ಯುಗಾದಿಗೆ ರಂಗೇರುವ ಆಟಗಳು

ಯುಗಾದಿಗೆ ರಂಗೇರುವ ಆಟಗಳು

ಗ್ರಾಮೀಣ ಭಾಗದ ಯುಗಾದಿಯನ್ನು ನೆನಪಿಸಿಕೊಂಡಾಗ ಅದರ ಮೈಗೆ ಕೆಲವಾದರೂ ಜನಪದ ಆಟಗಳು ಅಂಟಿಕೊಳ್ಳುತ್ತವೆ. ಹಾಗೆ ಅಂಟಿಕೊಂಡ ಆಟಗಳನ್ನು ಬಿಡಿಸಿ ನೋಡತೊಡಗಿದರೆ ಆ ಆಟಗಳ ಝಲಕ್ಕು ರೋಮಾಂಚನಗೊಳಿಸುತ್ತದೆ. ಈಗಲೂ ಗ್ರಾಮೀಣ ಭಾಗದ ಯುಗಾದಿಗೆ ಅಂತಹ ಆಟಗಳು ರಂಗೇರುತ್ತವೆ. ದಶಕದ ಹಿಂದೆ ಸರಿದರೆ ಈ ಅಬ್ಬರ ಕೆಲ ಪ್ರದೇಶಗಳಲ್ಲಿ ಮಂಕಾದರೂ, ಮತ್ತೆ ಕೆಲವು ಪ್ರದೇಶಗಳಲ್ಲಿ ಹೊಸ ಚಲನೆ ಪಡೆದಿವೆ. ಅಂತಹ ಆಟಗಳ ಮೈದಡವಿ ಮಾತನಾಡಿಸಿದರೆ, ಅವುಗಳು ತಮ್ಮ ಇರುವಿಕೆಯನ್ನು ಪಿಸುಮಾತಲ್ಲಿ ಹೇಳಬಲ್ಲವು. ನಾವು ಕಿವಿತೆರೆದು ಕೇಳಬೇಕಷ್ಟೆ. ಪ್ರತಿ ಹಬ್ಬಗಳಲ್ಲಿ ಮೈದಳೆವ […]

ಮಲೆನಾಡಿಗೆ ಕೋಗಿಲೆಗಳು ಬಂದವು!

ಮಲೆನಾಡಿಗೆ ಕೋಗಿಲೆಗಳು ಬಂದವು!

  ಈ ವರ್ಷ ಯಾರಾದ್ರ್ರು ಎದ್ರಿಗೆ ಸಿಕ್ರೆ ‘ಈ ವರ್ಷದ ಮಳೆ ಕತೆ ಎಂತದು ಮರಾಯ್ರೆ’ ಎಂದೇ ಮಾತು ಶುರು ಮಾಡ್ತಾರೆ. ಯಾಕಂದ್ರೆ, ಒಂದಿಷ್ಟು ದಿನ ಹುಯ್ತದೆ, ಮತ್ತೆ ಹಳು ಆಗ್ತಿದೆ. ಯಾವ ಮಳೆ ಏನ್ ಮಾಡುತ್ತೆ ಅಂತ ಹೇಳಕ್ಕಾಗೊಲ್ಲ. ಲೆಕ್ಕಚಾರ ಹಾಕಿ ಹೇಳೊದಾದ್ರೆ ಒಂದಿಷ್ಟು ಮಳೆ ಕಡಿಮೆ ಆಗಿರಬಹುದು. ಮಲೆನಾಡು ಜನಕ್ಕೆ ಹಿಂಗೆ ಬಿಡಿಬಿಡಿಯಾಗಿ ಮಳೆ ಬಂದ್ರೆನೇ ಒಳ್ಳೇದು. ಜಲ ಏಳೊಲ್ಲ, ಅಂತ ಬಿಟ್ರೆ, ನೀರು ಕಡಿಮೆ ಆತು ಅಂತೇನೂ ಆಗೊಲ್ಲ. ಆದ್ರೆ ಇಲ್ಲಿ ಮಳೆ […]

