ಓ ನಾಗರಾಜ ಅಪ್ಪಣೆಯೇ

ಓ ನಾಗರಾಜ ಅಪ್ಪಣೆಯೇ

ನಮ್ಮ ಆಫೀಸಿನ ಎದುರು ಬೈಕುಗಳು ಸಾಲಾಗಿ ನಿಲ್ಲುವ ಜಾಗದಲ್ಲಿ ಮೊನ್ನೆ ನಾಗರಹಾವೊಂದು ಬಂದು ಮಲಗಿತ್ತು. ಅದೇನು ಬೈಕಿನಂತೆ ಸರದಿ ಸಾಲಿನಲ್ಲಿ ಇರಲಿಲ್ಲ. ಯಾರದೋ ಬೈಕಿನ ಟ್ಯಾಂಕ್ ಕವರ್‍ನಲ್ಲಿ ಬೆಚ್ಚಗೆ ಪವಡಿಸಿತ್ತು. ಸದ್ಯ ಬೈಕಿನ ಸವಾರನಿಗೆ ಅದೇನೂ ಮಾಡಲಿಲ್ಲ. ಗಾಬರಿಯಿಂದ ಇಳಿದು ಯಾವುದೋ ಚರಂಡಿ ಹುಡುಕಿಕೊಂಡು ಹೋಯಿತು. ಆವತ್ತೆಲ್ಲ ಆ ಹಾವಿನ ಬಗ್ಗೆ ಗುಲ್ಲೋ ಗುಲ್ಲು. ಅಲ್ಲಿದ್ದವರೆಲ್ಲ ಹಾವು ಅಲ್ಲಿಗೆ ಏಕೆ ಬಂತು ಎಂಬುದರ ಬಗ್ಗೆ ಒಂದು ವಿಚಾರಸಂಕಿರಣಕ್ಕೆ ಆಗುವಷ್ಟು ಮಾತಾಡಿದರು ಎನ್ನಿ. ಹಾವುಗಳು ಯಾರಿಗೆ ತಾನೆ ಗೊತ್ತಿಲ್ಲ! […]

ಮುಂಗಾರುಮಳೆಯೇ…

ಮುಂಗಾರುಮಳೆಯೇ…

ಮುಂಗಾರು ಮಳೆ. ಆ ಹೆಸರೇ ಒಂದು ರೋಮಾಂಚನ. ಕಾಲೇಜು ಹುಡುಗ-ಹುಡುಗಿಯರಿಗೆಲ್ಲ ಎಷ್ಟೊಂದು ನೆನಪು, ಖುಷಿ ಏನೆಲ್ಲ ತರಬಹುದಾದ ಪದವೇ ಮುಂಗಾರು ಮಳೆ. ಆದರೆ ನಾನು ಬರೆಯುತ್ತಿರುವುದು ಮುಂಗಾರು ಮಳೆ ಸಿನಿಮಾ ಕುರಿತು ಅಲ್ಲ. ಬರೇ ಮುಂಗಾರುಮಳೆ ಕುರಿತು ಮಾತ್ರ. ಆದರೆ ಮುಂಗಾರುಮಳೆ ಎಂಬುದು ಮಳೆ ಮಾತ್ರ ಅಲ್ಲವೇ ಅಲ್ಲ. ಮುಂಗಾರು ಎಂದೊಡನೆ ರೈತನಿಗೆ ಆ ಸಾಲಿನಲ್ಲಿ ಬೀಳುವ ಮೊದಲ ಮಳೆಯ ಸದ್ದು ಕೇಳಿಸುತ್ತದೆ. ಅದರ ಜೊತೆಗೆ ಆತನಿಗೆ ಜಮೀನು ಉಳುವ, ಪೈರು ನಾಟಿ ಮಾಡುವ ತನ್ಮೂಲಕ ತನ್ನ […]

