ಕಾರ್ಯಾಂಗ

ಕಾರ್ಯಾಂಗ

ಭೂಮಿ ಹೆಚ್ಚಿಸಿದ ಭೂ ಮಾಪಕ

ಭೂಮಿ ಹೆಚ್ಚಿಸಿದ ಭೂ ಮಾಪಕ

ಗ್ರಾಮೀಣ ಕೃಷಿಕ ಕುಟುಂಬದಲ್ಲಿ ಜನಿಸಿದ ನಮಗೆ ಕೃಷಿ ಜೀವನಾಧಾರವಾಗಿತ್ತು. ಜೀವನ ಕ್ರಮ ಆಗಿನ್ನು ಕೃಷಿ ಮಾರುಕಟ್ಟೆ ವ್ಯಾಪಾರೀಕರಣದ ವರ್ತುಲದೊಳಗೆ ಸಿಲುಕಿರಲಿಲ್ಲ. ಅವಿಭಕ್ತಕುಟುಂಬದ ಬಾಂಧವ್ಯಗಟ್ಟಿಯಿತ್ತು. ಶ್ರೀಮಂತಿಕೆ ಎಂಬುದು ಭೂಮಿ ಒಡೆತನದಲ್ಲಿತ್ತೇ ಹೊರತು, ಹಣಕಾಸಿನ ವಿಚಾರದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಸಮಾನರೆ. ಸಹಕಾರ ಮತ್ತು ಸಮಾಜವಾದದ ಅಲಿಖಿತ ವ್ಯವಸ್ಥೆಯಂತೆ ಬದುಕು. ವಿದ್ಯೆಯ ಮಹತ್ವಕ್ಕಿನ್ನು ಅಷ್ಟು ಮಾನ್ಯತೆಯಿರಲಿಲ್ಲ. ಊರಿಗೊಬ್ಬ ಮಾತ್ರ ಸ್ನಾತಕೋತ್ತರ ಪದವೀಧರ ಇದ್ದನಷ್ಟೆ. ಸರ್ಕಾರಿ ಕಛೇರಿಯ ಯಾವುದೇ ಕೆಲಸಕ್ಕೂ ಅವನೇ ಮಧ್ಯವರ್ತಿ ಮತ್ತು ಸೂತ್ರಧಾರ. ಹಳ್ಳಿ ಯಜಮಾನಿಕೆ ಎಂಬುದು ವರ್ಣ […]

ಸರ್ವೇ ಮತ್ತು ಕಂದಾಯ ವ್ಯವಸ್ತೆಯ ಅದ್ವಾನಗಳು

ಸರ್ವೇ ಮತ್ತು  ಕಂದಾಯ ವ್ಯವಸ್ತೆಯ ಅದ್ವಾನಗಳು

ಭಾರತದ ಇತಿಹಾಸದಲ್ಲಿ ದೊಡ್ಡ ಜಿಗಿತವೊಂದು ಸಂಭವಿಸಿದ್ದು 19 ನೇ ಶತಮಾನದ ಮಧ್ಯಭಾಗದಲ್ಲಿ. ವಸಾಹತುಶಾಹಿ ವ್ಯವಸ್ಥೆಯು ಏಕಕಾಲದಲ್ಲಿ ಇಬ್ಬಾಯ ಖಡ್ಗದಂತೆ ಕಾರ್ಯನಿರ್ವಹಿಸಿತು. ಒಂದು, ಆಡಳಿತ ವ್ಯವಸ್ಥೆಯ ಸ್ಥಾಪನೆ. ಮತ್ತೊಂದು, ಸಂಪತ್ತಿನ ವ್ಯವಸ್ಥಿತ ಲೂಟಿ. 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗುವ ಕೇವಲ ಮೂರು ವರ್ಷ ಮೊದಲು ಸಿವಿಲ್ ಕೋರ್ಟುಗಳು ಪ್ರಾರಂಭವಾದವು. ಬ್ರಿಟಿಷ್ ಪ್ರಭುತ್ವದ ಆಡಳಿತಾತ್ಮಕ ಸೌಲಭ್ಯಕ್ಕೆಂದು ಆರಂಭಗೊಂಡ ಈ ಪ್ರಕ್ರಿಯೆ ಊಳಿಗಮಾನ್ಯ ಸಮಾಜವೊಂದು ಸಾವಿರಾರು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬಂದಿದ್ದ ವ್ಯವಸ್ಥೆಯನ್ನು ಛಿದ್ರಗೊಳಿಸಿತು. ವಸಾಹತುವಾದವು ಏಕಕಾಲದಲ್ಲಿ ಭಾರತದ […]

