ಸ್ವಾವಲಂಬಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ.

ಗೋಪಾಲ ಕ್ರುಷ್ಣ ಎ. ಆರ್ .

ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಯೋಗಗಳು ನಡೆಯುತ್ತಿರುವ ಕ್ಷೇತ್ರ ಕೃಷಿಕ್ಷೇತ್ರ. ಇದರಲ್ಲಿನ ಪ್ರಯೋಗಗಳು ಹಲವು ವಿಧಗಳನ್ನು ಅನುಸರಿಸುತ್ತಿವೆ, ಇಷ್ಟೆಲ್ಲಾ ಪ್ರಯೋಗಗಳ ನಡುವೆಯೂ ಇಂದಿಗೂ ಇಡೀ ವಿಶ್ವದ ಹಸಿವನ್ನು ತೀರಿಸುವಲ್ಲ್ಲಿ ಯಾವ ವಿಧಾನವೂ ಸಫಲವಾಗಿಲ್ಲ. ಇಂತಹ ಪ್ರಯೋಗಗಳ ನಡುವೆ ಭಾರತೀಯ ಕೃಷಿಕ್ಷೇತ್ರ ಬಹಳ ಗಮನವನ್ನು ಸೆಳೆಯುತ್ತದೆ, ಭಾರತದ ಆರ್ಥಿಕ ವ್ಯವಸ್ಥೆಯ ಮುಖ್ಯ ನೆಲೆಯಾಗಿ, ಬಹುಪಾಲು ಜನರ ಉದ್ಯೋಗ ಕ್ಷೇತ್ರವಾಗಿ ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಾಲಗಳಿಂದ ಕೂಡಿದ ಅಸ್ತಿರ ಕ್ಷೇತ್ರವಾಗಿರುವುದು ವಾಸ್ತವ.

ಇಂದಿನ ಪರಿಸ್ತಿತಿಯಲ್ಲಿ ಸಾಲದಿಂದ, ಉತ್ಪಾದನಾ ಕ್ಷೇತ್ರದಲ್ಲಾಗಿರುವ ವಿವಿದ ಆರ್ಥಿಕ ಬದಲಾವಣೆಗಳಿಂದ ಕೃಷಿ ಮತ್ತಷ್ಟು ಸಮಸ್ಸೆಗಳಿಗೆ ಈಡಾಗಿದೆ. ಇಲ್ಲಿ  ಹಿಂದುಳಿದ ಪದ್ದತಿಗಳು ಎಂದು ಕರೆದಿರುವುದು ರಸಾಯನಿಕ ಕೃಷಿಯನ್ನೂ ಮತ್ತು ಬದಲಾದ ಉತ್ಪಾದನಾ ಒಡೆತನಗಳು ಎಂದರೆ ಜಾಗತೀಕ ಖಾಸಗೀಕರಣ ಮತ್ತು ದೇಶೀಯ ಖಾಸಗೀ ಭೂ ಮಾಲಿಕತ್ವ.

ಭಾರತದಲ್ಲಿ ವಿವಿಧ ಸ್ಥರದ ರೈತರಿದ್ದಾರೆ ಭೂ ರಹಿತ ರೈತರು, ಸಣ್ಣ ಹಿಡುವಳಿದಾರರು, ಸ್ಥಿತಿವಂತ ರೈತರು ಮತ್ತು ಬಂಡವಾಳ ಶಾಹಿ ರೈತರು. ಯಾರ ದೃಷ್ಟಿಯಿಂದ ಈ ವಲಯವನ್ನು ಅವಲೋಕಿಸಬೇಕು, ಈ ಪ್ರಶ್ನೆಗೆ ಸ್ಪಷ್ಟತೆ ನೀಡಬೇಕು ಭಾರತದ ಒಟ್ಟುಮಂದಿಯ ಶೇಖಡ 70 ಮಂದಿ ಕೃಷಿಕರಿದ್ದಾರೆ. ಇವರ ದೃಷ್ಟಿಕೋನದಲ್ಲಿ ಇಂದಿನ ವ್ಯವಸಾಯ ಕ್ಷೇತ್ರವನ್ನು ವಿವರಿಸಲು ಸಾದ್ಯವೇ. ಇದನ್ನು ಚರ್ಚೆ ಯಾಗಿರಿಸಿಕೊಂಡು ಚರ್ಚೆಯನ್ನು ಮುಂದುವರೆಸಬೇಕು.

