ಕಾರ್ಯಾಂಗ

ಕಾರ್ಯಾಂಗ

ಕೇಂದ್ರದ ಒತ್ತಡಕ್ಕೆ ಮಣಿದ ಚುನಾವಣಾ ಆಯೋಗ!

ಕೇಂದ್ರದ ಒತ್ತಡಕ್ಕೆ ಮಣಿದ ಚುನಾವಣಾ ಆಯೋಗ!

ತನ್ನ ಅದೀನದಲ್ಲಿರುವ ಸಿ.ಬಿ.ಐ., ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳನ್ನು ಕೇಂದ್ರ ಸರಕಾರ ತನ್ನ ಹಿತಾಸಕ್ತಿಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾಯಿತು. ಇದೀಗ ಕೇಂದ್ರಚುನಾವಣಾ ಆಯೋಗದ ಸರದಿ! ಕೇಂದ್ರ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳನ್ನು  ಸಹ ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದೆಂಬುದನ್ನು ಕೇಂದ್ರದ ಬಾಜಪ ಸರಕಾರ ಇದೀಗ ತೋರಿಸಿಕೊಟ್ಟಿದೆ. ಏಕಕಾಲಕ್ಕೆ ನಡೆಯಬೇಕಿದ್ದ ಹಿಮಾಚಲಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿದಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಘೋಷಿಸುವಾಗ ಕೇವಲ ಹಿಮಾಚಲಪ್ರದೇಶದ ಚುನಾವಣೆಗೆ ದಿನಾಂಕ ನಿಗದಿ ಪಡಿಸಿದ್ದು, ಗುಜರಾತಿನ ಚುನಾವಣೆಯ ದಿನಾಂಕ ನಿಗದಿಗೊಳಿಸದೆ ಇರುವುದಕ್ಕೆ […]

ಎನ್‌ಡಿಟಿವಿ: ವಿಮರ್ಶಾತ್ಮಕ ಧ್ವನಿಗಳ ಮೇಲೆ ದಾಳಿ

ಎನ್‌ಡಿಟಿವಿ: ವಿಮರ್ಶಾತ್ಮಕ ಧ್ವನಿಗಳ ಮೇಲೆ ದಾಳಿ

ಎನ್‌ಡಿಟಿವಿ ಯಂಥ ವಿಮರ್ಶಾತ್ಮಕ ಧ್ವನಿಗಳ ಮೇಲೆ ದಾಳಿ ಮಾಡುವ ಮೂಲಕ ಸರ್ಕಾರವು ಯಾವ ಸಂದೇಶವನ್ನು ನೀಡುತ್ತಿದೆ? ಎಲ್ಲಾ ಆಳುವ ದೊರೆಗಳಿಗೂ ತಮ್ಮ ಸುತ್ತಾ ತಮ್ಮನ್ನು ಹಾಡಿಹೊಗಳುವ ಭಟ್ಟಂಗಿಗಳಿರಬೇಕೆಂಬ ಬಯಕೆ ಇರುತ್ತದೆ. ಏಕೆಂದರೆ ಅದು  ಅವರ ಆಡಳಿತವನ್ನು ಸುಸೂತ್ರಗೊಳಿಸುತ್ತದೆ. ನೀವು ಮಾಡಬೇಕಾದದ್ದೆಲ್ಲಾ ಇಷ್ಟೆ. ಉಪ್ಪರಿಗೆಯ ಮೇಲೆ ನಿಂತು ಘೋಷಣೆಗಳನ್ನು ಮಾಡಿ. ನಿಮ್ಮ ಅನುಚರರು ಅದನ್ನು ಹಾಡಿಹೊಗಳುತ್ತಾರೆ. ಮುಠಾಳರು ಮಾತ್ರ ಈ ವಂದಿಮಾಗಧರ ಗುಂಪಿನಿಂದ ಹೊರಬಂದು ಪ್ರಶ್ನೆಗಳನ್ನು ಕೇಳುತ್ತಾರೆ ಅಥವಾ ವಿಮರ್ಶೆಗಳನ್ನು ಮಾಡಲು ಮುಂದಾಗುತ್ತಾರೆ. ಹಾಗೆ ಮಾಡಿದವರಿಗೆ ಅದರ ಪರಿಣಾಮಗಳ […]

