ಸಾವಿರಾರು ದೀಪಗಳನ್ನು ಹಚ್ಚಿದ ಒಂದು ಬುಡ್ಡಿದೀಪ

-ಬಿ.ಶ್ರೀಪಾದ ಭಟ್

ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನೀನು ಚಿರಖುಣಿಯಾಗಿರಬೇಕು. ಆದರೆ ನಿನಗೆ ಆಕೆಯ ಪರಿಚಯವಿದೆಯಾ? ನೀನು ಓದು ಬರಹ ಕಲಿತ ಮಹಿಳೆಯಾಗಿದ್ದರೆ ಆಕೆಗೆ ಚಿರಖುಣಿಯಾಗಿರಬೇಕು. ನೀನು ಶಿಕ್ಷಿತ ಭಾರತೀಯ ಮಹಿಳೆಯಾಗಿದ್ದರೆ ಆಕೆಗೆ ಚಿರಖುಣಿಯಾಗಿರಬೇಕು. ನೀನು ಭಾರತೀಯ ಮಹಿಳೆಯಾಗಿದ್ದು ಆ ಅಧ್ಯಾಯವನ್ನು ಇಂಗ್ಲೀಷ್‍ನಲ್ಲಿ ಓದುತ್ತಿದ್ದರೆ ಆಕೆಗೆ ಚಿರಖುಣಿಯಾಗಿರಬೇಕು. ನೀನು ಅಂತರಾಷ್ಟ್ರೀಯ ಮಟ್ಟದ ಶಿಕ್ಷಿತ ದೇಸಿ ಮಹಿಳೆಯಾಗಿದ್ದರೆ ಆಕೆಗೆ ನೀನು ಖುಣಿಯಾಗಿರಬೇಕು

Thom Wolf and Suzana Andrade
19ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯನ್ನು ತಂದಂತಹ ಸಾವಿತ್ರಿಬಾಯಿ ಫುಲೆಯವರನ್ನು ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯುತ್ತಾರೆ. 1818ರಲ್ಲಿ ಪೇಶ್ವೆಗಳ ರಾಜ್ಯಭಾರ ಕೊನೆಗೊಂಡು ಬ್ರಿಟೀಷರ ಆಡಳಿತ ಶುರುವಾಗಿತ್ತು.ಬ್ರಿಟೀಷರು ಅಧಿಕಾರ ವಹಿಸಿಕೊಂಡು ಹದಿಮೂರು ವರ್ಷಗಳ ನಂತರ 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್‍ನಲ್ಲಿ ಹುಟ್ಟಿದ ಸಾವಿತ್ರಿಬಾಯಿಯವರು 182 ವರ್ಷಗಳ ಹಿಂದೆ ದಮನಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣವನ್ನು ಕೊಟ್ಟಂತಹ ಮೊದಲ ಶಿಕ್ಷಕಿ. ಒಂಬತ್ತನೇ ವರ್ಷದಲ್ಲಿ ಮದುವೆಯಾದ ಸಾವಿತ್ರಿಬಾಯಿಯವರು ಮುಂದೆ ಆಧುನಿಕ ಫೆಮಿನಿಸಂ ಚಳುವಳಿಯ ತಾಯಿಯೆಂದು ಗುರುತಿಸಲ್ಪಡುತ್ತಾರೆ.1846-47ರಲ್ಲಿ ಗೆಳತಿ ಫಾತಿಮಾ ಶೇಕ್‍ರೊಂದಿಗೆ ಜೋತಿಬಾರವರ ಒತ್ತಾಸೆಯ ಮೇರೆಗೆ ಅಹ್ಮದನಗರದಲ್ಲಿ ಶಿಕ್ಷಕರ ತರಬೇತಿ ಪಡೆಯುತ್ತಾರೆ.ಮುಂದೆ ಸಾವಿತ್ರಿಬಾಯಿಯವರ ನೆರಳಿನಂತೆ ಅವರ ಸ್ನೇಹಿತೆಯಾಗಿ ಜೊತೆಗಿರುತ್ತಾರೆ ಫಾತಿಮ ಶೇಕ್.
ದಲಿತ ಚಿಂತಕರಾದ ಮುಖೇಶ್ ಮಾನಸ್ ತಮ್ಮ ಲೇಖನದಲ್ಲಿ “ ಈ ದೇಶದ ಶಿಕ್ಷಕಿಯರು ಇಂದಿನ ದಿನ ತಮ್ಮ ಬಗ್ಗೆ ಹೆಮ್ಮೆಯಿಂದ ಬೀಗುತ್ತಾರೆ.ಏಕೆಂದರೆ ರಾಜಕಾರಣಿಗಳು,ಸರ್ಕಾರ,ಜನತೆ ಅವರನ್ನು ಗೌರವಿಸುತ್ತಾರೆ. ಶಿಕ್ಷಣ ಕೇತ್ರದಲ್ಲಿ ಇವರ ಸಾಧÀನೆಯನ್ನು ಗುರುತಿಸಿ ಪದಕಗಳನ್ನು ನೀಡುತ್ತಾರೆ.ಆದರೆ ಶಿಕ್ಷಕರ,ಶಿಕ್ಷಣದ ಕ್ಷೇತ್ರಕ್ಕೆ ಯಾವುದೇ ಬಗೆಯಲ್ಲಿ ಕಾಣಿಕೆಯನ್ನು ನೀಡದಂತಹ ವಿದ್ವಾಂಸರೊಬ್ಬರ ಹೆಸರಿನಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಈ ವಿದ್ವಾಂಸರು ಅಂಚಿನಲ್ಲಿ ಬದುಕುತ್ತಿರುವ ತಳಸಮುದಾಯಗಳ ಶಿಕ್ಷಣದ ಕುರಿತಾಗಿ ಚಿಂತಿಸಿದ್ದೂ ಶೂನ್ಯ. ಆದರೆ ಮಹಿಳೆಯರ, ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಚಳುವಳಿಯನ್ನು ಮಾಡಿದ ಸಾವಿತ್ರಿಬಾಯಿ ಫುಲೆಯವರನ್ನು ಆಧುನಿಕ ಶಿಕ್ಷಣದ ಮೊದಲ ಶಿಕ್ಷಕಿ ಎಂದು ಇಂದಿನ ದಿನಗಳಲ್ಲಿ ಅಧಿಕೃತವಾಗಿ ಗುರುತಿಸುತ್ತಿದ್ದಾರೆ” ಎಂದು ಬರೆದಿದ್ದಾರೆ.

