ಮಾಧ್ಯಮ ಅಭಿವ್ಯಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆ

ಮಾಧ್ಯಮ ಅಭಿವ್ಯಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆ

ನಾಗರಿಕತೆಯ ಬೆಳವಣಿಗೆಯಲ್ಲಿ ಮತ್ತು ಮಾನವನ ಅಭ್ಯುದಯದ ಹಾದಿಯಲ್ಲಿ ಸಂವಹನ ಕ್ರಿಯೆ ಮಹತ್ತರ ಪಾತ್ರ ವಹಿಸುತ್ತದೆ. ಎರಡು ಧೃವಗಳಲ್ಲಿರುವ ಜನಸಮುದಾಯಗಳನ್ನು ಪರಸ್ಪರ ಸಂಪರ್ಕ ಹೊಂದುವಂತೆ ಮಾಡುವ ಸಂವಹನ ಕ್ರಿಯೆ ಸಮಾಜವನ್ನು ಒಂದುಗೂಡಿಸುವಲ್ಲಿ ಸಫಲವಾಗುತ್ತದೆ. ಸಂವಹನ ಕ್ರಿಯೆಗೆ ಪೂರಕವಾದ ಸಂಪರ್ಕ ಮಾಧ್ಯಮಗಳು ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ನಿಜ, ಆಧುನಿಕ ತಂತ್ರಜ್ಞಾನ ಸಾಮಾಜಿಕ ವಲಯದಲ್ಲಿ ಸಂವಹನವನ್ನು ಜಂಗಮ ಸ್ವರೂಪಿಯಾಗಿಸಿದ್ದು ವ್ಯಕ್ತಿಗಳ ನಡುವೆ ನೇರಾನೇರ ಸಂಪರ್ಕ ಸಾಧಿಸಲು ನೆರವಾಗಿದೆ. ಇಂದು ಜಗತ್ತಿನ ಮತ್ತೊಂದು ತುದಿಯಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಯಲು […]

ಸಂಪಾದಕೀಯ-30: ಸತ್ಯೋತ್ತರ ಕಾಲ ಮತ್ತು ಅಣೆಕಟ್ಟುಗಳು

ಸಂಪಾದಕೀಯ-30: ಸತ್ಯೋತ್ತರ ಕಾಲ ಮತ್ತು ಅಣೆಕಟ್ಟುಗಳು

ಸರ್ದಾರ್ ಸರೋವರ್ ಅಣೆಕಟ್ಟೆಯು ಒಂದು ನ್ಯಾಯರಹಿತ ಮತ್ತು ಅಸ್ಥಿರ ಅಭಿವೃದ್ಧಿ ಮಾದರಿಗೆ ಉದಾಹರಣೆಯಾಗಿದೆ. ಸತ್ಯೋತ್ತರ ಯುಗ ಮತ್ತು ಪರ್ಯಾಯ ಸತ್ಯಗಳ ಈ ಕಾಲದಲ್ಲಿ ತನ್ನ ೬೭ನೇ ಹುಟ್ಟುಹಬ್ಬದ ದಿವಾದ ಸೆಪ್ಟೆಂಬರ್ ೧೭ರಂದು ಬಹು ಉಪಯೋಗಿ ಸರ್ದಾರ್ ಸರೋವರ್ ಅಣೆಕಟ್ಟನ್ನು ಉದ್ಘಾಟನೆ ಮಾಡುತ್ತಾ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆಗಳ ಬಗ್ಗೆ ಯಾರೂ ಅಚ್ಚರಿಗೊಳ್ಳುವ ಅಗತ್ಯವಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಅತ್ಯಂತ ಸಂಕೀರ್ಣತೆಗಳಿಂದ ಮತ್ತು ವಿವಾದಗಳಿಂದ ಕೂಡಿದ ಈ ಅಣೆಕಟ್ಟೆಯ ಇತಿಹಾಸವನ್ನು ಸಂಪೂರ್ಣವಾಗಿ ನಗಣ್ಯಗೊಳಿಸಿದ ಮೋದಿಯವರು ವಿಶ್ವಬ್ಯಾಂಕ್ […]

