ವಿಜಯಪುರದ ದಣಿವರಿಯದ ಹೋರಾಟಗಾರ ಭೀಮಶಿ ಕಲಾದಗಿ

ವಿಜಯಪುರದ ದಣಿವರಿಯದ ಹೋರಾಟಗಾರ ಭೀಮಶಿ ಕಲಾದಗಿ

ವಿಜಯಪುರದ ಕೆಎಸ್‍ಆರ್‍ಟಿಸಿ ಬಸ್‍ಸ್ಟಾಂಡಿನ ಬುಕ್‍ಸ್ಟಾಲ್ ಒಂದರಲ್ಲಿ ಕುತೂಹಲಕ್ಕೆ ಅಲ್ಲಿ ಪ್ರದರ್ಶನಕ್ಕಿಟ್ಟ ಪುಸ್ತಕಗಳನ್ನು ನೋಡುತ್ತಿದ್ದೆ. ಸ್ಥಳೀಯ ಎನ್ನುವ ಚಹರೆಯ ಪುಸ್ತಕಗಳು ಅಷ್ಟಾಗಿ ಕಾಣಲಿಲ್ಲ. ಇದರ ಮಧ್ಯೆ ದೂಳು ಮೆತ್ತಿಕೊಂಡ ಪುಸ್ತಕವೊಂದು ಗಮನ ಸೆಳೆಯಿತು. ಆ ಪುಸ್ತಕವನ್ನು ಎತ್ತಿಕೊಂಡೆ. ಅದು ಅಣ್ಣಾರಾಯ ಈಳಗೇರ ಸಂಪಾದಿಸಿದ `ಜನಮುಖಿ ಭೀಮಶಿ ಕಲಾದಗಿ’ ಎನ್ನುವ ಪುಸ್ತಕವಾಗಿತ್ತು. ಪುಸ್ತಕದಂಗಡಿಯವರಿಗೆ ಈ ಪುಸ್ತಕದ ಪ್ರತಿಯೊಂದನ್ನು ಕೇಳಿದಾಗ ಆತ ಅಂಗಡಿ ಒಳಗಿದ್ದ ಹೊಸ ಪ್ರತಿಯೊಂದನ್ನು ನೀಡಿದರು. ನಂತರ ಕುತೂಹಲದಿಂದ ಈ ಕೃತಿಯನ್ನು ಓದಿದಾಗ ಭೀಮಶಿ ಕಲಾದಗಿಯವರ ಹೋರಾಟಧ ಕಥನದ […]

ಕೇಂದ್ರದ ಒತ್ತಡಕ್ಕೆ ಮಣಿದ ಚುನಾವಣಾ ಆಯೋಗ!

ಕೇಂದ್ರದ ಒತ್ತಡಕ್ಕೆ ಮಣಿದ ಚುನಾವಣಾ ಆಯೋಗ!

ತನ್ನ ಅದೀನದಲ್ಲಿರುವ ಸಿ.ಬಿ.ಐ., ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸಂಸ್ಥೆಗಳನ್ನು ಕೇಂದ್ರ ಸರಕಾರ ತನ್ನ ಹಿತಾಸಕ್ತಿಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾಯಿತು. ಇದೀಗ ಕೇಂದ್ರಚುನಾವಣಾ ಆಯೋಗದ ಸರದಿ! ಕೇಂದ್ರ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳನ್ನು  ಸಹ ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದೆಂಬುದನ್ನು ಕೇಂದ್ರದ ಬಾಜಪ ಸರಕಾರ ಇದೀಗ ತೋರಿಸಿಕೊಟ್ಟಿದೆ. ಏಕಕಾಲಕ್ಕೆ ನಡೆಯಬೇಕಿದ್ದ ಹಿಮಾಚಲಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿದಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಘೋಷಿಸುವಾಗ ಕೇವಲ ಹಿಮಾಚಲಪ್ರದೇಶದ ಚುನಾವಣೆಗೆ ದಿನಾಂಕ ನಿಗದಿ ಪಡಿಸಿದ್ದು, ಗುಜರಾತಿನ ಚುನಾವಣೆಯ ದಿನಾಂಕ ನಿಗದಿಗೊಳಿಸದೆ ಇರುವುದಕ್ಕೆ […]

ನಿನಗೆ ಅಲ್ವಿದಾ ಹೇಳಲು ಸಾಧ್ಯವೇ ?