ಪತ್ರಕರ್ತೆ ಮ್ರಿದು ವರ್ಮ “ ಇಂದು ಫ್ಯಾಷನ್ ಆಗಿರುವ ಸ್ತ್ರೀ ವಿಮೋಚನೆ 150 ವರ್ಷಗಳ ಹಿಂದೆ ಭಾರತದ ಐಕಾನ್ ಆಗಿದ್ದ ಸಾವಿತ್ರಿ ಬಾಯಿಯವರಿಗೆ ನಿಜವಾದ ಅರ್ಥದ ಅರಿವಾಗಿತ್ತು’ ಎಂದು ಬರೆಯುತ್ತಾರೆ.

school4ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಚಳುವಳಿಗಳನ್ನು ಸಂಘಟಿಸಿದ ಸಾವಿತ್ರಿಬಾಯಿಯವರು 1848ರಲ್ಲಿ ಪುಣೆಯ ನಾರಾಯಣಪೇಟೆಯ ಬಿಂದೇವಾಡದಲ್ಲಿ ಪತಿ ಜೋತಿಬಾರೊಂದಿಗೆ ಕೈಜೋಡಿಸಿ ಮೊದಲ ಬಾರಿಗೆ ಬಾಲಕಿಯರ ಶಾಲೆಯನ್ನು ಪ್ರಾರಂಬಿಸಿದರು.1851ರ ವೇಳೆಗೆ ಐದನೂರು ಬಾಲಕಿಯರನ್ನೊಳಗೊಂಡಂತಹ ಮೂರು ಬಾಲಕಿಯರ ಶಾಲೆಗಳನ್ನು ನಡೆಸುತ್ತಾರೆ. ಇಂದು ಸರ್ವ ಶಿಕ್ಷಣ ಅಭಿಯಾನ,ಶಿಕ್ಷಣ ಹಕ್ಕು ಕಾಯ್ದೆ,ಬಿಸಿಯೂಟದ ಸರ್ಕಾರಿ ಯೋಜನೆಗಳನ್ನು ಕ್ರಾಂತಿಕಾರಿಗಳೆಂದೇ ಕೊಂಡಾಡಲಾಗುತ್ತದೆ. ಆದರೆ 150 ವರ್ಷಗಳ ಹಿಂದೆ ಸಾವಿತ್ರಿಬಾಯಿಯವರು ಶಾಲೆಯನ್ನು ತೊರೆಯದ ವಿಧ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು.ಸ್ಪರ್ಧೆಗಳಲ್ಲಿ ಗೆಲ್ಲುತ್ತಿದ್ದ ವಿಧ್ಯಾಥಿಗಳಿಗೆ ಬಹುಮಾನವನ್ನು ಸ್ವೀಕರಿಸುವುದರ ಬದಲಾಗಿ ತಮ್ಮ ಶಾಲೆಗಳಿಗೆ ಗ್ರಂಥಾಲಯಗಳನ್ನು ಕೊಡಲಿಕ್ಕೆ ಕೇಳಿರೆಂದು ಬೋಧಿಸುತ್ತಿದ್ದರು.ಪೋಷಕರು-ಶಿಕ್ಷಕರÀ ನಡುವೆ ನಿಯಮಿತವಾಗಿ ಮಾತುಕತೆಗಳನ್ನು ಆ ಕಾಲದಲ್ಲೇ ಜಾರಿಗೊಳಿಸಿದ್ದರು.ವಿಧ್ಯಾಭ್ಯಾಸದ ಏಕತಾÀನತೆಯಿಂದ ಉಂಟಾಗುವ ಆಲಸ್ಯವನ್ನು ದೂರುಗೊಳಿಸಲು ಶಾಲೆಗಳಲ್ಲಿ ಆಟಗಳನ್ನು ಏರ್ಪಡಿಸುತ್ತಿದ್ದರು.ಶಿಕ್ಷಣದಲ್ಲಿ ವೈವಿಧ್ಯತೆಯನ್ನು ತರಲು ಪ್ರಬಂಧ,ಕತೆ,ಕವನಗಳ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು.ಇವರ ಈ ಶಿಕ್ಷಣದ ಮಾದರಿಯ ಯಶಸ್ಸು ಎಷ್ಟಿತ್ತೆಂದರೆ ಇವರ ವಿಧ್ಯಾರ್ಥಿನಿ ಹನ್ನೊಂದು ವರ್ಷದ ಮುಕ್ತಾಬಾಯಿ ಬರೆÀದÀ “ಮಹರ್,ಮಾಂಗ್ ಸಮುದಾಯದ ದುಃಖ,ದುಮ್ಮಾನಗಳು” ಎನ್ನುವ ಕ್ರಾಂತಿಕಾರಿ ಪ್ರಬಂಧವೇ ಸಾಕ್ಷಿ.ಇದು ಇಂದಿಗೂ ಅತ್ಯಂತ ಮಹತ್ವದ ಪ್ರಬಂಧ.

