ಅಂಕಣಗಳು

ಅಂಕಣಗಳು

ಸಾಮಾಜಿಕ ಮಾಧ್ಯಮಗಳನ್ನು ಪ್ರಜಾತಾಂತ್ರೀಕರಿಸುವುದು ಸಾಧ್ಯವೇ?

ಸಾಮಾಜಿಕ ಮಾಧ್ಯಮಗಳನ್ನು ಪ್ರಜಾತಾಂತ್ರೀಕರಿಸುವುದು ಸಾಧ್ಯವೇ?

  ವಿಭಿನ್ನ ಆಲೋಚನೆಗಳ ವ್ಯಾಪಾರಸ್ಥಳವೆಂದು ಭಾವಿಸಲಾಗಿರುವ ಸಾಮಾಜಿಕ ಮಾಧ್ಯಮಗಳು ಸೌಲಭ್ಯಗಳ ಪರವಾಗಿ ಮತ್ತು ಸೌಲಭ್ಯವಂತರ ಪರವಾಗಿಯೇ ವರ್ತಿಸುತ್ತವೆ. ಸಂಸದ ಅನುರಾಗ್ ಠಾಕೂರ್ ಅವರ ಅಧ್ಯಕ್ಷತೆಯ ೩೧ ಸದಸ್ಯರ ಸಂಸದೀಯ ಸಮಿತಿಯು ಸಾಮಾಜಿಕ ಮಾಧ್ಯಮಗಳಲ್ಲಿ ನಾಗರಿಕರ ಹಕ್ಕುಗಳನ್ನು ಪರಿರಕ್ಷಿಸುವ ಕುರಿತು ಚರ್ಚಿಸಲು ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಜಾಕ್ ಡೊರ್ಸಿಯವರನ್ನು ತಮ್ಮ ಮುಂದೆ ಹಾಜರಾಗಲು ಸೂಚಿಸಿದೆ. ಇದು ಸಂಶಯಾಸ್ಪದವಾದ ಹಲವಾರು ಟ್ವಿಟರ್ ಖಾತೆಗಳನ್ನು ಇತ್ತೀಚೆಗೆ ಟ್ವಿಟರ್ ತಾಣದಿಂದ  ತೆಗೆದುಹಾಕಿರುವುದರ ಹಿನ್ನೆಲೆಯಲ್ಲಿ ಸೂಚಿಸಿರುವ ಕ್ರಮವಾಗಿರಬಹುದೆಂಬ ಬಗ್ಗೆ ದಟ್ಟವಾದ […]