ನಿನಗೆ ಅಲ್ವಿದಾ ಹೇಳಲು ಸಾಧ್ಯವೇ ?

(ಅಕ್ಟೋಬರ್ 13 1987ರಂದು ಇಹಲೋಕ ತ್ಯಜಿಸಿದ ವೈವಿಧ್ಯಮಯ ಗಾಯಕ, ನಟ , ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ವಿದೂಷಕ ಇತ್ಯಾದಿ ಇತ್ಯಾದಿ , ಕಿಶೋರ್ ಕುಮಾರ್ ಅವರ 30ನೆಯ ವರ್ಷದ ಸ್ಮರಣೆಯಲ್ಲಿ ಈ ಲೇಖನ ) ಮುಂಜಾವಿನ ಸೂರ್ಯೋದಯ ನೋಡುತ್ತಲೇ ನಿನ್ನ “ ಸವೇರೇ ಕಾ ಸೂರಜ್ ತುಮ್ಹಾರೇ ಲಿಯೇ ಹೈ ” ಮನದಾಳದಲ್ಲಿ ಗುನುಗುನಿಸುತ್ತದೆ. ನಿತ್ಯ ಚಟುವಟಿಕೆಗಳು ಆರಂಭವಾಗುತ್ತಲೇ “ ಜಿಂದಗೀ ಕೆ ಸಫರ್ ಮೆ ಗುಜರ್ ಜಾತೆ ಹೈ ಜೋ ಮಖಾಂ ಓ ಫಿರ್ […]

ಮಾರಕವಾಗಿರುವ ನಗರ ಯೋಜನೆಗಳು

ಮಾರಕವಾಗಿರುವ ನಗರ ಯೋಜನೆಗಳು

ನಗರ ಯೋಜನಾ ಕರ್ತೃಗಳು ಮುಂಬೈನಲ್ಲಿ ಸಂಭವಿಸಿದ ೨೩ ಪ್ರಯಾಣಿಕರ ದಾರುಣ ಸಾವಿನಿಂದ ಏನಾದರೂ ಪಾಠಗಳನ್ನು ಕಲಿಯುತ್ತಾರೆಯೇ? ಸೆಪ್ಟೆಂಬರ್ ೨೩ರ ಬೆಳಿಗ್ಗೆ ಮುಂಬೈನ ಉಪನಗರ ರೈಲ್ವೆ ಜಾಲದ (ಸಬ್ ಅರ್ಬನ್ ರೈಲ್ವೆ) ಪಶ್ಚಿಮ ವಲಯದಲ್ಲಿನ ಎಲ್ಫಿನ್‌ಸ್ಟೋನ್ ರೋಡ್ ನಿಲ್ದಾಣದ ಪಾದಾಚಾರಿ ಸೇತುವೆಯ ಮೇಲೆ ಕಾಲ್ತುಳಿತಕ್ಕೆ ಸಿಕ್ಕಿ ೨೨ ಪ್ರಯಾಣಿಕರು ದಾರುಣವಾಗಿ ಸಾವನ್ನಪಿದರು. ಮರುದಿನ ೨೩ನೇಯವರು ಸಹ ಅಸು ನೀಗಿದರು. ಕಳೆದ ಮೂರು ದಶಕಗಳಲ್ಲಿ ಮುಂಬೈನ ಕೇಂದ್ರ ಮತ್ತು ದಕ್ಷಿಣ ಭಾಗಗಳ ಹತ್ತಿಗಿರಣಿಗಳಿದ್ದ ಪ್ರದೇಶಗಳಲ್ಲಿ ಕಚೇರಿ, ವಾಣಿಜ್ಯ ಸಂಕೀರ್ಣಗಳು ತಲೆ […]

