ಆಡಳಿತ

ಆಡಳಿತ

ಕನ್ನಡಿ- 1 : ಕುಟುಂಬದ ಸದಸ್ಯತ್ವ ಬದಲಿಸಿಕೊಳ್ಳುವ ಕಂದಾಯ ಅಧಿಕಾರಿಗಳು

ಕನ್ನಡಿ- 1 : ಕುಟುಂಬದ ಸದಸ್ಯತ್ವ ಬದಲಿಸಿಕೊಳ್ಳುವ ಕಂದಾಯ ಅಧಿಕಾರಿಗಳು

ಮಹಾ ಭಾರತದಲ್ಲಿ ಪಿತಾಮಹಾರಾದ ಭೀಷ್ಮರು ಪಾಂಡವ ಮತ್ತು ಕೌರವರ ನಡುವಿನ ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದ ಆಡಳಿತ ವ್ಯವಸ್ಥೆಯನ್ನು ವಿಭಾಗಿಸಿ ಹಂಚಲು ಉದ್ದೇಶಿಸಿದರಂತೆ. ಅದರಂತೆ ಧರ್ಮರಾಯನಿಗೆ ಕಂದಾಯ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗಿತ್ತಂತೆ. ಬಹುಷ ಇದು ಕಂದಾಯ ಇಲಾಖೆಯ ಕುರಿತ ಮೊದಲು ಉಲ್ಲೇಖ ಇರಬಹುದು. ಅಂತಹ ಮಹತ್ವದ ಇಲಾಖೆ ಇಂದು ಎಲ್ಲರಿಂದ ಟೀಕಿಸಿಕೊಳ್ಳುವ, ಬಯಸಿಕೊಳ್ಳುವ ಇಲಾಖೆ ಆಗಿದೆ. ಬೆಂಗಳೂರಿನಂತಹ ನಗರಗಳಲ್ಲಂತು ಪೋಲಿಸ ಇಲಾಖೆಯಂತೆ, ಈ ಇಲಾಖೆಗೂ ಸಹ ಕಾನೂನೆ ಇಲ್ಲವೆನೋ ಎಂಬಂತ್ತಾಂಗಿ ಹೋಗಿದೆ. ಕಳೆದ ವಾರ ದೊಡ್ಡ ಬಳ್ಳಾಪೂರದ […]

ನಿರ್ಭಯಾಗೆ ನ್ಯಾಯ ಬೇಕಿದೆ ಶಿಕ್ಷೆಯಲ್ಲ

ನಿರ್ಭಯಾಗೆ ನ್ಯಾಯ ಬೇಕಿದೆ ಶಿಕ್ಷೆಯಲ್ಲ

2012ರ ಡಿಸೆಂಬರ್ 16ರಂದು ವಿಕೃತ ಕಾಮಿಗಳ ದುಷ್ಕøತ್ಯಕ್ಕೆ ಬಲಿಯಾಗಿ ತನ್ನ ಶೀಲವನ್ನೂ ಕಳೆದುಕೊಂಡು ಪ್ರಾಣ ತೆತ್ತ ನಿರ್ಭಯಾ ಎಂಬ ಅಮಾಯಕ ಯುವತಿಗೆ ಮೂರು ವರ್ಷಗಳ ನಂತರವು ಪೂರ್ನ ನ್ಯಾಯ ಒದಗಿಸಲು ಭಾರತದ ಆಡಳಿತ ವ್ಯವಸ್ಥೆ ವಿಫಲವಾಗಿರುವುದು ಪ್ರಜಾತಂತ್ರದ ದುರಂತ ಎನ್ನಲು ಅಡ್ಡಿಯಿಲ್ಲ. ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಆರು ದುಷ್ರ್ಕರ್ಮಿಗಳ ಪೈಕಿ ಓರ್ವ ಮೃತಪಟ್ಟಿದ್ದು ಉಳಿದ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ದೆಹಲಿ ಹೈಕೋರ್ಟ್ ಸಹ ಈ ತೀರ್ಪನ್ನು ಎತ್ತಿಹಿಡಿದಿದೆ. ಆದರೆ ಸುಪ್ರೀಂ ಕೋರ್ಟ್ ಮರುವಿಚಾರಣೆಯ ಸಂದರ್ಭದಲ್ಲಿ […]

ಬೀಗ ಹಾಕುವ ಮುನ್ನ…….

ಬೀಗ ಹಾಕುವ ಮುನ್ನ…….