1849-50ರ ವೇಳೆಗೆ ಇಪ್ಪತ್ತೈದು ವಿಧ್ಯಾರ್ಥಿನಿಯರಿದ್ದ ಶಾಲೆಯಲ್ಲಿ ಹತ್ತು ಭ್ರಾಹ್ಮಣ,ಆರು ಮರಾಠ,ಇಬ್ಬರು ಚಮ್ಮಾರರು,ನಾಲ್ವರು ಮಹರ್,ಒಬ್ಬರು ಮಾತಂಗ,ಒಬ್ಬರು ಗಡಾರಿಯಾ,ಒಬ್ಬರು ಮಾಲಿ ಸಮುದಾಯದ ವಿಧ್ಯಾರ್ಥಿನಿಯರಿದ್ದರು. 29,ಮೇ,1852ರ “ಪುಣೆ ಅಬ್ಸರ್ವ” ಸಂಚಿಕೆಯಲ್ಲಿ ಪ್ರಕಟವಾದ ವರದಿ “ಮಾಲಿ ಜಾತಿಗೆ ಸೇರಿದವನೊಬ್ಬ ವ್ಯಕ್ತಿ ತನ್ನ ಸ್ವಂತ ಖರ್ಚಿನಲ್ಲಿ ಅಸ್ಪøಶ್ಯರಿಗಾಗಿ ಶಾಲೆಯೊಂದನ್ನು ನಡೆಸುತ್ತಿದ್ದಾನೆ.ಸಮಾಜ ಸುಧಾರಕರಿಗೆ ಇದು ಒಂದು ಸಂತಸದ ಸುದ್ದಿ, ವಿಠಲ್ ಪೇಟೆಯಲ್ಲಿರುವ ಈ ಶಾಲೆಯಲ್ಲಿ ಮಹರ್,ಮಾಂಗ್,ಪಾಖರಿ ಸಮುದಾಯದ ವಿಧ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ”

1863ರ ಭಿತ್ತಿಪತ್ರವೊಂದರ ವಿವರ ಹೀಗಿದೆ “ ವಿವಾಹ ಬಾಹಿರವಾಗಿ ಗರ್ಭಿಣಿಯಾದ ಮಹಿಳೆಯರು ಜೋತಿಬಾ ಫುಲೆಯವರು ಸ್ಥಾಪಿಸಿದ ಪುನರ್ವಸತಿ ಕೇಂದ್ರಕ್ಕೆ ಭೇಟಿ ಕೊಡಿ.ಅಲ್ಲಿ ಅವರಿಗೆ ಆಸರೆ ಕೊಡುತ್ತಾರೆ.ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ”. ಹೀಗೆ ಅತ್ಯಾಚಾರಕ್ಕೊಳಗಾದವರು ಸಹ ಈ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದರು.
1852ರಲ್ಲಿ ಪುಣೆಯಲ್ಲಿ ಸಾವಿತ್ರಿಬಾಯಿಯವರು ಮಹಿಳಾ ಮಂಡಳಿಯನ್ನು ಸ್ಥಾಪಿಸಿದರು.ಇಲ್ಲಿ ಎಲ್ಲಾ ಜಾತಿಯ ಮಹಿಳೆಯರನ್ನು ಸೇರಿಸುತ್ತಿದ್ದರು.ಅಲ್ಲಿನ ಮೀಟಿಂಗ್‍ಗಳಲ್ಲಿ ಭ್ರಾಹ್ಮಣ್ಯದ ಸನಾತನವಾದದ ಕುರಿತಾಗಿ ಚರ್ಚಿಸುತ್ತಿದ್ದರು ಮತ್ತು ಫ್ಯೂಡಲ್ ಯಜಮಾನ್ಯವನ್ನು ತೀವ್ರವಾಗಿ ಟೀಕಿಸಲಾಗುತ್ತಿತ್ತು. (ಕೃಪೆ : ಮುಖೇಶ್ ಮಾನಸ್)
ವರದಕ್ಷಿಣೆಯ ಪಿಡುಗನ್ನು ತೊಲಗಿಸಲು ಸಾಮೂಹಿಕ ಮದುವೆಗಳನ್ನು ಏರ್ಪಡಿಸುತ್ತಿದ್ದರು.ಇದಕ್ಕೆ ತೀವ್ರವಾದ ವಿರೋಧವನ್ನು ಎದುರಿಸಬೇಕಾಯಿತು.ಆದರೆ ಸಾವಿತ್ರಿಬಾಯಿಯವರು ಹಿಂಜರಿಯಲಿಲ್ಲ

1868ರಲ್ಲಿ ಬರಗಾಲದ ಸಂದರ್ಭದಲ್ಲಿ ತಮ್ಮ ಮನೆಯ ನೀರಿನ ತೊಟ್ಟಿಗಳನ್ನು ದಲಿತರಿಗೆ ಉಪಯೋಗಿಸಲು ಬಿಟ್ಟುಕೊಟ್ಟರು.1877ರಲ್ಲಿ ಪಶ್ಚಿಮ ಮಹಾರಾಷ್ಟ್ರದ ಭಾಗಗಳು ಕ್ಷಾಮದಿಂದ ತತ್ತರಿಸುತ್ತಿದ್ದವು.ಫುಲೆ ದಂಪತಿಗಳು ‘ವಿಕ್ಟೋರಿಯಾ ಬಾಲಾಶ್ರಮ’ ಅನ್ನು ಸ್ಥಾಪಿಸಿ ಸ್ನೇಹಿತರು,ದಾನಿಗಳಿಂದ ನೆರವನ್ನು ಸಂಗ್ರಹಿಸಿ ಪ್ರತಿಯೊಂದು ಹಳ್ಳಿಗೆ ತೆರಳಿ ನೆರವಿಗೆ ಧಾವಿಸುತ್ತಿದ್ದರು
1890ರಲ್ಲಿ ಪತಿ ಜೋತಿಬಾ ತೀರಿಕೊಂಡಾಗ ಅವರ ಅಂತ್ಯಕ್ರಿಯೆಯನ್ನು ಸ್ವತಃ ತಾವೇ ಖುದ್ದಾಗಿ ನೆರವೇರಿಸಿದರು ಸಾವಿತ್ರಿಬಾಯಿ ಫುಲೆ.
1897ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ತಾವೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.

