ಆಡಳಿತ

ಆಡಳಿತ

ರಾಷ್ಟ್ರೀಯವು ಪ್ರಾದೇಶಿಕವನ್ನು ಸೋಲಿಸಿದ ಬಗೆ

ರಾಷ್ಟ್ರೀಯವು ಪ್ರಾದೇಶಿಕವನ್ನು ಸೋಲಿಸಿದ ಬಗೆ

ಮಹಾರಾಷ್ಟ್ರದ ಸ್ಥಳೀಯಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯು ವಿಜಯಿಯಾಗಿರುವುದು ಪ್ರಾದೇಶಿಕ ಪಕ್ಷಗಳ ಬಲಹೀನತೆಯನ್ನು ಬಯಲುಗೊಳಿಸುತ್ತದೆ. ಮಹಾರಾಷ್ಟ್ರದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅನಿರೀಕ್ಷಿತ ಮತ್ತು ಅಸಾಧಾರಣ ಸಾಧನೆಯು, ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಹಿಡಿತ ಸಾಧಿಸಬೇಕೆಂದು ಬಯಸುವ ಇತರ ರಾಷ್ಟ್ರೀಯ ಪಕ್ಷಗಳಿಗೆ ಹಲವಾರು ಗುಣಪಾಠಗಳನ್ನು ಕಲಿಸಿಕೊಡುತ್ತದೆ. ಬಿಜೆಪಿಯು ಶಿವಸೇನಾದೊಂದಿಗಿನ ಮೈತ್ರಿಯ ಬೆನ್ನೇರಿಯೇ ಮಹಾರಾಷ್ಟ್ರದಲ್ಲಿ ಉದ್ದಗಲಕ್ಕೂ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಆ ಮೈತ್ರಿಯನ್ನು ಕಡಿದುಕೊಂಡರೂ ಶಿವಸೇನಾಗಿಂತ ಹೆಚ್ಚಿನ ಸಾಧನೆಯನ್ನೇ […]

ಹೀಗೇಕೆ ಯೋಚಿಸಬಾರದು ? ಹಿಂದಿರುಗಿ ನೋಡಿದಾಗ !

ಹೀಗೇಕೆ ಯೋಚಿಸಬಾರದು ? ಹಿಂದಿರುಗಿ ನೋಡಿದಾಗ !

70 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದ ಪುಟಗಳನ್ನು ಅವಲೋಕಿಸುವಾಗ ಎರಡು ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಬ್ರಿಟೀಷ್ ವಸಾಹತುಶಾಹಿಯಿಂದ ಬಿಡುಗಡೆ ಹೊಂದಿದ ನಂತರ ತನ್ನದೇ ಆದ ಪ್ರಜಾತಾಂತ್ರಿಕ ಗಣತಂತ್ರ ವ್ಯವಸ್ಥೆಯನ್ನು ರೂಪಿಸಿಕೊಂಡ ಭಾರತೀಯ ಪ್ರಭುತ್ವದ ಅಂತರಾಳ ಮತ್ತು ಆಂತರ್ಯದ ಧೋರಣೆಯನ್ನು ಗ್ರಹಿಸಲು ಇದು ಮುಖ್ಯವಾಗುತ್ತದೆ. ಮೊದಲನೆಯ ಅಂಶವೆಂದರೆ ಸ್ವತಂತ್ರ ಭಾರತದ ಪ್ರಭುತ್ವದ ಮೂಲ ಲಕ್ಷಣಗಳು ಸಾರ್ವಭೌಮ ಜನತೆಗೆ ಪ್ರಪ್ರಥಮ ಬಾರಿಗೆ ಪರಿಚಯವಾದದ್ದು 1948ರಲ್ಲಿ, ಶ್ರೀಕಾಕುಳಂ ದಂಗೆಯ ಸಂದರ್ಭದಲ್ಲಿ. ಪ್ರತಿರೋಧದ ದನಿಗಳನ್ನು ಅಡಗಿಸಲು, ಕ್ರಾಂತಿಯ ಕಿಡಿಗಳನ್ನು ದಮನಿಸಲು ಸ್ವತಂತ್ರ ಭಾರತದ […]

