ಕಾಳಿಂಗ ಸರ್ಪವೆಂಬ ಮಹಾತಾಯಿ

ಕಾಳಿಂಗ ಸರ್ಪವೆಂಬ ಮಹಾತಾಯಿ

ಪೇರೆಂಟಲ್ ಕೇರ್ ಎಂಬುದು ಪ್ರಾಣಿ ಜಗತ್ತಿನಲ್ಲಿ ಬಹಳ ಕುತೂಹಲಕಾರಿಯಾದ ಹಾಗು ಅಷ್ಟೇ ಆಸಕ್ತಿಯನ್ನು ಹುಟ್ಟು ಹಾಕುವ ಒಂದು ಅಧ್ಯಯನವೆ ಸರಿ. ಬಹುತೇಕ ಎಲ್ಲ ಪ್ರಾಣಿಗಳು ತಮ್ಮ ಮಕ್ಕಳನ್ನು ಬಹಳ ಆಸ್ಥೆಯಿಂದ ಸಾಕಿ ಸಲಹುವುದನ್ನು ನಾವು ಕಂಡಿದ್ದೇವೆ. ಅದರಲ್ಲೂ ಸಸ್ತನಿಗಳಲ್ಲಿ ಸರ್ವೆಸಾಮಾನ್ಯವಾಗಿ ಕಂಡು ಬರುವ ಪೇರೆಂಟಲ್ ಕೇರ್ ಸಾಕಷ್ಟು ವಿಕಸನಗೊಂಡು ಉಚ್ಛ್ರಾಯ ಸ್ಥಿತಿಯನ್ನು ತಲುಪಿದೆಯೆಂದೆ ಹೇಳಬಹುದು. ಹಾಗೆಯೆ ಪಕ್ಷಿಗಳಲ್ಲಿಯೂ ಕೂಡ; ಕೋಗಿಲೆಯೊಂದನ್ನು ಹೊರತುಪಡಿಸಿ. ಇದನ್ನೆ ಆಧಾರವಾಗಿ ಇಟ್ಟುಕೊಂಡು ನಾವು ಕೋಗಿಲೆಯನ್ನು ಸೊಂಬೇರಿ ತಾಯಿ ಎನ್ನುತ್ತೇವಾದರು ಕೋಗಿಲೆಯೊಳಗೂ ಒಬ್ಭಳು ತಾಯಿಯಿದ್ದಾಳೆ. […]

‘ಮಣ್ಣಿಂದ ಮಣ್ಣಿಗೆ’

ಪುಟ್ಟ ತಲೆಯೊಂದೇ ಕಾಣುತ್ತಿದ್ದ ಅವಳನ್ನು ಅವರು ಕೆಸರಿನ ಗುಡ್ಡೆಯ ಮಧ್ಯದಲ್ಲಿ ದೂರದಿಂದ ಗಮನಿಸಿದರು. ಹನ್ನೆರಡು ವರುಷದ ಆ ಹಸುಳೆ, ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ, ಇಡೀ ನಾಡಿಗೆ ಎರಗಿದ ನಿಸರ್ಗದ ವಿಕೋಪಕ್ಕೆ ತುತ್ತಾಗಿದ್ದಳು. ತೆರೆದೇ ಇದ್ದ ಅವಳ ಬಟ್ಟಲ ಕಣ್ಣುಗಳೆರಡೂ ತುಂಬ ದೂರ ಕಾಣುತ್ತಿದ್ದವರನ್ನು ಸಹಾಯಕ್ಕಾಗಿ ಕರೆಯುತ್ತಿದ್ದಂತೆ ಭಾಸವಾಗುತ್ತಿದ್ದವು. ಆ ಪುಟ್ಟ ಹಸುಳೆಯನ್ನು ಆಕೆಯ ತಾಯ್ತಂದೆಗಳು ಅಂiÀhುಕೆನಾ ಎಂದು ಹೆಸರಿಸಿದ್ದರು. ಅವಳ ಸುತ್ತಲೂ ಇಂದು ನೋಡಿದಲ್ಲೆಲ್ಲಾ ನಾಡು ಸ್ಮಶಾನ ಸದೃಶವಾಗಿ ಗೋಚರಿಸುತ್ತಿತ್ತು. ಹೆಣಗಳ ರಾಶಿಯಿಂದ ಉದ್ಭವಿಸುತ್ತಿದ್ದ ವಾಸನೆ […]

ನೀತಿ ಆಯೋಗ : ನಿರಂಕುಶಾಧಿಕಾರದ ಹೊಸ ಅಸ್ತ್ರ

ನೀತಿ ಆಯೋಗ : ನಿರಂಕುಶಾಧಿಕಾರದ ಹೊಸ ಅಸ್ತ್ರ

ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ತಳಮಟ್ಟದಿಂದ ಮೇಲ್ಮಟ್ಟದವರೆಗೆ ಸಮಿತಿ, ಆಯೋಗಗಳನ್ನು ರಚಿಸುವುದರಲ್ಲಿ ನಿಸ್ಸೀಮರು. ಹಾಗೆ ರಚನೆಯಾದ ಸಂಸ್ಥೆಗಳ ಕಾರ್ಯವೈಖರಿ ಪ್ರಶ್ನಾರ್ಹ. ಯಾರ ಉದ್ದಾರಕ್ಕೆ ಇಂತಹ ಸಂಸ್ಥೆಗಳನ್ನು ರಚಿಸಲಾಗುವುದೋ? 1950ರಲ್ಲಿ ಸಂವಿಧಾನ ಬದ್ಧವಾಗಿ ಒಪ್ಪಿ ಜಾರಿಗೆ ತರಲಾದ “ಯೋಜನಾ ಆಯೋಗವನ್ನು ಇಂದಿನ ಪ್ರಧಾನಿಗಳು ಅದನ್ನು ಕಿತ್ತೊಗೆದು ಅಲ್ಲಿ ‘ನೀತಿ’ ಆಯೋಗವನ್ನು ಪ್ರತಿಷ್ಟಾಪಿಸಿದ್ದಾರೆ. ಭಾರತ ರಾಷ್ಟ್ರಿಯ ಪರಿವರ್ತನಾ ಸಂಸ್ಥೆ ಎಂಬುದು ಅದರ ಪೂರ್ಣ ಹೆಸರು. ಈ ನೀತಿ ಆಯೋಗದಲ್ಲಿ ಅತಿ ಬುದ್ಧಿವಂತರ ಸಮೂಹವೊಂದಿದೆ. ಅದು ಪ್ರಧಾನಿಯ ತಾಳಕ್ಕೆ ತಕ್ಕಂತೆ ಕುಣಿಯಬೇಕು. […]

1 97 98 99