ಸಿಕ್ಕಿಂ : ನಾಥುಲಾ ಪಾಸ್ ಬದುಕುಳಿದ ಪ್ರವಾಸ

ಡಾ. ರಾಜೇಗೌಡ ಹೊಸಹಳ್ಳಿ

ನೇಪಾಲ-ಭೂತಾನ್-ಸಿಕ್ಕಿಂ ಹಿಮಾಲಯದ ಬುದ್ಧನ ತತ್ವಗಳನ್ನು ಅರಗಿಸಿಕೊಂಡಿರುವ ಭೂಸಾರಗಳು. ಚೈನಾ ಕಬಳಿಸಿದ ಟಿಬೆಟ್ ಕೂಡ ಇದೇ ಮಾದರಿಯದು.ಮೊದಲಿನೆರಡು ಸ್ವತಂತ್ರ ದೇಶಗಳು.ಭಾರತದ ಹಿಮಾಲಯ ತಪ್ಪಲು ಬೇರೆಯಲ್ಲ ಅವು ಬೇರೆಯಲ್ಲ ಎಂಬ ಸಾಂಗತ್ಯದವು.ನೇಪಾಲ ಅತಿ ಜನ ಸಂಖ್ಯಾ ಭಾರದಿಂದ ಹಾಗೂ ಭಾರತೀಯ ಸನಾತನ ಪ್ರಭುತ್ವ ಸೌಮ್ಯತೆಯನ್ನು ಹೊಂದಿದ ದೇಶ. ಆದರೆ ಭೂತಾನ್-ಸಿಕ್ಕಿಂ ಹಾಗಲ್ಲ. ಪರಿಸರವು ದೈವವೆಂಬ ತಿಳಿವಳಿಕೆಯವು.ಭೂತಾನ್ ದೇಶವಂತೂ ಸಂಸ್ಕøತಿಯಲ್ಲಿ ನಡಾವಳಿಯಲ್ಲಿ ಪರಿಸರ ರಕ್ಷಣೆಯಲ್ಲಿ ಜಗತ್ತಿಗೊಂದು ಮಾದರಿ.ಈ ಮಾದರಿಯನ್ನು ಅನುಸರಿಸುತ್ತಾ ಹೊರಟಿರುವ ಸಿಕ್ಕಿಂ ರಾಜ್ಯವು ನಮ್ಮ ಭಾರತ ದೇಶದಲ್ಲಿದ್ದು ಒಂದು ಮಾದರಿ ಸಾವಯವ ರಾಜ್ಯವಾಗುತ್ತಿದೆಯೆಂಬುದು ಹೆಮ್ಮೆಯ ಸಂಕೇತ.ಅಲ್ಲಿಯ ಸಂಸ್ಕøತಿ ಮತ್ತು ಭಾಷೆ ಇವೆಲ್ಲವೂ ನೇಪಾಳಿ ಸಾಂಗತ್ಯದವು. Lepchas, Bhutias ಜನಾಂಗೀಯ ಟಿಬೆಟ್ ಸಾಂಸ್ಕøತಿಕ ಮೂಲದವು.

kanchenjunga-1

ಭಾರತಕ್ಕೆ ಸ್ವತಂತ್ರ ಬಂದಾಗ ಸಿಕ್ಕಿಂ ಪ್ರಭುತ್ವ ಕೂಡ ಬ್ರಿಟಿಷರ ಮರ್ಜಿಯಲ್ಲಿದ್ದು ಅನಂತರ ನೆಹರು ಮುಂದಾಲೋಚನೆಯಲ್ಲಿ ಗೆಳೆತನದಲ್ಲಿತ್ತು. ಸ್ವತಂತ್ರ ಅಸ್ಥಿತ್ವವನ್ನು ಇಟ್ಟುಕೊಂಡರೂ ಭಾರತದೊಂದಿಗೆ ಬೆಸೆದುಕೊಂಡಿತ್ತು.1975ರಲ್ಲಿ ಅಲ್ಲಿನ ರಾಜ ಅಮೆರಿಕನ್ ಮಹಿಳೆಯನ್ನು ವಿವಾಹವಾಗಿ ದೇಶದಿಂದ ಹೊರಟಾಗ ರಾಜಕೀಯ ತಿರುವಿನಲ್ಲಿ 350 ವರ್ಷಗಳ ರಾಜಾಧಿಕಾರವು ಸಿಕ್ಕಿಂ ಭಾರತದ ಒಂದು ರಾಜ್ಯವಾಗಿ ಭಾರತದ ಗಣತಂತ್ರದೊಂದಿಗೆ ಲೀನವಾಯಿತು.ಸಿಕ್ಕಿಂ ಪುಟ್ಟರಾಜ್ಯ. ಅತ್ತ ಚೀನಾಕ್ಕೂ ಭಾರತಕ್ಕೂ ಬೀಗದ ಕೊಂಡಿಯಂತಿರುವ ಆಯಕಟ್ಟಿನ ಜಾಗ.ಚೈನಾ ಇಂದೂ ಸಹಾ ಸಿಕ್ಕಿಂ ಹಕ್ಕಿಗಾಗಿ ಖ್ಯಾತೆ ತೆಗೆಯುವುದುಂಟು.ಭಾರತೀಯ ಸಾಂಸ್ಕøತಿಕ ತಿಲಕದಂತಿರುವ ಮಾನಸ ಸರೋವರವು ಭೌತಿಕವಾಗಿ ಚೈನಾದ ಹಿಮಾಲಯದೊಳಗಿರುವುದು ಸರಿಯಷ್ಟೆ.

ಅಂದು ಬುದ್ಧನ ಕಾಲಕ್ಕೆ ಚೈನಾ ಭಾರತಗಳೆಲ್ಲವೂ ಎಲ್ಲೆ ವಿಭಜಿಸಿಕೊಂಡಿರಲಿಲ್ಲ. ಪ್ರತಿಷ್ಠೆಯ ರೇಷ್ಮೆ ವ್ಯಾಪಾರವು ಅಲ್ಲಿಂದಿಲ್ಲಿಗೆ ನಡೆಯುತ್ತಿತ್ತು.ಅಂತಹ ಹಾದಿ ಸಿಕ್ಕಿಂ ಭೂಮಿಯಲ್ಲಿತ್ತು.ಅದೇ ಈಗಿನ ನಾಥುಲಾ ಪಾಸ್. ಪವನ್ ಚಾಮ್ಲಿಂಗ್ ಸಿಕ್ಕಿಂ ರಾಜ್ಯದ ಈಗಿನ ಮುಖ್ಯಮಂತ್ರಿ.2003ರಿಂದ ಇಲ್ಲಿಯವರೆಗೆ ಜನ ಮಾನಸದಲ್ಲಿ ಉಳಿದಿರುವ ಪ್ರಜಾಪ್ರಭುತ್ವವಾದಿ.ಆತ ಅಧಿಕಾರಕ್ಕೆ ಬರುವವರೆಗೆ ನೇಪಾಲ ಅಥವಾ ಭಾರತದ ಇತರೆ ರಾಜ್ಯಗಳಂತೆಯೇ ಅಡ್ಡಾದಿಡ್ಡಿಯಾಗಿ ಕೊಳಕಾಗಿದ್ದ ರಾಜ್ಯವಾಗಿತ್ತು.ಇದು ನಿಧಾನಕ್ಕೆ ಬುದ್ಧನ, ಗಾಂಧಿಯ ಹಾದಿ ಹಿಡಿಯಿತು.ಪರಿಸರ ರಕ್ಷಣೆಗೆ ಒತ್ತು ನೀಡಿತು.ಹಿಮಾಲಯನ್ನು ಮಾನವ ಪ್ರೀತಿಸಿದರೆ ಹಿಮಾಲಯವು ಮಾನವನನ್ನು ರಕ್ಷಿಸುತ್ತದೆಂದು ಅರಿತ ರೀತಿ ಅಲ್ಲಿದೆ.ಇಂದು ನಮ್ಮ ದೇಶದ ಪ್ರಧಾನಿ ಅದನ್ನು ಸಾವಯವ ರಾಜ್ಯವಾಗಿ ದೇಶಕ್ಕೆ ಅರ್ಪಿಸಿದ್ದಾರೆ.ಅಲ್ಲೀಗ 75 ಸಾವಿರ ಹೆಕ್ಟೇರ್ ಭೂಮಿ ಸಾವಯವ ಆಹಾರ ನೀಡುತ್ತಿದೆ.ಇದು 13 ವರ್ಷದಲ್ಲಿ ಮುಖ್ಯಮಂತ್ರಿಯೊಬ್ಬರ ನೇತೃತ್ವದ ಸರ್ಕಾರವೊಂದು ದೇಶದಲ್ಲಿ ಹೇಗಿರಬೇಕೆಂದು ಸೃಷ್ಟಿಸಿದ ಪವಾಡ.

