ಆಡಳಿತ

ಆಡಳಿತ

ದೇಶದಲ್ಲಿ ಸಾವಿಗೂ ಮಾರುಕಟ್ಟೆ ಮೌಲ್ಯವಿದೆ

ದೇಶದಲ್ಲಿ ಸಾವಿಗೂ ಮಾರುಕಟ್ಟೆ ಮೌಲ್ಯವಿದೆ

ಜಗತ್ತಿನ ಪ್ರತಿಯೊಂದು ಚರಾಚರ ಜೀವಿಯನ್ನೂ ಕಾಡುವ ಒಂದು ಚಿಂತೆ ಎಂದರೆ ಸಾವನ್ನು ಕುರಿತಾದದ್ದು. ಹುಟ್ಟು ಅನಿರೀಕ್ಷಿತ, ಸಾವು ನಿಶ್ಚಿತ ಅದರೆ ಬದುಕು ಮಾತ್ರವೇ ವಾಸ್ತವ. ಇದು ಎಲ್ಲ ಧರ್ಮಗಳ ಸಾರ, ತಿರುಳು ಮತ್ತು ಅಂತಃಸತ್ವ. ದಾರ್ಶನಿಕರು ಈ ಪದಗಳನ್ನು ಹಲವಾರು ರೀತಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ತನ್ನ ಉಸಿರು ಇರುವವರೆಗೂ ಶಾಶ್ವತವಾಗಿ ಬದುಕಿಯೇ ತೀರುತ್ತೇನೆ ಎನ್ನುವಂತೆ ಬದುಕುವ ಮಾನವನಿಗೆ ಸಾವು ಸದಾ ಪ್ರಶ್ನೆಯಾಗಿಯೇ ಉಳಿಯುತ್ತದೆ. ಪ್ರಶ್ನೆಗಳ ಪಂಜರದಲ್ಲಿಯೇ ಸಿಲುಕಿ ಮಾನವ ತನ್ನ ಕೊನೆಯುಸಿರು ಎಳೆಯುತ್ತಾನೆ. ಈ ದಾರ್ಶನಿಕ ಪ್ರಶ್ನೆಗಳು ಒತ್ತಟ್ಟಿಗಿರಲಿ, […]

ವೃತಿ ಧರ್ಮ, ಮನೋಧರ್ಮ ಮತ್ತು ಸಾಮಾಜಿಕ ಉತ್ತರದಾಯಿತ್ವ

ವೃತಿ ಧರ್ಮ, ಮನೋಧರ್ಮ  ಮತ್ತು ಸಾಮಾಜಿಕ ಉತ್ತರದಾಯಿತ್ವ

ಯಾವುದೇ ವ್ಯಕ್ತಿಯ ಜೀವನದಲ್ಲಿ ಮನೋಧರ್ಮ ಅಥವಾ ಮನೋಭಾವ ಎನ್ನುವುದು ವ್ಯಕ್ತಿಗತವಾಗಿ ರೂಢಿಸಿಕೊಂಡ ಗುಣಲಕ್ಷಣಗಳನ್ನು ಆಧರಿಸಿರುತ್ತದೆ. ಸಾಂಪ್ರದಾಯಿಕ ಸಮಾಜದಲ್ಲಿ, ವಿಶೇಷವಾಗಿ ಭಾರತದಂತಹ ಶ್ರೇಷ್ಠತೆಯ ಗುಂಗಿನ ಸಾಮಾಜಿಕ ಪರಿಸರದಲ್ಲಿ ಮನೋಧರ್ಮವನ್ನು ವ್ಯಕ್ತಿಯ ಜನ್ಮದ ನೆಲೆಯಲ್ಲಿ, ಜಾತಿಯ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. “ಜಾತಿ ಬುದ್ಧಿ” ಎಂಬ ಲೇವಡಿಯ ಮಾತು 21ನೆಯ ಶತಮಾನದ ಆಧುನಿಕ ಭಾರತೀಯ ಸಮಾಜದಲ್ಲೂ ಪ್ರಚಲಿತವಾಗಿದೆ. ಜಾತಿ ಕೇಂದ್ರಿತ ಶ್ರೇಣೀಕೃತ ಸಮಾಜವೊಂದರಲ್ಲಿ ವ್ಯಕ್ತಿಗತ ಮನೋಧರ್ಮವನ್ನು ಜಾತಿಯ ನೆಲೆಯಲ್ಲಿ ಅಥವಾ ಸಾಮಾಜಿಕ ಶ್ರೇಣಿಯ ನೆಲೆಯಲ್ಲಿ ವ್ಯಾಖ್ಯಾನಿಸುವುದು ಅತಿಶಯದ ಮಾತೇನಲ್ಲ. ಆದರೆ ಒಂದು ಸಮಾಜದ […]