ನಂಬಿಕೆ ಮೂಢನಂಬಿಕೆ ಮತ್ತು ವರ್ಗ ತಾರತಮ್ಯ

ನಂಬಿಕೆ ಮೂಢನಂಬಿಕೆ ಮತ್ತು ವರ್ಗ ತಾರತಮ್ಯ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಸೂದೆಯೊಂದು ಕೊನೆಗೂ ವಿರೂಪಗೊಂಡು ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದೆ. ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನಡೆದುಕೊಳ್ಳುತ್ತಲೇ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದರಲ್ಲಿ ನಾವು ನಿಸ್ಸೀಮರು ಎಂದು ರಾಜ್ಯ ಸರ್ಕಾರ ಮತ್ತೊಮ್ಮೆ ನಿರೂಪಿಸಲು ಹೊರಟಿದೆ. ನಮ್ಮಲ್ಲಿ ಏನೆಲ್ಲಾ ಶಾಸನಗಳಿಲ್ಲ. ಕೌಟುಂಬಿಕ ದೌರ್ಜನ್ಯ ನಿಯಂತ್ರಣ, ಜಾತಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ, ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ, ಅತ್ಯಾಚಾರ ನಿಯಂತ್ರಣ ಕಾಯ್ದೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಅಲಂಕಾರಿಕ ವಸ್ತುಗಳಂತೆ ಸಂವಿಧಾನದ […]

ಮೃಗಗಳು ಮತ್ತು ಮನುಷ್ಯರ ಕವಿತೆಗಳು!

ಮೃಗಗಳು ಮತ್ತು ಮನುಷ್ಯರ ಕವಿತೆಗಳು!

ಕವಿತೆ-ಒಂದು. ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರು ಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರು ಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ!   ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರು ಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರು ಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ!   ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರು ಇದೀಗ ಧರ್ಮಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ […]

ಸಂಪಾದಕೀಯ-31:ಜನರು ಆಹಾರವನ್ನು ತಿನ್ನುತ್ತಾರೆಯೇ ವಿನಃ ನೋಟುಗಳನ್ನಲ್ಲ..

ಸಂಪಾದಕೀಯ-31:ಜನರು ಆಹಾರವನ್ನು ತಿನ್ನುತ್ತಾರೆಯೇ ವಿನಃ ನೋಟುಗಳನ್ನಲ್ಲ..

ಪಡಿತರ ವ್ಯವಸ್ಥೆಯಲ್ಲಿ ಆಹಾರಧಾನ್ಯಗಳ ಬದಲಿಗೆ ನಗದು ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತರುವ ಪದ್ಧತಿಯು ಅಪೌಷ್ಟಿಕತೆಯ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳಿಗೆ ಅಡ್ಡಿಯುಂಟುಮಾಡುತ್ತದೆ. ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರತೀ ಸರ್ಕಾರವು ರಿಯಾಯತಿ ದರದಲ್ಲಿ ಬಡವರಿಗೆ ಆಹಾರ ಧಾನ್ಯಗಳನ್ನು ಒದಗಿಸುವ ಯೋಜನೆಯನ್ನು ರದ್ದು ಮಾಡಿ ಅದರ ಸ್ಥಾನದಲ್ಲಿ ನಿರ್ದಿಷ್ಟ ಫಲಾನುಭವೀ ವರ್ಗಗಳಿಗೆ ಈ ಯೋಜನೆಯ ಲಾಭ ದಕ್ಕುವಂತೆ ಮಾಡಲು ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್-ಡಿಬಿಟಿ) ಮಾಡುವ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಲೇ ಇವೆ. ೨೦೧೬-೧೭ರ ಆರ್ಥಿಕ […]

ಜಾಗತೀಕರಣ : ಸಂದಿಗ್ಧತೆಯಲ್ಲಿ ಮಹಿಳೆ

ಜಾಗತೀಕರಣ : ಸಂದಿಗ್ಧತೆಯಲ್ಲಿ ಮಹಿಳೆ

ಇಡೀ ವಿಶ್ವವೇ ಒಂದು ಸಣ್ಣ ಹಳ್ಳಿಯಾಗಿದೆ. ಆಧುನಿಕ ಸಂಪರ್ಕ ಮಾದ್ಯಮಗಳು ,ಸಮೂಹ ಮಾಧ್ಯಮಗಳು ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿದ್ಯಮಾನವನ್ನು ಪ್ರಪಂಚದ ಇನ್ನಾವುದೇ ಒಂದು ಮೂಲೆಯಲ್ಲಿ ಕುಳಿತು ನೋಡಲು, ತಿಳಿಯಲು ಸಾಧ್ಯವಾಗುವಂತೆ ಮಾಡಿದೆ. ಇದನ್ನೆ ನಾವು ಸ್ಥೂಲವಾಗಿ ಜಾಗತೀಕರಣ ಎನ್ನುತ್ತೇವೆ. ಅಖಂಡ ಜಗತ್ತನ್ನು ತನ್ನ ಅಖಾಡವಾಗಿರಿಸಿಕೋಂಡು ಸಮಕಾಲೀನ ಮಾನವ ಜೀವನದ ಎಲ್ಲ ಶಾಖೆಗಳ ಮೇಲೂ ಪ್ರಭಾವವನ್ನು ಬೀರುತ್ತಿರುವ ಅತ್ಯಂತ ಪ್ರಭಲ ಹಾಗು ಪ್ರಚೊದಕ ವಿದ್ಯಮಾನ ಈ ಜಾಗತೀಕರಣ. ಮೇಲ್ನೋಟಕ್ಕೆ ಇಷ್ಟೊಂದು ಸುಂದರವಾದ ಆಶಯಗಳನ್ನು ಒಳಗೊಂಡ ಪ್ರಕ್ರಿಯೆಗೆ ಒಂದೆಡೆ […]

