ಅಂಕಣಗಳು

ಅಂಕಣಗಳು

ಬಯಲ ಪರಿಮಳ-13: ಸ್ವಾವಲಂಬನೆಯ ಕಣಜ ಸಿದ್ದನಕಟ್ಟೆಯ ಪಂಕಜ.

ಬಯಲ ಪರಿಮಳ-13: ಸ್ವಾವಲಂಬನೆಯ ಕಣಜ ಸಿದ್ದನಕಟ್ಟೆಯ ಪಂಕಜ.

ಊರಿನಿಂದ ದೂರವಿರುವ ತೋಟ, ಅದರೊಳಗೊಂದು ಮನೆ,ಮನೆಯ ಸುತ್ತ ಗಿಡಮರಗಳ ಅಚ್ಚ ಹಸಿರು,ಆ ಹಸಿರಿನೊಳಗೆ ಬಗೆ ಬಗೆಯ ಹೂಗಳ ಘಮಲು,ಈ ಘಮಲಿನ ವಾರಸುದಾರರು ನಾವೇ ಎಂಬಂತೆ ಸಾವಧಾನದ ಹೆಜ್ಜೆಗಳನ್ನಿಟ್ಟು ಅಡ್ಡಾಡುವ ನವಿಲುಗಳು, ಅವುಗಳಿಗೆ ಸಾಥು ಕೊಡುವ ಕೋಳಿಗಳು, ನಾಯಿಗಳು, ಬೆಳಗು ಬೈಗುಗಳಲ್ಲಿ ಥರಾವರಿ ಹಕ್ಕಿಗಳ ಕಲರವ….ತೋಟದ ಹಿಂಬದಿಗೆ ಗುಡ್ಡಗಳ ಸಾಲು, ಅವುಗಳೆಡೆಯಿಂದ ಸದಾ ತಣ್ಣಗೆ ತೀಡುವ ತಂಗಾಳಿ….ಚಿಕ್ಕನಾಯಕನಹಳ್ಳಿಯಂಥ ಅಪ್ಪಟ ಬಯಲು ಸೀಮೆಯ ನಾಡಲ್ಲಿ ಇಂಥದ್ದೊಂದು ಪಕ್ಕಾ ಮಲೆನಾಡಿನ ವಾತಾವರಣವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೂ ತಮ್ಮ ಅಭಿರುಚಿ, ಪರಿಶ್ರಮ ಹಾಗೂ […]

ಬಯಲ ಪರಿಮಳ-12: ಭಗವತಿಕೆರೆಯಲ್ಲಿ ಕಳೆದ ಒಂದು ದಿನ.

ಬಯಲ ಪರಿಮಳ-12: ಭಗವತಿಕೆರೆಯಲ್ಲಿ ಕಳೆದ ಒಂದು ದಿನ.

ಕೆಲವು ದಿನಗಳ ಹಿಂದೆ ಕಡಿದಾಳ್ ಶಾಮಣ್ಣನವರ ಭಗವತಿಕೆರೆಗೆ ಹೋಗಿದ್ದೆ. ರೈತ ಚಳುವಳಿ ಕಾವನ್ನು ಕಂಡವರಿಗೆ, ತೇಜಸ್ವಿಯವರ ಬರಹಗಳನ್ನು ಓದಿದವರಿಗೆ ಕಡಿದಾಳ್ ಶಾಮಣ್ಣನವರ ಹೆಸರು ಗೊತ್ತಿರದೇ ಇ ರದು. ಒಂದು ಪಕ್ಷ ಹೀಗೆ ಗೊತ್ತಿರದೇ ಇದ್ದರೂ, ಅಪ್ಪಟ ಬಿಳಿ ತಲೆಕೂದಲು, ಬಿಳಿ ಗಡ್ಡದ, ದೇಸೀ ಉಡುಪಿನ ಜೊತೆಗೆ ಹೆಗಲ ಮೇಲೊಂದು ಹಸಿರು ಟವೆಲ್ಲಿನ, ನಗು ಮುಖದ, ಮೆಲು ಮಾತಿನ ಶಾಮಣ್ಣನವರನ್ನು ಕಂಡರೆ ಯಾರಿಗೇ ಆಗಲಿ ವಿಶೇಷ ಅನಿಸದೇ ಇರದು. ಶಾಮಣ್ಣನವರನ್ನು ಅನೇಕ ಸಂದರ್ಭಗಳಲ್ಲಿ ನಾನು ನೋಡಿದ್ದರೂ, ಮೊನ್ನೆ ಮೊನ್ನೆಯವರೆಗೂ ನೇರ […]