ರಾಮ! ರಾಮ! ಗಲ್ಲು ಶಿಕ್ಷೆ

ರಾಮ! ರಾಮ! ಗಲ್ಲು ಶಿಕ್ಷೆ

ಮಳೆಯಲ್ಲಿ ತೊಯ್ದ ಬರ್ಮದ ಜೈಲಿನ ಆವರಣದ ಒಂದು ಬೆಳಗಿನ ಜಾವ.ಎತ್ತರದ ಜೈಲು ಗೋಡೆಗಳ ಮೇಲೆ ಸಣ್ಣದಾದ ಬೆಳಕು ನರ್ತಿಸುತ್ತಿತ್ತು. ಪ್ರಾಣಿಗಳ ಪಂಜರದಂತಿರುವ ಉಕ್ಕಿನ ಸರಳುಗಳ ಸಣ್ಣ ಸಣ್ಣ ಸೆಲ್‍ಗಳ ಮುಂದೆ ನಾವೆಲ್ಲ ಕಾಯುತ್ತಿದ್ದೆವು. ಆ ಉಕ್ಕಿನ ಸರಳುಗಳೊಳಗೆ ಮುಂದಿನ ಕೆಲವು ವಾರಗಳೊಳಗೆ ಗಲ್ಲು ಶಿಕ್ಷೆಗೆ ಗುರಿಯಾಗಲಿದ್ದ ಖೈದಿಗಳು ಜೈಲಿನ ಕಂಬಳಿಯನ್ನು ಹೊದ್ದು ಸಣ್ಣದಾದ ಹರಟೆಯಲ್ಲಿ ತೊಡಗಿದ್ದರು. ಕೃಶ ಕಾಯದ,ಸಣ್ಣ ಆಕೃತಿಯ,ಚಂಚಲ ಕಣ್ಣುಗಳ ಹಿಂದೂ ಖೈದಿಯೊಬ್ಬನನ್ನು ಆ ಉಕ್ಕಿನ ಸರಳುಗಳ ಸೆಲ್‍ನಿಂದ ಹೊರ ಕರೆತಂದರು.ಈ ಖೈದಿಯು ದಟ್ಟವಾದ ಹುರಿಮೀಸೆಯನ್ನು […]

ಬರ ಎಂಬ ಎರಡಲಗಿನ ಕತ್ತಿ

ಬರ ಎಂಬ ಎರಡಲಗಿನ ಕತ್ತಿ

ಅಂದೊಮ್ಮೆ ಮಕ್ಕಳ ಮಾರಿ ರೊಟ್ಟಿ ತಿಂದಿದ್ದರಂತೆ. ಬಿದರಕ್ಕಿ ಗುಡಿಸಿ ಅನ್ನ ಮಾಡಿ ಉಂಡಿದ್ದರಂತೆ. ಕತ್ತಾಳೆ ಗಡ್ಡೆ ಬೇಯಿಸಿ ತಿಂದಿದ್ದರಂತೆ. ಒಂದು ಗುದ್ದಿನೊಳಗೆ ನಾಲ್ಕಾರು ಹೆಣಗಳನ್ನು ಹಾಕಿ ಮುಚ್ಚುತ್ತಿದ್ದರಂತೆ. ಹೀಗೆ ನನ್ನಜ್ಜ ಹೇಳುತ್ತಿದ್ದುದು ನೆನಪು. 1870ರ ಸಮಯ ದಕ್ಷಿಣ ಭಾರತದ ಬರದಲ್ಲಿ 5 ಮಿಲಿಯನ್ ಜನ ಸತ್ತ ಹಾಗೂ ಚೈನಾದಲ್ಲಿ 9 ಮಿಲಿಯನ್ ಜನ ಸತ್ತ ಕಾಲ ಅದೇ ಇರಬೇಕು. ಇದು ಆಗಾಗ್ಗೆ ಬರುತ್ತಿದ್ದ ಪ್ರಕೃತಿ ನಿರ್ಮಿತ ಬರದ ಚಕ್ರ. ಅಂದು ರೈತನ ಸಂತೆಗಳಲ್ಲಿ ಉಲ್ಲಾಸದ ಕೊಡುಕೊಳೆಯಿತ್ತು. ಪೇಟೆಯ […]

