ಕೃಷಿ-ಕೈಗಾರಿಕೆ

ಕೃಷಿ-ಕೈಗಾರಿಕೆ

ಮತ್ಸೋದ್ಯಮ ಎಂಬ ಮಾರುವೇಷ

ಮತ್ಸೋದ್ಯಮ ಎಂಬ ಮಾರುವೇಷ

ಕಸುಬುಗಳು ಅಂದಿನ ಕಾಲದ ಜನರ ಬದುಕಿನ ಒಂದು ಭಾಗವಾಗಿತ್ತು. ಅದು ಆ ಕಸುಬನ್ನು ನಂಬಿಕೊಂಡಿದ್ದ ಜನರ ಜೀವನಾಡಿಯಾಗಿ ಆ ಸಮುದಾಯದ ಜನರ ಬದುಕಿನ ಆಧಾರಸ್ತಂಭವಾಗಿತ್ತು. ಭಾರತ ದೇಶವು ಅನೇಕ ಸಮುದಾಯಗಳ, ಕಸುಬುಗಳ, ಸಂಸ್ಕøತಿಯ ವೈವಿಧ್ಯ ದೇಶ. ಆದರೆ ಪಾರಂಪರಿಕ ಕಸುಬುಗಳಾವುವು ಇಂದು ತಮ್ಮ ಮೂಲ ರೂಪವನ್ನು ಉಳಿಸಿಕೊಂಡಿಲ್ಲ. ಅವು ಬಂಡವಾಳಗಾರನ ಕೈಮುಷ್ಟಿಗೆ ಸಿಲುಕಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಇಂದು ಬದಲಿ ರೂಪದಲ್ಲಿ ಇರುವುದನ್ನು ಕಾಣಬಹುದು. ಆ ಕಸುಬುಗಳನ್ನು ಅವಲಂಭಿಸಿಕೊಂಡು ಬದುಕುತ್ತಿದ್ದ ಜನರ ಬದುಕು ಬೀದಿಪಾಲಾಗಿರುವುದು ದುರಂತ. ಮೂಲ […]

ಯಾಕೆ ರೈತನ ಸಾಲಮನ್ನಾ ಮಾಡಬೇಕು?

ಯಾಕೆ ರೈತನ ಸಾಲಮನ್ನಾ ಮಾಡಬೇಕು?

ರೈತರ ಸಾಲಮನ್ನಾ ಮಾಡುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ! ಕೇಂದ್ರ ಸಚಿವರೊಬ್ಬರ ಆಡಿದ  ಈ ಒಂದು ಮಾತು ರೈತರ ಸಾಲಮನ್ನಾದ ಮೂಲ ಆಶಯಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾಲಮನ್ನಾದ ಬಗ್ಗೆ ಹೀಗೆ ಲಘುವಾಗಿ ಮಾತಾಡಿದವರಲ್ಲಿ ಈ ಸಚಿವರೇನು ಮೊದಲಿಗರೆಲ್ಲ. ಈ ಹಿಂದೆಯೇ ಹಲವಾರು ಬಂಡವಾಳಶಾಹಿ ಉದ್ಯಮಿಗಳು, ಉನ್ನತ ಹುದ್ದೆಯಲ್ಲಿರುವ ಅಕ್ಷರಸ್ಥ ವರ್ಗದ ಅನೇಕ ಪ್ರಭೃತಿಗಳು ರೈತರ ಸಾಲಮನ್ನಾ ಮಾಡುವುದರಿಂದ ತೆರಿಗೆದಾರರ ಹಣವನ್ನು  ರೈತರಿಗೆ ಪುಕ್ಕಟೆಯಾಗಿ ನೀಡಿ ಅವರನ್ನು ಆಲಸಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಿದೆ. ಆದರೆ […]

ಸ್ವಾವಲಂಬಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ.

ಸ್ವಾವಲಂಬಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ.

ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಯೋಗಗಳು ನಡೆಯುತ್ತಿರುವ ಕ್ಷೇತ್ರ ಕೃಷಿಕ್ಷೇತ್ರ. ಇದರಲ್ಲಿನ ಪ್ರಯೋಗಗಳು ಹಲವು ವಿಧಗಳನ್ನು ಅನುಸರಿಸುತ್ತಿವೆ, ಇಷ್ಟೆಲ್ಲಾ ಪ್ರಯೋಗಗಳ ನಡುವೆಯೂ ಇಂದಿಗೂ ಇಡೀ ವಿಶ್ವದ ಹಸಿವನ್ನು ತೀರಿಸುವಲ್ಲ್ಲಿ ಯಾವ ವಿಧಾನವೂ ಸಫಲವಾಗಿಲ್ಲ. ಇಂತಹ ಪ್ರಯೋಗಗಳ ನಡುವೆ ಭಾರತೀಯ ಕೃಷಿಕ್ಷೇತ್ರ ಬಹಳ ಗಮನವನ್ನು ಸೆಳೆಯುತ್ತದೆ, ಭಾರತದ ಆರ್ಥಿಕ ವ್ಯವಸ್ಥೆಯ ಮುಖ್ಯ ನೆಲೆಯಾಗಿ, ಬಹುಪಾಲು ಜನರ ಉದ್ಯೋಗ ಕ್ಷೇತ್ರವಾಗಿ ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಲಗಳಿಂದ ಕೂಡಿದ ಅಸ್ತಿರ ಕ್ಷೇತ್ರವಾಗಿರುವುದು ವಾಸ್ತವ. ಇಂದಿನ ಪರಿಸ್ತಿತಿಯಲ್ಲಿ ಸಾಲದಿಂದ, […]

ನೋಟು ನಿಷೇಧದಿಂದ ಕುಸಿದ ಅಭಿವೃದ್ಧಿ

ನೋಟು ನಿಷೇಧದಿಂದ ಕುಸಿದ ಅಭಿವೃದ್ಧಿ

೨೦೧೬–೧೭ರ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ದಾಖಲಾಗಿರುವ ಅಭಿವೃದ್ಧಿಯ ದರದ ಕುಸಿತವು ನೋಟು ನಿಷೇಧದಿಂದ ಉಂಟಾಗಿರುವ ಹಾನಿಯನ್ನು ಸಾಬೀತು ಮಾಡುತ್ತದೆ. ೨೦೧೭ರ ಫೆಬ್ರವರಿಯಲ್ಲಿ ಕೇಂದ್ರ ಅಂಕಿಅಂಶ ಕಛೇರಿಯು (ಸೆಂಟ್ರಲ್ ಸ್ಟಾಟಿಸ್ಟಿಕ್ಸ್ ಆಫೀಸ್- ಸಿಎಸ್‌ಒ) ಭಾರತದ ಒಟ್ಟಾರೆ ಅಂತರಿಕ ಅಭಿವೃದ್ಧಿ-ಜಿಡಿಪಿ- ದರವು ೨೦೧೬-೧೭ರ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಶೇ. ೭ ರಷ್ಟು ಅಭಿವೃದ್ಧಿಯನ್ನು ದಾಖಲಿಸಿದೆಯೆಂದೂ ಹಾಗೂ ಇಡೀ ಹಣಕಾಸು ವರ್ಷದಲ್ಲಿ ಅಭಿವೃದ್ಧಿ ದರ ಶೇ.೭.೧ರಷ್ಟಾಗಲಿದೆ ಎಂದೂ ಘೋಷಿಸಿತ್ತು. ಈ ಅಂಕಿಅಂಶವನ್ನು ಪ್ರಧಾನಿ ನರೇಂದ್ರಮೋದಿಯವರು ಎಲ್ಲಾ ಕಡೆ ನೋಟು ನಿಷೇಧದ ಕ್ರಮದ […]