ಬಯಲ ಪರಿಮಳ-11: ಶ್ರವಣಬೆಳಗೊಳದಲ್ಲಿ ಸಿಕ್ಕ ಅಜ್ಜಿ ಸರ್ವಜ್ಞಮತಿ.

ಬಯಲ ಪರಿಮಳ-11: ಶ್ರವಣಬೆಳಗೊಳದಲ್ಲಿ ಸಿಕ್ಕ ಅಜ್ಜಿ ಸರ್ವಜ್ಞಮತಿ.

`ನೀವು ಮಕ್ಕಳು,ಮನೆ,ಗಂಡ ಎಲ್ಲರನ್ನೂ ಬಿಟ್ಟು ಅದೂ ಈ ಇಳಿವಯಸ್ಸಿನಲ್ಲಿ ಹಿಂಗೆ ಒಂಟಿಯಾಗಿ ಬದುಕೋಕೆ ಕಷ್ಟ ಆಗ್ತಿಲ್ವೇನಜ್ಜಿ,’ಅಂತ ಯಾರೂ ಕೇಳ ಬಹುದಾದ ಸರ್ವೇಸಾಮಾನ್ಯ ಪ್ರಶ್ನೆಯೊಂದನ್ನು ಕೇಳಿ ಮಾತಾಜಿಯನ್ನೇ ದಿಟ್ಟಿಸಿದೆ. ಆ ಅಜ್ಜಿಗೆ ನನ್ನ ಮಾತು ಎಳಸು ಅನಿಸಿತೋ ಅಥವಾ ಇಂಥ ಅದೆಷ್ಟೋ ಪ್ರಶ್ನೆಗಳನ್ನು ಈಗಾಗಲೇ ಎದುರಿಸಿ ಒಂದು ಹದಕ್ಕೆ ಬಂದಿತ್ತೋ ಏನೋ,ನನ್ನ ಮಾತುಗಳನ್ನು ತೀರಾ ಒಳಗೆ ಬಿಟ್ಟುಕೊಂಡು ಧ್ಯಾನಿಸಿದವರಂತೆ ನನ್ನನ್ನೇ ನೋಡುತ್ತಿದ್ದ ಅವರ ಮೊಗದಲ್ಲಿ ಸಣ್ಣದೊಂದು ಮುಗುಳ್ನಗೆ ಮೂಡಿ ಮರೆಯಾಯ್ತು. ದುಂಡು ಮುಖದ,ನಸುಗೆಂಪು ವರ್ಣದ,ಅಡಿಯಿಂದ ಮುಡಿಯವರೆಗೆ ನಾರುಮಡಿಯಂಥ ಸೀರೆಯನ್ನು […]

ಬಯಲ ಪರಿಮಳ-10 :ಹೊಗೆಯಿಲ್ಲದ ಒಲೆಗಳ ತಾಯಿ ಲಲಿತಾಬಾಯಿ.

ಬಯಲ ಪರಿಮಳ-10 :ಹೊಗೆಯಿಲ್ಲದ ಒಲೆಗಳ ತಾಯಿ ಲಲಿತಾಬಾಯಿ.