ಕನ್ನಡಿ-4: ಕರ್ನಾಟಕಕ್ಕೆ ಕಂಟಕವಾಗಿರುವ ಐಎಎಸ್ ಪಾಳೇಗಾರರು

ಕನ್ನಡಿ-4: ಕರ್ನಾಟಕಕ್ಕೆ  ಕಂಟಕವಾಗಿರುವ ಐಎಎಸ್ ಪಾಳೇಗಾರರು

ಇತ್ತೀಚಿಗೆ ಭಾರತಕ್ಕೆ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಭೇಟಿ ಕೊಟ್ಟಿದ್ದರು. ದೆಹಲಿಯಲ್ಲಿ ಮಳೆಯ ಪ್ರವಾಹದ ಬಗ್ಗೆ ಮಾತನಾಡುತ್ತಾ ಭಾರತದಲ್ಲಿ ಅಭಿವೃದ್ಧಿಗೆ ಅಧಿಕಾರಿಗಳೆ ಅಡ್ಡಗಾಲು ಎಂದರು. ಅವರು ಹೇಳಿದ್ದು ಕಾರ್ಪೋರೇಟ್ ಅಭಿವೃದ್ಧಿಯೋ ಅಥವಾ ಸಾಮಾನ್ಯರ ಅಭಿವೃದ್ಧಿಯೋ ಎಂಬುದರ ಬಗ್ಗೆ ವಿವರಿಸಿಲ್ಲ. ಬ್ರಿಟಿಷರ ವ¸ಹತುಶಾಹಿ ಪಳಯುಳಿಕೆಯಂತಿರುವ ಆಡಳಿತಶಾಹಿ ಎಂದೆಂದಿಗೂ ಉಳ್ಳವರ ಬಾಲ ಹಿಡಿದಿದ್ದೇ ಹೆಚ್ಚು. ಆಡಳಿತಶಾಹಿಯ ಮುಖ್ಯ ಸೇವೆ ಭಾರತೀಯ ಆಡಳಿತ ಸೇವೆ. ಉಳ್ಳವರ ಸೇವೆ ಮಾಡುವ ಇವರಿಗೆ ‘ಬಾಬು’ಗಳು ಎಂಬ ಅಡ್ಡ ಹೆಸರು ಉಂಟು. ಇಂಗ್ಲಿಷಿನಲ್ಲಿ ಐ.ಎ.ಎಸ್. […]

ಸೇನೆ ಪ್ರಶ್ನಾತೀತವಾದರೆ ಪ್ರಜಾತಂತ್ರ ಉಳಿಯದು

ಸೇನೆ ಪ್ರಶ್ನಾತೀತವಾದರೆ ಪ್ರಜಾತಂತ್ರ ಉಳಿಯದು

ಒಂದು ದೇಶದ ಆಡಳಿತ ವ್ಯವಸ್ಥೆಗೆ ಹಲವಾರು ಭೂಮಿಕೆಗಳಿರುತ್ತವೆ. ಹಲವಾರು ಆಯಾಮಗಳಿರುತ್ತವೆ. ಹಲವಾರು ಮಜಲುಗಳಿರುತ್ತವೆ. ಆಡಳಿತ ವ್ಯವಸ್ಥೆಯ ಆಗುಹೋಗುಗಳನ್ನು ನಿರ್ವಹಿಸಲು, ಸಮಾಜದ ಓರೆ ಕೋರೆಗಳನ್ನು ತಿದ್ದಲು, ಪ್ರಜೆಗಳ ಲೋಪಗಳನ್ನು ಸರಿಪಡಿಸಲು ಪ್ರತಿಯೊಂದು ಕ್ಷೇತ್ರದಲ್ಲೂ ಅಧಿಕೃತ ವಾರಸುದಾರರು, ಪ್ರತಿನಿಧಿಗಳು ಇರುತ್ತಾರೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದು ಸಮಾನ ನಾಗರಿಕ ಪ್ರಜ್ಞೆ ಇದ್ದೇ ಇರುತ್ತದೆ. “ ಆಡಳಿತ ವ್ಯವಸ್ಥೆ ” ಎಂಬ ಪರಿಕಲ್ಪನೆಯೆ ಇಂತಹ ಹಲವು ಆಯಾಮಗಳ ಒಂದು ಸಂಗಮ ಎಂದು ಇತಿಹಾಸವೇ ನಿರೂಪಿಸಿದೆ. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ […]

ಪೊಲೀಸ್ ದೌರ್ಜನ್ಯ ಏಕೆ ಹೀಗೆ ?

