ಅಂಕಣಗಳು

ಅಂಕಣಗಳು

ಸಂಪಾದಕೀಯ-28: ಲಾಲೂ ಪ್ರಸಾದರ ಮೇಲಿನ ದಾಳಿ: ಈಗೇಕೆ?

ಸಂಪಾದಕೀಯ-28: ಲಾಲೂ ಪ್ರಸಾದರ ಮೇಲಿನ ದಾಳಿ: ಈಗೇಕೆ?

ಲಾಲೂ ಪ್ರಸಾದ ಯಾದವರ ಮೇಲೆ ನಡೆದ ದಾಳಿಯ ಸಂದರ್ಭವು ಅದರ ಹಿಂದಿನ ಉದ್ದೇಶ ರಾಜಕೀಯ ಹಗೆತನವೇ ಹೊರತು ಭ್ರಷ್ಟಾಚಾರ ನಿಗ್ರಹವಲ್ಲ ಎಂಬುದನ್ನು ಸೂಚಿಸುತ್ತದೆ. ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರತಿಯೊಂದು ಪಕ್ಷವೂ ಕೇಂದ್ರೀಯ ತನಿಖಾ ದಳ (ಸಿಬಿಐ) ಅನ್ನು ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಯುವುದಕ್ಕೇ ಬಳಸಿಕೊಂಡಿವೆ. ಈಗ ಅಧಿಕರದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಸರ್ಕಾರದ ದಾಳಿಗೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಯ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತವರ ಕುಟುಂಬದವರು ಗುರಿಯಾಗಿದ್ದಾರೆ. ಯಾದವ್ ಮತ್ತವರ ಕುಟುಂಬದವರು ಹಲವಾರು […]

ಸಂಪಾದಕೀಯ-27: ಏರ್ ಇಂಡಿಯಾದ ಮಹಾರಾಜನಿಗೆ ವಂಚನೆ ಮಾಡುತ್ತಿರುವ ಸರ್ಕಾರ

ಸಂಪಾದಕೀಯ-27: ಏರ್ ಇಂಡಿಯಾದ ಮಹಾರಾಜನಿಗೆ ವಂಚನೆ ಮಾಡುತ್ತಿರುವ ಸರ್ಕಾರ

ಏರ್ ಇಂಡಿಯಾದ ಪುನಶ್ಚೇತನಕ್ಕೆ ೨೦೧೨ರಲ್ಲಿ ರೂಪಿಸಲಾದ ಯೋಜನೆಯು ಪೂರ್ಣಗೊಳ್ಳಲು ಇನ್ನೂ ಐದು ವರ್ಷಗಳು ಬಾಕಿ ಇದ್ದರೂ ತರಾತುರಿಯಲ್ಲಿ ಏಕೆ ಖಾಸಗಿಕರಿಸಲಾಗುತ್ತಿದೆ? ಸತತವಾಗಿ ನಷ್ಟವನ್ನೇ ಅನುಭವಿಸುತ್ತಾ ಬಂದಿರುವ ಸಾರ್ವಜನಿಕ ಕ್ಷೇತ್ರದ ವಿಮಾನಯಾನ ಸಂಸ್ಥೆ ಯೆಂದು ಆರ್ಥಿಕ ಸರ್ವೇಕ್ಷಣೆಯಲ್ಲಿ ಅನ್ಯಾಯವಾಗಿ ಬಣ್ಣಿಸಲ್ಪಟ್ಟಿರುವ ಏರ್‌ಇಂಡಿಯಾ ಸಂಸ್ಥೆಯನ್ನು ಖಾಸಗೀಕರಿಸಲಾಗುತ್ತಿದೆ. ಏರ್ ಇಂಡಿಯಾವನ್ನು ಖಾಸಗೀಕರಿಸುವ ಬಗ್ಗೆ ನೀತಿ ಅಯೋಗ ಶಿಫಾರಸ್ಸು ಕೊಟ್ಟ ಸ್ವಲ್ಪ ಸಮಯದಲ್ಲೇ ಕೇಂದ್ರ ಸಚಿವ ಸಂಪುಟವೂ ಅದಕ್ಕೆ  ತಾತ್ವಿಕ ಒಪ್ಪಿಗೆಯನ್ನೂ ಸೂಚಿಸಿತು. ಹೀಗೆ ವಿಷಯಕ್ಕೆ ಸಂಬಂಧಪಟ್ಟ ಮತ್ತು ಹಿತಾಸಕ್ತಿ ಹೊಂದಿದವರ ಯಾರ […]