`ನಮ್ದು ಏನಿದ್ರೂ ಅಡಿಗೆ ಮನೇಲೇ ಕೆಲಸ ನೋಡ್ರಿ ಹಂಗಾಗಿ ಮೊದ ಮೊದಲು ಮನೆ ಒಳೀಕೆ ಬಿಟ್ಕಣಾಕೆ ಕೆಲವರು ಹಿಂದೂ ಮುಂದೂ ನೋಡ್ತಿದ್ರು, ಆಗ ನಂಗೂ ಒಂಥರಾ ಮುಜುಗರ ಆಗ್ತಿತ್ತು. ಈಗ ಹಂಗೇನಿಲ್ಲ, ಎಲ್ರೂ ಪ್ರೀತಿಯಿಂದ ಮಾತನಾಡಿಸ್ತಾರೆ, ಒಳಿಕೂ ಬಿಟ್ಕಂತಾರೆ,’ ನನ್ನ ಊರಿನ ಪಕ್ಕದ ನುಚ್ಚುಗಲ್ಲುಪಾಳ್ಯದಲ್ಲಿ ಬೋವಿ ಜನಾಂಗದ ಮನೆಯೊಂದರಲ್ಲಿ ತಾವು ಹಾಕುತ್ತಿದ್ದ ಒಲೆಗೆ ಮಣ್ಣಿನ ಮುದ್ದೆಯನ್ನು ಗಟ್ಟಿಸುತ್ತಲೇ ಮಾತು ಶುರು ಮಾಡಿದರು ಲಲಿತಾ ಬಾಯಿಯವರು. ಲಲಿತಾ ಬಾಯಿವರು ಹಾಕುವ ಒಲೆಗಳ ಬಗ್ಗೆ ಕೇಳಿ ತಿಳಿದಿದ್ದ ನನಗೆ ಅವರು […]

ಬಯಲ ಪರಿಮಳ -9 : ಕೊನೆಕಾರ ಚಿಕ್ಕಣ್ಣಜ್ಜ

ಬಯಲ ಪರಿಮಳ -9 : ಕೊನೆಕಾರ ಚಿಕ್ಕಣ್ಣಜ್ಜ

`ಈ ಕೊನೆಕಾರಿಕೆ ಇದ್ಯಲ್ಲ ಇದು ಒಂಚೂರು ಹೆಚ್ಚು ಕಮ್ಮಿ ಆದ್ರೆ ನಮ್ಮ ಪ್ರಾಣಕ್ಕೇ ಸಂಚಕಾರ ತಂದು ಬಿಡುತ್ತೆ.ಇದ್ರಲ್ಲಿ ತುಂಬಾ ಉಪಾಯವಾಗಿ ಕೆಲ್ಸ ಮಾಡ್ಬೇಕು. ಜೊತೆಗೆ ಈ ಜವಣಿಗೆ ಕಡ್ಡೀನ ಆತು ಹಿಡ್ಯಾಕೆ ರಟ್ಟೆ ಗಟ್ಟಿ ಇರ್ಬೇಕು, ಕಣ್ಣುಗಳೂ ನೆಟ್ಟಗಿರಬೇಕು, ಇಲ್ಲಾಂದ್ರೆ ನಾವು ಕೀಳೋ ಕಾಯಿಗಳು ನಮ್ಮ ತಲೆ ಮ್ಯಾಲೆ ಬಾಣದಂಗೆ ಬಂದು ಬಿಡ್ತಾವೆ. ಈಗಂತೂ ಯಾರೂ ಈ ಕಸುಬನ್ನ ಮಾಡೋಕೆ ಮುಂದೆ ಬರ್ತಿಲ್ಲ. ಹಿಂಗೇ ಇನ್ನೂ ಕೆಲವು ದಿನ ಕಳೀತೂ ಅಂದ್ರೆ ಬಿದ್ದ ಕಾಯಿಗಳನ್ನಷ್ಟೇ ಆಯ್ದು ಅಟ್ಟಕ್ಕೆ […]

ಉದ್ಯೋಗ ಖಾತ್ರಿ ಕಥನ-7 : ನಮ್ಮ ಪಂಚಾಯ್ತಿಯಲ್ಲಿ ಹಿಟ್ಲರ್ ರಾಜಕೀಯ ನಡೀತಾದ..