ಬದುಕುಳಿದ ಪ್ರವಾಸ
ಪ್ರವಾಸ ಎಂಬುದು ಅರಿವಿನ ವಿಧಾನ. ಅಂತೆಯೇ ನಾವು ಸಿಕ್ಕಿಂ ಪ್ರವಾಸಕ್ಕೆ ಹೊರಟೆವು.ಅದು ನಮ್ಮ ಕಲ್ಪನೆಯನ್ನು ಮೀರಿ ಆಕರ್ಷಿಸಿದ್ದು ಅಲ್ಲಿ ತೀಸ್ತಾ ನದಿಯ ದಡದ ಪ್ರವಾಸ. ವಿಮಾನದಲ್ಲಿ ಬೆಂಗಳೂರಿನಿಂದ ಕಲ್ಕತ್ತಾಕ್ಕೆ ಹೋಗಿದ್ದುಂಟು. ಅಲ್ಲಿನ ಹೂಗ್ಲಿಯ ಹರವು, ರಾಮಕೃಷ್ಣಾಶ್ರಮದ ಪ್ರಶಾಂತತೆ ಎಲ್ಲವನ್ನು ಒಂದೇ ದಿನದಲ್ಲಿ ಬಿಟ್ಟು ರೈಲಿನಲ್ಲಿ ರಾತ್ರಿ ಕುಳಿತು ನ್ಯೂಜಲಪಾಯಿಗುರಿ ಎಂಬ ರೇಲ್ವೆ ನಿಲ್ದಾಣದಲ್ಲಿಳಿದರೆ ನಮ್ಮನ್ನು ಜೀಪೊಂದುಗ್ಯಾಂಗ್‍ಟಕ್ ಕಡೆ ಹೊತ್ತೊಯ್ದಿತ್ತು. ಗ್ಯಾಂಗ್‍ಟಕ್ ಸಿಕ್ಕಿಂ ರಾಜಧಾನಿ.ಗುಡ್ಡಗಾಡು ಸ್ವರೂಪದ ಹಾದಿಬೀದಿ. ಇದೇನು! ನಮ್ಮ ದೇಶದಂತಿಲ್ಲವಲ್ಲ ಎನ್ನುವಷ್ಟು ಸ್ವಚ್ಛತೆ.ಮೌನವೇ ಮಡಿಯಾದಂತೆ ಜನರ ನಡಿಗೆ.

ನಗರದೀಚೆ ಹೊರನಿಲ್ದಾಣ.ನಗರದೊಳಕ್ಕೆ ನಾವು ಹೋಗುವ ವಾಹನಗಳ ಸಂಚಾರವಿಲ್ಲ. ಇಲ್ಲಿನ ಸಿಟಿ ಬಸ್ಸುಗಳಂತೆ ಅಲ್ಲಿನ ಜೀಪುಗಳು ಕಾರುಗಳಲ್ಲಿ ಮಾತ್ರ ನಗರದೊಳಕ್ಕೆ ಇಳಿಯಬೇಕೆಂಬ ಕಾನೂನು.ಇದು ಸರಾಗ ವಾಹನ ಚಲನೆಯದೊಂದು ರೂಪಕ.ನಗರ ಚಿಕ್ಕದು.ಸ್ವಚ್ಛತೆಯಲ್ಲಿ ಹಿರಿದು.ಸರಳತೆಯಲ್ಲಿ ಬಡತನವನ್ನು ಸಹಾ ಬಾಗಿಸಿಟ್ಟುಕೊಳ್ಳಬಹುದೆಂಬುದಕ್ಕೆ ಉದಾಹರಣೆ.ರೈಲಾಗಲೀ, ವಿಮಾನವಾಗಲೀ ಇಲ್ಲದ ರಾಜ್ಯವಿದು. ಪ್ಲಾಸ್ಟಿಕ್ ಮಾರುವ ಅಂಗಡಿ ಒಂದೂ ಅಲ್ಲಿಲ್ಲ..ಉಪಯೋಗಿಸುವ ಜನರೂ ಅಲ್ಲಿಲ್ಲ. ಇದು ಕಾನೂನಿಗೆ ಮೌಲ್ಯ ನೀಡುವ ಜನರ ಮೌಲ್ಯ. ಅಕಸ್ಮಾತ್ ಮಾರಿದರೆ 10 ಸಾವಿರ ದಂಡವಂತೆ.ಆ ರೀತಿ ದಂಡ ಕೊಡುವ ವ್ಯಾಪಾರಿಗಳು ಅವರಲ್ಲ. ಪ್ರವಾಸಿ ಏಜೆಂಟ್‍ಗಳು ಕೂಡ ಅಷ್ಟೆ, ಎಲ್ಲವೂ ನಿರ್ಧಾರಿತ ವ್ಯವಹಾರ.ನಂಬುವಷ್ಟು ಕರ್ಮನಿಷ್ಠೆ.ಪ್ರವಾಸಿಗಳು ಉಳಿಯಲು ನಮ್ಮ ಬೆಂಗಳೂರಿನ ಎಂ.ಜಿ.ರಸ್ತೆ ವಾಹನಗಳಿಂದ ವಿಮುಕ್ತವಾದರೆ ಹೇಗಿರುತ್ತದೆಯೋ ಆ ರೀತಿಯದೆ.ಅದರ ಹೆಸರು ಕೂಡ ಎಂ.ಜಿ.ರಸ್ತೆ.ಅದು ಅಲ್ಲಿನ ಪ್ರಮುಖ ಜಾಗ. ಒಳ್ಳೆಯ ವಸತಿ ಸೌಕರ್ಯದ ಹೋಟೇಲುಗಳು ಇವೆ. ಕಡಿಮೆಯಿಲ್ಲದ ಅತಿ ಹೆಚ್ಚಲ್ಲದ ವಾಸ್ತವ್ಯ ಊಟ ವಸತಿ ಅಲ್ಲಿದೆ. ಅದು ತುಸು ಸಿಮ್ಲಾ ಹೋಲುವ ಜಾಗ.