ಸಾಧನೆಯ ಹಪಾಹಪಿ ಜಡ ವ್ಯವಸ್ಥೆಯ ನಿಷ್ಕ್ರಿಯತೆ

ಸಾಧನೆಯ ಹಪಾಹಪಿ ಜಡ ವ್ಯವಸ್ಥೆಯ ನಿಷ್ಕ್ರಿಯತೆ

ಪಕ್ಷ ಯಾವುದೇ ಇರಲಿ, ಸರ್ಕಾರದ ನೇತೃತ್ವ ಯಾವುದೇ ಪಕ್ಷ ವಹಿಸಲಿ ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯಲ್ಲಿ ದೇಶದ ಸಾರ್ವಭೌಮ ಪ್ರಜೆಗಳು ಕಾಣುತ್ತಲೇ ಬಂದಿರುವ ಒಂದು ಸಾಮಾನ್ಯ ವಿದ್ಯಮಾನ ಎಂದರೆ ಸಾರ್ವಜನಿಕ ಕಾಮಗಾರಿಗಳ ಕಳಪೆ ಗುಣಮಟ್ಟ, ಭ್ರಷ್ಟಾಚಾರ ಮತ್ತು ತತ್ಸಂಬಂಧಿತ ಅವಘಡಗಳು. ಭಾರತ ಬುಲೆಟ್ ರೈಲಿನ ಯುಗಕ್ಕೆ ಜಿಗಿಯುತ್ತಿದೆ. ಮಂಗಳ ಗ್ರಹಕ್ಕೆ ಲಗ್ಗೆ ಹಾಕಿದೆ. ಚಂದ್ರನ ಮೇಲೆ ಮನೆ ಮಾಡುವ ಕನಸು ಕಾಣುತ್ತಿದೆ. ಅತ್ಯಾಧುನಿಕ ಕ್ಷಿಪಣಿಗಳ ಒಡೆತನ ಹೊಂದಿದೆ. ಅಣ್ವಸ್ತ್ರಗಳ ಖಜಾನೆಯನ್ನೇ ಹೊಂದಿದೆ. ಆದರೂ ಇಲ್ಲಿನ ರಸ್ತೆಗಳು ಅಪಘಾತ […]

ಕನ್ನಡಿ-2 : ಹಳ್ಳ ಹಿಡಿದ ಅಧಿಕಾರಶಾಹಿ ವರ್ಗ

ಕನ್ನಡಿ-2 : ಹಳ್ಳ ಹಿಡಿದ ಅಧಿಕಾರಶಾಹಿ ವರ್ಗ

ಇತ್ತೀಚೆಗೆ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಸ್ .ಎಂ. ಜಾಮದಾರರವರು ನೌಕರಶಾಹಿ ಭ್ರಷ್ಟತೆಗೆ ರಾಜಕಾರಣಿಗಳೇ ಕಾರಣ ಎಂಬ ಶೀರ್ಷಿಕೆಯಡಿ ಅಂಕಣ ಬರೆದಿದ್ದಾರೆ. ಅದರಲ್ಲಿ ನಡತೆ ಸರಿಯಲ್ಲದ, ಹಾಳಾಗಿರುವ ನೌಕರಶಾಹಿಯನ್ನು ಸರಿಪಡಿಸಲು ಅವಕಾಶವಿದೆ. ಭ್ರಷ್ಟಾಚಾರ, ಜಾತೀಯತೆ, ಪಕ್ಷಪಾತದಲ್ಲಿ ಮುಳುಗಿರುವ ನೌಕರಶಾಹಿಯ ವಕ್ತಾರರಂತೆ ಎಲ್ಲ ತಪ್ಪುಗಳನ್ನು ಅಧಿಕಾರ ಚುಕ್ಕಾಣೆ ಹಿಡಿದ ರಾಜಕಾರಣಿಗಳ ಮೇಲೆ ಗೂಬೆಕೂರಿಸುವಂತಿದೆ. ಶಾಸನಗಳ ರಚನೆ ಶಾಸಕಾಂಗದ ಕರ್ತವ್ಯ. ಅದರ ಅನುಷ್ಠಾನ ಕಾರ್ಯಂಗದ್ದು. ಶಾಸನ ಮತ್ತು ಯೋಜೆನಗಳ ಅನುಷ್ಠಾನ ಸಫಲವಾಗದಿರುವುದು ನೌಕರಶಾಹಿಯ ವೈಪಲ್ಯವೇ ಹೊರತು ಶಾಸಕಾಂದಲ್ಲ. ಪ್ರಾಮಾಣಿಕ, ಪಾರದರ್ಶಕ, ಕಾನೂನುಬದ್ದ […]