‘ಸಿಪಾಯಿ ದಂಗೆ’ಯ ಮೇಲೆ ಸರ್ಕಾರದ ದಮನ

‘ಸಿಪಾಯಿ ದಂಗೆ’ಯ ಮೇಲೆ ಸರ್ಕಾರದ ದಮನ

ನಾವು ಒಂದಷ್ಟು ಗೆಳೆಯರು ತರಬೇತಿಗಾಗಿ ದೂರದ ಊರಿಗೆ ಹೊರಟಿದ್ದೆವು. ಎಲ್ಲರೂ ಬಸ್ ನಿಲ್ದಾಣಕ್ಕೆ ಬಂದು ತಡವಾದ ಒಬ್ಬ ಗೆಳೆಯನಿಗಾಗಿ ಕಾಯುತ್ತಿದ್ದೆವು. ಸ್ವಲ್ಪ ಸಮಯದ ನಂತರ ನಾವು ಕಾಯುತ್ತಿದ್ದ ಗೆಳೆಯ ಒಂದು ಸಣ್ಣ ಬ್ಯಾಗ್ ಹೆಗಲಿಗೆ ಹಾಕಿಕೊಂಡು ಬಂದ. ನಾವು ಹೊರಟಿದ್ದು ಒಂದು ತಿಂಗಳ ತರಬೇತಿಗಾಗಿ. ನಮಗೋ ಅಚ್ಚರಿ. ಒಂದು ತಿಂಗಳಿಗೆ ಇಷ್ಟು ಸಣ್ಣ ಲಗೇಜ್ ಸಾಕೆ ಎಂದು ಕೇಳುವುದರೊಳಗೆ ಒಬ್ಬ ವ್ಯೆಕ್ತಿ ದೊಡ್ಡದೊಂದು ಸೂಟ್‍ಕೇಸ್ ಹೊತ್ತು ತಂದು ನಮ್ಮ ಮುಂದಿರಿಸಿ ಗೆಳೆಯನಿಗೆ ‘ಬರುತ್ತೇನೆ ಸಾರ್’ ಎಂದು ಹೇಳಿ […]

ಕುಂಭಕರ್ಣರನ್ನು ಎಚ್ಚರಿಸುವುದು ಹೇಗೆ ?

ಕುಂಭಕರ್ಣರನ್ನು ಎಚ್ಚರಿಸುವುದು ಹೇಗೆ ?

ರಾಮಾಯಣದಲ್ಲಿ ಸಾಕಷ್ಟು ಪಾತ್ರಗಳಿವೆ. ರಾಮ, ಸೀತೆ, ಆಂಜನೇಯ, ರಾವಣ, ಮಂಡೋದರಿ ಹೀಗೆ ಅಸಂಖ್ಯಾತ ಪಾತ್ರಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಆದರೆ ಈ ಎಲ್ಲ ಪಾತ್ರಗಳನ್ನೂ ಮೀರಿಸುವ ಒಂದು ಪಾತ್ರ, ಇಂದಿನ ಸಿನಿಮಾಗಳಲ್ಲಿನ ಪೋಷಕ ಪಾತ್ರದಂತೆ, ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡರೂ ತನ್ನ ವಿಶಿಷ್ಟತೆ ಮತ್ತು ವಿಶೇಷ ವ್ಯಕ್ತಿತ್ವದಿಂದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಸಮಕಾಲೀನ ಜಗತ್ತಿನಲ್ಲೂ ಸಹ ಯಾವುದೇ ವ್ಯಕ್ತಿಯ ವರ್ತನೆಯನ್ನು ಕುರಿತು ರಾಮಾಯಣದ ಒಂದು ಪಾತ್ರದೊಡನೆ ಹೋಲಿಸದರೆ ಅದು ಈ ವಿಶಿಷ್ಟ ಪಾತ್ರದೊಂದಿಗೆ ಮಾತ್ರ. ಅದೇ ಕುಂಭಕರ್ಣನ ಪಾತ್ರ. […]

