ಅಂಕಣಗಳು

ಅಂಕಣಗಳು

ದಮನಿಯ ದನಿ ಆಲಿಸಿದರೆ ದಮನಿತರ ದನಿಯೂ ಕೇಳುತ್ತದೆ

ದಮನಿಯ ದನಿ ಆಲಿಸಿದರೆ ದಮನಿತರ ದನಿಯೂ ಕೇಳುತ್ತದೆ

ಪ್ರಜಾತಂತ್ರ ವ್ಯವಸ್ಥೆಯ ಮೂಲ ಲಕ್ಷಣ ಎಂದರೆ ಪ್ರಜೆಗಳ ದನಿಯನ್ನು ಆಳ್ವಿಕರು ಆಲಿಸುವ ಮೂಲಕ ಜನಸಾಮಾನ್ಯರ ದಮನಿಯಲಿ ಹರಿವ ರಕ್ತ ಸಂಚಲನವನ್ನು ಗ್ರಹಿಸುವುದು ಮತ್ತು ಸಾರ್ವಭೌಮ ಪ್ರಜೆಗಳ ನಾಡಿ ಮಿಡಿತವನ್ನು ಅರಿತುಕೊಳ್ಳುವುದು. ಇದು ತಾತ್ವಿಕ ಅಥವಾ ಅತಿರಂಜಿತ ಸೈದ್ಧಾಂತಿಕ ಎನಿಸಿದರೆ ಅಡ್ಡಿಯಿಲ್ಲ. ಈ ಎರಡು ಗ್ರಹೀತಗಳಿಂದಾಚೆಗೆ ಪ್ರಜಾತಂತ್ರ ಏನಾದರೂ ಇದ್ದರೆ ಅದು ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲಿ ಮತ್ತು ಆವರಣಗಳಲ್ಲಿ ಮಾತ್ರವೇ ಕಾರ್ಯನಿರತವಾಗಿರುತ್ತವೆ. ಪ್ರಜಾತಂತ್ರವನ್ನು ಅರ್ಥಮಾಡಿಕೊಳ್ಳುವುದು ಬೇರೆ ಅಳವಡಿಸಿಕೊಳ್ಳುವುದು ಬೇರೆ ಮತ್ತು ಗೌರವಿಸುವುದೇ ಬೇರೆ. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಪ್ರತಿಯೊಬ್ಬ […]

ಮರದ್‍ದೊಡ್ಡಿಯ ಶಿವಾಲೆ ನಾಯಿ ಮತ್ತು ಆ್ಯಂಡೀಸ್‍ನ ಉಸೇರೋ ಕುದುರೆ

ಮರದ್‍ದೊಡ್ಡಿಯ ಶಿವಾಲೆ ನಾಯಿ ಮತ್ತು ಆ್ಯಂಡೀಸ್‍ನ ಉಸೇರೋ ಕುದುರೆ

‘ಪ್ರಾಣಿಗಳೊಂದಿಗೆ ಕ್ರೂರವಾಗಿ ವರ್ತಿಸುವವರು ಮನುಷ್ಯರೊಂದಿಗೂ ಕಠಿಣವಾಗಿರುತ್ತಾರೆ. ಒಬ್ಬ ಮನುಷ್ಯನ ಹೃದಯ ಎಂತದ್ದೆಂದು ಅವರು ಪ್ರಾಣಿಗಳ ಜೊತೆ ಹೇಗಿರುತ್ತಾರೆ ಅನ್ನುವುದನ್ನ ನೋಡೇ ತಿಳಿಯಬಹುದು’ ಅನ್ನುವ ಮಾತೊಂದಿದೆ. ಮಹಾನ್ ತತ್ವಜ್ಞಾನಿ ಇಮ್ಯಾನುಯೆಲ್ ಕಾಂಟ್ ಇದನ್ನು ಹೇಳಿ ಶತಮಾನವೇ ಆಗಿರಬಹುದು. ಆದರೆ ಕೆಲವು ಸಂದರ್ಭ ಘಟನೆಗಳಲ್ಲಿ ಸಾಕುಪ್ರಾಣಿಗಳ ಕುರಿತಂತೆ ಕ್ರೌರ್ಯ-ಮಮಕಾರಗಳ ನಡುವಿನ ಗೆರೆ ಅಳಿಸಿ ಹೋಗಿರುತ್ತದಾ ಅಂತ! ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಘಟನೆಯೊಂದರ ಪೀಠಿಕೆ ಇದು. ನಾನೊಂದು ದಿನ ಬೆಳಗಿನ ಜಾವ ದಿಮಾಂ ಸಾಬರ ಒಡ್ಡಿನಲ್ಲಿ ಇರುವ ನನ್ನ ತೋಟದ ಹತ್ತಿರ […]