ಕನ್ನಡಿ- 1 : ಕುಟುಂಬದ ಸದಸ್ಯತ್ವ ಬದಲಿಸಿಕೊಳ್ಳುವ ಕಂದಾಯ ಅಧಿಕಾರಿಗಳು

ಕನ್ನಡಿ- 1 : ಕುಟುಂಬದ ಸದಸ್ಯತ್ವ ಬದಲಿಸಿಕೊಳ್ಳುವ ಕಂದಾಯ ಅಧಿಕಾರಿಗಳು

ಮಹಾ ಭಾರತದಲ್ಲಿ ಪಿತಾಮಹಾರಾದ ಭೀಷ್ಮರು ಪಾಂಡವ ಮತ್ತು ಕೌರವರ ನಡುವಿನ ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದ ಆಡಳಿತ ವ್ಯವಸ್ಥೆಯನ್ನು ವಿಭಾಗಿಸಿ ಹಂಚಲು ಉದ್ದೇಶಿಸಿದರಂತೆ. ಅದರಂತೆ ಧರ್ಮರಾಯನಿಗೆ ಕಂದಾಯ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗಿತ್ತಂತೆ. ಬಹುಷ ಇದು ಕಂದಾಯ ಇಲಾಖೆಯ ಕುರಿತ ಮೊದಲು ಉಲ್ಲೇಖ ಇರಬಹುದು. ಅಂತಹ ಮಹತ್ವದ ಇಲಾಖೆ ಇಂದು ಎಲ್ಲರಿಂದ ಟೀಕಿಸಿಕೊಳ್ಳುವ, ಬಯಸಿಕೊಳ್ಳುವ ಇಲಾಖೆ ಆಗಿದೆ. ಬೆಂಗಳೂರಿನಂತಹ ನಗರಗಳಲ್ಲಂತು ಪೋಲಿಸ ಇಲಾಖೆಯಂತೆ, ಈ ಇಲಾಖೆಗೂ ಸಹ ಕಾನೂನೆ ಇಲ್ಲವೆನೋ ಎಂಬಂತ್ತಾಂಗಿ ಹೋಗಿದೆ. ಕಳೆದ ವಾರ ದೊಡ್ಡ ಬಳ್ಳಾಪೂರದ […]

ಜಾತಿ -ಆದಾಯ ಪ್ರಮಾಣ ಪತ್ರಗಳಿಗೆ ಆನ್ ಲೈನ್ ಅರ್ಜಿ

ಜಾತಿ -ಆದಾಯ ಪ್ರಮಾಣ ಪತ್ರಗಳಿಗೆ ಆನ್ ಲೈನ್ ಅರ್ಜಿ

ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ನಡೆದು ಬಂದ ಹಾದಿ– ಕೈಬರಹದ ಪ್ರಮಾಣ ಪತ್ರದಿಂದ ಕಾಗದ ರಹಿತ ಪ್ರಮಾಣ ಪತ್ರದವರೆಗೆ  ಶಿಕ್ಷಣ, ಉದ್ಯೋಗ ಹಾಗೂ ಇತರೆ ಕ್ಷೇತ್ರಗಳಲ್ಲಿ ಜಾತಿ ಆಧಾರಿತ ಮೀಸಲಾತಿಯ ಆರಂಭದೊಂದಿಗೆ ಸರ್ಕಾರಗಳಿಂದ ಜನರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆ ಸಹಾ ಜಾರಿಗೆ ಬಂದಿರುತ್ತದೆ. ಎಲ್ಲಾ ರಾಜ್ಯಗಳಲ್ಲೂ ಈ ರೀತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಿಸಲು ವಿವಿಧ ಕಾನೂನುಗಳಿದ್ದು, ಪ್ರಮಾಣ ಪತ್ರಗಳನ್ನು ಅಂಗೀಕರಿಸುವ ಅಧಿಕಾರವನ್ನು ನಿಗಧಿತ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿರುತ್ತದೆ. […]

