ನನ್ನ ಕೈಯಲ್ಲಿದ್ದ ಆಯ್ಕೆಯನ್ನೂ ಕಸಿದುಕೋಡು ತೀರ್ಮಾನಿಸಿದಿರಲ್ಲಾ ಯಾಕೆ?”-ಅಂಬೇಡ್ಕರ್

ನನ್ನ ಕೈಯಲ್ಲಿದ್ದ ಆಯ್ಕೆಯನ್ನೂ ಕಸಿದುಕೋಡು ತೀರ್ಮಾನಿಸಿದಿರಲ್ಲಾ ಯಾಕೆ?”-ಅಂಬೇಡ್ಕರ್

ಕೋಲಾರದ ಕಾಪಾಲಿಕಾ ತಂಡ ಪ್ರದರ್ಶಿಸಿದ ನಾಟಕ “ನನ್ನ ಅಂಬೇಡ್ಕರ್” (ರಚನೆ-ಕೋಟಿಗಾನಹಳ್ಳಿ ರಾಮಯ್ಯ) ಬೇರೆಯದೇ ಮಣ್ಣು ಬೇರೆಯದೇ ಕತೆ ಎಂಬ ತತ್ವದಲ್ಲಿ ಉತ್ತಮ ನಾಟಕವನ್ನು ಪ್ರದರ್ಶಿಸಿತು. ಅಂಬೇಡ್ಕರ್ ಚಿಂತನೆ ಮತ್ತು ವಯಕ್ತಿಕ ಸನ್ನಿವೇಶಗಳಿಂದ ಹೆಣೆದ ಕತೆ ಇದಾಗಿದ್ದು ನಾಟಕದ ರೂಪದಲ್ಲಿ ಅದ್ಬುತವಾಗಿ ಮೂಡಿಬಂತು. ಭಾರತದ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಅಂಬೇಡ್ಕರ್ ಬಹಳ ಮುಖ್ಯ ಹೆಸರು. ಭಾರತದ ಸನ್ನಿವೇಶವನ್ನು ಇತರೆ ರಾಷ್ಟ್ರೀಯ ನಾಯಕರು ಗ್ರಹಿಸಿದ ರೀತಿ ಮತ್ತು ಅಂಬೇಡ್ಕರ್ ಗ್ರಹಿಸಿದ್ದ ರೀತಿ ಭಿನ್ನವಾಗಿತ್ತು ಎಂಬುದನ್ನು ನಾಟಕ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. […]

ಬಾಂಬೆ ಎಂಬ ದೆವ್ವಗಳ ಊರಲ್ಲಿ…

ಬಾಂಬೆ ಎಂಬ ದೆವ್ವಗಳ ಊರಲ್ಲಿ…

  ಬಾಂಬೆಯ ನಾರಿಮನ್ ಪಾಯಿಂಟ್‍ನಲ್ಲಿರುವ ಇಡೀ 500 ಚದರ ಅಡಿಗಳಷ್ಟು ಕಚೇರಿ ಜಾಗಕ್ಕೆ ಅಧಿಪತಿಯಾಗಿರುವುದೆಂದರೆ ಸಾಮಾನ್ಯವಾಗಿ ಕನಸೊಂದು ನನಸಾದಂತೆ. ಆದರೆ ನನ್ನ ಪಾಲಿಗದು ಭಿನ್ನ ಅನುಭವ. ಅತೀವ ಒಂಟಿತನಕ್ಕೆ ತಳ್ಳಿದ, ಸದಾ ಆತಂಕಕ್ಕೀಡು ಮಾಡುವ ಕಾಫ್ಕಾನ ಅನುಭವಗಳನ್ನು ಮೈಮೇಲೆ ಎಳೆದುಕೊಂಡಂತೆ ನನಗೆ ಭಾಸವಾಗಿದ್ದು 1993ರ ಬಾಂಬೆ ಗಲಭೆಗಳು ಉತ್ತುಂಗದಲ್ಲಿದ್ದಾಗ. ಆಗ ನಾನು ಬಾಂಬೆ ‘ಪಯೋನೀರ್’ ಕಚೇರಿಯ ಏಕೈಕ ವಾರಸುದಾರ. ಆಗ ಕಚೇರಿ ದಕ್ಷಿಣ ಮುಂಬೈನ ಬಹುಬೇಡಿಕೆಯ ವ್ಯಾಪಾರಿ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿತ್ತು. ನಿಜಾರ್ಥದಲ್ಲಿ ಬೇರೆ ಅವಕಾಶಗಳು ಇಲ್ಲದೆ, […]

ಸಂಪಾದಕೀಯ-28: ಲಾಲೂ ಪ್ರಸಾದರ ಮೇಲಿನ ದಾಳಿ: ಈಗೇಕೆ?

