ರಂಗಕಥನ : ಮುರಗೋಡ ಗಂಗಾಧರಪ್ಪ

ರಂಗಕಥನ : ಮುರಗೋಡ ಗಂಗಾಧರಪ್ಪ

ಮುರಗೋಡ ಗಂಗಾಧರಪ್ಪ ಉತ್ತರ ಕರ್ನಾಟಕದ ರಂಗಸಂಗೀತವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹಾಡಿ ರಂಗಗೀತೆಗಳಿಗೆ ಹೊಸಜೀವ ಕೊಟ್ಟವರಲ್ಲಿ ಗಾಯಕನಟ ಮುರಗೋಡ ಗಂಗಾಧರಪ್ಪನವರು (1874-1949)ಮುಖ್ಯರು. ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಜನಿಸಿದರು. ಅವರು ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿದÀರೂ ಬಣ್ಣದ ಗೀಳು ಹಚ್ಚಿಕೊಂಡಿದ್ದರು. ಊರಿನಲ್ಲಿ ಆಡುತ್ತಿದ್ದ ನಾಟಕಗಳಲ್ಲಿ ಸಣ್ಣ ಪುಟ್ಟ ಪಾರ್ಟನ್ನು ಹಾಕುತ್ತಿದ್ದರು. ಹೀಗಾಗಿ ಚಿಕ್ಕಂದಿನಲ್ಲೇ ಅಭಿನಯಿಸುವ ಗುಣ ಅವರಲ್ಲಿ ಬಂದಿತ್ತು. ಅವರ ಹಾಡುಗಳನ್ನು ಕೇಳಿದ ಊರಿನ ಜನರು ಅವರು ದೊಡ್ಡ ಗಾಯಕರಾಗುವ ಬಗ್ಗೆ ಭರವಸೆ ಇಟ್ಟು, […]

ರಂಗಕಥನ : ನೀಲಕಂಠಬುವಾ ಗಾಡಗೋಳಿ (Neelakantabuvaa gaadagoli)

ರಂಗಕಥನ : ನೀಲಕಂಠಬುವಾ ಗಾಡಗೋಳಿ (Neelakantabuvaa gaadagoli)

ನೀಲಕಂಠ ಬುವಾ ಗಾಡಗೋಳಿಯವರು(1860-1959) ಸವಾಯಿ ಗಂಧರ್ವರ ಹಿರಿಯ ಪ್ರಥಮ ಶ್ರೇಣಿಯ ಶಿಷ್ಯವರ್ಗದವರಲ್ಲಿ ಒಬ್ಬರು. ಅವರು ಹೊಳೆ ಆಲೂರಿನ ಹಿರೇಮಠದ ಶ್ರೀ ದಾನಯ್ಯ ಮತ್ತು ಮಹಾಲಿಂಗವ್ವನರ ಎರಡನೇ ಮಗನಾಗಿ ಜನಿಸಿದರು. ಹೆತ್ತವರನ್ನು ಕಳೆದುಕೊಂಡ ನೀಲಕಂಠಯ್ಯ, ಹಿರಿಯಣ್ಣ ಶಂಭಯ್ಯನ ಆಸರೆಯಲ್ಲಿ ಬೆಳೆದು ದೊಡ್ಡವರಾದರು. ತಮ್ಮ ವಿದ್ಯಾವಂತನಾಗಬೇಕೆಂಬ ಹಂಬಲ ಶಂಭಯ್ಯನವರಿಗಿತ್ತು. ಬಾಲ್ಯದಿಂದಲೇ ನೀಲಕಂಠಯ್ಯನವರಿಗೆ ಸಂಗೀತದಲ್ಲಿ ಒಲವಿತ್ತು. ಅವರು ಬಡತನದಲ್ಲಿಯೂ ಸಂಗೀತವನ್ನು ಅತ್ಯಂತ ಪರಿಶ್ರಮದಿಂದ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿದರು. ಅದಕ್ಕಾಗಿ ತಮ್ಮ ಇಡೀ ಬಾಳನ್ನು ಸಂಗೀತಕ್ಕೆ ಅರ್ಪಿಸಿಕೊಂಡರು. ನೀಲಕಂಠಯ್ಯನವರು ಅಬ್ದುಲ್ ಕರೀಂಖಾನರ […]

ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು

ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು

    ಅರಿeóÉೂೀನ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರಿಚರ್ಡ್ ಎಂ. ಈಟನ್ ಅವರು ಅಕ್ಟೋಬರ್ 13, 1999 ರಂದು ಔxಜಿoಡಿಜ ಅeಟಿಣಡಿe ಜಿoಡಿ Isಟಚಿmiಛಿ Sಣuಜies ನಲ್ಲಿ ನೀಡಿದ ಉಪನ್ಯಾಸವೊಂದರ ಪೂರ್ಣ ಪಾಠ. ಅನು: ಸುರೇಶ ಭಟ್, ಬಾಕ್ರಬೈಲ್ ಲಡಾಯಿ ಪ್ರಕಾಶನ, ಗದಗ ಇವರು ಇದನ್ನು ಪುಸ್ತಕವಾಗಿ ಹೊರತಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ತರುವಾಯ ಬಹಳಷ್ಟು ಸಾರ್ವಜನಿಕ ಚರ್ಚೆಗಳು ಹುಟ್ಟಿಕೊಂಡಿವೆ. ಅವೆಲ್ಲವುಗಳ ಪ್ರಧಾನ ವಿಷಯವಾಗಿರುವುದು ದಕ್ಷಿಣ ಏಷಿಯಾದ ಮಂದಿರ, ಮಸೀದಿಗಳ […]

ಕರ್ನಾಟಕ ಭಿತ್ತಿಚಿತ್ರಕಲೆಯ ಪಾರಂಪರಿಕ ನೆಲೆಗಳು: ಐಹೊಳೆಯ ಭಿತ್ತಿಚಿತ್ರಗಳು

ಕರ್ನಾಟಕ ಭಿತ್ತಿಚಿತ್ರಕಲೆಯ ಪಾರಂಪರಿಕ ನೆಲೆಗಳು: ಐಹೊಳೆಯ ಭಿತ್ತಿಚಿತ್ರಗಳು

ಒಂದು ಕಾಲದಲ್ಲಿ ಚಾಲುಕ್ಯರ ಪ್ರಾರಂಭದ ರಾಜಧಾನಿಯಾಗಿದ್ದ ಐಹೊಳೆಯು ಇಂದು ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲ್ಲೂಕಿನ ಒಂದು ಕುಗ್ರಾಮವಾಗಿದೆ. ಇದು ಬೆಂಗಳೂರಿನಿಂದ 483 ಕಿ.ಮೀ., ಬಾದಾಮಿಯಿಂದ 46 ಕಿ.ಮೀ. ಮತ್ತು ಪಟ್ಟದಕಲ್ಲಿನಿಂದ 17 ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ನಿಂತು ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ದೇಗುಲಗಳೇ ಕಾಣುತ್ತವೆ. ನೂರಕ್ಕೂ ಹೆಚ್ಚಿನ ದೇಗುಲಗಳು ಇಲ್ಲಿವೆ. ಇಡೀ ಭಾರತದಲ್ಲಿ ಇಲ್ಲಿ ಕಂಡು ಬರುವಷ್ಟು ವಿಭಿನ್ನ ಶೈಲಿ ಮತ್ತು ವಿಭಿನ್ನ ತಳವಿನ್ಯಾಸ ಹೊಂದಿದ ಚಾಲುಕ್ಯ ದೇವಾಲಯಗಳು ಮತ್ತೆಲ್ಲೂ ಕಂಡು ಬರುವುದಿಲ್ಲ. ಆದ್ದರಿಂದಲೇ ಐಹೊಳೆಯನ್ನು […]

