ಆಡಳಿತ

ಆಡಳಿತ

ಹದಗೆಟ್ಟಿರುವ ನ್ಯಾಯದಾನ ವ್ಯವಸ್ಥೆ

ಹದಗೆಟ್ಟಿರುವ ನ್ಯಾಯದಾನ ವ್ಯವಸ್ಥೆ

ನ್ಯಾಯದ ಹೆಸರಲ್ಲಿ.. ನ್ಯಾಯಾಲಯಗಳು ಭಾರತೀಯ ಕುಟುಂಬವನ್ನು ಕಾಪಾಡುವ ಉಸಾಬರಿಗೆ ಹೋಗದೆ ಹದಗೆಟ್ಟಿರುವ ನ್ಯಾಯದಾನ ವ್ಯವಸ್ಥೆಯನ್ನು ಸರಿಪಡಿಸಬೇಕು. ಭಾರತದ ವರಿಷ್ಠ ನ್ಯಾಯಾಲಯ ತನ್ನ ಇತ್ತೀಚಿನ ಆದೇಶದ ಮೂಲಕ ಭಾರತದ ಮಹಿಳೆಯರಿಗೆ ಯಾವ ಉಪಕಾರವನ್ನು ಮಾಡಲಿಲ್ಲ. ಬದಲಿಗೆ, ಕಾನೂನಿನ ದುರ್ಬಳಕೆಯನ್ನು ತಡೆತಟ್ಟುವ ಹೆಸರಿನಲ್ಲಿ ಆ ಆದೇಶವು ಸಂತ್ರಸ್ತ ಮಹಿಳೆಯೂ ಸಹ ಕಾನೂನಿನ ಮೊರೆ ಹೋಗುವ ಮುನ್ನ ಹಿಂದೆ ಮುಂದೆ ಯೋಚಿಸುವಂತೆ ಮಾಡಿದೆ. ಜುಲೈ ೨೭ ರಂದು ನೀಡಿದ ಅದೇಶವೊಂದರ ಮೂಲಕ ಸುಪ್ರೀಂ ಕೋರ್ಟು ಭಾರತದ ಅಪರಾಧ ಸಂಹಿತೆ (ಐಪಿಸಿ)ಯ ೪೯೮-ಎ […]

ಕಾನೂನುಗಳು ಕಠಿಣವಾದಷ್ಟೂ  ಸಂಕಷ್ಟಕ್ಕೀಡಾಗುವವರು ಸಾಮಾನ್ಯರು!

ಕಾನೂನುಗಳು ಕಠಿಣವಾದಷ್ಟೂ   ಸಂಕಷ್ಟಕ್ಕೀಡಾಗುವವರು ಸಾಮಾನ್ಯರು!

  ಇಂಡಿಯಾದಂತಹ  ವಿಶಾಲವಾದ ಪ್ರಜಾಪ್ರಭುತ್ವದಲ್ಲಿ ಜನತೆ ಬಯಸವುದು  ಸರಕಾರಗಳು ಜಾರಿಗೆ ತರುವ ಕಾನೂನು ಕಾಯಿದೆಗಳು ಜನಪರವಾಗಿರಬೇಕೆಂದು ಮಾತ್ರವಲ್ಲ ಬದಲಿಗೆ ಸರಳವೂ, ಸಾಮಾನ್ಯರಿಗೆ ಸುಲಭವಾಗಿ ಅರ್ಥ ಆಗಬೇಕೆಂಬುದಾಗಿದೆ.  ತೊಂಭತ್ತರ ದಶಕದಲ್ಲಿ   ಮಾಜಿ ಪ್ರದಾನಮಂತ್ರಿಗಳಾದ ದಿವಂಗತ ಪಿ.ವಿ. ನರಸಿಂಹರಾವ್ ಅವರ ಅಧಿಕಾರದ ಅವಧಿಯಲ್ಲಿ  ಜಾರಿಗೊಳಿಸಲ್ಪಟ್ಟ  ಮುಕ್ತ ಆರ್ಥಿಕ ನೀತಿಯನ್ನು ಈ ನೆಲದ ಬಹುತೇಕ ವಿದ್ಯಾವಂತರು ಸ್ವಾಗತಿಸಿದ್ದರ ಹಿಂದೆ ಇದ್ದದ್ದು  ಸರಕಾರದ ಕೆಂಪು ಪಟ್ಟಿಯಿಂದ( ರೆಡ್ ಟೇಪಿಸಂ) ಮುಕ್ತಿ ಪಡೆಯಬಹುದೆಂಬ  ಮನೋಬಾವ ಸಹ ಇತ್ತು. ಅಗ ಅಂದಿನ ಅರ್ಥ ಮಂತ್ರಿಗಳಾದ ಮನಮೋಹನ್ […]