ಸಂಪಾದಕೀಯ-28: ಲಾಲೂ ಪ್ರಸಾದರ ಮೇಲಿನ ದಾಳಿ: ಈಗೇಕೆ?

ಲಾಲೂ ಪ್ರಸಾದ ಯಾದವರ ಮೇಲೆ ನಡೆದ ದಾಳಿಯ ಸಂದರ್ಭವು ಅದರ ಹಿಂದಿನ ಉದ್ದೇಶ ರಾಜಕೀಯ ಹಗೆತನವೇ ಹೊರತು ಭ್ರಷ್ಟಾಚಾರ ನಿಗ್ರಹವಲ್ಲ ಎಂಬುದನ್ನು ಸೂಚಿಸುತ್ತದೆ. ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರತಿಯೊಂದು ಪಕ್ಷವೂ ಕೇಂದ್ರೀಯ ತನಿಖಾ ದಳ (ಸಿಬಿಐ) ಅನ್ನು ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಯುವುದಕ್ಕೇ ಬಳಸಿಕೊಂಡಿವೆ. ಈಗ ಅಧಿಕರದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಸರ್ಕಾರದ ದಾಳಿಗೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಯ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತವರ ಕುಟುಂಬದವರು ಗುರಿಯಾಗಿದ್ದಾರೆ. ಯಾದವ್ ಮತ್ತವರ ಕುಟುಂಬದವರು ಹಲವಾರು […]

ಸಂಪಾದಕೀಯ-27: ಏರ್ ಇಂಡಿಯಾದ ಮಹಾರಾಜನಿಗೆ ವಂಚನೆ ಮಾಡುತ್ತಿರುವ ಸರ್ಕಾರ

ಸಂಪಾದಕೀಯ-27: ಏರ್ ಇಂಡಿಯಾದ ಮಹಾರಾಜನಿಗೆ ವಂಚನೆ ಮಾಡುತ್ತಿರುವ ಸರ್ಕಾರ

ಏರ್ ಇಂಡಿಯಾದ ಪುನಶ್ಚೇತನಕ್ಕೆ ೨೦೧೨ರಲ್ಲಿ ರೂಪಿಸಲಾದ ಯೋಜನೆಯು ಪೂರ್ಣಗೊಳ್ಳಲು ಇನ್ನೂ ಐದು ವರ್ಷಗಳು ಬಾಕಿ ಇದ್ದರೂ ತರಾತುರಿಯಲ್ಲಿ ಏಕೆ ಖಾಸಗಿಕರಿಸಲಾಗುತ್ತಿದೆ? ಸತತವಾಗಿ ನಷ್ಟವನ್ನೇ ಅನುಭವಿಸುತ್ತಾ ಬಂದಿರುವ ಸಾರ್ವಜನಿಕ ಕ್ಷೇತ್ರದ ವಿಮಾನಯಾನ ಸಂಸ್ಥೆ ಯೆಂದು ಆರ್ಥಿಕ ಸರ್ವೇಕ್ಷಣೆಯಲ್ಲಿ ಅನ್ಯಾಯವಾಗಿ ಬಣ್ಣಿಸಲ್ಪಟ್ಟಿರುವ ಏರ್‌ಇಂಡಿಯಾ ಸಂಸ್ಥೆಯನ್ನು ಖಾಸಗೀಕರಿಸಲಾಗುತ್ತಿದೆ. ಏರ್ ಇಂಡಿಯಾವನ್ನು ಖಾಸಗೀಕರಿಸುವ ಬಗ್ಗೆ ನೀತಿ ಅಯೋಗ ಶಿಫಾರಸ್ಸು ಕೊಟ್ಟ ಸ್ವಲ್ಪ ಸಮಯದಲ್ಲೇ ಕೇಂದ್ರ ಸಚಿವ ಸಂಪುಟವೂ ಅದಕ್ಕೆ  ತಾತ್ವಿಕ ಒಪ್ಪಿಗೆಯನ್ನೂ ಸೂಚಿಸಿತು. ಹೀಗೆ ವಿಷಯಕ್ಕೆ ಸಂಬಂಧಪಟ್ಟ ಮತ್ತು ಹಿತಾಸಕ್ತಿ ಹೊಂದಿದವರ ಯಾರ […]