ನಾಥುಲಾಪಾಸ್ ಭಾರತೀಯ ಮಿಲಿಟರಿ ಸುಪರ್ದಿನಲ್ಲಿರುವ ಸ್ಥಳ.ಬೇಲಿಯಾಚೆ ಚೈನಾ ಸೈನಿಕರು ಈಚೆ ಭಾರತೀಯ ಸೈನಿಕರು ಗಡಿ ಕಾವಲು. 26.12.08ರಂದು ಅಲ್ಲಿ ಕಾಯ್ದೆಯಂತೆ ಮಿಲಿಟರಿ ಅನುಮತಿಯೊಡನೆ ನಾಥುಲಾ ಹಾದಿ ಹಿಡಿದೆವು.ಬೆಳಗಾನೆ ಹಿಂದೆ ಮುಂದೆ ನೂರಾರು ವಾಹನಗಳು.ದಾರಿಯಲಿ ಹಿಮಾಲಯ ಮಾದರಿ ಕಿರು ನಿಲ್ದಾಣಗಳು. ಚಿಕ್ಕಚಿಕ್ಕ ಹೋಟೆಲುಗಳು. ‘ಮಮ್ಮು’ಮುಂತಾದಸ್ಥಳೀಯ ತಿಂಡಿಗಳು, ಕಾಫಿ, ಟೀ, ಇತ್ತು.ಪ್ರವಾಸ ಸುಮಾರು 40 ಕಿಲೋಮೀಟರ್ ಪಯಣ. ಹಿಮಾಲಯ ಗುಡ್ಡಗಾಡು, ಬರಡು ಪರ್ವತಗಳು ತುದಿಯಲ್ಲೆಲ್ಲೊ ಅಲ್ಲಿಇಲ್ಲಿ ಹಿಮಲೇಪಿತ ನೋಟಗಳು.ಹಿಮವತ್‍ಪರ್ವತಗಳ ಕಲ್ಪನೆಗೆ ತುಸು ಅಭಾವವೆಂಬಂತಹ ಅದರ ನೋಟ. ನಾಥುಲಾ ಪಾಸ್ ಬಂತು.ಎರಡು ದೇಶಗಳ ಹಾದಿ ಗೇಟ್ ಮುಚ್ಚಿತ್ತು.ಬೇಲಿಯಾಚೆ ಚೀನಿ ಸೈನಿಕರು ಬಾಯಿ ಬಾಯಿ ಎಂದು ಷೇಕ್‍ಎಂಡ್ ಕೊಟ್ಟರು.ಮಕ್ಕಳು ಮರಿಗಳು ಖುಷಿಯಲ್ಲಿದ್ದರು.ಅವರೊಡನೆ ಫೋಟೋ ತೆಗೆಸಿದರು. ನಮ್ಮ ಕಡೆ ಸೈನಿಕರು ಅಲ್ಲಿ ಹೆಚ್ಚು ಹೊತ್ತು ಪ್ರವಾಸಿಗಳನ್ನು ಆ ಸೈನಿಕರೊಡನೆ ಬಿಡದೆ ಈಚೆ ಸರಿಸುತ್ತಿದ್ದರು.ದೂರದಲ್ಲಿ ನೋಡಿದರೆ ಚೈನೀ ಸೈನಿಕರು ಪರ್ವತದ ಮೇಲಿರುವಂತೆ! ನಮ್ಮವರು ಪರ್ವತಗಳ ಅಡಿಯಲ್ಲಿರುವಂತೆ! ನಮ್ಮ ಕಡೆ ತುಸು ಅಪಾಯದ ಪರಿಸರವಿತ್ತು.ನಮ್ಮ ಪ್ರವಾಸಿಗಳಿಗೆ ಮಿಲಿಟರಿ ವ್ಯವಸ್ಥೆಯ ಕ್ಯಾಂಟೀನಿತ್ತು.ತಿಂಡಿತೀರ್ಥ ಕಾಫಿ, ಟೀ ಇತ್ತು.

ಸುಮಾರು ಮಧ್ಯಾಹ್ನ ಎರಡು ಗಂಟೆಯಾಗುತ್ತಾ ಬಂತು.ಪುರು ಪುರು ಹಿಮ ಬೀಳಲು ಪ್ರಾರಂಭವಾಯ್ತು.ಹಿಮಾಲಯದ ಹಿಕ್ಮತ್ತನ್ನು ಅರಿಯದ ಪ್ರವಾಸಿಗರು ತಲೆಮೇಲೆ ಬೀಳುವ ಹಿಮಮಳೆಗೆ ಪುಳಕಿತರಾದರು.ಉತ್ಸಾಹ ಉಲ್ಲಾಸ. ಈ ಉತ್ಸಾಹ ಉಲ್ಲಾಸಗಳಿಗೆ ಬೆದರಿದ ವಾಹನ ಚಾಲಕರು ಓಡೋಡಿ ಬಂದರು.ಬೇಗ ಬೇಗ ಹೊರಡಿ; ಎಂದು ತಾರಾಡಿ ಪ್ರವಾಸಿಗಳನ್ನು ಜೀಪುಗಳಿಗೆ ಕಾರುಗಳಿಗೆ ನೂಕಿದರು. ಏನು ಹೇಳೋದು ಕೇಳೋದು ನೂಕೋದು! ಕೇವಲ ಅರ್ಧ ಗಂಟೆಯಷ್ಟರಲ್ಲಿ ಹಿಮಮಳೆ ಸುರಿಯಲಾರಂಭಿಸಿತು. ಎಲ್ಲೋ ಮಳೆಯಂತೆ! ಇಲ್ಲಿ ‘ಆವಲಂಚಿ.’ಕ್ಷಣಾರ್ಧದಲ್ಲಿಬರಡಾಗಿದ್ದ ರಸ್ತೆ ಗುಡ್ಡಬೆಟ್ಟಗಳೆಲ್ಲವೂಬೆಳ್ಳಗಾದವು.DSCN5631

ಬೆಳ್ಳಗಿದ್ದವು ಮಂಜಾದವು.ವಾಹನಗಳ ಟೈರುಗಳು ರಸ್ತೆಯ ಮೇಲೆ ನಿಲ್ಲುತ್ತಿಲ್ಲ. ಎಲ್ಲ ವಾಹನಗಳ ಚಾಲಕರು ಕುರಿ ಹಿಂಡಿನೊಳಗೆ ಹೊಕ್ಕ ತೋಳನ ಹಿಂಡು ಬೆದರಿಸುವ ತವಕದಲ್ಲಿದ್ದು ಕಡೆಗೆ ಎಲ್ಲರೂ ಕೈಚೆಲ್ಲಿ ನಿಂತುಬಿಟ್ಟರು.ವಾಹನಗಳು ನಿಂತವು. ನಾವು ಇದೇನು! ಎಂದು ಅತ್ತ ಇತ್ತ ನಡೆಯಲು ಹೋದರೆ ಜಾರಿ ಜಾರಿ ಬಿದ್ದೆವು.ನಿಂತನೆಲ ಜಾರುತ್ತಿತ್ತು.ಜಾರಿದ ನೆಲ ಹೆದರಿಸುತ್ತಿತ್ತು. ತುಳಿದಂತೆಲ್ಲಾ ಗಾಜಾಗುತ್ತಿತ್ತು.ಮುಂದೇನು! ಹೆದರಬೇಡಿ! ಮಿಲಿಟರಿಯವರು ಬಂದೇ ಬರ್ತಾರೆ! ಬಂದರು ಬಂದರು! ಟ್ರಕ್ಕುಗಳ ಟೈರುಗಳಿಗೆ ಚೈನು ಸುತ್ತಿ ರಸ್ತೆ ಮೇಲಿದ್ದ ಹಿಮ ಹಾಸನ್ನು ಕತ್ತರಿಸುತ್ತ ಬರುವಂತೆ ಬಂದು ನಿಂತರು. ಎಲ್ಲರೂ ಹತ್ತಿ! ಎಲ್ಲಿಗೆ! ಗೊತ್ತಿಲ್ಲ! ಯಾಕೆ ಹಿಂಗಾಯ್ತು! ಗೊತ್ತಿಲ್ಲ! ಎಲ್ಲಿ ಬಿಡುತ್ತಾರೆ ಗೊತ್ತಿಲ್ಲ! ಸಂತೆಯಲ್ಲಿ ಕುರಿಮಂದೆ ತುಂಬಿದಂತೆ ಕೇವಲ ಎರಡು ಗಂಟೆ ಮೊದಲು ಪ್ರವಾಸದ ಹಮ್ಮಿನಲ್ಲಿದ್ದ ನಮ್ಮನ್ನು ಕುರಿಗಳಂತೆ ತುಂಬಿದರು.ನಿಲ್ಲಲೂ ಜಾಗವಿಲ್ಲದಂತೆ ತುಂಬಿದರು. ಹೆಂಗಸರು ಮಕ್ಕಳು, ಕಯ್ಯೋ, ಕುಯ್ಯೋ! ಏನು ಮಾಡೋದು ಜೀವ ಉಳಿದರೆ ಸಾಕು ಎನ್ನುವಷ್ಟು ಮುಖದ ಮೇಲೆ ಗಾಬರಿ.