ಭಾರತೀಯ ಕೃಷಿ ಮತ್ತು ಪರಾವಲಂಬನೆ

ಪರಾವಲಂಬನೆಯ ಪರಿಕಲ್ಪನೆಯಲ್ಲಿ ವ್ಯವಸಾಯ ಕ್ಷೇತ್ರವನ್ನು ವಿವರಿಸಿದರೆ ಎಲ್ಲಾ ಸಮಸ್ಸೆಗಳ ಮೂಲ ಗೊತ್ತಾಗುತ್ತದೆ, ಏಕೆಂದರೆ ಸ್ವಾವಲಂಬನೆಯು ಕೃಷಿಯ ಮೂಲಭೂತ ಲಕ್ಷಣ. ಅದು ಅವಲಂಬನೆಗಳಿಗೆ ಒಳಗಾಗುತ್ತಿದ್ದಂತೆ ಎಲ್ಲಾ ಸಮಸ್ಸೆಗಳು ಒಂದಾದ ಮೇಲೊಂದರಂತೆ ನಿರಂತರವಾಗಿ ವ್ಯಾಪಿಸಿಕೊಳ್ಳುತ್ತದೆ. ಇಂದು ಭಾರತದ ವ್ಯವಸಾಯ ಕ್ಷೇತ್ರದ ಪದ್ದತಿಗಳು ಸಂಪೂರ್ಣವಾಗಿ ಬದಲಾವಣೆಗೊಂಡಿವೆ, ಅವು ಪ್ರಾದೇಶಿಕ ಕೃಷಿ ಪದ್ದತಿಗಳಿಂದ ಬದಲಾವಣೆಗೊಂಡು ರಸಾಯನಿಕ ಕೃಷಿ ಪದ್ದತಿಗಳಿಗೆ ಬದಲಾಗಿವೆ, ಹಾಗು ಅದನ್ನು ಪ್ರಗತಿದಾಯಕ ಎಂದು ಭಾವಿಸಲಾಗಿದೆ. ಆದರೆ ಬಹುಮುಖ್ಯ ನಿಜಾಂಶವೆಂದರೆ ವೈಜ್ಞಾನಿಕ ಕೃಷಿ ಪ್ರತಿ ಹೆಜ್ಜೆಯಲ್ಲೂ ಬೇರೊಂದನ್ನು ಅವಲಂಬಿಸಿದೆ ಮತ್ತು ಅದರ ಉತ್ಪಾದನಾ ವೆಚ್ಚಗಳು ತೀರಾ ಹೆಚ್ಚಾಗಿದೆ.

ಭಾರತದ ಸಾಮಾನ್ಯವರ್ಗದ ರೈತರನ್ನು ಹೊರತು ಪಡಿಸಿ ಕೆಲವೇ ಮಂದಿ ಬಂಡವಾಳಶಾಹಿಗಳು ವ್ಯವಸಾಯ ಕ್ಷೇತ್ರದಲ್ಲಿ ನೆಲೆ ಯೂರಿದ್ದಾರೆ. ಇಲ್ಲಿನ ವಿಧಾನ ಯಾಂತ್ರೀಕೃತ ವಿಧಾನ, ನೂರಾರು ಎಕರೆಗಳಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಉತ್ಪಾದಿಸುವ ವಿಧಾನ, ಒಟ್ಟಾರೆ ಖರ್ಚಿಗೂ ಸಿಗುವ ಲಾಭ ಹೆಚ್ಚಿನ ಪ್ರಮಾಣದಾಗಿರುತ್ತದೆ. ಮತ್ತು ಇಲ್ಲಿ ರಸಾಯನಿಕಗಳ ಬಳಕೆ, ಗೋದಾಮು, ದಾಸ್ತಾನು ಇಂತಹ ವ್ಯವಸ್ಥೆಗಳು ಮಾರುಕಟ್ಟೆ ಬೆಲೆಯನ್ನು ನಿಯಂತ್ರಿಸುವಲ್ಲಿ, ನಿಯಂತ್ರಿಸುವಲ್ಲಿ ಬಹಳ ಮುಖ್ಯವಾಗುತ್ತವೆ. ಆದರೆ ಸಾಮಾನ್ಯ ರೈತನ ಪರಿಸ್ಥಿತಿ ಹೀಗಿದೆಯೇ…… ದುರದೃಷ್ಟವೆಂದರೆ ಇಂದು ಸಾಮಾನ್ಯ ರೈತನೂ ವಿವಿಧ ಕಾರಣಗಳಿಂದಾಗಿ ಇಂತದ್ದೇ ಪದ್ದತಿಯನ್ನು ಅನುಸರಿಸುತ್ತಿರುವುದರಿಂದ ನೈಜ, ಸಹಜ ಕೃಷಿಯು ಮಾಯವಾಗಿ ವೈಜ್ಞಾನಿಕ ಭ್ರಮೆಗೆ ಬಿದ್ದು ಬಹುತೇಕ ಶೋಷಣೆಗೆ ಒಳಗಾಗಿದ್ದಾನೆ ಮತ್ತು ಕಟ್ಟು ನಿಟ್ಟಿನ ನಿಯಂತ್ರಣಕ್ಕೆ ಒಳಪಟ್ಟಿದ್ದಾನೆ.