ತೃಣಾವಾಂತರ -3 : ಶುಂಠಿ ಅನ್ನೋ ಮಾಯೆ

ತೃಣಾವಾಂತರ -3 : ಶುಂಠಿ ಅನ್ನೋ ಮಾಯೆ

`ಎಲ್ ಹೋದ್ಯೋ…. ಹಿಂದ್ಗಡೆ ಬೇಲಿ ಹತ್ರ ಹೋಗಿ ಒಂದಿಷ್ಟು ಶುಂಠಿ ಕಿತ್ಕೊಂಡ್ ಬಾ ಅಂತ ಹೇಳಿ ಎಷ್ಟೋತ್ತಾಯ್ತು? ನಾನ್ ಅಡ್ಗೆ ಮಾಡಿ ಮುಗ್ಸೋದ್ ಎಷ್ಟೋತ್ತಿಗೆ,’ ಅಂತ ಅಮ್ಮ ಕೂಗಿದಾಗ, ಇನ್ನೇನು ಬೆನ್ನ ಮೇಲೆ ಎರಡು ಬೀಳ್ತದೆ ಅನ್ನೋದು ಗ್ಯಾರಂಟಿಯಾಗಿ, ಕಾಫೀ ಗಿಡಗಳ ಪಕ್ಕ ಬೇಲಿಯ ಕೆಳಗೆ ಬೆಳೆದ ಶುಂಠಿ ಗಿಡದ ಕಡೆಗೆ ಹೋಗ್ತಿದ್ದೆ. ಶುಂಠಿಯೇನು ಆಕಾಶದಿಂದ  ದುತ್ತನೆ ನನ್ನೆದುರು ಬಂದು ನಿಂತ ಮಾಯೆಯೇನಲ್ಲ. ಅಣ್ಣ (ಅಪ್ಪ) ಡಾಕ್ಟರ್ ಆಗಿ, ಊರಿಂದೂರಿಗೆ ವರ್ಗವಾಗೋ ಕೆಲಸವಾದರೂ, ಹೋದಲ್ಲೆಲ್ಲ ಮನೆಗೆ ಬೇಕಾಗೋ […]

ತೃಣಾವಾಂತರ -2 : ಮಲೆನಾಡ ಭತ್ತ ಮತ್ತು ಅಗ್ರಿ ಎಕಾನಮಿ

ತೃಣಾವಾಂತರ -2 : ಮಲೆನಾಡ ಭತ್ತ ಮತ್ತು ಅಗ್ರಿ ಎಕಾನಮಿ

“ಅಲ್ಲಾ ಕಣ್ರಾ… ಒಂದ್ವರ್ಷನಾದ್ರೂ ಅಲ್ಲಿರೀ ಅಂದ್ರೆ…. ಮುಂದಿನ್ ವರ್ಷ ನೋಡಾನ… ನಮ್ ಲೈನ್ ಗೇ ಬರೀವ್ರಂತೆ.’’ “ಇದೊಳ್ಳೇ ಕಥಿಯಾಯ್ತಲ್ಲಾ ಗೌಡ್ರೇ… ಮನೀ ಮಟ್ಟಿಗೂ ಗದ್ದೇ ಮಾಡಕ್ಕಿಲ್ಲ ಅಂದ್ರೆ, ನಾವೇನ್ ಮಾಡಾದು? ನೀವೇನೇ ಹೇಳಿದ್ರೂ, ನಾವ್ ಹೋಗಾಕ್ಕಿಲ್ಲ ಬಿಡಿ. ನಿಮ್ ಲೈನಾಗೆ ಇರಾದಿದ್ರೆ ನೋಡಿ, ಇಲ್ಲಾ ನಾವ್ ಲೆಕ್ಕ ಮಾಡಿಸ್ಕೊಂಡು ಬೇರೆ ಕಡೆ ನೋಡ್ಕಾತ್ತೀವಿ.’’ ನಾವೆಲ್ಲ ಚಿಕ್ಕವರಿದ್ದಾಗ ಇಂಥಾ ಸಂಭಾಷಣೆಗಳಿಗೇನೂ ಕಡಿಮೆ ಇರಲಿಲ್ಲ. ಕಾಫೀ ಬೆಳೆಯೇ ಪ್ರಧಾನವಾದರೂ, ಗದ್ದೆಯಲ್ಲಿ ಭತ್ತ ಬೆಳೆಯೋದಿಲ್ಲ ಅನ್ನೋರ ಮನೆಗೆ ಕೆಲಸದವರು ಹೋಗೋಕ್ಕೆ ಒಪ್ಪುತ್ತಿರಲಿಲ್ಲ. […]