ಸಂತಶಿಶುನಾಳ ಶರೀಫ- ಕೂಡುಬಾಳುವೆಯ ಸಾಂಸ್ಕೃತಿಕ ನೆಲೆಗಳ ಹುಡುಕಾಟ

ಸಂತಶಿಶುನಾಳ ಶರೀಫ- ಕೂಡುಬಾಳುವೆಯ ಸಾಂಸ್ಕೃತಿಕ ನೆಲೆಗಳ ಹುಡುಕಾಟ

ಕಳೆದ ಮೂರು ದಶಕಗಳಲ್ಲಿ ಭಾರತದ ಅಧಿಕಾರ ರಾಜಕಾರಣ ತುಳಿದ ಹಾದಿಯು ಹಲವು ಸವಾಲುಗಳನ್ನು ತಂದೊಡ್ಡಿದೆ. ಅದರಲ್ಲಿ ಪ್ರಮುಖವಾದ ಎರಡು ಬಿಕ್ಕಟ್ಟುಗಳಿವೆ. ಒಂದು ಜಾಗತೀಕರಣ. ಎರಡು ಹಿಂದೂಕೋಮುವಾದ. ಬಂಡವಾಳಶಾಹಿಗಳಿಗೆ ಜಾಗತೀಕರಣ ದೇಶಾತೀತ ಅವಕಾಶಗಳನ್ನು ಸೃಶ್ಟಿಸಿಕೊಡುವ ಒಂದು ಸಾಧ್ಯತೆಯಾಗಿ ಕಾಣುತ್ತದೆ. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ವಿವಿಧ ಜನಸಮುದಾಯಗಳಿಗೆ, ಒಂದು ವ್ಯವಸ್ಥಿತ ಸಂಚಿನ ದಾಳಿಯಾಗಿ ಕಾಣುತ್ತದೆ. ಈಗಾಗಲೇ ಇದರ ಸುತ್ತ ತೀವ್ರವಾದ ಚರ್ಚೆಗಳು ನಡೆದಿವೆ. ಇದು ಒಂದು ಬಗೆಯ ಸಂಘಶರ್Àಮಯ ವಾತಾವರಣ ಸೃಶ್ಟಿಗೂ ಕಾರಣವಾಗಿದೆ. ಬಂಡವಾಳಶಾಹಿ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಆರಂಭವಾದ […]

ರಸವಿದ್ಯೆ –Alchemist

ರಸಾಯನ ಶಾಸ್ತ್ರದ ಇತಿಹಾಸದಲ್ಲಿ ಮೊದಲ ಘಟ್ಟ ರಸವಿದ್ಯೆ (Alchemist). ಇದು ಗ್ರೀಕ್ ತತ್ವಶಾಸ್ತ್ರದ ಪೌರ್ವಾತ್ಯ ಕರಕುಶಲತೆ ಮತ್ತು ಧಾರ್ಮಿಕ ಹಾಗೂ ಆಧ್ಯಾತ್ಮಿಕ ರಹಸ್ಯಗಳನ್ನೊಳಗೊಂಡ ವಿಷಯವಾಗಿದೆ. ರಸವಿದ್ಯೆಯ ಗುಣಲಕ್ಷಣಗಳನ್ನು ವರ್ಣಿಸಬಲ್ಲ ಸಾರಶಬ್ದ ಪರಿವರ್ತನೆ. ಕಬ್ಬಿಣವನ್ನು ಚನ್ನವಾಗಿ ಪರಿವರ್ತಿಸುವುದು ರಸವಿದ್ಯೆಯ ಎದ್ದುಕಾಣುವ ಪರಿವರ್ತನೆಯಾದರೂ, ಅನಾರೋಗ್ಯದಿಂದ ಆರೋಗ್ಯ, ಮುಪ್ಪಿನಿಂದ ಯೌವನ, ಮೃತ್ಯುವಿನಿಂದ ಅಮರತ್ವ ಗಳಿಸುವ ಆಕಾಂಕ್ಷೆಗಳಿಗೆ ಸಹ ಇದು ಅನ್ವಯಿಸುತ್ತದೆ. ರಸವಿದ್ಯೆಗಿಂತ ಮೊದಲೇ, ಧರ್ಮ, ವೈದ್ಯಕೀಯ ಮತ್ತು ಲೋಹಶಾಸ್ತ್ರ ಈ ಪರಿವರ್ತನೆಯನ್ನು ಗುರಿಯಾಗಿಟ್ಟುಕೊಂಡಿದ್ದವು. ಸಂದೇಹಾಸ್ಪದ ಒಂದೊ, ಎರಡೊ, ಮೂರೊ ಇತ್ಯಾದಿ ವಸ್ತುಗಳ […]

ತೃತೀಯ ಜಗತ್ತಿನ ಮಹಿಳಾ ಆರ್ಥಿಕತೆ: ಸಿದ್ಧಮಾದರಿಗಳಾಚೆಗಿನ ನಡೆಗಳು…?