ಕನ್ನಡಿ-5: ವಿದ್ಯುತ್ ಖರೀದಿಯಲ್ಲಿ ಭಾರಿ ಅವ್ಯವಹಾರ- ಗ್ರಾಹಕರ ಜೇಬಿಗೆ ಕತ್ತರಿ.

ಕನ್ನಡಿ-5: ವಿದ್ಯುತ್ ಖರೀದಿಯಲ್ಲಿ ಭಾರಿ  ಅವ್ಯವಹಾರ- ಗ್ರಾಹಕರ ಜೇಬಿಗೆ ಕತ್ತರಿ.

ರಾಜ್ಯದಲ್ಲಿ 2004 ರಿಂದ ವಿದ್ಯುತ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ, 6 ತಿಂಗಳೊಳಗೆ ವರದಿ ಸಲ್ಲಿಸಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಧಾನಸಭೆಯ ಸಮಿತಿ ರಚಿಸಿ, ಎರಡು ವರ್ಷವಾದರೂ ಸಮಿತಿ ಇನ್ನೂ ವರದಿ ನೀಡಿಲ್ಲ. ಸದನ ಸಮಿತಿ ರಚಿಸಿದ ಪ್ರಾರಂಭದಲ್ಲಿ ವಿದ್ಯುತ್ ಖರೀದಿಯಲ್ಲಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ರಚನೆ ಅಗತ್ಯವಿರಲಿಲ್ಲ. ಇದು ನನ್ನ ವೈಯಕ್ತಿಕ ಅನಿಸಿಕೆ. ಆದರೆ, ಸದನದ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಸಮಿತಿ ರಚಿಸಿರುವುದರಿಂದ ಈ ಬಗ್ಗೆ ತನಿಖೆ ನಡೆಸಿ, […]

ಎನ್‌ಡಿಟಿವಿ: ವಿಮರ್ಶಾತ್ಮಕ ಧ್ವನಿಗಳ ಮೇಲೆ ದಾಳಿ

ಎನ್‌ಡಿಟಿವಿ: ವಿಮರ್ಶಾತ್ಮಕ ಧ್ವನಿಗಳ ಮೇಲೆ ದಾಳಿ

ಎನ್‌ಡಿಟಿವಿ ಯಂಥ ವಿಮರ್ಶಾತ್ಮಕ ಧ್ವನಿಗಳ ಮೇಲೆ ದಾಳಿ ಮಾಡುವ ಮೂಲಕ ಸರ್ಕಾರವು ಯಾವ ಸಂದೇಶವನ್ನು ನೀಡುತ್ತಿದೆ? ಎಲ್ಲಾ ಆಳುವ ದೊರೆಗಳಿಗೂ ತಮ್ಮ ಸುತ್ತಾ ತಮ್ಮನ್ನು ಹಾಡಿಹೊಗಳುವ ಭಟ್ಟಂಗಿಗಳಿರಬೇಕೆಂಬ ಬಯಕೆ ಇರುತ್ತದೆ. ಏಕೆಂದರೆ ಅದು  ಅವರ ಆಡಳಿತವನ್ನು ಸುಸೂತ್ರಗೊಳಿಸುತ್ತದೆ. ನೀವು ಮಾಡಬೇಕಾದದ್ದೆಲ್ಲಾ ಇಷ್ಟೆ. ಉಪ್ಪರಿಗೆಯ ಮೇಲೆ ನಿಂತು ಘೋಷಣೆಗಳನ್ನು ಮಾಡಿ. ನಿಮ್ಮ ಅನುಚರರು ಅದನ್ನು ಹಾಡಿಹೊಗಳುತ್ತಾರೆ. ಮುಠಾಳರು ಮಾತ್ರ ಈ ವಂದಿಮಾಗಧರ ಗುಂಪಿನಿಂದ ಹೊರಬಂದು ಪ್ರಶ್ನೆಗಳನ್ನು ಕೇಳುತ್ತಾರೆ ಅಥವಾ ವಿಮರ್ಶೆಗಳನ್ನು ಮಾಡಲು ಮುಂದಾಗುತ್ತಾರೆ. ಹಾಗೆ ಮಾಡಿದವರಿಗೆ ಅದರ ಪರಿಣಾಮಗಳ […]