ಸಾಲಮನ್ನಾಗಳು ಕೃಷಿ ಬಿಕ್ಕಟ್ಟನ್ನು ನಿವಾರಿಸುವ ಸಂಜೀವಿನಿಯಲ್ಲ

ಸಾಲಮನ್ನಾಗಳು ಕೃಷಿ ಬಿಕ್ಕಟ್ಟನ್ನು ನಿವಾರಿಸುವ ಸಂಜೀವಿನಿಯಲ್ಲ

ಆಳವಾಗಿ ಬೇರುಬಿಟ್ಟಿರುವ ಭಾರತದ ರೈತಾಪಿಯ ಸಮಸ್ಯೆಗಳನ್ನು ಸಾಲರದ್ಧತಿಗಳು ಮಾತ್ರ ಬಗೆಹರಿಸುವುದಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ, ಮುಂಗಾರು ಮಳೆಗಳ ವೈಪರೀತ್ಯ ಮತ್ತು ಅದರಿಂದ ಸಂಭವಿಸುವ ಬರ ಅಥವಾ ನೆರೆ-ಪ್ರವಾಹ, ಅಥವಾ ಅಪಾರ ಸಂಖ್ಯೆಯಲ್ಲಿ ರೈತಾಪಿಯನ್ನು ಮತ್ತು  ರೈತ ಕೂಲಿಗಳನ್ನು ಬೀದಿಪಾಲು ಮಾಡುವ ಬೆಳೆ ವೈಫಲ್ಯ ಇತ್ಯಾದಿಗಳು ಇಂದಿಗೂ ಅನುದಿನದ ಸಂಗತಿಗಳಾಗಿಯೇ ಮುಂದುವರೆದಿವೆ. ನಿಜ ಹೇಳಬೇಕೆಂದರೆ ವರ್ಷಗಳು ಕಳೆದಂತೆ ಕೃಷಿ ಬಿಕ್ಕಟ್ಟು ಇನ್ನೂ ಆಗೊಳ್ಳುತ್ತಲೇ ಸಾಗಿದೆ.  ವ್ಯವಸ್ಥೆಯೊಳಗಿನ ಮೂಲಭೂತ ಸಮಸ್ಯೆಗಳನ್ನು ಸರಿಪಡಿಸಲು ಬೇಕಾದ ಕೃಷಿ ನೀತಿಯೇ ಇಲ್ಲದಿರುವುದರಿಂದ […]

ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ ಬಡಪಾಯಿ ರೈತರೂ!

ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ  ಬಡಪಾಯಿ ರೈತರೂ!

      ಅಂತೂ ಕೇಂದ್ರ ಸರಕಾರ ಬರಪರಿಹಾರಕ್ಕೆಂದು ಕರ್ನಾಟಕಕ್ಕೆ ನಾಲ್ಕುನೂರಾಐವತ್ತು ಕೋಟಿ ರೂಪಾಯಿಗಳ ಮೊದಲ ಕಂತನ್ನು ಆರ್ಥಿಕ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿದೆ. ಕೇಂದ್ರ ಕಳುಹಿಸಿದ್ದ ಬರ ಅಧ್ಯಯನ ತಂಡ ಒಂದೆರಡು ದಿನ ಬರಪೀಡಿತ ಪ್ರದೇಶಗಳಲ್ಲಿ ಅಡ್ಡಾಡಿ ಸಲ್ಲಿಸಿದ ವರದಿಯ ಪರಿಣಾಮವಾಗಿ  ಕೇಂದ್ರ ಸುಮಾರು ಒಂದುಸಾವಿರದ ಏಳುನೂರು ಕೋಟಿರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದು, ಈಗದರ ಮೊದಲ ಕಂತು ಬಿಡುಗಡೆಯಾಗಿದೆ. ವಿಪರ್ಯಾಸ ಎಂದರೆ ತನ್ನ ರಾಜ್ಯದ ಬರಪರಿಹಾರ ಕಾರ್ಯಗಳಿಗೆ ನಮ್ಮ ರಾಜ್ಯ ಕೇಂದ್ರವನ್ನು ಕೇಳಿದ್ದು ಸರಿ ಸುಮಾರು ನಾಲ್ಕು […]

ಜಲವೊಂದೆ ಸಕಲ ಜೀವಾತ್ಮರಿಗೆ: ನೀರಿನ ಬಿಕ್ಕಟ್ಟು ಮತ್ತು ಸಾಧ್ಯತೆಯ ಹುಡುಕಾಟಗಳು

ಜಲವೊಂದೆ ಸಕಲ ಜೀವಾತ್ಮರಿಗೆ:  ನೀರಿನ ಬಿಕ್ಕಟ್ಟು ಮತ್ತು ಸಾಧ್ಯತೆಯ ಹುಡುಕಾಟಗಳು

ಮೊದ ಮೊದಲ ನೆನಪುಗಳಿವು. ನಮ್ಮ ಊರ ಮಧ್ಯದಲ್ಲೊಂದು ಬಾವಿಯಿತ್ತು. ಅರವತ್ತು ಅಡಿ ಮೀರಿ ಆಳವಿರಬಹುದು. ಹಗ್ಗ ಹೊರುವುದಕ್ಕೇ ಒಂದಾಳು ಬೇಕಿತ್ತು. ಮನೆ ಮನೆಗಳಲ್ಲಿ ಅಕ್ಕಿ ಮತ್ತು ನೀರು ಪೋಲು ಮಾಡದೆ ಬಳಸುವ ವಸ್ತುಗಳಾಗಿದ್ದವು. ಪಶುಪಾಲನೆಯಿಂದ ನಿಧಾನಕ್ಕೆ ಕೃಷಿಗೆ ಹೊರಳುತ್ತಿದ್ದ ಹಾಗೂ ಬಹುಪಾಲು ಒಂದೇ ಸಮುದಾಯವಿದ್ದ ಊರು ನನ್ನದು. ಇತರ ಊರುಗಳಿಗಿಂತ ಎತ್ತರದಲ್ಲಿತ್ತು. ಪಶುಪಾಲನೆ ಮುಖ್ಯವಾಗಿದ್ದ ಕಾರಣಕ್ಕೆ ಎತ್ತರದ ಪ್ರದೇಶಗಳಲ್ಲಿದ್ದರೆನ್ನಿಸುತ್ತದೆ. ಬ್ರಾಹ್ಮಣರು, ಒಕ್ಕಲಿಗರು, ಲಿಂಗಾಯ್ತರು ಕೆರೆ ಹಿಂದಿನ ಊರುಗಳಲ್ಲಿದ್ದರು. ಆಗ ಅಲ್ಲೆಲ್ಲ ಹಸಿರು ಸಿರಿಯುಕ್ಕಿ ಹರಿಯುತ್ತಿತ್ತು. ಕಬ್ಬು , […]

ಕಾವೇರಿಯ ಈ ಕ್ಷಣದ ಕಾವಿನಿಂದಾಚೆ

ಕಾವೇರಿಯ ಈ ಕ್ಷಣದ ಕಾವಿನಿಂದಾಚೆ

ಈಗಾಗಲೇ ಮಂಡ್ಯಕ್ಕೆ ಹರಿಸುತ್ತಿದ್ದ ನೀರು ನಿಲ್ಲಿಸಿಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಾಗ, ಮಂಡ್ಯದ ರೈತರನ್ನು ಶಾಂತವಾಗಿಸಲು ನೀರು ಬಿಡಲಾಗಿತ್ತು. ಅತ್ತ ಹಾಸನದ ರೈತರ ಪಾಲಿನದೆಂದು ನಂಬಿದ್ದ ಹೇಮಾವತಿ ನೀರು ಇಪ್ಪತ್ತರ ವರೆಗೆ ತಮಿಳುನಾಡಿಗಂತೂ ಹರಿಯುತ್ತದೆ. ಕಟ್ಟು ನೀರು ಎಂಬ ಪದ್ಧತಿಗೂ ತಿಲಾಂಜಲಿ ನೀಡಬೇಕಾದ ದುಸ್ಥಿತಿ ಇದೆ. ಎಂಥಾ ವಿಪರ್ಯಾಸವೆಂದರೆ ಉತ್ತರದ ತುಂಗೆ ಕೃಷ್ಣೆ ತುಂಬಿದೆ. ಕೃಷ್ಣೆಯಂತೂ ಅಬ್ಬರಿಸಿದ್ದಾಳೆ. ಇದರರ್ಥವೇನು? ಅತ್ಯಂತ ಸರಳ. ನೀರೆಂಬುದು ಇನ್ನೂ ಮನುಷ್ಯನ ಅಳವಿಗೆ ಮೀರಿದ್ದು. ಭೂಮಿಗೆ ಸುರಿವ ನೀರು ಇನ್ನೂ ಪ್ರಕೃತಿಯ ವಿವೇಚನೆ. […]