ಯಾಂತ್ರೀಕೃತ, ವೈಜ್ಞಾನಿಕ ಕೃಷಿಯಿಂದ ಕೃಷಿಕ್ಷೇತ್ರದಲ್ಲಿ ಅವಲಂಬನೆ ದಿನೇ ದಿನೇ ಹೆಚ್ಚುತ್ತದೆ, ಹೇಗೆ ಈ ಅವಲಂಬನೆ ಉಂಟಾಗುತ್ತದೆ, ಅದರ ಪ್ರಾರಂಭವೇ ಬಿತ್ತನೆ ಬೀಜಗಳು.  ನಮ್ಮಾಯ್ಕೆ ಅಲ್ಲದ ಬಿತ್ತನೆ ಬೀಜ, ಹೆಚ್ಚನ ಇಳುವರಿಗಾಗಿ. ಈಬದಲಾವಣೆಯನ್ನು ಅಂಗೀಕರಿಸಿದ ನಂತರ ಅದು ಸರಿಯಾಗಿ ಬೆಳೆಯಲು ಇಂತದ್ದೇ ಔಷದಿ, ಇಂತದ್ದೇ ರಸಗೊಬ್ಬರ, ಕೀಟನಾಶಕ, ಅದರ ಪಾಲನೆಗೆ ಇನ್ನಿಲ್ಲದ ಸೂಕ್ಷ್ಮ ಕ್ರಮಗಳು.. ಇದೆಲ್ಲಾ ನಿಸರ್ಗ ವನ್ನು ನಿಯಂತ್ರಿಸುವ ವಿಧಾನವೆಂದು ಇದುವರೆಗೂ ಅರ್ತ ಮಾಡಿಕೊಳ್ಳದೆ ಮೂರ್ಖ ಪ್ರಯತ್ನಗಳು ಮುಂದುವರೆಯುತ್ತಲೇಇವೆ. ಹಾಗೆಯೇ ಸಾಮಾನ್ಯ ಕೃಷಿಕನನ್ನು ನಿಯಂತ್ರಣಕ್ಕೊಳಪಡಿಸುವ ಜಾಗತಿಕ ಕುತಂತ್ರ ಎಂದು ನಮ್ಮ ರೈತನೂ ಅರ್ತಮಾಡಿಕೊಂಡಿಲ್ಲ..

ಭಾರತ ಸೇರಿದಂತೆ ಹಲವಾರು ಮದ್ಯಮ ಅಭಿವೃದ್ದಿ ದೇಶಗಳ ಕೃಷಿಯು ಸಂಪೂರ್ಣ ಅವಲಂಬನೆಗೊಳಪಟ್ಟಿದೆ. ಅಮೇರಿಕಾದಂತಹ ಬಂಡವಾಳ ಶಾಹಿ ಕೃಷಿ ಪದ್ದತಿಯನ್ನು, ಇಸ್ರೇಲ್ ನಂತಹ ದೇಶಗಳ ಕೃಷಿಪದ್ದತಿಯನ್ನು ಅಭಿವೃದ್ದಿಪರ ಕೃಷಿಎಂದು ಬಿಂಬಿಸುತ್ತಾ ಅಲ್ಲಿ ಯಂತೆ ಇಲ್ಲಿ ಕೃಷಿ ಮಾಡುತ್ತಿದ್ದಾರೆ. ಇದು ದೇಶದ ಆರ್ತಿಕತೆಗೂ, ಸಾಮಾನ್ಯ ಕೃಷಿಕನ ಆರ್ತಿಕತೆಗೂ, ಆರೋಗ್ಯಕ್ಕೂ ತೊಂದರೆ ನೀಡುವಂತಹ ಕೃಷಿ ಪದ್ದತಿ. ಇಲ್ಲಿ ಬಳಸುವ ಯೂರಿಯಾ, ಪಾಸ್ಪೇಟ್, ರಂಜಕದಂತಹ ಕೃಷಿ ರಸಾಯನಿಕಗಳು ವಿದೇಶಗಳಿಂದಲೇ ಆಮದಾಗಬೇಕು, ಅಥವ ವಿದೇಶಿ ಕಂಪನಿಗಳೇ ಇದರ ಪೂರೈಕೆಯ ಗುತ್ತಿಗೆಯನ್ನು ಪಡೆದಿರುತ್ತವೆ, ಗೊಬ್ಬರ ಪೂರೈಕೆ, ಅದರ ದರ ನಿರ್ದಾರ, ಕೃಷಿಕರಿಗೆ ಉಪಯೋಗ ವಾಗಲೆಂದು ಸರ್ಕಾರ ಸಬ್ಸಿಡಿಯನ್ನೂ ನೀಡುತ್ತದೆ ಆದರೆ ಇದರ ಸಂಪೂರ್ಣ ಲಾಭದಾಯಕವಾಗಿ ಕಂಪನಿಗಳು ರೂಪಿಸಿ ಕೊಳ್ಳುತ್ತವೆ.

