“ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್”

--ರಾಘವೇಂದ್ರ ಹೊನ್ನಜ್ಜಿ.


ಇಂದಿನ ಶಿಕ್ಷಣಕ್ಕೂ ಆಗಿನ ಶಿಕ್ಷಣಕ್ಕೂ ಅಜ-ಗಜಾಂತರ ವ್ಯತ್ಯಾಸವೇ ಇದೆ.  ಕಾಲೇಜೆಂದರೆ ಕಲಿಸುವ ಪಾಠವನ್ನ ಭಕ್ತಿಯಿಂದ ಕೇಳುತ್ತಾ , ಟೈಮು ಸಿಕ್ಕಾಗೆಲ್ಲಾ ಗೆಳೆಯರ ಜೊತೆ ಹರಟೆ ಹೊಡೆದು, ಆಗಾಗ ಕ್ಲಾಸ್ಗೆ  ಬಂಕ್ ಹಾಕಿ  ಸಿನಿಮಾಕ್ಕೆ ಹೋಗಿ , ಕಾಲೇಜೊಳಗೆ  ಮಾಡುವ ಪೋಲಿ ಹುಡುಗರ ಹಾರಾಟ ಇವೆಲ್ಲವೂ ಮುಗಿದು ಅದ್ಯಾವುದೋ ಕಾಲವಾಗಿ ಹೋಗಿದೆ. ಕೇವಲ ಪುಸ್ತಕದ ಪಾಠವಲ್ಲ, ನಮ್ಮ ಜೀವನದ ಪಾಠ. ಮೊದಲೆಲ್ಲಾ ಕಾಲೇಜೆಂದರೆ ಅಲ್ಲಿನ ವಿದ್ಯಾಥರ್ಿಗಳಿಗೆ ವಿಪರೀತ ಸ್ವಾತಂತ್ರ್ಯ. ಆಗಿನ ಶಿಕ್ಷಕರೂ ಅಷ್ಟೇ ಕಲಿಯುವ ವಿದ್ಯಾಥಿಗಳು ಕಲಿತು ಹೋಗಲಿ ಉಳಿದವರು ಅವರ ಭವಿಷ್ಯವನ್ನು ಅವರೇ ನೋಡಿಕೊಳ್ಳುತ್ತಾರೆ ಎಂಬ ತಾತ್ಸಾರ. ತಾತ್ಸಾರ ಎಂದು ಶಿಕ್ಷಕರ ಮೇಲೆ ದೂರುವುದಕ್ಕಿಂತಲೂ ಆಗಿನ ಶಿಕ್ಷಣ ಪದ್ಧತಿಯೇ ಹಾಗಿತ್ತೆಂದರೆ ತಪ್ಪಾಗಲಾರದು. ಆದರೆ ಇಂದಿನ ಶಿಕ್ಷಣ ಹಾಗಲ್ಲ. ವಿದ್ಯಾಥರ್ಿಗಳ ಭವಿಷ್ಯದ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರಬಲ್ಲದು.

“ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್” ಎಂಬ ಮಾತಿದೆ. ಇದರರ್ಥ ನಾವು ಕಾಲೇಜಿನ ಸೌಲಭ್ಯಗಳನ್ನ ಸದುಪಯೋಗ ಮಾಡಿಒಂಡು ವಿದ್ಯೆಯನ್ನ ಸರಿಯಾಗಿ ಕಲಿತು ಜೀವನದಲ್ಲಿ ಯಶಸ್ಸು ಕಾಣಬೇಕೆಂದು. ಆದರೆ ಅದೆಷ್ಟೋ ವಿದ್ಯಾyðಗಳು ಇದನ್ನ ತಪ್ಪಾಗಿ ಅರ್ಥ ಮಾಡಿಕೊಂಡು ಕೇವಲ ಎಂಜಾಯ್ ಮಾಡಬೇಕೆಂದೇ ಕಾಲೇಜಿಗೆ ಬರುವವರೂ ಉಂಟು. ಆದರೆ ಇಂದಿನ ಶಿಕ್ಷಣ ಈಗೀಗ ಇಂಥವರಿಗೂ ಕಡಿವಾಣ ಹಾಕುತ್ತಿದೆ. ಕಾಲೇಜು ಕ್ಯಾಂಪಸ್  ವಾತಾವರಣ ಒಂದು ಸುಂದರ ಲೋಕ. ಈ ಸುಂದರ ಲೋಕದಲ್ಲಿ ಇರುವ ನಾವೆಲ್ಲರೂ ಪುಣ್ಯವಂತರೇ, ಕಾರಣ ನಮ್ಮ ಕ್ಯಾಂಪಸ್ ನಮಗೆ ಶಿಕ್ಷಣ ನೀಡುವುದರ ಜೊತೆಗೆ ನಮ್ಮ  ನಡುವಳಿಕೆಯನ್ನು ನಿಯಂತ್ರಿಸಿ, ಜೀವನದಲ್ಲಿ ನಾವು ಇನ್ನೊಬ್ಬರ ಜೊತೆ ಯಾವ ರೀತಿ ಬದುಕಬೇಕೆಂದು ನಮಗೆ ಕಲಿಸಿಕೊಡುವುದು ನಮ್ಮ ಕ್ಯಾಂಪಸ್. ನಮ್ಮ ಕಾಲೇಜ್ ಕ್ಯಾಂಪಸ್ ಈಗೀಗ ನಿಯಮಾವಳಿಗಳ ಸರಮಾಲೆಯೇ ಆಗುತ್ತಿವೆ. ಕಾಲೇಜಿನೆಲ್ಲೆಡೆ ಸಿಸಿ ಕ್ಯಾಮರಾ, ಬೇಕಾಬಿಟ್ಟಿ ಬಂಕು ಹಾಕಿದರೆ ಅಟೆಂಡೆನ್ಸ್  ಆಗಿ ಎಕ್ಸಾಮ್ಗೆ ಕೋಳಲಿಕ್ಕೆ ಅವಕಾಶ ನೀಡದೆ ಎಲ್ಲರಿಗೂ ಕ್ಲಾಸ್ಗೆ ಬರುವ ಒತ್ತಡ ಹೇರಿ ಅವರಿಗೂ ಓದಲು ಆಸಕ್ತಿ ತರಿಸುವ ಅಧ್ಭುತ ವೇದಿಕೆ ನಮ್ಮ ಕ್ಯಾಂಪಸ್. ಅಷ್ಟೇ ಅಲ್ಲದೆ ಈಗಂತೂ ಕ್ಯಾಂಪಸ್ ಒಳಗೆ ಯಾರೊಬ್ಬರೂ ಮಾಡುವಂತಿಲ್ಲ.  ಮಾಡಿಯೇ ಬಿಟ್ಟರೆ ಅವರ ಭವಿಷ್ಯವನ್ನ ಖೆಡ್ಡಾಕೆ ನೂಕುವ ವ್ಯವಸ್ಥೆಯನ್ನ ನಮ್ಮ ಶಿಕ್ಷಣ ಮಾಡುತ್ತಿದೆ. ಹೀಗಾಗಿ ನಮ್ಮ ಕ್ಯಾಂಪಸ್ ಶಾಂತತೆಯ ತವರೂರು ಎನ್ನಿಸಿಕೊಳ್ಳುತ್ತಿದೆ.

ಈಗೀಗ ನಮ್ಮ ಕಾಲೇಜು ಕ್ಯಾಂಪಸ್ ಇಷ್ಟೊಂದು ಬದಲಾಗಲೂ ಕಾರಣವೂ ಇದೆ. ಮೊದಲೆಲ್ಲಾ ಶಿಕ್ಷಣಕ್ಕೆ ಇಷ್ಟೊಂದು ಬೆಲೆ ಇರಲಿಲ್ಲ. ಹಾಗಾಗಿ ವಿದ್ಯೆ ಕಲಿತವರಿಗಿಂತ ಕಲಿಯದೇ ಇದ್ದವರೇ ಜಾಸ್ತಿ ಪ್ರಮಾಣದಲ್ಲಿದ್ದರು. ಆದರೆ ಈಗ ಹಾಗಲ್ಲ. ಶಿಕ್ಷಣ ಕಲಿಯದೆ ಹೋದರೆ ಜೀವನ ನಡೆಸುವುದೇ ಕಷ್ಟವೆನ್ನುವ ಸ್ಥಿತಿಗೆ ಬಂದು ತಲುಪಿದೆ. ಅದರಲ್ಲೂ ಇಂದಿನ ಶಿಕ್ಷಣ ವಿದ್ಯಾಥರ್ಿಗಳಿಗೆ ಒದಗಿಸುವ ಸೌಲಭ್ಯವೇ ಶಿಕ್ಷಣ ಇಷ್ಟೊಂದು ಮಾನ್ಯತೆ ಪಡೆಯಲು ಕಾರಣವಿರಬಹುದು. ನಮ್ಮ ಕಾಲೇಜು ಕ್ಯಾಂಪಸ್ ಎಷ್ಟೊಂದು ಆಕಷರ್ಿತವಾಗಿವೆ ಎಂದರೆ ಅದಕ್ಕೆ ಕಾರಣ ಜ್ಞಾನ ಭರಿತ ಭಂಡಾರವಾಗಿರುವ ಗ್ರಂಥಾಲಯ.