ಸಂಪಾದಕೀಯ-26: ಬಂಗಾಳದೊಳಗೇ ಇರುವ ಅಂತರ್ಗತ ಕೋಮುವಾದಿ ಬಿರುಕುಗಳು

ಸಂಪಾದಕೀಯ-26: ಬಂಗಾಳದೊಳಗೇ ಇರುವ ಅಂತರ್ಗತ ಕೋಮುವಾದಿ ಬಿರುಕುಗಳು

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಭುಗಿಲೆದ್ದಿರುವ ಕೋಮು ವಿದ್ವೇಷದ ಬೇರುಗಳು ಆ ಪ್ರದೇಶದ ಹಿಂದೂ–ಮುಸ್ಲಿಂ ವೈಷಮ್ಯದ ಇತಿಹಾಸದಲ್ಲಿದೆ. ಪಶ್ಚಿಮ ಬಂಗಾಳದ ಬಸಿರತ್ ಉಪವಿಭಾಗದ ಬದುರಿಯಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೋಮು ಹಿಂಸಾಚಾರಗಳು ಆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಧೃವೀಕರಣಕ್ಕೆ ಸಂಕೇತವಾಗಿದೆ. ಹೆಚ್ಚುತ್ತಿರುವ ಈ ಹಿಂದೂ – ಮುಸ್ಲಿಂ ವೈಷಮ್ಯದ ಹಿಂದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಆಶೋತ್ತರಗಳೂ ಸೇರಿಕೊಂಡಿವೆ. ಆದರೆ ಬಂಗಾಳದಲ್ಲಿ ಮತದಾರರ ಒಂದು ವರ್ಗವು ಬಿಜೆಪಿ ಕಡೆ ಏಕೆ ಸೆಳೆಯಲ್ಪಡುತ್ತಿವೆ? ಆ ಪ್ರದೇಶದ ಕೋಮುವಾದದ ಇತಿಹಾಸದ ಹಿನ್ನೆಲೆಯಲ್ಲಿ […]

ಇಸ್ರೇಲ್‍ನಲ್ಲಿ ಮೋದಿ-ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಅಗತ್ಯ

ಇಸ್ರೇಲ್‍ನಲ್ಲಿ ಮೋದಿ-ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಅಗತ್ಯ

ಇಸ್ರೇಲ್‍ಗೆ ಅಧಿಕೃತ ಭೇಟಿ ನೀಡಿದ ಭಾರತದ ಪ್ರಪ್ರಥಮ ಪ್ರಧಾನಿ ನರೇಂದ್ರ ಮೋದಿ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವ ಮುನ್ನ ಭಾರತದ ಪ್ರಜ್ಞಾವಂತ ಸಮಾಜ ಸ್ವತಃ ಕೆಲವು ಪ್ರಶ್ನೆಗಳಿಗೆ ಉತ್ತರ ಶೋಧಿಸಬೇಕಿದೆ. ಇಲ್ಲಿ ಇಸ್ರೇಲ್ ಭೇಟಿಯ ಔಚಿತ್ಯಕ್ಕಿಂತಲೂ ಹೆಚ್ಚು ಪ್ರಧಾನವಾಗುವುದು ಈ ಭೇಟಿಯ ವೈಭವೀಕರಣ ಮತ್ತು ಸ್ವಪ್ರಶಂಸೆಯ ವಂಧಿಮಾಗದ ಪ್ರವೃತ್ತಿ. ಪ್ರಜಾತಂತ್ರ ಮೌಲ್ಯಗಳನ್ನು ಪ್ರತಿನಿಧಿಸುವ ಯಾವುದೇ ವ್ಯಕ್ತಿ ದ್ವೇಷ ರಾಜಕಾರಣವನ್ನು ಅನುಮೋದಿಸಕೂಡದು. ರಾಜತಾಂತ್ರಿಕ ಸಂಬಂಧಗಳ ವಿಚಾರದಲ್ಲೂ ಇದು ಸತ್ಯ. ಆದರೆ ಈ ಪ್ರಜಾತಂತ್ರ ಮೌಲ್ಯಗಳನ್ನು ವಿಶ್ವ ಜನಸಮುದಾಯಗಳ ಹಿತಾಸಕ್ತಿಯ […]

ಕಾನೂನುಗಳು ಕಠಿಣವಾದಷ್ಟೂ  ಸಂಕಷ್ಟಕ್ಕೀಡಾಗುವವರು ಸಾಮಾನ್ಯರು!

ಕಾನೂನುಗಳು ಕಠಿಣವಾದಷ್ಟೂ   ಸಂಕಷ್ಟಕ್ಕೀಡಾಗುವವರು ಸಾಮಾನ್ಯರು!

