ಹೆಜ್ಜೆ ಗುರುತು

ನಾಗಪ್ಪ.ಕೆ.ಮಾದರ

footprintsಪ್ರೀತಿ ಪ್ರೇಮ ಪ್ರಪಂಚದಲ್ಲಿ
ಬಾನಾಡಿ ಹಕ್ಕಿಗಳಂತೆ ಹಾರಾಟ
ನಡೆಸುತ್ತಿದ್ದ ನಮ್ಮಿಬ್ಬರಿಗೂ
ಅದು ಯಾರ ಕಣ್ಣು ತಾಗಿತೋ ಗೊತ್ತಾಗುತ್ತಿಲ್ಲ!

ಅವಳ ನಡೆ ಇಂದು ಒಮ್ಮೊಮ್ಮೆ
ನನ್ನೆಡೆಗೆ ಸುಳಿದರೂ ಸಹ
ಅವಳ ಕಾಲುಗಳು ಮಾತ್ರ
ನನ್ನ ಹೃದಯ ಬಡಿತ ಕೇಳಿ ಮಾಯವಾಗುತ್ತಿವೆ!

ಮೊದಲು ನನ್ನ ಧ್ವನಿ ಕೇಳಿದರೆ
ಸಾಕು ಅವಳ ಹೆಜ್ಜೆ ಗುರುತುಗಳು
ನನ್ನ ಕಡೆ ಒಲುಮೆಯಿಂದ ಸುಳಿಯುತ್ತಿದ್ದವು!

ನಿನ್ನ ಪ್ರೀತಿಯ ನಿರೀಕ್ಷೆಯಲ್ಲಿ
ಜೀವ ಸಾಗುತ್ತಿದೆ ವಿನಹ
ನನ್ನ ಜೀವನ ನಡೆಸುವ

ಹೊಣೆಗಾರಿಕೆ ನಿನಗಲ್ಲದೆ
ಮತ್ಯಾರಿಗೂ ಕೂಡಾ ನಾನು
ಕೊಡಲ್ಲ ಅದಕ್ಕೆಲ್ಲ ಕಾರಣ ನಿನ್ನ
ಪ್ರೀತಿಯ ಹೆಜ್ಜೆ ಗುರುತುಗಳು!

ನಾಗಪ್ಪ.ಕೆ.ಮಾದರ
ಹಾಲಕುಸುಗಲ್, ನವಲಗುಂದ, ಧಾರವಾಡ.
ಪತ್ರಿಕೋದ್ಯಮ ವಿಭಾಗ ಕವಿವಿ ಧಾರವಾಡ.
7204473094

2 Responses to "ಹೆಜ್ಜೆ ಗುರುತು"

 1. Kariappa poojari  January 19, 2017 at 3:30 pm

  Heart touching poem
  I love it, thanks nagappa sir

  Reply
 2. Naveen shetty  January 20, 2017 at 7:10 pm

  nice

  Reply

Leave a Reply

Your email address will not be published.