10,ಸೆಪ್ಟೆಂಬರ್ 1853 ರಂದು ಫುಲೆ ದಂಪತಿಗಳು ‘ಅಸ್ಪøಶ್ಯ ಸಮುದಾಯಗಳ ಶಿಕ್ಷಣಕ್ಕಾಗಿ ಸಮಾಜ’ ಎನ್ನುವ ವೇದಿಕೆಯನ್ನು ಸ್ಥಾಪಿಸುತ್ತಾರೆ.ಅದರಲ್ಲಿ ಭಾಗವಹಿಸಿ ಸದಾಶಿವ ಗೋವಂಡೆಯವರು ಮಾತನಾಡುತ್ತಾರೆ.ತಮ್ಮ ಭಾಷಣದಲ್ಲಿ ಅಜ್ಞಾನವು ನಮ್ಮ ದೇಶದ ಬಲು ದೊಡ್ಡ ರೋಗ.ಈ ರೋಗವನ್ನು ಗುಣಪಡಿಸಲು ಅತ್ಯಂತ ಶಕ್ತಿಯುತವಾದ ಔಷದವೇ ಬೇಕಾಗುತ್ತದೆ ಎಂದು ಹೇಳುತ್ತಾರೆ.ಅಂದಿನ ಧನ್ಯೋದಯ ಪತ್ರಿಕೆಯಲ್ಲಿ ಈ ಭಾಷಣದ ವರದಿ ಹೀಗಿದೆ “ಗೋವಂಡೆಯವರ ಪ್ರಕಾರ ಇಂಡಿಯಾ ದೇಶವು ರೋಗಗ್ರಸ್ಥವಾಗಿದೆ.ಆಕೆಯ ರೋಗವು ಇಂದು ಕೀವು ತುಂಬಿದ ಹುಣ್ಣಾಗಿದೆ.ಆಕೆ ‘ಮೂಢನಂಬಿಕೆ ಮತ್ತು ಜೀತ’ವೆಂಬ ಅಪಾಯಕಾರಿ ಜ್ವರದಲ್ಲಿ ಮುಳುಗಿದ್ದಾಳೆ.ಇಲ್ಲಿ ರೋಗಿಗಳು ದಮನಿತ ಸಮುದಾಯಗಳು.ಇವರು ಮನುಧರ್ಮದ ವರ್ಣಾಶ್ರಮದ ಜಾತಿ ಪದ್ಧತಿಯಿಂದಾಗಿ ನರಳುತ್ತಿದ್ದಾರೆ. ಈ ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತ ಇಲ್ಲಿ ಮನುಷ್ಯರನ್ನೂ ಸೃಷ್ಟಿಸಿದ.ಆತನ ಆಶಯವೇನೆಂದರೆ ಎಲ್ಲರೂ ಸಮಾನರು ಮತ್ತು ಎಲ್ಲಾ ಮನುಷ್ಯರಿಗೂ ಸಮಾನವಾದ ಹಕ್ಕುಗಳಿವೆ,ಸಮಾನವಾದ ಅಧಿಕಾರವಿದೆ.ಫುಲೆ ದಂಪತಿಗಳ ಪ್ರಕಾರ ಪ್ರತಿಯೊಂದು ಮಗುವೂ ವಿಶೇಷವಾಗಿರುತ್ತದೆ.ಈ ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದು ಫುಲೆ ದಂಪತಿಗಳು ಭಾವಿಸುತ್ತಾರೆ”.
saviಇಂದಿಗೂ ಇಂಡಿಯಾ ರೋಗಗ್ರಸ್ಥವಾಗಿದೆ. Thom Wolf and Suzana Andr ಅವರು “ ಅಭಿವೃದ್ಧಿ ಹೊಂದಿದ ದೇಶವೆಂದರೆ ಅದು ಅಭಿವೃದ್ಧಿ ಹೊಂದುತ್ತಾ ಇರುವುದಿಲ್ಲ.ಅಭಿವೃದ್ಧಿಯನ್ನು ಸಾಧಿಸಿರುತ್ತದೆ.ಅಭಿವೃದ್ಧಿ ಹೊಂದುತ್ತಿರುವ ದೇಶವು ಕಲೋನಿಯಲ್ ವ್ಯವಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಡರಾಷ್ಟ್ರವಾಗಿರುವುದಿಲ್ಲ.ಅದು ಶತಮಾನಗಳಿಂದ ಹಾದಿ ತಪ್ಪಿದ ಆಡಳಿತದಿಂದಾಗಿ ಬಡರಾಷ್ಟ್ರವಾಗಿರುತ್ತದೆ.ಆದರೆ ಅದು ಬಡರಾಷ್ಟ್ರವಾಗಿಯೇ ಇರುತ್ತದೆ ಏಕೆಂದರೆ ಅಬಿವೃದ್ಧಿ ಹೊಂದಿದ ದೇಶದಂತೆ ಅದು ತನ್ನೊಳಗೆ ಕ್ರಾಂತಿಕಾರಿ ತಿವಿತಗಳನ್ನು ಇಟ್ಟುಕೊಂಡಿರುವುದಿಲ್ಲ.ಇದನ್ನೇ ಫುಲೆಯವರು ಹೇಳುತ್ತಿರುವುದು.ನಮ್ಮೊಳಗೆ,ನಮ್ಮ ವ್ಯವಸ್ಥೆಯೊಳಗೆ ಕ್ರಾಂತಿಯಾಗಬೇಕು” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜೋತಿಬಾ ಅವರ ಸತ್ಯಶೋಧಕ ಸಮಾಜದ ನೇತೃತ್ವವನ್ನು ವಹಿಸಿಕೊಂಡ ಸಾವಿತ್ರಿಬಾಯಿಯವರು ಬಲಿರಾಜನ ಉದಾಹರಣೆಯನ್ನು ಬಳಸಿಕೊಳ್ಳುತ್ತಾರೆ.ಬಲಿರಾಜನ ದಾರುಣ ಅಂತ್ಯವೇ ಇಂಡಿಯಾದ ನೋವುಗಳಲ್ಲಿ ಕಾಣಬಹುದು ಎಂದು ಹೇಳುತ್ತಾರೆ.ತಮ್ಮ ಕವನವೊಂದರಲ್ಲಿ “ನೆನಪಿರಲಿ ಬಲಿರಾಜನ ರಾಜ್ಯಭಾರದಲ್ಲಿ ನಮ್ಮ ದಿವ್ಯವಾದ ಧ್ವಜಸ್ತಂಭವು ಸುರುಳಿ ಬಿಚ್ಚಿಕೊಂಡು ಪ್ರಜ್ವಲವಾಗಿ ಬೆಳಗುತ್ತದೆ” ಎಂದು ಸಾವಿತ್ರಿಬಾಯಿಯವರು ಬರೆಯುತ್ತಾರೆ.  ಆದರೆ 182 ವರ್ಷಗಳ ನಂತರ ಇಂಡಿಯಾದ ಇಂದಿನ ಆಧುನಿಕ ಶಿಕ್ಷಣವು ಸಾವಿತ್ರಿಬಾಯಿಯವರ ಟegಚಿಛಿಥಿ ಯನ್ನು ತಲುಪಲು ಸಹ ಆಗದೆ ಕಷ್ಟಪಡುತ್ತಿರುವುದು ವಿಪರ್ಯಾಸವೇ ಸರಿ. ಏಕೆಂದರೆ ಇಂದಿಗೂ ಆಧುನಿಕ ಶಿಕ್ಷಣವೆಂದರೆ ಅದು ಎಲೈಟ್ ಗುಂಪಿಗಾಗಿ ಮಾತ್ರ ಮೀಸಲಾಗಿದೆ.ದಲಿತರ,ಆದಿವಾಸಿಗಳ ಮತ್ತು ಎಲ್ಲಾ ಜಾತಿಯ ಬಡವರ ಮಕ್ಕಳಿಗೆ ಇಂದಿಗೂ ಆಧುನಿಕ ಶಿಕ್ಷಣ ಒಂದು ಮರೀಚಿಕೆ.ಸಾವಿತ್ರಿಬಾಯಿಯವರಿಗೆ ಸಾಧ್ಯವಾಗಿದ್ದು ನಮಗೇತಕ್ಕೆ ಸಾಧ್ಯವಾಗದೇ ಹೋಯ್ತು ?? ಏಕೆಂದರೆ ಶಿಕ್ಷಣ ವ್ಯವಸ್ಥೆಯ ಜಡಗೊಂಡ ದೃಷಿಕೋನವನ್ನೇ ಪಲ್ಲಟಗೊಳಿಸಲು ನಮ್ಮ ಶಿಕ್ಷಣ ನೀತಿಗಳು ಸೋತಿವೆ.