ಸಾಮಾಜಿಕ, ಆರ್ಥಿಕ ಭದ್ರತೆಯ ಕೊರತೆ ಎದುರಿಸುತ್ತಿರುವ ಅಸಂಘಟಿತ ಕಾರ್ಮಿಕ ವಲಯ

ಸಾಮಾಜಿಕ, ಆರ್ಥಿಕ ಭದ್ರತೆಯ ಕೊರತೆ ಎದುರಿಸುತ್ತಿರುವ ಅಸಂಘಟಿತ ಕಾರ್ಮಿಕ ವಲಯ

ಇವತ್ತು ಇಂಡಿಯಾದ ಒಟ್ಟು ಕಾರ್ಮಿಕರಲ್ಲಿ ಶೇಕಡಾ ತೊಂಭತ್ತರಷ್ಟು ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದಾರೆ. ಸರಕಾರವೇ ಬಿಡುಗಡೆಗೊಳಿಸಿರುವ ಅಧಿಕೃತ ಅಂಕಿಅಂಶಗಳ ಪೈಕಿ ಸರಿ ಸುಮಾರು 47.5ಕೋಟಿ ಕಾರ್ಮಿಕರು  ಈ ವಲಯದಲ್ಲಿ ದುಡಿಯುತ್ತಿದ್ದಾರೆ. ಅದರಲ್ಲಿ ಶೇಕಡಾ 65 ರಷ್ಟು  ಮಹಿಳೆಯರಿದ್ದಾರೆ. ಇದರಲ್ಲಿ 24ಕೋಟಿಗೂ ಅಧಿಕ ಜನ ಕೃಷಿಕ್ಷೇತ್ರದಲ್ಲಿಯೂ, 4.5ಕೋಟಿಜನ ನಿರ್ಮಾಣ ಕ್ಷೇತ್ರಗಳಲ್ಲಿಯೂ, ಉಳಿದವರು ಇತರೆ ಸರಕು ಮತ್ತು ಸೇವೆಗಳ ಉತ್ಪನ್ನ ಮತ್ತು ವಿತರಣೆಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ ಹೀಗೆ ಅಸಂಘಟಿತ ಕ್ಷೇತ್ರಗಳ್ಲಿ ಕೆಲಸ ಮಾಡುತ್ತಿರುವ  ಕಾರ್ಮಿಕರಲ್ಲಿ ಹೆಚ್ಚಿನವರು ಆದಿವಾಸಿ,ಪರಿಶಿಷ್ಠಜಾತಿ, ಹಿಂದುಳಿವರ್ಗ […]

ದೇವರು ಮತ್ತು ಸೇಂದಿ

ದೇವರು ಮತ್ತು ಸೇಂದಿ

ನಾನು : ಏನೋ ಗೋಪಾಲ ಮಳೆ ಬಂದು ಬಿಟ್ಟಿದೆಯಲ್ಲೊ! ಅವನು : ಹೂಂ ಕನಣ್ಣೋ ಬಂತಪ್ಪಾ ಹಂಗೆ ಕಾದ ನೆಲ ಫಟಫಟ ಎಳ್ಕಂಬಿಡ್ತಪ್ಪಾ ಬಾಯಾರಿ ನಿಂತಿತ್ತಲ್ಲವೆ! ನಾನು : ಚರ್ಮ ಸುಟ್ಟು ನೀರಲ್ಲಿ ತೊಳ್ದಂಗೆ ಕಾಣಲ್ಲವೆ ಮರ ಗಿಡ ಭೂಮಿ. ಅವನು : ಮತ್ತಿನ್ನೇನಣ್ಣೋ ಮರಗಿಡ ಎಲ್ಲಾ ಹಂಗೆ ಬಾಯಾರಿದ ಗಂಟಲಿಗೆ ನೀರುಬಿಟ್ಟಂಗೆ ಕಾಣ್ತವಪ್ಪ. ನಾನು : ಇನ್ನೇನೋ ಸಮಾಚಾರ ಇತ್ತೀಚಿನ ಏನೂ ಕಥೆ ಹೇಳಲೇ ಇಲ್ಲ. ಅವನು : ಏನು ಹೇಳಲಣ್ಣೋ (ತಲೆ ಕೆರೆಯುತ್ತಾ) ಒಳ್ಳೇ […]

ಮಲೆನಾಡ ಒಡಲುರಿ-7:ಕಾಡು ಹಾದಿಯಲ್ಲಿ ಸೌದೆಯ ಹೊರೆ ಹೊತ್ತು..