ನಾಗಾಲ್ಯಾಂಡಿನ ಹೆಂಗಸರು ನಮ್ಮ ಹೆಂಗಸರುಗಳನ್ನು ಒತ್ತಿ ಒತ್ತಿ ಜಾಗ ಅಗಲ ಮಾಡಿದರು. ಬಂಗಾಳದವರು ಅತ್ತ ಇತ್ತ ನೂಕಿದರು. ಅಲ್ಲೊಂದು ರಾಜ್ಯ ರಾಜ್ಯಗಳ ಹೆಂಗಸರ ಜಗಳ ಗಂಡಸರ ಅನಿವಾರ್ಯ ತಾಳ್ಮೆ ಎಲ್ಲವೂ ಕಾಣುತ್ತಿತ್ತು.ಜಗಳಗಳ ನಡುವೆ ಟ್ರಕ್ ಒಳಗೆ ಕೂರಲು ನಿಲ್ಲಲಾರದೆ ಆಚೆಯಿಂದ ಬೀಸುವ ಥಂಡಿ ಗಾಳಿ, ಹಿಮಶೀತ ನಡುಕ, ತೆರೆದ ಟ್ರಕ್ಕುನಲ್ಲಿ ಗಡಗಡ ನಡುಗುವ ಅಂಚಿನಲ್ಲಿ ಹಿಂದೆ ಕುಳಿತೋರು ಮರವುಗಟ್ಟುತ್ತಿದ್ದರು.ಅಂತೂ ಗುರಿ ಮುಟ್ಟಿ ಬದುಕಿದರೆ ಸಾಕು ಎನ್ನುವ ಸ್ಥೈರ್ಯ.ಗಂಟೆಗೆ ಎರಡು ಕಿಲೋಮೀಟರೋ ಎಂಬಂತಹ ಟ್ರಕ್ ನಡಿಗೆ.ತುಸು ಆಚೆ ಸರಿದರೆ ಪಾತಾಳ; ಇತ್ತ ಸರಿದರೆ ರಸ್ತೆ ಕಾಣದ ಟ್ರಕ್ ನಡಿಗೆ. ಅಂತೂ ರಾತ್ರಿ ಒಂಭತ್ತಾಗಿರಬಹುದು.ಟ್ರಕ್‍ಗಳು ನಿಂತವು.ಇಳಿಯಿರಿ ಎಂಬ ಹುಕುಂ.ಓಹೋ ಗ್ಯಾಂಗ್‍ಟಕ್ ತಲುಪಿದೆವು ಸದ್ಯ ಎಂದರೆ ಅದು ನಗರವಲ್ಲ ಪೇಟೆಯೂ ಅಲ್ಲ. ಮಿಲಿಟರಿ ಕ್ಯಾಂಪಿನ ಕ್ಯಾಂಟೀನು. ಮಿಲಿಟರಿ ಜನರ ಓಡಾಟ. ಆಹಾ ಬೆಂಕಿಯಲ್ಲಿ ದೊಡ್ಡಪಾತ್ರೆಗಳಲ್ಲಿ ಬೇಯುತ್ತಿರುವ ಊಟ.

ಶಾಖಕ್ಕೆ ಮರಗಟ್ಟಿ ಹೋಗಿರುವ ಕೈಕಾಲುಗಳನ್ನು ಒಲೆಗೆ ತುರುಕಿದಂತೆ ಬೆಂಕಿ ಕಾಯಿಸುತ್ತ! ಸದ್ಯ ಬದುಕಿದೆವು ಎಂದು ಉಸಿರು ಬಿಟ್ಟ ವಾತಾವರಣ.ನಾನು ಆಕಸ್ಮಿಕವಾಗಿ ಥರ್ಮಲ್ ಹಾಕಿದ್ದೆ.ದಪ್ಪ ಲೆದರ್ ಕೋಟ್ ಸಹಾ ಇತ್ತು. ಆದರೆ ನನ್ನ ಮಗ ಯುವಕ ಹೋಗುವಾಗ ವಾತಾವರಣ ಬಿಸಿಯಿತ್ತು ಎಂದು ಸಾಧಾರಣ ಉಡುಪು ಧರಿಸಿದ್ದ.ನನ್ನ ಪ್ರವಾಸದಲ್ಲಿದ್ದ ತಂಗಿ ಆಕೆಯ ಸಂಸಾರ ಆಕೆಯ ಸ್ನೇಹಿತರ ಸಂಸಾರ ಇವರೂ ಕೂಡ ಬಟ್ಟೆ ಹಾಕಿದ್ದು ಅಷ್ಟಕಷ್ಟೆ.ಅಂತೂ ಬದುಕಿ ಉಳಿದ ಸಂದರ್ಭ.ಕೈಕಾಲು ಮರವುಗಟ್ಟದೆ ಅಲ್ಲಿ ಉಳಿದದ್ದು ಪುಣ್ಯ. ಇನ್ನು ಒಂದೆರಡು ಗಂಟೆ ಕಳೆದಿದ್ದರೆ ಏನೊ ಎಂತೊ!

ಅನ್ನ ಬೇಳೆ ಎಲ್ಲಾ ಸೇರಿಸಿ ಬೇಯಿಸಿದ ಕಿಚಡಿಯನ್ನು ಬೆಳಗ್ಗೆಯಿಂದ ಊಟ ತಿಂಡಿ ಕಡೆ ಗಮನವಿರದ ಎಲ್ಲರೂ ಕರಳು ಬೆಚ್ಚಗಾಗುವಂತೆ ಸುರಿಸುರಿದು ತಿಂದರು. ಮಿಲಿಟರಿ ಸಹೋದರರು ಹೊಟ್ಟೆ ತುಂಬಾ ಇಕ್ಕಿದರು.‘ಅವರಸಂತಾನಸಾವಿರಾಗಲಿ’ ಎಂದುಹರಸುತ್ತ; ನಮ್ಮನ್ನು ಊರಿಗೆಬಿಡುತ್ತೀರಲ್ಲವೆ? ಎಂದುಹರಕುಮುರಕುಹಿಂದಿಯಲ್ಲಿಕೇಳಿದರೆ :- ಅವರೆಂದರು! ರಸ್ತೆ ಎಲ್ಲಾಬಂದ್ ಆಗಿದೆ.ಹಿಮಪಾತವಾದಾಗ ಇದುಸಾಮಾನ್ಯ.ನೀವು ಇಲ್ಲೆಮಲಗಿ ಎಂದರು. ಹಜಾರದಂತಹ ಸೀಟಿನ ಮನೆಗಳು. ಹೊಸ ಉಲ್ಲನ್ ರಗ್ಗುಗಳ ಬಂಡಲ್ ಬಿಚ್ಚಿದರು. ಒಬ್ಬರಿಗೆ ಒಂದು ಕಂಬಳಿ ಎಂದರೂ ಅಷ್ಟಾಗಿ ಕೇಳದ ಪ್ರವಾಸಿಗಳು ಎರಡು ಮೂರು ಅವುಚಿದರು.ಉಗಿಸಿಕೊಂಡು ಕೆಲವನ್ನು ವಾಪಸ್ಸು ಕೊಟ್ಟರು.‘ಬಿದ್ದಿದ್ದವನಿಗೆಬಿಸಿಹಿಟ್ಟು ಕೊಟ್ಟರೆ-ಎಂಬ ಗಾದೆ ಆ ಸಮಯದಲ್ಲಿನೆನಪಾಯ್ತು.DSCN5620