ತೃತೀಯ ಜಗತ್ತಿನ ಮಹಿಳಾ ಆರ್ಥಿಕತೆ: ಸಿದ್ಧಮಾದರಿಗಳಾಚೆಗಿನ ನಡೆಗಳು…?

‘ಸಂವಾದ’ ಮಾಸ ಪತ್ರಿಕೆಯಲ್ಲಿ ಇತ್ತೀಚೆಗೆ ‘ಸಿದ್ಧಮಾದರಿಗಳಾಚೆ’ ಎನ್ನುವ ಸರಣಿ ಲೇಖನಗಳು ಪ್ರಕಟಗೊಳ್ಳುತ್ತಿವೆ. ಅವುಗಳ ಭಾಗವಾಗಿಯೇ ಮೇಲಿನ ವಿಷಯವನ್ನೂ ಸಹ ಚರ್ಚೆಗೆ ಇಲ್ಲಿ ಪ್ರಯತ್ನಿಸಲಾಗಿದೆ. ಈ ವಿಷಯದ ಕುರಿತಂತೆ ಎದುರಿಗಿರುವ ಸವಾಲುಗಳು ಹೀಗಿವೆ: ಒಂದು – ಸಿದ್ಧಮಾದರಿಗಳು ಎನ್ನುವುದು ನಂಬಿಕೆಗಳಾಗುವುದರ ಕುರಿತು…., ಎರಡು, ‘ತೃತೀಯ ಜಗತ್ತು’ ಎನ್ನುವುದರ ಇರುವಿಕೆ/ಸಿದ್ದಗೊಳಿಸಿರುವಿಕೆಯ ಕುರಿತು…, ಮತ್ತು ಮೂರು – ಇಂದು ಮಹಿಳಾ ಹೋರಾಟಗಳು ಮತ್ತು ಅವರ ದುಡಿಮೆ ಬಂಡವಾಳಶಾಹಿಯ ಕೈಯಲ್ಲಿ ‘ಹೆಣ್ಣಾಗಿಸುವಿಕೆ’ಯ ಪ್ರಕ್ರಿಯೆಗೆ ಸಿಲುಕಿರುವ ಕುರಿತು…. ಈ ಮೂರು ಸಂಗತಿಗಳನ್ನು ಚರ್ಚಿಸುವಾಗ ಅನೇಕ […]

ಚೀನಾ ಪ್ರವಾಸ (ಪ್ಯುಲಾಂಗ್) – ಭಾಗ-1

ಚೀನಾ ಪ್ರವಾಸ (ಪ್ಯುಲಾಂಗ್) – ಭಾಗ-1

ಏಷ್ಯಾದ ದೇಶಗಳಲ್ಲಿ ಚೀನಾ ಅತ್ಯಂತ ಪ್ರಗತಿ ಪಥದಲ್ಲಿ ಸಾಗುತ್ತಿರುವ ದೇಶ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆಯೇ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶ ವಿಶ್ವದ ಗಮನವನ್ನು ತನ್ನತ್ತ ಸೆಳೆಯುತ್ತಿರುವ ಈ ದೇಶವನ್ನು ನೋಡುವ ಆಸೆ ಎಲ್ಲರಂತೆ ನನಗೂ ಇತ್ತು. ನನ್ನ ಕಿರಿಯ ಮಗಳು ನಂದನ ಅವಳ ಪತಿ ಶಿವಕುಮಾರ್ ಉತ್ತರ ಚೀನಾದ ಯಾಂಥಾಯ್ ಎನ್ನುವ ಊರಿನಲ್ಲಿರುವುದರಿಂದ ನನಗೆ ಚೀನಾಕ್ಕೆ ಹೋಗುವ ಸದವಕಾಶ ಕಲ್ಪಿತವಾಯಿತು. ಯಾಂಥಾಯ್ ಚೀನಾದ ಉತ್ತರ ಭಾಗದಲ್ಲಿರುವ ಒಂದು ಪಟ್ಟಣ. ಬೀಜಿಂಗ್ ನಿಂದ ವಿಮಾನದಲ್ಲಿ ಒಂದು […]