ಕೃಷಿಯನ್ನು ಅವಲಂಬನಾ ರಹಿತವನ್ನಾಗಿಸಲು ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?, ಪರಿಸರ ಸ್ನೇಹಿ ಸಹಜ ಕೃಷಿಗೆ ಏಕೆ ಗಮನ ಕೊಡುತ್ತಿಲ್ಲ. ಕೃಷಿಯನ್ನು ಜಾಗತಿಕ ಮಾರುಕಟ್ಟೆಯ ಒತ್ತಡಗಳಿಂದ ಪಾರುಮಾಡಿದರೆ ಕೃಷಿಕ ನೆಮ್ಮದಿಯಾಗಿ ಜೀವಿಸ ಬಲ್ಲ, ಆದರೆ ಏಕೆ ಅಂತಹ ಪ್ರೋತ್ಸಾಹ ಸರ್ಕಾರದ ಕಡೆಯಿಂದ ಸಿಗುತ್ತಿಲ್ಲ? ಇಂತಹ ಕೃಷಿಗೆ  ಅತೀಹೆಚ್ಚು ಬಂಡಾಳ ಅಗತ್ಯವಿಲ್ಲ, ಶ್ರಮ ಬೇಕಾಗಿಲ್ಲ ಆದರೂ ಇದು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಬೇಸರದ ಸಂಗತಿ.

ಸರಳವಾಗಿ ಈ ಪದ್ದತಿ ಯಸಸ್ಸು ಸಾಧಿಸುವ ವಿಧಾನ ಹೇಗೆಂದರೆ, ದೇಶದ ಪ್ರತಿ ರೈತರ ಕುಟುಂಬಕ್ಕೆ ಅಥವಾ ಕೃಷಿಯಲ್ಲಿ ಆಸಕ್ತಿ ಹೊಂದಿರುವವನಿಗೆ ಭೂ ವಿತರಿಸಿ ರಸಾಯನಿಕ ಮುಕ್ತ ಸಹಜ ಕೃಷಿಯ ಬಗೆಗೆ ಸ್ವಲ್ಪ ತಿಳವಳಿಕೆ ನೀಡಿದರೆ ಸಾಕು, ಏಕೆಂದರೆ ನಮ್ಮ ಪೂರ್ವಿಕರ ಕೃಷಿ ಬಹುತೇಕ ರಸಾಯನ ಮುಕ್ತ ಕೃಷಿ ಆಗಿದ್ದರಿಂದ ಇದನ್ನು ನಮ್ಮ ಜನ ಸುಲಭವಾಗಿ ಕಲಿಯುತ್ತಾರೆ. ಭೂ ಹಿಡುವಳಿಗಳನ್ನು ಸಣ್ಣ ಪ್ರಮಾಣದಲ್ಲಿ ವಿತರಿಸುವುದರಿಂದ ಬಂಡವಾಳ ಅತೀ ಕಡಿಮೆಯೇ ಇರುತ್ತದೆ. ರಸಾಯನ ಮುಕ್ತ ಕೃಷಿ ಬಹುತೇಕ ಸುಲಭ ಕರ್ಚಿನಲ್ಲಿಯೇ  ಇರುತ್ತದೆ. ಯಾವುದೇ ಅನಗತ್ಯ ಖರ್ಚುಗಳಿರುವುದಿಲ್ಲ, ಹಾಗೆಯೇ ಬೃಹತ್ ಯತ್ರೋಪಕರಣಗಳು, ಅವುಗಳ ಇಂದನದ ಖರ್ಚು ಇತ್ಯಾದಿಗಳು ನಿವಾರಿಸಿದರೆ ಅದು ಕ್ರಮೇಣ ರೈತನ ನಿಯಂತ್ರಣಕ್ಕೆ ಬರುತ್ತದೆ. ಕೃಷಿಯ ಸಂಪೂರ್ಣ ನಿಯಂತ್ರಣ ಎಂದು ರೈತನಿಗೆ ಲಭ್ಯವಾಗುತ್ತದೆಯೋ ಅಂದು ಕೃಷಿಕ್ಷೇತ್ರದ ಅಭಿವೃದ್ದಿ ಆದಂತೆಯೇ.

ಭಾರತದ ಕೃಷಿಯ ಸಮಸ್ಸೆಗಳು ಎಂದು ಚರ್ಚಿಸುವಾಗ ಕೃಷಿಯ ಒಂದು ಮುಖ್ಯ ಸಮಸ್ಸೆಯನ್ನಾಗಿ ಭೂ ಹಿಡುವಳಿಗಳ ಅ್ಭದ್ರಿಕರಣ ಎಂಬುದಾಗಿ ವಿವರಿಸುತ್ತಾರೆ. ಆದರೆ ಇಂದು ಹಲವಾರು ದೇಶಗಳಲ್ಲಿ ಭೂಮಿಯನ್ನು ಸಣ್ಣ ಹಿಡುವಳಿಗಳನ್ನಾಗಿ ಮಾಡಿ ಅದರಲ್ಲಿ ಸಹಜ ಕೃಷಿಯನ್ನು ಕೈಗೊಂಡು ಪ್ರಗತಿಯತ್ತ ಮುಂದುವರೆಯುತ್ತಿರುವುದನ್ನು ಕಾಣಬಹುದು. ಭೂಮಿಯನ್ನು ಎಲ್ಲರಿಗೂ ಹಂಚಿದಾಗ ಸಮಾನತೆಯ ವಿವಿಧ ಆಶಯಗಳು ನಿಧಾನವಾಗಿ ಕ್ರಮೇಣ ಸಾಧನೆಯಾಗುತ್ತವೆ.