ಭೂಮಿ ಹೆಚ್ಚಿಸಿದ ಭೂ ಮಾಪಕ

ಭೂಮಿ ಹೆಚ್ಚಿಸಿದ ಭೂ ಮಾಪಕ

ಗ್ರಾಮೀಣ ಕೃಷಿಕ ಕುಟುಂಬದಲ್ಲಿ ಜನಿಸಿದ ನಮಗೆ ಕೃಷಿ ಜೀವನಾಧಾರವಾಗಿತ್ತು. ಜೀವನ ಕ್ರಮ ಆಗಿನ್ನು ಕೃಷಿ ಮಾರುಕಟ್ಟೆ ವ್ಯಾಪಾರೀಕರಣದ ವರ್ತುಲದೊಳಗೆ ಸಿಲುಕಿರಲಿಲ್ಲ. ಅವಿಭಕ್ತಕುಟುಂಬದ ಬಾಂಧವ್ಯಗಟ್ಟಿಯಿತ್ತು. ಶ್ರೀಮಂತಿಕೆ ಎಂಬುದು ಭೂಮಿ ಒಡೆತನದಲ್ಲಿತ್ತೇ ಹೊರತು, ಹಣಕಾಸಿನ ವಿಚಾರದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಸಮಾನರೆ. ಸಹಕಾರ ಮತ್ತು ಸಮಾಜವಾದದ ಅಲಿಖಿತ ವ್ಯವಸ್ಥೆಯಂತೆ ಬದುಕು. ವಿದ್ಯೆಯ ಮಹತ್ವಕ್ಕಿನ್ನು ಅಷ್ಟು ಮಾನ್ಯತೆಯಿರಲಿಲ್ಲ. ಊರಿಗೊಬ್ಬ ಮಾತ್ರ ಸ್ನಾತಕೋತ್ತರ ಪದವೀಧರ ಇದ್ದನಷ್ಟೆ. ಸರ್ಕಾರಿ ಕಛೇರಿಯ ಯಾವುದೇ ಕೆಲಸಕ್ಕೂ ಅವನೇ ಮಧ್ಯವರ್ತಿ ಮತ್ತು ಸೂತ್ರಧಾರ. ಹಳ್ಳಿ ಯಜಮಾನಿಕೆ ಎಂಬುದು ವರ್ಣ […]

ಸರ್ವೇ ಮತ್ತು ಕಂದಾಯ ವ್ಯವಸ್ತೆಯ ಅದ್ವಾನಗಳು

ಸರ್ವೇ ಮತ್ತು  ಕಂದಾಯ ವ್ಯವಸ್ತೆಯ ಅದ್ವಾನಗಳು

ಭಾರತದ ಇತಿಹಾಸದಲ್ಲಿ ದೊಡ್ಡ ಜಿಗಿತವೊಂದು ಸಂಭವಿಸಿದ್ದು 19 ನೇ ಶತಮಾನದ ಮಧ್ಯಭಾಗದಲ್ಲಿ. ವಸಾಹತುಶಾಹಿ ವ್ಯವಸ್ಥೆಯು ಏಕಕಾಲದಲ್ಲಿ ಇಬ್ಬಾಯ ಖಡ್ಗದಂತೆ ಕಾರ್ಯನಿರ್ವಹಿಸಿತು. ಒಂದು, ಆಡಳಿತ ವ್ಯವಸ್ಥೆಯ ಸ್ಥಾಪನೆ. ಮತ್ತೊಂದು, ಸಂಪತ್ತಿನ ವ್ಯವಸ್ಥಿತ ಲೂಟಿ. 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗುವ ಕೇವಲ ಮೂರು ವರ್ಷ ಮೊದಲು ಸಿವಿಲ್ ಕೋರ್ಟುಗಳು ಪ್ರಾರಂಭವಾದವು. ಬ್ರಿಟಿಷ್ ಪ್ರಭುತ್ವದ ಆಡಳಿತಾತ್ಮಕ ಸೌಲಭ್ಯಕ್ಕೆಂದು ಆರಂಭಗೊಂಡ ಈ ಪ್ರಕ್ರಿಯೆ ಊಳಿಗಮಾನ್ಯ ಸಮಾಜವೊಂದು ಸಾವಿರಾರು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬಂದಿದ್ದ ವ್ಯವಸ್ಥೆಯನ್ನು ಛಿದ್ರಗೊಳಿಸಿತು. ವಸಾಹತುವಾದವು ಏಕಕಾಲದಲ್ಲಿ ಭಾರತದ […]