ತೃಣಾವಾಂತರ -1 : ಭತ್ತದ ಗದ್ದೆ ಎಂಬ ಒಂದು ಹುಲ್ಲುಗಾವಲಿನ ಕಥೆ

ತೃಣಾವಾಂತರ -1 : ಭತ್ತದ ಗದ್ದೆ ಎಂಬ ಒಂದು ಹುಲ್ಲುಗಾವಲಿನ ಕಥೆ

ಯಾವುದೋ ಮಾತಿನ ನಡುವೆ, `ಗದ್ದೆ ಮಾಡೋದು ನಿಲ್ಸಿದ್ದೀವಿ’ ಅಂತ ಅಮ್ಮ ಹೇಳ್ದಾಗ, ಅಪ್ರಯತ್ನಕವಾಗಿ ಪ್ರಶ್ನೆ ಹೊರಬಂತು `ಯಾಕೆ?’ `ಹುಲ್ಲಿನ ದುಡ್ಡಾದ್ರೂ ಉಳಿದಿದ್ರೆ ಮಾಡ್ಬೋದಿತ್ತು. ಮಾಡಿದ್ರೆ ಬರೀ ಲಾಸ್. ಅದ್ರ ಬದ್ಲು, ಅಕ್ಕಿ ತಗೊಂಡು ಊಟ ಮಾಡೋದೇ ಒಳ್ಳೇದು. ಹ್ಯಾಗೂ ಇರೋದೇ ನಾವಿಬ್ರು,’ ಅಂತ ಅಣ್ಣ (ಅಪ್ಪ) ಹೇಳ್ದಾಗ, ಅದಕ್ಕೇನು ಹೇಳ್ಬೇಕೂಂತ ಗೊತ್ತಾಗಲಿಲ್ಲ. ವರ್ಷಗಳು ಕಳೆದಹಾಗೆ, ಊರಿಗೆ ಹೋದಾಗಲೆಲ್ಲ ಒಬ್ಬೊಬ್ಬರದೇ ಗದ್ದೆಗಳು ಖಾಲಿ ಕಾಣಲು ಆರಂಭಿಸಿದವು. ಈಗೊಂದೆರೆಡು ಮೂರು ವರ್ಷಗಳ ಈಚೆಗೆ, ನಮ್ಮ ಮೂಡುಸಸಿಯ ಗದ್ದೆಬೈಲಿನಲ್ಲಿ ಒಬ್ಬರೂ ಭತ್ತ […]

ಮೈಷುಗರ್ – ಅವಸಾನದ ಹಾದಿಯಲ್ಲಿ

ಮೈಷುಗರ್ – ಅವಸಾನದ ಹಾದಿಯಲ್ಲಿ

ಮಂಡ್ಯ ಜಿಲ್ಲೆಗೆ ಸಕ್ಕರೆ ನಾಡು ಎಂಬ ಅನ್ವರ್ಥ ನಾಮವಿದೆ. ಇದಕ್ಕೆ ಇತಿಹಾಸವೂ ಇದೆ. ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಗೊಂಡಿದ್ದು ಸ್ವಾತಂತ್ರ್ಯ ಪೂರ್ವಕಾಲದಲ್ಲಿ. ಆಗಿನ ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ 1933ರಲ್ಲಿ ಈ ಕಾರ್ಖಾನೆಯನ್ನು ಪ್ರಾರಂಭಿಸಿದರು. ಮೈಸೂರು ಸರ್ಕಾರದಲ್ಲಿ ತೋಟಗಾರಿಕಾ ತಜ್ಞನಾಗಿ ಸೇವೆಯಲ್ಲಿದ್ದ ಕೋಲ್‍ಮನ್ ಎಂಬ ಬ್ರಿಟಿಷ್ ಅಧಿಕಾರಿಯ ಪರಿಶ್ರಮವೂ ಸೇರಿ ಇಡೀ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಸಕ್ಕರೆ ಕಾರ್ಖಾನೆ ಮಂಡ್ಯದ ಬಳಿ ತಲೆ ಎತ್ತಿತ್ತು. ಆ ವೇಳೆಗಾಗಲೇ ಕೆಆರ್‍ಎಸ್ ಅಣೆಕಟ್ಟಿನಿಂದ ನೀರಾವರಿ ಯೋಜನೆಯೂ ಬಂದಿತ್ತು.  ಮೈಷುಗರ್ […]

ಸೀತೆಯೊಳಗೊಂದು (ಸಂ)ವಾದ

ಜನಕರಾಜನ ಮಗಳು ವನಕೆ ತೊಟ್ಟಿಲು ಕಟ್ಟಿ ಲವ-ಕುಶರನ್ಹಾಕಿ ತೂಗ್ಯಾಳ// ರಾಜನ ಹೆಂಡತಿ ರಾಣಿವಾಸದಾಕಿ ವನದಾಕೆ ಯಾಕೆ ತೊಟ್ಟಿಲು ನನ್ನಮ್ಮ ಕಣ್ಣೊಳಗ್ಯಾಕೆ ಕರಿಹೊಳೆ// ಕಾಡಿನ ಹೂವಿಗೂ ನಾಡಿನ ಹೂವಿಗು ಘಮಲೊಂದೆ ನನಕಂದಾ ರಾಜನ ಹೆಂಡತಿಗೂ ಸೆರಗಲೆ ಕೆಂಡ ಕಟ್ಯಾದೆ ಲೋಕ// ಲೋಕದ ಮಾತಿಗೆ ತೂಕದ ಜನ ಬಂದು ಸುಂಟರ ಗಾಳಿಯಲಿ ಸುಡಗಾಡ ಅರಸುವರು ನೆಗ್ಗಿಲ ಮುಳ್ಳ ಬಿತ್ಯಾರೆ ನೆಲವೆಲ್ಲಾ// ಕಟ್ಟಿಲ್ಲ ಖದರಿಲ್ಲ ಮೇಯುವ ಕುದುರಿಗೆ ರಾಜಸತ್ತುಗೆ ರಹದಾರಿ ಕಂದಮ್ಮ ಹೂವಿನ ತೋಟದಾಗೆ ಹಾವುಗಳು// ಕುದುರೆಯ ಮಗ್ಗಲು ಬೆಳ್ಳಕ್ಕಿ ಹಿಂಡು […]

ಕ್ರಿಕೆಟ್ ಮತ್ತು ಕ್ರಾಂತಿ

ಈ ಶೀರ್ಷಿಕೆ ಓದಿ ನಿಮಗೆ ಆಶ್ಚರ್ಯವಾಗಬಹುದು. ಕ್ರಿಕೆಟ್‍ಗೂ ಕ್ರಾಂತಿಗೂ ಏನು ಸಂಬಂಧ ಎಂದು ಇಮಾಂ ಸಾಹೇಬರಿಗೂ ಗೋಕುಲಾಷ್ಟಮಿಗೂ ಪ್ರಯಾಸದಿಂದ ಸಂಬಂಧ ಕಲ್ಪಿಸಿದರೂ ಕಲ್ಪಸಬಹುದು, ಆದರೆ  ಕ್ರಿಕೆಟ್‍ಗೂ ಕ್ರಾಂತಿಗೂ ಯಾವ ನಂಟು ಎಂದು ಸೋಜಿಗಪಡುವುದು ಸಹಜವೇ.  ಕ್ರಿಕೆಟ್ ಇಂಗ್ಲೆಂಡ್ ದೇಶದಲ್ಲಿ ಸುಮಾರು ಐದಾರು ಶತಮಾನಗಳ ಹಿಂದೆ ಹುಟ್ಟಿತು. ಆಗ ಅದರ ಸ್ವರೂಪ ಈಗಿನದಕ್ಕಿಂತ ತೀರಾ ಭಿನ್ನವಾಗಿತ್ತು ಎಂದು ಹೇಳಬೇಕಾದ ಆವಶ್ಯಕತೆಯೇ ಇಲ್ಲ. ಅಗಿನ ಕ್ರಿಕೆಟ್‍ಗೆ ವಿಕೆಟ್‍ಗಳೇ ಇರಲಿಲ್ಲ. ಈ ಆಟ ಕುರಿಕಾಯುವವರ ಗಮನ ಸೆಳೆದ ಮೇಲೆ ಕೆಲವು ಮಾರ್ಪಾಟುಗಳಾದುವು. […]