ಬರ ಎಂಬ ಎರಡಲಗಿನ ಕತ್ತಿ

ಬರ ಎಂಬ ಎರಡಲಗಿನ ಕತ್ತಿ

ಅಂದೊಮ್ಮೆ ಮಕ್ಕಳ ಮಾರಿ ರೊಟ್ಟಿ ತಿಂದಿದ್ದರಂತೆ. ಬಿದರಕ್ಕಿ ಗುಡಿಸಿ ಅನ್ನ ಮಾಡಿ ಉಂಡಿದ್ದರಂತೆ. ಕತ್ತಾಳೆ ಗಡ್ಡೆ ಬೇಯಿಸಿ ತಿಂದಿದ್ದರಂತೆ. ಒಂದು ಗುದ್ದಿನೊಳಗೆ ನಾಲ್ಕಾರು ಹೆಣಗಳನ್ನು ಹಾಕಿ ಮುಚ್ಚುತ್ತಿದ್ದರಂತೆ. ಹೀಗೆ ನನ್ನಜ್ಜ ಹೇಳುತ್ತಿದ್ದುದು ನೆನಪು. 1870ರ ಸಮಯ ದಕ್ಷಿಣ ಭಾರತದ ಬರದಲ್ಲಿ 5 ಮಿಲಿಯನ್ ಜನ ಸತ್ತ ಹಾಗೂ ಚೈನಾದಲ್ಲಿ 9 ಮಿಲಿಯನ್ ಜನ ಸತ್ತ ಕಾಲ ಅದೇ ಇರಬೇಕು. ಇದು ಆಗಾಗ್ಗೆ ಬರುತ್ತಿದ್ದ ಪ್ರಕೃತಿ ನಿರ್ಮಿತ ಬರದ ಚಕ್ರ. ಅಂದು ರೈತನ ಸಂತೆಗಳಲ್ಲಿ ಉಲ್ಲಾಸದ ಕೊಡುಕೊಳೆಯಿತ್ತು. ಪೇಟೆಯ […]

ದೇಶಭಕ್ತಿಯ ಉನ್ಮಾದ ಮತ್ತು ಶರಣಾಗತಿಯ ಧೋರಣೆ

ದೇಶಭಕ್ತಿಯ ಉನ್ಮಾದ ಮತ್ತು ಶರಣಾಗತಿಯ ಧೋರಣೆ

ಭಕ್ತಿ ಎಂದರೇನು ? ಈ ಪ್ರಶ್ನೆ ಸಾಮಾನ್ಯ ಸಂದರ್ಭಗಳಲ್ಲಿ ಕ್ಲೀಷೆ ಎನಿಸಬಹುದು ಅಥವಾ ಅಪ್ರಬುದ್ಧ ಎನಿಸಬಹುದು. ಆದರೆ ಭಾರತದ ರಾಜಕಾರಣದಲ್ಲಿ, ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ಸಂಭವಿಸುತ್ತಿರುವ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಈ ಅಭಿವ್ಯಕ್ತಿಯನ್ನು ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ಬದ್ಧತೆ ಮತ್ತು ಶಿಸ್ತು ಮುಂತಾದ ಅಭಿವ್ಯಕ್ತಿಗಳು ಮೇಲು-ಕೀಳು ಅಥವಾ ಉಚ್ಚ-ನೀಚ ಚೌಕಟ್ಟಿನಲ್ಲೇ ವ್ಯಕ್ತವಾಗುವುದನ್ನು ಇಲ್ಲಿ ಅಲ್ಲಗಳೆಯಲಾಗುವುದಿಲ್ಲ. ಈ ನಾಲ್ಕೂ ಅಭಿವ್ಯಕ್ತಿಗಳು ಒಂದು ಸಾರ್ವತ್ರಿಕ ವಿದ್ಯಮಾನದ ಸ್ವರೂಪ ಪಡೆದಾಗ ಶ್ರೀಸಾಮಾನ್ಯ ಯಾವುದೋ […]