  ಇಂಡಿಯಾದಂತಹ  ವಿಶಾಲವಾದ ಪ್ರಜಾಪ್ರಭುತ್ವದಲ್ಲಿ ಜನತೆ ಬಯಸವುದು  ಸರಕಾರಗಳು ಜಾರಿಗೆ ತರುವ ಕಾನೂನು ಕಾಯಿದೆಗಳು ಜನಪರವಾಗಿರಬೇಕೆಂದು ಮಾತ್ರವಲ್ಲ ಬದಲಿಗೆ ಸರಳವೂ, ಸಾಮಾನ್ಯರಿಗೆ ಸುಲಭವಾಗಿ ಅರ್ಥ ಆಗಬೇಕೆಂಬುದಾಗಿದೆ.  ತೊಂಭತ್ತರ ದಶಕದಲ್ಲಿ   ಮಾಜಿ ಪ್ರದಾನಮಂತ್ರಿಗಳಾದ ದಿವಂಗತ ಪಿ.ವಿ. ನರಸಿಂಹರಾವ್ ಅವರ ಅಧಿಕಾರದ ಅವಧಿಯಲ್ಲಿ  ಜಾರಿಗೊಳಿಸಲ್ಪಟ್ಟ  ಮುಕ್ತ ಆರ್ಥಿಕ ನೀತಿಯನ್ನು ಈ ನೆಲದ ಬಹುತೇಕ ವಿದ್ಯಾವಂತರು ಸ್ವಾಗತಿಸಿದ್ದರ ಹಿಂದೆ ಇದ್ದದ್ದು  ಸರಕಾರದ ಕೆಂಪು ಪಟ್ಟಿಯಿಂದ( ರೆಡ್ ಟೇಪಿಸಂ) ಮುಕ್ತಿ ಪಡೆಯಬಹುದೆಂಬ  ಮನೋಬಾವ ಸಹ ಇತ್ತು. ಅಗ ಅಂದಿನ ಅರ್ಥ ಮಂತ್ರಿಗಳಾದ ಮನಮೋಹನ್ […]

ಸಂಪಾದಕೀಯ-25: ಭಾರತ, ಇಸ್ರೇಲ್ ಮತ್ತು ದಮನದ ರಾಜಕೀಯ

ಸಂಪಾದಕೀಯ-25: ಭಾರತ, ಇಸ್ರೇಲ್ ಮತ್ತು ದಮನದ ರಾಜಕೀಯ

ಸೇನಾಬಲದ ಮೂಲಕ ಪ್ಯಾಲೆಸ್ತೇನನ್ನು ವಶಪಡಿಸಿಕೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್ ಮುಂದಿಡುತ್ತಿರುವ ಅಮಾನವೀಯ ಸಿದ್ಧಾಂತಗಳನ್ನು ಭಾರತವು ಸಹ ಆಮದು ಮಾಡಿಕೊಳ್ಳಲಿದೆಯೇ? ಸುಕುಮಾರ್ ಮುರಳೀಧರನ್ ಬರೆಯುತ್ತಾರೆ: ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ನೈತಿಕತೆ ಮತ್ತು ವಿವೇಕಗಳ ಮೇಲೆ ತಮಗಿರುವ ಏಕಸ್ವಾಮ್ಯವನ್ನು ಪ್ರಶ್ನಿಸುವವರ ವಿರುದ್ಧ ಬಹಿರಂಗವಾಗಿ ಹರಿಹಾಯುವುದನ್ನು ಒಂದು ಹವ್ಯಾಸವನ್ನಾಗಿಯೇ ಬೆಳೆಸಿಕೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲಿನಿಂದ ತುಳಿತಕ್ಕೆ ಒಳಗಾಗಿರುವ ಪ್ಯಾಲೆಸ್ತೇನ್ ಜನರಿಗೆ ಐರ್‌ಲ್ಯಾಂಡ್ ಸರ್ಕಾರ ಸಹಕಾರವನ್ನು ನೀಡಿದ ಪಾಪದಿಂದಾಗಿ ಇತ್ತೀಚೆಗೆ ಆ ದೇಶದ ಪ್ರಧಾನಿ ನೇತನ್ಯಾಹು ಅವರಿಂದ ಉಪದೇಶಾಮೃತಗಳನ್ನು ಕೇಳಬೇಕಾಗಿ ಬಂತು. […]

ನಾನು ಮಾಡಿದುದೆಲ್ಲ ತಲೆಕೆಳಗಾಯಿತು 

ನಾನು ಮಾಡಿದುದೆಲ್ಲ ತಲೆಕೆಳಗಾಯಿತು 

ಗಜಲ್:  ನಾನು ಮಾಡಿದುದೆಲ್ಲ ತಲೆಕೆಳಗಾಯಿತು ಯಾವ ಮದ್ದು ಗುಣವ ತರದಾಯಿತು. ನೋಡಿದೆಯಾ ನನ್ನೆಡೆಗೆ ಹಬ್ಬಿದಿ ಖಾಯಿಲೆಯ ಅದು ಕಡೆಗೆ ನನ್ನನ್ನೇ ಕಬಳಿಸಿದ ಪರಿಯ. ಹರೆಯದಾ ದಿನಗಳು ಅಳುವಿನಲಿ ಕಳೆದವು ಮುಪ್ಪಿನಲಿ  ಕಣ್ಣುಗಳ ರೆಪ್ಪೆಗಳು ಬಿಗಿದವು. ಮುಚ್ಚಲಾರದೆ ಕಣ್ಣು ಇರುಳಿಡೀ ತೆರೆದಿದ್ದವು ಬೆಳಕು ಹರಿಯುವ ಗಳಿಗೆ ಎವೆ ಮುಚ್ಚಿಕೊಂಡವು ಸೂತ್ರದಾರಿಯ ನೀನು ನಮ್ಮಂಥ ದುರ್ಬಲರ ಸುಮ್ಮನೆ  ದೂರುತ್ತೀಯ ನಿನ್ನಿಷ್ಟ ಬಂದಂತೆ ನೀನು ಮಾಡುತ್ತೀಯಾ ಅಪ ಕೀರ್ತಿ ಹೊರೆ ಮಾತ್ರ ನಮಗೆ ಹೇರುತ್ತೀಯ. ದಟ್ಟ ಹುಚ್ಚಿನೊಳಗೂ ಕೂಡ ಸಭ್ಯತೆಯ ಗೆರೆ […]

ಹಂಪಿಯ ಮಣ್ಣಲ್ಲಿ ಕರಗಿದ ಹಾಲೆಂಡಿನ ಕಲಾವಿದ ರಾಬರ್ಟ್ ಗೀಸಿಂಗ್

ಹಂಪಿಯ ಮಣ್ಣಲ್ಲಿ ಕರಗಿದ ಹಾಲೆಂಡಿನ ಕಲಾವಿದ ರಾಬರ್ಟ್ ಗೀಸಿಂಗ್

ಆ ದಿನದ ಕೆಲಸ ಮುಗಿಸಿ ಸೂರ್ಯ ಮಿಶ್ರಮಿಸುವಂತೆ ನಿಧಾನಕ್ಕೆ ಇಳಿಯುತ್ತಿದ್ದ, ಹಂಪಿಯ ಕಲ್ಲುಬಂಡೆಗಳು ಮಳೆಗೆ ತಂಪುಹೊದ್ದು ಮುದುಡಿದಂತಿದ್ದವು. ಪ್ರವಾಸಿಗರಿಲ್ಲದೆ ಸೆಕ್ಯುರಿಟಿಗಳು ಮೊಬೈಲಿನಲ್ಲಿ ಹಳೆಯ ಸಾಂಗ್ ಕೇಳುತ್ತಾ ತನ್ನ ಗುನುಗುವಿಕೆಯನ್ನು ಹಾಡಿನ ಜತೆ ತಳಕು ಹಾಕುತ್ತಿದ್ದರು. ಈ ಇಳಿಸಂಜೆ ಹೊತ್ತಲ್ಲಿ ನನ್ನ ಬೈಕು ರಾಬರ್ಟ್ ಮನೆಯ ಮುಂದೆ ನಿಂತಾಗ, ಹಿಂದಿನ ನೆನಪುಗಳೆಲ್ಲ ಒಮ್ಮೆಲೆ ಆವರಿಸಿದಂತಾಯಿತು. ಜೈನಿಭಾಯಿ ಅವರು ಆತ್ಮೀಯವಾಗಿ ನನ್ನನ್ನು ಬರಮಾಡಿಕೊಂಡು ಆರ್ಟ್ ಗ್ಯಾಲರಿ ನೋಡಲು ಹೇಳಿದರು. ಆರ್ಟ್ ಗ್ಯಾಲರಿಗೆ ಹೋದ ನಂತರ ಹಿಂದೆ ಗೆಳೆಯ ರವಿನಾಯಕ ಜತೆ […]