ಮೇಯೋಕ್ಯಾಕಿಷ್ಟು ಗುದ್ದಾಟ?

ಮೇಯೋಕ್ಯಾಕಿಷ್ಟು ಗುದ್ದಾಟ?

     ಯಾಕೋ ಬೆಂದಕಾಳೂರಿನ ನಸೀಬೇ ಸರಿ ಇಲ್ಲ ಅಂತ ಕಾಣುತ್ತೆ…. ಮೂರೋ, ಐದೋ ಭಾಗ ಆಗುತ್ತೇ ಅಂತ ತಲೆಕೆಡಿಸಿಕೊಂಡವರಿಗೆ ನೆಮ್ಮದಿ ಅನ್ನೋ ಹಾಗೆ ಒಂದು ಚುನಾವಣೆ ಆಯ್ತು. ಕಳೆದೈದು ವರ್ಷ ಕಾಟ ಕೊಟ್ಟ ಬಿಜೆಪಿಯವರೇ, ಭಾಗ ಮಾಡೋ ಕಾಂಗ್ರೇಸಿಗರಿಗಿಂತ ಪರ್ವಾಗಿಲ್ಲ ಅಂತ ತೀರ್ಪು ಕೊಟ್ಟಿದ್ದೂ ಆಯ್ತು. ಜೆಡಿಎಸ್ ತನ್ನ ಪಾಡಿಗೆ 14 ಕಡೆ ಗೆದ್ದರೆ, ಎಂಟು ಕಡೆ ಪಕ್ಷೇತರರು ಗೆದ್ದರು. ಆದ್ರೆ, `ಮೇಯೋರು’ ಯಾರು ಅಂತ ಕೇಳಿದ್ರೆ, ಅದ್ರ ಲೆಕ್ಕಾಚಾರನೇ ಬೇರೆ ಅಂತ ಈ ಚುನಾವಣೆ […]

ಹರಿಯಪ್ಪ ಎಂಬ ಕಾಮ್ರೇಡ್

ಹರಿಯಪ್ಪ ನಮ್ಮೂರಿನ ಎರಡನೇ ಕಮ್ಯೂನಿಸ್ಟ್ ಎಂದು ಜತ್ತಪ್ಪ ಯಾವಾಗಲೂ ರೇಗಿಸುವುದಿದೆ. ಮೊದಲನೆಯವರು ಯಾರು ಎಂದರೆ ಯಾರದ್ರೂ ಇದ್ದಿರಬೋದು ಎನ್ನುವನು. ಅವನ ಪ್ರಕಾರ ಕಮ್ಯುನಿಸ್ಟ್‍ರು ಲಾಗಾಯ್ತಿಂದ ಇದ್ದಾರೆ. “ಉಳ್ಳಾಕುಲು ಮುನ್ನೂರೊಕ್ಲು ಎಂತ ಹೇಳಿದ ಗಳಿಗೇಲಿ ಬೇರೆಲ್ಲ ಜನ ಇರೋವಾಗ ಕಮ್ಯುನಿಸ್ಟರು ಇಲ್ಲದೇ ಇರೋದು ಹೇಗೆ ಅಣ್ಣ,?” ಎಂದು ತಿರುಗಿ ಕೇಳುವನು. ಅವನ ತರ್ಕ ಸರಳ. “ಅಣ್ಣಾ, ಈ ಮಾವಿನ ಹಣ್ಣು ಇತ್ತು, ಬಾಳೆ ಹಣ್ಣೂ ಇತ್ತು. ಅದಿಕ್ಕೆ ಇಂಗ್ಲಿಶ್ ಹೆಸರು ನೀವಲ್ವಾ ಕೊಟ್ಟದ್ದು, ಹಾಗೇ ಇದೂ “ ಎಂದು […]