ಅನಾಣ್ಯೀಕರಣ ಮತ್ತು ರಾಜಕೀಯ ಲಾಭ

ಅನಾಣ್ಯೀಕರಣ ಮತ್ತು ರಾಜಕೀಯ ಲಾಭ

ದಿನಾಂಕ 9-11-2016ರ ಬುದವಾರ ತಡಸಂಜೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಅನಾಣ್ಯೀಕರಣದ(ಡಿಮೊನೈಟೇಷನ್) ನಿರ್ದಾರವನ್ನು ಪ್ರಕಟಿಸಿದ ಕೂಡಲೆ ಇಡೀ ರಾಷ್ಟ್ರ ಒಮ್ಮೆಲೇ ಬೆಚ್ಚಿ ಬಿದ್ದಿತ್ತು. ಊಟ ಮಾಡುತ್ತ ಅಥವಾ ಊಟ ಮುಗಿಸಿ ವಾಹಿನಿಗಳಲ್ಲಿ ಸುದ್ದಿ ನೋಡುತ್ತ(ಕೇಳತ್ತ) ಕೂತಿದ್ದ ಜನತೆ ಆತಂಕಕ್ಕೀಡಾಗಿದ್ದು ಸುಳ್ಳಲ್ಲ. ಅನಾಣ್ಯೀಕರಣದ ಬಗ್ಗೆ ಹೆಚ್ಚೆನು ಮಾಹಿತಿ ಇರದ ಜನತೆಗೆ ಇದರ ಹಿಂದಿನ ಉದ್ದೇಶ ಮತ್ತು ಸಾಧಕಬಾದಕಗಳನ್ನು ಅರ್ಥಮಾಡಿಕೊಳ್ಳಲು ಸುಮಾರು ಮೂರು ದಿನ ಬೇಕಾಗಿತ್ತು.  ಸುದ್ದಿವಾಹಿನಿಗಳನ್ನು ನೋಡಿದವರು, ವೃತ್ತಪತ್ರಿಕೆಗಳನ್ನು ಓದಿದವರು   ಒಂದಷ್ಟು ಅರ್ಥಮಾಡಿಕೊಂಡರೂ, ಬಹಳಷ್ಟು ಜನ ಅವಿದ್ಯಾವಂತರಿಗೆ ಈ […]

ಸೆಕ್ಯುಲರಿಸಂ ಮತ್ತು ಹಿಂದುತ್ವ: ಸುಪ್ರೀಂಕೋರ್ಟ ತೀರ್ಪು

ಸೆಕ್ಯುಲರಿಸಂ ಮತ್ತು ಹಿಂದುತ್ವ: ಸುಪ್ರೀಂಕೋರ್ಟ ತೀರ್ಪು

ಭಯಾನಕ ಊಹೆಗಳಿಗಿಂತ ವರ್ತಮಾನದ ಭಯಗಳು ಕಡಿಮೆ ಅಪಾಯಕಾರಿ -ಶೇಕ್ಸ್‍ಪಿಯರ್ (ಮ್ಯಾಕ್‍ಬೆತ್) ಶಿವಸೇನೆ ನಾಯಕ ಬಾಳಾ ಠಾಕ್ರೆ, ರಮೇಶ್ ಪ್ರಭೂ ಮತ್ತು ಆಗಿನ ಮಹರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಜೋಶಿ ಅವರನ್ನು ಒಳಗೊಂಡಂತೆ ಶಿವಸೇನ ಮತ್ತು ಬಿಜೆಪಿ ಪಕ್ಷಕ್ಕೆ ಸೇರಿದ ವಿವಿಧ ಸದಸ್ಯರು 1987ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದುತ್ವ ಮತ್ತು ಹಿಂದುಯಿಸಂನ ಮೇಲೆ ಮತ ಯಾಚಿಸಿದ್ದರು ಎನ್ನುವ ಆರೋಪದ ವಿಚಾರವಾಗಿ ಬಾಂಬೆ ಹೈಕೋರ್ಟ ವಿಚಾರಣೆ ನಡೆಸುತ್ತಿತ್ತು. ಇವರೆಲ್ಲರ ಮೇಲೆ ಜನ ಪ್ರತಿನಿಧಿಗಳ ಆಕ್ಟ್ 1951ರ ಸೆಕ್ಷನ್ 123 ಅಡಿಯಲ್ಲಿ ಇದನ್ನು […]