ಬದಲಾಗುತ್ತಿರುವ ಕರ್ನಾಟಕ

ಬದಲಾಗುತ್ತಿರುವ ಕರ್ನಾಟಕ

ತೊಂಬತ್ತರ ನಂತರ ಕರ್ನಾಟಕದ ಅರ್ಥ, ಸಮಾಜ, ಸಂಸ್ಕೃತಿ, ರಾಜಕೀಯಗಳಲ್ಲಿ ಆಗುತ್ತಿರುವ ಬದಲಾವಣೆಗಳ ಒಂದು ಕಿರು ಚಿತ್ರಣ ನೀಡುವ ಉದ್ದೇಶ ಈ ಪುಸ್ತಕದ್ದು. ತೊಂಬತ್ತರವರೆಗೆ ನಮ್ಮ ಅಭಿವೃದ್ಧಿ ನೀತಿಗಳು ಸೋಶಿಯಲಿಸ್ಟ್ ಗುಣಗಳನ್ನು ಅರೆಬರೆಯಾಗಿ ಬಿಂಬಿಸುತ್ತಿದ್ದವು. ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ಸಾರಿಗೆ ರಾಷ್ಟ್ರೀಕರಣ, ಉಚಿತ ಶಿಕ್ಷಣ, ಆರೋಗ್ಯ ಹೀಗೆ ಹಲವು ಸೋಶಿಯಲಿಸ್ಟ್ ಅಭಿವೃದ್ಧಿ ನೀತಿಗಳನ್ನು ಸರಕಾರ ಜಾರಿಗೆ ತಂದಿದೆ. ಆದರೆ ತೊಂಬತ್ತರ ನಂತರ ಸೋಶಿಯಲಿಸ್ಟ್ ಅಭಿವೃದ್ಧಿಗೆ ವಿರುದ್ಧ ನೀತಿಗಳನ್ನು ಸರಕಾರ ಜಾರಿಗೆ ತರುತ್ತಿದೆ. ಉಳುವವನೇ ಹೊಲದೊಡೆಯ ಎನ್ನುವ ಭೂಸುಧಾರಣ ಮಸೂದೆಗೆ […]

ಸೂತಕಕೆ ಕಲ್ಲಾದವಳು.

ಸೂತಕಕೆ ಕಲ್ಲಾದವಳು.

ಇದೊಂದು ಎಲ್ಲರಿಗೂ ಅರ್ಥವಾಗುವ ತೀರಾ ಸಣ್ಣ ಕಥೆ. ಇದನ್ನು ಕಥೆ ಎನ್ನುವುದೂ ತಪ್ಪಾಗುತ್ತದೆ ಎನಿಸುತ್ತದೆ. ಎಲ್ಲಾ ಮನೆಗಳಲ್ಲಿ ಬಹುತೇಕವಾಗಿ ಎಲ್ಲಾ ಮಹಿಳೆಯರೂ ಅನುಭವಿಸುವ ಯಾತನೆಯ ವ್ಯಥೆಯ ಕಥೆ ಎಂದರೆ ಬಹುಶಃ ಸರಿ ಹೊಂದುತ್ತದೆ . ಇಂತಹ ಸಮಸ್ಯೆಯನ್ನು ಆದಿಮ ಕಾಲದ ` ಮಿಥ್’ ‘ ಗಳಿಂದ ಹಿಡಿದು ಆಧುನಿಕ ` ಫ್ಯಾಷನ್ ` ಕಾಲದ ಅನೇಕ ಘಟನೆಗಳು ಇಂತÀಹ ಕಥೆಗಳನ್ನು ಕಥಿಸುತ್ತವೆ . ಆದರೆ ಇದು ಹಟ್ಟಿ ಸಂಪ್ರದಾಯಗಳಲ್ಲಿ ಅಲಿಖಿತವಾದ ಆಚರಣೆಯಾಗಿ ರೂಢಿಗತವೆನಿಸುವಷ್ಟು ಸಹಜವಾಗಿದೆ ಈ ಕಥೆ […]

ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಾಮಾನಾ

ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಾಮಾನಾ

ಈಚೆಗೆ ರೈತ ಆತ್ಮಹತ್ಯೆಗಳು ದಿನದಿನದ ಸಂಕಟಗಳಾಗಿ ಸುದ್ದಿಯಾಗುತ್ತಿವೆ. ಈ ಸಾವುಗಳ ಕಾರಣಗಳು ಚರ್ಚೆಯಾಗುತ್ತಿವೆ. ಹೊರಗಿನ ವಿದ್ವಾಂಸರಾಗಿಯೋ, ಚಳವಳಿಯ ಕಾರ್ಯಕರ್ತರಾಗಿಯೋ, ಸರಕಾರಿ ಅಧಿಕಾರಿಗಳಾಗಿಯೋ ಕೆಲವು ಕಾರಣಗಳನ್ನು ಹುಡುಕಿದಾಗಲೂ, ಕೆಲವು ಸ್ಥಳೀಯ ಕಾರಣಗಳು ನಮಗೆ ತಿಳಿಯುವುದೆ ಇಲ್ಲ. ಅವು ಕಪ್ಪೆಚಿಪ್ಪಿನಲ್ಲಿ ಅವಿತಿಟ್ಟಂತೆ ಕೂತಿರುತ್ತವೆ. ಇಂತಹ ಕೆಲವು ಸಮಸ್ಯೆಗಳು ಆಯಾ ಭಾಗದ ಮೌಖಿಕ ರಚನೆಗಳಲ್ಲಿ, ಮಾತುಕತೆಗಳಲ್ಲಿ ವ್ಯಕ್ತವಾಗುವ ಸಾಧ್ಯತೆ ಇರುತ್ತವೆ. ಇವುಗಳನ್ನು ಸಂಗ್ರಹಿಸಿಯೋ ಅಥವಾ ಆಯಾ ಹಾಡುಗಾರಿಕೆ ಮಾತುಕತೆಯ ಸಂದರ್ಭದಲ್ಲಿ ಹಾಜರಿದ್ದು ಕೇಳಿಸಿಕೊಂಡಾಗ ಇಂತವುಗಳು ಅರಿವಿಗೆ ಬರುತ್ತವೆ. ಮೊಹರಂ ಅಧ್ಯಯನದ ಸಂದರ್ಭದಲ್ಲಿ […]

ಉದ್ಯೋಗ ಖಾತ್ರಿ ಕತೆ-1: ಹಾಳಾದ ಉದ್ಯೋಗ ಖಾತ್ರಿ ಕೆಲ್ಸಕ್ಕೆ ಹೋಗಿ ಕೋರ್ಟಿಗೆ ತಿರುಗ್ಯಾಡದು ಬಂದಾದ

ಗ್ರಾಮೀಣ ಪ್ರದೇಶದಲ್ಲಿ ಕೆಲಸವಿಲ್ಲದವರಿಗೆ ಕೆಲಸ ನೀಡಲು ಕೇಂದ್ರ ಸರಕಾರ ಆರಂಭಿಸಿದ ಉದ್ಯೋಗ ಖಾತ್ರಿ ಯೋಜನೆ ರಾಜಕಾರಣಿಗಳ, ಅಧಿಕಾರಶಾಹಿಗಳ ಅಸೂಕ್ಷ್ಮ ಧೋರಣೆಯಿಂದಾಗಿ ಹಳ್ಳ ಹಿಡಿದಿರುವುದು ಎಲ್ಲರಿಗೂ ತಿಳಿದಿದೆ. ಈ ಬಗೆಗೆ ಅಧ್ಯಯನ ಕೈಗೊಂಡ ಭೀಮೇಶ್ ಮಾಚಕನಹಳ್ಳಿಯವರು ಈ ಬಗೆಗೆ ಜನರನ್ನು ಸಂದರ್ಶಿಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇವು ನಮ್ಮ ವ್ಯವಸ್ಥೆಯ ಕೆಟ್ಟ ಮನಸ್ಥಿಯನ್ನು ತೆರೆದಿಡುತ್ತವೆ. ಇವು ಜನರ ಕಣ್ಣೋಟಗಳಂತಿದ್ದು ಸರಣಿಯಾಗಿ ಕೆಲವು ಕಾಲ ಇಲ್ಲಿ ಬಿತ್ತರಗೊಳ್ಳಲಿವೆ. ಹಾಳಾದ ಉದ್ಯೋಗ ಖಾತ್ರಿ ಕೆಲ್ಸಕ್ಕೆ ಹೋಗಿ ಕೋರ್ಟಿಗೆ ತಿರುಗ್ಯಾಡದು ಬಂದಾದ ತಾಹಿರಾ ಬೇಗಂ, […]

