ಕ್ರಿಕೆಟ್ ಮತ್ತು ಕ್ರಾಂತಿ

ಈ ಶೀರ್ಷಿಕೆ ಓದಿ ನಿಮಗೆ ಆಶ್ಚರ್ಯವಾಗಬಹುದು. ಕ್ರಿಕೆಟ್‍ಗೂ ಕ್ರಾಂತಿಗೂ ಏನು ಸಂಬಂಧ ಎಂದು ಇಮಾಂ ಸಾಹೇಬರಿಗೂ ಗೋಕುಲಾಷ್ಟಮಿಗೂ ಪ್ರಯಾಸದಿಂದ ಸಂಬಂಧ ಕಲ್ಪಿಸಿದರೂ ಕಲ್ಪಸಬಹುದು, ಆದರೆ  ಕ್ರಿಕೆಟ್‍ಗೂ ಕ್ರಾಂತಿಗೂ ಯಾವ ನಂಟು ಎಂದು ಸೋಜಿಗಪಡುವುದು ಸಹಜವೇ.  ಕ್ರಿಕೆಟ್ ಇಂಗ್ಲೆಂಡ್ ದೇಶದಲ್ಲಿ ಸುಮಾರು ಐದಾರು ಶತಮಾನಗಳ ಹಿಂದೆ ಹುಟ್ಟಿತು. ಆಗ ಅದರ ಸ್ವರೂಪ ಈಗಿನದಕ್ಕಿಂತ ತೀರಾ ಭಿನ್ನವಾಗಿತ್ತು ಎಂದು ಹೇಳಬೇಕಾದ ಆವಶ್ಯಕತೆಯೇ ಇಲ್ಲ. ಅಗಿನ ಕ್ರಿಕೆಟ್‍ಗೆ ವಿಕೆಟ್‍ಗಳೇ ಇರಲಿಲ್ಲ. ಈ ಆಟ ಕುರಿಕಾಯುವವರ ಗಮನ ಸೆಳೆದ ಮೇಲೆ ಕೆಲವು ಮಾರ್ಪಾಟುಗಳಾದುವು. […]

ವಿಜ್ಞಾನ ಮತ್ತು ಸಮಾಜ

   ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು. ಅನೇಕ ಕ್ಷೇತ್ರಗಳಲ್ಲಿ ರಸಾಯನ ಶಾಸ್ತ್ರದ ಬಳಕೆ ಕಂಡು ಬರುತ್ತದೆ. ರಾಸಾಯನಿಕ ಕ್ರಿಯೆ ಇಲ್ಲದ ಕಾರ್ಯಗಳು ಅಪರೂಪ. ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ. ವಿಜ್ಞಾನದ ಈ ವಿಭಾಗದ ಪ್ರಾಧಾನ್ಯ ತುಂಬಾ ಹೆಚ್ಚಾಗಿದ್ದು, ಆಳವಾದ ಸಂಶೋಧನೆಯ ಮೂಲಕ ಮನುಷ್ಯಕುಲದ ಸಂತೋಷಕ್ಕಾಗಿ ಇದರ ಉಪಯೋಗವಾಗಬೇಕು. ಸಂಶೋಧನೆ ದಿನದಿನಕ್ಕೆ ಹೆಚ್ಚು ದುಬಾರಿಯಾಗುತ್ತಿದೆ. ಭಾರತದಂತಹ ಅಭಿವೃದ್ದಿಶೀಲ ದೇಶಗಳಿಗೆ ಇಷ್ಟೇ ಪ್ರಮುಖವಾದ ಅನೇಕ ಆವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಇರುತ್ತದೆ. ವಿಜ್ಞಾನದ ಸಂಶೋಧನೆಯಲ್ಲಿ, ಗುಣಮಟ್ಟದಿಂದಾಗಲೀ, ಸಾಮಥ್ರ್ಯದಿಂದಾಗಲೀ […]