ಪೊಲೀಸ್ ದೌರ್ಜನ್ಯ ಏಕೆ ಹೀಗೆ ?

ಸೆಕ್ಯುಲರಿಸಂ ತತ್ವಗಳ ನಿಜವಾದ ಅರ್ಥವನ್ನು ಗ್ರಹಿಸದೆಯೇ ಸಾಂವಿಧಾನಿಕವಾಗಿ ಸೆಕ್ಯುಲರ್ ರಾಷ್ಟ್ರ ಎನಿಸಿಕೊಂಡಿರುವ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷದ ಸೆಕ್ಯುಲರಿಸಂ ಮತಗಟ್ಟೆಗಳಲ್ಲಿ ಬಂಧಿತವಾಗಿದ್ದರೆ ಬಿಜೆಪಿಯ ಸೆಕ್ಯುಲರಿಸಂ ಹಿಂದುತ್ವದ ಕೋಟೆಯಲ್ಲಿ ಸುಭದ್ರವಾಗಿದೆ. ಈ ದೇಶದಲ್ಲಿ ಸೆಕ್ಯುಲರ್ ತತ್ಚಗಳನ್ನು ಅಕ್ಷರಶಃ ಪಾಲಿಸುವ ಆಡಳಿತ ವ್ಯವಸ್ಥೆಯ ಅಂಗ ಎಂದರೆ ಅದು ಪೊಲೀಸ್ ಮತ್ತು ಸೇನೆ ಮಾತ್ರವೇ. “ ಕಾನೂನು ಪಾಲನೆ ಮತ್ತು ಕಾನೂನು ಸುವ್ಯವಸ್ಥೆಯ ರಕ್ಷಣೆ ” ಇದು ಸಮಸ್ತ ಭಾರತೀಯ ಪ್ರಜೆಗಳೂ ಬಯಸುವ ಒಂದು ಸ್ಥಿತಿ. ಈ ಸುಸ್ಥಿತಿಯನ್ನು ಕಾಪಾಡುವ […]

ದೇಶದಲ್ಲಿ ಸಾವಿಗೂ ಮಾರುಕಟ್ಟೆ ಮೌಲ್ಯವಿದೆ

ದೇಶದಲ್ಲಿ ಸಾವಿಗೂ ಮಾರುಕಟ್ಟೆ ಮೌಲ್ಯವಿದೆ

ಜಗತ್ತಿನ ಪ್ರತಿಯೊಂದು ಚರಾಚರ ಜೀವಿಯನ್ನೂ ಕಾಡುವ ಒಂದು ಚಿಂತೆ ಎಂದರೆ ಸಾವನ್ನು ಕುರಿತಾದದ್ದು. ಹುಟ್ಟು ಅನಿರೀಕ್ಷಿತ, ಸಾವು ನಿಶ್ಚಿತ ಅದರೆ ಬದುಕು ಮಾತ್ರವೇ ವಾಸ್ತವ. ಇದು ಎಲ್ಲ ಧರ್ಮಗಳ ಸಾರ, ತಿರುಳು ಮತ್ತು ಅಂತಃಸತ್ವ. ದಾರ್ಶನಿಕರು ಈ ಪದಗಳನ್ನು ಹಲವಾರು ರೀತಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ತನ್ನ ಉಸಿರು ಇರುವವರೆಗೂ ಶಾಶ್ವತವಾಗಿ ಬದುಕಿಯೇ ತೀರುತ್ತೇನೆ ಎನ್ನುವಂತೆ ಬದುಕುವ ಮಾನವನಿಗೆ ಸಾವು ಸದಾ ಪ್ರಶ್ನೆಯಾಗಿಯೇ ಉಳಿಯುತ್ತದೆ. ಪ್ರಶ್ನೆಗಳ ಪಂಜರದಲ್ಲಿಯೇ ಸಿಲುಕಿ ಮಾನವ ತನ್ನ ಕೊನೆಯುಸಿರು ಎಳೆಯುತ್ತಾನೆ. ಈ ದಾರ್ಶನಿಕ ಪ್ರಶ್ನೆಗಳು ಒತ್ತಟ್ಟಿಗಿರಲಿ, […]