ಒಂದು ಹಜಾರದಲ್ಲಿ ನೂರು ಜನ. ಇಂತಾವು ನಾಲ್ಕಾರು ಹಜಾರಗಳು, ಹೆಂಗಸರಿಗೂ ಸಹಾ ಪ್ರತ್ಯೇಕ ಈ ಕ್ಯಾಂಪಿನಲ್ಲಿದ್ದರೆ, ಅಲ್ಲಲ್ಲಿ ಬೇರೆ ಕ್ಯಾಂಪಿನಲ್ಲಿ ಇಂತದೇ ವ್ಯವಸ್ಥೆ.ಸುಮಾರು 1500 ಜನ ಸುಮಾರು 150 ಜೀಪಿನವರು ಹೀಗೆ ಸಿಕ್ಕಿಬಿದ್ದು ಅಂತೂ ಗುಡ್ಡಗಾಡಿನಲ್ಲಿ ಬದುಕುಳಿದೆವು.ಜೀಪುಗಳು ಜೀಪಿನ ಚಾಲಕರು ಏನಾದರು ಎಂದು ಹೊಟ್ಟೆ ತುಂಬಿದ ಮೇಲೆ ನಮ್ಮ ಪ್ರವಾಸಿಗರು ಕೇಳಿದರು. ಅವರಿಗಿದು ಮಾಮೂಲು ಅಲ್ಲವೆ, ಅಲ್ಲೆ ನೆರೆಯ ಗುಡಾರ ಗುಡಿಸಲುಗಳಲ್ಲಿ ಆಸರೆ ಪಡೆಯುತ್ತಾರೆಂದರು.ವಾಹನಗಳನ್ನು ತೆಗೆಯುವುದು ಏನಿದ್ದರೂ ನಾಳೆ ಮಿಲಿಟರಿಯವರು ರಸ್ತೆ ಬಿಡಿಸಿದ ಮೇಲೆ ಎಂದರು.ಬದುಕೊಂದು ಬವಣೆಯ ಬಲೆ.

ಮಲಗೋದು ಎಲ್ಲಿ ಬಂತು! ಒಬ್ಬರ ಕಾಲಸಂದಿ ಮತ್ತೊಬ್ಬರ ತಲೆ. ಒಂದಕ್ಕೋ ಎರಡಕ್ಕೊ ಹೋಗೋರು ತುಳಿದಾರೆಂದು ಅರ್ಧ ಎಚ್ಚರ.ಇಷ್ಟರಲ್ಲೂ ಒಂದ ಎರಡ ಬಂದೋರು ಹೋಗಿದ್ದುಂಟು. ಹೇಗೆ ಮಾಡಿದರು ಎಲ್ಲಿ ಮಾಡಿದರು ನೀರೆಲ್ಲಿತ್ತು! ಅವರೇ ಬಲ್ಲರು.ಅರೆ ಎಚ್ಚರದಲ್ಲಿ ಬೆಳಗಾದಾಗ ಬಾಗಿಲು ತೆರೆದರೆ ಸೀಟು ಮನೆಗಳ ಮೇಲೆ ಬಿಳಿಬಿಳಿ ಹಿಮವು ನಾವಿದ್ದ ಮನೆಗಳನ್ನೆಲ್ಲ ಒಳಗೆ ಹೂತಿಟ್ಟ ರೀತಿಯ ಗಾಬರಿ. ಇಲ್ಲ! ನಾವಿದ್ದ ಮನೆಗಳು ಹಿಮದೊಳಗೆ ಮುಳುಗಿಲ್ಲ! ಚುರುಚುರು ಬಿಸಿಲಿಗೆ ಅತ್ತ ಅಚೆ ಹೋಗಿ ನೋಡಿದರೆ ಆಕಾಶದೆತ್ತರಕ್ಕೆ ಎದ್ದು ನಿಂತ ಹಿಮಪರ್ವತ! ಅದೋ ಬಂಗಾರದ ಬಣ್ಣದ ಕಾಂಚನಗಂಗ! ಬೆಳ್ಳಿಯ ಬಣ್ಣಕ್ಕೆ ಬದಲಾದ ಕಾಂಚನಗಂಗಾ! ಅರರೇ ಹಿಂದಿನ ದಿನದ ಆತಂಕವೆಲ್ಲ ಮುಗಿಲೊಳಗೆ ಕರಗಿ ದೇವಲೋಕಕ್ಕೆ ಪ್ರವೇಶ ಮಾಡಿದ ಅನುಭವ. ಆಘಾತ-ಹರ್ಷ ಒಂದೇ ನಾಣ್ಯದ ಎರಡು ಮುಖಗಳು.ಪ್ರವಾಸಿಗರೆಲ್ಲರೂ ಹರ್ಷೋದ್ಗಾರದಲ್ಲಿ ನೆನ್ನೆಯ ಮರೆತರು ಇಂದು ಜಗದಚ್ಚರಿಗೆ ಒಂದಾದರು.ಇದು ಪ್ರವಾಸದ ಬೋನಸ್ಸು ಎಂದರು.ಯಾರಿಗೆ ಈ ಸೌಭಾಗ್ಯವುಂಟು ಎಂದರು.ರಾತ್ರಿ ಒಂದು ಜೀಪು ಪಾತಾಳಕ್ಕೆ ಬಿತ್ತು. ಅವರೇನಾದರೋ! ಎಂದು ತವಕಿಸಿದ್ದುಂಟು.

ನಮ್ಮನಮ್ಮ ಜೀಪುಗಳು ಬಂದರೆ ಹೊರಡಬಹುದಿತ್ತು ಎಂದಾಗ ಮಿಲಿಟರಿಯವರು ಹೇಳಿದರು.ಈಗಲೇ ಹೊರಡುವಂತಿಲ್ಲ, ರಸ್ತೆ ಐಸ್‍ನಿಂದ ಕ್ಲಿಯರ್ ಆಗಬೇಕು.ಆಗಲೇ ನಿಮ್ಮನಿಮ್ಮ ವಾಹನಗಳು ಬರುವುದು ಎಂದರು.ತಿಂಡಿ ಕೊಟ್ಟರು. ಇಡ್ಲಿ ಸಾಂಬಾರ್, ಕಿಚಡಿ, ಕಾಫಿ, ಟೀ ಪುನಃ ಎಲ್ಲಾ ಆಯ್ತು.ಪ್ರವಾಸಿಗಳು ಬದುಕುಳಿದ ಬೋನಸ್ಸುಗಳಾಗಿ ನಮ್ಮ ದೇಶದ ಮಿಲಿಟರಿಯವರ ಸೇವೆಗೆ ಮನಸಾರೆ ಶರಣಾಗಿ ಹೊಗಳಿದರು.ನೆಂಟರೋಪಾದಿಯ ಸೇವೆ. ಅಲ್ಲೊಬ್ಬ ಕೆಂಜಿಗನಂತಹ ದುಂಡು ದುಂಡಾದ ಯುವಕ.ನಮ್ಮ ರಾಜ್ಯದ ಘಟ್ಟದ ಕೆಳಗಿನ ಕನ್ನಡದಲ್ಲಿ ಮಾತಾಡಿಸುತ್ತಾ ಬಂದಾಗ ನಮಗೆ ಎಲ್ಲಿಲ್ಲದ ಸಡಗರ.ಆತ ಮಿಲಿಟರಿ ಕಿರು ಆಫೀಸರ್. ಹೆಸರು ಮೋಹನ್ ಎಂದು ನೆನಪು. ಕಾಫಿ, ಟೀ ಕುಡಿದಿದ್ದ ನಮಗೆಲ್ಲಾ ಮತ್ತೊಮ್ಮೆ ಕಾಫಿ, ಟೀ ಆರ್ಡರ್.ಭಾಷೆ ಎಂಬುದು ಬೆಸೆಯುವ ವಾಹಕ.ತಾಯ್ನಾಡೆಂಬುದು ಕರೆದು ಮಾತಾಡಿಸುವ ಪ್ರವಾಸದ ಹಂಚಿಕೆ. ಅಂತೂ ಊಟವೂ ಆಯ್ತು.ಅಲ್ಲಿನ ಹತ್ತಿರದ ಹಳ್ಳಿ ಮಕ್ಕಳು ಸ್ಕೇಟಿಂಗ್ ರೀತಿ ಗಾಲಿಯಲ್ಲಿ ಹಿಮದ ಮೇಲೆ ಆಟವಾಡುತ್ತಿದ್ದುದನ್ನು ನೋಡಿಯಾಯ್ತು.ಮಧ್ಯಾಹ್ನವಾಯ್ತು.ಕನ್ನಡ ಸುದ್ದಿಯಲ್ಲೂ ಈ ಪ್ರವಾಸಿಗಳು ಸಿಕ್ಕಿಬಿದ್ದಿರುವ ಸುದ್ದಿ ಕೇಳಿ ನಮ್ಮೆಲ್ಲರ ಮನೆಗಳಲ್ಲಿ ಊರುಗಳಲ್ಲಿ ಆತಂಕವಿದ್ದುದು ಉಂಟು.ಗ್ಯಾಂಗ್‍ಟಕ್ ಟೂರಿಸಂ ಏಜೆಂಟರುಗಳು ತಮ್ಮ ಸಿಕ್ಕಿಕೊಂಡಿದ್ದ ವಾಹನಗಳಿಗೆ ಕಾಯಲಿಲ್ಲ. ಪ್ರತ್ಯೇಕ ವಾಹನಗಳಲ್ಲಿ ಬಂದು ಅವರಿವರೆನ್ನದೆ ಎಲ್ಲರನ್ನು ಗ್ಯಾಂಗ್‍ಟಕ್ ಮುಟ್ಟಿಸುವಾಗ ಸಾಯಂಕಾಲವಾಯ್ತು.ಇದು ಸಿಕ್ಕಿಂ ರಾಜ್ಯದವರ ಮಾನವೀಯತೆ.