ಕನ್ನಡಿ-4: ಕರ್ನಾಟಕಕ್ಕೆ ಕಂಟಕವಾಗಿರುವ ಐಎಎಸ್ ಪಾಳೇಗಾರರು

ಕನ್ನಡಿ-4: ಕರ್ನಾಟಕಕ್ಕೆ  ಕಂಟಕವಾಗಿರುವ ಐಎಎಸ್ ಪಾಳೇಗಾರರು

ಇತ್ತೀಚಿಗೆ ಭಾರತಕ್ಕೆ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಭೇಟಿ ಕೊಟ್ಟಿದ್ದರು. ದೆಹಲಿಯಲ್ಲಿ ಮಳೆಯ ಪ್ರವಾಹದ ಬಗ್ಗೆ ಮಾತನಾಡುತ್ತಾ ಭಾರತದಲ್ಲಿ ಅಭಿವೃದ್ಧಿಗೆ ಅಧಿಕಾರಿಗಳೆ ಅಡ್ಡಗಾಲು ಎಂದರು. ಅವರು ಹೇಳಿದ್ದು ಕಾರ್ಪೋರೇಟ್ ಅಭಿವೃದ್ಧಿಯೋ ಅಥವಾ ಸಾಮಾನ್ಯರ ಅಭಿವೃದ್ಧಿಯೋ ಎಂಬುದರ ಬಗ್ಗೆ ವಿವರಿಸಿಲ್ಲ. ಬ್ರಿಟಿಷರ ವ¸ಹತುಶಾಹಿ ಪಳಯುಳಿಕೆಯಂತಿರುವ ಆಡಳಿತಶಾಹಿ ಎಂದೆಂದಿಗೂ ಉಳ್ಳವರ ಬಾಲ ಹಿಡಿದಿದ್ದೇ ಹೆಚ್ಚು. ಆಡಳಿತಶಾಹಿಯ ಮುಖ್ಯ ಸೇವೆ ಭಾರತೀಯ ಆಡಳಿತ ಸೇವೆ. ಉಳ್ಳವರ ಸೇವೆ ಮಾಡುವ ಇವರಿಗೆ ‘ಬಾಬು’ಗಳು ಎಂಬ ಅಡ್ಡ ಹೆಸರು ಉಂಟು. ಇಂಗ್ಲಿಷಿನಲ್ಲಿ ಐ.ಎ.ಎಸ್. […]

ದೊಡ್ಡೇಗೌಡರ ಛೇರ್ಮನ್ ಮೂಗು

ದೊಡ್ಡೇಗೌಡರ ಛೇರ್ಮನ್ ಮೂಗು

ನಾನು : ಎಲಾ ಗೋಪಾಲ ಈಗ ಯಾರೋ ಊರಲ್ಲಿ ಮೆಂಬರು? ಎಲೆಕ್ಷನ್ನು ಮತ್ತೆ ಬಂತಲ್ಲಾ? ಅಂದೆ. ಅವನು : ಅದ್ಯಾಕಣ್ಣ ಹಂಗಂತೀಯಾ! ನಮ್ಮ ಜಡ್ಡಣ್ಣನ ಮನೆ ದೊಡ್ಡಣ್ಣ ಈಗ ಛೇರ್ಮೆನಲ್ಲವೆ. ನಮ್ಮೂರು ಅಂದ್ರೆ ಏನಂತ ತಿಳಿದಿದಿಯಣ್ಣಾ! ಬ್ಯಾರೆ ಊರರಿಗೆ ಬುಡಕಾದೀತೆ! ಅಂದ. ನಾನು : ಅಲ್ಲಾ ಕಣೋ ಅವನಿಗೇನು ತಿಳಿತದೆ ಅಂತಾ ಮಾಡಿದಿರೋ! ಪಾಪ ಸುಮ್ಮನಿದ್ದೊನ ಹಳ್ಳಕ್ಕೆ ಕೆಡವಿದರೇನಲೋ!. ಅವನು : ಅಯ್ ಪಂಚಾಯ್ತಿ ಸೇರಿದಾಗ ನೋಡಬೇಕಾಗಿತ್ತು. ಅವನ ಪರವೇ ಅರ್ಧ ಊರಿಗೂ ಜಾಸ್ತಿ ಇತ್ತು ಅನ್ತೀನಿ. […]