ಸಮಾಜದ ಅಂಚಿಗೆ ಬಲವಂತದಿಂದ ದೂಡಲ್ಪಟ್ಟಿರುವ ಟ್ರಾನ್ಸ್ಜೆಂಡರ್ ಸಮುದಾಯ

ಸಮಾಜದ ಅಂಚಿಗೆ ಬಲವಂತದಿಂದ ದೂಡಲ್ಪಟ್ಟಿರುವ ಟ್ರಾನ್ಸ್ಜೆಂಡರ್ ಸಮುದಾಯ

ಟ್ರಾನ್ಸ್ಜೆಂಡರ್ ಸಮುದಾಯಗಳ ಕುರಿತು ಪ್ರಸ್ತಾಪಿತವಾಗಿರುವ ಹೊಸ ಮಸೂದೆಯು ಸಂವೇದನಾರಹಿತವಾಗಿದೆ ಮತ್ತು ಪ್ರತಿಗಾಮಿಯಾಗಿದೆ ಭಾರತದ ಟ್ರಾನ್ಸ್ಜೆಂಡರ್ಗಳು ಮತ್ತು ವಿಭಿನ್ನಲಿಂಗಿ ಸಮುದಾಯಗಳು ಹಲವಾರು ವರ್ಷಗಳ ಕಾಲ ನಡೆಸಿದ ಹೋರಾಟಗಳ ಮೂಲಕ ಪಡೆದುಕೊಂಡ ಹಕ್ಕುಗಳನ್ನು ಕಸಿದುಕೊಳ್ಳುವಂಥ ಮಸೂದೆಯೊಂದನ್ನು ಭಾರತ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿದೆ. ಇದು ಟ್ರಾನ್ಸ್ಜೆಂಡರ್ ಸಮುದಾಯದ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಯಕರ್ತರಿಗೆ ಆಘಾತ ಉಂಟುಮಾಡಿದೆ. ಈಗ ಪ್ರಸ್ತಾಪಿತವಾಗಿರುವ ಟ್ರಾನ್ಸ್ಜೆಂಡರ್ ಪರ್ಸನ್ಸ್ (ಪ್ರೊಟೆಕ್ಷನ್ ಆಪ್ ರೈಟ್ಸ್) ೨೦೧೬ (ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಸುರಕ್ಷತೆಯ ಹಕ್ಕುಗಳ ಕಾಯಿದೆ- ೨೦೧೬) ಕಾಯಿದೆಯು […]

ಮಾರಕವಾಗಿರುವ ನಗರ ಯೋಜನೆಗಳು

ಮಾರಕವಾಗಿರುವ ನಗರ ಯೋಜನೆಗಳು

ನಗರ ಯೋಜನಾ ಕರ್ತೃಗಳು ಮುಂಬೈನಲ್ಲಿ ಸಂಭವಿಸಿದ ೨೩ ಪ್ರಯಾಣಿಕರ ದಾರುಣ ಸಾವಿನಿಂದ ಏನಾದರೂ ಪಾಠಗಳನ್ನು ಕಲಿಯುತ್ತಾರೆಯೇ? ಸೆಪ್ಟೆಂಬರ್ ೨೩ರ ಬೆಳಿಗ್ಗೆ ಮುಂಬೈನ ಉಪನಗರ ರೈಲ್ವೆ ಜಾಲದ (ಸಬ್ ಅರ್ಬನ್ ರೈಲ್ವೆ) ಪಶ್ಚಿಮ ವಲಯದಲ್ಲಿನ ಎಲ್ಫಿನ್‌ಸ್ಟೋನ್ ರೋಡ್ ನಿಲ್ದಾಣದ ಪಾದಾಚಾರಿ ಸೇತುವೆಯ ಮೇಲೆ ಕಾಲ್ತುಳಿತಕ್ಕೆ ಸಿಕ್ಕಿ ೨೨ ಪ್ರಯಾಣಿಕರು ದಾರುಣವಾಗಿ ಸಾವನ್ನಪಿದರು. ಮರುದಿನ ೨೩ನೇಯವರು ಸಹ ಅಸು ನೀಗಿದರು. ಕಳೆದ ಮೂರು ದಶಕಗಳಲ್ಲಿ ಮುಂಬೈನ ಕೇಂದ್ರ ಮತ್ತು ದಕ್ಷಿಣ ಭಾಗಗಳ ಹತ್ತಿಗಿರಣಿಗಳಿದ್ದ ಪ್ರದೇಶಗಳಲ್ಲಿ ಕಚೇರಿ, ವಾಣಿಜ್ಯ ಸಂಕೀರ್ಣಗಳು ತಲೆ […]

ಸಂಪಾದಕೀಯ-31:ಜನರು ಆಹಾರವನ್ನು ತಿನ್ನುತ್ತಾರೆಯೇ ವಿನಃ ನೋಟುಗಳನ್ನಲ್ಲ..

ಸಂಪಾದಕೀಯ-31:ಜನರು ಆಹಾರವನ್ನು ತಿನ್ನುತ್ತಾರೆಯೇ ವಿನಃ ನೋಟುಗಳನ್ನಲ್ಲ..