ಅಪರಾಧ ಮತ್ತು ಶಿಕ್ಷೆ

ಅಪರಾಧ ಮತ್ತು ಶಿಕ್ಷೆ

ಮರಣದಂಡನೆಯನ್ನು ನೀಡುವಾಗ ನ್ಯಾಯಾಲಯಗಳು ಸ್ಥಿರ ಮತ್ತು ಸಮಾನ ಮಾನದಂಡಗಳನ್ನು ಅಳವಡಿಸಬೇಕಿರುವುದು ಅತ್ಯವಶ್ಯಕ ದೇಶದಲ್ಲಿ ನಡೆದ ವಿವಿಧ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ಈ ತಿಂಗಳಲ್ಲಿ ನೀಡಿರುವ ಮೂರು ಭಿನ್ನ ಭಿನ್ನ ಆದೇಶಗಳು ಹೇಗೆ ಮರಣದಂಡನೆಯ ವಿಷಯದಲ್ಲಿ ನ್ಯಾಯಾಲಯದ ಧೋರಣೆಗಳು ಏಕ ಸಮಾನವಾದ ಮತ್ತು ಸ್ಥಿರವಾದ ಮಾನದಂಡಗಳನ್ನು ಅನುಸರಿಸುತ್ತಿಲ್ಲವೆಂಬುದನ್ನು ಸಾಬೀತುಪಡಿಸುತ್ತದೆ. ಮರಣದಂಡನೆಯನ್ನು ವಿಧಿಸಲು ಸೂಕ್ತವಾದ ಅಪರೂಪದಲ್ಲಿ ಅಪರೂಪದ ಪ್ರಕರಣ ಯಾವುದೆಂಬುದರ ಬಗ್ಗೆ ನ್ಯಾಯಾಲಯಗಳು ಹೇಗೆ ನಿರ್ಧಾರಕ್ಕೆ ಬರುತ್ತವೆಂಬುದು ಅಸ್ಪಷ್ಟವಾಗಿಯೇ ಇದೆ. ಈ ಮೂರು ಪ್ರಕರಣಗಳಲ್ಲಿ ಅತ್ಯಂತ ದೀರ್ಘ […]

ವಿಕೃತ ಭಾವನೆಗಳನ್ನು ಕೊಲ್ಲಿ ದೇಹಗಳನ್ನು ಬದುಕಲು ಬಿಡಿ

ವಿಕೃತ ಭಾವನೆಗಳನ್ನು ಕೊಲ್ಲಿ ದೇಹಗಳನ್ನು ಬದುಕಲು ಬಿಡಿ

ನಿರ್ಭಯ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಆದರೆ ಅಂತಿಮ ನ್ಯಾಯ ಇನ್ನೂ ಕಾಣಬೇಕಿದೆ. ಗಲ್ಲು ಶಿಕ್ಷೆಗೊಳಗಾಗಿರುವ ನಾಲ್ವರು ಅಪರಾಧಿಗಳು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುತ್ತಾರೆ. ಶೀಘ್ರದಲ್ಲೇ ನೂತನ ರಾಷ್ಟ್ರಪತಿ ಆಯ್ಕೆಯಾಗಲಿದೆ. ಈ ಪ್ರಕ್ರಿಯೆಯಿಂದ ಉಂಟಾಗುವ ವಿಳಂಬ ಶಿಕ್ಷೆಗೊಳಗಾಗಿರುವ ಅಪರಾಧಿಗಳಿಗೆ ಉಸಿರಾಡಲು ಮತ್ತಷ್ಟು ಅವಕಾಶ ಕಲ್ಪಿಸುತ್ತದೆ. ಬಹುಶಃ ನಿರ್ಭಯ ಪ್ರಕರಣ ದೇಶದ ಪ್ರಜ್ಞಾವಂತ ನಾಗರಿಕರಲ್ಲಿ ಕೊಂಚ ಮಟ್ಟಿಗಾದರೂ ಸಂವೇದನೆಯ ತುಣುಕುಗಳನ್ನು ಕಾಣುವ ಅವಕಾಶ ಕಲ್ಪಿಸಿದೆ ಎನ್ನಬಹುದು. ಆದರೆ ಈ ಸಂವೇದನೆ ವ್ಯಕ್ತಿಗತ ನೆಲೆಯಲ್ಲಿ ವ್ಯಕ್ತವಾಗುತ್ತಿರುವುದೇ ಹೊರತು ಸಾಮುದಾಯಿಕ […]