ಮಲೆನಾಡ ಒಡಲುರಿ-7:ಕಾಡು ಹಾದಿಯಲ್ಲಿ ಸೌದೆಯ ಹೊರೆ ಹೊತ್ತು..

  ನಾವು ಸಣ್ಣವರಾಗಿ ಇದ್ದಾಗಿಂದಲೂ ಕಷ್ಟ ಅಂದ್ರೆ ಏನು ಅನ್ನೋದನ್ನ ನೋಡಿ ಮತ್ತು ಅನುಭವಿಸಿ ಬೆಳೆದವರು. ಹಾಗಾಗಿ ನಂಗೆ ಕಷ್ಟಗಳು ಬಂದಾಗ ತೀರಾ ಕುಗ್ಗಲೂ ಇಲ್ಲ, ಸಂತೋಷ ಅದಾಗ ಹಿಗ್ಗಲೂ ಇಲ್ಲ. ನಂಗೆ ನೆನಪಿರುವ ಹಾಗೆ ನನ್ನಪ್ಪ ಸುಖ ಸಮ್ನೆ ವಿರಮಿಸಿದವ್ರೇ ಅಲ್ಲ. ನಾವುಗಳು ರಜೆಗೆ ಮನೆಗೆ ಬಂದಾಗಲೆಲ್ಲ ಕಾಡಿಗೆ ಸೌದೆ ಹೊರಲು ಕರ್ಕೊಂಡು ಹೋಗ್ತಿದ್ರು. ನಾವು ಒಂದು ಅಥವ ಎರಡು ಸೌದೆ ಹೊರೆಗಳ್ನ ತಲೆಯಮೇಲೆ ಹೊತ್ತು ಮನೆಯವರೆಗೆ ತರುವಷ್ಟರಲ್ಲಿ ಮೊದಲಿದ್ದ ಹುಮ್ಮಸ್ಸು ಇಳಿದೋಗಿ ಯಾವಾಗ ನಮ್ಮನ್ನ […]

ದಲಿತ ಪದಕಥನ -9 : ದಲಿತ ಮೌಖಿಕ ಕಾವ್ಯಮಂಡಲ

ದಲಿತ ಪದಕಥನ -9 : ದಲಿತ ಮೌಖಿಕ ಕಾವ್ಯಮಂಡಲ

ದಲಿತರ ಪ್ರತಿನಿಧಿ ಕಾವ್ಯಗಳು ಹಲವಿವೆ. ಅವುಗಳಲ್ಲಿ ಮಲೆಮಾದೇಶ್ವರ, ಮಂಟೇಸ್ವಾಮಿ ಎರಡು ಮುಖ್ಯಕಾವ್ಯಗಳು. ಭಾಷೆಯ ನೆಲೆಯಿಂದ ಇವು ಹೇಗೆ ದಲಿತ ಭಾಷೆಗೆ ಸಂಬಂಧಿಸುತ್ತವೆ ಎಂಬುದು ಕುತೂಹಲಕರವಾಗಿದೆ. ಮಧ್ಯಕಾಲೀನ ಕನ್ನಡ ಭಾಷೆಯು ವಿಶೇಷವಾಗಿ ಮೌಖಿಕ ಪರಂಪರೆಯಿಂದ ಗಾಢವಾದ ಸಂಬಂಧವನ್ನು ಸಾಧ್ಯವಾಗಿಸಿಕೊಂಡಿತು. ಮೌಖಿಕ ಪರಂಪರೆಗಳು ಕಾವ್ಯಧಾರೆಗಳನ್ನು ಹೆಚ್ಚಾಗಿ ಅನುಸರಿಸಿದ್ದು, ಇದೇ ಕಾಲದಲ್ಲಿ ಗ್ರಾಮದೈವಗಳ ಪರಂಪರೆಯಲ್ಲಿ ಹೆಚ್ಚಾಗಿ ತೊಡಗಿದ್ದ ಮೌಖಿಕ ಭಾಷೆಯ ನಿರೂಪಣೆಗಳು ಬಿಡಿಬಿಡಿಯಾಗಿ ಅಸಂಖ್ಯಾತವಾಗಿ ಚದುರಿದ್ದವು. ಇವು ಹೆಚ್ಚಾಗಿ ಆಚರಣೆಗಳಿಗೆ ಪೂರಕವಾಗಿದ್ದ ಭಾಷಿಕ ಸಂಗತಿಗಳೂ ಆಗಿದ್ದವು. ಸಾಹಿತ್ಯ ಇಲ್ಲಿ ಮುಖ್ಯವಾಗಿರಲಿಲ್ಲ. ಹಾಗಾಗಿಯೇ […]