ಶಿಕ್ಷಣದ ಮೂಲಕ ತಳಸಮುದಾಯಗಳ ಬದುಕಿನÀಲ್ಲಿ ಸುಧಾರಣೆಗಳಿಗೆ ಕಾರಣರಾದ ಫುಲೆ ದಂಪತಿಗಳು ವಿಶ್ವ ಭ್ರಾತೃತ್ವ,ಮಕ್ಕಳ ಸೂಕ್ಷ್ಮತೆ,ಬೌದ್ಧಿಕವಾಗಿ ಹೆಚ್ಚು ವಸ್ತುನಿಷ್ಟವಾದ ಮತ್ತು ಸಾಮಾಜಿಕ ಸುಧಾರಣೆಯಂತಹ ಗಂಭೀರ ಠಿeಜಚಿgಚಿgogಥಿ ಗಳನ್ನು ಈ ಶಿಕ್ಷಣದಲ್ಲಿ ಅಳವಡಿಸಿದರು.19ನೇ ಶತಮಾನದ ಮೊದಲ ಹಾಗೂ ಮಧ್ಯ ಭಾಗದಲ್ಲಿ ಅಂದಿನ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಬಯಸಿದ್ದ ಸಾವಿತ್ರಿಬಾಯಿ ಆಗಿನ ಶಿಕ್ಷಣ ವ್ಯವಸ್ಥೆಯ ದೃಷ್ಟಿಕೋನವನ್ನೇ ಪಲ್ಲಟಗೊಳಿಸಿದರು ಎಂದು ಥಾಮಸ್ ಕ್ಹುನ್ ಹೇಳುತ್ತಾರೆ.
Thom Wolf and Suzana Andr ಅವರು “ ಸಾವಿತ್ರಿಬಾಯಿಯವರ pedagagogy ನಾಲ್ಕು ಪ್ರಮುಖ ಶಿಕ್ಷಣ ನೀತಿಗಳನ್ನು ಒಳಗೊಂಡಿತ್ತು. ಅದೇನೆಂದರೆ
1. ಜಾಗತಿಕವಾಗಿ ಲಭ್ಯವಿರುವ ಆಧುನಿಕ ಶಿಕ್ಷಣವನ್ನು,ಪಠ್ಯವನ್ನು ಅಳವಡಿಸಿಕೊಳ್ಳುವುದು
2. ಮಕ್ಕಳ ಸೂಕ್ಷ್ಮತೆಯನ್ನಾಧರಿಸಿ ಭೋಧನೆಯ ಕ್ರಮವನ್ನು ರೂಪಿಸುವುದು
3. ಬೌದ್ಧಿಕವಾಗಿ ವಿಮರ್ಶಾತ್ಮಕವಾದ,ವಸ್ತುನಿಷ್ಟವಾದ ಕಲಿಕೆಯನ್ನು ಬೆಂಬಲಿಸುವುದು
4. ಸಾಮಾಜಿಕ ಸುಧಾರಣೆಗಳನ್ನು,ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆದ್ಯತೆಯ ಮೇರೆಗೆ ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಿಕೊಳ್ಳುವುದು
ಎಂದು ಬರೆಯುತ್ತಾರೆ.