ಪಡಿತರ ವ್ಯವಸ್ಥೆಯಲ್ಲಿ ಆಹಾರಧಾನ್ಯಗಳ ಬದಲಿಗೆ ನಗದು ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತರುವ ಪದ್ಧತಿಯು ಅಪೌಷ್ಟಿಕತೆಯ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳಿಗೆ ಅಡ್ಡಿಯುಂಟುಮಾಡುತ್ತದೆ. ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರತೀ ಸರ್ಕಾರವು ರಿಯಾಯತಿ ದರದಲ್ಲಿ ಬಡವರಿಗೆ ಆಹಾರ ಧಾನ್ಯಗಳನ್ನು ಒದಗಿಸುವ ಯೋಜನೆಯನ್ನು ರದ್ದು ಮಾಡಿ ಅದರ ಸ್ಥಾನದಲ್ಲಿ ನಿರ್ದಿಷ್ಟ ಫಲಾನುಭವೀ ವರ್ಗಗಳಿಗೆ ಈ ಯೋಜನೆಯ ಲಾಭ ದಕ್ಕುವಂತೆ ಮಾಡಲು ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್-ಡಿಬಿಟಿ) ಮಾಡುವ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಲೇ ಇವೆ. ೨೦೧೬-೧೭ರ ಆರ್ಥಿಕ […]

ಸಂಪಾದಕೀಯ-30: ಸತ್ಯೋತ್ತರ ಕಾಲ ಮತ್ತು ಅಣೆಕಟ್ಟುಗಳು

ಸಂಪಾದಕೀಯ-30: ಸತ್ಯೋತ್ತರ ಕಾಲ ಮತ್ತು ಅಣೆಕಟ್ಟುಗಳು

ಸರ್ದಾರ್ ಸರೋವರ್ ಅಣೆಕಟ್ಟೆಯು ಒಂದು ನ್ಯಾಯರಹಿತ ಮತ್ತು ಅಸ್ಥಿರ ಅಭಿವೃದ್ಧಿ ಮಾದರಿಗೆ ಉದಾಹರಣೆಯಾಗಿದೆ. ಸತ್ಯೋತ್ತರ ಯುಗ ಮತ್ತು ಪರ್ಯಾಯ ಸತ್ಯಗಳ ಈ ಕಾಲದಲ್ಲಿ ತನ್ನ ೬೭ನೇ ಹುಟ್ಟುಹಬ್ಬದ ದಿವಾದ ಸೆಪ್ಟೆಂಬರ್ ೧೭ರಂದು ಬಹು ಉಪಯೋಗಿ ಸರ್ದಾರ್ ಸರೋವರ್ ಅಣೆಕಟ್ಟನ್ನು ಉದ್ಘಾಟನೆ ಮಾಡುತ್ತಾ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆಗಳ ಬಗ್ಗೆ ಯಾರೂ ಅಚ್ಚರಿಗೊಳ್ಳುವ ಅಗತ್ಯವಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಅತ್ಯಂತ ಸಂಕೀರ್ಣತೆಗಳಿಂದ ಮತ್ತು ವಿವಾದಗಳಿಂದ ಕೂಡಿದ ಈ ಅಣೆಕಟ್ಟೆಯ ಇತಿಹಾಸವನ್ನು ಸಂಪೂರ್ಣವಾಗಿ ನಗಣ್ಯಗೊಳಿಸಿದ ಮೋದಿಯವರು ವಿಶ್ವಬ್ಯಾಂಕ್ […]

ಪೂನಾ ಒಪ್ಪಂದ : ದಲಿತರು ಕಳೆದುಕೊಂಡಿದ್ದೇನು? ಪಡೆದುಕೊಂಡಿದ್ದೇನು?

ಪೂನಾ ಒಪ್ಪಂದ : ದಲಿತರು ಕಳೆದುಕೊಂಡಿದ್ದೇನು? ಪಡೆದುಕೊಂಡಿದ್ದೇನು?