ಗೌರಿಯಾದಳು ಗೌರಿ

ಗೌರಿಯಾದಳು ಗೌರಿ

ಗೌರಿ ಸ್ವೈರ ವಿಹಾರಿ ಪುಕ್ಕದಲ್ಲಿ ಸಿಲುಕಲೊಪ್ಪದ ಅಪ್ಪನ ಮೆಚ್ಚಿನ ನವಿಲುಗರಿ ಹಾರದ ಗರುಡಗಳು, ಓಡದ ಕುದುರೆಗಳ ನಡುವೆ ತೆವಳುತ್ತಲೇ ಗಮ್ಯ ಸೇರಿದ ಇರುವೆ ದೈತ್ಯ ಆಲದೊಳಗಿಂದ ಟಿಸಿಲೊಡೆದ ಕೆಂಪುತಂಪಿನ ಹೊಂಗೆಯ ಹೂವೆ ಕರ್ತೃ ಕರ್ಮಗಳು ಅರ್ಧದಲ್ಲೇ ನಿವೃತ್ತಿ ಘೋಷಿಸಿದರೂ ಕ್ರಿಯೆಯಿಂದಲೇ ವಾಕ್ಯ ಪೂರೈಸಿದ ವಚನಕಾರ್ತಿ ಸಂಭ್ರಮದ ವ್ಯಸನವಿಲ್ಲದೆ ಸಾರ್ಥಕತೆಯ ಗೀಳಿಲ್ಲದೆ ಸತ್ತ ನಂತರವೂ ಸಾರ್ಥಕವಾಗಿ ಬದುಕುತ್ತಿರುವ ಸಂಗಾತಿ ಹೊರಗೆ ಧಾವಂತವಿದ್ದರೂ ಒಳಗೆ ನಿಧಾನವಾದೆ ಬಹಿರಂಗದಲ್ಲಿ ಬೆಂದು ಅಂತರಂಗದಲ್ಲಿ ಶುದ್ಧವಾದೆ ಒಳಗು ಹೊರಗೆಂಬ ಭಿನ್ನವಳಿಯುತ್ತಾ ಬಯಲು ಆಲಯವಾದೆ ಜಗವನೆಲ್ಲಾ […]

ಪೂನಾ ಒಪ್ಪಂದ : ದಲಿತರು ಕಳೆದುಕೊಂಡಿದ್ದೇನು? ಪಡೆದುಕೊಂಡಿದ್ದೇನು?

ಪೂನಾ ಒಪ್ಪಂದ : ದಲಿತರು ಕಳೆದುಕೊಂಡಿದ್ದೇನು? ಪಡೆದುಕೊಂಡಿದ್ದೇನು?

ಇದೇ ಸೆಪ್ಟೆಂಬರ್ 24 ಕ್ಕೆ ಪೂನಾ ಒಪ್ಪಂದವಾಗಿ 85 ವರ್ಷಗಳಾಗುತ್ತಿವೆ. ದುಂಡು ಮೇಜಿನ ಪರಿಷತ್ತಿನ ಚರ್ಚೆಯ ಫಲಿತಾಂಶವಾಗಿ ಡಾ. ಅಂಬೇಡ್ಕರರು ಬ್ರಿಟಿಷರಿಂದ ದಲಿತರಿಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಪಡೆದುಕೊಂಡಿದ್ದರು. ಆದರೆ, ಗಾಂಧಿಯವರ ವಿರೋಧದಿಂದಾಗಿ ಅವನ್ನು ಪೂನಾ ಒಪ್ಪಂದದಲ್ಲಿ ಕಳೆದುಕೊಂಡು, ಜಂಟಿ ಮೀಸಲು ಕ್ಷೇತ್ರಗಳನ್ನು ಪಡೆದುಕೊಳ್ಳಬೇಕಾಯಿತು. ಭಾರತ ಸರ್ಕಾರದ ಕಾಯಿದೆ 1919 ರಂತೆ 10 ವರ್ಷಗಳಾದ ನಂತರ ದೇಶಕ್ಕೆ ಸ್ವಾತಂತ್ರ್ಯ ಕೊಡುವ ನಿಟ್ಟಿನಲ್ಲಿ ವಿಧಿವಿಧಾನಗಳನ್ನು ಪೂರೈಸಲು ಒಂದು ಆಯೋಗವನ್ನು ರಚಿಸಬೇಕೆಂದು ತೀರ್ಮಾನಿಸಲಾಗಿತ್ತು. ಅದರಂತೆ, 1928 ರಲ್ಲಿ ಸರ್ ಜಾನ್ ಸೈಮನ್ […]