ನಾನಾ ಚಟಗಳು ಮನುಷ್ಯನ ಜೀವನದ ಅವನತಿಗೆ ಕಾರಣವಾಗುತ್ತದೆ.ಆದರೆ ಸಮಗ್ರ ಜ್ಞಾನ ನೀಡುವ ಪುಸ್ತಕಗಳನ್ನು ಓದುವ ಚಟ ಬೆಳೆಸಿಕೊಂಡರೆ ಅದರಿಂದ ಜೀವನದಲ್ಲಿ ಗೌರವ, ಉನ್ನತಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ಇಂದಿನ ದಿನದಲ್ಲಿ ಯುವ ಜನರೂ ಸೇರಿದಂತೆ ಅನೇಕರು ಟೈಮ್ಪಾಸ್ ಆಗೋದಿಲ್ಲ, ಅದಕ್ಕಾಗಿ ಬೇರೆ ಬೇರೆ ಚಟ ರೂಢಿಯಾಗಿದೆ ಎನ್ನುತ್ತಾರೆ. ಆದರೆ ಅಂತಹ ಚಟಗಳ ಮೂಲಕ ಬದುಕನ್ನು ಹಾಳು ಮಾಡುವುದಕ್ಕಿಂತ ಪುಸ್ತಕ ಓದುವ ಚಟ ರೂಢಿಸಿಕೊಂಡರೆ ಒಳ್ಳೆಯದು. ಎಷ್ಟು ಸಮಯವಿದ್ದರೂ ಸಾಲದು ಎನ್ನುವಷ್ಟು ಪುಸ್ತಕಗಳು ಇದ್ದು, ಅವುಗಳನ್ನು ಓದುವ ಮೂಲಕ ಸರ್ವತೋಮುಖ ಬೇಳವಣಿಗೆ ನಮ್ಮಲ್ಲಿ ಸಾಧ್ಯ. ಆಗೆಲ್ಲಾ ಸಿಲೇಬಸ್ ಹೊರತುಪಡಿಸಿದ ಜ್ಷಾನವನ್ನ ಪಡೆಯಬೇಕೆದ್ದಿರೆ ಹೊರಗಿನ ಗ್ರಂಥಾಲಯವನ್ನ ಹುಡುಕಿಕೊಂಡು ಹೋಗಬೇಕಿತ್ತು. ಆದರೂ ಅವರಿಗೆ ಬೇಕಾಗು ಪುಸ್ತಕ ಸಿಕ್ಕೇಬಿಡುತ್ತದೆ ಎಂಬ ನಂಬಿಕೆ ಇರುತ್ತಿರಲ್ಲಿಲ್ಲ. ಆದರೆ ಈಗ ನಮಗೆ ಬೇಕಾಗುವಷ್ಟು ಜ್ಷಾನವನ್ನ ನಮಗೆ ಒದಗಿಸಿಕೊಡುವ ನಿಟ್ಟಿನಿಂದ ನಮ್ಮ ಕಾಲೇಜು ಕ್ಯಾಂಪಸ್ ಒಳಗೇ ಗ್ರಂಥಾಲಯ ಸ್ಥಾಪಿಸಲ್ಪಡುತ್ತದೆ. ಈಗಾಗಿ ನಮ್ಮ ಕಾಲೇಜ್ ಕ್ಯಾಂಪಸ್ ನಮ್ಮ ನಾಳೆಗೆ ಬೇಕಾಗುವಷ್ಟು ಜ್ಷಾನವನ್ನೂ ಭತರ್ಿಮಾಡುತ್ತದೆ. ಇದರಿಂದ ನಾವು ಮುಂದೆ ಸ್ವತಂತ್ರವಾಗಿ ಬದುಕಲು ನಮ್ಮ ಜ್ಞಾನ ನೇರವಾಗಿ ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾಥಿಗಳಿಗೂ ನಮ್ಮ ಕ್ಯಾಂಪಸ್ ಕ್ರೀಡಾಪಠುಗಳನ್ನ ಹೊರಜಗತ್ತಿಗೆ ಕೊಡುಗೆ ನೀಡುತ್ತಿದೆ. ಆಟವನ್ನ ಚೆನ್ನಾಗಿ ಆಡಿ ದೇಶಕ್ಕೆ ಕೀತರ್ಿ ತರುವ ಆಟಗಾರರು ಯಾವಾಗಲೂ ದೇಶಕ್ಕೆ ಬೇಕಾಗಿರುತ್ತಾರೆ. ಅಂಥಹ ಕ್ರೀಡಾಪಠುಗಳಲ್ಲಿ ಆಸಕ್ತಿ ಹೆಚ್ಚಿಸುವಂತಹ ಕೆಲಸ ಇಂದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿದೆ. ಕಾಲೇಜೆಂದರೆ ಕೇವಲ ಪುಸ್ತಕವೊಂದೆ ಇರುತ್ತದೆ ಎಂದು ಹೇಳುವ ಕಾಲ ಅದ್ಯಾವಗಲೋ ಹೊರಟುಹೋಗಿ ಆಗಿದೆ. ನಮಗೆಲ್ಲಾ ಬೇಕಾಗುವಷ್ಟು ಕ್ರೀಡಾ ಸಾಮಾಗ್ರಿಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಕಾಲೇಜು ಕ್ಯಾಂಪಸ್ ಒಳಗೇ ದೊರೆಯುತ್ತಿರುವುದು ಹರುಷದ ಸಂಗತಿ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳ ವೇದಿಕೆಯಲ್ಲಿ ನಡೆಯುವಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಬೇರೆಲ್ಲೂ ನಡೀತಾ ಇರೋಕೆ ಸಾಧ್ಯವೇ ಇಲ್ಲ. ಹೀಗಾಗಿ ನಮ್ಮ ಕ್ಯಾಂಪಸ್ ಅದ್ಭುತ ಕಲೆಗಾರರನ್ನೂ ಸೃಷ್ಟಿಮಾಡಿ ಜಗತ್ತಿಗೆ ಹೊರಚೆಲ್ಲುತ್ತಿದೆ.