ಇದೇ ಸೆಪ್ಟೆಂಬರ್ 24 ಕ್ಕೆ ಪೂನಾ ಒಪ್ಪಂದವಾಗಿ 85 ವರ್ಷಗಳಾಗುತ್ತಿವೆ. ದುಂಡು ಮೇಜಿನ ಪರಿಷತ್ತಿನ ಚರ್ಚೆಯ ಫಲಿತಾಂಶವಾಗಿ ಡಾ. ಅಂಬೇಡ್ಕರರು ಬ್ರಿಟಿಷರಿಂದ ದಲಿತರಿಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಪಡೆದುಕೊಂಡಿದ್ದರು. ಆದರೆ, ಗಾಂಧಿಯವರ ವಿರೋಧದಿಂದಾಗಿ ಅವನ್ನು ಪೂನಾ ಒಪ್ಪಂದದಲ್ಲಿ ಕಳೆದುಕೊಂಡು, ಜಂಟಿ ಮೀಸಲು ಕ್ಷೇತ್ರಗಳನ್ನು ಪಡೆದುಕೊಳ್ಳಬೇಕಾಯಿತು. ಭಾರತ ಸರ್ಕಾರದ ಕಾಯಿದೆ 1919 ರಂತೆ 10 ವರ್ಷಗಳಾದ ನಂತರ ದೇಶಕ್ಕೆ ಸ್ವಾತಂತ್ರ್ಯ ಕೊಡುವ ನಿಟ್ಟಿನಲ್ಲಿ ವಿಧಿವಿಧಾನಗಳನ್ನು ಪೂರೈಸಲು ಒಂದು ಆಯೋಗವನ್ನು ರಚಿಸಬೇಕೆಂದು ತೀರ್ಮಾನಿಸಲಾಗಿತ್ತು. ಅದರಂತೆ, 1928 ರಲ್ಲಿ ಸರ್ ಜಾನ್ ಸೈಮನ್ […]

ದಾಸ್ ಕ್ಯಾಪಿಟಲ್ (ಬಂಡವಾಳ), ಸಂಪುಟ ೧ ಕ್ಕೆ ಈಗ ೧೫೦ ವರ್ಷ

ದಾಸ್ ಕ್ಯಾಪಿಟಲ್ (ಬಂಡವಾಳ), ಸಂಪುಟ ೧ ಕ್ಕೆ ಈಗ ೧೫೦ ವರ್ಷ

ಬಂಡವಾಳ, ಸಂಪುಟ-೧ ಅನ್ನು ಒಳಗೊಂಡಂತೆ ಮಾರ್ಕ್ಸರು ಬರೆದ ಇತರ ಹಲವಾರು ಬರಹಗಳಲ್ಲಿ ಇರುವ ಯಾವ ಅಂಶಗಳು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯೊಳಗೆ ಸೆಳೆಯಲ್ಪಟ್ಟಿರುವ ಒಂದು ಶೋಷಿತ ದೇಶದಲ್ಲಿ ನಡೆಯುವ ಬಂಡವಾಳಶಾಹಿ ಪ್ರಕ್ರಿಯೆಯ ಮೇಲೆ ಬೆಳಕು ಚೆಲ್ಲಲು ನಮಗೆ ಸಹಾಯ ಮಾಡುತ್ತದೆ? ಇಪಿಡಬ್ಲ್ಯೂ ಸಂಪಾದಕೀಯ ತಂಡದ ಸದಸ್ಯರಾದ ಬೆರ್ನಾರ್ಡ್ ಡೆಮೆಲ್ಲೋ ಬರೆಯುತ್ತಾರೆ: ಇದೇ ಸೆಪ್ಟೆಂಬರ್ ೨೦೧೭ಕ್ಕೆ ಕಾರ್ಲ್ ಮಾರ್ಕ್ಸರು ಬರೆದ ದಾಸ್ ಕ್ಯಾಪಿಟಲ್ (ಬಂಡವಾಳ) ಕೃತಿಯ (ಜರ್ಮನಿಯ ಹ್ಯಾಂಬರ್ಗ್ನಲ್ಲಿ) ಮೊಟ್ಟ ಮೊದಲ ಪ್ರಕಟಣೆಗೆ ೧೫೦ ವರ್ಷವಾಗುತ್ತದೆ. (ಬಂಡವಾಳ- ಸಂಪುಟ ೧ರ […]

