ನ್ಯಾಯಾಂಗ

ನ್ಯಾಯಾಂಗ

ಅಪರಾಧ ಮತ್ತು ಶಿಕ್ಷೆ

ಅಪರಾಧ ಮತ್ತು ಶಿಕ್ಷೆ

ಮರಣದಂಡನೆಯನ್ನು ನೀಡುವಾಗ ನ್ಯಾಯಾಲಯಗಳು ಸ್ಥಿರ ಮತ್ತು ಸಮಾನ ಮಾನದಂಡಗಳನ್ನು ಅಳವಡಿಸಬೇಕಿರುವುದು ಅತ್ಯವಶ್ಯಕ ದೇಶದಲ್ಲಿ ನಡೆದ ವಿವಿಧ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ಈ ತಿಂಗಳಲ್ಲಿ ನೀಡಿರುವ ಮೂರು ಭಿನ್ನ ಭಿನ್ನ ಆದೇಶಗಳು ಹೇಗೆ ಮರಣದಂಡನೆಯ ವಿಷಯದಲ್ಲಿ ನ್ಯಾಯಾಲಯದ ಧೋರಣೆಗಳು ಏಕ ಸಮಾನವಾದ ಮತ್ತು ಸ್ಥಿರವಾದ ಮಾನದಂಡಗಳನ್ನು ಅನುಸರಿಸುತ್ತಿಲ್ಲವೆಂಬುದನ್ನು ಸಾಬೀತುಪಡಿಸುತ್ತದೆ. ಮರಣದಂಡನೆಯನ್ನು ವಿಧಿಸಲು ಸೂಕ್ತವಾದ ಅಪರೂಪದಲ್ಲಿ ಅಪರೂಪದ ಪ್ರಕರಣ ಯಾವುದೆಂಬುದರ ಬಗ್ಗೆ ನ್ಯಾಯಾಲಯಗಳು ಹೇಗೆ ನಿರ್ಧಾರಕ್ಕೆ ಬರುತ್ತವೆಂಬುದು ಅಸ್ಪಷ್ಟವಾಗಿಯೇ ಇದೆ. ಈ ಮೂರು ಪ್ರಕರಣಗಳಲ್ಲಿ ಅತ್ಯಂತ ದೀರ್ಘ […]

ವಿಕೃತ ಭಾವನೆಗಳನ್ನು ಕೊಲ್ಲಿ ದೇಹಗಳನ್ನು ಬದುಕಲು ಬಿಡಿ

ವಿಕೃತ ಭಾವನೆಗಳನ್ನು ಕೊಲ್ಲಿ ದೇಹಗಳನ್ನು ಬದುಕಲು ಬಿಡಿ

ನಿರ್ಭಯ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಆದರೆ ಅಂತಿಮ ನ್ಯಾಯ ಇನ್ನೂ ಕಾಣಬೇಕಿದೆ. ಗಲ್ಲು ಶಿಕ್ಷೆಗೊಳಗಾಗಿರುವ ನಾಲ್ವರು ಅಪರಾಧಿಗಳು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುತ್ತಾರೆ. ಶೀಘ್ರದಲ್ಲೇ ನೂತನ ರಾಷ್ಟ್ರಪತಿ ಆಯ್ಕೆಯಾಗಲಿದೆ. ಈ ಪ್ರಕ್ರಿಯೆಯಿಂದ ಉಂಟಾಗುವ ವಿಳಂಬ ಶಿಕ್ಷೆಗೊಳಗಾಗಿರುವ ಅಪರಾಧಿಗಳಿಗೆ ಉಸಿರಾಡಲು ಮತ್ತಷ್ಟು ಅವಕಾಶ ಕಲ್ಪಿಸುತ್ತದೆ. ಬಹುಶಃ ನಿರ್ಭಯ ಪ್ರಕರಣ ದೇಶದ ಪ್ರಜ್ಞಾವಂತ ನಾಗರಿಕರಲ್ಲಿ ಕೊಂಚ ಮಟ್ಟಿಗಾದರೂ ಸಂವೇದನೆಯ ತುಣುಕುಗಳನ್ನು ಕಾಣುವ ಅವಕಾಶ ಕಲ್ಪಿಸಿದೆ ಎನ್ನಬಹುದು. ಆದರೆ ಈ ಸಂವೇದನೆ ವ್ಯಕ್ತಿಗತ ನೆಲೆಯಲ್ಲಿ ವ್ಯಕ್ತವಾಗುತ್ತಿರುವುದೇ ಹೊರತು ಸಾಮುದಾಯಿಕ […]