“ಸ್ವಾವಲಂಬನೆ ಸಾಧಿಸುವುದು ಇಂತಹ ಚಿಕ್ಕ ಚಿಕ್ಕ ಸುಧಾರಣೆಗಳಿಂದಲೇ, ಹಾಗೂ ಪರಿಸರ ಸ್ನೇಹಿ ಸಹಜ ಕೃಷಿಯ ಮುಖಾಂತರ”  ಇಂದು ಇಡೀವಿಶ್ವವೇ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ, ಹೆಚ್ಚು ಇಳುವರಿಗಾಗಿ ಹೆಚ್ಚು ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಕೆ ಮಾಡುತ್ತಿದ್ದು ಇದನ್ನು ಅಭಿವೃದ್ದಿದಾಯಕ ಹಾಗೂ ಮುಂದುವರೆದ ಸ್ಥಿತಿ ಎಂದು ಹೇಳಲಾಗುತ್ತಿದೆ. ನೈಜವಾಗಿ ಈ ಪದ್ದತಿ ಪ್ರಕೃತಿಯೊಂದಿಗೆ ಮನುಷ್ಯನು ಹೊಂದಿರುವ ಕ್ರೂರ ಸಂಭಂಧವನ್ನು ತಿಳೀಸುತ್ತದೆ ಮಾತ್ರವಲ್ಲ ವೈಜ್ಞಾನಿಕ ದೃಷ್ಟಿಯಿಂದ ತುಂಬಾ ಅಪಾಯಕಾರಿಯೂ ಹೌದು!!!

“ವೈಜ್ಞಾನಿಕ ಕೃಷಿ ಎಂದರೆ ರಸಾಯನಿಕಗಳನ್ನು ಬಳಸುವುದು ಅಲ್ಲ” ನಮ್ಮ ಜಗತ್ತಿನ ಎಲ್ಲಾ ವಿನಾಶಕಾರಿ ಸಂಶೋಧನೆಗಳು ವಿಜ್ಞಾನದ ಪ್ರತಿಫಲ ಆದರೆ ವಿಜ್ಞಾನ ಮನುಷ್ಯನನ್ನು ನಾಶದತ್ತ ಕೊಂಡೊಯ್ಯುವ ಆಶಯ ಹೊಂದಿಲ್ಲ. ಇದನ್ನು ಮೂಲಭೂತವಾಗಿ ಅರ್ತ ಮಾಡಿಕೊಂಡರೆ ವಿಜ್ಞಾನ ಮತ್ತು ಶಾಂತಿ, ಪ್ರೀತಿ, ಸಂವೃದ್ದಿ ಈ ಅಂಶಗಳು ಅರ್ತವಾಗುತ್ತವೆ. ವಿಜ್ಞಾನ ಮತ್ತು ಸಂವೃದ್ದಿಯ ಮುಖಾಂತರ ಇಂದಿನ ರಾಸಾಯನಿಕ ಕೃಷಿಯನ್ನು ಸಾರಾ ಸಗಟಾಗಿ ನಿರಾಕರಿಸಬಹುದು. ವಿಜ್ಞಾನ ಯಾವತ್ತಿಗೂ ಪರಿಸರ ಸ್ನೇಹಿ ಯಾಗಿರುತ್ತದೆಯೇ ಹೊರತು ವಿನಾಶಕಾರಿ ಸ್ವರೂಪದ್ದಲ್ಲ. ಆ ವಿನಾಶಕಾರಿ ಮನಃ ಸ್ಥಿತಿ ಮನುಷ್ಯನದ್ದು. ಸಹಜ ಕೃಷಿಯಲ್ಲಿ ಮನುಷ್ಯ ಮತ್ತು ನಿಸರ್ಗದ ಸಂಬಂಧ ಸ್ನೇಹ ಪೂರ್ವಕ ಮತ್ತು ಶಾಂತಿಪೂರ್ವಕ ವಾಗಿರುತ್ತದೆ ಇದು ಇಬ್ಬರಿಗೂ ಒಳಿತು ಮಾಡುವಂತಹ ಕೃಷಿ. ಸಹಜಕೃಷಿ ಪ್ರಕೃತಿಯ ಪ್ರತಿಯೊಂದು ಚಟುವಟಿಕೆಗಳ ನಡುವೆ ಜೈವಿಕ ಸಂಭಧವನ್ನಿರಿಸಿಕೊಂಡಿರುತ್ತದೆ, ಕೀಟನಿಯಂತ್ರಣ, ರೋಗನಿಯಂತ್ರಣ, ಕಳೆನಿಯಂತ್ರಣ, ಉತ್ತಮ ಇಳುವರಿ ಇಂತಹ ಎಲ್ಲಾ ಚಟುವಟಿಕೆಗಳು ಜೈವಿಕ ನಿಯಂತ್ರಣದ ಮೂಲಕ ತುಂಬಾ ಸುಲಭವಾಗಿ ನಡೆದರೆ ರಸಾಯನ ಕೃಷಿಯಲ್ಲಿ ಒರತಿರೋಧಗಳ ನಡುವೆ ಒತ್ತಾಯ ಪೂರ್ಣ ನಿಯಂತ್ರಣವೊಂದು ಏರ್ಪಡುತ್ತದೆ, ಮಾಲಿನ್ಯಕರವಾದ, ಪ್ರಕೃತಿಗೆ ಹೆಚ್ಚು ಹಾನಿಯನ್ನುಂಟುಮಾಡುವ ಕೃಷಿ ಇದಾಗಿರುತ್ತದೆ.