ನಮ್ಮ ಶಿಕ್ಷಣ ನಮಗೆ ಇಷ್ಟೊಂದು ಸೌಲಭ್ಯ ಒದಗಿಸಿಕೊಟ್ಟು ನಮ್ಮನ್ನ ಇಷ್ಟೊಂದು ನಿಯಂತ್ರಿಸುದರಿಂದಲೇ ನಾವು ನಮ್ಮ ಭವಿಷ್ಯತ್ತಿನಲ್ಲಿ ಏನಾದರೂ ಸಾಧಿಸೋಕೆ ಸಾಧ್ಯವಾಗುತ್ತಿರುವು ಎಂದರೆ ತಪ್ಪಾಗಲಾರದು. ಪುಸ್ತಕದ ಶಿಕ್ಷಣವನ್ನ  ಯಾರು ಬೇಕಾದರೂ ನೀಡುತ್ತಾರೆ. ಆದರೆ ಜೀವನದ ಮೌಲ್ಯವನ್ನು ತಿಳಿಸಿಕೊಡುವುದು ನಮ್ಮ ಕಾಲೇಜ್ ಕ್ಯಾಂಪಸ್ ಮಾತ್ರ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕಲಿತವರೇ ಭಯೋತ್ಪಾದನೆ ಇಳಿಯುತ್ತಿರುವುದು ಮತ್ತೇನಕ್ಕೂ ಅಲ್ಲ, ಅಂಥವರಿಗೆ ಶಿಕ್ಷಣದ ಜೊತೆ ನೈತಿಕತೆಯನ್ನು ಕಲಿಸಿ ಕಟ್ಟವರು ಯಾರೂ ಇರುವುದಿಲ್ಲ. ಹಾಗಾಗಿಯೇ ನಮ್ಮ ಕ್ಯಾಂಪಸ್ ಇಷ್ಟೊಂದು ಬದಲಾಗಿರುವುದು.