ಸೇನೆ ಪ್ರಶ್ನಾತೀತವಾದರೆ ಪ್ರಜಾತಂತ್ರ ಉಳಿಯದು

ಸೇನೆ ಪ್ರಶ್ನಾತೀತವಾದರೆ ಪ್ರಜಾತಂತ್ರ ಉಳಿಯದು

ಒಂದು ದೇಶದ ಆಡಳಿತ ವ್ಯವಸ್ಥೆಗೆ ಹಲವಾರು ಭೂಮಿಕೆಗಳಿರುತ್ತವೆ. ಹಲವಾರು ಆಯಾಮಗಳಿರುತ್ತವೆ. ಹಲವಾರು ಮಜಲುಗಳಿರುತ್ತವೆ. ಆಡಳಿತ ವ್ಯವಸ್ಥೆಯ ಆಗುಹೋಗುಗಳನ್ನು ನಿರ್ವಹಿಸಲು, ಸಮಾಜದ ಓರೆ ಕೋರೆಗಳನ್ನು ತಿದ್ದಲು, ಪ್ರಜೆಗಳ ಲೋಪಗಳನ್ನು ಸರಿಪಡಿಸಲು ಪ್ರತಿಯೊಂದು ಕ್ಷೇತ್ರದಲ್ಲೂ ಅಧಿಕೃತ ವಾರಸುದಾರರು, ಪ್ರತಿನಿಧಿಗಳು ಇರುತ್ತಾರೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದು ಸಮಾನ ನಾಗರಿಕ ಪ್ರಜ್ಞೆ ಇದ್ದೇ ಇರುತ್ತದೆ. “ ಆಡಳಿತ ವ್ಯವಸ್ಥೆ ” ಎಂಬ ಪರಿಕಲ್ಪನೆಯೆ ಇಂತಹ ಹಲವು ಆಯಾಮಗಳ ಒಂದು ಸಂಗಮ ಎಂದು ಇತಿಹಾಸವೇ ನಿರೂಪಿಸಿದೆ. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ […]

ಪೊಲೀಸ್ ದೌರ್ಜನ್ಯ ಏಕೆ ಹೀಗೆ ?

ಪೊಲೀಸ್ ದೌರ್ಜನ್ಯ ಏಕೆ ಹೀಗೆ ?

ಸೆಕ್ಯುಲರಿಸಂ ತತ್ವಗಳ ನಿಜವಾದ ಅರ್ಥವನ್ನು ಗ್ರಹಿಸದೆಯೇ ಸಾಂವಿಧಾನಿಕವಾಗಿ ಸೆಕ್ಯುಲರ್ ರಾಷ್ಟ್ರ ಎನಿಸಿಕೊಂಡಿರುವ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷದ ಸೆಕ್ಯುಲರಿಸಂ ಮತಗಟ್ಟೆಗಳಲ್ಲಿ ಬಂಧಿತವಾಗಿದ್ದರೆ ಬಿಜೆಪಿಯ ಸೆಕ್ಯುಲರಿಸಂ ಹಿಂದುತ್ವದ ಕೋಟೆಯಲ್ಲಿ ಸುಭದ್ರವಾಗಿದೆ. ಈ ದೇಶದಲ್ಲಿ ಸೆಕ್ಯುಲರ್ ತತ್ಚಗಳನ್ನು ಅಕ್ಷರಶಃ ಪಾಲಿಸುವ ಆಡಳಿತ ವ್ಯವಸ್ಥೆಯ ಅಂಗ ಎಂದರೆ ಅದು ಪೊಲೀಸ್ ಮತ್ತು ಸೇನೆ ಮಾತ್ರವೇ. “ ಕಾನೂನು ಪಾಲನೆ ಮತ್ತು ಕಾನೂನು ಸುವ್ಯವಸ್ಥೆಯ ರಕ್ಷಣೆ ” ಇದು ಸಮಸ್ತ ಭಾರತೀಯ ಪ್ರಜೆಗಳೂ ಬಯಸುವ ಒಂದು ಸ್ಥಿತಿ. ಈ ಸುಸ್ಥಿತಿಯನ್ನು ಕಾಪಾಡುವ […]