ಈ ಅನುಭವದ ನಡುವೆ ಅhಚಿಟಿgu ಐಚಿಞeಎಂಬುದು ಒಂದು ಸಣ್ಣ ಸರೋವರ ಹೋಗುವಾಗ ನೀರಾಗಿತ್ತು.ಬರುವಾಗ ಹಿಮವಾಗಿತ್ತು.ಅದರ ಹತ್ತಿರ ಯಾಕ್‍ಗಳು ಪ್ರವಾಸಿಗಳಿಗೆ ಕಾಯುತ್ತಿದ್ದವು.ಅಂದು ಅಲ್ಲಿನ ಪ್ರವಾಸ ಕೂಲಿಗಳಿಗೆ ಏನೂ ಸಿಗಲಿಲ್ಲ. ನಡುವೆ ದಾರಿಯಲಿ ಬಾಬಾ ಮಂದಿರವಿತ್ತು.ಈ ಬಾಬಾ ಅಲ್ಲಿನ ಮಿಲಿಟರಿ ಪಡೆಗೆ ಮಾನಸಿಕ ಆಸರೆ ನೀಡುವ ಪ್ರವಾದಿಯಾಗಿ ಉಳಿದಿದ್ದಾನೆ. ಅವನಿಗೊಂದು ಮಂದಿರವಿದೆ.ಪೂಜೆ ಪುರಸ್ಕಾರಗಳಿವೆ. ಪ್ರವಾಸಿಗಳ ದರ್ಶನವಿದೆ.ಪವಿತ್ರ ಜಾಗ.ಆ ಬಾಬಾ ಮಿಲಿಟರಿಯಲ್ಲಿ ಮಡಿದಾತ.ಗಡಿ ಕಾಯುವ ಗುಡ್ಡಗ್ವಾರಂದ ಹಿಮನಾಡಿನ ಮಿಲಿಟರಿಯವರಿಗೆಲ್ಲಾ ಮಾನಸಿಕ ಆಸರೆ.ನಂಬಿಕೆ ಮೌಢ್ಯಗಳ ನಡುವೆ ಒಂದು ಸೇತುವೆಯಿದೆ.ಅದೇ ಬದುಕು.ಈ ಬದುಕು ಕಟ್ಟಿಕೊಡುತ್ತಿರುವ ಬಾಬಾನಿಗೊಂದು ಸಲಾಂ.ನಾಥುಲಾ ಪ್ರವಾಸ ಹೋಗುವಾಗ ಸುಮಾರು 5 ಡಿಗ್ರಿಯಿದ್ದ ವಾತಾವರಣ ಅಂದು ಆಶ್ರಯ ಪಡೆದ ಸತ್ರಾ ಕ್ಯಾಂಪಿನ ಬಳಿ -12 ಇತ್ತು ಎಂದರು. ಅಕಾಲಿಕ ಮಳೆ ಎಲ್ಲೊ ಬಿದ್ದು ಇಲ್ಲಿ ‘ಆವಲಂಚಿ’ಗೇಸಿಕ್ಕಿದೆವು ಎಂದರು. ಏನಾದರಿರಲಿ ಇಂಥಾದೊಂದು ಅನುಭವ ದೊರೆತಿದ್ದುಹಿಮಾಲಯದೊಳಗಿನಬದುಕಿಗೆನಮಗೊದಗಿದಪ್ರತಿಕನ್ನಡಿಯಾಗುಳಿಯಿತು.
ಮಾರನೇ ದಿನ ಗ್ಯಾಂಗ್‍ಟಕ್‍ನಲ್ಲಿ ರೋಪ್‍ವೇ ಮೇಲೆ ಹೋಗಿ ನಗರವನ್ನು ಪರಿಸರವನ್ನು ದೂರದ ಬೆಟ್ಟಗುಡ್ಡಗಳನ್ನು ನೋಡಿದ್ದು ಹೌದು.ಖumಣeಞ ಒoಟಿಚಿsಣeಡಿಥಿ ಗೆ ಹೋಗಿ ವಿಶ್ವವಿದ್ಯಾಲಯೋಪಾದಿಯ ಬುದ್ಧ ಪರಂಪರೆಯನ್ನು ನೋಡಿದ್ದು ಹೌದು.ಮಾಂಕ್‍ಗಳು ಮತ್ತು ಮಂದಿರದ ಮೌಲ್ಯಗಳು ಬುದ್ಧನನ್ನು ಬುದ್ಧನ ನಾಡನ್ನು ಅರಿಯಲು ದ್ಯೋತಕವಾದದ್ದುಂಟು.