ವಿಜ್ಞಾನ ಮತ್ತು ಸಮಾಜ

   ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು. ಅನೇಕ ಕ್ಷೇತ್ರಗಳಲ್ಲಿ ರಸಾಯನ ಶಾಸ್ತ್ರದ ಬಳಕೆ ಕಂಡು ಬರುತ್ತದೆ. ರಾಸಾಯನಿಕ ಕ್ರಿಯೆ ಇಲ್ಲದ ಕಾರ್ಯಗಳು ಅಪರೂಪ. ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ. ವಿಜ್ಞಾನದ ಈ ವಿಭಾಗದ ಪ್ರಾಧಾನ್ಯ ತುಂಬಾ ಹೆಚ್ಚಾಗಿದ್ದು, ಆಳವಾದ ಸಂಶೋಧನೆಯ ಮೂಲಕ ಮನುಷ್ಯಕುಲದ ಸಂತೋಷಕ್ಕಾಗಿ ಇದರ ಉಪಯೋಗವಾಗಬೇಕು. ಸಂಶೋಧನೆ ದಿನದಿನಕ್ಕೆ ಹೆಚ್ಚು ದುಬಾರಿಯಾಗುತ್ತಿದೆ. ಭಾರತದಂತಹ ಅಭಿವೃದ್ದಿಶೀಲ ದೇಶಗಳಿಗೆ ಇಷ್ಟೇ ಪ್ರಮುಖವಾದ ಅನೇಕ ಆವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಇರುತ್ತದೆ. ವಿಜ್ಞಾನದ ಸಂಶೋಧನೆಯಲ್ಲಿ, ಗುಣಮಟ್ಟದಿಂದಾಗಲೀ, ಸಾಮಥ್ರ್ಯದಿಂದಾಗಲೀ […]

ಪಟೇಲರ ಮೀಸಲಾತಿ ಗದ್ದಲದ ಒಳಮರ್ಮ

ಪಟೇಲರ ಮೀಸಲಾತಿ ಗದ್ದಲದ ಒಳಮರ್ಮ

ಆಗಸ್ಟ್ 25ರಂದು ಗುಜರಾತ್ ರಾಜ್ಯ ಮತ್ತೊಮ್ಮೆ ಹೊತ್ತಿ ಉರಿಯಿತು. ಗುಜರಾತ್‍ನಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲ ಸಂಖ್ಯಾತ್ಮಕವಾಗಿಯೂ ಪ್ರಬಲವಾಗಿರುವ ಪಟೇಲ್ ಸಮುದಾಯದ ಲಕ್ಷಾಂತರ ಮಂದಿ ಅಂದು ಅಹಮದಾಬಾದ್ ನಗರದ ಬೀದಿಗಳಲ್ಲಿ ನೆರೆದಿದ್ದರು. ಅವರ ಬೇಡಿಕೆ ಇಷ್ಟೆ. ಪಟೇಲ್ ಸಮುದಾಯವನ್ನು ಓಬಿಸಿ ಜಾತಿಗಳ ಪಟ್ಟಿಗೆ ಸೇರಿಸಿ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂಬುದು. ಚರಿತ್ರೆಯ ವಿಪರ್ಯಾಸ ಹೇಗಿದೆ ನೋಡಿ. ಮೂರು ದಶಕಗಳ ಹಿಂದೆ ನಡೆದಿದ್ದ ಮಂಡಲ್ ವಿರೋಧಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದದ್ದು ಇದೇ ಪಟೇಲ್ ಸಮುದಾಯ. ಈಗ ಒಂದು ಹೊಸ ತಲೆಮಾರು […]

1 87 88 89 90 91 94