ಮೇಲ್ನೋಟಕ್ಕೆ ಸರಳವಾಗಿ ಕಂಡುಬರುವ ಈ ಶಿಕ್ಷಣ ನೀತಿಗಳು ಇಂದಿನ ಆಧುನಿಕ ಭಾರತದ ಸಂದರ್ಭದಲ್ಲಿ ದಯನೀಯವಾಗಿ ಸೋತಿದ್ದಾದರೂ ಏತಕ್ಕೆ ? 19ನೇ ಶತಮಾನದಲ್ಲಿ ಸಾವಿತ್ರಿಬಾಯಿಯವರ ಬಾಲಕಿಯರ ಶಾಲೆಯಿಂದ ದಲಿತ ಬಾಲಕಿಯು ಈ ಪಠ್ಯವನ್ನು ಕಲಿತು ಅಕ್ಷರಸ್ಥೆಯಾಗಿ ಹೊರಬರಲು ಸಾಧ್ಯವಾಗುವುದಾದರೆ ಇಂದಿನ ಭಾರತದಲ್ಲಿ ಈ ಚಲನಶೀಲತೆ ತೆವಳುತ್ತಿರುವುದಕ್ಕೆ ಮೂಲಭೂತ ಕಾರಣ ಚಾಲ್ತಿಯಲ್ಲಿರುವ ಶಿಕ್ಷಣ ನೀತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಸಾವಿತ್ರಿಬಾಯಿಯವರಿಗೆ ಇದ್ದಂತಹ ಇಚ್ಛಾಶಕ್ತಿ ಮತ್ತು ಮಾನಸಿಕ ಶಕ್ತಿ ನಮ್ಮಲ್ಲಿ ಗೈರುಹಾಜರಾಗಿರುವುದು.ಸಾವಿತ್ರಿಬಾಯಿ ಫುಲೆಯವರು ನಿರಂತರವಾಗಿ ಪ್ರತಿಪಾದಿಸಿದ ವಿಶ್ವ ಭ್ರಾತೃತ್ವ,ಮಕ್ಕಳ ಸೂಕ್ಷ್ಮತೆ,ಬೌದ್ಧಿಕವಾಗಿ ಹೆಚ್ಚು ವಸ್ತುನಿಷ್ಟವಾದ ಮತ್ತು ಸಾಮಾಜಿಕ ಸುಧಾರಣೆಯಂತಹ ಗಂಭೀರ pedagagogy ಗಳನ್ನು ನಾವು ಕೈಬಿಟ್ಟಿರುವುದು.

ಸಾವಿತ್ರಿಬಾಯಿಯವರಿಗೆ ಬದ್ಧತೆ ಮತ್ತು ಧೃಢ ನಿಶ್ಚಯ ಮಾರ್ಗದರ್ಶಿಯಾಗಿತ್ತು,ಕರುಣೆ ಮತ್ತು ಅನುಕಂಪ ಒತ್ತಡವಾಗಿತ್ತು,ಮೌಲ್ಯಗಳು ಮತ್ತು ನೈತಿಕತೆ ಸಂರಕ್ಷಣೆಗಳಾಗಿತ್ತು ಎಂದು Suzಚಿಟಿಚಿ ಂಟಿಜಡಿಚಿಜe ವಿವರಿಸಿದ್ದಾರೆ.ವ್ಯವಸ್ಥೆಯ ದೃಷ್ಟಿಕೋನದಲ್ಲಿಯೇ ಕ್ರಾಂತಿಕಾರಿ ಬದಲಾವಣೆ ತರದೆ ಸಾಮಾಜಿಕ ಕ್ರಾಂತಿಯನ್ನು ಸಾಧಿಸಲು ಕಷ್ಟಸಾಧ್ಯ ಎಂದು ನಂಬಿದ್ದ ಸಾವಿತ್ರಿಬಾಯಿಯವರು ಸುಧಾರಣೆಯ ವಿಷಯದಲ್ಲಿ ಹೊಂದಾಣಿಕೆಯನ್ನೇ ನಿರಾಕರಿಸಿದರು.

ಮಾನವ ಹಕ್ಕುಗಳು,ಸಾಮಾಜಿಕ ಸ್ಥಾನಮಾನಗಳನ್ನು ವರ್ಗಗಳ ಆಧಾರದ ಮೇಲೆ ನಿರ್ಧರಿಸಲ್ಪಡುವುದಿಲ್ಲ ಬದಲಾಗಿ ಜಾತಿಯ ಮೇಲೆ ನಿರ್ಧರಿಸಲ್ಪಡುತ್ತದೆ ಎಂದು 19ನೇ ಶತಮಾನದಲ್ಲಿಯೇ ಸಾವಿತ್ರಿಬಾಯಿಯವರಿಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು. ವರ್ಗವೆಂದೂ ಜಾತಿಯಲ್ಲ,ವರ್ಗಗಳನ್ನು ಬದಲಾಯಿಸಬಹುದು ಆದರೆ ಜಾತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು 150 ವರ್ಷಗಳ ಹಿಂದೆಯೇ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದರು.

ಹೀಗಾಗಿಯೇ ಇದನ್ನು ಒಡೆಯಲು ಸಾವಿತ್ರಿಬಾಯಿಯವರು ಏಕಕಾಲಕ್ಕೆ ಬಾಲಕಿಯರ ಶಾಲೆಯನ್ನು ಪ್ರಾರಂಬಿಸುತ್ತಾರೆ,ದಮನಿತ ಸಮುದಾಯಗಳಿಗೆ ಶಾಲೆಗಳನ್ನು ಪ್ರಾರಂಬಿಸುತ್ತಾರೆ,ವಿವಾಹ ಭಾಹಿರವಾಗಿ ಗರ್ಭಿಣಿಯರಾದ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುತ್ತಾರೆ,ವಿವಾಹಬಾಹಿರವಾಗಿ ಜನಿಸಿದ ಮಕ್ಕಳಿಗೆ ಶಿಶುಕೇಂದ್ರಗಳನ್ನು ಪ್ರಾರಂಬಿಸುತ್ತಾರೆ,ಕ್ಷೌರಿಕರ ಪ್ರತಿಭಟನೆಯನ್ನು ಸಂಘಟಿಸುವುದರ ಮೂಲಕ ವಿಧವೆಯರ ಕೇಶ ಮಂಡನವನ್ನು ವಿರೋಧಿಸುತ್ತಾರೆ,ದಲಿತರಿಗೆ ತಮ್ಮ ಮನೆಯ ತೊಟ್ಟಿಯನ್ನು ಸಾರ್ವಜನಿಕವಾಗಿ ಕುಡಿಯಲು ಬಿಟ್ಟುಕೊಡುತ್ತಾರೆ,ಕ್ಷಾಮದ ಸಂದರ್ಭದಲ್ಲಿ ತಮ್ಮ ಸತ್ಯಶೋಧಕ ಕಾರ್ಯಕರ್ತರೊಂದಿಗೆ ಸ್ಥಳದಲ್ಲಿ ನೆಲೆನಿಂತು ಬರಗಾಲ ಸಂತ್ರಸ್ಥರ ನೆರವಿಗೆ ಧಾವಿಸುತ್ತಾರೆ,ಪ್ಲೇಗ್ ಪೀಡಿತರ ಚಿಕಿತ್ಸೆಗೆ ಮುಂದಾಗುತ್ತಾರೆ.