ಎದುರು ಮಾತು -1: ಯೋಧರೆ, ಅಳಲು ತೋಡಿಕೊಂಡೀರಾ ಜೋಕೆ!

ಎದುರು ಮಾತು -1: ಯೋಧರೆ, ಅಳಲು ತೋಡಿಕೊಂಡೀರಾ ಜೋಕೆ!

ಈಚೆಗೆ ಯೋಧರೊಬ್ಬರು ತಮಗೆ ನೀಡುತ್ತಿರುವ ಆಹಾರದ ಗುಣಮಟ್ಟ ಸರಿಯಿಲ್ಲ; ಅದು ತಿನ್ನಲು ಯೋಗ್ಯವಾಗಿಲ್ಲ ಎಂದು ತಮಗೆ ನೀಡಿರುವ ಆಹಾರ ಪದಾರ್ಥಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗೆ ತಮ್ಮ ನೋವನ್ನು ಹಂಚಿಕೊಂಡ ಯೋಧರು ಮುಂದಿನ ದಿನಗಳಲ್ಲಿ ತಮಗೆ ಯಾವ ಅಪಾಯ ಕಾದಿದೆಯೋ ಎಂಬ ಆತಂಕದೊಂದಿಗೆ ತಮ್ಮ ದುಕ್ಕವನ್ನು ತೋಡಿಕೊಂಡಿದ್ದರು. ಇದಕ್ಕೆ ಸಾಕಶ್ಟು ಜನಬೆಂಬಲವು ದೊರೆತಿತ್ತು. ಅದಾದ ನಂತರ ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದರು. ಈಗ ಸೇನಾ ಮುಖ್ಯಸ್ಥರು ಪ್ರತಿಕ್ರಿಯಿಸುತ್ತ ಯೋಧರು […]

ತಾಳ್ಮೆಗೂ ನಿಷ್ಕ್ರಿಯತೆಗೂ ಅಪಾರ ಅಂತರವಿದೆ

ತಾಳ್ಮೆಗೂ ನಿಷ್ಕ್ರಿಯತೆಗೂ ಅಪಾರ ಅಂತರವಿದೆ

ನವಂಬರ್ 8ರಂದು ಭಾರತದ ಪ್ರಧಾನಿ ಹಠಾತ್ತನೆ ಘೋಷಿಸಿದ ನೋಟು ಅಮಾನ್ಯೀಕರಣ ನೀತಿ ತನ್ನ ಮೊದಲ ಪರ್ವವನ್ನು ಪೂರೈಸಿದೆ. ಐವತ್ತು ದಿನಗಳ ನಂತರ ಜನಸಾಮಾನ್ಯರ ಬವಣೆ ಕೊನೆಗೊಂಡು ಪರಿಸ್ಥಿತಿ ಸುಧಾರಿಸುತ್ತದೆ, ದೇಶದಲ್ಲಿ ದಶಕಗಳಿಂದ ಹುದುಗಿ ಹೋಗಿದ್ದ ಕಪ್ಪು ಹಣ ಇಲ್ಲವಾಗುತ್ತದೆ, ಕಪ್ಪು ಹಣದ ವಾರಸುದಾರರು ನಡುಗಿ ಹೋಗುತ್ತಾರೆ, ಭಯೋತ್ಪಾದಕರ ಮೂಲ ನೆಲೆಯೇ ಧ್ವಂಸವಾಗುತ್ತದೆ, ನಕಲಿ ನೋಟು ದಂಧೆ ಇಲ್ಲವಾಗುತ್ತದೆ ಇತ್ಯಾದಿ ಇತ್ಯಾದಿ ಭರವಸೆಗಳನ್ನು ಮೋದಿ ಜನತೆಗೆ ನೀಡಿದ್ದರು. ಸಹಜವಾಗಿಯೇ ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದನೆ ಮತ್ತು ನಕಲಿ ನೋಟುಗಳ […]

ಮಲೆನಾಡ ಒಡಲುರಿ-೬: ದನಕಾಯೋ ದಿನಗಳು.

ಮಲೆನಾಡ ಒಡಲುರಿ-೬: ದನಕಾಯೋ ದಿನಗಳು.

ನಾವು ನಮ್ಮ ಅಮ್ಮ ಅಪ್ಪಗೆ ಮೂವರು ಮಕ್ಕಳು, ನಮ್ಮತ್ತೆ ನಮ್ಮ ದೊಡ್ಡಪ್ಪಂಗೆ ಆರು ಜನ ಮಕ್ಕಳು. ಅಪ್ಪ ಮತ್ತು ದೊಡ್ಡಪ್ಪ ಬೇರೆ ಬೇರೆಯಾಗಿದ್ದರೂ, ಅವಿಭಕ್ತ ಕುಟುಂಬದ ಹಾಗೆ ಬದುಕಿದ್ದಾರೆ. ಹಾಗಾಗಿ ನಮ್ಮ ದೊಡ್ಡಪ್ಪನ ಮಕ್ಕಳು ಬೇರೆ ಚಿಕ್ಕಪ್ಪನ ಮಕ್ಕಳು ಬೇರೆಯಂದು ಯಾವತ್ತೂ ಅನಿಸಿದ್ದಿಲ್ಲ. ನಾವು ಚಿಕ್ಕವರಿದ್ದಾಗ ಅಂದರೆ ನಮ್ಮನ್ನು ಮುದ್ದಾಗಿ (ತಪ್ಪನ್ನು ಒದ್ದು, ತಿದ್ದಿ) ಒಳ್ಳೆಯ ಮಾರ್ಗದಿದಂದ ನಡೆಸಿದವರು.      ನಾಲ್ಕೂ ಜನ ಅಕ್ಕಂದಿರಲ್ಲಿ ಪಾರ್ವತಿ ಅಕ್ಕ ತುಂಬಾ ದಿಟ್ಟೆ. ಅವಳು ಒಂದಕ್ಷರ ಕೂಡ ಕಲಿತವಳಲ್ಲ. ಕಡ್ಡಿಪುಡಿ […]

ದಲಿತ ಪದಕಥನ -3 :‘ನನ ಸಂಕಟವ ನಾ ಯಾರ್ಗೇಳ್ಕಲಿ’

ದಲಿತ ಪದಕಥನ -3 :‘ನನ ಸಂಕಟವ ನಾ ಯಾರ್ಗೇಳ್ಕಲಿ’

ಸಂಕಟ ‘ನನ ಸಂಕಟವ ನಾ ಯಾರ್ಗೇಳ್ಕಲಿ’ ಎಂದು ಕೇರಿಯ ಹೆಂಗಸರು ಯಾವತ್ತೂ ವಿಷಾದದಲ್ಲಿ ತಮಗೆ ತಾವೇ ಹೇಳಿಕೊಂಡು ಹಳಿದುಕೊಳ್ಳುವಂತೆ ದುಃಖವನ್ನು ನುಂಗಿಕೊಳ್ಳುತ್ತಿದ್ದರು. ಸಂಕಟ ಎಂದರೆ ದುಃಖದ ಉರಿ. ದುಃಖವು ಕಿಚ್ಚಾಗಿ ಉರಿಯುವ ಪರಿ. ಈ ಸಂಕಟವೇ ಶಾಪವಾಗಿ ತಟ್ಟುವುದು ಎಂಬ ನಂಬಿಕೆ ಕೇರಿಯಲ್ಲಿ ದಟ್ಟವಾಗಿತ್ತು. ಸಂಕಟ ರೂಪವನ್ನೆ ಸಂಕ್ಟ ಎಂದು ಕ ಅಕ್ಷರಕ್ಕೆ ಟ ಅಕ್ಷರವನ್ನು ಒತ್ತುಕೊಟ್ಟು ಬಳಸುತ್ತಿದ್ದೆವು. ಸಂಕಟ ಬಂದಾಗ ವೆಂಕಟ ರಮಣ ಎಂಬ ಗಾದೆ ನಮ್ಮದಾಗಿರಲಿಲ್ಲ. ಸಂಕಟ ಯಾವಗಲೂ ಜೊತೆಗಿದ್ದಾಗ ವೆಂಕಟರಮಣನ ಸ್ಮರಣೆಯ ಅಗತ್ಯವಾದರೂ […]