ಕರ್ನಾಟಕದಲ್ಲಿ ಲ್ಯಾಂಡ್ ಬ್ಯಾಂಕಿನ ವಿಸರ್ಜನೆ

ಕರ್ನಾಟಕದಲ್ಲಿ ಲ್ಯಾಂಡ್ ಬ್ಯಾಂಕಿನ ವಿಸರ್ಜನೆ

ಕೈಗಾರಿಕೆಗಳಿಗೆ ಸುಲಭವಾಗಿ ಭೂಮಿ ಒದಗಿಸಲು ಸರಕಾರವೇ ರಚಿಸಿದ್ದ ಲ್ಯಾಂಡ್ ಬ್ಯಾಂಕನ್ನು ವಿಸರ್ಜಿಸುವುದರೊಂದಿಗೆ ಕರ್ನಾಟಕ ಸರಕಾರ ಒಂದು ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಿದೆ.    ಹಾಗೆ ನೋಡಿದರೆ ಈ ಲ್ಯಾಂಡ್ ಬ್ಯಾಂಕ್ ಎನ್ನುವುದೇ ರೈತ ವಿರೋಧಿಯಾದ ಮತ್ತು ಬಂಡವಾಳಶಾಹಿ ಸ್ನೇಹಿಯಾದ ಒಂದು ಸಂಸ್ಥೆ! ಯಾಕೆಂದರೆ ಜಾಗತೀಕರಣದ ನಂತರ ಇಂಡಿಯಾದಲ್ಲಿ ತಮ್ಮ ಉದ್ದಿಮೆಗಳನ್ನು ಸ್ಥಾಪಿಸುವಂತೆ ಸ್ವದೇಶಿ ಮತ್ತು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಕ್ಕೆ ನಿಂತ ಸರಕಾರಕ್ಕೆ ಇದ್ದ ಮೊದಲ ಸಮಸ್ಯೆ ಎಂದರೆ ಸದರಿ ಉದ್ದಿಮೆಗಳಿಗೆ ಭೂಮಿ ಒದಗಿಸುವುದಾಗಿತ್ತು. ಮುಕ್ತ ಆರ್ಥಿಕನೀತಿಗೆ ಬದಲಾದ […]

ಮರಳಿ ಭೂಮಿ ಪಡೆದ ಸಿಂಗೂರಿನ ರೈತರು: ಕೃಷಿವಲಯಕ್ಕೆ ಸಂದ ಜಯ!

ಮರಳಿ ಭೂಮಿ ಪಡೆದ ಸಿಂಗೂರಿನ ರೈತರು: ಕೃಷಿವಲಯಕ್ಕೆ ಸಂದ ಜಯ!

ಸುದ್ದಿ-ನಿನ್ನೆ ಮಮತಾ ಬ್ಯಾನರ್ಜಿಯವರು ಸಿಂಗೂರಿನ ರೈತರಿಗೆ ಅವರ ಕೃಷಿ ಭೂಮಿಯನ್ನು ಪರಿಹಾರದ ಸಮೇತ ಮರಳಿಸಿದ್ದಾರೆ! ಇಡೀ ಇಂಡಿಯಾ ಮುಕ್ತ ಆರ್ಥಿಕ ನೀತಿಗೆ ತನ್ನನ್ನು ತೆರದುಕೊಂಡು ತನ್ನ ಸಮಾಜವಾದಿ ಆಶಯಗಳನ್ನೆಲ್ಲ ಗಾಳಿಗೆ ತೂರುವ ರೀತಿಯಲ್ಲಿ ಹೊಸಹೊಸ ಶಾಸನಗಳನ್ನು ರೂಪಿಸುತ್ತಿರುವ ಈ ಹೊತ್ತಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿಯವರ ಈ ನಡೆ ನನ್ನ ಮಟ್ಟಿಗಂತು ಐತಿಹಾಸಿಕವೆನಿಸುತ್ತಿದೆ. ಏಕೆಂದರೆ ಚುನಾವಣೆಗಳಲ್ಲಿ ನೀಡುವ ಜನಪರ ಆಶ್ವಾಸನೆಗಳನ್ನು ನೆನಪಲ್ಲಿಟ್ಟುಕೊಂಡು ರಾಜಕಾರಣ ಮಾಡುವವರ ಸಂಖ್ಯೆ ವಿರಳವಾಗುತ್ತಿರುವ ಈ ದಿನಗಳಲ್ಲಿ, ತಾವು ಅಧಿಕಾರದಲ್ಲಿರದೆ ಹೋದಾಗ ಸಿಂಗೂರು […]