ವೃತಿ ಧರ್ಮ, ಮನೋಧರ್ಮ ಮತ್ತು ಸಾಮಾಜಿಕ ಉತ್ತರದಾಯಿತ್ವ

ವೃತಿ ಧರ್ಮ, ಮನೋಧರ್ಮ  ಮತ್ತು ಸಾಮಾಜಿಕ ಉತ್ತರದಾಯಿತ್ವ

ಯಾವುದೇ ವ್ಯಕ್ತಿಯ ಜೀವನದಲ್ಲಿ ಮನೋಧರ್ಮ ಅಥವಾ ಮನೋಭಾವ ಎನ್ನುವುದು ವ್ಯಕ್ತಿಗತವಾಗಿ ರೂಢಿಸಿಕೊಂಡ ಗುಣಲಕ್ಷಣಗಳನ್ನು ಆಧರಿಸಿರುತ್ತದೆ. ಸಾಂಪ್ರದಾಯಿಕ ಸಮಾಜದಲ್ಲಿ, ವಿಶೇಷವಾಗಿ ಭಾರತದಂತಹ ಶ್ರೇಷ್ಠತೆಯ ಗುಂಗಿನ ಸಾಮಾಜಿಕ ಪರಿಸರದಲ್ಲಿ ಮನೋಧರ್ಮವನ್ನು ವ್ಯಕ್ತಿಯ ಜನ್ಮದ ನೆಲೆಯಲ್ಲಿ, ಜಾತಿಯ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. “ಜಾತಿ ಬುದ್ಧಿ” ಎಂಬ ಲೇವಡಿಯ ಮಾತು 21ನೆಯ ಶತಮಾನದ ಆಧುನಿಕ ಭಾರತೀಯ ಸಮಾಜದಲ್ಲೂ ಪ್ರಚಲಿತವಾಗಿದೆ. ಜಾತಿ ಕೇಂದ್ರಿತ ಶ್ರೇಣೀಕೃತ ಸಮಾಜವೊಂದರಲ್ಲಿ ವ್ಯಕ್ತಿಗತ ಮನೋಧರ್ಮವನ್ನು ಜಾತಿಯ ನೆಲೆಯಲ್ಲಿ ಅಥವಾ ಸಾಮಾಜಿಕ ಶ್ರೇಣಿಯ ನೆಲೆಯಲ್ಲಿ ವ್ಯಾಖ್ಯಾನಿಸುವುದು ಅತಿಶಯದ ಮಾತೇನಲ್ಲ. ಆದರೆ ಒಂದು ಸಮಾಜದ […]

‘ಸಿಪಾಯಿ ದಂಗೆ’ಯ ಮೇಲೆ ಸರ್ಕಾರದ ದಮನ

‘ಸಿಪಾಯಿ ದಂಗೆ’ಯ ಮೇಲೆ ಸರ್ಕಾರದ ದಮನ

ನಾವು ಒಂದಷ್ಟು ಗೆಳೆಯರು ತರಬೇತಿಗಾಗಿ ದೂರದ ಊರಿಗೆ ಹೊರಟಿದ್ದೆವು. ಎಲ್ಲರೂ ಬಸ್ ನಿಲ್ದಾಣಕ್ಕೆ ಬಂದು ತಡವಾದ ಒಬ್ಬ ಗೆಳೆಯನಿಗಾಗಿ ಕಾಯುತ್ತಿದ್ದೆವು. ಸ್ವಲ್ಪ ಸಮಯದ ನಂತರ ನಾವು ಕಾಯುತ್ತಿದ್ದ ಗೆಳೆಯ ಒಂದು ಸಣ್ಣ ಬ್ಯಾಗ್ ಹೆಗಲಿಗೆ ಹಾಕಿಕೊಂಡು ಬಂದ. ನಾವು ಹೊರಟಿದ್ದು ಒಂದು ತಿಂಗಳ ತರಬೇತಿಗಾಗಿ. ನಮಗೋ ಅಚ್ಚರಿ. ಒಂದು ತಿಂಗಳಿಗೆ ಇಷ್ಟು ಸಣ್ಣ ಲಗೇಜ್ ಸಾಕೆ ಎಂದು ಕೇಳುವುದರೊಳಗೆ ಒಬ್ಬ ವ್ಯೆಕ್ತಿ ದೊಡ್ಡದೊಂದು ಸೂಟ್‍ಕೇಸ್ ಹೊತ್ತು ತಂದು ನಮ್ಮ ಮುಂದಿರಿಸಿ ಗೆಳೆಯನಿಗೆ ‘ಬರುತ್ತೇನೆ ಸಾರ್’ ಎಂದು ಹೇಳಿ […]