ಪಟೇಲರ ಮೀಸಲಾತಿ ಗದ್ದಲದ ಒಳಮರ್ಮ

ಪಟೇಲರ ಮೀಸಲಾತಿ ಗದ್ದಲದ ಒಳಮರ್ಮ

ಆಗಸ್ಟ್ 25ರಂದು ಗುಜರಾತ್ ರಾಜ್ಯ ಮತ್ತೊಮ್ಮೆ ಹೊತ್ತಿ ಉರಿಯಿತು. ಗುಜರಾತ್‍ನಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲ ಸಂಖ್ಯಾತ್ಮಕವಾಗಿಯೂ ಪ್ರಬಲವಾಗಿರುವ ಪಟೇಲ್ ಸಮುದಾಯದ ಲಕ್ಷಾಂತರ ಮಂದಿ ಅಂದು ಅಹಮದಾಬಾದ್ ನಗರದ ಬೀದಿಗಳಲ್ಲಿ ನೆರೆದಿದ್ದರು. ಅವರ ಬೇಡಿಕೆ ಇಷ್ಟೆ. ಪಟೇಲ್ ಸಮುದಾಯವನ್ನು ಓಬಿಸಿ ಜಾತಿಗಳ ಪಟ್ಟಿಗೆ ಸೇರಿಸಿ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂಬುದು. ಚರಿತ್ರೆಯ ವಿಪರ್ಯಾಸ ಹೇಗಿದೆ ನೋಡಿ. ಮೂರು ದಶಕಗಳ ಹಿಂದೆ ನಡೆದಿದ್ದ ಮಂಡಲ್ ವಿರೋಧಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದದ್ದು ಇದೇ ಪಟೇಲ್ ಸಮುದಾಯ. ಈಗ ಒಂದು ಹೊಸ ತಲೆಮಾರು […]

ಹಣ್ಣಿನ ನೊಣ, ಬ್ಯಾಕ್ಟ್ರೋಸೆರಾ ಡಾರ್ಸಾಲಿಸ್

ಪ್ರಪಂಚದಾದ್ಯಂತ ಸುಮಾರು ೫೦೦೦ ಹಣ್ಣಿನ ನೊಣಗಳ ಪ್ರಭೇದಗಳಿವೆ. ಕರ್ನಾಟಕದಲ್ಲಿ ಬಹುಮುಖ್ಯವಾಗಿ ‘ಬ್ಯಾಕ್ಟ್ರೋಸಿರ ಡಾರ್ಸಾಲಿಸ್’’ ಪ್ರಭೇದವು ಮಾವು ಸೇರಿದಂತೆ ಇತರ ಹಣ್ಣುಗಳನ್ನು ಹಾನಿ ಮಾಡುತ್ತವೆ. ಇದು ಬಹು ಬೆಳೆಯಾಶ್ರಿತ ಕೀಟವಾಗಿದ್ದು, ಮಾವು, ಸೀಬೆ, ಸಪೋಟ, ಸೀತಾಫಲ ಸೇರಿದಂತೆ ಅನೇಕ ಹಣ್ಣುಗಳಲ್ಲಿ ಹಾನಿ ಮಾಡುತ್ತದೇ. ಇದು ಐರೂಪ್ಯ ಒಕ್ಕೂಟ ಸೇರಿದಂತೆ ಇತರ ದೇಶಗಳಿಗೆ ಸಂಗರೋಧ ಕೀಟವಾಗಿದೆ. ರಫ್ತು ಮಾಡುವ ಹಣ್ಣುಗಳಲ್ಲಿ ಮೊಟ್ಟೆ ಮತ್ತು ಮರಿಹುಳುಗಳಿರುತ್ತವೆ. ಅದ್ದರಿಂದ ಅಂತಹ ಹಣ್ಣುಗಳನ್ನು ಆವಿ ಅಥವಾ ಬಿಸಿ ನೀರಿನಲ್ಲಿ ಗೊತ್ತುಪಡಿಸಿದ ಉಷ್ಣಾಂಶ ಮತ್ತು ಅವದಿಯವರೆಗೆ ಉಪಚರಿಸಿದ […]

ಮೆಣಸಿನಕಾಯಿಯ ಮಿಡ್ಜ್ ಸೊಳ್ಳೆ ಮತ್ತು ನಿರ್ವಹಣೆ

ಮೆಣಸಿನಕಾಯಿಯ ಮಿಡ್ಜ್ ಸೊಳ್ಳೆ ಮತ್ತು ನಿರ್ವಹಣೆ

ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ ಮತ್ತು ಬದನೆಯ ಹೂಗಳು ಮಿಡ್ಜ್ ಸೊಳ್ಳೆಯ ಹಾವಳಿಗೆ ತುತ್ತಾಗುತ್ತವೆ. ಇಸವಿ 2000ದ ವರೆಗೆ ಇದು ಆಂದ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಮಾತ್ರ ಕಂಡುಬಂದಿತ್ತು. ಈಗ ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಕಂಡ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿಯೂ ಸಹ ಈ ಕೀಟದ ಹಾವಳಿ ಕಂಡುಬಂದಿದೆ. ಬೆಳೆಯ ಹಂತ, ತಳಿ, ಪ್ರದೇಶ ಮತ್ತು ಬೇಸಾಯ ಕ್ರಮವನ್ನು ಅನುಸರಿಸಿ ಕ್ರಮವಾಗಿ ಪ್ರತಿಶತ 56, 44 ಮತ್ತು […]

ಸ್ಮಾರ್ಟ್‍ಫೋನ್‍ಗಳ ಜಗತ್ತು

ಸ್ಮಾರ್ಟ್‍ಫೋನ್‍ಗಳ ಜಗತ್ತು

ಕೆಲವು ತಿಂಗಳ ಹಿಂದೆ ಭಾರತದಲ್ಲಿನ ಒಟ್ಟು ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ 97 ಕೋಟಿ ದಾಟಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರೆಟಿ ಆಫ್ ಇಂಡಿಯಾ ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಿತು. ಇದರ ಜೊತೆಗೆ ಕಳೆದ ವರ್ಷ 28 ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಈ ವರ್ಷದ ಅಂತ್ಯಕ್ಕೆ ಸುಮಾರು 35 ಕೋಟಿ ತಲುಪಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆ 50 ಕೋಟಿಗೂ ಅಧಿಕವಾಗಲಿದೆ ಎಂದು ಕೆಲವು ಖಾಸಗೀ ವಲಯದ ಸಂಶೋಧನಾ ವರದಿಗಳು ತಿಳಿಸಿವೆ. ಇಷ್ಟು […]

ಹೊಸ ದಾರಿ ಹೊಸ ನಡೆ

ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆದಿವೆ. ಸಾವಿರ ದಿನಗಳ ಒಡೆಯರು ಆಗಿದ್ದೇವೆ. ನಾವು ಅತ್ಯಾಧುನಿಕ ನಾಗರಿಕ ಲೋಕದಲ್ಲಿ ಜೀವಿಸುತ್ತಿದ್ದೇವೆ. ನಮಗೀಗ ಮುಖ್ಯವಾಗಿ ಬೇಕಾದುದು ನಮ್ಮ ವೈಯಕ್ತಿಕ ಸಂತಸ. ವರ್ತಮಾನ ಬದುಕನ್ನ ಆಲೋಚನೆಗೀಡು ಮಾಡದೆ ಮುಪ್ಪಾಗಿಸುವತ್ತ ಕೊಂಡೊಯ್ದರೆ , ಭವಿಷ್ಯತ್ತಿನ ನೋಟ ಕನಸುಗಳಾಗಿ ಕಾಡುತ್ತವೆ. ಕೆಲವೊಮ್ಮೆ ಗುರಿಗಳು ಬದಲಾಗಿ ಹೋಗುತ್ತವೆ ,ಆದರೆ ಆಸೆಗಳು ಬದಲಾಗಲು ಸಾಧ್ಯವಿಲ್ಲ . ಅದು ಇಂದಿಗೆ ರಕ್ತದಲ್ಲಿ ಬೆರೆತಂತಾಗಿದೆ. ನಾವಿಂದು ನಗರೀಕರಣ, ಔದ್ಯೋಗಿಕರಣದಿಂದಾಗಿ ನಮ್ಮ ಸ್ವವಿವೇಚನೆ, ವಿವೇಕವನ್ನು ಕಳೆದುಕೊಂಡಿದ್ದೇವೆ ಎನ್ನಿಸುತ್ತದೆ. ಹಗಲು ರಾತ್ರಿಗಳನ್ನು ಸಲೀಸಾಗಿ […]