ಇಂದು 21ನೇ ಶತಮಾನದಲ್ಲಿ ಮತ್ತೊಮ್ಮೆ ಸಾವಿತ್ರಿಬಾಯಿಯವರ ಧ್ವನಿಯನ್ನು ಮುನ್ನಲೆಗೆ ತರಬೇಕಾಗಿದೆ. ಏಕೆಂದರೆ ಇತಿಹಾಸವು ಸಾವಿತ್ರಿಬಾಯಿಯವರ ಸಂದರ್ಭದಲ್ಲಿ ಪಕ್ಷಪಾತದಿಂದ ವರ್ತಿಸಿದೆ. ಸಾವಿತ್ರಿಬಾಯಿಯವರು ಭ್ರಾಹ್ಮಣ್ಯದ ಪುರೋಹಿತಶಾಹಿಯನ್ನು,ಜಾತಿ ಪದ್ಧತಿ-ಫ್ಯೂಡಲ್ ವ್ಯವಸ್ಥೆಯನ್ನು ತಿರಸ್ಕರಿಸಿದ್ದಕ್ಕೆ ಪ್ರತೀಕಾರವೇನೋ ಎಂಬಂತೆ ಈ ರಾಷ್ಟ್ರೀಯವಾದಿ ಇತಿಹಾಸಕಾರರು ಈ ಮೊದಲ ಶಿಕ್ಷಕಿಯ ಸಾಧನೆಗಳೇ ಇತಿಹಾಸದ ಪುಟಗಳಲ್ಲಿ ಪ್ರಸ್ತಾಪ ಆಗದಂತೆ ನಕಾರಾತ್ಮಕವಾಗಿ ವರ್ತಿಸಿದ್ದಾರೆ. ಸತ್ಯವನ್ನು ದಾಖಲಿಸಬೇಕಾಗಿದ್ದಂಹ ಸಂದರ್ಭದಲ್ಲಿ ಇತಿಹಾಸಕಾರರು ಗೊಂದಲ ಮತ್ತು ದಾರಿ ತಪ್ಪಿಸುವ ಮಾಹಿತಿಗಳನ್ನು ದಾಖಲಿಸಿದರು. ಪಠ್ಯ ಪುಸ್ತಕಗಳಲ್ಲಿ ಭಾರತದ ಅನೇಕ ಮೊದಲ ವ್ಯಕ್ತಿಗಳ ಕುರಿತಾಗಿ ಪ್ರಶ್ನೋತ್ತರಗಳನ್ನು ಅಳವಡಿಸಿರುತ್ತಾರೆ.ಆದರೆ ಆಧುನಿಕ ಭಾರತದ ಮೊದಲ ಶಿಕ್ಷಕಿ,ಮೊದಲ ಫೆಮಿನಿಸಂ ನಾಯಕಿ ಸಾವಿತ್ರಿಬಾಯಿಯವರ ಹೆಸರನ್ನು ಕುತೂಹಲಕ್ಕಾದರೂ ದಾಖಲಿಸಿಲ್ಲ. ಝಾನ್ಸೀ ರಾಣಿ ಲಕ್ಮೀಬಾಯಿ,ರಾಣಿ ಚೆನ್ನಮ್ಮ ರಂತಹ ಸ್ವಾತಂತ್ರ ಹೋರಾಟಗಾರರ ಹೆಸರುಗಳು,ಗಾಂಧಿ-ನೆಹರೂ ಕುಟುಂಬಗಳ ಸದಸ್ಯರ ಹೆಸರುಗಳು ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡಿವೆ ಮತ್ತು ಪದೇ ಪದೇ ಚರ್ಚಿಸಲ್ಪಡುತ್ತವೆ ಆದರೆ ಸಾವಿತ್ರಿಬಾಯಿಯವರ ಹೆಸರನ್ನೇ ಕೈಬಿಟ್ಟಿರುವದರ ಹಿನ್ನೆಲೆಯ ಕುರಿತಾಗಿ ಪ್ರಜ್ಞಾವಂತರಿಗೆ ಇಂದಿಗೂ ಕುತೂಹಲವಿದೆ.