ಗೌರಿಯನ್ನು ಕೊಂದ ಬುಲೆಟ್ಟು ನೀಡುತ್ತಿರುವ ಸಂದೇಶ

ಗೌರಿಯನ್ನು ಕೊಂದ ಬುಲೆಟ್ಟು ನೀಡುತ್ತಿರುವ ಸಂದೇಶ

ಗೌರಿ ಲಂಕೇಶರ ಹತ್ಯೆ ಮಾಧ್ಯಮ ಲೋಕಕ್ಕೆ ಅತ್ಯಂತ ಅಪಾಯಕಾರಿ ಸಂದೇಶವೊಂದನ್ನು ರವಾನಿಸುತ್ತಿದೆ. ಬೆಂಗಳೂರಿನ ಪ್ರಖ್ಯಾತ ಮತ್ತು ಜೀವನ್ಮುಖಿ ಪತ್ರಕರ್ತೆಯಾದ ಗೌರಿ ಲಂಕೇಶರು ಸೆಪ್ಟೆಂಬರ್ ೫ ರಂದು ಹಂತಕನೊಬ್ಬನ ಗುಂಡಿಗೆ ಬಲಿಯಾಗಿದ್ದಾರೆ. ಆದರೆ ಹಂತಕ ಹಾರಿಸಿದ ಗುಂಡು ಕೊಂದಿದ್ದು ಕೇವಲ ಗೌರಿ ಲಂಕೇಶರನ್ನು ಮಾತ್ರವಲ್ಲ. ಹಂತಕರು ಈ ಹತ್ಯೆಯ ಮೂಲಕ ಗೌರಿಯಷ್ಟು ಧೈರ್ಯಶಾಲಿಗಳಲ್ಲದಿದ್ದರೂ ಗೌರಿಯ ರೀತಿಯೇ ಪತ್ರಕರ್ತರಿಗೆ ಅಧಿಕಾರಸ್ಥರನ್ನು ಪ್ರಶ್ನಿಸುವ, ಯಾಜಮಾನ್ಯ ಧೋರಣೆಗಳ ಬಗ್ಗೆ ಅಭಿಪ್ರಾಯ ಬೇಧವನ್ನಿಟ್ಟುಕೊಳ್ಳುವ, ಸಾಮಾಜಿಕ ಪಿಡುಗುಗಳ ಬಗ್ಗೆ ತನಿಖೆ ಮಾಡುವ, ಮತ್ತು ಉನ್ನತ ಸ್ಥಾನಗಳಲ್ಲಿರುವವರು […]