ದಾಸ್ ಕ್ಯಾಪಿಟಲ್ (ಬಂಡವಾಳ), ಸಂಪುಟ ೧ ಕ್ಕೆ ಈಗ ೧೫೦ ವರ್ಷ

ದಾಸ್ ಕ್ಯಾಪಿಟಲ್ (ಬಂಡವಾಳ), ಸಂಪುಟ ೧ ಕ್ಕೆ ಈಗ ೧೫೦ ವರ್ಷ

ಬಂಡವಾಳ, ಸಂಪುಟ-೧ ಅನ್ನು ಒಳಗೊಂಡಂತೆ ಮಾರ್ಕ್ಸರು ಬರೆದ ಇತರ ಹಲವಾರು ಬರಹಗಳಲ್ಲಿ ಇರುವ ಯಾವ ಅಂಶಗಳು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯೊಳಗೆ ಸೆಳೆಯಲ್ಪಟ್ಟಿರುವ ಒಂದು ಶೋಷಿತ ದೇಶದಲ್ಲಿ ನಡೆಯುವ ಬಂಡವಾಳಶಾಹಿ ಪ್ರಕ್ರಿಯೆಯ ಮೇಲೆ ಬೆಳಕು ಚೆಲ್ಲಲು ನಮಗೆ ಸಹಾಯ ಮಾಡುತ್ತದೆ? ಇಪಿಡಬ್ಲ್ಯೂ ಸಂಪಾದಕೀಯ ತಂಡದ ಸದಸ್ಯರಾದ ಬೆರ್ನಾರ್ಡ್ ಡೆಮೆಲ್ಲೋ ಬರೆಯುತ್ತಾರೆ: ಇದೇ ಸೆಪ್ಟೆಂಬರ್ ೨೦೧೭ಕ್ಕೆ ಕಾರ್ಲ್ ಮಾರ್ಕ್ಸರು ಬರೆದ ದಾಸ್ ಕ್ಯಾಪಿಟಲ್ (ಬಂಡವಾಳ) ಕೃತಿಯ (ಜರ್ಮನಿಯ ಹ್ಯಾಂಬರ್ಗ್ನಲ್ಲಿ) ಮೊಟ್ಟ ಮೊದಲ ಪ್ರಕಟಣೆಗೆ ೧೫೦ ವರ್ಷವಾಗುತ್ತದೆ. (ಬಂಡವಾಳ- ಸಂಪುಟ ೧ರ […]

ಗೌರಿಯನ್ನು ಕೊಂದ ಬುಲೆಟ್ಟು ನೀಡುತ್ತಿರುವ ಸಂದೇಶ

ಗೌರಿಯನ್ನು ಕೊಂದ ಬುಲೆಟ್ಟು ನೀಡುತ್ತಿರುವ ಸಂದೇಶ

ಗೌರಿ ಲಂಕೇಶರ ಹತ್ಯೆ ಮಾಧ್ಯಮ ಲೋಕಕ್ಕೆ ಅತ್ಯಂತ ಅಪಾಯಕಾರಿ ಸಂದೇಶವೊಂದನ್ನು ರವಾನಿಸುತ್ತಿದೆ. ಬೆಂಗಳೂರಿನ ಪ್ರಖ್ಯಾತ ಮತ್ತು ಜೀವನ್ಮುಖಿ ಪತ್ರಕರ್ತೆಯಾದ ಗೌರಿ ಲಂಕೇಶರು ಸೆಪ್ಟೆಂಬರ್ ೫ ರಂದು ಹಂತಕನೊಬ್ಬನ ಗುಂಡಿಗೆ ಬಲಿಯಾಗಿದ್ದಾರೆ. ಆದರೆ ಹಂತಕ ಹಾರಿಸಿದ ಗುಂಡು ಕೊಂದಿದ್ದು ಕೇವಲ ಗೌರಿ ಲಂಕೇಶರನ್ನು ಮಾತ್ರವಲ್ಲ. ಹಂತಕರು ಈ ಹತ್ಯೆಯ ಮೂಲಕ ಗೌರಿಯಷ್ಟು ಧೈರ್ಯಶಾಲಿಗಳಲ್ಲದಿದ್ದರೂ ಗೌರಿಯ ರೀತಿಯೇ ಪತ್ರಕರ್ತರಿಗೆ ಅಧಿಕಾರಸ್ಥರನ್ನು ಪ್ರಶ್ನಿಸುವ, ಯಾಜಮಾನ್ಯ ಧೋರಣೆಗಳ ಬಗ್ಗೆ ಅಭಿಪ್ರಾಯ ಬೇಧವನ್ನಿಟ್ಟುಕೊಳ್ಳುವ, ಸಾಮಾಜಿಕ ಪಿಡುಗುಗಳ ಬಗ್ಗೆ ತನಿಖೆ ಮಾಡುವ, ಮತ್ತು ಉನ್ನತ ಸ್ಥಾನಗಳಲ್ಲಿರುವವರು […]

