದಾಗ ನಂಗೆ ಆಶ್ಚರ್ಯ ಆಯ್ತು. ಭತ್ತದ ಮೂಟೆಗಳನ್ನ ಸುರೀತ್ತಿದ್ದ ಸಣ್ಣ ಹುಡುಗ ಮೊಗಣ್ಣ ಪಿಳಿಪಿಳಿ ಕಣ್ಣು ಬಿಡುತ್ತಿದ್ದ. `ಇರ್ಲಿ ಬಿಡಪ್ಪಾ… ನಾನೇನೂ ಗಲಾಟೆ ಮಾಡಲ್ಲ,’ ಅಂತ ಮಿಲ್ ಮಾಡೋಕೆ ಬತ್ತ ತಂದಿದ್ದ ರೈತ ಕೇಳಿಕೊಳ್ಳುತ್ತಿದ್ದರೂ, ಶೌಕತ್ ಕೇಳೋ ಸ್ಥಿತಿಯಲ್ಲಿರಲಿಲ್ಲ. ನಾನಾಗಷ್ಟೇ ಕಾಲೇಜಿನಿಂದ […]

ಉದ್ಯೋಗ ಖಾತ್ರಿ ಕಥನ- 4 : ಇವಾಗಿವಾಗ ಜನ್ರಿಗೆ ಸ್ವಲ್ಪ ಅರಿವು ಬಂದಾದ..

ಉದ್ಯೋಗ ಖಾತ್ರಿ ಕಥನ- 4 : ಇವಾಗಿವಾಗ ಜನ್ರಿಗೆ ಸ್ವಲ್ಪ ಅರಿವು ಬಂದಾದ..

(ರುಕ್ಕಪ್ಪ – ತಂದೆ-ಹನುಮಂತ, ವಯಸ್ಸು-45ವರ್ಷ, ಜಾತಿ-ಹರಿಜನ, ವಿದ್ಯಾರ್ಹತೆ-4ನೇ ತರಗತಿ, ಗ್ರಾಮ-ಮಾಡಗಿರಿ, ತಾಲೂಕು-ಮಾನ್ವಿ, ಜಿಲ್ಲೆ-ರಾಯಚೂರು . ಉದ್ಯೋಗ ಖಾತ್ರಿ ಯೋಜನೆ ಬಗೆಗೆ ಮಾತನಾಡಿಸಿದಾಗ ಅವರಾಡಿದ ಮಾತುಗಳಿವು.) ಮಾಡಗಿರಿ ಗ್ರಾಮಕ್ಕೆ ಹೋಗಿ ರುಕ್ಕಪ್ಪ ಎನ್ನುವವರನ್ನು ಭೇಟಿಯಾಗಿ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ನಿಮಗೆ ಗೊತ್ತಿದೆಯೇ ಎಂದು ಕೇಳಿದಾಗ `ಸಾರ್ ನಮ್ಗ ಈ ಯೋಜನೆ ಬಗ್ಗೆ ಗೊತ್ತೈತಿ. ಇದು ಬಡವರಿಗಾಗಿ ಅಂದ್ರೆ ಕೂಲಿಕಾರರಿಗಾಗಿ ಬಂದಂತ ಯೋಜನೆ ಇದು. ಕೂಲಿ ಮಾಡಿ ಜೀವ್ನ ಮಾಡಂತ ಪ್ರತಿಯೊಂದು ಕುಟುಂಬಕ್ಕ ಈ ಯೋಜನೆಯಲ್ಲಿ ದುಡಿಯಾಕ ಕೂಲಿ […]

ತೃಣಾವಾಂತರ – 5: ಫ್ಲಡ್ ಇರಿಗೇಷನ್ ನಲ್ಲಿ ಬೆಳೆಯೋ ಬಯಲುಸೀಮೆಯ ಭತ್ತ

ತೃಣಾವಾಂತರ – 5: ಫ್ಲಡ್ ಇರಿಗೇಷನ್ ನಲ್ಲಿ ಬೆಳೆಯೋ ಬಯಲುಸೀಮೆಯ ಭತ್ತ

ಯಾಕೋ ಇಷ್ಟವಾಗಿರಲಿಲ್ಲ…. ಯಾವಾಗಲೂ ಕಾಡುಪ್ರಾಣಿಗಳ ಗುಂಗಿನಲ್ಲಿರುತ್ತಿದ್ದ ನಾನು, ದೆಹಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವೈರ್ನಮೆಂಟ್ ಫೆಲೋಶಿಪ್ ಗೆ ಅರ್ಜಿ ಗುಜರಾಯಿಸಿದ್ದೆ. ಫೆಲೋಶಿಪ್ ಮಾಡಿದರೆ ತಲೆಯ ಮೇಲೊಂದು ಕೋಡು ಬರುತ್ತದೆ ಅಂತ ತಿಳಿದುಕೊಂಡಿದ್ದ ಕಾಲವದು. ಹದಿನೈದು ವರ್ಷಗಳ ನಂತರ, ಆಗಿನ ಮನಸ್ಥಿತಿ ನೆನೆಸಿಕೊಂಡರೆ, ನಗು ಬರುತ್ತದೆ. ಅವರೇನೋ ಮರುಭೂಮಿಯಾಗುತ್ತಿರುವ ಫಲವತ್ತಾದ ಭೂಮಿ ಅನ್ನೋ ವಿಷಯದ ಬಗ್ಗೆ ಅರ್ಜಿ ಕರೆದಿದ್ದರು. ನಾನು, ಕಾಡುಗಳ ಸುತ್ತಲಿನ ಪ್ರದೇಶಗಳು ಬರಡಾಗುವುದರ ಬಗ್ಗೆ ಬರೆಯೋಕೆ ಅಂತ ಕೇಳಿದ್ದೆ. ಆದರೆ, ಅದರ ಅಧ್ಯಕ್ಷೆಯಾಗಿದ್ದ ಸುನಿತಾ […]