ಸಹಜ ಕೃಷಿಯ ಯಶಸ್ಸಿನ ನಿದರ್ಶನಗಳು

ಯಾವುದಾದರೂ ಯಶಸ್ಸಿನ ನಿದರ್ಶನದ ಹೊರತಾಗಿ ನಾವು ಹೊಸದೊಂದನ್ನು ಪ್ರಯೋಗಿಸಲು ಹಿಂಜರಿಯುತ್ತೇವೆ. ಅದಕ್ಕಾಗಿಯೇ ಸಹಜಕೃಷಿಯ ಯಶಸ್ವಿ ಪ್ರಯೋಗಗಳನ್ನು ಗಮನಿಸಿದರೆ ನಮ್ಮಲ್ಲೂ ಸ್ವಲ್ಪ ಬದಲಾವಣೆಗಳು, ಧೈರ್ಯ ಬರಬಹುದು. ‘ಮಸನೋಬು ಪುಕುವೊಕ’ ಈನಿಟ್ಟಿನಲ್ಲಿ ಗಮನ ಸೆಳೆಯುವ ಕೃಷಿಕ, ಜಪಾನಿನ ಈವ್ಯಕ್ತಿ ಯನ್ನ ಜೀವಿತಾವಧಿಯಲ್ಲಿ ನಡೆಸಿರುವ ಕೃಷಿ ಪ್ರಯೋಗಗಳು ಆಶ್ಚರ್ಯ ಹುಟ್ಟಿಸುತ್ತವೆ. ಜೀವಶಾಸ್ತ್ರದ ವಿಜ್ಞಾನಿಯಾದ ಈತ ಒಂದು ಉತ್ತಮ ಕೃಷಿಪದ್ದತಿಯಾದ ಸಹಜಕೃಷಿಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾನೆ. ಅದು ಎಷ್ಟರ ಮಟ್ಟಿಗಿನ ಸಹಜ ಕೃಷಿಎಂದರೆ ಭೂಮಿಯನ್ನು ಉಳುವುದನ್ನೂ ಬಿಟ್ಟು ಪಡೆದ ಬೃಹತ್ ಫಸಲಿನ ವರೆಗೂ ಆತನ ಯಶಸ್ಸಿನ ಕತೆ ಹಬ್ಬಿದೆ.

ಪುಕುವೋಕ ಅನುಸರಿಸಿದ ರೂಡಿಸಿಕೊಂಡ ವಿಧಾನಗಳು ಅತ್ಯಂತ ಕಡಿಮೆಬಂಡವಾಳದ ಕಡಿಮೆ ಖರ್ಚಿನ ವಿಧಾನಗಳು, ಆದರೆ ಇದು ಸಾಧ್ಯವೇ ಎಂಬುದು ನಮಗೆ ಪ್ರಶ್ನೆಯಾಗಿ ಕಾಡಬಹುದು… ಈತನ ಯಶಸ್ಸನ್ನು ಗುರ್ತಿಸಿ ಮಾಗ್ಸಸ್ಸೆ ಪ್ರಶಸ್ತಿಯನ್ನೂ ನೀಡಿದ್ದಾರೆ, ಭಾರತ ಸರ್ಕಾರ ದೇಶೀಕೋತ್ತಮ ಪ್ರಶಸ್ತಿಯನ್ನೂ ನೀಡಿದೆ!!!. ಆತನು ತನ್ನ ಕೃಷಿ ಪದ್ದತಿಗಳನ್ನು ಪ್ರಯೋಗಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾನೆ. ಒಂದು ಹುಲ್ಲಿನ ಕ್ರಾಂತಿ ಈನಿಟ್ಟಿನಲ್ಲಿ ಗಮನಿಸ ಬಹುದಾದ ಬಹಳ ಮುಖ್ಯ ಕೃತಿ. ವೈಜ್ಞಾನಿಕ ಕೃಷಿಪದ್ದತಿ ರೂಪಿಸುವ ಎಲ್ಲಾ ಅಸಮಾನತೆಗಳನ್ನು ನಿವಾರಿಸಿ ಕಟ್ಟಿರುವ ಸಹಜ ಕೃಷಿ ಮನುಷ್ಯನ ಜೀವನದ ರೀತಿ ನೀತಿಗಳನ್ನೂ ರೂಪಿಸುತ್ತದೆ ಎನ್ನುವುದಕ್ಕೆ ಪುಕುವೊಕ ಒಂದು ದೊಡ್ಡ ಉದಾಹರಣೆ.