ಹಡಪದ್ ಮಾಸ್ತರು -ಸಜ್ಜನಿಕೆಗೆ ಮತ್ತೊಂದು ಹೆಸರು

ಹಡಪದ್ ಮಾಸ್ತರು -ಸಜ್ಜನಿಕೆಗೆ ಮತ್ತೊಂದು ಹೆಸರು

ಬೆಂಗಳೂರಿನ ಸಾಂಸ್ಕೃತಿಕ ರಂಗದಲ್ಲಿ ದೃಶ್ಯ ಕಲೆಯ ಕಾಣಿಕೆ ದೊಡ್ಡದು. ಇಂತಹ ದೃಶ್ಯ ಕಲೆಯ ಬೆಳವಣಿಗೆಗೆ ಮುಖ್ಯವಾಗಿ ಮೂರು ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ವಿಶೇಷತೆಗಳಿಂದ ಕಲಾಕ್ಷೇತ್ರಕ್ಕೆ ಕೊಡುಗೆಯನ್ನು ನೀಡುತ್ತಿವೆ. ಒಂದು ಅ. ನ ಸುಬ್ಬರಾಯರ ಕಲಾಮಂದಿರ. ಎರಡು, ನಂಜುಂಡ ರಾವ್ ರವರ ಕರ್ನಾಟಕ ಚಿತ್ರಕಲಾ ಪರಿಷತ್. ಮೂರನೆಯದಾಗಿ, ಶೇಷಾದ್ರಿಪುರಂನಲ್ಲಿರುವ “ಕೆನ್ ಸ್ಕೂಲ್ ಆಫ್ ಆರ್ಟ್ಸ್“ ಎಂಬ ಹೆಸರಿನಲ್ಲೇ ನಾವಿನ್ಯತೆ ಹೊಂದಿರುವ ಈ ಕಲಾ ಸ್ಥಾವರವನ್ನು ಸ್ಥಾಪಿಸಿ ಬೆಳಸಿದವರು ನಾಡೋಜ ಆರ್. ಎಂ ಹಡಪದ್ (ರುದ್ರಪ್ಪ ಮುನಿಯಪ್ಪ ಹಡಪದ್) […]

ಸಿನಿಮಾ ಓದು-1 : ನಂದಲಾಲ- ಹೃದಯಕ್ಕೆ ಲಗ್ಗೆಯಿಡುವ ಚಿತ್ರ

ಸಿನಿಮಾ ಓದು-1 : ನಂದಲಾಲ- ಹೃದಯಕ್ಕೆ ಲಗ್ಗೆಯಿಡುವ ಚಿತ್ರ

 ಕೆಲವು ಸಿನೆಮಾಗಳು ಮನಸ್ಸನ್ನು ಆವರಿಸಿಕೊಂಡು ನಿಧಾನವಾಗಿ ಕೊರೆಯುತ್ತವೆ. ಹೃದಯವನ್ನು ಕಲಕುತ್ತವೆ. ಬಹುಕಾಲ ನೆನಪಿನಲ್ಲಿದ್ದು ಕನಸಿನಲ್ಲೂ ಬಂದು ಕಾಡುತ್ತವೆ. ಯಾವತ್ತೊ ನೋಡಿದ ಒಂದು ಒಳ್ಳೆಯ ಸಿನೆಮಾ ಮತ್ತೆ ಮತ್ತೆ ನೋಡುವಂತೆ ನಮ್ಮನ್ನು ಸೆಳೆಯಬೇಕು. ಹಾಗೆ ನೋಡಿದಾಗಲೆಲ್ಲ ಅದು ಒಂದು ಶ್ರೇಷ್ಠ ಸಾಹಿತ್ಯ ಕೃತಿಯಂತೆ ಹೊಸ ಅನುಭವವನ್ನೆ ನೀಡಬೇಕು. ಅಂತಹ ಅಪರೂಪದ ಚಲನಚಿತ್ರವೇ ಮಿಸ್ಕಿನ್ ನಿರ್ದೇಶನದ ‘ನಂದಲಾಲ’. ಸಿನೆಮಾ ಪ್ರಿಯರು ಮತ್ತು ಸಿನೆಮಾ ಹುಚ್ಚನ್ನು ಹೊಂದಿದವರು ನೋಡಲೇಬೇಕಾದ ಚಿತ್ರವಿದು. ಸಾಮಾನ್ಯವಾಗಿ ತಾಯಿಯನ್ನು ವೈಭವೀಕರಣ ಮಾಡಿ ನೋಡುಗರಲ್ಲಿ ಕಣ್ಣೀರ ಧಾರೆ ಉಕ್ಕುವಂಂತೆ […]