ಉಳಿದಿದ್ದು ಒಂದೇ ಹೆಜ್ಜೆ…. ನ್ಯಾಯಮೂರ್ತಿ ಭಾಸ್ಕರ್ ರಾವ್ ಜೊತೆಯಲ್ಲಿ, ಉಪ ಲೋಕಾಯುಕ್ತ ಸುಭಾಶ್ ಆಡಿಯವರನ್ನೂ ಪದಚ್ಯುತಗೊಳಿಸಿ, ಲೋಕಾಯುಕ್ತ ಎಂಬ ಸಂಸ್ಥೆಗೆ ಬೀಗ ಹಾಕುವುದು. `ಮೂರ್ಖ’ ಮಹಾಜನರಿಗೇನು ಹೇಳೋದು ಅಂತಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತವಲಯ ತಯಾರಾಗಿಯೇ ಇತ್ತು. ಮಿತಿಮೀರಿದ ಭ್ರಷ್ಟಾಚಾರದಿಂದ ಲೋಕಾಯುಕ್ತ ಮುಚ್ಚಲೇ ಬೇಕಾದ ಪರಿಸ್ಥಿತಿ ಬಂದಿದೆ. ಹ್ಯಾಗೂ ಕೇಂದ್ರ ಸರ್ಕಾರ ಲೋಕಪಾಲ ತಂದಮೇಲೆ, ಇಲ್ಲಿಯೂ ಲೋಕಪಾಲ್ ಸ್ಥಾಪಿಸಲಾಗುವುದು, ಅಂತ. ಹ್ಯಾಗೂ `public memory is short’…. ಸ್ವಲ್ಪ ದಿನಕ್ಕೆ ಜನ ಮರೆತುಹೋಗುತ್ತಾರೆ ಅನ್ನೋದು ನಮ್ಮ ಘನ ಸರ್ಕಾರದ […]

ಜಾತಿ -ಆದಾಯ ಪ್ರಮಾಣ ಪತ್ರಗಳಿಗೆ ಆನ್ ಲೈನ್ ಅರ್ಜಿ

ಜಾತಿ -ಆದಾಯ ಪ್ರಮಾಣ ಪತ್ರಗಳಿಗೆ ಆನ್ ಲೈನ್ ಅರ್ಜಿ

ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ನಡೆದು ಬಂದ ಹಾದಿ– ಕೈಬರಹದ ಪ್ರಮಾಣ ಪತ್ರದಿಂದ ಕಾಗದ ರಹಿತ ಪ್ರಮಾಣ ಪತ್ರದವರೆಗೆ  ಶಿಕ್ಷಣ, ಉದ್ಯೋಗ ಹಾಗೂ ಇತರೆ ಕ್ಷೇತ್ರಗಳಲ್ಲಿ ಜಾತಿ ಆಧಾರಿತ ಮೀಸಲಾತಿಯ ಆರಂಭದೊಂದಿಗೆ ಸರ್ಕಾರಗಳಿಂದ ಜನರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆ ಸಹಾ ಜಾರಿಗೆ ಬಂದಿರುತ್ತದೆ. ಎಲ್ಲಾ ರಾಜ್ಯಗಳಲ್ಲೂ ಈ ರೀತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಿಸಲು ವಿವಿಧ ಕಾನೂನುಗಳಿದ್ದು, ಪ್ರಮಾಣ ಪತ್ರಗಳನ್ನು ಅಂಗೀಕರಿಸುವ ಅಧಿಕಾರವನ್ನು ನಿಗಧಿತ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿರುತ್ತದೆ. […]

ಎಲ್ಲೋ ಹರಿದು ಹೋದ ಗ್ರಾಮೀಣ ಜನರ ಕುಡಿಯುವ ನೀರು

ಎಲ್ಲೋ ಹರಿದು ಹೋದ ಗ್ರಾಮೀಣ ಜನರ ಕುಡಿಯುವ ನೀರು

ಚರಿತ್ರೆಯಲ್ಲಿ ಅನೇಕ ವ್ಯಕ್ತಿಗಳು ಬೇರೆ-ಬೇರೆ ಕಾರಣಗಳಿಗೆ ದಾಖಲಾಗುತ್ತಾರೆ. ಕೆಲವರನ್ನು ಜನಪೀಡಕರೆಂಬ ದುಷ್ಟರೆಂಬ ಕಾರಣಕ್ಕೆ ದಾಖಲಾಗುತ್ತಾರೆ. ಇನ್ನೂ ಕೆಲವರು ತಮ್ಮ ಜೀವನವನ್ನು ಸಮಾಜದ ಒಳಿತಿಗೆ ಮೀಸಲಿಟ್ಟು ದುಡಿದ ಕಾರಣಕ್ಕೆ ದಾಖಲಾಗುತ್ತಾರೆ. ಎರಡನೇ ಗುಂಪಿನಲ್ಲಿ ಹೆಚ್ಚಿನ ಹೆಸರುಗಳನ್ನು ಪಟ್ಟಿ ಮಾಡಲಾಗುವುದರಿಂದ ಸಮಾಜದ ಕುರಿತು ಭರವಸೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಕಳೆದ ನಲವತ್ತು ವರ್ಷಗಳ ಕರ್ನಾಟಕದ ಚರಿತ್ರೆಯಲ್ಲಿ ದಾಖಲಾದ ನಜೀರ್ ಸಾಬರ ದುಡಿಮೆ ಮೆಚ್ಚುವಂತದ್ದು. ಗ್ರಾಮ ಕರ್ನಾಟಕದ ನೀರಿನ ಬವಣೆ ಅರಿತಿದ್ದ ‘ನೀರುಸಾಬರು’ ಹಟತೊಟ್ಟ ಹಾಗೆ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರಲು ದುಡಿದರು. […]