ಸಂಪಾದಕೀಯ-26: ಬಂಗಾಳದೊಳಗೇ ಇರುವ ಅಂತರ್ಗತ ಕೋಮುವಾದಿ ಬಿರುಕುಗಳು

ಸಂಪಾದಕೀಯ-26: ಬಂಗಾಳದೊಳಗೇ ಇರುವ ಅಂತರ್ಗತ ಕೋಮುವಾದಿ ಬಿರುಕುಗಳು

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಭುಗಿಲೆದ್ದಿರುವ ಕೋಮು ವಿದ್ವೇಷದ ಬೇರುಗಳು ಆ ಪ್ರದೇಶದ ಹಿಂದೂ–ಮುಸ್ಲಿಂ ವೈಷಮ್ಯದ ಇತಿಹಾಸದಲ್ಲಿದೆ. ಪಶ್ಚಿಮ ಬಂಗಾಳದ ಬಸಿರತ್ ಉಪವಿಭಾಗದ ಬದುರಿಯಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಹಿಂಸಾಚಾರಗಳು ಆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಧೃವೀಕರಣಕ್ಕೆ ಸಂಕೇತವಾಗಿದೆ. ಹೆಚ್ಚುತ್ತಿರುವ ಈ ಹಿಂದೂ – ಮುಸ್ಲಿಂ ವೈಷಮ್ಯದ ಹಿಂದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಆಶೋತ್ತರಗಳೂ ಸೇರಿಕೊಂಡಿವೆ. ಆದರೆ ಬಂಗಾಳದಲ್ಲಿ ಮತದಾರರ ಒಂದು ವರ್ಗವು ಬಿಜೆಪಿ ಕಡೆ ಏಕೆ ಸೆಳೆಯಲ್ಪಡುತ್ತಿವೆ? ಆ ಪ್ರದೇಶದ ಕೋಮುವಾದದ ಇತಿಹಾಸದ ಹಿನ್ನೆಲೆಯಲ್ಲಿ […]

ಸಂಪಾದಕೀಯ-25: ಭಾರತ, ಇಸ್ರೇಲ್ ಮತ್ತು ದಮನದ ರಾಜಕೀಯ

ಸಂಪಾದಕೀಯ-25: ಭಾರತ, ಇಸ್ರೇಲ್ ಮತ್ತು ದಮನದ ರಾಜಕೀಯ

ಸೇನಾಬಲದ ಮೂಲಕ ಪ್ಯಾಲೆಸ್ತೇನನ್ನು ವಶಪಡಿಸಿಕೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್ ಮುಂದಿಡುತ್ತಿರುವ ಅಮಾನವೀಯ ಸಿದ್ಧಾಂತಗಳನ್ನು ಭಾರತವು ಸಹ ಆಮದು ಮಾಡಿಕೊಳ್ಳಲಿದೆಯೇ? ಸುಕುಮಾರ್ ಮುರಳೀಧರನ್ ಬರೆಯುತ್ತಾರೆ: ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ನೈತಿಕತೆ ಮತ್ತು ವಿವೇಕಗಳ ಮೇಲೆ ತಮಗಿರುವ ಏಕಸ್ವಾಮ್ಯವನ್ನು ಪ್ರಶ್ನಿಸುವವರ ವಿರುದ್ಧ ಬಹಿರಂಗವಾಗಿ ಹರಿಹಾಯುವುದನ್ನು ಒಂದು ಹವ್ಯಾಸವನ್ನಾಗಿಯೇ ಬೆಳೆಸಿಕೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲಿನಿಂದ ತುಳಿತಕ್ಕೆ ಒಳಗಾಗಿರುವ ಪ್ಯಾಲೆಸ್ತೇನ್ ಜನರಿಗೆ ಐರ್‌ಲ್ಯಾಂಡ್ ಸರ್ಕಾರ ಸಹಕಾರವನ್ನು ನೀಡಿದ ಪಾಪದಿಂದಾಗಿ ಇತ್ತೀಚೆಗೆ ಆ ದೇಶದ ಪ್ರಧಾನಿ ನೇತನ್ಯಾಹು ಅವರಿಂದ ಉಪದೇಶಾಮೃತಗಳನ್ನು ಕೇಳಬೇಕಾಗಿ ಬಂತು. […]

ಸಂಪಾದಕೀಯ-24: ಒತ್ತಡಗಳಿಗೆ ಮಣಿಯುವ ರಾಷ್ಟ್ರಪತಿಗಳೇ?

ಸಂಪಾದಕೀಯ-24: ಒತ್ತಡಗಳಿಗೆ ಮಣಿಯುವ ರಾಷ್ಟ್ರಪತಿಗಳೇ?