ಅನ್ಯವನ್ನು ಒಳಗೊಳ್ಳುವ ಕಷ್ಟ

ಅನ್ಯವನ್ನು ಒಳಗೊಳ್ಳುವ ಕಷ್ಟ

ಇಸ್ಲಾಂ ಮತ್ತು ಕ್ರೈಸ್ತ ರಿಲಿಜನ್ನುಗಳು ಶತಮಾನಗಳಷ್ಟು ಹಿಂದೆಯೆ ಭಾರತದಲ್ಲಿ ನೆಲಸಿ ಈ ಸಮಾಜದ ಅವಿಭಾಜ್ಯ ಅಂಗವೇ ಆಗಿ ಹೋಗಿವೆ. ಆದರೆ ಅವುಗಳನ್ನು ಸೈದ್ಧಾಂತಿಕವಾಗಿ ಅರ್ಥಮಾಡಿಕೊಳ್ಳುವ ಕೆಲಸವನ್ನು ಗಂಭೀರವಾಗಿ ಮಾಡಿರುವ ಪ್ರಯತ್ನಗಳು ಬಹಳ ಕಡಿಮೆ. ಕೆಲವು ಚಿಂತಕರು ಇಸ್ಲಾಂ ಮತ್ತು ಕ್ರೈಸ್ತ ರಿಲಿಜನ್‍ಗಳು ಹೇಗೆ ಭಾರತದ ಸಂಪ್ರದಾಯಗಳಿಗಿಂತ ಬರ್ಬರ ಎನ್ನುವುದನ್ನು ತೋರಿಸುದರಲ್ಲೇ ಕಾಲಕಳೆದರೆ, ಇನ್ನೂ ಕೆಲ ವಿದ್ವಾಂಸರು ಭಾರತೀಯ ಪರಂಪರೆ ಎಂದು ಮಾತನಾಡುವುದೇ ‘ರಿವೈವಲಿಸಂ’ ಅಥವಾ ಬ್ರಾಹ್ಮಣ ಶಾಹಿಗೆ ಉತ್ತರಾಧಿಕಾರಿಯಾಗುವುದು ಎನ್ನುವಂತೆ ನೋಡುತ್ತಾರೆ. ಈ ಎರಡು ಅತಿಗಳನ್ನು ಮೀರಿ […]

‘ದೂರತೀರ’ದ ಒಂದು ಇಣುಕುನೋಟ

‘ದೂರತೀರ’ದ ಒಂದು ಇಣುಕುನೋಟ

    70ರ ದಶಕದ ನಂತರ ಕನ್ನಡದಲ್ಲಿ ಹಲವು ಸಂವೇದನೆಗಳು ಪ್ರಕಟಗೊಳ್ಳತೊಡಗಿದವು. ಅವುಗಳಲ್ಲಿ ಸಾಹಿತ್ಯಕವಾಗಿಯೂ ಮುಖ್ಯವಾದ ಸಂವೇದನೆಗಳೆಂದರೆ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಮತ್ತು ವಿಮರ್ಶನ ಪ್ರಜ್ಞೆಗಳು. ದಲಿತ ಸಂವೇದನೆ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಸ್ತ್ರೀ ಸಂವೇದನೆ ಪ್ರತಿಪಾದಿಸಿದ ಲಿಂಗನ್ಯಾಯ ಮತ್ತು ನಮ್ಮ ವಿಮರ್ಶೆ ಪ್ರಕಟಿಸಿದ ಸಾಹಿತ್ಯ ರೂಪ ಮತ್ತು ವಸ್ತುಗಳ (ಸಾಹಿತ್ಯದ ಕಟ್ಟಾಣಿಕೆ ಮತ್ತು ಕಾಣ್ಕೆಗಳ) ನಡುವಣ ಸಮತೋಲನ ಪ್ರಜ್ಞೆ ಈ ಮೂರೂ ಕೂಡ ನಮ್ಮ ಇಂದಿನ ತಲೆಮಾರಿನ ಬರಹಗಾರರ ಮೇಲೆ ಬಲವಾದ ಸವಾಲುಗಳನ್ನು ಒಡ್ಡಿವೆ. […]

ಅಬ್ಬಬ್ಬಾ ಚಿರಾಪುಂಜಿ

ಅಬ್ಬಬ್ಬಾ ಚಿರಾಪುಂಜಿ

ರಾಜ್ಯದ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆಯನ್ನು ನೋಡಿ ಬಲ್ಲ ನಮಗೆ ಜಗತ್ತಿನ ಬಹುಹೆಚ್ಚಿನ ಮಳೆ ಬೀಳುವ “ಭೂಮಂಡಲದ ಅತೀ ಒದ್ದೆ ಪ್ರದೇಶ” ಎಂದು ಹೆಸರಾಗಿರುವ ಚಿರಾಪುಂಜಿ ಹೇಗಿರಬಹುದು? ಎಂಬ ಕುತೂಹಲ ಸ್ವಾಭಾವಿಕವಿರುತ್ತದೆಯಲ್ಲವೆ! 1200 ಮಿಮಿ ವಾರ್ಷಿಕ ಮಳೆಯೆಂದರೆ ಆಗುಂಬೆಗಿಂತ ಬಹುತೇಕ ಎರಡು ಪಟ್ಟು. ಗೌಹಾಟಿಯಿಂದ ಹೊರಟಾಗ ಎದುರಾಗಿದ್ದು ‘ಬ್ರಹ್ಮಪುತ್ರ’ ಜಗತ್ತಿನ ಬಹುದೊಡ್ಡ ನದಿಗಳಲ್ಲೊಂದು. ಹಿಮಾಲಯವೇ ಮೈಕೊಡವಿದಂತೆ ಹಿಮಾಲಯ ನೀರನ್ನೆಲ್ಲ ನದಿಯೊಂದು ಹಿಂಡಿತರುವಂತೆ ಹರಿಯುತ್ತಿತ್ತು. ಆಚೆ ದಡದಲ್ಲಿ ಕಾಮಾಕ್ಯದೇವಿ ಪ್ರಕೃತಿಯಮ್ಮ ನೆಲಮುಗಿಲ ಆರ್ಭಟಕ್ಕೆ ಸಾಂತ್ವನ ಹೇಳುವ ತಾಯಿಯಾಗಿ […]