19ನೇ ಶತಮಾನದ ರಾಜರಾಮ್ ಮೋಹನ್ ರಾಯ್,ದಯಾನಂದ ಸ್ವಾಮಿ ಸರಸ್ವತಿ,ಟಿಲಕ,ಗೋಖಲೆ ರಂತಹ ಸಮಾಜ ಸುಧಾರಕರು ಹಿಂದೂ ಸಮಾಜದಲ್ಲಿನ ಕೆಲವು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು.ಆದರೆ ಇವರಾರೂ ಹಿಂದೂ ಧರ್ಮದ ಚೌಕಟ್ಟಿನೊಳಗಿರುವ ಭ್ರಾಹ್ಮಣ್ಯದ ಪಾರುಪತ್ಯವನ್ನು,ಜಾತಿ ಪದ್ಧತಿಯನ್ನು ಕಿತ್ತು ಹಾಕುವ ಪ್ರಯತ್ನಗಳನ್ನು ಮಾಡಲಿಲ್ಲ. ಯಥಾಸ್ಥಿತಿವಾದವನ್ನು ಪ್ರತಿಪಾದಿಸಿದ ಇವರು ಕೇವಲ ಮೇಲ್ಮಟ್ಟದ ಸುಧಾರಣೆಗಳನ್ನು ಬಯಸಿದ್ದರು.ಆದರೆ ಫುಲೆ ದಂಪತಿಗಳು ಭ್ರಾಹ್ಮಣ್ಯದ ಧಾರ್ಮಿಕ-ಸಾಮಾಜಿಕ ವ್ಯವಸ್ಥೆ ಕಳಂಕಿvವಾದದ್ದು ಮತ್ತು ಹೆಚ್ಚು ಅಪಾಯಕಾರಿಯಾದದ್ದು ಎಂದು ವಿವರಿಸಿದರು. ಜಾತಿಪದ್ಧತಿ-ಫ್ಯೂಡಲ್ ವ್ಯವಸ್ಥೆಯಂತಹ ರೋಗಕ್ಕೆ ಫುಲೆ ದಂಪತಿಗಳು ಶಿಕ್ಷಣವೇ ಔಷದಿ ಎಂದು ವಿವರಿಸಿದರು.ಜಾತಿ ಪದ್ಧತಿಯ ವಿರುದ್ಧ ಸಮರವನ್ನೇ ಸಾರಿದರು.

ಕೀವುಗಟ್ಟಿದಂತಹ ಗಾಯದ ಕಲೆಯಾಗಿದ್ದ ಜಾತಿಯನ್ನು ಕಡೆಗೂ ನನ್ನ ಬದುಕಿನಿಂದ ಅಳಿಸಿಹಾಕಿದ್ದೇನೆ ಎನ್ನುವಂತಹ ಕವನದ ಸಾಲುಗಳನ್ನು ಬರೆದ ಸಾವಿತ್ರಿಬಾಯಿಯವರು ಭ್ರಾಹ್ಮಣರ ಶಾಸ್ತ್ರಗಳನ್ನು ಕಿತ್ತು ಎಸೆದು ಹಾಕು ಎಂದು ತಮ್ಮ ‘ಕಾವ್ಯ ಅರಳಿದೆ’ ಸಂಕಲನದಲ್ಲಿ ಕರೆ ನೀಡಿದರು. Thom Wolf and Suzana Andrade   ಒಂದು ಕಡೆ ಬರೆಯುತ್ತಾರೆ “ ಬೆಳಗಿನ ಹೊತ್ತು ಮಕ್ಕಳಿಗೆ ಪಾಠ ಮಾಡಲು ತೆರಳುವ ಪ್ರತಿಯೊಬ್ಬ ಭಾರತೀಯ ಶಿಕ್ಷಕಿಗೆ ಸಾವಿತ್ರಿಬಾಯಿಯ ಶಬ್ದಗಳು ಮನದಲ್ಲಿರುತ್ತವೆ.ಮರೆಯಲಾಗುವುದಿಲ್ಲ. ಮಕ್ಕಳಿಗೆ ಈ ಶಿಕ್ಷಕಿಯ ಅವಶ್ಯಕತೆಯಿದೆ.ಇವರಾರೂ ಕಲ್ಲಿನ, ಸೆಗಣಿಯ ಎಸೆತಗಳಿಗೆ,ಮೂದಲಿಕೆಗಳಿಗೆ ಎದೆಗುಂದುವುದಿಲ್ಲ.ಏಕೆಂದರೆ ಸಾವಿತ್ರಿಬಾಯಿ ಮನದಲ್ಲಿದ್ದಾಳೆ. ಇಂದಿನ ಅಕ್ಷರಸ್ತ ಭಾರತೀಯ ಮಹಿಳೆ ಜಗತ್ತಿನ ಯಾವುದೇ ಭಾಗದಲ್ಲಿರಲಿ ಆಕೆ ಹೊಸಚಿಂತನೆಗಳಿಗೆ ಸಾಕ್ಷಿಯಾಗಿರುತ್ತಾಳೆ.ಪ್ರತಿಯೊಬ್ಬ ಭಾರತೀಯ ಆಕ್ಷರಸ್ತ ಮಹಿಳೆ ಮನುವಿನ ಸೆರೆಮನೆಯಿಂದ ಬಂಧಮುಕ್ತಗೊಂಡವಳಾಗಿರುತ್ತಾಳೆ.ಶಾಲೆಗಳಲ್ಲಿ ಪ್ರತಿಯೊಬ್ಬ ಬಾಲಕಿ ಬಾಲಕನ ಪಕ್ಕ ಕುಳಿತುಕೊಂಡು,ಪುಸ್ತಕಗಳನ್ನು ಓದುತ್ತಾ,ಹೊಸ ಸಂಗತಿಗಳನ್ನು ಕಲಿಯುತ್ತಾ,ಹೊಸ ಜಗತ್ತಿನ ನಿರ್ಮಾಣದಲ್ಲಿರುತ್ತಾಳೆ.ಈ ಬಾಲಕಿ ರೂಪಿಸುತ್ತಿರುವ ಈ ಜಗತ್ತು ತನ್ನ 3000 ವರ್ಷಗಳ ಸನಾತನ ಪರಂಪರೆಯಿಂದ ನಿರ್ದಾಕ್ಷೀಣ್ಯವಾಗಿ ಕಡಿದುಕೊಂಡು ಭವಿಷ್ಯದ ಸಾವಿತ್ರಿಬಾಯಿ ಫುಲೆಯನ್ನು ರೂಪಿಸಲು ಸಹಾಯ ಮಾಡುತ್ತಿರುತ್ತದೆ.” We owe her. will We own her ?
( ವಿಮೋಚಕಿಯ ಕನಸುಗಳು – ಸಾವಿತ್ರಿಬಾಯಿ ಫುಲೆ ಬದುಕು ಬರಹ – ಆಯ್ದ ಅಧ್ಯಾಯ)

Leave a Reply

Your email address will not be published.