ರಾಷ್ಟ್ರಪತಿ ಭವನದಲ್ಲಿ ರಾಮ್ ನಾಥ ಕೋವಿಂದರ ಅವಧಿಯು ಕೇಂದ್ರೀಕರಣದ ಧೋರಣೆಗಳನ್ನು ಇನ್ನಷ್ಟು ಗಟ್ಟಿಪಡಿಸಬಹುದು. ಭಾರತೀಯ ಜನತಾ ಪಕ್ಷದ (ಬಿಜೆಪಿ) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಿಯನ್ಸ್ (ಎನ್‌ಡಿಎ-ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟ)ವು ರಾಷ್ಟ್ರಪತಿ ಪದವಿಗೆ ರಾಮನಾಥ ಕೋವಿಂದರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದರಿಂz ಬಿಜೆಪಿಗೆ ಎರಡು ಲಾಭಗಳಿವೆ.  ಒಂದೆಡೆ ಅದು ದಲಿತ ಹಿತಾಸಕ್ತಿಗಳ ಬಗೆಗೆ ಬಾಯುಪಚಾರದ ಮಾತುಗಳನ್ನಾಡುತ್ತಲೇ ಮತ್ತೊಂದೆಡೆ ಹೆಚ್ಚೆಚ್ಚು ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವ ಅವಕಾಶವನ್ನು ದಕ್ಕಿಸಿಕೊಂಡಿದೆ. ಜುಲೈ ೧೭ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯ ಫಲಿತಾಂಶವೇನಾಗಬಹುದೆಂಬುದು ಹೆಚ್ಚೂ ಕಡಿಮೆ ಸ್ಪಷ್ಟವಾಗಿಬಿಟ್ಟಿದೆ. ಬಿಜು ಜನತಾ ದಳ್, […]

ಸಂಪಾದಕೀಯ-23: ಪ್ರತಿಕೂಲ ಪರಿಸರದಲ್ಲೇ ಬೆಳೆದ ಪತ್ರಿಕೆ ಅಲ್ ಜಝೀರಾ

ಸಂಪಾದಕೀಯ-23: ಪ್ರತಿಕೂಲ ಪರಿಸರದಲ್ಲೇ ಬೆಳೆದ ಪತ್ರಿಕೆ ಅಲ್ ಜಝೀರಾ

ಪ್ರತಿಕೂಲ ಪರಿಸರದ ನಡುವೆಯೂ ಅಲ್ ಜಝೀರಾ ವಾಹಿನಿಯು ಆಳುವವರು ಬಿತ್ತರಿಸುವ ಕಥನಗಳಿಗೆ ಸವಾಲೆಸೆಯುತ್ತಲೇ ಬಂದಿದೆ. ಸೌದಿ ಅರೇಬಿಯಾ ನೇತೃತ್ವದ ಅರಬ್ ದೇಶಗಳ ಗುಂಪು ೨೦೧೭ರ ಜೂನ್ ೨೩ರಂದು ಖತಾರ್ ದೇಶದ ಮೇಲೆ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಭಂಧನಗಳನ್ನು ವಿಧಿಸಿತು. ಪರಿಸ್ಥಿತಿಯು ಮೊದಲಿನಂತಾಗಬೇಕೆಂದರೆ ತಾವು ವಿಧಿಸುವ ೧೩ ಶರತ್ತುಗಳನ್ನು ಪಾಲಿಸಬೇಕೆಂಬ ಕರಾರನ್ನು ಅವು  ಖತಾರ್ ದೇಶದ ಮೇಲೆ ವಿಧಿಸಿವೆ. ಅದರಲ್ಲಿ  ಅಲ್ ಜಝಿರಾ ಸುದ್ದಿ ಜಾಲ ಸಂಸ್ಥೆಯನ್ನು ಮುಚ್ಚಿಸಬೇಕೆಂಬುದೂ ಒಂದು. ಇದು ಅನಿರೀಕ್ಷಿತವಾದದ್ದೇನೂ ಆಗಿರಲಿಲ್ಲ. ಅರಬ್ ಪ್ರಪಂಚದ ಮೊದಲ […]

ಸಂಪಾದಕೀಯ-22: ಭಾರತ ಚೀನಾದ ಜೊತೆಗಿನ ವೈಷಮ್ಯಕ್ಕೆ ತರ್ಕವೇನು?

ಸಂಪಾದಕೀಯ-22: ಭಾರತ ಚೀನಾದ ಜೊತೆಗಿನ ವೈಷಮ್ಯಕ್ಕೆ ತರ್ಕವೇನು?