ಸ್ವಿಡ್ಜರ್ ಲ್ಯಾಂಡ್ ಎಂಬ ಮಾಯಾಂಗನೆ

ಸ್ವಿಡ್ಜರ್ ಲ್ಯಾಂಡ್ ಎಂಬ ಮಾಯಾಂಗನೆ

ಯೂರೋಪೆಂಬ ಮಾಯಾಂಗನೆ ಭೂಗೋಳದ ನಟ್ಟ ನಡುವಲಿ ಕುಳಿತು ಗ್ರೀಸ್ ರೋಂ ಸಂಸ್ಕøತಿಯನ್ನು ಅತ್ತ ಪಶ್ಚಿಮಕ್ಕೆ ಇತ್ತ ಪೂರ್ವದಿಕ್ಕಿಗೆ ಎಟುಕಿಸಿ ಮೂಡಲ ಪಡುವಲಗಳೆರಡನ್ನು ತೆಕ್ಕೆಗೆಳೆದು ಅರಳಿ ನಿಂತಿರುವ ಪ್ರಬುದ್ಧ ಕಲಾವಿದೆಯೆಂದು ಅಲ್ಲಿ ಕಣ್ಣಾಡಿಸಿದಾಗ ಮಾತ್ರ ಅರಿವಾಗುತ್ತದೆ. ಹಿಂದಿನ ಅಕ್ಟೋಬರ್‍ನಲ್ಲಿ ಹಿ. ಶಿ. ರಾಮಚಂದ್ರೇಗೌಡ ದಂಪತಿಗಳು ಒಂದು ತಂಡ ಕಟ್ಟಿ ಪ್ರವಾಸಕ್ಕೆ ಥಾಮಸ್ ಕುಕ್ ಮೂಲಕ ನಮ್ಮನ್ನು ಹೊರಡಿಸಿದರು. ಅಗ್ನಿ ಪರ್ವತಗಳು ಕುದಿಯುತ್ತಿವೆಯೆಂದು ಪ್ರವಾಸ ರದ್ದಾಗಿ ಅಂತೂ ಪುನಃ ಹೊರಟೆವು. ಅನ್ನ ಬೆಂದಿದೆಯೇ ಎಂಬುದಕ್ಕೆ ಒಂದಗಳು ಹಿಸುಕಿ ನೋಡಿದರೆ ಸಾಕಲ್ಲವೆ […]

ಯುಗಾದಿಗೆ ರಂಗೇರುವ ಆಟಗಳು

ಯುಗಾದಿಗೆ ರಂಗೇರುವ ಆಟಗಳು

ಗ್ರಾಮೀಣ ಭಾಗದ ಯುಗಾದಿಯನ್ನು ನೆನಪಿಸಿಕೊಂಡಾಗ ಅದರ ಮೈಗೆ ಕೆಲವಾದರೂ ಜನಪದ ಆಟಗಳು ಅಂಟಿಕೊಳ್ಳುತ್ತವೆ. ಹಾಗೆ ಅಂಟಿಕೊಂಡ ಆಟಗಳನ್ನು ಬಿಡಿಸಿ ನೋಡತೊಡಗಿದರೆ ಆ ಆಟಗಳ ಝಲಕ್ಕು ರೋಮಾಂಚನಗೊಳಿಸುತ್ತದೆ. ಈಗಲೂ ಗ್ರಾಮೀಣ ಭಾಗದ ಯುಗಾದಿಗೆ ಅಂತಹ ಆಟಗಳು ರಂಗೇರುತ್ತವೆ. ದಶಕದ ಹಿಂದೆ ಸರಿದರೆ ಈ ಅಬ್ಬರ ಕೆಲ ಪ್ರದೇಶಗಳಲ್ಲಿ ಮಂಕಾದರೂ, ಮತ್ತೆ ಕೆಲವು ಪ್ರದೇಶಗಳಲ್ಲಿ ಹೊಸ ಚಲನೆ ಪಡೆದಿವೆ. ಅಂತಹ ಆಟಗಳ ಮೈದಡವಿ ಮಾತನಾಡಿಸಿದರೆ, ಅವುಗಳು ತಮ್ಮ ಇರುವಿಕೆಯನ್ನು ಪಿಸುಮಾತಲ್ಲಿ ಹೇಳಬಲ್ಲವು. ನಾವು ಕಿವಿತೆರೆದು ಕೇಳಬೇಕಷ್ಟೆ. ಪ್ರತಿ ಹಬ್ಬಗಳಲ್ಲಿ ಮೈದಳೆವ […]

ಮಲೆನಾಡಿಗೆ ಕೋಗಿಲೆಗಳು ಬಂದವು!