ಕಂಟೆಪ್ಟ್ ಆಫ್ ಕೋರ್ಟ್? ಅಥವ ಕಂಟೆಪ್ಟ್ ಆಫ್ ಕರಪ್ಷನ್?

ಕಂಟೆಪ್ಟ್ ಆಫ್ ಕೋರ್ಟ್? ಅಥವ ಕಂಟೆಪ್ಟ್ ಆಫ್ ಕರಪ್ಷನ್?

ಇದು ನ್ಯಾಯಾಂಗಕ್ಕೆ ಸಂಬಂಧಿಸಿದ ವಿಚಾರವಾದ್ದರಿಂದ ಮೊದಲೇ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಈ ಲೇಖನದಲ್ಲಿ ಸತ್ಯವನ್ನಷ್ಟೇ ಹೇಳಲಾಗಿದೆ ಮತ್ತು ಸತ್ಯವನ್ನಲ್ಲದೇ ಬೇರೇನನ್ನೂ ಹೇಳಲಾಗಿಲ್ಲ. ನಮ್ಮ ಘನ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ಮತ್ತು ನ್ಯಾಯಾಂಗದ ಘನತೆಯನ್ನು ಕಾಪಾಡುವುದಷ್ಟೆ ಈ ಲೇಖನದ ಉದ್ದೇಶವೇ ಹೊರತು ಯಾರನ್ನಾದರೂ ನಿಂದಿಸುವ ಉದ್ದೇಶವನ್ನು ಹೊಂದಿಲ್ಲ. ಈ ಸ್ಪಷ್ಟೀಕರಣದ ನಂತರ ಈಗ ಅಸಲಿ ವಿಚಾರಕ್ಕೆ ಬರೋಣ. ನಮ್ಮ ಪ್ರಜಾತಂತ್ರ ವ್ಯವಸ್ಥೆ ಮುಖ್ಯವಾಗಿ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಆಧಾರ ಸ್ಥಂಬಗಳ ಮೇಲೆ ನಿಂತಿದೆಯೆಂಬುದು ಶಾಲಾ […]

ಕೋಮುವಾದದ ಸಾವಿರಾರು ಮುಖವಾಡಗಳು.

ಕೋಮುವಾದದ ಸಾವಿರಾರು ಮುಖವಾಡಗಳು.

  ಇತ್ತೀಚಿನ ದಿನಗಳಲ್ಲಿ ನಮ್ಮ ದೇಶ-ಕಾಲಗಳನ್ನು ಒಂದು ಬಗೆಯ ವಿಸ್ಮೃತಿ ಆವರಿಸಿಕೊಂಡುಬಿಟ್ಟಿದೆಯೇನೋ ಎಂಬ ಆತಂಕ ಉಂಟಾಗುತ್ತಿದೆ. ಮನುಷ್ಯ ತನ್ನ ಪೂರ್ಣ ಅರಿವಿನೊಂದಿಗೆ ಪ್ರಜ್ಞಾಪೂರ್ವಕವಾಗಿ ತೀರ್ಮಾನಗಳನ್ನು ಕೈಗೊಳ್ಳುವುದು ಮತ್ತು ಈ ರೀತಿಯ ವಿಸ್ಮೃತಿಗೊಳಗಾಗಿ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದು ಬೇರೆ ಬೇರೆಯಾದುದು. ಇದೊಂದು ರೀತಿಯ ಕಣ್ಕಟ್ಟಿನ ದೌರ್ಬಲ್ಯ. ಒಬ್ಬ ಜಾದುಗಾರ ವೇದಿಕೆಯಲ್ಲಿ ಬಸ್-ಲಾರಿ ಮೇಲೆ ಬಟ್ಟೆ ಹೊದಿಸಿ ನಾವು ಕಣ್ಣುಕಣ್ಣು ಬಿಟ್ಟು ನೋಡುತ್ತಿದ್ದಂತೆಯೇ ಮಾಯಮಾಡಿ ಬಿಡುತ್ತಾನೆ. ಅವನು ಮಾಡಿದ್ದು ಜಾದೂ ಎಂದು ಗೊತ್ತಿದ್ದರೂ ನಾವು ನಮಗರಿವಿಲ್ಲದಂತೆಯೇ ಚಪ್ಪಾಳೆ ತಟ್ಟುತ್ತೇವೆ, ಬೆರಗಾಗಿ ತಲೆದೂಗುತ್ತೇವೆ. […]

ಭೂಮಿ ಖರೀದಿ – ಇರಲಿ ಎಚ್ಚರ

ಭೂಮಿ ಖರೀದಿ – ಇರಲಿ ಎಚ್ಚರ

ಭೂಮಿಗೆ ಈಗ ಬಂಗಾರಕ್ಕಿಂತಲೂ ಅಧಿಕ ಬೆಲೆ. ನಾವು ಇದನ್ನು ಸೃಷ್ಟಿಸಲಾಗದೆಂಬ ಕಾರಣಕ್ಕೇ ಈ ಗೌರವ. ಆದುದರಿಂದ, ಮುಂದೊಂದು ದಿನ ಅಪರಿಮಿತವಾದ ಲಾಭ ಪ್ರಾಪ್ತವಾಗುವುದೆಂಬ ವ್ಯಾಪಾರಿ ಮನೋಭಾವದಿಂದಲೇ ಅನೇಕರು ಆಸ್ತಿ ಖರೀದಿಗೆ ಮುಗಿಬೀಳುತ್ತಾರೆ. ಭವಿಷ್ಯದ ದೃಷ್ಟಿಯಿಂದ ಆಸ್ತಿ ಖರೀದಿಸುವವರ ವರ್ಗ ಒಂದಾದರೆ, ಬೇಡಿಕೆ ಜಾಸ್ತಿಯಾದಾಗ ವಿಲೇವಾರಿ ಮಾಡಿ ಲಾಭ ಗಳಿಸಬಹುದೆನ್ನುವ ದುಡ್ಡಿದ್ದವರ ವರ್ಗ ಇನ್ನೊಂದು. ಈ ಪೈಪೋಟಿಯಲ್ಲಿ ಕೈಯಲ್ಲಿ ಕಾಸಿದ್ದರೆ ಸಾಕು ಅದನ್ನು ಷೇರು-ಗೀರು ಎಂದು ತೊಡಗಿಸುವ ಬದಲಿಗೆ ಅಥವಾ ಖಾಸಗಿ ಚೀಟಿಯಲ್ಲಿ ತೊಡಗಿಸಿ ಪಂಗನಾಮ ಹಾಕಿಸಿಕೊಳ್ಳುವ ಬದಲಿಗೆ […]

ನೀತಿ ಆಯೋಗ : ನಿರಂಕುಶಾಧಿಕಾರದ ಹೊಸ ಅಸ್ತ್ರ

ನೀತಿ ಆಯೋಗ : ನಿರಂಕುಶಾಧಿಕಾರದ ಹೊಸ ಅಸ್ತ್ರ

ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ತಳಮಟ್ಟದಿಂದ ಮೇಲ್ಮಟ್ಟದವರೆಗೆ ಸಮಿತಿ, ಆಯೋಗಗಳನ್ನು ರಚಿಸುವುದರಲ್ಲಿ ನಿಸ್ಸೀಮರು. ಹಾಗೆ ರಚನೆಯಾದ ಸಂಸ್ಥೆಗಳ ಕಾರ್ಯವೈಖರಿ ಪ್ರಶ್ನಾರ್ಹ. ಯಾರ ಉದ್ದಾರಕ್ಕೆ ಇಂತಹ ಸಂಸ್ಥೆಗಳನ್ನು ರಚಿಸಲಾಗುವುದೋ? 1950ರಲ್ಲಿ ಸಂವಿಧಾನ ಬದ್ಧವಾಗಿ ಒಪ್ಪಿ ಜಾರಿಗೆ ತರಲಾದ “ಯೋಜನಾ ಆಯೋಗವನ್ನು ಇಂದಿನ ಪ್ರಧಾನಿಗಳು ಅದನ್ನು ಕಿತ್ತೊಗೆದು ಅಲ್ಲಿ ‘ನೀತಿ’ ಆಯೋಗವನ್ನು ಪ್ರತಿಷ್ಟಾಪಿಸಿದ್ದಾರೆ. ಭಾರತ ರಾಷ್ಟ್ರಿಯ ಪರಿವರ್ತನಾ ಸಂಸ್ಥೆ ಎಂಬುದು ಅದರ ಪೂರ್ಣ ಹೆಸರು. ಈ ನೀತಿ ಆಯೋಗದಲ್ಲಿ ಅತಿ ಬುದ್ಧಿವಂತರ ಸಮೂಹವೊಂದಿದೆ. ಅದು ಪ್ರಧಾನಿಯ ತಾಳಕ್ಕೆ ತಕ್ಕಂತೆ ಕುಣಿಯಬೇಕು. […]

1 3 4 5