ಅಮೆರಿಕವು ಬೆಂಬಲಕ್ಕೆ ಬರುವ ಯಾವ ಭರವಸೆಗಳು ಇಲ್ಲದಿರುವಾಗ ಮೋದಿಯವರು ಸದ್ದಿಲ್ಲದೆ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವರೇ? ದೋಕ್ಲಾಮ್ ಅಥವಾ ದೋಂಗ್ಲಾಮ್ ಪ್ರಸ್ಥಭೂಮಿ ಎಂದು ಕರೆಯಲಾಗುವ ಭಾರತ-ಚೀನಾ ಗಡಿಭಾಗದಲ್ಲಿ ಚೀನಾವು ತನ್ನ ಭಾಗದಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣವನ್ನು ತಡೆಗಟ್ಟಲು, ಕಳೆದ ಜೂನ್ ೨೬ರಂದು,  ಭಾರತದ ಸೇನಾತುಕಡಿಗಳು ಸಿಕ್ಕಿಂ ವಿಭಾಗದಲ್ಲಿರುವ ಚೀನಾ ಗಡಿಯನ್ನು ದಾಟಿ ಮುನ್ನುಗ್ಗುತ್ತಿದ್ದ ಸಮಯದಲ್ಲೇ, ಭಾರತದ ಪ್ರಧಾನಿ ಮೋದಿಯವರು ಅಮೆರಿಕದ ವಾಷಿಂಗ್‌ಟನ್-ಡಿಸಿಯಲ್ಲಿ ಡೋನಾಲ್ಡ್ ಟ್ರಂಪ್ ಆಡಳಿತದ ಅಮೆರಿಕ ಫರ್ಸ್ಟ್ (ಅಮೆರಿಕವೇ ಮೊದಲು) ನೀತಿಯ ಬಗ್ಗೆ ಭಾರತಕ್ಕಿರುವ ಭಿನ್ನಾಭಿಪ್ರಾಯಗಳನ್ನು ಮರೆಮಾಚಲು ಇನ್ನಿಲ್ಲದ […]

ಸಂಪಾದಕೀಯ-21: ಗೋರ್ಖಾಲ್ಯಾಂಡ್ ವಿವಾದ-ಭಾವೋನ್ಮಾದದ ರಾಜಕಾರಣ

ಸಂಪಾದಕೀಯ-21: ಗೋರ್ಖಾಲ್ಯಾಂಡ್ ವಿವಾದ-ಭಾವೋನ್ಮಾದದ ರಾಜಕಾರಣ

ಗೋರ್ಖಾಲ್ಯಾಂಡ್ ವಿವಾದವನ್ನು ಬಗೆಹರಿಸಲು ಪಶ್ಚಿಮ ಬಂಗಾಳ ಸರ್ಕಾರವು ರಾಜಕೀಯ ಮಾತುಕತೆಗೆ ಮುಂದಾಗಬೇಕು. ಜನರು ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಒಂದು ಜೀವಂತ ಪ್ರಜಾತಂತ್ರದ ಸಂಕೇತ. ಆದರೆ ಯಾವುದೇ ಬಗೆಯ ಭಾವೋನ್ಮಾದವು ಪ್ರಜಾತಂತ್ರಕ್ಕೆ ಅಪಾಯವನ್ನೇ ಒಡ್ಡುತ್ತದೆ. ಏಕೆಂದರೆ ಪ್ರಜಾತಾಂತ್ರಿಕ ರಾಜಕಾರಣ ಸಾಧ್ಯವಾಗುವುದು ವಿವೇಚನೆಯುಳ್ಳ ನಾಗರಿಕರಿದ್ದಾಗ ಮಾತ್ರ. ಅದಕ್ಕೆ ತದ್ವಿರುದ್ಧವಾಗಿ ಭಾವೋನ್ಮಾದವು ವೀವೇಕ ಶೂನ್ಯತೆಯನ್ನು ಹೆಚ್ಚು ಮಾಡುತ್ತದೆ. ಇಂದು ಭಾರತದ ರಾಜಕಾರಣವು ಜನರಲ್ಲಿ ಉನ್ಮಾದವನ್ನು ಕೆರಳಿಸುವಂಥ ವಿಷಯಗಳ ಸುತ್ತವೇ ಕೇಂದ್ರೀಕರಿಸಲ್ಪಟ್ಟಿದೆ; ಗೋಹತ್ಯೆ, ಲವ್ ಜೆಹಾದ್, ಕಪ್ಪು ಹಣ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ […]