ಉದ್ಯೋಗ ಖಾತ್ರಿ ಕಥನ-7 : ನಮ್ಮ ಪಂಚಾಯ್ತಿಯಲ್ಲಿ ಹಿಟ್ಲರ್ ರಾಜಕೀಯ ನಡೀತಾದ..

( ಹೆಸರು-ಹನುಮಂತಪ್ಪ ಹೊಳಾಚೆ, ಅಧ್ಯಕ್ಷರು ರಾಜ್ಯ ರೈತ ಸಂಘ(ಹಸಿರು ಸೇನೆ) ಕೊಪ್ಪಳ ಜಿಲ್ಲಾ ಘಟಕ ವಯಸ್ಸು-50ವರ್ಷ ಜಾತಿ-ಕುರುಬರು; ವಿದ್ಯಾರ್ಹತೆ-5ನೇ ತರಗತಿ ಗ್ರಾಮ-ಬೂದುಗುಂಪ ತಾಲೂಕು-ಕೊಪ್ಪಳ ಗ್ರಾಮಪಂಚಾಯತಿ-ಬೂದಗುಂಪ, ಜಿಲ್ಲೆ-ಕೊಪ್ಪಳ) ಕೊಪ್ಪಳ ತಾಲೂಕಿನ ಬೂದುಗುಂಪ, ಇಂದರಗಿ, ಹಾಸಗಲ್ ಮತ್ತು ಇರಕಲ್‍ಗಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದಂತ ಕೂಲಿಯನ್ನು ನಿಜವಾದ ಕೂಲಿಕಾರರಿಗೆ ನೀಡದೆ, ಕೆಲಸ ಮಾಡದೆ ಇರುವಂತ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಕೂಲಿ ಪಾವತಿಸಿರುವುದನ್ನು ವಿರೋಧಿಸಿ ಕೊಪ್ಪಳ ತಾಲೂಕು ಪಂಚಾಯ್ತಿ ಮುಂದೆ ಕೂಲಿಕಾರರು ಮತ್ತು ಕರ್ನಾಟಕ […]

ತೃಣಾವಾಂತರ : ಸಮುದ್ರದ ನೆಂಟಸ್ತನ ಉಪ್ಪಿಗೆ ಬರ

ತೃಣಾವಾಂತರ : ಸಮುದ್ರದ ನೆಂಟಸ್ತನ ಉಪ್ಪಿಗೆ ಬರ

ಇತ್ತೀಚೆಗೆ ಊರಿಂದ ತಂದ ಕಿರ್ವಾಣ ಕೆಂಪಕ್ಕಿಯಲ್ಲಿ ಒಂದೆರೆಡು ಕೇಜಿ ಹುಳ ಬಂದು ಎಸೆಯಬೇಕಾಗಿ ಬಂದಾಗ ಹೊಟ್ಟೆ ಉರಿದುಹೋಯ್ತು. ಬೆಂಗಳೂರಿಗೆ ಬಂದು ಇಷ್ಟು ವರ್ಷಗಳಲ್ಲಿ ಪಾಸ್ತ, ಪಿಜ್ಜಾ, ಬರ್ಗರ್ ಗಳನ್ನು ಅರಗಿಸಿಕೊಳ್ಳೋ ಅಭ್ಯಾಸ ಆಗಿದ್ದರೂ, ಕೆಂಪಕ್ಕಿ ಅನ್ನದ ವ್ಯಾಮೋಹ ಇನ್ನೂ ಬಿಡೋಕೆ ಆಗಿಲ್ಲ. ನಮ್ಮ ಮನೆಯಲ್ಲಿ ಸೊಸೈಟಿ ಅಕ್ಕಿಯದೇ ಕಾರುಬಾರು. ನಮ್ಮ ರೈಸ್ ಮಿಲ್ ಇರೋ ಗೆಂಡೇಹಳ್ಳಿ ಕಡೆ ಕಿರ್ವಾಣ ಬೆಳೆಯೋದು ಕಡಿಮೆ. ಏನಿದ್ರೂ ಮೂಡಿಗೆರೆ ಮತ್ತು ಸಕಲೇಶಪುರದ ಕಡೆ ಮಾತ್ರ ಜಾಸ್ತಿ ಬೆಳೆಯೋದು. ಹಾಗಾಗಿ, ಶಶಿಧರಣ್ಣನಿಗೆ ಫೋನ್ […]

ಬಯಲ ಪರಿಮಳ-8: ಇಲ್ಲಿರುವುದು ಸುಮ್ಮನೆ, ಎಲ್ಲಿದೆ ನಮ್ಮನೆ ?