ಇನ್ನೊಂದು ಗಮನ ಸೆಳೆಯುವ ನಿದರ್ಶನ ಕ್ಯೂಬಾದ ಪರಿಸರ ಸ್ನೇಹಿ ಕೃಷಿ ಮಾದರಿಯದ್ದು. ತೀವ್ರ ಆರ್ಥಿಕ ಬಿಕ್ಕಟ್ಟುಗಳಿಂದ ಬಳಲಿದ ದೇಶ ಕ್ಯೂಬಾ. ರಾಜಕೀಯ ಬದಲಾವಣೆಗಳಿಂ ಅಂತರಾಷ್ಟ್ರೀಯ ನಿರ್ಭಂಧಗಳಿಗೂ ಒಳಗಾಯಿತು ಅದರ ಪರಿಣಾಮ ವಾಗಿ ಕೃಷಿಕ್ಷೇತ್ರ ಭಾರೀ ಪೆಟ್ಟು ತಿಂದಿತು. ಆಹಾರದ ಕೊರತೆಯಿಂದ ದೇಶದ ಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಆದರೆ ಕ್ಯೂಬಾ ದೇಶದ ಸರ್ಕಾರ ತನ್ನದೇಶದ ಆಧುನಿಕ ಕೃಷಿಪದ್ದತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಗೊತ್ತಾಗಿದ್ದು ಇಡೀ ದೇಶದ ಕೃಷಿ ಪರಾವಲಂಬಿಯಾಗಿದೆ ಎಂದು.  ಗೊತ್ತಾದ ನಂತರ ಅಲ್ಲಿನ ಸರ್ಕಾರ ಮೊದಲು ಮಾಡಿದ ಬದಲಾವಣೆ ಪ್ರಾದೇಶಿಕ ಹಾಗು ಸಹಜ ಕೃಷಿಗಳಿಗೆ ಪ್ರೋತ್ಸಾಹ ನೀಡಿದ್ದು. ಇದನ್ನು ತ್ವರಿತವಾಗಿ ಇಡೀ ದೇಶದಾದ್ಯಂತ ತ್ವರಿತವಾಗಿ ಪಸರಿಸುವಂತೆ ನೋಡಿಕೊಂಡಿತು. ರಸಾಯನಿಕಗಳ ನಿಯಂತ್ರಣದ ಬದಲಾಗಿ ಜೈವಿಕ ನಿಯಂತ್ರಣ, ರಸಗೊಬ್ಬರಕ್ಕೆ ಬದಲಾಗಿ ಎರೆ ಕಾಂಪೋಸ್ಟ್ ಗೊಬ್ಬರ, ತ್ರಾಕ್ಟರ್ ಗಳಿಗೆ ಬದಲಾಗಿ ಎತ್ತು ನೇಗಿಲು ಹೀಗೆ ಕೃಷಿಯನ್ನು ಸಾಂಪ್ರದಾಯಕವಾಗಿ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಬೆಳೆಸಿತು. ಪರಿಣಾಮವಾಗಿ ಆದೇಶ ಇಂದು ಇಂದನ ಉಳಿತಾಯ, ಸಾಗಾಣಿಕಾ ವೆಚ್ಚ ಉಳಿತಾಯ, ರಸಾಯನಿಕಗಳ ಮಲಿನ ಮುಕ್ತ ಆಹಾರ, ಕೃಷಿನಷ್ಟ ತಡೆ ಇಂತಹ ಸಾಧನೆಗಳನ್ನು ಮಾಡಿದೆ.