ಸಂಪಾದಕೀಯ-೨೦: ಸೆರೆಮನೆಯೊಳಗಿನ ಸ್ವಾತಂತ್ರ್ಯದ ಕುರಿತು

ಸಂಪಾದಕೀಯ-೨೦: ಸೆರೆಮನೆಯೊಳಗಿನ ಸ್ವಾತಂತ್ರ್ಯದ ಕುರಿತು

ಸೆರೆಮನೆಗಳಲ್ಲಿ ಮಹಿಳಾ  ಖೈದಿಗಳು ಪಿತೃಪ್ರಧಾನ ವ್ಯವಸ್ಥೆಯ ಹೀನಾಯ ದುರಾಗ್ರಹಗಳಿಗೆ ತುತ್ತಾಗುತ್ತಿದ್ದಾರೆ. .ಕಳೆದ ಜೂನ್ ೨೪ರಂದು ಮುಂಬೈನ ಬೈಕಲ ಸೆರೆಮನೆಯಲ್ಲಿ ಸಂಭವಿಸಿದ ೩೮ ವರ್ಷದ ಮಹಿಳಾ ಖೈದಿಯೊಬ್ಬಳ ಸಾವು ಭಾರತದ ಸೆರೆಮನೆಗಳ ದಾರುಣ ಪರಿಸ್ಥಿತಿಯನ್ನು ಅದರಲ್ಲೂ ವಿಶೇಷವಾಗಿ ಮಹಿಳಾ ಖೈದಿಗಳು ಮತ್ತು ಆರೋಪಿಗಳು ಎದುರಿಸುವ ಲಿಂಗಾಧಾರಿತ ಕ್ರೌರ್ಯಗಳನ್ನು ಬಯಲಿಗೆ ತಂದಿದೆ. ಸಿಬ್ಬಂದಿಯ ಕೊರತೆ ಇದ್ದಿದ್ದರಿಂದ ಆ ಸೆರೆಮನೆಯಲ್ಲಿ ಮಂಜುಳಾ ಶೆಟ್ಟೆ ಎಂಬ ಖೈದಿಗೆ ಉಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿತ್ತು. ಅದರ ಭಾಗವಾಗಿಯೇ ಆಕೆ ಅಂದು ತನ್ನ ಬ್ಯಾರಕ್ಕಿನ ಖೈದಿಗಳಿಗೆ ಸರಿಯಾದ […]

ಜುನೈದನ ಕಗ್ಗೊಲೆ ನಮ್ಮನ್ನೇಕೆ ಕಾಡಬೇಕು?

ಜುನೈದನ ಕಗ್ಗೊಲೆ ನಮ್ಮನ್ನೇಕೆ ಕಾಡಬೇಕು?

ಇಂದಿನ ಸಂದರ್ಭದಲ್ಲಿ ದ್ವೇಷ ರಾಜಕಾರಣದ ವಿರುದ್ಧ ನಡೆಯುವ ಪ್ರತಿಯೊಂದು ಪ್ರತಿಭಟನೆಗಳನ್ನೂ ಸ್ವಾಗತಿಸಬೇಕು. ಈ ವರ್ಷದ ಮೊದಲಾರ್ಧದಲ್ಲಿ ೨೦ ಕ್ಕೂ ಹೆಚ್ಚು ಅಮಾಯಕರನ್ನು ಗುಂಪುಗೂಡಿ ಹೊಡೆದು-ಬಡಿದು ಕೊಂದುಹಾಕಿರುವ ಘಟನೆಗಳು ನಡೆದುಹೋಗಿವೆ. ಆದರೆ ಕಳೆದ ಜೂನ್ ೨೨ರಂದು ದೆಹಲಿ-ಮಥುರಾ ನಡುವೆ ಹಾದುಹೋಗುತ್ತಿದ್ದ ರೈಲಿನಲ್ಲಿ ೧೫ ವರ್ಷದ ಜುನೈದ್ ಖಾನ್ ಎಂಬ ಬಾಲಕನನ್ನು ಹಾಡು ಹಗಲೇ ಗುಂಪೊಂದು ಹೊಡೆದು ಹೊಡೆದು ಕೊಂದು ಹಾಕಿದ ಘಟನೆ ಮಾತ್ರ ಇಡೀ ದೇಶದ ಅಂತಃಕರಣವನ್ನು ಕಲಕಿಬಿಟ್ಟಿದೆ. ಅದಕ್ಕೆ ಕಾರಣ ಅವನಿನ್ನೂ ಹದಿಹರೆಯದ ಯುವಕನಾಗಿದ್ದ, ಮತ್ತು ಹಬ್ಬಕ್ಕಾಗಿ […]