ನಮ್ಮ ಸಮಾಜದಲ್ಲಿ ಎಲ್ಲಾ ತೆರನಾದ ಜನರೂ ವಾಸಿಸುತ್ತಿರುತ್ತಾರೆ. ಭಾರತದಲ್ಲಿಯೇ ನೋಡುವುದಾರೆ 125 ಕೋಟಿ ಜನರಲ್ಲಿ  ಕೆಲವರು ಮಾತ್ರ ಮನುಷ್ಯರಂತೆ ಬದುಕುತ್ತಿದ್ದಾರೆ. ಆ ಕೆಲವರನ್ನೂ ಮನುಷ್ಯರನ್ನಾಗಿ ಮಾಡಿದ್ದು ಅವರ ಶಿಕ್ಷಣವೇ ಆಗಿದೆ. ಕೆಲವರು ನಮ್ಮ ಕ್ಯಾಂಪಸ್ನ್ನು ಜೈಲು ಎಂದು ಕರೆಯುತ್ತಾರೆ. ನಮ್ಮನ್ನ ಉದ್ಧಾರ ಮಾಡುವ ಉದ್ದೇಶದಿಂದ ಕ್ಯಾಂಪಸ್ನ್ನು ಅದೆಷ್ಟೇ ಭಿಗಿ ಮಾಡಿದರೂ ಅದು ನಮ್ಮ ನಾಳಿನ ಒಳ್ಳೆಯದಕ್ಕೆ ಎಂದು ಎಲ್ಲರಿಗೂ ನೆನಪಿರಲಿ.ಅವರುಗಳು ನಮ್ಮ ಕಾಲೇಜ್ ಕ್ಯಾಂಪಸ್ನ್ನ ಜೈಲು ಎಂದರೂ ತಪ್ಪಿಲ್ಲ. ಕಾರಣ ಜೈಲು ಇರುವುದೂ ತಪ್ಪುಗಳು, ಅಪರಾಧಗಳು ನಡೆಯದೇ ಇರಲಿ ಎಂದು. ನಮ್ಮ ಕ್ಯಾಂಪಸ್ಸೂ ಅಷ್ಟೇ ನಾವುಗಳು ಮುಂದೆ ತಪ್ಪುಗಳನ್ನ ಮಾಡದೆ ಇರಲಿ ಎಂಬ ಸದುದ್ದೇಶದಿಂದ.

ಅದರಲ್ಲೂ ಈಗೀನ ದಿನಗಳಲ್ಲಿ ಸಮಾಜ ಸೇವೆಗೆ ಪೂರಕವಾಗಿರುವ ಎನ್.ಎಸ್.ಎಸ್, ಎನ್.ಸಿ.ಸಿ. ರೆಡ್ಕ್ರಾಸ್ನಂತಹುಗಳೂ ಬಹುತೇಕ ಕಾಲೇಜಿನಲ್ಲಿ ಇರುತ್ತದೆ. ಇದರಿಂದ ನಮ್ಮಲ್ಲಿ ಸಮಾಜ ಸೇವೆ ಮಾಡುವ ಮನೋಭಾವವೂ ಬೆಳೆಯುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಮಾಜ ಸೇವೆ ಗೈಯ್ಯಲು ನಮಗೆ ಸಹಾಯವಾಗಿ ನಾಲ್ಕು ಮಂದಿಗಾದರೂ ನಾವು ಉಪಯೋಗಕ್ಕೆ ಬಂದಿರುತ್ತೇವೆ. ನಮ್ಮ ಕಾಲೇಜ್ ಕ್ಯಾಂಪಸ್ ನಮಗೆ ಇಷ್ಟೆಲ್ಲಾ ಕಲಿಸುವುದಕ್ಕೇ ನಮ್ಮ ಸ್ವಾತಂತ್ರ್ಯವನ್ನು ಅದರ ಹತೋಟಿಯಲ್ಲಿ ಇಟ್ಟುಕೊಂಡಿರುತ್ತದೆ. ಆದರೂ ನಮಗೆ ನಮ್ಮ ಕ್ಯಾಂಪಸ್ ಬೋರು ಹೊಡೆಯುತ್ತದೆ, ಶಿಕ್ಷೆ ನೀಡುತ್ತಿದ್ದ ಹಾಗೆ ಭಾಸವಾಗುತ್ತದೆ. ನಮ್ಮ ಈ ಭಾವನೆ ತಪ್ಪಲ್ವಾ?