ಎಲ್ಲೋ ಹರಿದು ಹೋದ ಗ್ರಾಮೀಣ ಜನರ ಕುಡಿಯುವ ನೀರು

ಎಲ್ಲೋ ಹರಿದು ಹೋದ ಗ್ರಾಮೀಣ ಜನರ ಕುಡಿಯುವ ನೀರು

ಚರಿತ್ರೆಯಲ್ಲಿ ಅನೇಕ ವ್ಯಕ್ತಿಗಳು ಬೇರೆ-ಬೇರೆ ಕಾರಣಗಳಿಗೆ ದಾಖಲಾಗುತ್ತಾರೆ. ಕೆಲವರನ್ನು ಜನಪೀಡಕರೆಂಬ ದುಷ್ಟರೆಂಬ ಕಾರಣಕ್ಕೆ ದಾಖಲಾಗುತ್ತಾರೆ. ಇನ್ನೂ ಕೆಲವರು ತಮ್ಮ ಜೀವನವನ್ನು ಸಮಾಜದ ಒಳಿತಿಗೆ ಮೀಸಲಿಟ್ಟು ದುಡಿದ ಕಾರಣಕ್ಕೆ ದಾಖಲಾಗುತ್ತಾರೆ. ಎರಡನೇ ಗುಂಪಿನಲ್ಲಿ ಹೆಚ್ಚಿನ ಹೆಸರುಗಳನ್ನು ಪಟ್ಟಿ ಮಾಡಲಾಗುವುದರಿಂದ ಸಮಾಜದ ಕುರಿತು ಭರವಸೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಕಳೆದ ನಲವತ್ತು ವರ್ಷಗಳ ಕರ್ನಾಟಕದ ಚರಿತ್ರೆಯಲ್ಲಿ ದಾಖಲಾದ ನಜೀರ್ ಸಾಬರ ದುಡಿಮೆ ಮೆಚ್ಚುವಂತದ್ದು. ಗ್ರಾಮ ಕರ್ನಾಟಕದ ನೀರಿನ ಬವಣೆ ಅರಿತಿದ್ದ ‘ನೀರುಸಾಬರು’ ಹಟತೊಟ್ಟ ಹಾಗೆ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರಲು ದುಡಿದರು. […]

ಭೂಮಿ ಖರೀದಿ – ಇರಲಿ ಎಚ್ಚರ

ಭೂಮಿ ಖರೀದಿ – ಇರಲಿ ಎಚ್ಚರ

ಭೂಮಿಗೆ ಈಗ ಬಂಗಾರಕ್ಕಿಂತಲೂ ಅಧಿಕ ಬೆಲೆ. ನಾವು ಇದನ್ನು ಸೃಷ್ಟಿಸಲಾಗದೆಂಬ ಕಾರಣಕ್ಕೇ ಈ ಗೌರವ. ಆದುದರಿಂದ, ಮುಂದೊಂದು ದಿನ ಅಪರಿಮಿತವಾದ ಲಾಭ ಪ್ರಾಪ್ತವಾಗುವುದೆಂಬ ವ್ಯಾಪಾರಿ ಮನೋಭಾವದಿಂದಲೇ ಅನೇಕರು ಆಸ್ತಿ ಖರೀದಿಗೆ ಮುಗಿಬೀಳುತ್ತಾರೆ. ಭವಿಷ್ಯದ ದೃಷ್ಟಿಯಿಂದ ಆಸ್ತಿ ಖರೀದಿಸುವವರ ವರ್ಗ ಒಂದಾದರೆ, ಬೇಡಿಕೆ ಜಾಸ್ತಿಯಾದಾಗ ವಿಲೇವಾರಿ ಮಾಡಿ ಲಾಭ ಗಳಿಸಬಹುದೆನ್ನುವ ದುಡ್ಡಿದ್ದವರ ವರ್ಗ ಇನ್ನೊಂದು. ಈ ಪೈಪೋಟಿಯಲ್ಲಿ ಕೈಯಲ್ಲಿ ಕಾಸಿದ್ದರೆ ಸಾಕು ಅದನ್ನು ಷೇರು-ಗೀರು ಎಂದು ತೊಡಗಿಸುವ ಬದಲಿಗೆ ಅಥವಾ ಖಾಸಗಿ ಚೀಟಿಯಲ್ಲಿ ತೊಡಗಿಸಿ ಪಂಗನಾಮ ಹಾಕಿಸಿಕೊಳ್ಳುವ ಬದಲಿಗೆ […]