ರಾಮ! ರಾಮ! ಗಲ್ಲು ಶಿಕ್ಷೆ

ರಾಮ! ರಾಮ! ಗಲ್ಲು ಶಿಕ್ಷೆ

ಮಳೆಯಲ್ಲಿ ತೊಯ್ದ ಬರ್ಮದ ಜೈಲಿನ ಆವರಣದ ಒಂದು ಬೆಳಗಿನ ಜಾವ.ಎತ್ತರದ ಜೈಲು ಗೋಡೆಗಳ ಮೇಲೆ ಸಣ್ಣದಾದ ಬೆಳಕು ನರ್ತಿಸುತ್ತಿತ್ತು. ಪ್ರಾಣಿಗಳ ಪಂಜರದಂತಿರುವ ಉಕ್ಕಿನ ಸರಳುಗಳ ಸಣ್ಣ ಸಣ್ಣ ಸೆಲ್‍ಗಳ ಮುಂದೆ ನಾವೆಲ್ಲ ಕಾಯುತ್ತಿದ್ದೆವು. ಆ ಉಕ್ಕಿನ ಸರಳುಗಳೊಳಗೆ ಮುಂದಿನ ಕೆಲವು ವಾರಗಳೊಳಗೆ ಗಲ್ಲು ಶಿಕ್ಷೆಗೆ ಗುರಿಯಾಗಲಿದ್ದ ಖೈದಿಗಳು ಜೈಲಿನ ಕಂಬಳಿಯನ್ನು ಹೊದ್ದು ಸಣ್ಣದಾದ ಹರಟೆಯಲ್ಲಿ ತೊಡಗಿದ್ದರು. ಕೃಶ ಕಾಯದ,ಸಣ್ಣ ಆಕೃತಿಯ,ಚಂಚಲ ಕಣ್ಣುಗಳ ಹಿಂದೂ ಖೈದಿಯೊಬ್ಬನನ್ನು ಆ ಉಕ್ಕಿನ ಸರಳುಗಳ ಸೆಲ್‍ನಿಂದ ಹೊರ ಕರೆತಂದರು.ಈ ಖೈದಿಯು ದಟ್ಟವಾದ ಹುರಿಮೀಸೆಯನ್ನು […]

ರಾಷ್ಟ್ರೀಯವು ಪ್ರಾದೇಶಿಕವನ್ನು ಸೋಲಿಸಿದ ಬಗೆ

ರಾಷ್ಟ್ರೀಯವು ಪ್ರಾದೇಶಿಕವನ್ನು ಸೋಲಿಸಿದ ಬಗೆ

ಮಹಾರಾಷ್ಟ್ರದ ಸ್ಥಳೀಯಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯು ವಿಜಯಿಯಾಗಿರುವುದು ಪ್ರಾದೇಶಿಕ ಪಕ್ಷಗಳ ಬಲಹೀನತೆಯನ್ನು ಬಯಲುಗೊಳಿಸುತ್ತದೆ. ಮಹಾರಾಷ್ಟ್ರದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅನಿರೀಕ್ಷಿತ ಮತ್ತು ಅಸಾಧಾರಣ ಸಾಧನೆಯು, ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಹಿಡಿತ ಸಾಧಿಸಬೇಕೆಂದು ಬಯಸುವ ಇತರ ರಾಷ್ಟ್ರೀಯ ಪಕ್ಷಗಳಿಗೆ ಹಲವಾರು ಗುಣಪಾಠಗಳನ್ನು ಕಲಿಸಿಕೊಡುತ್ತದೆ. ಬಿಜೆಪಿಯು ಶಿವಸೇನಾದೊಂದಿಗಿನ ಮೈತ್ರಿಯ ಬೆನ್ನೇರಿಯೇ ಮಹಾರಾಷ್ಟ್ರದಲ್ಲಿ ಉದ್ದಗಲಕ್ಕೂ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಆ ಮೈತ್ರಿಯನ್ನು ಕಡಿದುಕೊಂಡರೂ ಶಿವಸೇನಾಗಿಂತ ಹೆಚ್ಚಿನ ಸಾಧನೆಯನ್ನೇ […]

ಹೀಗೇಕೆ ಯೋಚಿಸಬಾರದು ? ಹಿಂದಿರುಗಿ ನೋಡಿದಾಗ !