ಅವ್ವ ಮತ್ತು ರಾಗಿರೊಟ್ಟಿ

ಅವ್ವ ಮತ್ತು ರಾಗಿರೊಟ್ಟಿ

ನಮ್ಮೂರಿನ ಪ್ರಾತಃಸ್ಮರಣೀಯರು ವತ್ತಿನಂಟೆ ಎದ್ದಕೂಡಲೆ ಕೆರೆಕಡೆಯೋ ಅಥವಾ ತಲಾರಿ ಎಲ್ಲಯ್ಯನವರ ಕಟ್ಟೆಯ ಬಳಿ ಆಳೆತ್ತರಕ್ಕೆ ಬೆಳದಿದ್ದ ಕಳ್ಳಿಮರೆಗೋ ಹೋಗುವಾಗ; ಎದುರಿಗೆ ಸಿಕ್ಕವರನ್ನು ಕಂಡಕೂಡಲೆ, ‘ಎದ್ದೇನ್ರಯ್ಯಾ!’, ‘ಎದ್ರಾ!’ ‘ಚಿಕ್ಕಿ ಎದ್ದಾ!’ ಎಂದು ಎದುರಿಗೆ ಸಿಕ್ಕವರ ವಯೋಮಾನಕ್ಕೆ ಅನುಗುಣವಾಗಿ ಕೇಳುತ್ತಾ ತಮ್ಮ ಪ್ರಾತಃವಿಧಿಗಳನ್ನು ಮುಗಿಸಲು ತೆರಳುತ್ತಿದ್ದರು. ಈಗಿನಂತೆ ಯಾರ ಬಾಯಲ್ಲೂ ಕೂಡ ಅಪ್ಪಿತಪ್ಪಿಯೂ, ‘ಕಾಫಿ ಆಯ್ತೇನಣ್ಣ, ನಾಸ್ಟಾ ಆಯ್ತೇನಪ್ಪ’ ಎಂದು ಕೇಳುತ್ತಿರಲಿಲ್ಲ!. ಹಾಗೆ ಹೇಳುವುದಾದರೆ ನಮ್ಮೂರಿನ ಶಬ್ಧಕೋಶದಲ್ಲೇ ಈ ಪದಗುಚ್ಚಗಳಿರಲಿಲ್ಲ. ನನ್ನ ಬಾಲ್ಯದ ದಿನಗಳಲ್ಲಿ ಅರಿವಿಗೆ ತಾಕಿದ ಲೌಕಿಕದ ಎಲ್ಲ […]

ಸಮತೆಯ ಹೂವುಗಳನ್ನು ಅರಳಿಸುವ ಕನಸು

ಸಮತೆಯ  ಹೂವುಗಳನ್ನು ಅರಳಿಸುವ  ಕನಸು

ಜಿ.ವಿ. ಆನಂದಮೂರ್ತಿ ಅವರು ನಾನು ಗೌರವಿಸುವ ಸ್ನೇಹಜೀವಿಗಳಲ್ಲೊಬ್ಬರು. ಈ ಕಾಲಕ್ಕೆ ಅಪರೂಪವಾದ ‘ನೈತಿಕ ಸ್ವಚ್ಛತೆ’ಯನ್ನು ತಮ್ಮ ಜೀವಮಾನದ ಬಹುದೊಡ್ಡ ಮೌಲ್ಯವನ್ನಾಗಿಸಿಕೊಂಡು ಉಸಿರಾಡುತ್ತಿರುವವರು. ಅವರ ಪ್ರಬಂಧಗಳನ್ನು ಕರಡು ಸ್ಥಿತಿಯಿಂದಲೇ ಓದಿಕೊಂಡಿರುವ ನನಗೆ ಅವುಗಳನ್ನು ಒಗ್ಗೂಡಿಸಿ ಪುಸ್ತಕ ರೂಪದಲ್ಲಿ ನೋಡಬೇಕೆಂಬ ಬಯಕೆ. ಅದನ್ನು ಆಗಾಗ ಅವರಲ್ಲಿ ಹೇಳುತ್ತಿದ್ದೆ. ಕೆಲವೊಮ್ಮೆ ಪ್ರೀತಿಯ ಸಲುಗೆಯಲ್ಲಿ ಒತ್ತಡವನ್ನೂ ಹೇರುತ್ತಿದ್ದೆ. ಮೂಲತಃ ಸಂಕೋಚ ಪ್ರವೃತ್ತಿಯವರಾದ ಅವರು ಹತ್ತಾರು ಸಲ ಚರ್ಚಿಸಿ, ನೂರಾರು ಸಲ ಯೋಚಿಸಿ ಇದೀಗ `ಜಾಲಾರ ಹೂವು ಮತ್ತು ಇತರ ಪ್ರಬಂಧಗಳು’ ಎಂಬ ಹೆಸರಿನಲ್ಲಿ […]