ಬಯಲ ಪರಿಮಳ-8: ಇಲ್ಲಿರುವುದು ಸುಮ್ಮನೆ, ಎಲ್ಲಿದೆ ನಮ್ಮನೆ ?

`ಹಿಂಗೆ ಬಂದು ಟೆಂಟ್ ಹಾಕ್ಕೆಂಡು ಇರ್ತಾರಲ್ಲ ಈ ಅಲೆಮಾರಿಗಳು ಅನಿಸ್ಕಂಡವ್ರು ಬಡ್ಡೀಮಕ್ಳು ಇವ್ರು ಯಾವುದ್ಕೂ ಹೇಸೋರಲ್ಲ, ಇವ್ರೊಳ್ಗೆ ಕಳ್ರು,ಕಾಕ್ರು ಅಷ್ಟೇ ಯಾಕೆ ಭಯೋತ್ಪಾದಕ್ರು ಇದ್ರೂ ಏನ್ ಆಶ್ಚರ್ಯ ಪಡಂಗಿಲ್ಲ,ಇಂಥವ್ರಿಗೆಲ್ಲಾ ಹಿಂಗೆ ಠಿಕಾಣಿ ಹೂಡಾಕೆ ಬಿಲ್ಕುಲ್ ಬಿಡ್ಬಾರ್ದು,’ ವ್ಯಕ್ತಿಯೊಬ್ಬ ತನ್ನ ಜೊತೆಗಿದ್ದವರಿಗೆ ಹೀಗೆ ತಿಪಟೂರಿನ ಶಾರದಾನಗರ ರೈಲ್ವೇ ನಿಲ್ದಾಣದ ಎದುರಿಗಿದ್ದ ಅಲೆಮಾರಿ ಟೆಂಟುಗಳನ್ನು ತೋರಿಸುತ್ತಾ ಹೇಳುತ್ತಿದ್ದ. ಅವನ ದನಿಯಲ್ಲಿದ್ದ ಅಸಹನೆ ಹಾಗೂ ಅನುಮಾನಗಳನ್ನು ಆ ಜೊತೆಗಾರರೂ ಉಸಿರಾಡುತ್ತಿದ್ದರು. ಸಂಜೆಗತ್ತಲಿನಲ್ಲಿ ಅಲ್ಲಿ ಬೆಳೆದಿರುವ ಪೊದೆಗಳ ಆಸುಪಾಸಿನಲ್ಲಿ ಅಲೆಮಾರಿ ಹೆಂಗಸರು ಗಂಡಸರು […]