ಹೀಗೇಕೆ ಯೋಚಿಸಬಾರದು ? ಹಿಂದಿರುಗಿ ನೋಡಿದಾಗ !

70 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದ ಪುಟಗಳನ್ನು ಅವಲೋಕಿಸುವಾಗ ಎರಡು ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಬ್ರಿಟೀಷ್ ವಸಾಹತುಶಾಹಿಯಿಂದ ಬಿಡುಗಡೆ ಹೊಂದಿದ ನಂತರ ತನ್ನದೇ ಆದ ಪ್ರಜಾತಾಂತ್ರಿಕ ಗಣತಂತ್ರ ವ್ಯವಸ್ಥೆಯನ್ನು ರೂಪಿಸಿಕೊಂಡ ಭಾರತೀಯ ಪ್ರಭುತ್ವದ ಅಂತರಾಳ ಮತ್ತು ಆಂತರ್ಯದ ಧೋರಣೆಯನ್ನು ಗ್ರಹಿಸಲು ಇದು ಮುಖ್ಯವಾಗುತ್ತದೆ. ಮೊದಲನೆಯ ಅಂಶವೆಂದರೆ ಸ್ವತಂತ್ರ ಭಾರತದ ಪ್ರಭುತ್ವದ ಮೂಲ ಲಕ್ಷಣಗಳು ಸಾರ್ವಭೌಮ ಜನತೆಗೆ ಪ್ರಪ್ರಥಮ ಬಾರಿಗೆ ಪರಿಚಯವಾದದ್ದು 1948ರಲ್ಲಿ, ಶ್ರೀಕಾಕುಳಂ ದಂಗೆಯ ಸಂದರ್ಭದಲ್ಲಿ. ಪ್ರತಿರೋಧದ ದನಿಗಳನ್ನು ಅಡಗಿಸಲು, ಕ್ರಾಂತಿಯ ಕಿಡಿಗಳನ್ನು ದಮನಿಸಲು ಸ್ವತಂತ್ರ ಭಾರತದ […]

ಬರ ಎಂಬ ಎರಡಲಗಿನ ಕತ್ತಿ

ಬರ ಎಂಬ ಎರಡಲಗಿನ ಕತ್ತಿ

ಅಂದೊಮ್ಮೆ ಮಕ್ಕಳ ಮಾರಿ ರೊಟ್ಟಿ ತಿಂದಿದ್ದರಂತೆ. ಬಿದರಕ್ಕಿ ಗುಡಿಸಿ ಅನ್ನ ಮಾಡಿ ಉಂಡಿದ್ದರಂತೆ. ಕತ್ತಾಳೆ ಗಡ್ಡೆ ಬೇಯಿಸಿ ತಿಂದಿದ್ದರಂತೆ. ಒಂದು ಗುದ್ದಿನೊಳಗೆ ನಾಲ್ಕಾರು ಹೆಣಗಳನ್ನು ಹಾಕಿ ಮುಚ್ಚುತ್ತಿದ್ದರಂತೆ. ಹೀಗೆ ನನ್ನಜ್ಜ ಹೇಳುತ್ತಿದ್ದುದು ನೆನಪು. 1870ರ ಸಮಯ ದಕ್ಷಿಣ ಭಾರತದ ಬರದಲ್ಲಿ 5 ಮಿಲಿಯನ್ ಜನ ಸತ್ತ ಹಾಗೂ ಚೈನಾದಲ್ಲಿ 9 ಮಿಲಿಯನ್ ಜನ ಸತ್ತ ಕಾಲ ಅದೇ ಇರಬೇಕು. ಇದು ಆಗಾಗ್ಗೆ ಬರುತ್ತಿದ್ದ ಪ್ರಕೃತಿ ನಿರ್ಮಿತ ಬರದ ಚಕ್ರ. ಅಂದು ರೈತನ ಸಂತೆಗಳಲ್ಲಿ ಉಲ್ಲಾಸದ ಕೊಡುಕೊಳೆಯಿತ್ತು. ಪೇಟೆಯ […]

1 2 3 4