ಮಾನವೀಯತೆಗಾಗಿ ಆಕ್ರಂದನ

ಮಾನವೀಯತೆಗಾಗಿ ಆಕ್ರಂದನ

ಇಸ್ಲಾಮ್ಭೀತಿ ಅಥವಾ ಸಂಪನ್ಮೂಲ ಕೊರತೆಗಳನ್ನು ಮುಂದುಮಾಡಿ ರೋಹಿಂಗ್ಯ ಬಿಕ್ಕಟ್ಟಿನ ಬಗೆಗಿನ ನಿಷ್ಖ್ರಿಯತೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಜಗತ್ತಿನ ಬಹುಪಾಲು ಕಡೆಗಳಲ್ಲಿ ಇಸ್ಲಾಮನ್ನು ಒಂದು ಭಯೋತ್ಪಾದಕ ಧರ್ಮವೆಂದು ಭಾವಿಸುತ್ತಾರೆ ಎಂದು ಹೇಳುವುದು ಈಗ ಒಂದು ಕ್ಲೀಷೆಯೇ ಆಗಿಬಿಟ್ಟಿದೆ. ಮತ್ತೊಂದು ಕಡೆ ಬುದ್ಧ ಧರ್ಮವು ಶಾಂತಿಯುತವಾದ, ವೈಚಾರಿಕ ಮತ್ತು ವೈಜ್ನಾನಿಕ ಧರ್ಮವಾಗಿದ್ದು ಆಧುನಿಕ ಜೀವನ ಪದ್ಧತಿಗೆ ಹೊಂದಾಣಿಕೆಯಾಗುವಂಥ ಧರ್ಮವೆಂದು ಪ್ರತಿಪಾದಿಸಲಾಗುತ್ತಿದೆ. ಆದರೆ ಮಯನ್ಮಾರ್ ದೇಶದಲ್ಲಿ ಮಿಲಿಟರಿ ಆಡಳಿತದ ಸಕ್ರಿಯ ಬೆಂಬಲದೊಂದಿಗೆ ಆ ದೇಶದ ಬುದ್ಧಧರ್ಮೀಯ ಉಗ್ರವಾದಿಗಳು ಪ್ರಧಾನವಾಗಿ ಇಸ್ಲಾಮ್ ಧರ್ಮವನ್ನು ಅನುಸರಿಸುವ […]

ತ್ರಿವಳಿ ತಲಾಖ್ : ನೆಲಬಾಂಬುಗಳಿಂದ ಕೂಡಿದ್ದ ಪ್ರದೇಶವೊಂದರ ಮೇಲೆ ಯಶಸ್ವಿ ಪ್ರಯಾಣ

ತ್ರಿವಳಿ ತಲಾಖ್ : ನೆಲಬಾಂಬುಗಳಿಂದ ಕೂಡಿದ್ದ ಪ್ರದೇಶವೊಂದರ ಮೇಲೆ ಯಶಸ್ವಿ ಪ್ರಯಾಣ

ಒಂದು ಸಣ್ಣ ಸರಿಹೆಜ್ಜೆ ತ್ರಿವಳಿ ತಲಾಖ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟು ನೆಲಬಾಂಬುಗಳಿಂದ ಕೂಡಿದ್ದ ಪ್ರದೇಶವೊಂದರ ಮೇಲೆ ಯಶಸ್ವಿ ಪ್ರಯಾಣ ಮಾಡಿದೆ. ಭಾರತೀಯ ಮುಸ್ಲಿಂ ಮಹಿಳೆಯರು ಒಂದು ಸಣ್ಣ ವಿಜಯವನ್ನು ಪಡೆದಿದ್ದಾರೆ. ಇದರ ಶ್ರೇಯಸ್ಸು ಸ್ವಯಂ ಮುಸ್ಲಿಮ್ ಮಹಿಳೆಯರಿಗೆ ಮತ್ತು ನ್ಯಾಯಾಂಗಕ್ಕೆ ಸಲ್ಲಬೇಕೇ ವಿನಃ ಅದರಲ್ಲಿ ಪಾಲು ಕದಿಯಲು ಹೊಂಚುಹಾಕುತ್ತಿರುವ ಭಾರತೀಯ ಜನತಾ ಪಕ್ಷಕ್ಕಲ್ಲ. ಈ ಮಹಿಳೆಯರ ಸತತ ಪರಿಶ್ರಮದಿಂದಾಗಿಯೇ ಆ ಅಹವಾಲು ಸುಪ್ರೀಂ ಕೋರ್ಟಿನಲ್ಲಿ ದಾಖಲಾಯಿತು. ಈಗ ಸುಪ್ರೀಂ ಕೋರ್ಟು ಅವರ ಅಹವಾಲಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಸ್ಲಿಂ […]

ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್ ಕಲ್ಯಾಣರಾಜ್ಯದ ಕನಸುಗಳು!

ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್  ಕಲ್ಯಾಣರಾಜ್ಯದ ಕನಸುಗಳು!

  ಜನರ ತೆರಿಗೆ ಹಣ ಪೋಲಾಗುತ್ತಿದೆ! ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ ಹಸಿದವರಿಗೆ ಮೀನು ಹಿಡಿಯುವುದನ್ನು ಕಲಿಸಬೇಕೇ ಹೊರತು ಮೀನನ್ನೇ ಕೊಡುವುದು ಸರಿಯಲ್ಲ! ಇಂತಹ ಆಣಿ ಮುತ್ತುಗಳು ನಿತ್ಯವೂ ಕೇಳಿ ಬರುತ್ತಿದೆ. ಅದರಲ್ಲೂ ನವಸಾಕ್ಷರಸ್ಥರ  ಮಾಧ್ಯಮಗಳೆಂದೇ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ನೂರಾರು ಸ್ಟೇಟಸ್ಸುಗಳು, ಪುಟ್ಟ ಲೇಖನಗಳು,  ವ್ಯಂಗ್ಯ ಚಿತ್ರಗಳು ಹರಿದಾಡುತ್ತಿವೆ.  ಕರ್ನಾಟಕ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದೆನಿಸಿದ ಇಂದಿರಾ ಕ್ಯಾಂಟೀನ್  ಆರಂಭವಾದ ಕ್ಷಣದಿಂದಲೆ, ಈ ಯೋಜನೆಯ ಬಗೆಗಿನ ಅಸಹನೆ, ಅಸಮಾದಾನಗಳು ಹೀಗೆ ಅಭಿವ್ಯಕ್ತಗೊಳ್ಳಲಾರಂಬಿಸಿದವು. ಇದೇನು ಹೊಸ ರೀತಿಯ […]

ಮೋದಿಯ ಮೂರು ವರ್ಷದ ಆಡಳಿತದ ನಂತರ ಅಂಬೇಡ್ಕರ್ ಪುನರ್‍ಮನನ

ಮೋದಿಯ ಮೂರು ವರ್ಷದ ಆಡಳಿತದ ನಂತರ ಅಂಬೇಡ್ಕರ್ ಪುನರ್‍ಮನನ

ಭಾರತದ ಮಹಾನ್ ನಾಯಕರೆಲ್ಲರನ್ನೂ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತವಾಗಿರುವ ಬಿಜೆಪಿ ಈಗ ತನ್ನ ಹಿಂದುತ್ವ ರಾಜಕಾರಣಕ್ಕಾಗಿ ಅಂಬೇಡ್ಕರ್ ಅವರನ್ನೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಜಾತಿ ತಾರತಮ್ಯಗಳಿಂದ ಹೊರತಾದ ಒಂದು ಸುಭದ್ರ ದೇಶವನ್ನು ನಿರ್ಮಿಸುವುದು ಅಂಬೇಡ್ಕರರ ಕನಸಾಗಿತ್ತು. ಇದೇ ಧ್ಯೇಯವನ್ನು ಬಿಜೆಪಿ ಹಿಂದೂಗಳನ್ನು ಒಂದಾಗಿಸುವ ಮೂಲಕ ಸಾಧಿಸಲು ಯತ್ನಿಸುತ್ತಿದೆ. ಅಂಬೇಡ್ಕರ್ ದಲಿತರ ಸಬಲೀಕರಣಕ್ಕಾಗಿ ಶ್ರಮಿಸಿದ್ದರು. ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಲು ರಾಮನಾಥ್ ಕೋವಿಂದ ಎಂಬ ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದೆ. ಅಂಬೇಡ್ಕರ್ ಆಧುನಿಕ ಭಾರತದ […]