ನಾವುಗಳು ನಮ್ಮ ನಾಳೆಗಳಲ್ಲಿ ಹೇಗಿರಬೇಕೆಂದು ನಮ್ಮ ಕ್ಯಾಂಪಸ್ಸೆ ನಮಗೆ ಕಲಿಸಿಕೊಟ್ಟಿರುತ್ತದೆ. ಕ್ಯಾಂಪಸ್ಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರಿಂದ ನಾವು ನಮ್ಮ ನಡುವಳಿಕೆಯಲ್ಲಿ ನಿಯಂತ್ರಣ ಇಟ್ಟುಕೊಂಡಿರುತ್ತೇವೆ,  ಮೊಬೈಲ್ ಬಿಟ್ಟು ನಾಲ್ಕು ಜನ ಗೆಳೆಯರ ಜೊತೆ ಮಾತನಾಡುತ್ತೇವೆ, ಇದೇ ರೀತಿ ಕ್ಯಾಂಪಸ್ನ ಶಿಕ್ಷಣದಿಂದ ನಾವು ಹಲವಾರು ಜೀವನದ ಮೌಲ್ಯಗಳನ್ನ ಕಲಿತುಕೊಳ್ಳುತ್ತಾ ಇರುತ್ತೇವೆ. ಆದರೆ ಅದು ನಮ್ಮ ಗಮನಕ್ಕೆ ಬಂದಿರುವುದಿಲ್ಲ.  ಕ್ಯಾಂಪಸ್ನ ಒಳಗೆ ನಾವು ಶಿಸ್ತುಬದ್ಧಾಗಿದ್ದರೆ ಕ್ಯಾಂಪಸ್ನ ಹೊರಗೂ ನಾವು ಹಾಗೆಯೇ ಇರುತ್ತೇವೆ.

ನಾವೆಲ್ಲರೂ ತಿಳಿದುಕೊಳ್ಳಬೇಕಾದ ಸತ್ಯವೆಂದರೆ ನಮಗೆ ಕಾಲೇಜು ಕ್ಯಾಂಪಸ್ ಒಳಗೆ ಎಷ್ಟು ಸ್ವಾತಂತ್ರ್ಯ ಸಿಕ್ಕಿರುತ್ತದೆಯೋ ಅದಷ್ಟೇ ಸ್ವಾತಂತ್ರ್ಯದಿಂದ ನಾವು ಕೊನೆವರೆಗೂ ನೆಮ್ಮದಿಯಿಂದ ಇರೋಕೆ ಸಾಧ್ಯವಾಗುತ್ತದೆ. ನಾವು ಸಮಾಜದಲ್ಲಿ ಹೇಗಿರಬೇಕೆಂದು ಕ್ಯಾಂಪಸ್ ನಮಗೆ ಮೊದಲೇ ತಿಳಿಸಿಕೊಟ್ಟಿರುತ್ತದೆ.  ಆದರೆ ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ನಮ್ಮ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡು ನಿಸ್ವಾಥರ್ಿಗಳಂತೆ ಬದುಕುತ್ತಿದ್ದೇವೆ. ನಮ್ಮ ಕ್ಯಾಂಪಸ್ ನಮಗೆ ಕಲಿಸಿಕೊಟ್ಟಿದ್ದನ್ನೂ ನಾವು ಮರೆಯುತ್ತಿದ್ದೇವೆ !

 

–ರಾಘವೇಂದ್ರ ಹೊನ್ನಜ್ಜಿ.

ಬಿಎ ತೃತಿಯ ವರ್ಷ,

ಪತ್ರಿಕೋಧ್ಯಮ

ಎಮ್.ಎಮ್. ಆmïìð ಆಂಡ್ ಸೈನ್

ಕಾಲೇಜ್, ಶಿರಸಿ.

 

Leave a Reply

Your email address will not be published.