DSCN5627
ಸಿಕ್ಕಿಂ ರಾಜ್ಯದಲ್ಲಿ ಗ್ಯಾಂಗ್‍ಟಕ್, ಪೆಲ್ಲಿಂಗ್ ಮುಂತಾದವು ಪಟ್ಟಣಗಳಾದರೆ ಚಿಕ್ಕಪುಟ್ಟ ಸರೋವರಗಳು ಯುಕ್‍ಸಮ್, ಯಾಮ್‍ತಂಗ್ ಇವು ಪರ್ವತಶ್ರೇಣಿ ಹಾದಿಗಳು. ಇತರೆ ಸ್ಥಳಗಳಲ್ಲಿ ರಾವಂಗಲಾ, ನಾಮ್ಚಿ, ಜುಲುಕ್ ಇಂತವು ಸಹಾ ಪ್ರವಾಸಿ ತಾಣಗಳು.ಸಿಕ್ಕಿಂ ಚಿಕ್ಕ ರಾಜ್ಯವಾದರೂ ಸಂಪೂರ್ಣವಾಗಿ ಪ್ರವಾಸಿ ಜಾಗಗಳನ್ನು ನೋಡಲು ತಿಂಗಳು ಬೇಕಾಗುತ್ತದೆ.ಟ್ರಕಿಂಗ್‍ನವರು ಆರಿಸಿಕೊಳ್ಳುವ ತಾಣಗಳಂತೂ ಅನೇಕ ತಿಂಗಳೇ ಇರುತ್ತವೆ. ಅಂತಾದರಲ್ಲಿ ನಾವು ಮೂರನೇದಿನ ಆರಿಸಿಕೊಂಡ ಹಾಗೂ ಪ್ರವಾಸದಲ್ಲಿನ ಸದ್ಯದ ಸೇಫ್ ಜಾಗ ಪೆಲ್ಲಿಂಗ್. ಇದು ಜಗತ್ತಿನ ಮೂರನೇ ಅತಿ ದೊಡ್ಡ ಶಿಖರ ಕಾಂಚನಗಂಗ ಪರ್ವತಕ್ಕೆ ಕೇವಲ ಸುಮಾರು 60 ಕಿಲೋ ಮೀಟರ್.ಹತ್ತಿರದವರೆಗೂ ಹಾಗೂ ಹೀಗೆ ರಸ್ತೆಲಿ ಹೋಗಿ ಆಮೇಲೆ ಕಾಲು ನಡಿಗೆಯ ಟ್ರಕ್ಕಿಂಗ್ ಸ್ಥಳ.ಬದುಕುಳಿದ ನಮ್ಮನ್ನು ಹೊಸ ವರುಷದಾಚರಣೆಯು ಮುಂದಿನ ವರ್ಷಕ್ಕೆ ಪೆಲ್ಲಿಂಗ್‍ನಲ್ಲಿ ಧಾಟಿಸಿತು. ಬೆಳಗ್ಗೆ ಹೋಟೆಲಿನ ಕಿಟಕಿಯಿಂದ ಕಾಂಚನಗಂಗ ಪರ್ವತವನ್ನು ದೂರದಲ್ಲಿ ಹುಡುಕಿದರೆ ಗಕ್ಕನೆ ನಮ್ಮ ತಲೆ ಮೇಲೆ ಆಕಾಶಕ್ಕೆ ಬೆಳೆದು ನಿಂತ ಹಿಮಪುರುಷನೊ! ಎಂಬಂತೆ ಕಂಡು ಬಿಟ್ಟಿತು. ಅದೆಂತಾ ನೋಟ! ಅಲ್ಲಿ ಬೆಳ್ಳಿ ಬೆಟ್ಟವಾಗಿ ಮಾರ್ಪಡುವವರೆಗೆ ನಮಗೆ ಕಾಣದ ಅದು ಬಿಸಿಲು ಬಿದ್ದಾಕ್ಷಣ ಕಾಂಚನಗಂಗಾ ಪರ್ವತವೇ ಬೆಳ್ಳಿಯ ಮೋಡಕ್ಕೆ ತಾಗಿ ನಿಂತಿದೆ! ಅಬ್ಬಾ ನೆಲಮುಗಿಲು ಒಂದಾದ ಅಚ್ಚರಿಯ ಹಬ್ಬ.

ಕಾಂಚನಗಂಗ ಭಾರತದಲ್ಲಿದೆ.ಗೌರಿಶಂಖರ ನೇಪಾಲದಲ್ಲಿದೆ.ಅದರ ಆಚೆ ಬುಡ ಚೈನಾದಲ್ಲಿದೆ.ಈಗ ನಮ್ಮ ಸರ್ಕಾರವು ಮಾನಸ ಸರೋವರಕ್ಕೆ ಹೋಗಿ ಬರಲು ಮಾಡಿರುವ ದಾರಿ ಸಹಾ ನಾಥುಲಾ ಪಾಸ್ ಆಗಿದೆ.ಹಿಮಾಲಯ ಭಾರತಕ್ಕೆ ಆಸರೆ.ಅದೆ ಹಿಮಾಲಯವು ಎಲ್ಲ ನೆರೆ ದೇಶಗಳಿಗೆ ಆಸರೆ.ಇದು ಭಗವಂತನಿಗೆ ಗಡಿಯಿಲ್ಲದ ತಿಳಿವಳಿಕೆಯಾಗಿ ಮಾರ್ಪಟ್ಟಾಗಲೇ ಮಾನವತ್ವಕ್ಕೆ ಮೌಲ್ಯ ಹಾಗೂ ಮನುಷ್ಯ ನಿರ್ಮಿತ ಮಿಲಿಟರಿ ಎಂಬುದಕ್ಕೆ ಬಿಡುಗಡೆ.8586 ಮೀಟರ್ ಎತ್ತರ ಹೊಂದಿರುವ ಕಾಂಚನಗಂಗ ಅಲ್ಲಿನವರು ಕರೆವಂತೆ ಕಾಂಚನಜುಂಗ.ಸಿಕ್ಕಿಂನವರ ದೈವ. ಪೆಲ್ಲಿಂಗ್ ಹತ್ತಿರ ಮುಂದುವರಿದರೆ ಕಾಂಚನಗಂಗಾ ಕಡೆಯಿಂದ ಬರುವ ಅತಿ ಎತ್ತರದ ಜಲಪಾತವುಂಟು.ಮತ್ತೆ ಮುಂದುವರಿದರೆ Khecheopallri ಎಂಬ ಸರೋವರವುಂಟು.ಅಲ್ಲಿ ಏಪ್ರಿಲ್‍ನಲ್ಲಿ ಜಾತ್ರೆ ನಡೆಯುತ್ತದಂತೆ.ಒಂದು ಎಲೆಯೂ ಬೀಳದ ತಿಳಿಸರೋವರ ಎಂಬ ನಂಬಿಕೆಯುಂಟು.ಯುಕಸಮ್ ಅಂದರೆ ಮೂವರು ಲಾಮಾಗಳು ಸೇರಿ ಕುಳಿತುಹೋದ ಪವಿತ್ರ ಜಾಗವದು.ಅದರೊಳಗೆ ಅಲ್ಲಿನ ಮಾನವ ಚರಿತ್ರೆಗೂ ಜಾಗವುಂಟು.ತುಸು ಹತ್ತಿರದಲ್ಲಿ 1641 ರಲ್ಲಿ ಚೋಗ್ಯಾಲ ಮನೆತನದ ರಾಜ ಆಳಿದ ಅರಮನೆ ಕುರುಹು ಅಲ್ಲಿ ಹತ್ತಿರದಲ್ಲುಂಟು.ಅಂತೂ ಒಟ್ಟಿನಲ್ಲಿ ಪೆಲ್ಲಿಂಗ್ ಸುತ್ತಲಿನ ಜಾಗ, ಪರಿಸರ ದೃಷ್ಟಿಯಿಂದ ನದಿ, ಸರೋವರಗಳ ನಾಡಾಗಿ ಪರ್ವತಶ್ರೇಣಿಯ ರೈತಾಪಿ ಬದುಕು ಎದ್ದು ಕಾಣುತ್ತಿದೆ.‘ಸ್ಟೆಪ್ ಕೃಷಿ’ ಇಲ್ಲಿನಮತ್ತೊಂದುವಿಶೇಷ. ಇಲ್ಲಿ ಕೃಷಿಬೆಟ್ಟದ ತುದಿಯವರೆಗಿದ್ದು ಇದೊಂದು ಅಚ್ಚರಿ.