ಮಾನವೀಯತೆಗಾಗಿ ಆಕ್ರಂದನ

ಮಾನವೀಯತೆಗಾಗಿ ಆಕ್ರಂದನ

ಇಸ್ಲಾಮ್ಭೀತಿ ಅಥವಾ ಸಂಪನ್ಮೂಲ ಕೊರತೆಗಳನ್ನು ಮುಂದುಮಾಡಿ ರೋಹಿಂಗ್ಯ ಬಿಕ್ಕಟ್ಟಿನ ಬಗೆಗಿನ ನಿಷ್ಖ್ರಿಯತೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಜಗತ್ತಿನ ಬಹುಪಾಲು ಕಡೆಗಳಲ್ಲಿ ಇಸ್ಲಾಮನ್ನು ಒಂದು ಭಯೋತ್ಪಾದಕ ಧರ್ಮವೆಂದು ಭಾವಿಸುತ್ತಾರೆ ಎಂದು ಹೇಳುವುದು ಈಗ ಒಂದು ಕ್ಲೀಷೆಯೇ ಆಗಿಬಿಟ್ಟಿದೆ. ಮತ್ತೊಂದು ಕಡೆ ಬುದ್ಧ ಧರ್ಮವು ಶಾಂತಿಯುತವಾದ, ವೈಚಾರಿಕ ಮತ್ತು ವೈಜ್ನಾನಿಕ ಧರ್ಮವಾಗಿದ್ದು ಆಧುನಿಕ ಜೀವನ ಪದ್ಧತಿಗೆ ಹೊಂದಾಣಿಕೆಯಾಗುವಂಥ ಧರ್ಮವೆಂದು ಪ್ರತಿಪಾದಿಸಲಾಗುತ್ತಿದೆ. ಆದರೆ ಮಯನ್ಮಾರ್ ದೇಶದಲ್ಲಿ ಮಿಲಿಟರಿ ಆಡಳಿತದ ಸಕ್ರಿಯ ಬೆಂಬಲದೊಂದಿಗೆ ಆ ದೇಶದ ಬುದ್ಧಧರ್ಮೀಯ ಉಗ್ರವಾದಿಗಳು ಪ್ರಧಾನವಾಗಿ ಇಸ್ಲಾಮ್ ಧರ್ಮವನ್ನು ಅನುಸರಿಸುವ […]

ಸಂಪಾದಕೀಯ-29: ಸ್ವಾತಂತ್ರ್ಯವನ್ನು ಸಂಭ್ರಮಿಸಬೇಕೋ ಅಥವಾ ಕಳೆದುಕೊಂಡ ಅವಕಾಶಗಳ ಬಗ್ಗೆ ಶೋಕಿಸಬೇಕೋ?

ಸಂಪಾದಕೀಯ-29: ಸ್ವಾತಂತ್ರ್ಯವನ್ನು ಸಂಭ್ರಮಿಸಬೇಕೋ ಅಥವಾ ಕಳೆದುಕೊಂಡ ಅವಕಾಶಗಳ ಬಗ್ಗೆ ಶೋಕಿಸಬೇಕೋ?

ಎಪ್ಪತ್ತರ ತಿರುವಿನಲ್ಲಿ ಇಂದು ನಮ್ಮ ಸ್ವಾತಂತ್ರ್ಯವನ್ನು ಸಂಭ್ರಮಿಸಬೇಕೋ ಅಥವಾ ಕಳೆದುಕೊಂಡ ಅವಕಾಶಗಳ ಬಗ್ಗೆ ಶೋಕಿಸಬೇಕೋ? ೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ಹೊತ್ತಿಸಿದ ಭರವಸೆಯ ಬೆಳಕು ಇಂದು ಮಂದವಾಗಿದೆ. ನಮ್ಮ ಪ್ರಥಮ ಪ್ರಧಾನಮಂತ್ರಿಗಳಾದ ಜವಹರಲಾಲ್ ನೆಹರೂ ಅವರು ಸ್ವಾತಂತ್ರ್ಯವನ್ನು ಭವಿಷ್ಯದೊಂದಿಗೆ ನಮ್ಮ ಸಾಮೂಹಿಕ ಮುಖಾಮುಖಿಯೆಂದು ಬಣ್ಣಿಸಿದ್ದರು; ಭಾರತದ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಬಿ. ಆರ್ . ಅಂಬೇಡ್ಕರ್ ಅವರು, ರಾಜಕೀಯ ಸಮಾನತೆಯನ್ನು ಮಾತ್ರ ಖಾತರಿಗೊಳಿಸಿದರೂ ತನ್ನ ನಾಗರಿಕರಿಗೆ ಅತ್ಯಂತ ಮೂಲಭೂತವಾದ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು […]

1 2 3 8