ವ್ಯಂಗ್ಯಚಿತ್ರಗಳಲ್ಲಿ ದೇವರಾಜ ಅರಸು ಬಿಂಬ

ವ್ಯಂಗ್ಯಚಿತ್ರಗಳಲ್ಲಿ ದೇವರಾಜ ಅರಸು ಬಿಂಬ

ದೇವರಾಜ ಅರಸು (1915-1982) ಜನ್ಮಶತಮಾನೋತ್ಸವ ಬಿ. ವಿ. ರಾಮಮೂರ್ತಿ(1932-2004) ಆರ್. ಕೆ. ಲಕ್ಷ್ಮಣರಂತೆ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ, ಅದ್ವಿತೀಯ, ಅಭಿಜಾತ ಕಾರ್ಟೂನಿಸ್ಟ್. ತಮ್ಮ ಅಂಕುಡೊಂಕಾದ, ಹರಿತ, ಖಚಿತ ರೇಖೆಗಳೊಂದಿಗೆ ನವಿರಾಗಿ ಕಚಗುಳಿಯಿಡುವ, ತಿಳಿಹಾಸ್ಯದೊಂದಿಗೆ ಪ್ರಹಾರ ಮಾಡುತ್ತಿದ್ದ ರಾಮಮೂರ್ತಿಯವರ ವ್ಯಂಗ್ಯಚಿತ್ರಗಳು ಬಹುಬೇಗ ಕನ್ನಡ ಜನರ ಮನಗೆದ್ದವು. ಆರಂಭದಲ್ಲಿ ಶೇಷಪ್ಪನವರ ‘ಕಿಡಿ’, ರಾಶಿಯವರ ‘ಕೊರವಂಜಿ’ ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ ಬರೆಯಲಾರಂಭಿಸಿ, ಕೊನೆಗೆ 1955 ರಲ್ಲಿ ‘ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ’ ಬಳಗವನ್ನು ಸೇರಿ ಕಳೆದ ಅರ್ಧಶತಮಾನದಿಂದ ಸಾಮಾನ್ಯ ಓದುಗರನ್ನು ರಂಜಿಸುತ್ತಾ, ರಾಜಕಾರಣಿಗಳನ್ನು […]

ದೇವರ ಅಂತ್ಯ ಸಂಸ್ಕಾರ

ಕಳೆದ ಆಗಸ್ಟ್ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಕ್ಯಾಂಪೇನ್ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಆಗ ಒಂದು ಘಟನೆ ನಡೆಯಿತು. ಅದರ ಬಗೆಗೆ ಇಲ್ಲಿ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುವೆ. ನಮ್ಮ ತಂಡ ಕ್ಯಾಂಪೇನ್ ಗೆ ಹೊರಟಿದ್ದು ಮಂಡ್ಯ ಜಿಲ್ಲೆಯ ಕೀಲಾರದಲ್ಲಿ ಗ್ರಾಮದಲ್ಲಿ ನಡೆದ `ದೇವರ ಅಂತ್ಯ ಸಂಸ್ಕಾರಕ್ಕೆ’ ಹೊರಟಂತೆ ಇತ್ತು ನಮ್ಮ ಸವಾರಿ. ದೇವರ ಚಿತೆಯ ಮೇಲೆ ಚಿಂತೆಯಿಲ್ಲದೆ ಮಲಗಿರಲು ಕರುಣಾಕ್ರಂದನ ಮುಗಿಲು ಮುಟ್ಟಿತ್ತು. ನೆರೆದ ನೂರಾರು ದುಃಖ ತಪ್ಪರಲ್ಲಿ ನಾನು ಕೇವಲ ಪ್ರೇಕ್ಷಕನಾಗಿದ್ದೆ. “ಅಯ್ಯಾ ಹಸಿವು, […]

ಚಿಕ್ಕಕತೆ : ಅಂತಸ್ತಿನ ಮಡಿಲಲ್ಲಿ ಅರಳಿದ ಹೂವು

ವಾಚ್‍ಮನ್ ರಂಗಣ್ಣ. ಹದಿನಾರು ಅಂತಸ್ತಿನ ಎತ್ತರದ ಬಂಗಲೆ. ಅದರ ಹಿಂದೆ ಒಂದು ಚಿಕ್ಕ ಜೋಪಡಿ. ಅದೇ ಅವನ ಮನೆ. ಸುತ್ತಲು ಚೈನಾದ `ದಿ ಗ್ರೇಟ್ ವಾಲ್’ ಅನ್ನು ನಾಚಿಸುವಂತೆ ನಿಂತಿರುವ ಗೋಡೆಗಳು. ಇವನ ಹೆಂಡತಿ ರಂಗಮ್ಮ. ಇವರಿಬ್ಬರು ಹೆತ್ತು ಸಾಕಿದ ಮಗನೊಬ್ಬನೆ. ಅವನೇ ರಾಜು. ರಂಗಣ್ಣ ಈ ಬಿಲ್ಡಿಂಗ್ ಕಟ್ಟುವಾಗ ಅಲ್ಲೇ ಗಾರೇ ಕೆಲಸಕ್ಕೆ ಇದ್ದ. ಇವನು ನಂತರ ಬಿಲ್ಡಿಂಗ್ ವಾರಸುದಾರರ ಬಳಿ ವಾಮನ್ ಆಗಿ ಕೆಲಸ ಗಿಟ್ಟಿಸಿದ. ತಾನು ತನ್ನ ಊರಿನಿಂದ ಬರುವಾಗ ಪ್ರೀತಿಸಿ ಮದುವೆಯಾದ […]

1 92 93 94 95 96 98