ಇಂದು ನಮ್ಮ ದೇಶದಲ್ಲಿ ಕೃಷಿ ಕಾರ್ಪೊರೇಟ್ ನಿಯಂತ್ರಣದಲ್ಲಿದೆ, ನಮ್ಮದೇಶದ ಒಂದಳ್ಳಿಯಲ್ಲಿ ಒಬ್ಬ ರೈತ ನೇಣು ಹಾಕಿಕೊಳ್ಳುವುದಕ್ಕೂ ಬಂಡವಾಳಮಾರುಕಟ್ಟೆಗೂ ನೇರ ಸಂಭಂಧಗಳಿವೆ. ಹಾಗೆಯೇ ಕೃಷಿಸಾಲ ಮನ್ನಾ ಮಾಡಿ ಅಂತ ಕೇಳುವುದುಪ್ಯಾಷನ್ ಮತ್ತು ಯಾವುದ ಕಾರಣಕ್ಕೂ ಸಾಲ ಮನ್ನಾ ಮಾಡಲಾಗದು ಎನ್ನುವ ಕೇಂದ್ರನಾಯಕರ ಮಾತಿಗೂ ಕಾರ್ಪೊರೇಟ್ ಜಗತ್ತಿಗೂ ಸಂಭಂಧಗಳಿವೆ. ಇಂತಹ ಸಂಧರ್ಭ ಗಳಿಂದ ಹೊರಬರಬೇಕಾದರೆ ಇಂತಹ ನಿಯಂತ್ರಣಗಳಿಂದ ಹೊರಬರಬೇಕಾದರೆ ಸಹಜ ಕೃಷಿಯಂತಹ ಸ್ವಾವಲಂಬಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ.

ಅಸಮಾನತೆ ಮಾನವನ ಸೃಷ್ಟಿಯೇ ಹೊರತು ನಿಸರ್ಗದ ಸೃಷ್ಟಿಯಲ್ಲ, ಪ್ರಕೃತಿಯ ಪ್ರತಿಯೊಂದು ಘಟಕವೂ ಪ್ರತ್ಯೇಕತೆ ಮತ್ತು ವಿಶಿಷ್ಟತೆಯನ್ನು ಕಾಯ್ದುಕೊಂಡಿರುತ್ತದೆ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಲ್ಲ, ಕೃಷಿಯ ಇಂದಿನ ಪ್ರತಿಯೊಂದು ಅಸಮಾನತೆ, ತೊಂದರೆಗಳಿಗೆ ಸರ್ಕಾರದ ಪೆಡಸುತನವೇ ಕಾರಣ, ಆರ್ಥಿಕ ಕೇಂದ್ರೀಕರಣಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದಂತೆ ಬಡತನದ ಪ್ರಮಾಣ ಹೆಚ್ಚುತ್ತದೆ. ಇಂದುಕೃಷಿ ಕ್ಷೇತ್ರವೂ ಅದೇ ರೀತಿ ಆಗುತ್ತಿದೆ, ಕೃಷಿಕ್ಷೇತ್ರವನ್ನು ಮುಖ್ಯವಾಗಿ ಪರಿಗಣಿಸಬೇಕಾದದ್ದು ಸ್ವಾವಲಂಬನೆಯ ದೇಶ ಕಟ್ಟಲಿಕ್ಕಾಗಿ, ಆರ್ಥಿಕ ಲಾಭ ಗಳಿಸುವ ಕ್ಷೇತ್ರವನ್ನಾಗಿ ಅಲ್ಲ. ಆರ್ಥಿಕ ಲಾಭ ಕೃಷಿಯ ಎರಡನೆಯ ಉದ್ದೇಶ, ಅದರ ಮೊದಲ ಉದ್ದೇಶ ಜನರ ಹಸಿವು ನಿವಾರಣೆ. ಇಂದು ಭಾರತದಲ್ಲಿ ಹಸಿವಿನಿಂದ ಸಾಯುತ್ತಿರುವವರನ್ನು ನೋಡುತ್ತೇವೆ, ಇದಕ್ಕೆ ಕಾರಣ ಯಾರು, ನೇರ ಹೊಣೆ ಹೊರುವವರು ಯಾರು, ಒಬ್ಬ ವ್ಯಕ್ತಿಯ ಹಸಿವಿನ ಪರಿಣಾಮ ಮರುಗಳಿಗೆಯ ಆತನ ಯಾತನಾ ಮಯವಾದ ಸಾವು, ಅಷ್ಟು ನಿರ್ಲಕ್ಷ್ಯವೇ ನಮ್ಮ ಸಮಾಜ ಮತ್ತು ಸರ್ಕಾರಕ್ಕೆ.  ಕೃಷಿಕ್ಷೇತ್ರದ ಸಮಾನತೆ ಮತ್ತು ಸ್ವಾವಲಂಬನೆ ಇಂತಹದ್ದನ್ನು ನಿವಾರಿಸಬಲ್ಲದು. ಆನಿಟ್ಟಿನಲ್ಲಿ ಆಗಬಹುದಾದ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕು ಸಕ್ರಿಯವಾಗಿ ಚಾಲನೆ ಮಾಡಬೇಕು ಅಷ್ಟೆ……..

 

Leave a Reply

Your email address will not be published.