ಗ್ಯಾಂಗ್‍ಟಕ್‍ನಿಂದ ಡಾರ್ಜಲಿಂಗ್ ಕಡೆ ಹೊರಟಾಕ್ಷಣ ತೀಸ್ತಾ ಹಾಗೂ ರಂಗೀತ ನದಿ ದಾಟಿದರೆ ಸ್ವಚ್ಛತೆಯನ್ನು ಹಿಂದೆ ಬಿಟ್ಟು ಗಲೀಜಿನ ಕಡೆ ಹೊರಟಂತೆ ಪಶ್ಚಿಮ ಬಂಗಾಳದ ಗಡಿಗೆ ಸೇರುತ್ತೇವೆ. ಅದು ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಪಯಣ.ಎಂದಿನಂತೆ ಪರ್ವತಶ್ರೇಣಿಯಂಚಿನ ರಸ್ತೆ, ಹಿಮಾಲಯ ಹಣ್ಣು ಹಂಪಲ ತೋಟಗಳು.ಟೀ ಎಸ್ಟೇಟುಗಳು. ಕಣಿವೆ ಪಯಣ.ಜೀವ ಬಿಗಿಹಿಡಿದು ಡಾರ್ಜಲಿಂಗ್ ಸೇರುವ ಪ್ರವಾಸ. ಡಾರ್ಜಲಿಂಗ್ ಯಥಾ ಪ್ರಕಾರ ಭಾರತ ದೇಶದ ಎಂದಿನ ಗಿಜಿಬಿಜಿ ಸ್ಥಳ. ಪ್ರವಾಸಿಗಳ ಅತಿಭಾರದ ಜಾಗ.ಅಲ್ಲಿ ಆಕರ್ಷಕ ಸಮಯವೆಂದರೆ ಟೈಗರ್‍ಹಿಲ್ ಎಂಬಲ್ಲಿ ಕಾಂಚನಗಂಗ ಹಾಗೂ ಮೌಂಟ್ ಎವೆರೆಸ್ಟ್‍ಗಳನ್ನು ಬಂಗಾರದ ಎಳೆ ಬಿಸಿಲಿನಲ್ಲಿ, ಹಾಗೂ ಬೆಳ್ಳಿಯ ಏರು ಬಿಸಿಲಿಗೆದುರಾಗಿ ಜೀವಮಾನದಲ್ಲಿ ನೋಡಲು ಸಿಗುವ ಸಮಯ.ನಾಲ್ಕು ಗಂಟೆ ಬೆಳಗಿನ ಜಾವಕ್ಕೆ ಎದ್ದು ಓಡೋಡಿ ಜೀಪುಗಳಲ್ಲಿ ಹೋಗಿ ಗುಡ್ಡ ಏರಿ ಜಾಗ ಹುಡುಕಿ ಆ ಚಳಿಯಲ್ಲೂ ಅಲ್ಲಿನ ಹೆಂಗೆಳೆಯರು ನೀಡುವ ಚಹಾ ಹೀರಿ ಹೊತ್ತು ಮೂಡುವ ಮೂಡಲಮನೆಯ ಬೆಳಕಿಗೆದುರಾಗಿ ಆ ಕ್ಷಣ ಕ್ಷಣಗಳನ್ನು ಲೀನಗೊಳಿಸುವುದೇ ಒಂದು ಅನುಭವ.view-of-mt-kanchendzonga

ಹಿಮಾಲಯ ಶ್ರೇಣಿ ಹೆಂಗೆಳೆಯರ ನಾಡು.ಮಹಾಭಾರತದ ಸ್ತ್ರೀ ಪಾತ್ರಗಳ ಹೆಮ್ಮೆಯ ಶ್ರೇಣಿ.ದೇವರುಗಳೇ ಇಳಿದು ಬಂದಂತೆ ಕಾಣುವ ಪುರಾಣ ಕಲ್ಪನೆಯ ಆದಿವಾಸಿಗಳ ಬೀಡು.ಈಗ ಎಲ್ಲವೂ ಬದಲಾಗುತ್ತಿದೆ.ಈ ನಡುವೆ ಸಿಕ್ಕಿಂ ರಾಜ್ಯದ ದೃಢತೆಯಂತೆ ಅಲ್ಲಿನ ಪರಿಸರವನ್ನು ಕಾಪಾಡಿಕೊಳ್ಳುವ ಆಸಕ್ತಿ ದೇಶಕ್ಕೆ ಬೇಕಾಗಿದೆ.ಸಿಕ್ಕಿಂ ರಾಜ್ಯ ಕೇವಲ ಆರೇಳು ಲಕ್ಷ ಜನಸಂಖ್ಯೆ ಇರುವ ನಾಡು ಎಂದು ಅಲ್ಲಿನ ಸ್ವಚ್ಛತೆಗೆ ಕಾರಣ ಹೇಳುವಂತಿಲ್ಲ. ಜನಸಂಖ್ಯೆ ಈ ದೇಶಕ್ಕೆ ಭಾರ ಹೌದು.ಈ ಭಾರವು ಸ್ವಚ್ಛತೆಯನ್ನು ದೂರೀಕರಿಸಬೇಕೆಂದಿಲ್ಲ. ಸ್ವಚ್ಛತೆ ಮನಸ್ಸಿನಿಂದ ಹುಟ್ಟಬೇಕು.ಗಾಂಧಿಯೊಳಗೆ ಸ್ವಚ್ಛತೆ ಹುಟ್ಟಿದ್ದು ಹೀಗೆ.

ಡಾರ್ಜಲಿಂಗ್‍ನಲ್ಲಿ ತೇನಸಿಂಗ್-ಹಿಲೇರಿಗಳ ಸಾಹಸದ ಮ್ಯೂಸಿಯಂ ಉಂಟು. ಹಲವಾರು ವಿದೇಶಿಯರು ಈ ಸಾಹಸದಲ್ಲಿ ನಿಧನರಾದ ಮಾಹಿತಿಯುಂಟು. ಗೌರಿಶಂಕರ ಹತ್ತಿ ಇಳಿದ ಆ ಪುರುಷರ ಬಟ್ಟೆಬರಿ ಶೂಗಳು ಅಲ್ಲಿನ ಮ್ಯೂಸಿಯಂನಲ್ಲುಂಟು.ಎಲ್ಲವನ್ನು ನೋಡಿದ ಪ್ರವಾಸಿಗಳು ಧನ್ಯ.ಅದೆಲ್ಲಕ್ಕಿಂತ ಹೆಚ್ಚಾಗಿ ಹಿಮಾಲಯದ ಪ್ರಾಣಿ ಪಕ್ಷಿಗಳದೇ ಒಂದು ಅದ್ಭುತ ಲೋಕ.ಅವುಗಳ ರಾಗಾಲಾಪನೆಯೇ ಸ್ವರ್ಗದ ಕರೆ. ಅದೆಲ್ಲದರ Zoo ಅಲ್ಲುಂಟು ಮಾನವ ನಿರ್ಮಿತ ರಾಕ್ ಗಾರ್ಡನ್ ಅಲ್ಲಿನ ಮತ್ತೊಂದು ವಿಶೇಷ. ಹೊಳೆಯೊಂದು ಹರಿದು ಬೆಟ್ಟಗಳಿಂದ ಚಕಚಕನೆ ಇಳಿಯುವಾಗ ಹಂತ ಹಂತವಾಗಿ ತಡೆನೀಡಿ ಗಾರ್ಡನ್ ಮಾಡಿ ಪ್ರವಾಸಿಗಳಿಗೆ ನ್ಯಾಚರಲ್ ಪಾರ್ಕ್ ನಿರ್ಮಿಸಿ ತೋರಿಸಿರುವುದು ವಿಶೇಷ. ಈ ನಡುವೆ ಪಯಣದಲ್ಲಿ ಟೀ ಎಸ್ಟೇಟುಗಳು ಬೆಟ್ಟ ಗುಡ್ಡಗಳು ನದಿಗಳು ಇವೆಲ್ಲ ಮತ್ತೊಂದು ಮಧುರ ನೋಟ. ಡಾರ್ಜಲಿಂಗ್ ಹತ್ತಿರದ ಏರ್‍ಪೋರ್ಟ್ ‘ಬಾಗ್‍ಡೋಗ್ರ’ಸಿಕ್ಕಿಂ ಭೂತಾನ್, ಡಾರ್ಜಲಿಂಗ್ ಕಡೆಗೆಹೋಗಿ ಬರುವವರಿಗೆಲ್ಲವಾಯುಮಾರ್ಗ ಇದಾಗಿದೆ. ಕಲ್ಕತ್ತಮಾರ್ಗವಾಗಿ ಬಾಗ್‍ಡೋಗ್ರ ತಲುಪಿಹೋಗಿ ಬರಬಹುದು.

Leave a Reply

Your email address will not be published.