ದೇಶಭಕ್ತಿಯ ಉನ್ಮಾದ ಮತ್ತು ಶರಣಾಗತಿಯ ಧೋರಣೆ

ದೇಶಭಕ್ತಿಯ ಉನ್ಮಾದ ಮತ್ತು ಶರಣಾಗತಿಯ ಧೋರಣೆ

ಭಕ್ತಿ ಎಂದರೇನು ? ಈ ಪ್ರಶ್ನೆ ಸಾಮಾನ್ಯ ಸಂದರ್ಭಗಳಲ್ಲಿ ಕ್ಲೀಷೆ ಎನಿಸಬಹುದು ಅಥವಾ ಅಪ್ರಬುದ್ಧ ಎನಿಸಬಹುದು. ಆದರೆ ಭಾರತದ ರಾಜಕಾರಣದಲ್ಲಿ, ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ಸಂಭವಿಸುತ್ತಿರುವ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಈ ಅಭಿವ್ಯಕ್ತಿಯನ್ನು ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ಬದ್ಧತೆ ಮತ್ತು ಶಿಸ್ತು ಮುಂತಾದ ಅಭಿವ್ಯಕ್ತಿಗಳು ಮೇಲು-ಕೀಳು ಅಥವಾ ಉಚ್ಚ-ನೀಚ ಚೌಕಟ್ಟಿನಲ್ಲೇ ವ್ಯಕ್ತವಾಗುವುದನ್ನು ಇಲ್ಲಿ ಅಲ್ಲಗಳೆಯಲಾಗುವುದಿಲ್ಲ. ಈ ನಾಲ್ಕೂ ಅಭಿವ್ಯಕ್ತಿಗಳು ಒಂದು ಸಾರ್ವತ್ರಿಕ ವಿದ್ಯಮಾನದ ಸ್ವರೂಪ ಪಡೆದಾಗ ಶ್ರೀಸಾಮಾನ್ಯ ಯಾವುದೋ […]

ಸೆಕ್ಯುಲರಿಸಂ ಮತ್ತು ಹಿಂದುತ್ವ: ಸುಪ್ರೀಂಕೋರ್ಟ ತೀರ್ಪು

ಸೆಕ್ಯುಲರಿಸಂ ಮತ್ತು ಹಿಂದುತ್ವ: ಸುಪ್ರೀಂಕೋರ್ಟ ತೀರ್ಪು

ಭಯಾನಕ ಊಹೆಗಳಿಗಿಂತ ವರ್ತಮಾನದ ಭಯಗಳು ಕಡಿಮೆ ಅಪಾಯಕಾರಿ -ಶೇಕ್ಸ್‍ಪಿಯರ್ (ಮ್ಯಾಕ್‍ಬೆತ್) ಶಿವಸೇನೆ ನಾಯಕ ಬಾಳಾ ಠಾಕ್ರೆ, ರಮೇಶ್ ಪ್ರಭೂ ಮತ್ತು ಆಗಿನ ಮಹರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಜೋಶಿ ಅವರನ್ನು ಒಳಗೊಂಡಂತೆ ಶಿವಸೇನ ಮತ್ತು ಬಿಜೆಪಿ ಪಕ್ಷಕ್ಕೆ ಸೇರಿದ ವಿವಿಧ ಸದಸ್ಯರು 1987ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದುತ್ವ ಮತ್ತು ಹಿಂದುಯಿಸಂನ ಮೇಲೆ ಮತ ಯಾಚಿಸಿದ್ದರು ಎನ್ನುವ ಆರೋಪದ ವಿಚಾರವಾಗಿ ಬಾಂಬೆ ಹೈಕೋರ್ಟ ವಿಚಾರಣೆ ನಡೆಸುತ್ತಿತ್ತು. ಇವರೆಲ್ಲರ ಮೇಲೆ ಜನ ಪ್ರತಿನಿಧಿಗಳ ಆಕ್ಟ್ 1951ರ ಸೆಕ್ಷನ್ 123 ಅಡಿಯಲ್ಲಿ ಇದನ್ನು […]

ನಿರ್ಭಯಾಗೆ ನ್ಯಾಯ ಬೇಕಿದೆ ಶಿಕ್ಷೆಯಲ್ಲ

ನಿರ್ಭಯಾಗೆ ನ್ಯಾಯ ಬೇಕಿದೆ ಶಿಕ್ಷೆಯಲ್ಲ

2012ರ ಡಿಸೆಂಬರ್ 16ರಂದು ವಿಕೃತ ಕಾಮಿಗಳ ದುಷ್ಕøತ್ಯಕ್ಕೆ ಬಲಿಯಾಗಿ ತನ್ನ ಶೀಲವನ್ನೂ ಕಳೆದುಕೊಂಡು ಪ್ರಾಣ ತೆತ್ತ ನಿರ್ಭಯಾ ಎಂಬ ಅಮಾಯಕ ಯುವತಿಗೆ ಮೂರು ವರ್ಷಗಳ ನಂತರವು ಪೂರ್ನ ನ್ಯಾಯ ಒದಗಿಸಲು ಭಾರತದ ಆಡಳಿತ ವ್ಯವಸ್ಥೆ ವಿಫಲವಾಗಿರುವುದು ಪ್ರಜಾತಂತ್ರದ ದುರಂತ ಎನ್ನಲು ಅಡ್ಡಿಯಿಲ್ಲ. ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಆರು ದುಷ್ರ್ಕರ್ಮಿಗಳ ಪೈಕಿ ಓರ್ವ ಮೃತಪಟ್ಟಿದ್ದು ಉಳಿದ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ದೆಹಲಿ ಹೈಕೋರ್ಟ್ ಸಹ ಈ ತೀರ್ಪನ್ನು ಎತ್ತಿಹಿಡಿದಿದೆ. ಆದರೆ ಸುಪ್ರೀಂ ಕೋರ್ಟ್ ಮರುವಿಚಾರಣೆಯ ಸಂದರ್ಭದಲ್ಲಿ […]