ಬಯಲ ಪರಿಮಳ- 7 : ಕಾಡ ತೊರೆಯಂತಹ ಶಂಕರಯ್ಯ

ಬಯಲ ಪರಿಮಳ- 7 : ಕಾಡ ತೊರೆಯಂತಹ ಶಂಕರಯ್ಯ

ಬೆಳಗು ಬೈಗುಗಳಲ್ಲಿ ಥರಾವರಿ ಹಕ್ಕಿಗಳ ಕಲರವ, ನವಿಲುಗಳ ನರ್ತನ, ಹಸಿರು ಗಿಳಿಗಳ ಹಿಂಡು, ಮಳೆಗಾಲದಲ್ಲಿ ತುಂಬಿ ಹರಿಯುವ ತೊರೆ, ಆ ತೊರೆಯ ತಡಿಯಲ್ಲೊಂದು ಮನೆ, ಮನೆಯಿಂದ ಆಚೆ ಕಾಲಿಟ್ಟರೆ ಸಾಕು ಗಿಡಮರಗಳು, ಹೂ ಹಣ್ಣುಗಳು, ಅದರಾಚೆಗೆ ಕಾಡು, ಕಣ್ಣು ಹಾಯಿಸಿದಷ್ಟೂ ಹಸಿರು ತೇರು, ಎಂಥ ಬೇಸಿಗೆಯಲ್ಲೂ ತಣ್ಣಗೆ ತೀಡುವ ತಂಗಾಳಿ…ಅಬ್ಬಾ ಇಂಥದ್ದೊಂದು ಬದುಕಿನ ಪರಿ, ಅದಕ್ಕೆ ಕಸುವು ತುಂಬುವ ಪರಿಸರ ಯಾರಿಗೆ ತಾನೆ ಹಿಡಿಸದು. ನಗರವೆಂಬ ಕಾಂಕ್ರಿಟ್ ಕಾಡುಗಳಲ್ಲಿ ವಾಸಿಸುವವರು ಇರಲಿ,ನಗರದ ವಾಂಛಲ್ಯಗಳಿಗೆ ಸಿಕ್ಕಿ ನಲುಗುತ್ತಿರುವ ಹಳ್ಳಿಗಳಲ್ಲಿ […]

ಉದ್ಯೋಗ ಖಾತ್ರಿ ಕಥನ-6: ನೂರಾಳ್ ಕೂಲಿ ಕೆಲ್ಸ ಒಂದು ಕುಟುಂಬಕ್ಕ ಸಾಲತಾದೇನು? -ತಾಯಪ್ಪ

ಉದ್ಯೋಗ ಖಾತ್ರಿ ಕಥನ-6: ನೂರಾಳ್ ಕೂಲಿ ಕೆಲ್ಸ ಒಂದು ಕುಟುಂಬಕ್ಕ ಸಾಲತಾದೇನು?  -ತಾಯಪ್ಪ

(ಹೆಸರು-ತಾಯಪ್ಪ, ತಂದೆ-ಈಶ್ವರಪ್ಪ, ವಯಸ್ಸು-35ವರ್ಷ, ಜಾತಿ-ನಾಯಕ, ವಿದ್ಯಾರ್ಹತೆ-ಇಲ್ಲ ಗ್ರಾಮ-ಜಾಗೀರ ಜಾಡಲದಿನ್ನಿ, ತಾಲೂಕು-ದೇವದುರ್ಗ, ಗ್ರಾಮಪಂಚಾಯತಿ-ಜಾಡಲದಿನ್ನಿ, ಜಿಲ್ಲೆ-ರಾಯಚೂರು) ತಾಯಪ್ಪೋರೇ ಉದ್ಯೋಗ ಖಾತ್ರಿ ಯೋಜನೆ ನಿಮ್ಮ ಊರಾಗ ಹೆಂಗ ನಡಿತದೆ? ಸಾರ್ ಅದೇ ಪಂಚಾಯ್ತಿ ಕಡೆಯಿಂದ ಒಂದು ವರ್ಷಕ್ಕೆ ಒಂದು ಕುಟುಂಬಕ್ಕೆ ನೂರಾಳ್ ಕೂಲಿ ಕೆಲ್ಸ ಕೊಡ್ಬೇಕಂತೇಳಿ ಬಂದಾದಲ್ಲ ಅದ್ರು ಬಗ್ಗೆ ಮಾಹಿತಿ ಕೇಳಾಕತ್ತೀರಲ್ಲ? ಸಾರ್ ಸರಕಾರ ಒಂದು ಕುಟುಂಬಕ್ಕ ನೂರಾಳು ಕೂಲಿ ಕೆಲ್ಸ ಕೊಡ್ಬೇಕಂತೇಳಿ ಮಾಡ್ಯಾದಲ್ಲ. ನೂರಾಳ್ ಕೂಲಿ ಕೆಲ್ಸ ಒಂದು ಕುಟುಂಬಕ್ಕ ಸಾಲತಾದೇನು? ನೀವೇ ಹೇಳ್ರಿ. ಈ ಪಂಚಾಯ್ತಿ ಕೆಲ್ಸದಿಂದ […]