ದೇವರ ಬಂಡಾಯ: ಗುಳೆಹೊರಟ ಲಿಂಗಗಳು

ದೇವರ ಬಂಡಾಯ: ಗುಳೆಹೊರಟ ಲಿಂಗಗಳು

ನಮಗೆಲ್ಲ ತಿಳಿದಿರುವಂತೆ ಹರಿಹರನಿಗೆ ಭಕ್ತಕವಿ, ಕ್ರಾಂತಿಕವಿ ಇತ್ಯಾದಿ ಗುರುತುಗಳಿವೆ. ಆದರೆ ಇವೆಲ್ಲವನ್ನೂ ಮೀರಿ ಆತನಲ್ಲಿರುವ ಸ್ಥಳೀಯತೆ, ದಕ್ಷಿಣಪ್ರಜ್ಞೆಯಿಂದ ಕೂಡಿದ ಉತ್ತರ ಹಾಗೂ ವೈದಿಕ ವಿರೋಧದ ಖಚಿತ ಛಾಯೆಗಳು ನಮಗೆ ಹೆಚ್ಚು ಮುಖ್ಯವಾಗುತ್ತವೆ. ಇಷ್ಟೇ ಅಲ್ಲದೆ, ಸ್ಥಾವರ ವ್ಯವಸ್ಥೆಯ ಉದ್ದೀಪಕನೆಂಬಂತೆ ಗುರುತಿಸಲಾಗುವ ಈ ಕವಿಯಲ್ಲಿ ಸ್ಥಾವರ ಪಲ್ಲಟದ ದಟ್ಟ ಛಾಯೆಯೂ ಆತನಲ್ಲಿ ಮತ್ತೆ ಮತ್ತೆ ಪ್ರಕಟಗೊಂಡಿದೆ. ಸಂಕೇತಗಳ ವೈಭವೀಕರಣದ ನಡುವೆಯೇ ಕುರುಹುಗಳ ಭಗ್ನತೆಯೂ ಸಾಧಿತವಾಗಿದೆ. ದುಂಬಿ ಎಂಜಲಿಸದ ಮಡಿ ಹೂವನ್ನು ಹೂಬನದಲ್ಲಿ ಅರಸುವ ಕವಿಯೇ, ಸುಟ್ಟ ಮಾಂಸವನ್ನೇ ಶಿವನಿಗೆ […]

ಸ್ವಾತಂತ್ರ್ಯ

ಸ್ವಾತಂತ್ರ್ಯ

                ಸ್ವಾತಂತ್ರ್ಯ ಗೆಳೆಯರೆ, ಯಾರು ತಾನೇ ಜಂಬಕೊಚ್ಚಿಕೊಳ್ಳಬಲ್ಲರು ಪಿತ್ರಾರ್ಜಿತವಾಗಿ ತಾನು ಧೈರ್ಯ ಸ್ವಾತಂತ್ರ್ಯಗಳ ಪಡೆದೆನೆಂದು? ಒಬ್ಬನೇ ಒಬ್ಬ ಗುಲಾಮ ನೆಲದ ಮೇಲುಸಿರಾಡಿದರೂನು ಹೇಳಬಹುದೇ ನೀನು ದಿಟ್ಟ, ಸ್ವತಂತ್ರನೆಂದು? ಸೋದರರ ಬಂಧಿಸಿ, ಗಾಯಗೊಳಿಸುವ ಕೋಳ ನೀ ಊಹಿಸಿಕೊಳಲಾರದೇ ಇರುವಾಗ ಗುಲಾಮರ ಹೀನಗೊಳಿಸಿದವ ಬಿಡುಗಡೆಗೆ ಅನರ್ಹಗೊಳಿಸಿದವ ನೀನೇ ಆದಂತಲ್ಲವೆ? ನಿಜವಾದ ಸ್ವಾತಂತ್ರ್ಯ ಯಾವುದು? ನಮ್ಮವರ ಬೇಡಿಯ ಕಡಿದೊಗೆಯುವುದು. ಕೋಮಲ, ಮಿಡಿವ ಹೃದಯವಿರುವ ನೀನು ಮನುಕುಲದ ಋಣವ ಮರೆಯಬಾರದು. ಕೇಳು, ಸ್ವಾತಂತ್ರ್ಯವೆಂದರೆ […]