ಸಾಧನೆಯ ಹಪಾಹಪಿ ಜಡ ವ್ಯವಸ್ಥೆಯ ನಿಷ್ಕ್ರಿಯತೆ

ಸಾಧನೆಯ ಹಪಾಹಪಿ ಜಡ ವ್ಯವಸ್ಥೆಯ ನಿಷ್ಕ್ರಿಯತೆ

ಪಕ್ಷ ಯಾವುದೇ ಇರಲಿ, ಸರ್ಕಾರದ ನೇತೃತ್ವ ಯಾವುದೇ ಪಕ್ಷ ವಹಿಸಲಿ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ದೇಶದ ಸಾರ್ವಭೌಮ ಪ್ರಜೆಗಳು ಕಾಣುತ್ತಲೇ ಬಂದಿರುವ ಒಂದು ಸಾಮಾನ್ಯ ವಿದ್ಯಮಾನ ಎಂದರೆ ಸಾರ್ವಜನಿಕ ಕಾಮಗಾರಿಗಳ ಕಳಪೆ ಗುಣಮಟ್ಟ, ಭ್ರಷ್ಟಾಚಾರ ಮತ್ತು ತತ್ಸಂಬಂಧಿತ ಅವಘಡಗಳು. ಭಾರತ ಬುಲೆಟ್ ರೈಲಿನ ಯುಗಕ್ಕೆ ಜಿಗಿಯುತ್ತಿದೆ. ಮಂಗಳ ಗ್ರಹಕ್ಕೆ ಲಗ್ಗೆ ಹಾಕಿದೆ. ಚಂದ್ರನ ಮೇಲೆ ಮನೆ ಮಾಡುವ ಕನಸು ಕಾಣುತ್ತಿದೆ. ಅತ್ಯಾಧುನಿಕ ಕ್ಷಿಪಣಿಗಳ ಒಡೆತನ ಹೊಂದಿದೆ. ಅಣ್ವಸ್ತ್ರಗಳ ಖಜಾನೆಯನ್ನೇ ಹೊಂದಿದೆ. ಆದರೂ ಇಲ್ಲಿನ ರಸ್ತೆಗಳು ಅಪಘಾತ […]

ಕನ್ನಡಿ- 3 : ಬ್ಯಾಂಕ್‍ಗಳ ಎನ್‍ಪಿಎ ಎಂಬ ಹಗಲು ದರೋಡೆ

ಕನ್ನಡಿ- 3 : ಬ್ಯಾಂಕ್‍ಗಳ ಎನ್‍ಪಿಎ ಎಂಬ ಹಗಲು ದರೋಡೆ

ಇತ್ತೀಚಿನ ದಿನಗಳಲ್ಲಿ ಬ್ಯಾಂಕಗಳ ಎನ್‍ಪಿಎ ಅಂದರೆ ಅನುತ್ಪಾದಕ ಆಸ್ತಿಗಳ ಬಗ್ಗೆ ಬಹಳ ಚರ್ಚೆ ಪ್ರಾರಂಭವಾಗಿದೆ. ಅದರಲ್ಲೂ ಉದ್ದಮಿ ವಿಜಯಮಲ್ಯ ಮಾಲೀಕತ್ವದ ಕಿಂಗ್ ಪಿಶರ್ ಏರಲೈನ್ಸ ಸಂಸ್ಥೆ ಮುಚ್ಚಿದ ನಂತರ ಬಹಳ ಸುದ್ದಿಯಾಗುತ್ತಿದೆ. ಮಲ್ಯಗೆ ಮೇಲಿಂದ ಮೇಲೆ ಸಾಲ ನೀಡಿದ ಬ್ಯಾಂಕುಗಳ ಸಮೂಹ ಸಾಲ ವಸೂಲೀಗಾಗಿ ನ್ಯಾಯಾಲಯದ ಮೆಟ್ಟಿಲೆರಿವೆ. ವಿಮಾನಯಾನ ಉದ್ದೆಮ ನಷ್ಠ ಅನುಭವಿಸಿದ ಕಾರಣ ಬ್ಯಾಂಕುಗಳು ನೀಡಿದ ಸಾಲ ಅನುತ್ಪಾದಕ ಆಸ್ತಿ ಅಥವಾ ಎನ್‍ಪಿಎ ಆಗಿದೆ. ಬ್ಯಾಂಕುಗಳ ಎನ್‍ಪಿಎಗಳ ಬಗ್ಗೆ ತಿಳಿಯಲು ಸ್ವಾತಂತ್ರ ನಂತರದ ಘಟನೆಗಳ ಅವಲೋಕನ […]

ಕನ್ನಡಿ-2 : ಹಳ್ಳ ಹಿಡಿದ ಅಧಿಕಾರಶಾಹಿ ವರ್ಗ

ಕನ್ನಡಿ-2 : ಹಳ್ಳ ಹಿಡಿದ ಅಧಿಕಾರಶಾಹಿ ವರ್ಗ

ಇತ್ತೀಚೆಗೆ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಸ್ .ಎಂ. ಜಾಮದಾರರವರು ನೌಕರಶಾಹಿ ಭ್ರಷ್ಟತೆಗೆ ರಾಜಕಾರಣಿಗಳೇ ಕಾರಣ ಎಂಬ ಶೀರ್ಷಿಕೆಯಡಿ ಅಂಕಣ ಬರೆದಿದ್ದಾರೆ. ಅದರಲ್ಲಿ ನಡತೆ ಸರಿಯಲ್ಲದ, ಹಾಳಾಗಿರುವ ನೌಕರಶಾಹಿಯನ್ನು ಸರಿಪಡಿಸಲು ಅವಕಾಶವಿದೆ. ಭ್ರಷ್ಟಾಚಾರ, ಜಾತೀಯತೆ, ಪಕ್ಷಪಾತದಲ್ಲಿ ಮುಳುಗಿರುವ ನೌಕರಶಾಹಿಯ ವಕ್ತಾರರಂತೆ ಎಲ್ಲ ತಪ್ಪುಗಳನ್ನು ಅಧಿಕಾರ ಚುಕ್ಕಾಣೆ ಹಿಡಿದ ರಾಜಕಾರಣಿಗಳ ಮೇಲೆ ಗೂಬೆಕೂರಿಸುವಂತಿದೆ. ಶಾಸನಗಳ ರಚನೆ ಶಾಸಕಾಂಗದ ಕರ್ತವ್ಯ. ಅದರ ಅನುಷ್ಠಾನ ಕಾರ್ಯಂಗದ್ದು. ಶಾಸನ ಮತ್ತು ಯೋಜೆನಗಳ ಅನುಷ್ಠಾನ ಸಫಲವಾಗದಿರುವುದು ನೌಕರಶಾಹಿಯ ವೈಪಲ್ಯವೇ ಹೊರತು ಶಾಸಕಾಂದಲ್ಲ. ಪ್ರಾಮಾಣಿಕ, ಪಾರದರ್ಶಕ, ಕಾನೂನುಬದ್ದ […]

ತಲೆಯ ರಕ್ಷಣೆಯೂ ಜೀವ ಹಾನಿಯೂ

ತಲೆಯ ರಕ್ಷಣೆಯೂ ಜೀವ ಹಾನಿಯೂ

ನಂಬಿಕೆ ಮನುಷ್ಯನಿಗೆ ಕ್ಲಿಷ್ಟ ಸಂದರ್ಭಗಳಲ್ಲಿ ಸಾಂತ್ವನ ನೀಡುವ ಒಂದು ಸಾಧನ. ತಮ್ಮ ಮುಂದಿನ ಹಾದಿ ಯಾವುದು ಎಂದು ನಿರ್ದಿಷ್ಟವಾಗಿ ತಿಳಿಯಲು ಸಾಧ್ಯವಾಗದೆ ಇದ್ದಾಗ ಬಹುಪಾಲು ಜನರು ಯಾವುದೋ ಒಂದು ನಂಬಿಕೆಗೆ ಜೋತು ಬೀಳುತ್ತಾರೆ. ದೇವರು, ದೇವಾಲಯ, ಚರ್ಚು, ಮಸೀದಿ, ಗುರುದ್ವಾರ ಇವೆಲ್ಲವೂ ಸಹ ಇಂತಹ ಸಾಂತ್ವನದ ಕೇಂದ್ರಗಳಾಗಿ ರೂಪುಗೊಂಡ ನಂತರವೇ ಇಂದು ಔದ್ಯಮಿಕ ಜಗತ್ತಿನ ಒಂದು ಭಾಗವಾಗಿವೆ. ಕಳೆದ ಐವತ್ತು ವರ್ಷಗಳಲ್ಲಿ ಈ ನಂಬಿಕೆಗಳಿಗೆ ಮತ್ತಷ್ಟು ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಮಠಗಳು, ಆಧ್ಯಾತ್ಮಿಕ ಕೇಂದ್ರಗಳು, ಯೋಗ ಕೇಂದ್ರಗಳು […]