ಬೀಗ ಹಾಕುವ ಮುನ್ನ…….

ಬೀಗ ಹಾಕುವ ಮುನ್ನ…….

ಉಳಿದಿದ್ದು ಒಂದೇ ಹೆಜ್ಜೆ…. ನ್ಯಾಯಮೂರ್ತಿ ಭಾಸ್ಕರ್ ರಾವ್ ಜೊತೆಯಲ್ಲಿ, ಉಪ ಲೋಕಾಯುಕ್ತ ಸುಭಾಶ್ ಆಡಿಯವರನ್ನೂ ಪದಚ್ಯುತಗೊಳಿಸಿ, ಲೋಕಾಯುಕ್ತ ಎಂಬ ಸಂಸ್ಥೆಗೆ ಬೀಗ ಹಾಕುವುದು. `ಮೂರ್ಖ’ ಮಹಾಜನರಿಗೇನು ಹೇಳೋದು ಅಂತಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತವಲಯ ತಯಾರಾಗಿಯೇ ಇತ್ತು. ಮಿತಿಮೀರಿದ ಭ್ರಷ್ಟಾಚಾರದಿಂದ ಲೋಕಾಯುಕ್ತ ಮುಚ್ಚಲೇ ಬೇಕಾದ ಪರಿಸ್ಥಿತಿ ಬಂದಿದೆ. ಹ್ಯಾಗೂ ಕೇಂದ್ರ ಸರ್ಕಾರ ಲೋಕಪಾಲ ತಂದಮೇಲೆ, ಇಲ್ಲಿಯೂ ಲೋಕಪಾಲ್ ಸ್ಥಾಪಿಸಲಾಗುವುದು, ಅಂತ. ಹ್ಯಾಗೂ `public memory is short’…. ಸ್ವಲ್ಪ ದಿನಕ್ಕೆ ಜನ ಮರೆತುಹೋಗುತ್ತಾರೆ ಅನ್ನೋದು ನಮ್ಮ ಘನ ಸರ್ಕಾರದ […]

ಕಂಟೆಪ್ಟ್ ಆಫ್ ಕೋರ್ಟ್? ಅಥವ ಕಂಟೆಪ್ಟ್ ಆಫ್ ಕರಪ್ಷನ್?

ಕಂಟೆಪ್ಟ್ ಆಫ್ ಕೋರ್ಟ್? ಅಥವ ಕಂಟೆಪ್ಟ್ ಆಫ್ ಕರಪ್ಷನ್?

ಇದು ನ್ಯಾಯಾಂಗಕ್ಕೆ ಸಂಬಂಧಿಸಿದ ವಿಚಾರವಾದ್ದರಿಂದ ಮೊದಲೇ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಈ ಲೇಖನದಲ್ಲಿ ಸತ್ಯವನ್ನಷ್ಟೇ ಹೇಳಲಾಗಿದೆ ಮತ್ತು ಸತ್ಯವನ್ನಲ್ಲದೇ ಬೇರೇನನ್ನೂ ಹೇಳಲಾಗಿಲ್ಲ. ನಮ್ಮ ಘನ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ಮತ್ತು ನ್ಯಾಯಾಂಗದ ಘನತೆಯನ್ನು ಕಾಪಾಡುವುದಷ್ಟೆ ಈ ಲೇಖನದ ಉದ್ದೇಶವೇ ಹೊರತು ಯಾರನ್ನಾದರೂ ನಿಂದಿಸುವ ಉದ್ದೇಶವನ್ನು ಹೊಂದಿಲ್ಲ. ಈ ಸ್ಪಷ್ಟೀಕರಣದ ನಂತರ ಈಗ ಅಸಲಿ ವಿಚಾರಕ್ಕೆ ಬರೋಣ. ನಮ್ಮ ಪ್ರಜಾತಂತ್ರ ವ್ಯವಸ್ಥೆ ಮುಖ್ಯವಾಗಿ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಆಧಾರ ಸ್ಥಂಬಗಳ ಮೇಲೆ ನಿಂತಿದೆಯೆಂಬುದು ಶಾಲಾ […]