ವಿಫಲವಾದ ಅನರ್ಥಕ್ರಾಂತಿಗೆ ಯಾರು ಹೊಣೆ ?

ವಿಫಲವಾದ ಅನರ್ಥಕ್ರಾಂತಿಗೆ ಯಾರು ಹೊಣೆ ?

ನವಂಬರ್ 8 2016ರಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವೇ ನಿಬ್ಬೆರಗಾಗುವ ರೀತಿಯಲ್ಲಿ 500 ಮತ್ತು 1000 ರೂ ನೋಟುಗಳನ್ನು ರದ್ದುಪಡಿಸಿದಾಗ ಭಾರತ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎಂದು ಎಲ್ಲೆಡೆ ಜಯಘೋಷ ಮೊಳಗಿತ್ತು. ಐವತ್ತು ದಿನಗಳ ಕಾಲಾವಕಾಶ ಕೊಡಿ, ನೋಟು ರದ್ದತಿ ಅಥವಾ ಅಮಾನ್ಯೀಕರಣ ವಿಫಲವಾದರೆ ಅಥವಾ ಸರ್ಕಾರದ ಉದ್ದೇಶಿತ ಧ್ಯೇಯ ಈಡೇರದಿದ್ದರೆ ನನ್ನನ್ನು ಸಾರ್ವಜನಿಕವಾಗಿ ಸುಟ್ಟುಬಿಡಿ ಎಂದು ತಮ್ಮ ಮನ್ ಕಿ ಬಾತ್ ಮೂಲಕ ಘೋಷಿಸಿದ ಪ್ರಧಾನಿ ಮೋದಿ ದೇಶದ ಮಧ್ಯಮ ವರ್ಗಗಳ ವಂದಿಮಾಗಧ […]

ಭಾರತೀಯ ಜನತಾ ಪಕ್ಷದ ದುರ್ಬಲ ಕೊಂಡಿ

ಭಾರತೀಯ ಜನತಾ ಪಕ್ಷದ ದುರ್ಬಲ ಕೊಂಡಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಗ್ರಾಮೀಣ ಭಾರತವನ್ನು ನಿರ್ಲಕ್ಷ್ಯ ಮಾಡುತ್ತಿದ್ದು ಅದಕಾಗಿ ಅದು ವಿತ್ತೀಯ ಮತ್ತು ರಾಜಕೀಯ ಬೆಲೆಯನ್ನು ತೆರಬೇಕಾಗುತ್ತದೆ. ರಾಜಸ್ಥಾನದ ರೈತರು ಸತತ ಹೋರಾಟ ನಡೆಸಿ ಅಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರದಿಂದ ೨೦,೦೦೦ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಳೆದ ನಾಲಕ್ಕು ತಿಂಗಳಲ್ಲಿ ಈ ರೀತಿ ನಾಲಕ್ಕು ರಾಜ್ಯಗಳು ಸಾಲಮನ್ನಾವನ್ನು ಘೋಷಿಸಿವೆ. ಅಷ್ಟೇ ಅಲ್ಲ. ಇದೇ ಬಗೆಯ ರೈತ ಹೋರಾಟಗಳು ದೇಶದ ಇನ್ನೂ ಹಲವು ಕಡೆ ಹರಡಿಕೊಳ್ಳುವ ಸಾಧ್ಯತೆಗಳಿವೆ. ಇವೆಲ್ಲವೂ ಆ […]

1 2 3 89