ಮಲೆನಾಡಿಗೆ ಕೋಗಿಲೆಗಳು ಬಂದವು!

  ಈ ವರ್ಷ ಯಾರಾದ್ರ್ರು ಎದ್ರಿಗೆ ಸಿಕ್ರೆ ‘ಈ ವರ್ಷದ ಮಳೆ ಕತೆ ಎಂತದು ಮರಾಯ್ರೆ’ ಎಂದೇ ಮಾತು ಶುರು ಮಾಡ್ತಾರೆ. ಯಾಕಂದ್ರೆ, ಒಂದಿಷ್ಟು ದಿನ ಹುಯ್ತದೆ, ಮತ್ತೆ ಹಳು ಆಗ್ತಿದೆ. ಯಾವ ಮಳೆ ಏನ್ ಮಾಡುತ್ತೆ ಅಂತ ಹೇಳಕ್ಕಾಗೊಲ್ಲ. ಲೆಕ್ಕಚಾರ ಹಾಕಿ ಹೇಳೊದಾದ್ರೆ ಒಂದಿಷ್ಟು ಮಳೆ ಕಡಿಮೆ ಆಗಿರಬಹುದು. ಮಲೆನಾಡು ಜನಕ್ಕೆ ಹಿಂಗೆ ಬಿಡಿಬಿಡಿಯಾಗಿ ಮಳೆ ಬಂದ್ರೆನೇ ಒಳ್ಳೇದು. ಜಲ ಏಳೊಲ್ಲ, ಅಂತ ಬಿಟ್ರೆ, ನೀರು ಕಡಿಮೆ ಆತು ಅಂತೇನೂ ಆಗೊಲ್ಲ. ಆದ್ರೆ ಇಲ್ಲಿ ಮಳೆ […]

ಸಂತಶಿಶುನಾಳ ಶರೀಫ- ಕೂಡುಬಾಳುವೆಯ ಸಾಂಸ್ಕೃತಿಕ ನೆಲೆಗಳ ಹುಡುಕಾಟ

ಸಂತಶಿಶುನಾಳ ಶರೀಫ- ಕೂಡುಬಾಳುವೆಯ ಸಾಂಸ್ಕೃತಿಕ ನೆಲೆಗಳ ಹುಡುಕಾಟ

ಕಳೆದ ಮೂರು ದಶಕಗಳಲ್ಲಿ ಭಾರತದ ಅಧಿಕಾರ ರಾಜಕಾರಣ ತುಳಿದ ಹಾದಿಯು ಹಲವು ಸವಾಲುಗಳನ್ನು ತಂದೊಡ್ಡಿದೆ. ಅದರಲ್ಲಿ ಪ್ರಮುಖವಾದ ಎರಡು ಬಿಕ್ಕಟ್ಟುಗಳಿವೆ. ಒಂದು ಜಾಗತೀಕರಣ. ಎರಡು ಹಿಂದೂಕೋಮುವಾದ. ಬಂಡವಾಳಶಾಹಿಗಳಿಗೆ ಜಾಗತೀಕರಣ ದೇಶಾತೀತ ಅವಕಾಶಗಳನ್ನು ಸೃಶ್ಟಿಸಿಕೊಡುವ ಒಂದು ಸಾಧ್ಯತೆಯಾಗಿ ಕಾಣುತ್ತದೆ. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ವಿವಿಧ ಜನಸಮುದಾಯಗಳಿಗೆ, ಒಂದು ವ್ಯವಸ್ಥಿತ ಸಂಚಿನ ದಾಳಿಯಾಗಿ ಕಾಣುತ್ತದೆ. ಈಗಾಗಲೇ ಇದರ ಸುತ್ತ ತೀವ್ರವಾದ ಚರ್ಚೆಗಳು ನಡೆದಿವೆ. ಇದು ಒಂದು ಬಗೆಯ ಸಂಘಶರ್Àಮಯ ವಾತಾವರಣ ಸೃಶ್ಟಿಗೂ ಕಾರಣವಾಗಿದೆ. ಬಂಡವಾಳಶಾಹಿ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಆರಂಭವಾದ […]